12th JULY
TO JOIN NIALP FOUNDATION COURSE-2019 CLICK HERE
1.ವಿಶ್ವ ಜನಸಂಖ್ಯಾ ದಿನ
ವಿದ್ಯಾರ್ಥಿಗಳ ಗಮನಕ್ಕೆ
MAINS PAPER-2 population and associated issues (ಜನಸಂಖ್ಯೆ ಮತ್ತು ಸಂಬಂಧಿತ, ವಿಷಯಗಳು)
ಪ್ರಿಲಿಮ್ಸ್ ಪರೀಕ್ಷೆಗಾಗಿ -ಯಾವ ವರ್ಷದಿಂದ ವಿಶ್ವ ಜನಸಂಖ್ಯಾ ದಿನವೆಂದು ಆಚರಿಸಲಾಯಿತು ? ಈ ವರ್ಷದ ಘೋಷಣೆ ಏನು ?
ಮುಖ್ಯ ಪರೀಕ್ಷೆಗಾಗಿ -ಹೆಚ್ಚುತ್ತಿರುವ ಜನಸಂಖ್ಯೆ ಯಿಂದ ಯಾವ ಯಾವ ರೀತಿ ಪರಿಣಾಮ ಬೀರುತ್ತದೆ ? ಹಾಗು ಪ್ರಮುಖ ವಾಗಿ ಎದುರಿಸುತ್ತಿರುವ ಸವಾಲುಗಳೇನು ?
ಪ್ರಮುಖ ಸುದ್ದಿ
- 1987 ರ ಜುಲೈ 11 ರಂದು ವಿಶ್ವ ಜನಸಂಖ್ಯೆಯು 500 ಕೋಟಿಯನ್ನು ತಲುಪಿತ್ತು.ಇದರ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯು ತನ್ನ ಅಂಗ ಸಂಸ್ಥೆಯಾದ ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ (ಯುಎನ್ ಡಿಪಿ ) ಮಂಡಳಿಯ ಮೂಲಕ 1989 ಜುಲೈ 11ರಂದು ಮೊದಲ ಬಾರಿ ಜನಸಂಖ್ಯಾ ದಿನವನ್ನು ಆಚರಿಸಿತು.
- ಅಂದಿನಿಂದೀಚೆಗೆ ಜಗತ್ತಿನಾದ್ಯಂತ 200ಕ್ಕೂ ಹೆಚ್ಚು ದೇಶಗಳಲ್ಲಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
- ಪ್ರತಿವರ್ಷ ಒಂದು ಧೈಯವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಥೀಮ್ “ಫ್ಯಾಮಿಲಿ ಪ್ಲಾನಿಂಗ್ ಇಸ್ ಎ ಹ್ಯೂಮನ್ ರೈಟ್”.
ಮುಖ್ಯ ಅಂಶಗಳು
ಇದರ ಮುಖ್ಯ ಉದ್ದೇಶವೇನು?
- ಆರೋಗ್ಯಕರ ಜೀವನ ಮತ್ತು ಸಣ್ಣ ಕುಟುಂಬಗಳ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ಆಚರಣೆಯ ಉದ್ದೇಶ.
- ಇದರಿಂದಾಗಿ ಜನಸಂಖ್ಯಾ ಬೆಳವಣಿಗೆಯಲ್ಲಿ ಕುಸಿತ ಕಂಡುಬಂದಿದೆ.
ಪ್ರಸ್ತುತ ಜನಸಂಖ್ಯೆ ವರದಿ
- ಪ್ರಸ್ತುತ ಜಗತ್ತಿನ ಜನಸಂಖ್ಯೆ 702 ಕೋಟಿಯಿದ್ದು, ಅದರಲ್ಲಿ ಏಷ್ಯಾದ ಪಾಲು 400 ಕೋಟಿ , ಚೀನಾ ಮತ್ತು ಭಾರತದ ಪಾಲು ಶೇ. 38ರಷ್ಟಿದೆ.
- ಮುಂದಿನ 12 ವರ್ಷದ ಹೊತ್ತಿಗೆ ಜಗತ್ತಿನ ಜನಸಂಖ್ಯೆಯಲ್ಲಿ 100 ಕೋಟಿ ಹೆಚ್ಚುವ ಸಾಧ್ಯತೆ ಇದ್ದು, 2050ರ ಹೊತ್ತಿಗೆ 960 ಕೋಟಿ ತಲುಪುವ ನಿರೀಕ್ಷೆ ಇದೆ.
- ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲೇ ಜನಸಂಖ್ಯೆ ಅಧಿಕವಾಗುತ್ತಿದೆ.
- ಆಫ್ರಿಕಾ ದೇಶಗಳಲ್ಲೂ ಜನಸಂಖ್ಯೆ ಅಧಿಕವಾಗಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ
- ಸದ್ಯದ ಮಟ್ಟಿಗೆ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ದೇಶ ಚೀನಾ. ಚೀನಾದಲ್ಲಿ ಪ್ರಸ್ತುತ 4 ಶತಕೋಟಿ ಜನಂಖ್ಯೆಯಿದೆ. ನಂತರದ ಸ್ಥಾನ ಭಾರತದ್ದು. ಭಾರತದಲ್ಲಿ 1.3 ಶತಕೋಟಿ ಜನರಿದ್ದಾರೆ.
