11th DECEMBER
1.ಬೋಧಿ ಪರ್ವ
ಪ್ರಮುಖ ಸುದ್ದಿ
- ಬಿಮ್ ಸ್ಟೆಕ್ ನ 20 ನೇ ವಾರ್ಷಿಕೋತ್ಸವದ ಆಚರಣೆಯ ಅಂಗವಾಗಿ, ಭಾರತವು ಬಿಮ್ ಸ್ಟೆಕ್ ನ ಬೌದ್ಧರ ಪರಂಪರೆ ಹಬ್ಬ ವಾದ “ಬೋಧಿ ಪರ್ವ” 2017 ರ ಆವೃತ್ತಿಯನ್ನು ಆಯೋಜಿಸುತ್ತದೆ.
- ಈ ಉತ್ಸವವನ್ನು ವಿದೇಶಿ ವ್ಯವಹಾರಗಳ ಸಚಿವಾಲಯ (MEA) ಆಯೋಜಿಸುತ್ತಿದೆ.
ಈ ಹಬ್ಬವನ್ನು ಆಚರಿಸಲು ಮುಖ್ಯ ಕಾರಣಗಳೇನು ?
- ಸಮೃದ್ಧ ಮತ್ತು ಸಾಮಾನ್ಯ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು BIMSTEC ಈ ವಿಶಿಷ್ಟ ಸಂಸ್ಥೆಯ 20 ನೇ ವಾರ್ಷಿಕೋತ್ಸವವನ್ನು ಗುರುತಿಸಲು.
- ವಿದ್ವಾಂಸರ ಅಂತರರಾಷ್ಟ್ರೀಯ ಪ್ರದರ್ಶನಗಳು, ಚಲನಚಿತ್ರಗಳು, ಕಲೆ, ಪಠಣ, ಧ್ಯಾನ ಮತ್ತು ತತ್ತ್ವಶಾಸ್ತ್ರದ ಸಂಭಾಷಣೆಗಳ ಜ್ಞಾನವು ಬೌದ್ಧಧರ್ಮದ ಮೂಲತತ್ವವನ್ನು ಹೊರತರುತ್ತದೆ.
- ಬೌದ್ಧಧರ್ಮದವರು ಅಭ್ಯಾಸ ಮಾಡುವ ಶಾಂತಿ ಮತ್ತು ಸಹಿಷ್ಣುತೆಯ ಸಾರ್ವತ್ರಿಕ ಸಂದೇಶವನ್ನು ಪ್ರಪಂಚಕ್ಕೆ ಸಾರುವುದರ ಮೂಲಕ ಘರ್ಷಣೆಯ ಮುಖಾಂತರ ಬೆಳೆಯುತ್ತಿರುವ ಅರ್ಥಹೀನತೆಗೆಯನ್ನು ತಡೆಯುವುದು.
BACK 2 BASICS
ಬೋಧಿ ಪರ್ವದ ಬಗ್ಗೆ
- ಇದು ಬಿಮ್ ಸ್ಟೆಕ್ ನ ಬೌದ್ಧರ ಪರಂಪರೆ ಹಬ್ಬ ಇದರ ಮುಖ್ಯ ಉದ್ದೇಶವೆಂದರೆ ಇಂದಿನ ಸಂದರ್ಭದಲ್ಲಿ ‘ ಬೌದ್ಧಧರ್ಮ ವನ್ನು ವಿಭಿನ್ನ ದೃಷ್ಟಿಕೋನಗಳಲ್ಲಿ ಗಮನಿಸುವುದು . ಬಿಮ್ ಸ್ಟೆಕ್ ಬೌದ್ಧ ಧರ್ಮದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದೆ.
- ಇದು ದಕ್ಷಿಣ ಏಷ್ಯಾದಲ್ಲಿ ಹುಟ್ಟಿಕೊಂಡು ನಂತರ ಆಗ್ನೇಯ ಏಷ್ಯಾದಲ್ಲಿ ಪ್ರಯಾಣ ಬೆಳೆಸಿದೆ.
- ಬೌದ್ಧಧರ್ಮವು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ನಡುವಿನ ಸೇತುವೆಯನ್ನು ಹೊಂದಿದೆ.
ಬಿಮ್‌ಸ್ಟೆಕ್ ಬಗ್ಗೆ
- ಬಿಮ್‌ಸ್ಟೆಕ್ (BIMSTEC) ಎಂದರೆ : ‘ದ ಬೇ ಆಫ್ ಬೆಂಗಾಲ್ ಇನಿಶಿಯೇಟಿವ್ ಫಾರ್ ಮಲ್ಟಿ-ಸೆಕ್ಟೋರಲ್ ಟೆಕ್ನಿಕಲ್ ಆ್ಯಂಡ್ ಇಕಾನಮಿಕ್ ಕೋ-ಆಪರೇಶನ್’ (ಬಹುಕ್ಷೇತ್ರ ತಾಂತ್ರಿಕ ಹಾಗೂ ಆರ್ಥಿಕ ಸಹಕಾರಕ್ಕಾಗಿ ಬಂಗಾಳ ತೀರ ಸುಧಾರಣಾ ಶೃಂಗಸಭೆ)
- ಇದನ್ನು 1997ರಲ್ಲಿ ಬ್ಯಾಂಕಾಕ್‌ನಲ್ಲಿ ಸ್ಥಾಪಿಸಲಾಯಿತು.
