13th DECEMBER-DAILY CURRENT AFFAIRS BRIEF

13th DECEMBER

 

1.ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಕುರಿತು UNWTO / UNESCO ವಿಶ್ವ ಸಮ್ಮೇಳನ

 

ಪ್ರಮುಖ ಸುದ್ದಿ

  • ಎರಡನೇ ಆವೃತ್ತಿಯ ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಯುಎನ್ಡಬ್ಲ್ಯುಟಿಒ / ಯುನೆಸ್ಕೋ ವಿಶ್ವ ಸಮ್ಮೇಳನವನ್ನು ಓಮಾನ್ ನ ಸುಲ್ತಾನೇಟ್ ಮಸ್ಕಟ್ ನಲ್ಲಿ  ನಡೆಸಲಾಗುತ್ತಿದೆ.

 

ಸಮ್ಮೇಳನದ ಉದ್ದೇಶವೇನು?

 

  • ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಕ್ಷೇತ್ರಗಳ ನಡುವಿನ ಪಾಲುದಾರಿಕೆಯನ್ನು ನಿರ್ಮಿಸುವ ಮತ್ತು ಬಲಪಡಿಸುವ ಉದ್ದೇಶದಿಂದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರು ಮತ್ತು ಖಾಸಗಿ ವಲಯದ ಪಾಲುದಾರರು ಮತ್ತು ತಜ್ಞರರ ನಡುವೆ ಸಾಮರಸ್ಯ ಮೂಡಿಸುವುದು ಹಾಗು ಯುಎನ್ ನ 2030 ಸುಸ್ಥಿರ ಅಭಿವೃದ್ಧಿಗೆ   ಅವರ ಪಾತ್ರವನ್ನು ಹೆಚ್ಚಿಸುತ್ತದೆ.

 

ಈ ಸಮ್ಮೇಳನದ ಮುಖ್ಯ ಗುರಿಯೇನು

  • ಈ ಸಮ್ಮೇಳನದಲ್ಲಿ ಪ್ರವಾಸೋದ್ಯಮದಲ್ಲಿ  ಅಭಿವೃದ್ಧಿ ಹೊಂದಲು  ಆಡಳಿತಾತ್ಮಕ ಮಾದರಿಗಳು, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಪರಂಪರೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮದ ರಕ್ಷಣೆ, ಮತ್ತು ಪ್ರವಾಸೋದ್ಯಮದಲ್ಲಿ ಸಾಂಸ್ಕೃತಿಕ ಭೂದೃಶ್ಯದ ಅನ್ವೇಷಣೆಯನ್ನು ಒಳಗೊಂಡಂತೆ ವಿಶಾಲ ವ್ಯಾಪ್ತಿಯ ವಿಷಯಗಳ ಕುರಿತು ಸಮಾಲೋಚನೆಯನ್ನು ನಡೆಸುವ ಗುರಿಯನ್ನು ಹೊಂದಿದೆ.

 

ಇದರ ಹಿನ್ನೆಲೆಯೇನು ?

 

  • 2015 ಫೆಬ್ರವರಿ ರಲ್ಲಿ ಕಾಂಬೋಡಿಯಾದಲ್ಲಿ ನಡೆದ ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಮೊದಲ ಯುಎನ್ಡಬ್ಲ್ಯುಟಿಒ / ಯುನೆಸ್ಕೋ ವಿಶ್ವ ಸಮ್ಮೇಳನಕ್ಕೆ ಈ ಸಮಾವೇಶವು ಉತ್ತರಭಾಗವಾಗಿದೆ
  • ಪ್ರವಾಸೋದ್ಯಮ ಮತ್ತು ಸಂಸ್ಕೃತಿಯನ್ನು ಅನ್ವೇಷಿಸಲು ಹಾಗು ಸುಸ್ಥಿರ ಅಭಿವೃದ್ಧಿಗೆ ಸಾಮರಸ್ಯದಿಂದ ಕೆಲಸ ಮಾಡುವ ಕ್ಷೇತ್ರಗಳಲ್ಲಿ ವಾಗ್ದಾನ ಮಾಡಿದ ಸೀಮ್ ರೀಪ್ ಘೋಷಣೆಯನ್ನು ಪ್ರತಿಬಿಂಬಿಸಲು  ವೇದಿಕೆಯನ್ನು ಒದಗಿಸುತ್ತದೆ.

 

UNWTO: ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ ಬಗ್ಗೆ

  • ಇದು 1974 ರಲ್ಲಿ .ಸ್ಥಾಪನೆಗೊಂಡಿದ್ದು. ಇದರ ಕೇಂದ್ರ ಕಾರ್ಯಾಲಯವು  ಮ್ಯಾಡ್ರಿಡ್, ಸ್ಪೇನ್ (Madrid, Spain) ನಲ್ಲಿದೆ
  • ಸಮರ್ಥನೀಯ ಮತ್ತು ಸಾರ್ವತ್ರಿಕವಾಗಿ ಪ್ರವೇಶಿಸಬಹುದಾದ ಪ್ರವಾಸೋದ್ಯಮದ ಪ್ರಚಾರಕ್ಕಾಗಿ ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆಯು
  • ಜವಾಬ್ದಾರಿಯುತ, ಸಂಸ್ಥೆಯಾಗಿದೆ .

 

2.ಎಂಎಸ್‍ಎಂಇ ಸಂಬಂಧ್‍ (MSME Sambandh)

 

ಪ್ರಮುಖ ಸುದ್ದಿ

 

  • ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳ ಸಚಿವಾಲಯವು ಸಾರ್ವಜನಿಕ ಖರೀದಿ ಪೋರ್ಟೆಲ್, ಎಂಎಸ್‍ಎಂಇ ಸಂಬಂಧ್‍ಗೆ ಚಾಲನೆ ನೀಡಿದೆ.
  • ಇದು ಎಂಎಸ್‍ಎಂಇಗಳಿಗೆ ಸಾರ್ವಜನಿಕ ಖರೀದಿಗೆ ಅನುಕೂಲ ಮಾಡಿಕೊಡಲಿದೆ.

 

ಪ್ರಮುಖ ಸಂಗತಿಗಳು

 

  • ಈ ಪೋರ್ಟೆಲ್‍ನ ಮುಖ್ಯ ಉದ್ದೇಶವೆಂದರೆ, ಎಂಎಸ್‍ಎಂಇಗಳಿಂದ ಸಾರ್ವಜನಿಕ ಖರೀದಿ ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆಗೆ ಇದು ಸಹಕಾರಿಯಾಗಲಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಎಂಎಸ್‍ಎಂಇ ಘಟಕಗಳಿಂದ ಖರೀದಿಸುವ ಸರಕುಗಳಿಗೆ ಇದು ಅನ್ವಯಿಸುತ್ತದೆ.

 

  • ಇದು ಎಂಎಸ್‍ಎಂಇಗಳಿಗೆ ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಕೂಲ ಮಾಡಿಕೊಡಲಿದೆ.
  • ಇದಲ್ಲದೇ ಇದು ಸಚಿವಾಲಯ ಹಾಗೂ ಇತರ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಗೆ ತಮ್ಮ ಖರೀದಿ ಪ್ರಕ್ರಿಯೆಯ ಕ್ಷಮತೆಯನ್ನು ಮೌಲ್ಯಮಾಪನ ಮಾಡಲು ನೆರವಾಗುತ್ತದೆ. ಜತೆಗೆ 2012ರ ಖರೀದಿ ನೀತಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ.

