14th JULY.-DAILY CURRENT AFFAIRS BRIEF

 

14th JULY

 

CLICK HERE TO JOIN NIALP FOUNDATION COURSE-2019

 

1.ಬಾಲಕಿಯರ   ಶಿಕ್ಷಣ ನಿರಾಕರಣೆಯಿಂದ ಜಾಗತಿಕ ಆರ್ಥಿಕತೆಗೆ 15-30 ಟ್ರಿಲಿಯನ್ ಡಾಲರ್ ನಷ್ಟ: ವಿಶ್ವ ಬ್ಯಾಂಕ್

 

ವಿದ್ಯಾರ್ಥಿಗಳ ಗಮನಕ್ಕೆ

MIANS PAPER-1Role of women and women’s organization, population and associated issues, poverty and developmental issues, urbanization, their problems and their remedies (ಮಹಿಳೆಯರು ಮತ್ತು ಮಹಿಳಾ ಸಂಘಟನೆಗಳ ಪಾತ್ರ, ಜನಸಂಖ್ಯೆ ಮತ್ತು ಸಂಬಂಧಿತ, ವಿಷಯಗಳು ದಾರಿದ್ರ್ಯ ಹಾಗು ಅಭಿವೃದ್ಧಿ ವಿಷಯಗಳು, ನಗರೀಕರಣ ಸಮಸ್ಯೆಗಳು ಹಾಗು ಅವುಗಳ ಪರಿಹಾರಗಳು)

 

ಪ್ರಿಲಿಮ್ಸ್ ಪರೀಕ್ಷೆಗಾಗಿ– ವಿಶ್ವ ಬ್ಯಾಂಕ್ ಬಗ್ಗೆ

ಮುಖ್ಯ ಪರೀಕ್ಷೆಗಾಗಿ -ಮಹಿಳೆಯರ  ಶಿಕ್ಷಣ ದ , ಪ್ರಾಮುಖ್ಯತೆ ಹಾಗು  ಸವಾಲುಗಳು ಮತ್ತು ಸರ್ಕಾರ ಕೈಗೊಂಡಿರುವ ಪ್ರಯತ್ನಗಳೇನು ?.

 

ಪ್ರಮುಖ ಸುದ್ದಿ

  • ಬಾಲಕಿಯರ ಶಿಕ್ಷಣ ನಿರಾಕರಣೆಯಿಂದ ಜಾಗತಿಕ ಆರ್ಥಿಕತೆಗೆ 15ರಿಂದ 30 ಟ್ರಿಲಿಯನ್ ಡಾಲರ್ ನಷ್ಟು ನಷ್ಟ ಉಂಟಾಗುತ್ತಿದೆ ಎಂದು ವಿಶ್ವಬ್ಯಾಂಕ್ ಹೇಳಿಕೆ ನೀಡಿದೆ.

 

ಮುಖ್ಯ ಅಂಶಗಳು

  • ಕಡಿಮೆ ಆದಾಯವಿರುವ ರಾಷ್ಟ್ರಗಳಲ್ಲಿ ಎರಡು ಮೂರಕ್ಕಿಂತಲೂ ಕಡಿಮೆ ಬಾಲಕಿಯರು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುತ್ತಿದ್ದಾರೆ. ಮೂರು ಬಾಲಕಿಯರ ಪೈಕಿ ಕೇವಲ ಒಬ್ಬರು ಪ್ರೌಢ ಶಿಕ್ಷಣದ ಹಂತವನ್ನು ಪೂರ್ಣಗೊಳಿಸುತ್ತಿದ್ದಾರೆ ಎಂದು ಕಳೆದುಹೋದ ಅವಕಾಶಗಳು: ಬಾಲಕಿಯರ ಶಿಕ್ಷಣಕ್ಕೆ ಮಾಡದಿರುವ ವೆಚ್ಚ ಕುರಿತ ವರದಿಯಲ್ಲಿ ಹೇಳಲಾಗಿದೆ.
  • ಅನೇಕ ವಯಸ್ಸು ಮಹಿಳೆಯರು 12 ವರ್ಷದವರೆಗೂ ಶಿಕ್ಷಣಪೂರ್ಣಗೊಳಿಸದಿರುವುದರಿಂದ ಮಾನವ ಸಂಪನ್ಮೂಲ ನಷ್ಟವಾಗುತ್ತಿದ್ದು, ಇದರಿಂದಾಗಿ ಜಾಗತಿಕವಾಗಿ 15ರಿಂದ 30 ಟ್ರಿಲಿಯನ್ ಡಾಲರ್ ನಷ್ಟು ನಷ್ಟ ಆಗುತ್ತಿದೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ.
  • ಪ್ರೌಢ ಶಿಕ್ಷಣ ಪಡೆದು ಕೆಲಸ ಮಾಡುತ್ತಿರುವ ಹುಡುಗಿಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅವರ ಹೆಚ್ಚಿನ ಶಿಕ್ಷಣ ಇಲ್ಲದಿರುವುದರಿಂದ ಅವರ ಆದಾಯ ಕಡಿಮೆ ಮಟ್ಟದಿಂದ ಕೂಡಿದೆ ಎನ್ನಲಾಗಿದೆ.
  • ವರದಿ ಪ್ರಕಾರ, ಪ್ರಸ್ತುತ ವಿಶ್ವದಾದ್ಯಂತ 6 ರಿಂದ 17 ವರ್ಷದೊಳಗಿನ 132 ಮಿಲಿಯನ್ ಹುಡುಗಿಯರು ಇಂದಿಗೂ ಕೂಡಾ  ಶಾಲೆಗೆ ಹೋಗುತ್ತಿಲ್ಲ. ಈ ಪೈಕಿ ಶೇ, 75 ರಷ್ಟು ಹದಿಹರಯದವರಾಗಿದ್ದಾರೆ.
  • ಜಾಗತಿಕ ಪ್ರಗತಿಗೆ ಅನುಗುಣವಾಗಿ ಲಿಂಗ ಅಸಮಾನತೆಗಳನ್ನು ನಾವು ಪಡೆಯಲು ಅವಕಾಶ ನೀಡುವುದಿಲ್ಲ” ಎಂದು ಹೇಳಿದ ವಿಶ್ವ ಬ್ಯಾಂಕ್ ಸಿಇಒ ಕ್ರಿಸ್ಟಲಿನಾ ಜಾರ್ಜಿವಾ, ಶಿಕ್ಷಣದಲ್ಲಿ ಅಸಮಾನತೆ ಮತ್ತೊಂದು ಸಂಕೀರ್ಣ ಸಮಸ್ಯೆಯಾಗಿದೆ . ಹುಡುಗ ಹಾಗೂ ಹುಡುಗಿಯರಿಗೆ ಸಮಾನ ಶಿಕ್ಷಣ ನೀಡಬೇಕಾಗಿದೆ.
  • ಭಾರತದಲ್ಲಿ, 18 ದೇಶಗಳಲ್ಲಿ ಅತಿದೊಡ್ಡ ಕಡಿಮೆಯೆಂದರೆ -08 ಶೇಕಡಾವಾರು ಪಾಯಿಂಟ್ ಮಾತ್ರ ಅಂದಾಜಿಸಲಾಗಿದೆ. ಏಕೆಂದರೆ ದೇಶವು ಈಗಾಗಲೇ ಅದರ ಜನಸಂಖ್ಯಾ ಪರಿವರ್ತನೆಯ ಮೂಲಕ ಹೋಗಿದೆ” ಭಾರತದಲ್ಲಿ ಪ್ರಸ್ತುತ ಪ್ರತಿವರ್ಷ ಶೇ.1.2 ರಂತೆ ವಾರ್ಷಿಕ ಜನಸಂಖ್ಯೆ ಬೆಳವಣಿಗೆ ದರ ಏರಿಯಾಗುತ್ತಿದೆ .