- ತದನಂತರದ ಸ್ಥಾನಗಳಲ್ಲಿ ಅಮೆರಿಕ, ಇಂಡೊನೇಷ್ಯಾ, ಬ್ರೆಜಿಲ್, ಪಾಕಿಸ್ತಾನ ದೇಶಗಳಿವೆ.
2.ಡಿ.ಎನ್.ಎ. ತಂತ್ರಜ್ಞಾನ (ಬಳಕೆ ಮತ್ತು ಆನ್ವಯಿಕತೆ) ನಿಯಂತ್ರಣ ವಿಧೇಯಕ 2018 ಕ್ಕೆ ಸಂಪುಟ ಅನುಮೋದನೆ.
ವಿದ್ಯಾರ್ಥಿಗಳ ಗಮನಕ್ಕೆ
MAINS PAPER-3 Science and Technology- developments and their applications and effects in everyday life
(ವಿಜ್ಞಾನ ಮತ್ತು ತಂತ್ರಜ್ಞಾನ -ದೈನಂದಿನ ಜೀವನದಲ್ಲಿ ಇವುಗಳ ಅಭಿವೃದ್ಧಿ ಹಾಗು ಅನ್ವಯಿಕತೆ ಹಾಗು ಪರಿಣಾಮಗಳು )
ಪ್ರಿಲಿಮ್ಸ್ ಪರೀಕ್ಷೆಗಾಗಿ – ಡಿ.ಎನ್.ಎ. ತಂತ್ರಜ್ಞಾನದ ಬಗ್ಗೆ
ಮುಖ್ಯ ಪರೀಕ್ಷೆಗಾಗಿ – ಡಿ.ಎನ್.ಎ. ಆಧಾರಿತ ತಂತ್ರಜ್ಞಾನ ವಿಧೇಯಕ 2018 ಜಾರಿಯಿಂದ ಪ್ರಮುಖವಾಗಿ ಆಗುವಂತಹ ಬದಲಾವಣೆಗಳೇನು ?
ಪ್ರಮುಖ ಸುದ್ದಿ
- ಪ್ರಧಾನ ಮಂತ್ರಿರವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಡಿ.ಎನ್.ಎ. ತಂತ್ರಜ್ಞಾನ (ಬಳಕೆ ಮತ್ತು ಆನ್ವಯಿಕತೆ) ನಿಯಂತ್ರಣ ವಿಧೇಯಕ 2018 ಕ್ಕೆ ಅನುಮೋದನೆ ನೀಡಿದೆ.
ಮುಖ್ಯ ಅಂಶಗಳು
- “ಡಿ.ಎನ್.ಎ. ಆಧಾರಿತ ತಂತ್ರಜ್ಞಾನ (ಬಳಕೆ ಮತ್ತು ನಿಯಂತ್ರಣ) ವಿಧೇಯಕ 2018” ರ ಜಾರಿಯ ಪ್ರಮುಖ ಉದ್ದೇಶ ಡಿ.ಎನ್.ಎ. ಆಧಾರಿತ ಅಪರಾಧ ತನಿಖೆ ತಂತ್ರಜ್ಞಾನವನ್ನು ದೇಶದ ನ್ಯಾಯ ವಿತರಣೆ ವ್ಯವಸ್ಥೆಯನ್ನು ಬಲಪಡಿಸುವುದಕ್ಕಾಗಿ ಬಳಸಿಕೊಳ್ಳುವುದಾಗಿದೆ.
- ಅಪರಾಧಗಳನ್ನು ಬಗೆಹರಿಸುವುದರಲ್ಲಿ ಡಿ.ಎನ್.ಎ. ಆಧಾರಿತ ತಂತ್ರಜ್ಞಾನ ಬಳಕೆ ಮತ್ತು ಕಾಣೆಯಾದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಗುರುತಿಸುವಲ್ಲಿ ಇದರ ಬಳಕೆ ವಿಶ್ವದಾದ್ಯಂತ ಮಾನ್ಯತೆ ಪಡೆದಿದೆ.
- ಡಿ.ಎನ್.ಎ. ಪ್ರಯೋಗಾಲಯಗಳಿಗೆ ಅವಶ್ಯವಾದ ಮಾನ್ಯತೆ ಮತ್ತು ನಿಯಂತ್ರಣ ವ್ಯವಸ್ಥೆಯನ್ನು ಒದಗಿಸುವ ಮೂಲಕ ಈ ವಿಧೇಯಕವು ದೇಶದಲ್ಲಿ ಈ ತಂತ್ರಜ್ಞಾನದ ಉದ್ದೇಶಿತ ವಿಸ್ತರಿತ ಉಪಯೋಗವನ್ನು ಪಡೆಯುವುದನ್ನು ಖಾತ್ರಿಪಡಿಸಲಿದೆ.