 

ಹಿನ್ನೆಲೆ

 

  • 2012ರಲ್ಲಿ ಚಾಲನೆ ನೀಡಲಾದ ಹೊಸ ಖರೀದಿ ನೀತಿಯು, ಕೇಂದ್ರ ಸರ್ಕಾರದ ಇಲಾಖೆಗಳು ಹಾಗೂ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಅಗತ್ಯವಾದ ಬಿಡಿಭಾಗಗಳನ್ನು ಹಾಗೂ ಇತರ ಬಂಡವಾಳ ಸರಕುಗಳನ್ನು ಎಂಎಸ್‍ಇಗಳಿಮದ ಖರೀದಿಸುವುದನ್ನು ಕಡ್ಡಾಯ ಮಾಡಿದೆ.

 

  • ಅಂದರೆ ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯಗಳು, ಇಲಾಖೆಗಳು, ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಎಂಎಸ್‍ಇಗಳಿಂದ ಖರೀದಿಸುವ ವಾರ್ಷಿಕ ಗುರಿಯನ್ನು ವರ್ಷದ ಆರಂಭದಲ್ಲೇ ನಿಗದಿಪಡಿಸಬೇಕಾಗುತ್ತದೆ.
  • ಇದರ ಮುಖ್ಯವಾದ ಉದ್ದೇಶವೆಂದರೆ, ವಾರ್ಷಿಕ ಒಟ್ಟು ಉತ್ಪಾದನೆಯ ಕನಿಷ್ಠ ಶೇಕಡ 20ನ್ನು ಎಂಎಸ್‍ಇ ಘಟಕಗಳಿಂದ ಖರೀದಿಸುವುದು.

 

 

3.ರಾಜಕಾರಣಿಗಳ ವಿಚಾರಣೆಗೆ 12 ವಿಶೇಷ ನ್ಯಾಯಾಲಯ

 

ಪ್ರಮುಖ ಸುದ್ದಿ

 

  • ಸಂಸದರು ಮತ್ತು ಶಾಸಕರ ವಿರುದ್ಧ ದಾಖಲಾಗಿರುವ 1,571 ಅಪರಾಧ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಒಂದು ವರ್ಷದ ಅವಧಿಗೆ 12 ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ.

 

ಕೇಂದ್ರವು ಏನನ್ನು  ಪ್ರಸ್ತಾಪಿಸಿದೆ?

 

  • ರಾಜಕಾರಣಿಗಳ ಅಪರಾಧ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಸಿದ್ಧ ಎಂದು ಹಣಕಾಸು ಸಚಿವಾಲಯ ತಾತ್ವಿಕ ಒಪ್ಪಿಗೆ ನೀಡಿತ್ತು. ಈ ನ್ಯಾಯಾಲಯಗಳ ಸ್ಥಾಪನೆಗೆ 80 ಕೋಟಿ ವೆಚ್ಚವಾಗಲಿದೆ ಎಂದು ಸಚಿವಾಲಯ ಹೇಳಿದೆ.
  • ತ್ವರಿತಗತಿ ನ್ಯಾಯಾಲಯಗಳ ರೀತಿ ರಾಜಕಾರಣಿಗಳ ಅಪರಾಧ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಆರಂಭಿಸುವ ಮೂಲಕ ರಾಜಕಾರಣದ ಅಪರಾಧೀಕರಣ ತಡೆ ಸಾಧ್ಯವಿದೆ ಎಂದು ನ. 1ರಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

 

  • ಲೋಕಸಭೆಯ 184 ಮತ್ತು ರಾಜ್ಯಸಭೆಯ 44 ಸದಸ್ಯರ ವಿರುದ್ಧ ಅಪರಾಧ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ ಅಪರಾಧ ಪ್ರಕರಣ ಎದುರಿಸುತ್ತಿ
  • ರುವ ಅತಿ ಹೆಚ್ಚು ಶಾಸಕರಿದ್ದಾರೆ (160). ಎರಡನೇ ಸ್ಥಾನದಲ್ಲಿರುವ ಉತ್ತರ ಪ್ರದೇಶದ 160 ಮತ್ತು ಮೂರನೇ ಸ್ಥಾನದಲ್ಲಿರುವ ಬಿಹಾರದ 141 ಶಾಸಕರ ವಿರುದ್ಧ ಅಪರಾಧ ದೂರುಗಳು ದಾಖಲಾಗಿವೆ. ಕರ್ನಾಟಕದ 73 ಶಾಸಕರ ವಿರುದ್ಧದ ಅಪರಾಧ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.

 

ಪ್ರಮುಖ ವಿಶ್ಲೇಷಣೆ (ಮುಖ್ಯ ಪರೀಕ್ಷೆಗಾಗಿ )

 

ವಿಶೇಷ ನ್ಯಾಯಾಲಯದ ಸ್ಥಾಪನೆಯ ಅಗತ್ಯತೆಯೇನು ?

 

 

  • ಎದುರಾಳಿಗಳ ಮೇಲೆ ವಿನಾಕಾರಣ ಕಳಂಕ ಹೊರಿಸುವ ಮತ್ತು ಯಾವುದೇ ಸಾಕ್ಷಿ-ಪುರಾವೆ ಅಥವಾ ಪೂರಕ ದಾಖಲೆಗಳಿಲ್ಲದೆ ಅಕ್ರಮ ಚಟುವಟಿಕೆಯ ಆರೋಪ ಹೊರಿಸುವ ಪರಿಪಾಠ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಬೇರುಬಿಟ್ಟಿದೆ.
  • ಒಂದು ವೇಳೆ ಇಂಥ ಆಪಾದನೆಗಳಿಗೆ ಗಟ್ಟಿ ನೆಲಗಟ್ಟಿದ್ದು, ಆರೋಪಕ್ಕೊಳಗಾದವರು ನಿರ್ದಿಷ್ಟ ತಪ್ಪು ಅಪರಾಧ-ಅಕ್ರಮವನ್ನು ಎಸಗಿದ್ದೇ ಆದಲ್ಲಿ (ಅದು ಚಿಕ್ಕದೇ ಇರಬಹುದು ಅಥವಾ ಗುರುತರವಾದದ್ದೇ ಇರಬಹುದು), ಈ ನೆಲದ ಕಾಯ್ದೆ-ಕಾನೂನಿನ ಪ್ರಕಾರ ಅನ್ವಯವಾಗುವ ದಂಡನೆಯನ್ನು ಸ್ವೀಕರಿಸಲೇಬೇಕಾಗುತ್ತದೆ.