- ಬಿಮ್‌ಸ್ಟೆಕ್‌ನ ಶಾಶ್ವತ ಕಾರ್ಯಾಲಯವನ್ನು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಢಾಕಾದಲ್ಲಿದೆ.
- ಇದರಲ್ಲಿ .ಏಳು ಸದಸ್ಯ ರಾಷ್ಟ್ರಗಳು- ಬಾಂಗ್ಲಾದೇಶ, ಭೂತಾನ್, ಭಾರತ, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ ಹಾಗೂ ಥಾಯ್ಲೆಂಡ್ .
ಬಿಮ್‌ಸ್ಟೆಕ್ ಸಂಘಟನೆಯ ವೈಶಿಷ್ಟ್ಯಗಳು :
- ಬಿಮ್‌ಸ್ಟೆಕ್ ಸಂಘಟನೆಯ ಏಳು ಸದಸ್ಯ ರಾಷ್ಟ್ರಗಳಾದ ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಥಾಯ್ಲೆಂಡ್, ಮ್ಯಾನ್ಮಾರ್, ಭೂತಾನ್ ಹಾಗೂ ನೇಪಾಳ ಜೊತೆಗೂಡಿದಲ್ಲಿ ಜಗತ್ತಿನ ಶೇಕಡ 20ರಷ್ಟು ಜನಸಂಖ್ಯೆಯನ್ನು ಹೊಂದಿದೆ.
- ಏಳು ಸದಸ್ಯ ರಾಷ್ಟ್ರಗಳು ಸೇರಿದಂತೆ ದಕ್ಷಿಣ ಏಶ್ಯ ಹಾಗೂ ಆಗ್ನೇಯ ಏಶ್ಯ ರಾಷ್ಟ್ರಗಳ ನಡುವೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಬಿಮ್‌ಸ್ಟೆಕ್ ಮಹತ್ವದ ಪಾತ್ರ ವಹಿಸಲಿದೆ.
- ಬಿಮ್‌ಸ್ಟೆಕ್ ನ ಪ್ರಮುಖ ಆದ್ಯತಾ ವಲಯಗಳು-ಭಯೋತ್ಪಾದನೆ ಹಾಗೂ ಅಪರಾಧಗಳ ತಡೆ, ವ್ಯಾಪಾರ ಹಾಗೂ ಹೂಡಿಕೆ, ಸಾರಿಗೆ ಮತ್ತು ಸಂಪರ್ಕ ಹಾಗೂ ಬಡತನ ನಿರ್ಮೂಲನೆಯಂತಹ ಪ್ರಮುಖ ಆದ್ಯತಾ ವಲಯಗಳನ್ನು ಒಳಗೊಂಡಿದೆ.
2. 27th ವ್ಯಾಸ ಸಮ್ಮಾನ್
ಪ್ರಮುಖ ಸುದ್ದಿ
- 2017ನೇ ಸಾಲಿನ ಪ್ರತಿಷ್ಠಿತ ವ್ಯಾಸ ಸಮ್ಮಾನ್ ಪ್ರಶಸ್ತಿಗೆ ಹಿಂದಿ ಲೇಖಕಿ ಮಮತಾ ಕಾಲಿಯಾ ಅವರನ್ನು ಆಯ್ಕೆ ಮಾಡಲಾಗಿದೆ.
- ಅವರ ದುಃಖಂ ಸುಖಂ ಕಾದಂಬರಿಗೆ ಈ ಗೌರವ ಸಂದಿದೆ. ಖ್ಯಾತ ಲೇಖಕ ವಿಶ್ವನಾಥ್ ಪ್ರಸಾದ್ ತಿವಾರಿ ನೇತೃತ್ವದ ಉನ್ನತ ಮಟ್ಟದ ಆಯ್ಕೆ ಸಮಿತಿ ಮಮತಾ ಕಾಲಿಯಾ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
- 2009ರಲ್ಲಿ ಪ್ರಕಟಿತವಾಗಿರುವ ದುಃಖಂ ಸುಖಂ ಕಾದಂಬರಿ, ಕೆಳ ಮಧ್ಯಮವರ್ಗದ ಕುಟುಂಬವೊಂದರ ಮೂರು ತಲೆಮಾರುಗಳ ಕಥಾನಕ. ನಮ್ಮ ಸಮಾಜದಲ್ಲಿ ಆಗುತ್ತಿರುವ ಸ್ಥಿತ್ಯಂತರಗಳ ಬಗ್ಗೆ ಈ ಕಾದಂಬರಿ ವಿಸ್ತøತವಾಗಿ ಬೆಳಕು ಚೆಲ್ಲಿದೆ.
ವ್ಯಾಸ ಸಮ್ಮಾನ್ ಪ್ರಶಸ್ತಿ ಬಗ್ಗೆ
- ವ್ಯಾಸ ಸಮ್ಮಾನ್ ಪ್ರಶಸ್ತಿಯನ್ನು ಕೆ.ಕೆ.ಬಿರ್ಲಾ ಫೌಂಡೇಷನ್ 1991ರಲ್ಲಿ ಆರಂಭಿಸಿದೆ.
