12th SEPTEMBER
1.ಭತ್ತದ ಕೃಷಿಯಿಂದಲೂ ಪರಿಸರಕ್ಕೆ ಹಾನಿ (Greenhouse gas emissions from Indian paddy fields Very High)
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ-ವರದಿಯ ಪ್ರಮುಖ ಅಂಶಗಳು ಮತ್ತು ಕೃಷಿಯು ಹವಾಮಾನ ಬದಲಾವಣೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿಶ್ಲೇಷಿಸಿ
ಪ್ರಮುಖ ಸುದ್ದಿ
- ವಾತಾವರಣದ ಮೇಲೆ ಭತ್ತದ ಕೃಷಿ ಉಂಟುಮಾಡುತ್ತಿರುವ ಪರಿಣಾಮ ಈ ಹಿಂದೆ ಅಂದಾಜಿಸಿದ್ದಕ್ಕಿಂತ ದುಪ್ಪಟ್ಟು ಎಂಬ ಅಂಶ ಭಾರತ ಮತ್ತು ಇತರೆ ಭತ್ತ ಬೆಳೆಯುವ ರಾಷ್ಟ್ರಗಳಲ್ಲಿ ನಡೆದಿರುವ ಅಧ್ಯಯನದ ಮೂಲಕ ಬಹಿರಂಗವಾಗಿದೆ.
ಮುಖ್ಯ ಅಂಶಗಳು
- ಅಮೆರಿಕದ ಎನ್ವಿರಾನ್ಮೆಂಟಲ್ ಡಿಫೆನ್ಸ್ ಫಂಡ್(ಇಡಿಎಫ್) ನಡೆಸಿದ ವಿಶ್ಲೇಷಣಾ ವರದಿ ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಸೈನ್ಸ್ಸ್ ಆಫ್ ಯುಎಸ್ಎ(ಪಿಎನ್ಎಎಸ್) ಜರ್ನಲ್ನಲ್ಲಿ ಪ್ರಕಟವಾಗಿದೆ.
- ಇದರ ಪ್ರಕಾರ, ‘ಅನಿಯಮಿತವಾಗಿ ನೆರೆಗೆ ತುತ್ತಾಗುವ ಭತ್ತದ ಗದ್ದೆಗಳು ನೈಟ್ರಸ್ ಆಕ್ಸೈಡ್ನ್ನು ಹೊರಸೂಸುತ್ತವೆ. ನಿಯಮಿತವಾಗಿ ನೀರು ತುಂಬಲ್ಪಟ್ಟ ಭತ್ತದ ಗದ್ದೆಗಳಿಂದ ಹೊರಸೂಸುವ ಮಿಥೇನ್ ಪ್ರಮಾಣಕ್ಕಿಂತ 45 ಪಟ್ಟು ಹೆಚ್ಚು ನೈಟ್ರಸ್ ಆಕ್ಸೈಡ್ ಕೆಲವೇ ಬಾರಿ ನೀರು ತುಂಬಿಕೊಳ್ಳುವ ಭತ್ತದ ಗದ್ದೆಗಳಿಂದ ವಾತಾವರಣ ಸೇರುತ್ತಿದೆ.’
- ಯಥೇಚ್ಛವಾಗಿ ಭತ್ತದ ಗದ್ದೆಗಳಿರುವ ದಕ್ಷಿಣ ಭಾರತದಲ್ಲಿ ಅಧ್ಯಯನ ನಡೆಸಿದ್ದಾಗಿ ಜರ್ನಲ್ನಲ್ಲಿ ಇಡಿಎಫ್ ಹೇಳಿದೆ.
- ಭತ್ತದ ಗದ್ದೆಗಳಿಂದ ಹೊರಸೂಸುವ ಮಿಥೇನ್ ಮತ್ತು ನೈಟ್ರಸ್ ಆಕ್ಸೈಡ್ ಪ್ರಮಾಣ 600 ಕಲ್ಲಿದ್ದಲು ಕಾರ್ಖಾನೆಗಳು ಅಥವಾ ಘಟಕಗಳಿಗೆ ಸಮನಾದದ್ದು. ಕೆಲವು ಬಾರಿ ನೆರೆಗೆ ತುತ್ತಾಗುವ ಭತ್ತದ ಗದ್ದೆಗಳು ಉಗುಳುವ ನೈಟ್ರಸ್ ಅಂಶವನ್ನು ಕಡೆಗಣಿಸಲಾಗಿದೆ.
- ದಕ್ಷಿಣ ಭಾರತದಲ್ಲಿ ಭತ್ತದ ಕೃಷಿ ನಡೆಯುವ ಗದ್ದೆಗಳಿಂದ ಹಸಿರುಮನೆ ಅನಿಲಗಳು ಕೂಡ ಹೆಚ್ಚಾಗಿಯೇ ವಾತಾವರಣ ಸೇರುತ್ತಿದೆ ಎಂದು ಸಂಶೋಧಕರು ವರದಿಯಲ್ಲಿ ಉಲ್ಲೇಖಿಸಿದ್ದಾರೆ….CLICK HERE TO READ MORE