 

  • ಚಾಲ್ತಿಯಲ್ಲಿರುವ ನೀತಿ-ನಿಯಮಗಳ ಅನುಸಾರ, ನ್ಯಾಯಾಲಯದಿಂದ ‘ತಪ್ಪಿತಸ್ಥ/ಅಪರಾಧಿ’ ಎಂಬ ಹಣೆಪಟ್ಟಿ ಕಟ್ಟಿಸಿಕೊಂಡಿರುವ ಜನಪ್ರತಿನಿಧಿಗಳು 6 ವರ್ಷಗಳವರೆಗೆ ಸಾರ್ವಜನಿಕ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ. ಆದರೆ ರಾಜಕೀಯ ಎದುರಾಳಿಗಳು ಮಾಡುವ ಆರೋಪಗಳ ಹಿಂದೆ ದುರುದ್ದೇಶವೇ ತುಂಬಿದ್ದು, ಜತೆಗೆ ಪ್ರಕರಣದ ವಿಚಾರಣೆ ಅನಗತ್ಯವಾಗಿ ಎಳೆಸಲ್ಪಡುವಂತಾದಲ್ಲಿ ಆಪಾದಿತರ ಸ್ಥಿತಿ ಅತಂತ್ರವಾಗುವುದರಲ್ಲಿ ಸಂದೇಹವಿಲ್ಲ. ಕಾರಣ, ಕಳಂಕದಿಂದ ಮುಕ್ತರಾಗದಿದ್ದಲ್ಲಿ ಕ್ಷೇತ್ರದ ಜನತೆಗೆ ಮುಖ ತೋರಿಸಲಾಗದೆ ಅಥವಾ ಅವರ ಸಹಜ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಆರೋಪಿತರ ರಾಜಕೀಯ ಭವಿಷ್ಯಕ್ಕೆ ಗ್ರಹಣ ಬಡಿದಂತಾಗುತ್ತದೆ.

 

 

  • ಇನ್ನು, ನ್ಯಾಯಾಲಯದ ವಿಚಾರಣಾಪರ್ವ ಸುದೀರ್ಘಕಾಲದವರೆಗೆ ಎಳೆಸಲ್ಪಟ್ಟ ಕಾರಣದಿಂದಾಗಿ ಆಪಾದಿತನೊಬ್ಬ ಅಪರಾಧಿಯೋ ನಿರಪರಾಧಿಯೋ ಎಂಬುದು ನಿರ್ಧಾರವಾಗದೆ ಅತಂತ್ರ ಸ್ಥಿತಿ ನಿರ್ವಣವಾದಂಥ ಹಲವು ನಿದರ್ಶನಗಳಿವೆ

 

  • ಅದರ ಬದಲು, ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳು ಕ್ಷಿಪ್ರವಾಗಿ ಇತ್ಯರ್ಥವಾಗುವಂತಾದಲ್ಲಿ, ಆಪಾದಿತರು ಮಾತ್ರವಲ್ಲದೆ ಅವರು ಪ್ರತಿನಿಧಿಸುವ ರಾಜಕೀಯ ಪಕ್ಷ ಹಾಗೂ ಚುನಾವಣಾ ಕ್ಷೇತ್ರದ ಮತದಾರರಿಗೆ ಸ್ಪಷ್ಟ ಸಂದೇಶ ರವಾನೆಯಾದಂತಾಗುತ್ತದೆ.
  • ಜತೆಗೆ, ಪ್ರಕರಣವೊಂದರ ವಿಚಾರಣೆ ಸುದೀರ್ಘ ಕಾಲದವರೆಗೆ ಎಳೆಸುವುದರಿಂದ ವ್ಯವಸ್ಥೆಗೆ ಆಗುವ ಅತಿರೇಕದ ಖರ್ಚಿಗೂ ಕಡಿವಾಣ ಬಿದ್ದಂತಾಗುತ್ತದೆ. ನಮ್ಮ ರಾಜಕೀಯ ವ್ಯವಸ್ಥೆಯನ್ನು ಶುದ್ಧೀಕರಿಸಲು, ತನ್ಮೂಲಕ ಪ್ರಜಾಪ್ರಭುತ್ವಕ್ಕೊಂದು ಆರೋಗ್ಯಕರ ಆಯಾಮ ನೀಡಲು ಇಂಥ ಹಲವು ಉಪಕ್ರಮಗಳಿಗೆ ಮುಂದಾಗಬೇಕಿದೆ. ಆದ್ಯತಾನುಸಾರ ಅವಕ್ಕೆ ಚಾಲನೆ ಸಿಗಲಿ ಎಂಬುದು ಆಶಯ.

 

4.ಫೇಮ್ ಇಂಡಿಯಾ ಯೋಜನೆ

 

ಪ್ರಮುಖ ಸುದ್ದಿ :

 

  • ಫೇಮ್ ಇಂಡಿಯಾ ಯೋಜನೆ ಅಡಿಯಲ್ಲಿ ಪ್ರೋತ್ಸಾಹಕಗಳನ್ನು ಪಡೆಯಲು ವಿದ್ಯುತ್ ಬಸ್ ಗಳನ್ನೂ ಸರಬರಾಜು ಮಾಡುವ ಯಾವುದೇ ಪ್ರಸ್ತಾಪವನ್ನು ಸ್ವೀಕರಿಸುವ ಮೊದಲು ಮೂಲ ಉಪಕರಣ ತಯಾರಕರು ಬೃಹತ್  ಉದ್ಯಮ ಇಲಾಖೆಯಿಂದ ಅನುಮೋದನೆಯನ್ನು ಪಡೆಯಬೇಕಾಗುತ್ತದೆ.ಈ ಕ್ರಮವು  ವಿದ್ಯುತ್ ಬಸ್ಸುಗಳಿಗೆ ಬೇಡಿಕೆ ಪ್ರೋತ್ಸಾಹಧನ ನಿರ್ವಹಣೆಗೆ ಅನುಕೂಲ ಕಲ್ಪಿಸುತ್ತದೆ.

 

ಫೇಮ್ ಇಂಡಿಯಾ ಯೋಜನೆ ಬಗ್ಗೆ

 

  • ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಲೇ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸುತ್ತಿದ್ದ ಯೋಜನಾ ಆಯೋಗ ರದ್ದಾಯಿತು. ಇದೀಗ ಆ ಹೊಣೆಗಾರಿಕೆಯನ್ನು ನಿಭಾಯಿಸುತ್ತಿರುವ ನೀತಿ ಆಯೋಗವು ಫಾಸ್ಟರ್ ಅಡಾಪ್ಷನ್ ಆಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್(ಹೈಬ್ರಿಡ್ ಆಂಡ್) ಇಲೆಕ್ಟ್ರಿಕ್ ವೆಹಿಕಲ್ಸ್ ಇನ್ ಇಂಡಿಯಾ(ಸಂಕ್ಷಿಪ್ತವಾಗಿ ಫೇಮ್ ಇಂಡಿಯಾ) ನೀತಿಗಳನ್ನು ನಿರೂಪಿಸಿತು.
  • ಈ ಕುರಿತ ಅಧಿಸೂಚನೆಯನ್ನು ಕೇಂದ್ರ ಸರ್ಕಾರ 2015ರ ಮಾರ್ಚ್ 13ರಂದು ಹೊರಡಿಸಿದೆ. . ಇದರ ಜಾರಿಗೆ ಆರು ವರ್ಷದ ಗಡುವು(2020) ಹಾಕಿಕೊಂಡು ಕೇಂದ್ರ ಸರ್ಕಾರ ಕೆಲಸ ಆರಂಭಿಸಿದೆ. ಯೋಜನೆಯ ಮೊದಲ ಹಂತದ ಅನುಷ್ಠಾನಕ್ಕೆ 2015-16 ಮತ್ತು 2016-17ರ ಅವಧಿಯನ್ನು ನಿಗದಪಡಿಸಲಾಗಿತ್ತು.