- ಇದು ಭಾರತೀಯ ಪ್ರಜೆಗಳು ಕಳೆದ ಹತ್ತು ವರ್ಷಗಳಲ್ಲಿ ರಚಿಸಿದ ಹಿಂದಿ ಕೃತಿಯನ್ನು ಪ್ರಶಸ್ತಿಗೆಪರಿಗಣಿಸುತ್ತದೆ. ಈ ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು, ಭಿನ್ನವತ್ತಳಿಕೆ ಹಾಗೂ ಪ್ರಶಸ್ತಿಯನ್ನು ಒಳಗೊಂಡಿದೆ.
3.ಸ್ವಚ್ಛಭಾರತ: ಸಾರ್ವಜನಿಕ ಶೌಚಾಲಯಕ್ಕೂ ವಿಶೇಷ ಗುರುತಿನ ಚೀಟಿ
ಪ್ರಮುಖ ಸುದ್ದಿ
- ವಿಶೇಷ ಗುರುತಿನ ಚೀಟಿ ಇನ್ನು ಮುಂದೆ ಶೌಚಾಲಯಗಳಿಗೂ ದೊರೆಯಲಿದೆ. ನಗರ ಪ್ರದೇಶಗಳಲ್ಲಿರುವ ಸಾರ್ವಜನಿಕ ಮತ್ತು ಸಾಮುದಾಯಿಕ ಶೌಚಾಲಯಗಳಿಗೆ ಶೀಘ್ರದಲ್ಲೇ ವಿಶೇಷ ಗುರುತಿನ ಸಂಖ್ಯೆ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ, ಅವುಗಳನ್ನು ಎಲ್ಲರಿಗೂ ಕಾಣಿಸುವಂತೆ ಶೌಚಾಲಯದ ಪ್ರವೇಶ ದ್ವಾರದಲ್ಲಿಡುವಂತೆ ಸಂಬಂಧಪಟ್ಟವರಿಗೆ ಸೂಚನೆ ರವಾನೆಯಾಗಿದೆ.
- ಸ್ವಚ್ಛ ಭಾರತ ಅಭಿಯಾನದಡಿ ಪಬ್ಲಿಕ್ ಟಾಯ್ಲೆಟ್‌ಗಳನ್ನು ಸದಾ ಸುಸ್ಥಿತಿಯಲ್ಲಿಡುವುದು ಇದರ ಉದ್ದೇಶವಾಗಿದೆ.
ಪ್ರಮುಖ ಸಂಗತಿಗಳು
- ವಿಶೇಷ ಗುರುತಿನ ಚೀಟಿಯ ಜತೆಗೆ, ಶೌಚಾಲಯಗಳು ಅಧೀನಕ್ಕೊಳಪಡುವ ಸ್ಥಳೀಯ ಆಡಳಿತ ಸಂಸ್ಥೆಗಳ ಹೆಸರು, ನಿರ್ವಹಣೆ ಪ್ರಾಧಿಕಾರದ ವಿವರ, ಉಸ್ತುವಾರಿ ಅಥವಾ ಮೇಲ್ವಿಚಾರಕನ ಹೆಸರು ಮತ್ತು ಸಂಪರ್ಕ ಸಂಖ್ಯೆ ಹಾಗೂ ಕುಂದುಕೊರತೆ ಪರಿಹಾರ ಕಾರ್ಯವಿಧಾನದ ಮಾಹಿತಿಗಳ ವಿವರ ಸಿಗಲಿದೆ ಎನ್ನಲಾಗಿದೆ.
- ಸ್ವಚ್ಛ ಭಾರತ ಅಭಿಯಾನದಡಿ ದೇಶಾದ್ಯಂತ ಈಗಾಗಲೇ 34 ಲಕ್ಷಕ್ಕೂ ಅಧಿಕ ಸಾರ್ವಜನಿಕ ಮತ್ತು ಸಾಮುದಾಯಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಶೌಚಾಲಯಗಳ ಅಕ್ಕಪಕ್ಕದ ವಠಾರಗಳ ಶುಚಿತ್ವ ಕಾಪಾಡಿಕೊಳ್ಳುವುದು ಕೂಡ ಅಭಿಯಾನದ ಪ್ರಮುಖ ಉದ್ದೇಶವಾಗಿರುವ ಕಾರಣ ಇದೀಗ ಅವುಗಳಿಗೆ ವಿಶೇಷ ಗುರುತಿನ ಚೀಟಿ ನೀಡಲು ನಿರ್ಧರಿಸಲಾಗಿದೆ.
- ”ನಿಮ್ಮ ನಗರದಲ್ಲಿರುವ ಎಲ್ಲಾ ಸಾರ್ವಜನಿಕ ಮತ್ತು ಸಾಮುದಾಯಿಕ ಶೌಚಾಲಯಗಳನ್ನು ಗುರುತಿಸಿ ಅವುಗಳಿಗೆ ವಿಶೇಷ ಗುರುತಿನ ಚೀಟಿ ಸಿಗುವಂತೆ ನೋಡಿಕೊಳ್ಳಿ” ಎಂದು ಇತ್ತೀಚೆಗೆ 4,302 ನಗರಗಳಲ್ಲಿರುವ ಸ್ವಚ್ಛ ಭಾರತ ಅಭಿಯಾನದ ರಾಜ್ಯ ಘಟಕದ ನಿರ್ದೇಶಕರು ಹಾಗೂ ನಗರಪಾಲಿಕೆ ಆಯುಕ್ತರಿಗೆ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಪತ್ರ ಬರೆದಿದೆ.