 

ಸರ್ಕಾರದ ಪ್ರಯತ್ನ ಮತ್ತು ಕೈಗೊಳ್ಳಬೇಕಾದ ಕ್ರಮಗಳು

  • ಸಾರ್ವಜನಿಕ ಶಿಕ್ಷ ಣ ಇಲಾಖೆ ಪ್ರತಿ ವರ್ಷ ದಾಖಲಾತಿ ಆಂದೋಲನ ನಡೆಸುತ್ತದೆ. ಇನ್ನು ಕಡ್ಡಾಯ ಶಿಕ್ಷ ಣ ಕಾಯಿದೆ, ಸಾರ್ವತ್ರಿಕ ಶಿಕ್ಷಣ ಎಲ್ಲವೂ ಬುಡಮೇಲಾಗಿದೆ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವಲ್ಲಿ ವಿಫಲವಾಗಿದೆ ಎನ್ನುವ ಆರೋಪ ಬಲವಾಗಿವೆ. ಇದರಿಂದ ಶಿಕ್ಷಣ ಇಲಾಖೆ ಯಾವ ಜಾಗೃತಿ ಮೂಡಿಸುತ್ತಿದೆ ಎನ್ನುವ ಪ್ರಶ್ನೆ ಉದ್ಭವಿಸಿದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಹೆಣ್ಮಕ್ಕಳಿಗೆ ಶಿಕ್ಷ ಣ ನೀಡಿ ಎನ್ನುವ ಘೋಷಣೆ ಕೇವಲ ಕಾಗದದಲ್ಲೇ ಉಳಿದಿದ್ದು ಅನುಷ್ಠಾನವಾಗುತ್ತಿಲ್ಲ ಎನ್ನುವ ಕೊರಗು ಪ್ರಜ್ಞಾವಂತರಲ್ಲಿ ಹೆಚ್ಚಾಗಿದೆ.

 

  • ಶಾಲೆಯಿಂದ ಹೊರಗುಳಿದ ಮಕ್ಕಳ ಪೈಕಿ ಹೆಣ್ಣುಮಕ್ಕಳೇ ಹಿಂದೆ ಉಳಿದಿರುವುದು ಅಪಖ್ಯಾತಿ ಎನಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರೌಢ ಶಾಲೆ, ಕಾಲೇಜುಗಳ ಕೊರತೆಯಿದ್ದು, ನಗರಕ್ಕೆ ಆಗಮಿಸಲು ಬಸ್‌ಸೌಕರ್ಯವಿಲ್ಲ.
  • ಹಲವು ಮಹಿಳಾ ಪ್ರೌಢ ಶಾಲೆ, ಕಾಲೇಜುಗಳಿಗೆ ಸ್ವಂತ ಕಟ್ಟಡವೇ ಇಲ್ಲ. ಇನ್ನು ಕುಡಿವ ನೀರು, ಶೌಚಾಲಯಕ್ಕೂ ಬರವಿದ್ದು, ಹೆಣ್ಣು ಮಕ್ಕಳ ಭದ್ರತೆ ಬಗ್ಗೆ ಪಾಲಕರಲ್ಲಿ ಆತಂಕವಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಕೆಲವು ಮಹಿಳಾ ಪದವಿ ಕಾಲೇಜಿಗೆ ಹಲವು ವರ್ಷ ಕಳೆದರೂ ಸ್ವಂತ ಕಟ್ಟಡವಿಲ್ಲದಿರುವುದು. ಹೀಗಾಗಿ   ಹೆಣ್ಣುಮಕ್ಕಳ ಶಿಕ್ಷಣ ಪ್ರಮಾಣ ಕುಸಿಯುತ್ತಿದ್ದು,  ಇದಕ್ಕೆ ಸರಕಾರ  ಗಂಭೀರ ಚಿಂತನೆ ನಡೆಸಬೇಕಿದೆ.