 

  • ಈ ಯೋಜನೆಯ ಮುಖ್ಯ ವಿಚಾರಗಳು ನಾಲ್ಕು – ತಂತ್ರಜ್ಞಾನದ ಅಭಿವೃದ್ಧಿ, ಬೇಡಿಕೆ ಸೃಷ್ಟಿ, ಪೈಲಟ್ ಪ್ರಾಜೆಕ್ಟ್ ಮತ್ತು ಮೂಲಸೌಕರ್ಯ ವೃದ್ಧಿ. ಮೊದಲ ಹಂತದ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಒಟ್ಟು 795 ಕೋಟಿ ರೂಪಾಯಿ ಮೀಸಲಿರಿಸಿತ್ತು.

 

 

  • ಪೆಟ್ರೋಲ್‌, ಡೀಸೆಲ್‌ ದರ ಗಗನಕ್ಕೆ ಏರುತ್ತಿರುವುದು ಹಾಗೂ ತೈಲ ಇಂಧನ ಪರಿಣಾಮ ವಾಯುಮಾಲಿನ್ಯ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್‌ ವಾಹನ ಬಳಕೆ ಖಂಡಿತಾ ಪ್ರಯೋಜನಕಾರಿ. ಪ್ರಯಾಣ ದರದಲ್ಲಿಯೂ ಇಳಿಕೆ ನಿರೀಕ್ಷಿತ.

 

5.ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕ್‌(AIIB)

 

ಪ್ರಮುಖ ಸುದ್ದಿ

 

  • ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಮಂಡಳಿಯ ಗವರ್ನರ್  ಗಳ   3 ನೇ ವಾರ್ಷಿಕ ಸಭೆಯನ್ನು ಭಾರತ  2018 ಜೂನ್ 25 ಮತ್ತು 26  ರಂದು ಆಯೋಜಿಸಲಿದೆ.
  • ಈ ನಿಟ್ಟಿನಲ್ಲಿ, ಭಾರತ ಸರ್ಕಾರ ಮತ್ತು ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕ್‌ (ಎಐಐಬಿ) ಸಚಿವಾಲಯವು ಎಂಒಯುಗೆ ಸಹಿ ಮಾಡಲಾಗಿದೆ
  • The Theme of the Annual Meeting, 2018 will be “Mobilizing Finance for Infrastructure: Innovation and Collaboration”.

 

 

ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕ್‌ ಬಗ್ಗೆ

 

  • ಪ್ರಾದೇಶಿಕ ಅಭಿವೃ­ದ್ಧಿ­ ಉದ್ದೇಶದ, ಚೀನಾ ನೇತೃತ್ವದಲ್ಲಿನ ಬಹು­ರಾಷ್ಟ್ರೀಯ ‘ಏಷ್ಯಾ ಮೂಲ­ಸೌಕರ್ಯ ಹೂಡಿಕೆ ಬ್ಯಾಂಕ್‌’ (ಎಐಐಬಿ) ಬೀಜಿಂಗ್‌­ನಲ್ಲಿ ಅಕ್ಟೋಬರ್, 2014 ರಲ್ಲಿ ಸ್ಥಾಪಿತವಾಯಿತು.
  • ಇದರ ಮುಖ್ಯ ಗುರಿಗಳೆಂದರೆ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವುದು , ಸಂಪತ್ತನ್ನು ಸೃಷ್ಟಿಸುವುದು , ಮೂಲಸೌಕರ್ಯಗಳನ್ನು ಸಾಬೀತುಪಡಿಸಲು ಮತ್ತು ಪ್ರಾದೇಶಿಕ ಸಹಕಾರ ಮತ್ತು ಸಹಭಾಗಿತ್ವವನ್ನು ಉತ್ತೇಜಿಸುವುದು.

 

  • ಇನ್ನು ಬ್ಯಾಂಕ್‌ನಲ್ಲಿ ಚೀನಾ ಶೇ.06ರಷ್ಟು ಮತದಾನದ ಹಕ್ಕನ್ನು ಹೊಂದಿದೆ. ಜೊತೆಗೆ ಕೆಲವು ವಿಷಯಗಳಲ್ಲಿ ವಿಟೋ ಅಧಿಕಾರವನ್ನು ಕೂಡಾ ಹೊಂದಿದೆ. 2013ರ ಅಕ್ಟೋಬರ್‌ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಎಐಐಬಿ ಬ್ಯಾಂಕ್‌ ಸ್ಥಾಪನೆಯ ಕುರಿತು ಮೊದಲ ಬಾರಿಗೆ ಪ್ರಕಟಣೆ ನೀಡಿದ್ದರು. ಈ ಬ್ಯಾಂಕ್‌ ಸ್ಥಾಪನೆಗೆ ಅಮೆರಿಕ ಮತ್ತು ಜಪಾನ್‌ ವಿರೋಧ ಹೊಂದಿದ್ದವು.

 

 

6.ಭಾರತ-ಮ್ಯಾನ್ಮಾರ್-ಥೈಲ್ಯಾಂಡ್ (IMT)ಹೆದ್ದಾರಿ

 

ಪ್ರಮುಖ ಸುದ್ದಿ

 

  • ಭಾರತ-ಮ್ಯಾನ್ಮಾರ್-ಥೈಲ್ಯಾಂಡ್ ‘ತ್ರಿಪಕ್ಷೀಯ ’ಹೆದ್ದಾರಿಯನ್ನು  ವಿಯೆಟ್ನಾಮ್ ರವರೆಗೆ    ವಿಸ್ತರಿಸಲು ಭಾರತವು ಅಸಿನ್ ದೇಶಗಳೊಂದಿಗೆ ಮಾತುಕತೆ ನಡೆಸಲು ಯೋಜಿಸಿದೆ. ಭಾರತದಿಂದ ಪ್ರಸ್ತಾಪಗಳ ಪ್ರಕಾರ, ಲಾವೋಸ್ ಮತ್ತು ಕಾಂಬೋಡಿಯಾ ಮೂಲಕ ಹೆದ್ದಾರಿಯನ್ನು ವಿಯೆಟ್ನಾಂಗೆ ವಿಸ್ತರಿಸಬಹುದಾಗಿದೆ.

 

 

ಪ್ರಮುಖ ವಿಶ್ಲೇಷಣೆ (ಮುಖ್ಯ ಪರೀಕ್ಷೆಗಾಗಿ )

 

  • ತೊಂಭತ್ತರ ದಶಕದ ಆರಂಭದ ಕಾಲಘಟ್ಟ ಅದು. ನಮ್ಮ ದೇಶ ಉದಾರೀಕರಣ ನೀತಿಗೆ ತೆರೆದುಕೊಂಡ ಅವಧಿಯೂ ಹೌದು. ಅಂದಿನ ಪ್ರಧಾನಮಂತ್ರಿ ನರಸಿಂಹ ರಾವ್ ಭಾರತದ ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿರಿಸಿಕೊಂಡು ಪ್ರತಿಪಾದಿಸಿದ್ದು ನೀತಿ ‘ಲುಕ್ ಈಸ್ಟ್’. ಅಸಿಯಾನ್ ಸದಸ್ಯರಾಷ್ಟ್ರಗಳು, ಜಪಾನ್, ದಕ್ಷಿಣ ಕೊರಿಯಾ ಸೇರಿ ಇತರೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಜತೆಗೆ ದೀರ್ಘಕಾಲದ ದ್ವಿಪಕ್ಷೀಯ ಬಾಂಧವ್ಯ ಗಟ್ಟಿಗೊಳಿಸುವುದು ಈ ನೀತಿಯ ಮೂಲ ಉದ್ದೇಶವಾಗಿತ್ತು. ನಂತರದ ಸರ್ಕಾರಗಳ ಅವಧಿಯಲ್ಲಿ ಇದಕ್ಕೆ ಅಷ್ಟು ಪ್ರಾಮುಖ್ಯತೆ ಸಿಗಲಿಲ್ಲ.