4.ಸದ್ಯದಲ್ಲೇ ‘ಉಭಯಚರ’ ವಿಮಾನ ಸೇವೆ
ಪ್ರಮುಖ ಸುದ್ದಿ
- ನೀರಿನ ಮೇಲೆ ಹಾಗೂ ಗಾಳಿಯಲ್ಲಿ ಚಲಿಸುವ ‘ಉಭಯಚರ’ (‘ಆ್ಯಂಫಿಬಿಯನ್) ವಿಮಾನಗಳ ವಾಣಿಜ್ಯ ಹಾರಾಟವನ್ನು ಆರಂಭಿಸಲು ಸ್ಪೈಸ್‌ಜೆಟ್ ಭಾರಿ ಸಿದ್ಧತೆ ನಡೆಸಿದೆ. ಇದಕ್ಕಾಗಿ ಮುಂಬಯಿ ಸಮುದ್ರ ತೀರದಲ್ಲಿ ಪ್ರಾಯೋಗಿಕ ಹಾರಾಟವನ್ನೂ ನಡೆಸಿ ಸಂಸ್ಥೆ ಯಶಸ್ವಿಯಾಗಿದೆ.
- ದೇಶದ ಗ್ರಾಮೀಣ ಹಾಗೂ ಪ್ರದೇಶಗಳಿಗೆ ವಿಮಾನಯಾನ ಸಂಪರ್ಕ ಬೆಳೆಸಲು ಸರಕಾರ ಆರಂಭಿಸಿರುವ ‘ಉಡಾನ್’ ಯೋಜನೆಯ ಮತ್ತೊಂದು ಹಂತ
ಪ್ರಮುಖ ಅಂಶಗಳು
- ”ಉಭಯಚರ ವಿಮಾನಗಳ ಹಾರಾಟಕ್ಕೆ ಅಗತ್ಯವಾದ ಮೂಲಸೌಕರ್ಯವನ್ನು ಸರಕಾರ ಅಭಿವೃದ್ಧಿಪಡಿಸಲಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಜತೆ ಸಮಾಲೋಚನೆ ನಡೆಸಿ, ಇಂತಹ ವಿಮಾನ ಸೇವೆಗೆ ಅಗತ್ಯವಾದ ನೀತಿ-ನಿಯಮಗಳನ್ನು ಶೀಘ್ರದಲ್ಲೇ ರೂಪಿಸಲಾಗುವುದು
- ಸ್ಥಳಗಳ ಪರಿಶೀಲನೆ: ಉತ್ತರ ಪ್ರದೇಶ, ಮಹಾರಾಷ್ಟ್ರ, ಅಂಡಮಾನ್, ಲಕ್ಷದ್ವೀಪ, ಮತ್ತು ಇತರ ತೀರ ಪ್ರದೇಶದ ಹಲವು ಸ್ಥಳಗಳಿಂದ ‘ಉಭಯಚರ’ ವಿಮಾನಗಳ ಸೇವೆ ಆರಂಭಿಸಲು ಸ್ಪೈಸ್‌ಜೆಟ್ ಪರಿಶೀಲನೆ ನಡೆಸುತ್ತಿದೆ.
ಏನಿದು ‘ಸೀಪ್ಲೇನ್‘ ಯೋಜನೆ?
- ನೀರನ್ನು ಬಳಸಿಕೊಂಡು ಗಾಳಿಯಲ್ಲಿ ಹಾರುವ ತಂತ್ರಜ್ಞಾನ ಆಧರಿತ ಯೋಜನೆ ಇದಾಗಿದೆ. ನದಿ ಅಥವಾ ಆಂತರಿಕ ಜಲಸಾರಿಗೆ ಮೂಲಗಳನ್ನೇ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕಾಫ್‌ಗೆ ಬಳಸಿಕೊಳ್ಳಲಾಗುತ್ತದೆ. ಇದರಿಂದ ಕೋಟ್ಯಂತರ ರೂ. ಖರ್ಚುಮಾಡಿ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡುವ ಮತ್ತು ಅವುಗಳನ್ನು ನಿರ್ವಹಣೆ ಮಾಡುವ ತಲೆನೋವು ತಪ್ಪಲಿದೆ.
- ದೇಶದ ಗ್ರಾಮೀಣ ಪ್ರದೇಶಗಳ ಮೂಲೆಗಳಲ್ಲಿರುವ ಸ್ಥಳಗಳಿಗೆ ವಿಮಾನ ಸಂಪರ್ಕ ಒದಗಿಸಿ, ಆ ಪ್ರದೇಶಗಳನ್ನು ಮುಖ್ಯ ಸಂಪರ್ಕ ಜಾಲಗಳ ಜತೆ ಬೆಸೆಯುವುದು ಮತ್ತು ಪ್ರವಾಸೋದ್ಯಮ ಉತ್ತೇಜನ ಈ ಯೋಜನೆಯ ಉದ್ದೇಶವಾಗಿದೆ. ಮುಖ್ಯವಾಗಿ ನದಿ ಅಥವಾ ಸಮುದ್ರ ತೀರದ ಪಟ್ಟಣಗಳನ್ನು ಈ ಯೋಜನೆಗೆ ಬಳಸಿಕೊಳ್ಳಲಾಗುವುದು.