 

 

  

2.ವಿಪೋ ಕೃತಿಸ್ಯಾಮ್ಯ ಒಪ್ಪಂದ ಮತ್ತು ವಿಪೋ ಬೌದ್ಧಿಕ  ಹಾಗೂ ಧ್ವನಿಲೇಖ ಒಪ್ಪಂದದ ಬಳಕೆಗೆ ಕೇಂದ್ರ ಸಂಪುಟದ ಸಮ್ಮತಿ 

ವಿದ್ಯಾರ್ಥಿಗಳ ಗಮನಕ್ಕೆ

 

MAINS PAPER-2 -Important International institutions, agencies and fora- their structure, mandate.

(ಪ್ರಮುಖ ಜಾಗತಿಕ ಸಂಘಟನೆಗಳು ,ಸಂಸ್ತ್ಥೆಗಳು ,ವೇದಿಕೆಗಳು -ಇವುಗಳ ರಚನೆ ಹಾಗು ಅಧಿಕಾರ ಇತಿ -ಮಿತಿಗಳು)

 

ಪ್ರಿಲಿಮ್ಸ್ ಪರೀಕ್ಷೆಗಾಗಿ -ವಿಪೋ ಕೃತಿಸ್ಯಾಮ್ಯ,ಬೌದ್ಧಿಕ ,ಧ್ವನಿಲೇಖ ಒಪ್ಪಂದದ ಬಗ್ಗೆ

ಮುಖ್ಯ ಪರೀಕ್ಷೆಗಾಗಿ –   ರಾಷ್ಟ್ರೀಯ ಐಪಿಆರ್ ನೀತಿಯನ್ನು ಬಲಪಡಿಸಲು ಈ ಒಪ್ಪಂದಗಳ  ಪ್ರಾಮುಖ್ಯತೆಗಳೇನು  ?

 

ಪ್ರಮುಖ ಸುದ್ದಿ

 

  • ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಗಳು ವಿಪೋ ಕೃತಿಸ್ವಾಮ್ಯ ಒಪ್ಪಂದ ಮತ್ತು ವಿಪೋ ಬೌದ್ಧಿಕ/ಸೃಜನಶೀಲ ಹಾಗೂ ಧ್ವನಿಲೇಖ ಒಪ್ಪಂದವನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಕೋರಿ ಸಲ್ಲಿಸಿದ್ದ ಮನವಿಗೆ ಮಾನ್ಯ ಪ್ರಧಾನಮಂತ್ರಿಗಳಾದ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಸಮ್ಮತಿಸಿದೆ.

 

ಮುಖ್ಯ ಅಂಶಗಳು

  • ಇದರಿಂದಾಗಿ ಅಂತರ್ಜಾಲ ಮತ್ತು ಡಿಜಿಟಲ್ ರೂಪದಲ್ಲಿ ಬರೆಯುವ ಬರಹಗಳಿಗೂ ಕೃತಿಸ್ವಾಮ್ಯದ ಹಕ್ಕುಗಳು ವಿಸ್ತರಣೆಯಾಗಲಿವೆ. ಜತೆಗೆ, 2016ರ ಮೇ 12ರಂದು ಅಳವಡಿಸಿಕೊಳ್ಳಲಾದ ರಾಷ್ಟ್ರೀಯ ಬೌದ್ಧಿಕ ಹಕ್ಕುಗಳ ನೀತಿಯಲ್ಲಿ ಅಳವಡಿಸಿಕೊಂಡಿರುವ ಆಶಯದೆಡೆಗೆ ಇದು ಇನ್ನೊಂದು ಹೆಜ್ಜೆಯಾಗಿದೆ.
  • ಅಂದಂತೆ, ಬೌದ್ಧಿಕವಾದ ಕೆಲಸಗಳಿಗೆ ವಾಣಿಜ್ಯೀಕರಣದ ಮೂಲಕ ಮೌಲ್ಯವನ್ನು ತಂದುಕೊಡಬೇಕೆಂಬುದು ಈ ನೀತಿಯ ಉದ್ದೇಶವಾಗಿದೆ. ಇದಕ್ಕಾಗಿ, ಸಂಬಂಧಿಸಿದವರಿಗೆ ಅಂತರ್ಜಾಲ ಮತ್ತು ಮೊಬೈಲ್ ಫೋನುಗಳ ಮೂಲಕ ಇ-ಕಾಮರ್ಸ್ ಕ್ಷೇತ್ರದಲ್ಲಿ ಇರುವ ಅವಕಾಶಗಳ ಬಗ್ಗೆ ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲ ನೀಡಲು ಉದ್ದೇಶಿಸಲಾಗಿದೆ.