- ಡಿ.ಎನ್.ಎ. ಪರೀಕ್ಷಾ ಫಲಿತಾಂಶಗಳು ವಿಶ್ವಾಸಾರ್ಹ ಮತ್ತು ದತ್ತಾಂಶಗಳು ನಮ್ಮ ನಾಗರಿಕರ ಖಾಸಗಿತನದ ಹಕ್ಕು ಹಾಗು ದುರ್ಬಳಕೆಯಿಂದ ರಕ್ಷಿಸಲ್ಪಟ್ಟಿರುತ್ತವೆ ಎಂಬ ಬಗ್ಗೆ ಭರವಸೆ ಇದೆ.
- ವಿಧೇಯಕದ ಪ್ರಸ್ತಾವನೆಗಳು ಒಂದೆಡೆ ನಾಪತ್ತೆಯಾದವರು, ಕಾಣೆಯಾದವರು ಹಾಗು ಇನ್ನೊಂದೆಡೆ ದೇಶದ ವಿವಿಧೆಡೆ ಗುರುತಿಸಲ್ಪಡದ ಮೃತದೇಹಗಳನ್ನು ಪರಸ್ಪರ ಹೊಂದಿಸಿ ನೋಡಲು ಅವಕಾಶ ಒದಗಿಸುತ್ತವೆ ಮತ್ತು ಸಾಮೂಹಿಕ ದುರಂತ ಸಂಭವಿಸಿದ ಸಂಧರ್ಭದಲ್ಲಿ ಬಲಿಪಶುಗಳಾದವರ ಗುರುತು ಪತ್ತೆಗೂ ಅನುಕೂಲ ಮಾಡಿಕೊಡುತ್ತವೆ.
BACK TO BASICS
- ಅಪರಾಧ ತನಿಖೆ ಡಿ.ಎನ್.ಎ. ರೇಖಿಸುವಿಕೆಯಿಂದ ಮಾನವ ದೇಹಕ್ಕೆ ಹಾನಿ ಮಾಡುವ ವರ್ಗದಲ್ಲಿ ಬರುವ ಅಪರಾಧ ಪ್ರಕರಣಗಳನ್ನು ( ಕೊಲೆ, ಅತ್ಯಾಚಾರ, ಮಾನವ ಕಳ್ಳಸಾಗಾಣಿಕೆ ಅಥವಾ ಮಾರಕ ಹಲ್ಲೆ, ಗಾಯ) ಮತ್ತು ಆಸ್ತಿಗೆ ಸಂಬಂಧಿಸಿದ ಪ್ರಕರಣಗಳನ್ನು ( ಕಳವು, ಮನೆ ಕಳವು ಮತ್ತು ದರೋಡೆ ) ಭೇಧಿಸುವ ನಿಟ್ಟಿನಲ್ಲಿ ಗಮನಾರ್ಹ ನೆರವು ಲಭಿಸುವುದು ಸಾಬೀತಾಗಿದೆ.
- ದೇಶದಲ್ಲಿ ಇಂತಹ ಸರಾಸರಿ ಕೃತ್ಯಗಳ ಸಂಖ್ಯೆ , ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್.ಸಿ.ಆರ್.ಬಿ.) ಪ್ರಕಾರ 2016 ರಲ್ಲಿ ವರ್ಷಕ್ಕೆ 3 ಲಕ್ಷಕ್ಕೂ ಅಧಿಕ ಪ್ರಮಾಣದಲ್ಲಿದೆ. ಪ್ರಸ್ತುತ ಇದರಲ್ಲಿ ಬಹಳ ಸಣ್ಣ ಸಂಖ್ಯೆಯಲ್ಲಿ ಪ್ರಕರಣಗಳು ಡಿ.ಎನ್.ಎ. ಪರೀಕ್ಷೆಗೆ ಒಳಪಡುತ್ತಿವೆ.
- ಈ ತಂತ್ರಜ್ಞಾನದ ವಿಸ್ತರಿತ ಬಳಕೆಯು ಈ ವರ್ಗದಲ್ಲಿ ಬರುವ ಅಪರಾಧ ಪ್ರಕರಣಗಳ ನ್ಯಾಯ ವಿತರಣೆಯನ್ನು ತ್ವರಿತಗೊಳಿಸಲಿದೆ ಮಾತ್ರವಲ್ಲ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಿದೆ. ಪ್ರಸ್ತುತ ಈ ಪ್ರಮಾಣ 30% ಇದೆ
3.ನೆಟ್ ನ್ಯೂಟ್ರಾಲಿಟಿಗೆ ಟೆಲಿಕಾಂ ಆಯೋಗ ಒಪ್ಪಿಗೆ
ವಿದ್ಯಾರ್ಥಿಗಳ ಗಮನಕ್ಕೆ
MAINS PAPER-2 Government policies and interventions for development in various sectors and issues arising out of their design and implementation.