5.ಹಂಬಂತೋಟ ಬಂದರನ್ನು ಚೀನಾಗೆ ಹಸ್ತಾಂತರಿಸಿದ ಶ್ರೀಲಂಕಾ
ಪ್ರಮುಖ ಸುದ್ದಿ
- ಹಿಂದೂ ಮಹಾಸಾಗರದ ಮೇಲೆ ಪ್ರಭುತ್ವ ಸಾಧಿಸಲು ಹಂಬಲಿಸುತ್ತಿರುವ ಚೀನಾಗೆ ಆಯಕಟ್ಟಿನ ಜಾಗದಲ್ಲಿರುವ ಹಂಬಂತೋಟ ಬಂದರನ್ನು ಶ್ರೀಲಂಕಾ ಅಧಿಕೃತವಾಗಿ ಹಸ್ತಾಂತರಿಸಿದೆ.
- ಈ ವಿಷಯದಲ್ಲಿ ತೆರಿಗೆಯಲ್ಲಿ ಭಾರಿ ರಿಯಾಯಿತಿ ನೀಡಲಾಗಿದೆ. ಅಲ್ಲದೆ, ಈ ಒಪ್ಪಂದ ದೇಶವನ್ನು ಮಾರಿಕೊಂಡಂತೆ ಎಂದು ಪ್ರತಿಪಕ್ಷ ಹಾಗೂ ಕಾರ್ಮಿಕ ಸಂಘಟನೆಗಳು ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿವೆ.
ಮುಖ್ಯ ಅಂಶಗಳು
- ಶ್ರೀಲಂಕಾ ಬಂದರನ್ನು 99 ವರ್ಷಗಳ ಭೋಗ್ಯಕ್ಕೆ ಚೀನಾಗೆ ಹಸ್ತಾಂತರಿಸಿದೆ. ಬಂದರು ಮತ್ತು ಅದರ ಸುತ್ತಲೂ ಇರುವ ಆರ್ಥಿಕ ವಲಯವನ್ನು ಚೀನಾದ ಹಂಬಂತೋಟ ಇಂಟರ್ನ್ಯಾಷನಲ್ ಪೋರ್ಟ್ ಗ್ರೂಪ್ (HIPG) ಮತ್ತು ಹಂಬಂತೋಟ ಇಂಟರ್ನ್ಯಾಷನಲ್ ಪೋರ್ಟ್ ಸರ್ವೀಸಸ್ (HIPS) ಕಂಪನಿಗಳು ನಿರ್ವಹಿಸಲಿವೆ.
- ಈ ಕಂಪನಿಗಳ ಉಸ್ತುವಾರಿಯನ್ನು ಶ್ರೀಲಂಕಾ ಪೋರ್ಟ್ ಅಥಾರಿಟಿ ಮತ್ತು ಚೀನಾ ಮರ್ಚೆಂಟ್ಸ್ ಪೋರ್ಟ್ ಹೋಲ್ಡಿಂಗ್ಸ್ ಕಂಪನಿ ಜಂಟಿಯಾಗಿ ನೋಡಿಕೊಳ್ಳಲಿವೆ.
- ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಚೀನಾಗೆ ಭೇಟಿ ನೀಡಿದ್ದ ಶೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಹಂಬಂತೋಟ ಬಂದರನ್ನು ಚೀನಾಗೆ ಹಸ್ತಾಂತರಿಸುವ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದ್ದರು.
- ಆ ನಂತರ ಶ್ರೀಲಂಕಾ ಸರ್ಕಾರ ಜುಲೈ ತಿಂಗಳಿನಲ್ಲಿ ಹಂಬಂತೋಟ ಬಂದರಿನ ಶೇ. 70 ಷೇರುಗಳನ್ನು ಚೀನಾಗೆ ಮಾರಾಟ ಮಾಡಲು 1 ಬಿಲಿಯನ್ ಅಮೆರಿಕನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದರನ್ವಯ ಚೀನಾ ಮೊದಲ ಕಂತಿನಲ್ಲಿ 300 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಶ್ರೀಲಂಕಾಗೆ ಪಾವತಿಸಿತ್ತು.
- ಶ್ರೀಲಂಕಾದ ಈ ನಿರ್ಣಯದಿಂದಾಗಿ ಭಾರತದ ಭದ್ರತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಚೀನಾ ಈಗಾಗಲೇ ಪಾಕಿಸ್ತಾನದಲ್ಲಿ ಬಂದರನ್ನು ಹೊಂದಿದ್ದು, ಭಾರತದ ಸುತ್ತಲೂ ವಿವಿಧ ರಾಷ್ಟ್ರಗಳಲ್ಲಿ ಬಂದರನ್ನು ಹೊಂದುವ ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತರುತ್ತಿದೆ.
6.ತಾಂತ್ರಿಕ ಶಿಕ್ಷಣ ಕೋರ್ಸ್ ಶುಲ್ಕಕ್ಕೆ ಕನಿಷ್ಠ–ಗರಿಷ್ಠ ಮಿತಿಗೆ ಎಐಸಿಟಿಇ ಚಾಲನೆ
ಪ್ರಮುಖ ಸುದ್ದಿ
- ತಾಂತ್ರಿಕ ಶಿಕ್ಷಣ ಕೋರ್ಸ್‌ಗಳಿಗೆ ಕನಿಷ್ಠ ಮತ್ತು ಗರಿಷ್ಠ ಶುಲ್ಕ ನಿಗದಿ ಮಾಡುವ ಪ್ರಕ್ರಿಯೆಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಚಾಲನೆ ನೀಡಿದೆ.
- ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಕೃಷ್ಣ ಅವರ ನೇತೃತ್ವದ ಸಮಿತಿಗೆ ಈ ಹೊಣೆಯನ್ನು ವಹಿಸಲಾಗಿದೆ.
ಪ್ರಮುಖ ಸಂಗತಿಗಳು
- ಎಂಜಿನಿಯರಿಂಗ್, ಕೃಷಿ, ಮಾಹಿತಿ ತಂತ್ರಜ್ಞಾನ, ಆಡಳಿತ ನಿರ್ವಹಣೆ, ಔಷಧ ಶಾಸ್ತ್ರ ಮತ್ತು ನರ್ಸಿಂಗ್ ಕೋರ್ಸ್‌ಗಳ ಶುಲ್ಕಕ್ಕೆ ಗರಿಷ್ಠ ಮಿತಿ ನಿಗದಿ ಮಾಡಲು ಹತ್ತು ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ಎರಡು ವರ್ಷ ಹಿಂದೆ ಈ ಸಮಿತಿ ವರದಿ ಸಲ್ಲಿಸಿತ್ತು. ಆ ಸಮಿತಿಗೂ ಕೃಷ್ಣ ಅವರೇ ಮುಖ್ಯಸ್ಥರಾಗಿದ್ದರು.
- ‘ಮೊದಲನೆಯ ಸಮಿತಿಯು ಗರಿಷ್ಠ ಶುಲ್ಕ ಮಿತಿಯನ್ನು ಮಾತ್ರ ನಿಗದಿ ಮಾಡಿತ್ತು. ಗರಿಷ್ಠ ಮಿತಿಯ ಜತೆಗೆ ದೇಶದಾದ್ಯಂತ ಏಕರೂಪದ ಕನಿಷ್ಠ ಶುಲ್ಕ ಮಿತಿಯೂ ಇರಬೇಕು ಎಂದು ತಾಂತ್ರಿಕ ಕಾಲೇಜುಗಳು ಒತ್ತಾಯಿಸಿದ್ದರಿಂದ ಸಮಿತಿ ರಚಿಸಲಾಗಿದೆ’ ಎಂದು ಮೂಲಗಳು ಹೇಳಿವೆ.
- ಶುಲ್ಕದ ಕನಿಷ್ಠ ಮಿತಿಗೆ ಸಂಬಂಧಿಸಿ ಎಐಸಿಟಿಇಯ ಸ್ಪಷ್ಟ ನಿಯಮ ಇಲ್ಲದ ಕಾರಣ ಕೆಲವು ರಾಜ್ಯ ಸರ್ಕಾರಗಳು ತಮ್ಮದೇ ಆದ ಮಿತಿಯನ್ನು ಹೇರಿವೆ. ಇದನ್ನು ಪಾಲಿಸುವುದು ಸಂಸ್ಥೆಗಳಿಗೆ ಕಷ್ಟವಾದ ಕಾರಣ ಶುಲ್ಕದ ಕನಿಷ್ಠ ಮಿತಿಯನ್ನು ಶಿಫಾರಸು ಮಾಡುವ ಹೊಣೆಯನ್ನು ಸಮಿತಿಗೆ ವಹಿಸಲಾಗಿದೆ.
- ಖಾಸಗಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಲಾಭಖೋರತನವನ್ನು ತಡೆಯುವು ದಕ್ಕಾಗಿ ಟಿಎಂಎ ಪೈ ಪ್ರತಿಷ್ಠಾನ ಪ್ರಕರಣ ದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನಗ ಳನ್ನು ನೀಡಿದೆ. ಅದರ ಪ್ರಕಾರ ಕೃಷ್ಣ ಸಮಿತಿಯನ್ನು ರಚಿಸಲಾಗಿದೆ.
- ತಾಂತ್ರಿಕ ಶಿಕ್ಷಣದಲ್ಲಿ ಉತ್ಕೃಷ್ಟತೆ ಸಾಧಿಸಲು ಬಯಸುವ ಸಂಸ್ಥೆಗಳಿಗೆ ಹೆಚ್ಚಿನ ಶುಲ್ಕ ವಿಧಿಸಲು ಅವಕಾಶ ಇರಬೇಕು ಎಂದು ಹಿಂದಿನ ವರದಿಯಲ್ಲಿ ಹೇಳಲಾಗಿತ್ತು. ನಿಗದಿಪಡಿಸಲಾದ ಕನಿಷ್ಠ ಮಾನದಂಡಗಳಿಗಿಂತ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಸಂಸ್ಥೆಗಳಿಗೆ ಶುಲ್ಕ ಏರಿಕೆಗೆ ಅವಕಾಶ ನೀಡಬೇಕು ಎಂದು ಆ ವರದಿಯಲ್ಲಿ ಇತ್ತು.
- ಮೂರನೇ ಎರಡಷ್ಟು ಕೋರ್ಸ್‌ಗಳಿಗೆ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಮಾನ್ಯತೆ ಪಡೆದ ಸಂಸ್ಥೆಗಳು ನಿಗದಿತ ಮಿತಿಗಿಂತ ಶೇ 20ರಷ್ಟು ಹೆಚ್ಚು ಟ್ಯೂಷನ್ ಶುಲ್ಕ ವಿಧಿಸಬಹುದು. ಹಾಗೆಯೇ, ಸ್ವಾಯತ್ತ ಸ್ಥಾನ ಹೊಂದಿರುವ ಸಂಸ್ಥೆಗಳು ಶೇ 10ರಷ್ಟು ಹೆಚ್ಚುವರಿ ಶುಲ್ಕ ವಿಧಿಸುವುದಕ್ಕೂ ಅವಕಾಶ ನೀಡಲಾಗಿತ್ತು.