 

ಇದರಿಂದ ಆಗುವ ಉಪಯೋಗಗಳು:

 

  • ಸೃಜನಶೀಲ/ಬೌದ್ಧಿಕ ಸಾಧನೆ ಮಾಡಿದವರು ಅಂತಾರಾಷ್ಟ್ರೀಯ ಕೃತಿಸ್ವಾಮ್ಯ ವ್ಯವಸ್ಥೆಯ ಮೂಲಕ ತಮ್ಮ ಪರಿಶ್ರಮಕ್ಕೆ ತಕ್ಕ ಫಲವನ್ನು ಪಡೆಯುವುದು ಇದರಿಂದ ಸಾಧ್ಯವಾಗಲಿದೆ. ಅಂದರೆ, ತಮ್ಮ ಸೃಜನಶೀಲ/ಬೌದ್ಧಿಕ ಸಾಧನೆಯ ಕನಸನ್ನು ನನಸಾಗಿಸಿಕೊಳ್ಳಲು ಮತ್ತು ಅದನ್ನು ವಿತರಿಸಲು ಮಾಡಿದ ವೆಚ್ಚವನ್ನು ಪುನಃ ಪಡೆಯಲು ಇದರಿಂದ ಅವಕಾಶ ಸಿಗಲಿದೆ.

 

  • ಭಾರತವು ಇತರ ದೇಶಗಳ ಸೃಜನಶೀಲ/ಬೌದ್ಧಿಕ ಸಾಧಕರಿಗೆ ಕೃತಿಸ್ವಾಮ್ಯ ರಕ್ಷಣೆಯ ದೃಷ್ಟಿಯಿಂದ ಈಗಾಗಲೇ ಸಾಕಷ್ಟು ರಕ್ಷಣೆಯನ್ನು ನೀಡಿ, ಅವರ ಹಿತಾಸಕ್ತಿಗಳನ್ನು ಕಾಯುತ್ತಿದೆ. ಇದೇ ರೀತಿಯಲ್ಲಿ ಭಾರತದ ಸೃಜನಶೀಲ/ಬೌದ್ಧಿಕ ಪರಿಶ್ರಮಿಗಳಿಗೂ ವಿದೇಶಗಳಲ್ಲಿ ಸಮಾನ ಅವಕಾಶಗಳನ್ನು ಒದಗಿಸುವ ಮೂಲಕ, ನಮ್ಮವರ ಹಿತಾಸಕ್ತಿಗಳನ್ನೂ ಪೊರೆಯಲಾಗುವುದು.

 

  • ಬೌದ್ಧಿಕ ಸಾಹಸಗಳು ಅಥವಾ ಸೃಜನಶೀಲ ಸಾಧನೆಗಳು ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳಲು ಬೇಕಾದ ಆತ್ಮವಿಶ್ವಾಸ ಮತ್ತು ಡಿಜಿಟಲ್ ಯುಗಕ್ಕೆ ತಕ್ಕಂತೆ ಬೇಕಾದ ವಿತರಣಾ ಕೌಶಲ್ಯಗಳನ್ನು ಪೂರೈಸಲಾಗುವುದು.

 

  • ಅತ್ಯಂತ ಸದೃಢವಾದ ಆರ್ಥಿಕತೆ ಮತ್ತು ಸಾಂಸ್ಕೃತಿಕ ವ್ಯವಸ್ಥೆಯನ್ನು ರೂಪಿಸಲು ಅಗತ್ಯವಾದ ಕೊಡುಗೆಯನ್ನು ನೀಡಲು ಮತ್ತು ವಾಣಿಜ್ಯ ವಹಿವಾಟನ್ನು ನಡೆಸಲು ಉತ್ತೇಜನ ನೀಡುವುದು.

 

BACK TO BASICS

 

ವಿಪೋ ಕೃತಿಸ್ಯಾಮ್ಯ,ಬೌದ್ಧಿಕ ,ಧ್ವನಿಲೇಖ ಒಪ್ಪಂದದ   ಬಗ್ಗೆ:

 

  • 1957ರ ಕೃತಿಸ್ವಾಮ್ಯ ಕಾಯ್ದೆಯನ್ನು 2016ರ ಮಾರ್ಚ್ ತಿಂಗಳಲ್ಲಿ ಡಿಐಪಿಪಿಗೆ ವರ್ಗಾಯಿಸಲಾಯಿತು. ಇದಾದ ನಂತರ, ಈ ಕಾಯ್ದೆಯು ಡಬ್ಲ್ಯುಸಿಪಿ ಮತ್ತು ಡಬ್ಲ್ಯುಪಿಪಿಟಿಗಳಿಗೆ ಹೇಗೆ ಹೊಂದಿಕೊಳ್ಳುತ್ತದೆ ಎನ್ನುವುದನ್ನು ಕಂಡುಕೊಳ್ಳಲು ಒಂದು ಅಧ್ಯಯನವನ್ನು ಕೈಗೆತ್ತಿಕೊಳ್ಳಲಾಯಿತು. ಜತೆಗೆ, ಡಬ್ಲ್ಯುಐಪಿಒ ಜತೆಗೂಡಿ ಕೂಡ ಇನ್ನೊಂದು ಜಂಟಿ ಅಧ್ಯಯನವನ್ನು ಆರಂಭಿಸಲಾಯಿತು.