(.ವಿವಿಧ ಕ್ಷೇತ್ರಗಳಲ್ಲಿನ ಪ್ರಗತಿಗೆ ಸರ್ಕಾರದ ನೀತಿ ಹಾಗು ಹಸ್ತಕ್ಷೇಪ ಹಾಗು ಅವುಗಳ ಚೌಕಟ್ಟು ಅನುಷ್ಠಾನ ಪರಿಣಾಮದಿಂದ ಉಂಟಾಗುವ ಅಂಶಗಳು )
ಪ್ರಿಲಿಮ್ಸ್ ಪರೀಕ್ಷೆಗಾಗಿ – ಟ್ರಾಯ್ ಬಗ್ಗೆ , ನೆಟ್ ನ್ಯೂಟ್ರಾಲಿಟಿ ಎಂದರೇನು ?
ಮುಖ್ಯ ಪರೀಕ್ಷೆಗಾಗಿ -ನೆಟ್ ನ್ಯೂಟ್ರಾಲಿಟಿ ಅಗತ್ಯವೇನು ?ಎದುರಿಸುವುತಿರುವ ಸವಾಲುಗಳು ಮತ್ತು ತಟಸ್ಥತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಪ್ರಯತ್ನಗಳೇನು ?
ಪ್ರಮುಖ ಸುದ್ದಿ
- ನೆಟ್ ನ್ಯೂಟ್ರಾಲಿಟಿಗೆ ಕೇಂದ್ರ ಟೆಲಿಕಾಂ ಆಯೋಗವು ಒಪ್ಪಿಗೆ ನೀಡಿದೆ.ಇದರಿಂದ ಟೆಲಿಕಾಂ ಸೇವಾ ಕಂಪನಿಗಳು ಯಾವುದೇ ಆ್ಯಪ್, ಬ್ರೌಸರ್ ಅಥವಾ ಸೇವೆಗಳಿಗೆ ಮಿತಿ ನಿಗದಿಪಡಿಸುವಂತಿಲ್ಲ. ಹಾಗೆಯೇ ನಿರ್ದಿಷ್ಟ ಕಾರಣಗಳನ್ನು ಇರಿಸಿಕೊಂಡು ಒಂದು ಆ್ಯಪ್ ಅಥವಾ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಲು ಕೂಡ ಅವಕಾಶವಿಲ್ಲ.
ಮುಖ್ಯ ಅಂಶಗಳು
- ಫೇಸ್‌ಬುಕ್ ಸೇರಿ ಇನ್ನಿತರ ಕೆಲ ಕಂಪನಿಗಳು ನೆಟ್ ನ್ಯೂಟ್ರಾಲಿಟಿಗೆ ಕೇಂದ್ರದ ಮೇಲೆ ಒತ್ತಡ ಹೇರಿದ್ದವು.
- ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರಿಂದ ಪರೋಕ್ಷ ಸಮೀಕ್ಷೆ ನಡೆಸುವ ಪ್ರಯತ್ನವನ್ನೂ ಮಾಡಿದ್ದವು. ಆದರೆ ಟ್ರಾಯ್ ಶಿಫಾರಸಿನ ಮೇರೆಗೆ ನೆಟ್ ನ್ಯೂಟ್ರಾಲಿಟಿಗೆ ಕೇಂದ್ರ ಸಮ್ಮತಿಸಿದೆ.
- 2016ರ ಸಮಯದಲ್ಲಿ ನೆಟ್ ನ್ಯೂಟ್ರಾಲಿಟಿ ಕುರಿತು ದೇಶಾದ್ಯಂತ ದೊಡ್ಡ ಪ್ರಮಾಣದ ಪರ-ವಿರೋಧದ ಅಭಿಯಾನಗಳು ನಡೆದಿದ್ದವು.
- ಏತನ್ಮಧ್ಯೆ ಗ್ರಾಮ ಪಂಚಾಯಿತಿಗಳಲ್ಲಿ 5 ಲಕ್ಷ ವೈ-ಫೈ ಹಾಟ್‌ಸ್ಪಾಟ್ ನಿರ್ಮಿಸಲು ಕೂಡ ಇದೇ ಸಭೆಯಲ್ಲಿ ಸಮ್ಮತಿಸಲಾಗಿದೆ.
- ಇದಕ್ಕಾಗಿ ಕೇಂದ್ರ ಸರ್ಕಾರವು 6 ಸಾವಿರ ಕೋಟಿ ರೂ.ನೀಡುತ್ತಿದೆ.
BACK TO BASICS
ನೆಟ್ ನ್ಯೂಟ್ರಾಲಿಟಿ ಎಂದರೇನು ?
- ವಿಶ್ವದೆಲ್ಲೆಡೆ ಕೋಟ್ಯಂತರ ಕಂಪ್ಯೂಟರುಗಳು, ಮೊಬೈಲ್ ದೂರವಾಣಿ ಮತ್ತಿತರ ಸಾಧನಗಳು ಇದೀಗ ಅಂತರ್ಜಾಲದ ಸಂಪರ್ಕದಲ್ಲಿವೆ. ಇಷ್ಟು ಅಗಾಧ ಪ್ರಮಾಣದ ವ್ಯವಸ್ಥೆಯಾದ ಅಂತರ್ಜಾಲಕ್ಕೆ ಯಾರೂ ಮಾಲೀಕರಿಲ್ಲ. ಅಂದರೆ, ಅಂತರ್ಜಾಲದ ಆಗುಹೋಗುಗಳನ್ನು ಯಾರೂ ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಂತ್ರಿಸುವಂತಿಲ್ಲ.