ಮುಖ್ಯಾಂಶಗಳು
- ಸಮಿತಿಯ ಶಿಫಾರಸು ಆಧರಿಸಿ ಪರಿಷ್ಕೃತ ಶುಲ್ಕ ಮಿತಿ ಪ್ರಕಟ
- ತಾಂತ್ರಿಕ ಕೋರ್ಸ್‌ಗಳನ್ನು ನಡೆಸುವ ಡೀಮ್ಡ್ ವಿ.ವಿಗಳಿಗೂ ಪರಿಷ್ಕೃತ ಮಿತಿ ಅನ್ವಯ
- 2015ರ ವರದಿಯಲ್ಲಿ ಟ್ಯೂಷನ್ ಮತ್ತು ಅಭಿವೃದ್ಧಿ ಶುಲ್ಕಗಳೆರಡಕ್ಕೂ ಮಿತಿ ಹೇರಲಾಗಿತ್ತು.
- ಮೂರು ಹಂತಗಳ ನಗರಗಳಿಗೆ ಭಿನ್ನ ಶುಲ್ಕ ಮಿತಿ ನಿಗದಿ ಮಾಡಲಾಗಿತ್ತು
ONLY FOR PRELIMS
7.ಎಕ್ಸಿಟೋನಿಯಮ್ (Excitonium)
- ವಿಜ್ಞಾನಿಗಳು ಎಕ್ಸಿಟೋನಿಯಮ್ ಎಂಬ ಹೊಸ ರೂಪದ ಅಸ್ತಿತ್ವವನ್ನು ಸಾಬೀತುಪಡಿಸಿದ್ದಾರೆ,
- ಇದು ಸುಮಾರು 50 ವರ್ಷಗಳ ಹಿಂದಿನ ಮೊದಲ ಸಿದ್ಧಾಂತವಾಗಿದೆ.
- ವಸ್ತು ಗಳಲ್ಲಿ ಪ್ರಮುಖ ಇದು ಹಂತ ಗಳಿವೆ ಅವುಗಳೆಂದರೆ- ಘನ ದ್ರವ ಅನಿಲ, ಪ್ಲಾಸ್ಮಾ ಮತ್ತು ಬೋಸ್-ಐನ್ ಸ್ಟಿನ್ ಕಂಡೆನ್ಸೇಟ್ . ಎಕ್ಸಿಟೋನಿಯಮ್ ಒಂದು ಕಂಡೆನ್ಸೇಟ್.
- ಇದನ್ನು ಎಕ್ಸೈಟನ್ಸ್ ಎಂದು ಕರೆಯಲ್ಪಡುವ ಕಣಗಳಿಂದ ಮಾಡಲ್ಪಟ್ಟಿದೆ.
- ಎಕ್ಸಿಟೋನಿಯಮ್ ಸೂಪರ್ ಕಂಡಕ್ಟರ್ನಂತಹ ವಿದ್ಯಮಾನಗಳನ್ನು ಪ್ರದರ್ಶಿಸುತ್ತದೆ.
8.ಟೈಮ್ ವರ್ಷದ ವ್ಯಕ್ತಿಯಾಗಿ “ಸೈಲೆನ್ಸ್ ಬ್ರೇಕರ್ಸ್”
- ದ ಸೈಲೆನ್ಸ್ ಬ್ರೇಕರ್ಸ್ ನಿಯತಕಾಲಿಕವನ್ನು 2017ನೇ ಸಾಲಿನ ಟೈಮ್ಸ್ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
- ಇದು ಪ್ರಸಕ್ತ ವರ್ಷದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಬಗೆಗಳನ್ನು ಬಹಿರಂಗಗೊಳಿಸುವ, ಬಹುತೇಕ ಮಹಿಳೆಯನ್ನೇ ಒಳಗೊಂಡಿರುವ ಗುಂಪಾಗಿರುತ್ತದೆ, ಅಮೆರಿಕದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಗಳು ಎಸಗಿರುವ ಲೈಂಗಿಕ ದೌರ್ಜನ್ಯದ ಸ್ವರೂಪವನ್ನು ಇದು ಬಹಿರಂಗಗೊಳಿಸಿದೆ.
- ಟೈಮ್ ನಿಯತಕಾಲಿಕ ನೀಡುವ ವರ್ಷದ ವ್ಯಕ್ತಿ ಪ್ರಶಸ್ತಿಯು, ವಾರ್ಷಿಕವಾಗಿ ನೀಡುವ ಪ್ರಶಸ್ತಿಯಾಗಿದ್ದು, ಇದನ್ನು 1927ರಲ್ಲಿ ಆರಂಭಿಸಲಾಗಿದೆ. ಇದನ್ನು ಪ್ರತಿ ವರ್ಷದ ಡಿಸೆಂಬರ್‍ನಲ್ಲಿ ಘೋಷಿಸಲಾಗುತ್ತದೆ.