 

  • 1957ರ ಕೃತಿಸ್ವಾಮ್ಯ ಕಾಯ್ದೆಗೆ 2012ರಲ್ಲಿ ತಿದ್ದುಪಡಿ ತರಲಾಯಿತು. ಡಬ್ಲ್ಯುಸಿಟಿ ಮತ್ತು ಡಬ್ಲ್ಯುಪಿಪಿಟಿಗಳಿಗೆ ಹೊಂದಿಕೊಳ್ಳುವಂತೆ ಈ ಕಾಯ್ದೆ ಇರಬೇಕೆಂಬುದು ತಿದ್ದುಪಡಿಯ ಹಿಂದಿನ ಆಶಯವಾಗಿತ್ತು. ಇದರ ಜತೆಗೆ `ಸಾರ್ವಜನಿಕ ಸ್ವರೂಪದ ಸಂವಹನ/ಸಂಪರ್ಕ’ ಎನ್ನುವ ಪರಿಕಲ್ಪನೆಯನ್ನು ಕಾಲಕ್ಕೆ ತಕ್ಕಂತೆ ವ್ಯಾಖ್ಯಾನಿಸುವ ಉದ್ದೇಶವೂ ಇದರಲ್ಲಿತ್ತು. ಅಂದರೆ, ಈಗಿನ ಡಿಜಿಟಲ್ ಯುಗಕ್ಕೆ ಸರಿಹೊಂದುವಂತೆ ಇದರಲ್ಲಿ 2(ಎಫ್ಎಫ್) ಪರಿಚ್ಛೇದವನ್ನು ಇದರಲ್ಲಿ ಸೇರಿಸಲಾಯಿತು. ಅಲ್ಲದೆ, ತಂತ್ರಜ್ಞಾನ ಸಂರಕ್ಷಣಾ ಕ್ರಮಗಳು (ಪರಿಚ್ಛೇದ 65ಎ), ಹಕ್ಕುಗಳ ನಿರ್ವಹಣಾ ಮಾಹಿತಿ (ಪರಿಚ್ಛೇದ 65ಬಿ), ಬೌದ್ಧಿಕ/ಸೃಜನಶೀಲ ಸಾಧಕರ ನೈತಿಕ ಹಕ್ಕುಗಳು (ಪರಿಚ್ಛೇದ 38ಬಿ); ಸೃಜನಶೀಲ ಪರಿಶ್ರಮಿಗಳು ವಿಶೇಷ ಹಕ್ಕುಗಳು (ಪರಿಚ್ಛೇದ 38ಎ); ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸುರಕ್ಷತೆ (ಪರಿಚ್ಛೇದ 52 (1) (ಬಿ) ಮತ್ತು (ಸಿ)) ಇವುಗಳಿಗೂ ಅವಕಾಶ ಕಲ್ಪಿಸಿ ಕೊಡಲಾಯಿತು.

 

  • ವಿಪೋ ಕೃತಿಸ್ವಾಮ್ಯ ಒಡಂಬಡಿಕೆಯು 2002ರ ಮಾರ್ಚ್ 6ರಂದು ಜಾರಿಗೆ ಬಂದಿತು. ಇದಕ್ಕೆ ಇಲ್ಲಿಯವರೆಗೂ 96 ದೇಶಗಳು ಸಹಿ ಹಾಕಿವೆ. ಜತೆಗೆ ಸಾಹಿತ್ಯಕ ಮತ್ತು ಕಲಾತ್ಮಕ ಕೃತಿಗಳ ಸಂರಕ್ಷಣೆಗೆ ಬರ್ನ್ ಸಮಾವೇಶದಲ್ಲಿ ವಿಶೇಷ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಒಪ್ಪಂದವು ಡಿಜಿಟಲ್ ಸ್ವರೂಪದಲ್ಲಿರುವ ಬೌದ್ಧಿಕ ಪರಿಶ್ರಮದ/ಸೃಜನಶೀಲ ಕೃತಿಗಳಿಗೆ ಕೂಡ ಕೃತಿಸ್ವಾಮ್ಯವನ್ನು ವಿಸ್ತರಿಸಲಿದೆ. ಇದಲ್ಲದೆ, ಅಂತರ್ಜಾಲದ ವೇದಿಕೆಗಳಲ್ಲಿರುವ ಇಂತಹ ಕೃತಿಗಳಿಗೂ ಇದು ಕೃತಿಸ್ವಾಮ್ಯವನ್ನು ನೀಡುತ್ತದೆ.

 

 