- ತಂತ್ರಾಂಶ ಅಭಿವರ್ಧನೆಯಲ್ಲಿ ದಶಕಗಳ ಅನುಭವವಿರುವ ಸಂಸ್ಥೆಯೇ ಆಗಲಿ, ನಿನ್ನೆಯಷ್ಟೇ ತಂತ್ರಜ್ಞಾನದ ಸಂಪರ್ಕಕ್ಕೆ ಬಂದ ವಿದ್ಯಾರ್ಥಿಯೇ ಆಗಲಿ – ಇಲ್ಲಿ ಎಲ್ಲರಿಗೂ ಸಮಾನ ಅವಕಾಶ. ತಮ್ಮ ಉತ್ಪನ್ನಗಳನ್ನು ಜನರಿಗೆ ಪರಿಚಯಿಸಲು, ತಮ್ಮ ಆಲೋಚನೆಯನ್ನು ಕಾರ್ಯಗತಗೊಳಿಸಲು ಇಲ್ಲಿ ಎಲ್ಲರೂ ಸ್ವತಂತ್ರರು.
- ಈ ಪೈಕಿ ಹೆಚ್ಚು ಸೌಲಭ್ಯವಿರುವ ಸಂಸ್ಥೆಗಳು – ಹಣಕಾಸಿನ ಶಕ್ತಿಯಿರುವ ದೊಡ್ಡ ಸಂಸ್ಥೆಗಳೇ ಆಗಲಿ, ಮೂಲಸೌಕರ್ಯದ ಮಾಲೀಕರಾದ ದೂರಸಂಪರ್ಕ ಸಂಸ್ಥೆಗಳೇ ಆಗಲಿ – ತಮ್ಮ ಸ್ಥಾನದ ಪ್ರಭಾವ ಬಳಸಿ ತಮಗೆ ಅಥವಾ ತಮ್ಮ ಗ್ರಾಹಕರಿಗೆ ಲಾಭಮಾಡಿಕೊಡಲು ಹೊರಟರೆ ಅದು ತಪ್ಪು. ನಿರ್ದಿಷ್ಟ ಮೊಬೈಲ್ ಸಂಪರ್ಕ ಬಳಸಿದರೆ ಇಂತಿಷ್ಟು ಜಾಲತಾಣಗಳನ್ನು ಉಚಿತವಾಗಿ ಬಳಸಬಹುದು ಎಂದು ಹೇಳಿದವರ ವಿರುದ್ಧ ಈ ಹಿಂದೆ ಪ್ರತಿಭಟನೆಗಳು ನಡೆದವಲ್ಲ, ಅಂತಹ ಪ್ರತಿಭಟನೆಗಳಿಗೆ ಇದೇ ಕಾರಣ. ಅಂತರ್ಜಾಲ – ವಿಶ್ವವ್ಯಾಪಿ ಜಾಲಗಳನ್ನು ರೂಪಿಸಿ ಬೆಳೆಸಿದ ಮಹನೀಯರ ಉದ್ದೇಶದಂತೆ ಅವು ಮುಕ್ತವಾಗಿಯೇ ಉಳಿಯಬೇಕು, ಯಾವುದೇ ಪಕ್ಷಪಾತ ತೋರದೆ ತಟಸ್ಥವಾಗುಳಿದು ಎಲ್ಲರಿಗೂ ಸಮಾನ ಅವಕಾಶ ಒದಗಿಸಬೇಕು, ಹೊಸಹೊಸ ಆವಿಷ್ಕಾರಗಳನ್ನು ಯಾರೇ ಮಾಡಿದರೂ ಪ್ರೋತ್ಸಾಹಿಸಬೇಕು ಎನ್ನುವುದು ನೆಟ್ ನ್ಯೂಟ್ರಾಲಿಟಿ ಪರಿಕಲ್ಪನೆಯ ಮೂಲಮಂತ್ರ (ನ್ಯೂಟ್ರಾಲಿಟಿ ಎಂದರೆ ತಾಟಸ್ಥ್ಯ ಎಂದರ್ಥ).
- ಈ ಪರಿಕಲ್ಪನೆಗೆ ಯಾರೂ ಧಕ್ಕೆತಾರದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಜಾಗತಿಕ ಸ್ವಯಂಸೇವಾ ಸಂಸ್ಥೆಗಳು, ಆಯಾ ದೇಶದ ಸರಕಾರಗಳು ವಹಿಸಿಕೊಂಡಿವೆ. ಜಾಲಲೋಕದ ಸಾಮಾನ್ಯ ಬಳಕೆದಾರರೂ ಕಾಲಕಾಲಕ್ಕೆ ಅವರನ್ನೆಲ್ಲ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.
4.ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ 2019-20 ರವರೆಗೆ ಬಂಡವಾಳ ಮರುಪೂರಣ ಯೋಜನೆ ವಿಸ್ತರಣೆಗೆ ಸಂಪುಟದ ಅಂಗೀಕಾರ.