- ಆ ವರ್ಷದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಸುದ್ದಿಯ ಮೇಲೆ ಪರಿಣಾಮ ಬೀರಿದ ವ್ಯಕ್ತಿಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಒಳ್ಳೆಯ ಅಥವಾ ಕೆಟ್ಟ ಕಾರಣಕ್ಕೆ ಪ್ರಚಾರವಾಗುವ ವ್ಯಕ್ತಿಗಳು ಕೂಡಾ ಈ ಪ್ರಶಸ್ತಿಗೆ ಪರಿಗಣಿಸಲ್ಪಡುತ್ತಾರೆ.
9.ಹೊಮೈ ವ್ಯಾರವಾಲಾ
- ಹೊಮೈ ವ್ಯಾರವಾಲಾ ರವರು ಭಾರತದ ಮೊದಲ ಪತ್ರಿಕಾ ಛಾಯಾಗ್ರಾಹಕಿ .
- 1947ರಲ್ಲಿ ದೇಶ ಸ್ವಾತಂತ್ರ್ಯ ಗಳಿಸಿ ಕೆಂಪುಕೋಟೆಯ ಮೇಲೆ ಮೊದಲ ತ್ರಿವರ್ಣ ಧ್ವಜ ಹಾರಿದ ಕ್ಷಣ, ಮಹಾತ್ಮ ಗಾಂಧೀಜಿ ಗುಂಡೇಟಿಗೆ ಹತ್ಯೆಯಾಗಿ ರಕ್ತದ ಮಡುವಿನಲ್ಲಿ ಬಿದ್ದ ಗಳಿಗೆ, ಅಖಂಡ ಭಾರತ ಇಬ್ಭಾಗಿಸಿ ಪಾಕಿಸ್ತಾನ ರಚನೆಗಾಗಿ ಮುಖಂಡರು ನಡೆಸಿದ ಸಭೆಗಳು, ದಲೈಲಾಮಾ ಟಿಬೆಟ್ ಗಡಿ ದಾಟಿ ಭಾರತದ ನೆಲಕ್ಕೆ ಕಾಲಿಟ್ಟ ಕ್ಷಣಗಳನ್ನು ಛಾಯಾಚಿತ್ರಗಳ ಮೂಲಕ ಇತಿಹಾಸದ ಪುಟಗಳಲ್ಲಿ ದಾಖಲಿಸಿದ ಕೀರ್ತಿ ವ್ಯಾರವಾಲಾ ಅವರಿಗೆ ಸಲ್ಲುತ್ತದೆ.
- ಸ್ವತಂತ್ರ ಪೂರ್ವದಲ್ಲಿ ಪುರಷರ ವೃತ್ತಿಯೆಂದೆ ಭಾವಿಸಿದ್ದ ಛಾಯಾಗ್ರಹಣ ಕಲೆ ಕರಗತ ಮಾಡಿಕೊಂಡ ವ್ಯಾರವಾಲಾ ದೇಶದ ಐತಿಹಾಸಿಕ ಘಟನೆಗಳನ್ನು ಚಿತ್ರ ಇತಿಹಾಸದಲ್ಲಿ ಅಚ್ಚಳಿಯದಂತೆ ದಾಖಲಿಸಿದ್ದಾರೆ.
- ಹೊಮೈ 1930ರಲ್ಲಿ ‘ಇಲ್ಲಸ್ಟ್ರೇಟಡ್ ವೀಕ್ಲಿ ಆಫ್ ಇಂಡಿಯಾ’ ನಿಯತಕಾಲಿಕೆಯಲ್ಲಿ ಕೆಲಸ ಆರಂಭಿಸಿ ಎರಡನೇ ಮಹಾಯುದ್ಧದ ಸಂದರ್ಭಗಳನ್ನು ಸೆರೆಹಿಡಿದಿದ್ದಾರೆ.
10.ಭಾರತದ ಡಿಎನ್ ಎ ಬೆರಳಚ್ಚು ಮುದ್ರಕ ಪಿತಾಮಹ ಲಾಲ್ ಜೀ ಸಿಂಗ್ ನಿಧನ
- ಖ್ಯಾತ ವಿಜ್ಞಾನಿ ಹಾಗೂ ಭಾರತದ ಡಿಎನ್ ಎ ಬೆರಳಚ್ಚು ಮುದ್ರಕ ಪಿತಾಮಹ ಲಾಲ್ ಜೀ ಸಿಂಗ್ ಮರಣ ಹೊಂದಿದ್ದಾರೆ.
- ಸಿಂಗ್ ಅವರು ಹೈದರಾಬಾದ್ ನ ಸೆಲ್ಯುಲರ್ ಮತ್ತು ಮಾಲಿಕ್ಯೂಲರ್ ಬಯಾಲಜಿ ಕೇಂದ್ರ (ಸಿಸಿಎಂಬಿ) ದ ಸಂಸ್ಥಾಪಕರು, ಹಾಗೂ ಇವರು ಅಂಡಮಾನ್ ನಿಕೋಬಾರ್ ನ ಬುಡಕಟ್ಟು ಜನರಿಗೆ ನೀಡಿದ್ದ ಸಹಾಯಕ್ಕಾಗಿ ಅಂತರಾಷ್ಟ್ರೀಯ ಮೆಚ್ಚುಗೆಗೆ ಪಾತ್ರರಾಗಿದ್ದರು.
- ಇವರು 1998 ಹಾಗೂ ರ ನಡುವೆ ಸಿಸಿಎಂಬಿ ಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.