  • ವಿಪೋ ಬೌದ್ಧಿಕ ಪರಿಶ್ರಮ ಮತ್ತು ಧ್ವನಿಲೇಖ ಒಡಂಬಡಿಕೆಯು 2002ರ ಮೇ 20ರಂದು ಜಾರಿಗೆ ಬಂದಿತು. ಈ ಒಪ್ಪಂದಕ್ಕೆ ಇದುವರೆಗೆ 96 ದೇಶಗಳು ಸಹಿ ಹಾಕಿವೆ. ಈ ಒಪ್ಪಂದವು ಡಿಜಿಟಲ್ ಪರಿಸರದಲ್ಲಿ ಮುಖ್ಯವಾಗಿ ಎರಡು ಬಗೆಯ ಸೃಜನಶೀಲ ಸಾಧಕರ ಹಕ್ಕುಗಳನ್ನು ಸಂರಕ್ಷಿಸುವ ಕಡೆಗೆ ಒತ್ತು ನೀಡಿದೆ. ಇವರೆಂದರೆ- (1) ನಟರು, ಗಾಯಕರು, ಸಂಗೀತಗಾರರು ಇತ್ಯಾದಿ. (2) ಶ್ರವ್ಯರೂಪದಲ್ಲಿ ತಮ್ಮ ಬೌದ್ಧಿಕ ಸಾಧನೆಗಳನ್ನು ಮಾಡುವವರು (ಉದಾ: ಸೌಂಡ್ ರೆಕಾರ್ಡಿಂಗ್) ಈ ಒಡಂಬಡಿಕೆಯು ಡಿಜಿಟಲ್ ಸ್ವರೂಪದ ವ್ಯವಹಾರ ಮತ್ತು ವಿತರಣೆಗಳಿಗೆ ಸಂಬಂಧಿಸಿದಂತೆ ಮೂಲಲೇಖಕರಿಗೆ ಹಕ್ಕುಗಳನ್ನು ಒದಗಿಸುತ್ತದೆ. ಅಲ್ಲದೆ, ಬೌದ್ಧಿಕ ಪರಿಶ್ರಮಿಗಳಿಗೆ ತಮ್ಮ ಕೃತಿಗಳ ಮೇಲಿರುವ ನೈತಿಕ ಹಕ್ಕುಗಳನ್ನು ಮಾನ್ಯ ಮಾಡುವ ಈ ಒಪ್ಪಂದವು, ಅವರಿಗೆ ವಿಶೇಷವಾದ ಆರ್ಥಿಕ ಹಕ್ಕುಗಳನ್ನೂ ನೀಡುತ್ತದೆ.

 

  • ಈ ಎರಡೂ ಒಡಂಬಡಿಕೆಗಳು ಬೌದ್ಧಿಕ/ಸೃಜನಶೀಲ ಪರಿಶ್ರಮಿಗಳಿಗೆ ಮತ್ತು ಅವುಗಳ ನಿಜವಾದ ಹಕ್ಕುದಾರರಿಗೆ ತಮ್ಮ ಕೃತಿಗಳನ್ನು ಸಂರಕ್ಷಿಸಿಕೊಳ್ಳಲು ಅಗತ್ಯವಾದ ನೆರವನ್ನು ನೀಡುತ್ತದೆ. ಅಂದರೆ, ಈ ಒಡಂಬಡಿಕೆಯು ತಾಂತ್ರಿಕ ರಕ್ಷಣಾ ಕ್ರಮಗಳ ರಕ್ಷಣೆ ಮತ್ತು ಹಕ್ಕುಗಳ ನಿರ್ವಹಣಾ ಮಾಹಿತಿಯನ್ನು ಇದು ಒದಗಿಸಲಿದೆ.

 

3.ಬ್ರೆಕ್ಸಿಟ್ ಶ್ವೇತಪತ್ರ

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಪರೀಕ್ಷೆಗಾಗಿ – ಬ್ರೆಕ್ಸಿಟ್ ಬಗ್ಗೆ .

ಮುಖ್ಯ ಪರೀಕ್ಷೆಗಾಗಿ – ಬ್ರೆಕ್ಸಿಟ್ ಶ್ವೇತಪತ್ರ ದಿಂದ ಭಾರತದ ಮೇಲೆ ಬೀರುವ ಪರಿಣಾಮಗಳೇನು?

 

ಪ್ರಮುಖ ಸುದ್ದಿ

 

  • ಐರೋಪ್ಯ ಒಕ್ಕೂಟದಿಂದ ಹೊರಬರುವ ಪ್ರಕ್ರಿಯೆ (ಬ್ರೆಕ್ಸಿಟ್) ಭಾಗವಾಗಿ ಬ್ರಿಟನ್ ಅಧಿಕೃತವಾಗಿ ಶ್ವೇತಪತ್ರ ಹೊರಡಿಸಿದೆ. ಶಿಕ್ಷಣ, ಉದ್ಯೋಗ, ಆರ್ಥಿಕ, ಸಹಕಾರ ಹಾಗೂ ವಾಣಿಜ್ಯ ವಿಚಾರಗಳಿಗೆ ಸಂಬಂಧಿಸಿ ಬ್ರಿಟನ್ ಸರ್ಕಾರ ತನ್ನ ಪ್ರಸ್ತಾಪವನ್ನು ಒಕ್ಕೂಟದ ಮುಂದಿಟ್ಟಿದೆ.

ಮುಖ್ಯ ಅಂಶಗಳು 

 

  • ಒಕ್ಕೂಟದೊಂದಿಗಿನ ಸರಣಿ ಮಾತುಕತೆ ಬಳಿಕ ಹೊಸ ಪ್ರಸ್ತಾವನೆ ಮುಂದಿಡಲಾಗಿದೆ. ಒಕ್ಕೂಟ ಇದನ್ನು ಒಪ್ಪಿಕೊಳ್ಳದಿದ್ದರೆ ದಂಡದ ರೂಪದಲ್ಲಿ ಬ್ರಿಟನ್ ನೀಡಲು ನಿರ್ಧರಿಸಿದ್ದ 39 ಬಿಲಿಯನ್ ಪೌಂಡ್ ಹಣವನ್ನು ಕಳೆದು ಕೊಳ್ಳಬೇಕಾಗುತ್ತದೆ ಎಂದು ಬ್ರಿಟನ್ ಸರ್ಕಾರ ಎಚ್ಚರಿಸಿದೆ.
  • ಆದರೆ ಇದಕ್ಕೆ ಐರೋಪ್ಯ ಒಕ್ಕೂಟ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ. ತನಗೆ ಲಾಭವಾಗುವ ಅಂಶಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಉಳಿದ ವಿಚಾರಗಳಲ್ಲಿ ಜಾಣಮೌನ ವಹಿಸುವುದು ಸೂಕ್ತವಲ್ಲ ಎಂದು ತಿರುಗೇಟು ನೀಡಿದೆ.