ವಿದ್ಯಾರ್ಥಿಗಳ ಗಮನಕ್ಕೆ
MAINS PAPER-3 Indian Economy and issues relating to planning, mobilization of resources, growth, development and employment.
(ಭಾರತದ ಅರ್ಥವ್ಯವಸ್ಥೆ ಹಾಗು ಯೋಜನೆ ,ಸಂಪತ್ತು ಕ್ರೋಡೀಕರಣ ,ಪ್ರಗತಿ .ಅಭಿವೃಧ್ಧಿ ಹಾಗು ಉದ್ಯೋಗ ಹಾಗು ಸಂಬಧಿತ ಅಂಶಗಳು)
ಪ್ರಿಲಿಮ್ಸ್ ಪರೀಕ್ಷೆಗಾಗಿ – ಗ್ರಾಮೀಣ ಬ್ಯಾಂಕ್ ಗಳ ಬಗ್ಗೆ ,ಲೆಕ್ಕಾಚಾರ ಆಧಾರಿತ ಆಸ್ತಿ ಅನುಪಾತ ಎಂದರೇನು(ಸಿ.ಆರ್.ಎ.ಆರ್.) ?
ಮುಖ್ಯ ಪರೀಕ್ಷೆಗಾಗಿ – ಇದರಿಂದ ಕೃಷಿ ಕ್ಷೇತ್ರದ ಮೇಲೆ ಅದರಲ್ಲೂ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆಗುವ ಅನುಕೂಲಗಳೇನು ?
ಪ್ರಮುಖ ಸುದ್ದಿ
- ಪ್ರಧಾನ ಮಂತ್ರಿ ರವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ (ಆರ್.ಆರ್.ಬಿ.) ಮುಂದಿನ ಮೂರು ವರ್ಷಗಳ ಅವಧಿಗೆ ಅಂದರೆ 2019-2020 ರವರೆಗೆ ಬಂಡವಾಳ ಮರುಪೂರಣ ಯೋಜನೆ ವಿಸ್ತರಣೆಗೆ ಅನುಮೋದನೆ ನೀಡಲಾಯಿತು.
- ಇದು ಸಂಭಾವ್ಯ ಅಪಾಯ ಲೆಕ್ಕಾಚಾರ ಆಧಾರಿತ ಆಸ್ತಿ ಅನುಪಾತ (ಸಿ.ಆರ್.ಎ.ಆರ್.)ವಾದ 9 ಪ್ರತಿಶತಕ್ಕೆ ಕನಿಷ್ಟ ನಿಗದಿತ ಬಂಡವಾಳವನ್ನು ಕಾಯ್ದುಕೊಂಡು ಬರಲು ಅನುಕೂಲ ಒದಗಿಸುತ್ತದೆ.
ಮುಖ್ಯ ಅಂಶಗಳು
- ಬಲಿಷ್ಟವಾದ ಬಂಡವಾಳ ರಚನೆ ಮತ್ತು ಸಿ.ಆರ್.ಎ.ಆರ್. ನ ಕನಿಷ್ಟ ಆವಶ್ಯಕತೆ ಮಟ್ಟವು ಹಣಕಾಸು ಸೇರ್ಪಡೆಯಲ್ಲಿ ಆರ್.ಆರ್. ಬಿ. ಗಳಿಗೆ ಮುಖ್ಯ ಪಾತ್ರವನ್ನು ನಿರ್ವಹಿಸಲು ಮತ್ತು ಗ್ರಾಮೀಣ ಪ್ರದೇಶಗಳ ಸಾಲದ ಆವಶ್ಯಕತೆಗಳನ್ನು ಪೂರೈಸಲು ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸುತ್ತದೆ.
- ದೇಶದಲ್ಲಿ 59 ಆರ್.ಆರ್.ಬಿಗಳು ಕಾರ್ಯ ನಿರ್ವಹಿಸುತ್ತಿವೆ. 2017ರ ಮಾರ್ಚ್ 31ರವರೆಗೆ (ತಾತ್ಕಾಲಿಕ) ಆರ್.ಆರ್.ಬಿಗಳು ವಿತರಿಸಿದ ಸಾಲ 2,28,599 ಕೋ.ರೂ.ಗಳು.
- ಬಂಡವಾಳ ಮರುಪೂರಣ ಅವಶ್ಯಕತೆ ಇರುವ ಆರ್.ಆರ್.ಬಿ.ಗಳ ಗುರುತಿಸುವಿಕೆ ಮತ್ತು ಒದಗಿಸಬೇಕಾದ ಮೊತ್ತವನ್ನು ನಬಾರ್ಡ್ ಜೊತೆ ಸಮಾಲೋಚನೆ ಬಳಿಕ ತೀರ್ಮಾನಿಸಲಾಗುವುದು.