 

  • ದಶಕಗಳ ಬಳಿಕ ನಮ್ಮ ದೇಶದಲ್ಲಿ ಏಕಪಕ್ಷ ಬಹುಮತ ಪಡೆದು ಸರ್ಕಾರ ರಚಿಸಿದ್ದು 2014ರಲ್ಲಿ. ಇದರೊಂದಿಗೆ ಪೌರಾತ್ಯ ರಾಷ್ಟ್ರಗಳ ಜತೆಗಿನ ಬಾಂಧವ್ಯದ ಹೊಸ ಶಕೆ ಆರಂಭವಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ 2014ರಲ್ಲಿ ಅಸಿಯಾನ್ ಶೃಂಗಕ್ಕೋಸ್ಕರ ಮ್ಯಾನ್ಮಾರ್​ನ ರಾಜಧಾನಿ ನೇ ಪಿ ತಾವ್​ಗೆ ಭೇಟಿ ನೀಡಿದ ಸಂದರ್ಭ ಭಾರತದ ‘ಆಕ್ಟ್ ಈಸ್ಟ್ ಪಾಲಿಸಿ’ಯನ್ನು ಘೋಷಿಸಿದರು. ಆಗ್ನೇಯ ಏಷ್ಯಾ ರಾಷ್ಟ್ರಗಳ ಜತೆಗಿನ ಭಾರತದ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಇರಾದೆ ಹಾಗೂ ಈ ಪ್ರಾಂತ್ಯದಲ್ಲಿ ಸಕ್ರಿಯ ಪಾತ್ರ ನಿಭಾಯಿಸುವ ಇಚ್ಛೆಯನ್ನು ಪ್ರಧಾನಿ ಮೋದಿ ಅಂದು ವ್ಯಕ್ತಪಡಿಸಿದ್ದರು. ಅದರಂತೆ ಭಾರತದ ನೀತಿಗಳೂ ಬದಲಾದವು.

 

  • ಭಾರತದ ಆಕ್ಟ್ ಈಸ್ಟ್ ಪಾಲಿಸಿಯಲ್ಲಿ ಮ್ಯಾನ್ಮಾರ್​ಗೆ ಯಾಕಿಷ್ಟು ಮಹತ್ವ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಆ ದೇಶದ ಬಗ್ಗೆ ಕೊಂಚ ತಿಳಿದುಕೊಳ್ಳುವುದು ಸೂಕ್ತ. ಜೇಡ್(ಪಚ್ಚೆ ರತ್ನ) ಮತ್ತು ಜೆಮ್್ಸ(ರತ್ನದ ಹರಳು), ತೈಲ, ನೈಸರ್ಗಿಕ ಅನಿಲಗಳಿಂದ ಸಂಪದ್ಭರಿತವಾದ ನಾಡು ಮ್ಯಾನ್ಮಾರ್. ಅಂದಾಜು 1 ಕೋಟಿ ಜನಸಂಖ್ಯೆ. ಶ್ರೀಮಂತ ಸಾಂಸ್ಕೃತಿಕ ಪರಂಪರೆ, ವಿಶೇಷವಾಗಿ ಬೃಹತ್ ದೇವಾಲಯಗಳು ಪ್ರೇರಣಾದಾಯಿಯಾಗಿ ಗಮನಸೆಳೆಯುತ್ತವೆ. ಜನಸಂಖ್ಯೆಯ ಶೇ.88 ಭಾಗ ಬೌದ್ಧ ಮತಾನುಯಾಯಿಗಳು. ಅಲ್ಲಿ 30 ಲಕ್ಷದಷ್ಟು ಭಾರತೀಯ ಮೂಲದವರಿದ್ದಾರೆ. ಮ್ಯಾನ್ಮಾರ್ ಜನರ ಪಾಲಿಗೆ ನಮ್ಮ ಭಾರತ ‘ಪವಿತ್ರ ಯಾತ್ರಾ ದೇಶ’. ಅಲ್ಲದೆ, ಎರಡೂ ರಾಷ್ಟ್ರಗಳು ಬಲಿಷ್ಠ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ವಿುಕ ನಂಟನ್ನು ಹೊಂದಿವೆ.

 

  • ಬ್ರಿಟಿಷ್ ಆಳ್ವಿಕೆಯಿಂದ ಭಾರತ ಸ್ವತಂತ್ರಗೊಂಡ ಮರುವರ್ಷವೇ ಅಂದರೆ 1948ರಲ್ಲಿ ಬರ್ವ ಕೂಡ ಸ್ವತಂತ್ರವಾಯಿತು. ಅದು ಅತಿರೇಕದ ಜನಾಂಗೀಯ ಸಂಘರ್ಷ, ನಾಗರಿಕ ಸಮರ ಮತ್ತು ಸೇನಾ ಆಳ್ವಿಕೆಯಿಂದ ಸೊರಗಿ ಹೋಗಿತ್ತು. ಇತ್ತೀಚೆಗೆ ಅಂದರೆ 2010ರಲ್ಲಷ್ಟೇ ಅಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಿತು. ಅದರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಆಂಗ್ ಸಾನ್ ಸೂ ಕಿ ನೇತೃತ್ವದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಉಭಯ ಸದನಗಳಲ್ಲೂ ಭಾರಿ ಬಹುಮತದ ವಿಜಯ ಗಳಿಸಿತು. ನಾಗರಿಕ ಸರ್ಕಾರವೊಂದು 2011ರಲ್ಲಿ ಅಸ್ತಿತ್ವಕ್ಕೆ ಬಂತು. ಮ್ಯಾನ್ಮಾರ್ ಕಾನೂನು ಪ್ರಕಾರ ಸೂ ಕಿ ಪ್ರಧಾನಿಯಾಗಲು ಸಾಧ್ಯವಿಲ್ಲದ ಕಾರಣ ಅವರನ್ನು ಅಷ್ಟೇ ಪ್ರಭಾವಿ ಸ್ಥಾನಮಾನದ ‘ಸ್ಟೇಟ್ ಕೌನ್ಸೆಲರ್’ ಆಗಿ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಆದರೂ, ಅಲ್ಲಿ ಸೇನೆ ಇನ್ನೂ ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ.