 

  • 2020ರವರೆಗೆ ಯುರೋಪಿಯನ್ ಒಕ್ಕೂಟ ಸದಸ್ಯ ರಾಷ್ಟ್ರಗಳ ಜನರಿಗೆ ನೇರ ಪ್ರವೇಶ
  • ಆ ಬಳಿಕ ವಿದ್ಯಾರ್ಥಿಗಳು, ಪ್ರವಾಸಿಗರಿಗೆ ಮಾತ್ರ ಅವಕಾಶ ತಜ್ಞ ಉದ್ಯೋಗಿಗಳಿಗೆ ವೀಸಾ ನಿಯಮದಲ್ಲಿ ಸಡಿಲಿಕೆ, ವಾರ್ಷಿಕ 1 ಲಕ್ಷ ಜನರಿಗೆ ಅವಕಾಶ
  • ಐರೋಪ್ಯ ಒಕ್ಕೂಟದ ಉತ್ಪನ್ನಗಳಿಗೆ ಪ್ರತ್ಯೇಕ ಬೆಲೆ ನಿಗದಿ ,
  • ಬೇರೆ ದೇಶಗಳೊಂದಿಗಿನ ವಾಣಿಜ್ಯ ಒಪ್ಪಂದಗಳ ಬಗ್ಗೆ ಮರು ಪರಿಶೀಲನೆ, ಅಗತ್ಯವಿದ್ದಲ್ಲಿ ಹೊಸ ಒಪ್ಪಂದ ಇಂಧನ, ಅಣು ಶಕ್ತಿ ಕುರಿತು ಮರು ಪರಿಶೀಲನೆ.

 

ಭಾರತದ ಮೇಲೆ  ಬೀರುವ ಪರಿಣಾಮಗಳು  ಪರಿಣಾಮಗಳು

 

  • ಹೂಡಿಕೆ : ಬ್ರಿಟನ್ ಗೆ ಸಂಬಂಧಿಸಿಂತೆ ಭಾರತವು ಎರಡನೇ ಅತಿ ದೊಡ್ಡ ವಿದೇಶಿ ನೇರ ಹೂಡಿಕೆ ಮೂಲವಾಗಿದೆ. ಐರೋಪ್ಯ ಒಕ್ಕೂಟದ ರಾಷ್ಟ್ರಗಳ ಮಾರುಕಟ್ಟೆಗೆ ಭಾರತದ ಕಂಪನಿಗಳು ಬ್ರಿಟನ್ ಅನ್ನು ಪ್ರವೇಶ ದ್ವಾರವಾಗಿ ಬಳಸಿಕೊಳ್ಳುತ್ತವೆ. ಭಾರತದ ವಿದೇಶಿ ಹೂಡಿಕೆಯಲ್ಲಿ ಶೇ. 13 ರಷ್ಟು ಯುರೋಪ್ ನಲ್ಲಿಯೂ ಶೇ. 7 ರಷ್ಟು ಹೂಡಿಕೆ ಬ್ರಿಟನ್ ನಲ್ಲಿಯೂ ಇದೆ. ಹೀಗಿರುವಾಗ ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರ ಹೋಗಿರುವುದು ಕರೆನ್ಸಿ ಮೌಲ್ಯ ಕುಸಿಯಲು ಕಾರಣವಾಗುತ್ತದೆ.
  • ಯುರೋ ಮತ್ತು ಪೌಂಡ್ ಮೌಲ್ಯ ಕುಸಿತ ಭಾರತೀಯ ಕರೆನ್ಸಿ ರುಪಾಯಿ ಮೌಲ್ಯದ ಕುಸಿತಕ್ಕೂ ಕಾರಣವಾಗುತ್ತದೆ.
  • ಬ್ರಿಟನ್ ಹೊರ ಹೋಗಿರುವುದು ಯುಎಸ್ ಡಾಲರ್ ಮೌಲ್ಯ ವರ್ಧಿಸಲು ಕಾರಣವಾಗುವಾಗ ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಇದು ರುಪಾಯಿಗೆ ಹೊಡೆತ ನೀಡಲಿದೆ.
  • ಬ್ರಿಟನ್‍ನಲ್ಲಿರುವ ಭಾರತೀಯ ಮಾರುಕಟ್ಟೆಗಳ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಲಿದೆ.
  • ಟಾಟಾ ಮೋಟಾರ್ಸ್ ಸೇರಿದಂತೆ 800ಕ್ಕೂ ಹೆಚ್ಚು ಕಂಪನಿಗಳ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಲಿದೆ. ಬ್ರೆಕ್ಸಿಟ್ ಜನಮತಗಣನೆ ಹತ್ತಿರ ಬರುತ್ತಿದ್ದಂತೆಯೇ ಟಾಟಾ ಮೋಟಾರ್ಸ್ ಷೇರು ಮೌಲ್ಯ ಕುಸಿದಿತ್ತು.
  • ಬ್ರಿಟನ್ ನಿಂದ ಭಾರತ ಮತ್ತು ಭಾರತದಿಂದ ಬ್ರಿಟನ್ ನಡುವೆ ಇರುವ ನೇರ ಹೂಡಿಕೆಯ ಮೇಲೆ ಇದು ಪರಿಣಾಮ ಬೀರಬಹುದು.
  • ಚಿನ್ನದ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ.
  • ಕಚ್ಚಾ ತೈಲ ಮಾರುಕಟ್ಟೆಯಲ್ಲಿಯೂ ಸಂಚಲನವುಂಟಾಗಬಹುದು.

