11th AUGUST.-DAILY CURRENT AFFAIRS BRIEF

11th AUGUST

 

 

1.ಜನರ ಪ್ರಾತಿನಿಧ್ಯ ತಿದ್ದುಪಡಿ  ಮಸೂದೆ-2017

SOURCE-THE HINDU

 https://economictimes.indiatimes.com/news/politics-and-nation/bill-to-allow-proxy-voting-by-nris-passed-by-lok-sabha/articleshow/65343623.cms

 

ವಿದ್ಯಾರ್ಥಿಗಳ ಗಮನಕ್ಕೆ

 

ಪ್ರಿಲಿಮ್ಸ್ ಪರೀಕ್ಷೆಗಾಗಿ   ಪ್ರಾಕ್ಸಿ ವೋಟ್ ಎಂದರೇನು ?

 ಮುಖ್ಯ ಪರೀಕ್ಷೆಗಾಗಿ -ಈ ಮಸೂದೆಯ ಮಹತ್ವವೇನು ?

 

ಪ್ರಮುಖ ಸುದ್ದಿ

 

  • ಅನಿವಾಸಿ ಭಾರತೀಯರಿಗೆ ಪ್ರಾಕ್ಸಿ ಮತದಾನದ ಅಧಿಕಾರ ನೀಡುವ ವಿಧೇಯಕಕ್ಕೆ ಲೋಕಸಭೆ ಒಪ್ಪಿಗೆ ನೀಡಿದೆ. ಜನಪ್ರತಿನಿಧಿ ಕಾಯ್ದೆಯ ತಿದ್ದುಪಡಿ ಪ್ರಕಾರ, ಅನಿವಾಸಿ ಭಾರತೀಯರಿಗೆ ಮೂಲ ಲೋಕಸಭಾ ಅಥವಾ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡುವ ಅಧಿಕಾರವಿರಲಿದೆ.

 

ಮುಖ್ಯ ಅಂಶಗಳು

  • ಈಗಾಗಲೇ ಅವರಿಗೆ ಈ ಅಧಿಕಾರ ನೀಡಿದ್ದರೂ ಪ್ರಾಕ್ಸಿ ಮತದಾನಕ್ಕೆ ಅವಕಾಶವಿರಲಿಲ್ಲ. ಖುದ್ದು ಎನ್​ಆರ್​ಐಗಳು ಆಗಮಿಸಿ ಮತದಾನದ ದಿನ ಹಕ್ಕು ಚಲಾಯಿಸಬೇಕಿತ್ತು.
  • ಆದರೆ ಈ ತಿದ್ದುಪಡಿ ಪ್ರಕಾರ ಅನಿವಾಸಿ ಭಾರತೀಯ ಮತದಾರ ಸೂಚಿಸಿದ ವ್ಯಕ್ತಿಯು ಹೆಸರು ನೋಂದಣಿಯಾದ ಮತಗಟ್ಟೆಯಲ್ಲಿ ಮತ ಚಲಾಯಿಸಬಹುದು. ಇದಕ್ಕೆ ಸಂಬಂಧಿಸಿದ ನಿಯಮ ಹಾಗೂ ಷರತ್ತುಗಳನ್ನು ಅಧಿಸೂಚನೆ ಹೊರಡಿಸುವ ವೇಳೆ ಪ್ರಕಟಿಸಲಾಗುತ್ತದೆ.
  • ಮತದಾನ ನೋಂದಣಿಗೆ ಪಾಸ್​ಪೋರ್ಟ್, ವೀಸಾ ಹಾಗೂ ಸ್ಥಳೀಯ ವಿಳಾಸದ ದಾಖಲೆ ಕಡ್ಡಾಯವಾಗಿರಲಿದೆ. ವಿದೇಶಗಳಲ್ಲಿ ಸುಮಾರು 5 ಕೋಟಿ ಅನಿವಾಸಿ ಭಾರತೀಯರಿದ್ದು, ಇವರಲ್ಲಿ ಅರ್ಹ ಮತದಾರರೆಷ್ಟು ಎನ್ನುವುದು ಇನ್ನಷ್ಟೆ ತಿಳಿಯಬೇಕಿದೆ. ಇ-ಮತದಾನಕ್ಕೆ ಕೆಲ ಸಂಸದರು ಅವಕಾಶ ಕೇಳಿದರು. , ಕಾನೂನಿನಲ್ಲಿ ಇದಕ್ಕೆ ಅವಕಾಶ ನೀಡಲಾಗಿದೆ. ಆದರೆ ಸದ್ಯಕ್ಕೆ ಪ್ರಾಕ್ಸಿ ಮತದಾನಕ್ಕೆ ಅವಕಾಶ ನೀಡಲಾಗುವುದು. ಇ-ಮತದಾನದಲ್ಲಿ ಅಕ್ರಮವಾಗುವ ಸಾಧ್ಯತೆಯಿದೆ .

 

ಏನಿದು ಪ್ರಾಕ್ಸಿ ವೋಟ್?