- ಹಣಕಾಸು ಸಚಿವರು 2018-19 ರ ಬಜೆಟ್ ಭಾಷಣದಲ್ಲಿ ಹಣಕಾಸಿನ ದೃಷ್ಟಿಯಿಂದ ಬಲಿಷ್ಟವಾಗಿರುವ ಆರ್.ಆರ್.ಬಿ.ಗಳಿಗೆ ಭಾರತ ಸರಕಾರ, ರಾಜ್ಯ ಸರಕಾರ, ಮತ್ತು ಪ್ರಾಯೋಜಿತ ಬ್ಯಾಂಕ್ ಗಳಲ್ಲದೆ ಇತರ ಮೂಲಗಳಿಂದ ಬಂಡವಾಳ ಸಂಗ್ರಹಿಸಲು ಅವಕಾಶ ನೀಡುವ ಬಗ್ಗೆ ಮಾಡಿದ ಘೋಷಣೆಗೆ ಇದು ಹೆಚ್ಚುವರಿಯಾದ ಕ್ರಮವಾಗಿದೆ.
BACK TO BASICS
- ವಿಶೇಷವಾಗಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ , ಕೃಷಿ ಕಾರ್ಮಿಕರಿಗೆ , ಗ್ರಾಮೀಣ ಭಾಗದ ಕರಕುಶಲಿಗಳಿಗೆ, ಮತ್ತು ಸಣ್ಣ ಉದ್ಯಮಗಳಿಗೆ ಕೃಷಿ ಅಭಿವೃದ್ದಿ, ವ್ಯಾಪಾರ, ವಾಣಿಜ್ಯ, ಕೈಗಾರಿಕೆ ಮತ್ತು ಇತರ ಉತ್ಪಾದನಾ ಚಟುವಟಿಕೆಗಳಿಗೆ ಸಾಲ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಆರ್.ಆರ್.ಬಿ.ಗಳನ್ನು ಸ್ಥಾಪಿಸಲಾಗಿತ್ತು.
- ಆರ್.ಆರ್.ಬಿಗಳು ಭಾರತ ಸರಕಾರ ಮತ್ತು ಸಂಬಂಧಿತ ರಾಜ್ಯ ಸರಕಾರ ಮತ್ತು ಪ್ರಾಯೋಜಿತ ಬ್ಯಾಂಕುಗಳ ಜಂಟಿ ಮಾಲಕತ್ವ ಹೊಂದಿದ್ದು ಬಂಡವಾಳದಲ್ಲಿ ಅನುಕ್ರಮವಾಗಿ 50 %, 15% ಮತ್ತು 35 % ಪಾಲುದಾರಿಕೆ ಹೊಂದಿವೆ.
ONLY FOR PRLIMS
5.ಜಾಗತಿಕ ಆವಿಷ್ಕಾರಿ ಸೂಚ್ಯಂಕ( Global Innovation Index)
ಪ್ರಮುಖ ಸುದ್ದಿ
- ಜಾಗತಿಕ ಆವಿಷ್ಕಾರ ಸೂಚ್ಯಂಕ (ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್- ಜಿಐಐ) ದಲ್ಲಿ ಭಾರತ ಮೇಲ್ದರ್ಜೆಗೇರಿದ್ದು, ಮಧ್ಯ ಮತ್ತು ದಕ್ಷಿಣ ಏಷ್ಯಾ ದೇಶಗಳ ಪೈಕಿ ಮೊದಲ ಸ್ಥಾನಕ್ಕೇರಿದೆ.
- 130 ದೇಶಗಳನ್ನು ಒಳಗೊಂಡ ಈ ಸೂಚ್ಯಂಕದಲ್ಲಿ ಭಾರತವೀಗ ಆರು ಸ್ಥಾನಗಳಷ್ಟು ಮೇಲಕ್ಕೇರಿ 57 ನೇ ಕ್ರಮಾಂಕದಲ್ಲಿದೆ.
- ಸತತ ಐದು ವರ್ಷಗಳ ಕುಸಿತದ ಬಳಿಕ ಭಾರತ ತನ್ನಕ್ರಮಾಂಕವನ್ನು ಉತ್ತಮಪಡಿಸಿಕೊಂಡಿದೆ. ಕೊಂಡಿವೆ.
- ಇನ್‌ಸೀಡ್ ಮತ್ತು ವಿಶ್ವ ಬೌದ್ಧಿಕ ಆಸ್ತಿಸಂಘಟನೆ ಹಾಗೂ ಕಾರ್ನೆಲ್ ಯುನಿವರ್ಸಿಟಿ ಜಂಟಿಯಾಗಿ ಸಿದ್ಧಪಡಿಸಿದ ಈ ಸೂಚ್ಯಂಕವು, ಏಷ್ಯಾದಲ್ಲಿ ಭಾರತ ನೂತನ ಆವಿಷ್ಕಾರ ಕೇಂದ್ರವಾಗಿ ಬೆಳೆಯುತ್ತಿದೆ ಎಂದು ಹೇಳಿದೆ.
- ಸ್ವಿಜರ್ಲೆಂಡ್, ಮೊದಲ ಸ್ಥಾನದಲ್ಲಿದೆ.