 

  • ಇನ್ನು ಗಡಿಯ ವಿಚಾರಕ್ಕೆ ಬಂದರೆ, ಮ್ಯಾನ್ಮಾರ್ ಭಾರತ ಜತೆಗಷ್ಟೇ ಅಲ್ಲ, ಚೀನಾ, ಬಾಂಗ್ಲಾದೇಶ, ಥಾಯ್ಲೆಂಡ್ ಮತ್ತು ಲಾವೋಸ್ ಜತೆಗೂ ಗಡಿ ಹಂಚಿಕೊಂಡಿದೆ. ಭಾರತದ ಜತೆಗೆ 1,600 ಕಿ.ಮೀ. ಉದ್ದದ ಸೂಕ್ಷ್ಮ ಹಾಗೂ ಸುಲಭ ಬೇಧ್ಯ ಭೂಗಡಿಯನ್ನು ಹೊಂದಿರುವ ಏಕೈಕ ಆಗ್ನೇಯ ಏಷ್ಯಾ ರಾಷ್ಟ್ರ ಮ್ಯಾನ್ಮಾರ್. ಅಲ್ಲದೆ, ಬಂಗಾಳ ಕೊಲ್ಲಿಯ ಮೂಲಕ ಸಾಗರ ಸಂಪರ್ಕವನ್ನೂ ಅದು ಭಾರತದ ಜತೆಗೆ ಹಂಚಿಕೊಂಡಿದೆ. ನಮ್ಮ ದೇಶದ ಈಶಾನ್ಯದ ನಾಲ್ಕು ರಾಜ್ಯಗಳು- ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಂಗಳು ಮ್ಯಾನ್ಮಾರ್ ಜತೆಗೆ ಗಡಿಯನ್ನು ಹಂಚಿಕೊಂಡಿವೆ.

 

  • ಭಾರತ-ಮ್ಯಾನ್ಮಾರ್ ಸಂಬಂಧ ಯಾಕೆ ಮಹತ್ವ ಪಡೆದುಕೊಳ್ಳುತ್ತದೆ ಎಂದು ಹೇಳುವಾಗ ಕೆಲವು ಪ್ರಮುಖ ಕಾರಣಗಳು ಗಮನಸೆಳೆಯುತ್ತವೆ.

 

  • ಭಾರತದ ಭದ್ರತಾ ಹಿತಾಸಕ್ತಿಗಳ ರಕ್ಷಣೆ- ಮ್ಯಾನ್ಮಾರ್ ಗಡಿಯಲ್ಲಿರುವ ಈಶಾನ್ಯ ರಾಜ್ಯಗಳಲ್ಲಿ ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್(ಎನ್​ಎಸ್​ಸಿಎನ್), ಪೀಪಲ್ಸ್ ಲಿಬರೇಷನ್ ಆರ್ವಿು(ಪಿಎಲ್​ಎ), ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್(ಯುಎನ್​ಎಲ್​ಎಫ್), ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ(ಯುಎಲ್​ಎಫ್​ಎ) ಮುಂತಾದ ಬಂಡುಕೋರ ಸಂಘಟನೆಗಳ ಚಟುವಟಿಕೆ ನಿಯಂತ್ರಿಸುವುದು ಭಾರತದ ಆದ್ಯತೆಯ ವಿಷಯ. ಈ ಗುಂಪುಗಳಿಗೆ ಚೀನಾದ ಯುನ್ನಾನ್ ಪ್ರಾಂತ್ಯದಿಂದ ಮ್ಯಾನ್ಮಾರ್ ಮೂಲಕ ಶಸ್ತ್ರಾಸ್ತ್ರಗಳ ಪೂರೈಕೆಯಾಗುತ್ತಿದೆ. ಇಂತಹ ಅಕ್ರಮ ಚಟುವಟಿಕೆ ತಡೆಯಲು ಮ್ಯಾನ್ಮಾರ್ ಅಧಿಕಾರಿಗಳ ನೆರವು ಮತ್ತು ಸಹಕಾರ ಅತೀಅವಶ್ಯ. ಈಗ್ಗೆ ಕೆಲವು ವಾರಗಳ ಹಿಂದಷ್ಟೇ ಭಾರತದ ಸೇನೆಯ ಪೌರಾತ್ಯ ವಿಭಾಗ ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಎನ್​ಎಸ್​ಸಿಎನ್ ಬಣದ ನಾಗಾ ಬಂಡುಕೋರರ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

 

  • ಚೀನಾ ತಂತ್ರಕ್ಕೆ ಪ್ರತಿತಂತ್ರ- ಭಾರತದ ಸೇನೆಯನ್ನು ಸುತ್ತುವರಿದು ಕುಟುಕುವುದಕ್ಕಾಗಿ ಚೀನಾ ರೂಪಿಸುತ್ತಿರುವ ‘ಸ್ಟಿಂಗ್ ಆಫ್ ಪರ್ಲ್ಸ್’ ನೀತಿಯನ್ನು ಎದುರಿಸುವುದಕ್ಕೆ ಮ್ಯಾನ್ಮಾರ್ ಸಹಕಾರ ಭಾರತಕ್ಕೆ ಅತೀ ಅಗತ್ಯ. ಚೀನಾ ಕೂಡ ಮ್ಯಾನ್ಮಾರ್ ಜತೆಗೆ ದೀರ್ಘಕಾಲದ ಬಲಿಷ್ಠ ಹಾಗೂ ನಿಕಟ ಬಾಂಧವ್ಯ ಹೊಂದಿದೆ. ಚೀನಾದ ವ್ಯಾಪಾರ ಚಟುವಟಿಕೆಗಳು, ಅದು ನೀಡುತ್ತಿರುವ ಹಣಕಾಸಿನ ನೆರವು ಮತ್ತು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿಯ ಪಾಲುದಾರಿಕೆಗಳು ಮ್ಯಾನ್ಮಾರ್ ಜತೆಗಿನ ಸಂಬಂಧವನ್ನು ಇನ್ನಷ್ಟು ನಿಕಟವಾಗಿಸಿದೆ. ಮ್ಯಾನ್ಮಾರ್​ನ ತೈಲ ಮತ್ತು ನೈಸರ್ಗಿಕ ಅನಿಲಗಳ ಮುಖ್ಯ ಬಳಕೆದಾರನಾಗಿರಲು ಚೀನಾ ಬಯಸುತ್ತಿದೆ. ಅಲ್ಲದೆ, ಮ್ಯಾನ್ಮಾರನ ಸೇನೆಗೆ ಜೆಟ್ ಫೈಟರ್, ನೌಕೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುವ ಪ್ರಮುಖ ರಾಷ್ಟ್ರ ಚೀನಾವೇ ಆಗಿದೆ. ಚೀನಾದ ನೆರವಿನೊಂದಿಗೆ ಮ್ಯಾನ್ಮಾರ್ ಬಂಗಾಳ ಕೊಲ್ಲಿಯ ಕ್ಯೌಕ್​ಪ್ಯೂನಲ್ಲಿ ಆಳ ಸಮುದ್ರ ಬಂದರು ನಿರ್ವಿುಸಿದೆ. ಭಾರತದ ಸ್ವಾಧೀನವಿರುವ ಅಂಡಮಾನ್ ದ್ವೀಪಕ್ಕೆ ಸಮೀಪವಿರುವ ಮ್ಯಾನ್ಮಾರ್ ನಿಯಂತ್ರಣದ ಗ್ರೇಟ್ ಕೊಕೊ ದ್ವೀಪದಲ್ಲಿ ಸೇನಾ ನೆಲೆಯನ್ನು ಚೀನಾ ಸ್ಥಾಪಿಸಿದೆ.