  • ಭಾರತದಲ್ಲಿಮತದಾನ ಹಕ್ಕು ಹೊಂದಿ ವಿದೇಶದಲ್ಲಿ ನೆಲೆ ಕಂಡುಕೊಂಡಿರುವ ಭಾರತೀಯ ತನ್ನ ಪರವಾಗಿ ಪ್ರತಿನಿಧಿಯೊಬ್ಬರ ಮೂಲಕ ಮತ ಹಕ್ಕನ್ನು ಚಲಾಯಿಸುವುದೇ ಪ್ರಾತಿನಿಧಿಕ ಮತದಾನವಾಗಿದೆ.

 

ಮಸೂದೆಯ ಪ್ರಮುಖ ಅಂಶಗಳು

  • ಜನಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 20(ಎ) ಅನ್ವಯ ಉದ್ಯೋಗ, ಶಿಕ್ಷಣ ಸೇರಿದಂತೆ ಇತರ ಕಾರಣಗಳಿಂದಾಗಿ ವಿದೇಶಗಳಿಗೆ ತೆರಳಿರುವ ಅನಿವಾಸಿ ಭಾರತೀಯರು ತಮ್ಮ ವ್ಯಾಪ್ತಿಯ ಕ್ಷೇತ್ರದ ಮತದಾರರಾಗಿದ್ದಾರೆ ಚುನಾವಣೆಯ ದಿನ ಮತಗಟ್ಟೆಯಲ್ಲಿ ಭೌತಿಕವಾಗಿ ಹಾಜರಾಗಿ  ಪಾಸ್‌ಪೋರ್ಟ್‌  ಮತ್ತು ವೀಸಾದಳ್ಳಿ  ಇರುವ ವಿಳಾಸದ ಆಧಾರದ ಮೇಲೆ  ಮತದಾನ ಮಾಡಲು ಅವಕಾಶವಿತ್ತು .

 

  • ಈಗ ಇದಕ್ಕೆ ತಿದ್ದುಪಡಿ ಮಂಡಿಸಿದ್ದು ಅನಿವಾಸಿ ಭಾರತೀಯರು ಭೌತಿಕವಾಗಿ ಹಾಜರಾಗುವುದಕ್ಕೆ ವಿನಾಯಿತಿ ನೀಡಲಾಗಿದೆ. ಅವರ ಬದಲಿಗೆ (ಪ್ರಾಕ್ಸಿ )ಇನ್ನೊಬ್ಬರು ಮತದಾನ ಚಲಾಯಿಸಬಹುದಾಗಿದೆ .

 

  • ಈ ತಿದ್ದುಪಡಿಯು ಅನಿವಾಸಿ ಭಾರತೀಯರಿಗೆ (NRIs) ದೇಶಾದ್ಯಂತ ಚುನಾವಣಾ ರಾಜಕೀಯದಲ್ಲಿ ತಮ್ಮದೇ ಆದ ನಿಬಂಧನೆಯಲ್ಲಿ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಿಸುವ ಉದ್ದೇಶವನ್ನು ಹೊಂದಿದೆ.

 

ಮತದಾನದ ಹಕ್ಕು ಯಾರಿಗೆ?

 

  • ಭಾರತದ ಪ್ರಜೆಯಾಗಿದ್ದು, 18 ವರ್ಷ ಪೂರೈಸಿರಬೇಕು. ಅರ್ಥಾತ್‌, ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ವೇಳೆಗೆ ಆಯಾ ವರ್ಷದ ಜನವರಿ ವೇಳಗೆ 18 ತುಂಬಿರಬೇಕು.
  • ಇಲ್ಲದಿದ್ದರೆ, ಮತದಾರ ಪಟ್ಟಿ ಸೇರಲು ಅನರ್ಹ. ತಮ್ಮ ಸ್ವವಿಳಾಸ ಮಾಹಿತಿ ಆಧರಿಸಿ ಮತದಾನ ಪಟ್ಟಿಗೆ ನೋಂದಣಿಯಾಗಿ ಗುರುತಿನ ಚೀಟಿ ಹೊಂದಿದ್ದರೆ ಮತದಾನ ಹಕ್ಕು ಲಭ್ಯ.

 

ಅನಿವಾಸಿ ಭಾರತೀಯರಿಗೆ ಮತದಾನ ಹಕ್ಕಿದೆಯೇ?

 

  • ಹೌದು. ಪ್ರಜಾ ಪ್ರಾತಿನಿಧ್ಯ ಕಾಯ್ದೆ (ತಿದ್ದುಪಡಿ) 2010 ಅನ್ವಯ ವಿದೇಶದಲ್ಲಿ ನೆಲೆಸಿರುವ, ಅಲ್ಲಿನ ಪೌರತ್ವ ಹೊಂದದೇ ಇರುವ ಭಾರತೀಯರಿಗೆ ಮತದಾನ ಹಕ್ಕಿದೆ. ಇದಕ್ಕಾಗಿ ಮತದಾರ ಪಟ್ಟಿಯಲ್ಲಿ ಹೆಸರಿರಬೇಕು.
  • ಅಂದರೆ ಈ ಹೆಸರು, ಅನಿವಾಸಿ ಭಾರತೀಯರಿಗೆ ನೀಡಲಾಗಿದ್ದ ವಿಳಾಸದಲ್ಲೇ….CLICK HERE TO READ MORE
Share