6.ಕೆನಡಾದಲ್ಲಿ ಹದಿನೇಳನೇ ವಿಶ್ವ ಸಂಸ್ಕೃತ ಸಮ್ಮೇಳನ
ಪ್ರಮುಖ ಸುದ್ದ್ದಿ
- ಕೆನಡಾದ ವ್ಯಾಂಕೊವರ್‌ನಲ್ಲಿರುವ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಏಷ್ಯನ್ ಸ್ಟಡೀಸ್ ವಿಭಾಗದಲ್ಲಿ 17ನೇ ವಿಶ್ವ ಸಂಸ್ಕೃತ ಸಮ್ಮೇಳನ (ಡಬ್ಲೂಎಸ್‌ಸಿ) ಆರಂಭವಾಗಿದ್ದು, ಜುಲೈ13ರವರೆಗೆ ನಡೆಯಲಿದೆ.
- ಅಂತಾರಾಷ್ಟ್ರೀಯ ಸಂಸ್ಕೃತ ಅಧ್ಯಯನ, ಒಕ್ಕೂಟದ(ಐಎಎಸ್ಎಸ್) ಅಡಿಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಸಮ್ಮೇಳನವು ದಕ್ಷಿಣ ಏಷ್ಯಾದ ವೃತ್ತಿಪರ ಸಂಶೋಧಕರು, ಭಾಷೆ, ಸಾಹಿತ್ಯ, ಇತಿಹಾಸ ಮತ್ತು ಧರ್ಮ ಶಿಕ್ಷಕರ ಪ್ರಮುಖ ಅಂತಾರಾಷ್ಟ್ರೀಯ ವೇದಿಕೆಯಾಗಿದೆ.
- ಐಎಎಸ್‌ಎಸ್ 1972ರಲ್ಲಿ ಮೊದಲ ವಿಶ್ವ ಸಂಸ್ಕೃತ ಸಮ್ಮೇಳನ ನವದೆಹಲಿಯಲ್ಲಿ ಆಯೋಜಿಸಿತ್ತು.
- ಪ್ರತಿ ಮೂರು ವರ್ಷಕ್ಕೆ ವಿಶ್ವದ ವಿವಿಧ ಭಾಗಗಳಲ್ಲಿ ಸಮ್ಮೇಳನ ಆಯೋಜಿಸುವುದು ಐಎಎಸ್‌ಎಸ್ ಜವಾಬ್ದಾರಿ.
7.ಉದ್ಯಮ ಸ್ನೇಹಿ ರಾಜ್ಯ: ಕರ್ನಾಟಕಕ್ಕೆ 8ನೇ ಶ್ರೇಣಿ
ಪ್ರಮುಖ ಸುದ್ದಿ
- ಉದ್ಯಮ ಸ್ನೇಹಿ ರಾಜ್ಯಗಳ 2017ರ ಶ್ರೇಣಿ ಪಟ್ಟಿ ಬಿಡುಗಡೆಯಾಗಿದ್ದು, ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದೆ. ಕರ್ನಾಟಕದ ಶ್ರೇಣಿ 13ರಿಂದ 8ಕ್ಕೆ ಸುಧಾರಿಸಿದೆ.
- ವಿಶ್ವಬ್ಯಾಂಕ್ ಹಾಗೂ ಕೈಗಾರಿಕಾ ನೀತಿ ಮತ್ತು ಅಭಿವೃದ್ಧಿ ಮಂಡಳಿ (ಡಿಐಪಿಪಿ) ಸಿದ್ಧಪಡಿಸಿರುವ ಉದ್ಯಮಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ತೆಲಂಗಾಣ ದ್ವಿತೀಯ, ಹರಿಯಾಣ 3ನೇ ಸ್ಥಾನ ಗಳಿಸಿದೆ.
- 2017ರ ಶ್ರೇಣಿ ಯಲ್ಲಿ ಹಲವು ರಾಜ್ಯಗಳು ಗಣನೀಯ ಪ್ರಗತಿ ದಾಖಲಿಸಿವೆ.
- ರಾಜ್ಯಗಳು ಉದ್ಯಮ ವಲಯದ ಅಭಿವೃದ್ದಿಗೆ ತೆಗೆದು ಕೊಂಡಿರುವ ಕ್ರಮಗಳ ಬಗ್ಗೆ ನೀಡಿರುವ ಸಾಕ್ಷಾಧಾರಗಳು, ಬಳಕೆದಾರರ ಪ್ರತಿಕ್ರಿಯೆ ಇತ್ಯಾದಿಗಳನ್ನು ಪರಿಗಣಿಸಿ ಪಟ್ಟಿ ತಯಾರಿಸಲಾಗಿತ್ತು ಎಂದು ಡಿಐಪಿಪಿ ತಿಳಿಸಿದೆ.
- ಒಟ್ಟು 17 ರಾಜ್ಯಗಳು ಸುಧಾರಣೆಯ ಸಾಕ್ಷ್ಯಗಳನ್ನು ಒದಗಿಸುವುದರಲ್ಲಿ ಶೇ.90ಕ್ಕೂ ಹೆಚ್ಚು ಯಶಸ್ಸು ಗಳಿಸಿವೆ. 2015ರಲ್ಲಿ ಒಟ್ಟು 2,532 ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದರೆ, 2017ರಲ್ಲಿ 7,758ಕ್ಕೆ ಏರಿಕೆಯಾಗಿತ್ತು.