 

  • ಮ್ಯಾನ್ಮಾರ್ ಹೆಬ್ಬಾಗಿಲು- ಪ್ರಧಾನಿ ಮೋದಿಯವರ ‘ಆಕ್ಟ್ ಈಸ್ಟ್’ ನೀತಿಯ ಯಶಸ್ಸಿಗೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಜತೆಗಿನ ಸಂಪರ್ಕವೇ ಮುಖ್ಯವಾದುದು. ಅಸಿಯಾನ್ ರಾಷ್ಟ್ರಗಳ ಜತೆಗಿನ ಭಾರತದ ಸಂಪರ್ಕಕ್ಕೆ ಮ್ಯಾನ್ಮಾರ್ ಹೆಬ್ಬಾಗಿಲು. ಉಭಯ ರಾಷ್ಟ್ರಗಳಲ್ಲಿ ಶಾಂತಿ ಸುವ್ಯವಸ್ಥೆ ಮತ್ತು ಅಭಿವೃದ್ಧಿ ಆಗಬೇಕು ಎಂದರೆ, ಎರಡೂ ದೇಶಗಳ ಭದ್ರತೆ, ರಾಷ್ಟ್ರೀಯ ಹಿತಾಸಕ್ತಿಗಳನ್ನು ಗಮನಿಸಿ ಮುಂದುವರಿ ಯಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮ್ಯಾನ್ಮಾರ್ ಜತೆಗಿನ ಭಾರತದ ಬಾಂಧವ್ಯ ವೃದ್ಧಿಯಾಗುತ್ತಿದೆ. ಇನ್ನೊಂದೆಡೆ ಚೀನಾದ ಜತೆಗಿನ ಮ್ಯಾನ್ಮಾರ್ ನಂಟು ಕಡಿಮೆಯಾಗತೊಡಗಿದೆ. ಅಲ್ಲಿನ ಹಲವು ಮೂಲಭೂತ ಸೌಕರ್ಯಗಳ ವಿಶೇಷವಾಗಿ ಗಡಿಭಾಗದ ಅಭಿವೃದ್ಧಿಗೆ ಭಾರತ ನೆರವು ನೀಡಿದೆ. ಇದರಲ್ಲಿ, ಮಿಜೋರಂ ಮತ್ತು ಬಂಗಾಳ ಕೊಲ್ಲಿಯನ್ನು ಜೋಡಿಸುವ ‘ಕಲಾದನ್ ಬಹು ಮಾದರಿ ಟ್ರಾನ್ಸಿಟ್ ಸಾರಿಗೆ ವ್ಯವಸ್ಥೆ’ಗೆ ಭಾರತ ನೆರವು ನೀಡಿದೆ. ಈ ಯೋಜನೆ ಮ್ಯಾನ್ಮಾರ್​ನ ಸಮುದ್ರ, ನದಿ ಮತ್ತು ರಸ್ತೆ ಮಾರ್ಗ, ಅಲ್ಲದೆ, ರ್ಹಿ-ಟಿಡಿಮ್ ರಸ್ತೆಯ 80 ಕಿ.ಮೀ. ಅಭಿವೃದ್ಧಿ ಮತ್ತು ಮೇಲ್ದರ್ಜೆಗೇರಿಸುವಿಕೆಯೂ ಒಳಗೊಂಡಿದೆ. ಈಗಾಗಲೇ ಮಣಿಪುರ ಸಂರ್ಪಸುವ 162 ಕಿ.ಮೀ. ಉದ್ದದ ರಸ್ತೆಯ ನವೀಕರಣ ಮಾಡಿದ ಭಾರತ ಅದನ್ನು ಮ್ಯಾನ್ಮಾರ್​ಗೆ ಹಸ್ತಾಂತರಿಸಿದೆ. ಅಲ್ಲದೆ, ಮ್ಯಾನ್ಮಾರ್ ಜತೆಗಿನ ರಕ್ಷಣಾ ಸಂಬಂಧವನ್ನು ಬಲಗೊಳಿಸಿರುವ ಭಾರತ ಈಗಾಗಲೇ ಹಲವು ಸಿಬ್ಬಂದಿಗೆ ಭಾರತದಲ್ಲಿ ತರಬೇತಿ ನೀಡಿದೆ. ಇವೆಲ್ಲದರ ಜತೆಗೆ ತ್ರಿಪಕ್ಷೀಯ ಹೆದ್ದಾರಿ ಯೋಜನೆ-ವಿಶೇಷವಾಗಿ ಮಣಿಪುರದ ಮೊರೇಹ್​ನಿಂದ ಥಾಯ್ಲೆಂಡ್​ನ ಮಾಯೆ ಸೋಟ್ ಮೂಲಕ ಮ್ಯಾನ್ಮಾರ್​ಗೆ ಸಂಪರ್ಕ ಕಲ್ಪಿಸುವ ಈ ಯೋಜನೆ ಜಾರಿಗೆ ಭಾರತ ತನ್ನ ಬದ್ಧತೆ ಪ್ರದರ್ಶಿಸಿದೆ. ಇದು ಪೂರ್ಣಗೊಂಡಾಗ ಆಗ್ನೇಯ ಏಷ್ಯಾ ರಾಷ್ಟ್ರಗಳ ಜತೆಗೆ ಭಾರತವನ್ನು ಜೋಡಿಸುವ ಬಹುದೊಡ್ಡ ಸಂಪರ್ಕ ಸೇತುವಾಗಲಿದೆ.

 

  • ವಿಶೇಷವಾಗಿ ಚೀನಾದ ಜತೆಗಿನ ಡೋಕ್ಲಮ್ ಬಿಕ್ಕಟ್ಟಿನ ಯಶಸ್ವಿ ಪರಿಹಾರದ ನಂತರದಲ್ಲಿ ಪ್ರಧಾನಿ ಮೋದಿಯವರ ಇತ್ತೀಚಿನ ಮ್ಯಾನ್ಮಾರ್ ಭೇಟಿ, ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಉತ್ತಮ ಅವಕಾಶವನ್ನೇ ಒದಗಿಸಿತು. ಆದಾಗ್ಯೂ, ಮೋದಿಯವರ ಈ ಮಹತ್ವದ ಭೇಟಿಗೆ ಅನಪೇಕ್ಷಿತ ರೊಹಿಂಗ್ಯಾ ಬಿಕ್ಕಟ್ಟಿನ ಕರಿಛಾಯೆ ಆವರಿಸಿದ್ದು ವಾಸ್ತವ. ಮ್ಯಾನ್ಮಾರ್ ಜತೆಗಿನ ಸಂಬಂಧವನ್ನು ಇನ್ನಷ್ಟು ನಿಕಟಗೊಳಿಸಬೇಕಾದ್ದು ಭಾರತದ ಮಟ್ಟಿಗೆ ಬಹಳ ಮುಖ್ಯವಾದುದು. ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿ ಕಾಯ್ದುಕೊಳ್ಳುವಲ್ಲಿ ಇದು ಅನಿವಾರ್ಯ ಕೂಡ.

 

  • ಭಾರತಕ್ಕೆ ಬೇಳೆ ಕಾಳು ಪೂರೈಸುವ ಪ್ರಮುಖ ರಾಷ್ಟ್ರ ಮ್ಯಾನ್ಮಾರ್. ಹೀಗಾಗಿ ಆಹಾರದ ಸುರಕ್ಷತೆ ವಿಷಯದಲ್ಲೂ ಮ್ಯಾನ್ಮಾರ್ ಪಾಲುದಾರಿಕೆಯನ್ನು ಪ್ರಶಂಸಿಸಲೇಬೇಕು. ಆಗ್ನೇಯ ಏಷ್ಯಾ ರಾಷ್ಟ್ರಗಳ ಜತೆಗಿನ ಸಂಪರ್ಕ ಸಾಧಿಸುವ ಭಾರತದ ಪ್ರಯತ್ನಕ್ಕೆ ಮ್ಯಾನ್ಮಾರ್ ಕೇಂದ್ರಬಿಂದು. ಅನುಷ್ಠಾನ ಹಂತದಲ್ಲಿರುವ ಯೋಜನೆಗಳ ತ್ವರಿತ ಪ್ರಗತಿಗಾಗಿ ಭಾರತ ಇನ್ನಷ್ಟು ಶ್ರಮ ಹಾಕಬೇಕು. ಭಾರತದ ಕೆಲವು ತೈಲ ಕಂಪನಿಗಳು ಮ್ಯಾನ್ಮಾರ್​ನಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ನಿಕ್ಷೇಪದ ಮೇಲೆ ಹಕ್ಕು ಸಾಧಿಸಲು ಬೇಕಾದ ಗುತ್ತಿಗೆ ನಿಬಂಧನೆಗಳನ್ನು ಪೂರೈಸುವಲ್ಲಿ ವಿಫಲವಾಗಿವೆ. ಇಂತಹ ಕಂಪನಿಗಳು ಹೊಸ ಒಪ್ಪಂದ ಮಾಡುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನವನ್ನು ನಿಗದಿತ ಸಮಯದ ಚೌಕಟ್ಟಿನೊಳಗೇ ಮಾಡಬೇಕು.

 

ONLY FOR PRELIMS

 

7.೧೦ನೇ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌

 

  • ಜಪಾನ್‌ನ ವಾಕೋಸಿಟಿಯಲ್ಲಿ ನಡೆಯುತ್ತಿರುವ ೧೦ನೇ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಜಿತುರಾಯ್ ಹಾಗೂ ಹೀನಾ ಸಿಧು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

 

  • ಪುರುಷರ ೧೦ಮೀಟರ್ ಏರ್ ಪಿಸ್ತೂಲ್ ವಿಭಾದಲ್ಲಿ ಜಿತು ಮೂರನೇ ಸ್ಥಾನ ಪಡೆದುಕೊಂಡರೆ, ಮಹಿಳೆಯರ ೧೦ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಹೀನಾ ಕಂಚಿನ ಪದಕ ಗೆದ್ದಿದ್ದಾರೆ.

 

  • ೧೦ ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಪುರುಷರ ತಂಡ ಚಿನ್ನ ಗೆದ್ದುಕೊಂಡಿದೆ.ಜಿತು, ಶಹಜಾರ್ ರಿಜ್ವಿ, ಓಂಕಾರ್‌ಸಿಂಗ್ ತಂಡದಲ್ಲಿದ್ದರು.

 

  • ಹೀನಾ, ಶ್ರೀನಿವೇತಾ, ಹರ್ವೀನ್ ಸಾರೊ ಅವರನ್ನು ಒಳಗೊಂಡ ಮಹಿಳೆಯರ ತಂಡ ಬೆಳ್ಳಿ ಪದಕ ಗೆದ್ದುಕೊಂಡಿದೆ.

 

  • ಜೂನಿಯರ್ ಪುರುಷರ ತಂಡ ೧೦ ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದು, ತಂಡದಲ್ಲಿ ಅನ್ಮೋಲ್ ಜೈನ್, ಗೌರವ್ ರಣಾ, ಅಭಿಷೇಕ್ ಆರ್ಯ ಇದ್ದಾರೆ. ಅನ್ಮೋಲ್ ಜೂನಿಯರ್ ವೈಯಕ್ತಿಕ ೧೦ ಮೀಟರ್ ಏರ್ ಪಿಸ್ತೂಲ್ ವಿಭಾಗ್ಲದಲಿ ಕಂಚಿನ ಪದಕ ಜಯಿಸಿದ್ದಾರೆ.

 

  • ಟೂರ್ನಿಯಲ್ಲಿ ಒಟ್ಟು ೧೭ ಪದಕಗಳನ್ನು ಗೆದ್ದುಕೊಂಡಿರುವ ಭಾರತ. ೪ ಚಿನ್ನ, ೬ ಬೆಳ್ಳಿ, ೭ ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.

 

8.ಆಧುನಿಕ ನಕ್ಷತ್ರಗಳ ಕೈಪಿಡಿಯಲ್ಲಿ ರೇವತಿ, ಭರಣಿ

 

  • ಭಾರತೀಯ ಪಂಚಾಂಗ ಮತ್ತು ಪ್ರಾಚೀನ ಭಾರತದ ಖಗೋಳಶಾಸ್ತ್ರದ ಪಠ್ಯಗಳಲ್ಲಿ ಬರುವ ರೇವತಿ ಮತ್ತು ಭರಣಿ ನಕ್ಷತ್ರಗಳು ಆಧುನಿಕ ಖಗೋಳ ವಿಜ್ಞಾನದಲ್ಲೂ ಶಾಶ್ವತ ಸ್ಥಾನ ಪಡೆದಿವೆ. ಈ ಹೆಸರುಗಳನ್ನು ಆಧುನಿಕ ನಕ್ಷತ್ರಗಳ ಕೈಪಿಡಿಯಲ್ಲಿ ಸೇರಿಸಲಾಗಿದೆ.

 

  • ಖಗೋಳ ವಿಜ್ಞಾನಿಗಳು ಈ ಹಿಂದೆ ಗುರುತಿಸಿದ್ದ ಝೆಟಾ ಪಿಸಿಯಂ ನಕ್ಷತ್ರಕ್ಕೆ ರೇವತಿ ಎಂದು, 41 ಅರಿಯೆಟಿಸ್ ನಕ್ಷತ್ರಕ್ಕೆ ಭರಣಿ ಎಂದು ಮರು ನಾಮಕರಣ ಮಾಡಲಾಗಿದೆ.

 

  • ಇತ್ತೀಚೆಗೆ ನಡೆದಿದ್ದ ಸಭೆಯಲ್ಲಿ ಅಂತರರಾಷ್ಟ್ರೀಯ ಖಗೋಳವಿಜ್ಞಾನ ಒಕ್ಕೂಟವು ಈ ಮರುನಾಮಕರಣಕ್ಕೆ ಒಪ್ಪಿಗೆ ಸೂಚಿಸಿದೆ. ಒಟ್ಟು 86 ನಕ್ಷತ್ರಗಳ ಮರುನಾಮಕರಣಕ್ಕೆ ಈ ಸಭೆಯಲ್ಲಿ ಅನಮೋದನೆ ನೀಡಲಾಗಿದೆ.
Share