 

4.ಐಪಿಸಿ ಸೆಕ್ಷನ್ 497

ವಿದ್ಯಾರ್ಥಿಗಳ ಗಮನಕ್ಕೆ

MAINS PAPER-1 Role of women and women’s organization, population and associated issues, poverty and developmental issues, urbanization, their problems and their remedies (ಮಹಿಳೆಯರು ಮತ್ತು ಮಹಿಳಾ ಸಂಘಟನೆಗಳ ಪಾತ್ರ, ಜನಸಂಖ್ಯೆ ಮತ್ತು ಸಂಬಂಧಿತ, ವಿಷಯಗಳು ದಾರಿದ್ರ್ಯ ಹಾಗು ಅಭಿವೃದ್ಧಿ ವಿಷಯಗಳು, ನಗರೀಕರಣ ಸಮಸ್ಯೆಗಳು ಹಾಗು ಅವುಗಳ ಪರಿಹಾರಗಳು)

ಪ್ರಿಲಿಮ್ಸ್ ಪರೀಕ್ಷೆಗಾಗಿ -ಜಸ್ಟೀಸ್ ಮಲಿಮತ್ ಸಮಿತಿ ಬಗ್ಗೆ , ಸೆಕ್ಷನ್ 497

ಮುಖ್ಯ ಪರೀಕ್ಷೆಗಾಗಿ -ವ್ಯಭಿಚಾರ ಎಂದರೇನು? ವ್ಯಭಿಚಾರ ಒಂದು ಅಪರಾಧವೇ? ವ್ಯಭಿಚಾರದ ವಿರುದ್ಧದ  ಕಾನೂನಿನ  ನಿಯತಾಂಕಗಳು ಯಾವುವು ? ವ್ಯಭಿಚಾರ ಕಾನೂನಿನ ವಿರುದ್ಧ ಭಾರತೀಯ ನ್ಯಾಯವ್ಯಾಪ್ತಿ ಗಳಾವುವು ?

ಪ್ರಮುಖ ಸುದ್ದಿ

 

  • ವ್ಯಭಿಚಾರವು ಅಪರಾಧವಾಗಿಯೇ ಇರಬೇಕು. ವ್ಯಭಿಚಾರ ಕಾನೂನನ್ನು ದುರ್ಬಲ ಗೊಳಿಸುವುದರಿಂದ ವಿವಾಹದ ಪಾವಿತ್ರ್ಯತೆಯ ಮೇಲೆ ಪರಿಣಾಮ ಬೀರುತ್ತದೆ. ಪುರುಷನ ಅನೈತಿಕ ಸಂಬಂಧಕ್ಕೆ ಕಾನೂನು ಮಾನ್ಯತೆ ನೀಡುವುದರಿಂದ ವೈವಾಹಿಕ ಬಂಧಕ್ಕೆ ಧಕ್ಕೆಯಾಗಲಿದೆ. ಇದು ಸುಪ್ರೀಂಕೋರ್ಟ್‌ನಲ್ಲಿ ಕೇಂದ್ರ ಸಲ್ಲಿಸಿರುವ ಅಫಿಡವಿಟ್‌ನ ಸಾರಾಂಶ. ಈ ಮೂಲಕ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 497ರ ಅಡಿಯಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಮಾನ ಹೊಣೆ ಹೊರಿಸಬೇಕೆಂದು ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಕೇಂದ್ರ ವಿರೋಧ ವ್ಯಕ್ತಪಡಿಸಿದೆ.

 

ಮುಖ್ಯ ಅಂಶಗಳು

  • ಕೇರಳದ ಜೋಸೆಫ್ ಶೈನ್‌ ಸಲ್ಲಿಸಿದ್ದ ಈ ಪಿಐಎಲ್‌ ಹಿನ್ನೆಲೆಯಲ್ಲಿ ವ್ಯಭಿಚಾರ ಕುರಿತ ಕಾನೂನನ್ನು ಹೊಂದಿರುವ ಐಪಿಸಿ ಸೆಕ್ಷನ್‌ 497ರ ಸಾಂವಿಧಾನಿಕತೆ ಮರುವಿಮರ್ಶೆ ಗೊಳಿ ಸಲು ಸುಪ್ರೀಂ ಕೋರ್ಟ್‌ ಸಂವಿಧಾನ ಪೀಠ ರಚಿಸಿತ್ತು. ವ್ಯಭಿಚಾರ ಸಂಬಂಧ ಮಹಿಳೆಗೆ ಶಿಕ್ಷೆಯಿಂದ ವಿನಾಯ್ತಿ ನೀಡುವುದನ್ನು ಬದಲಾಯಿಸಬೇಕೇ ಎಂಬುದನ್ನೂ ಸಿಜೆಐ ನೇತೃತ್ವ ಪೀಠ ನಿರ್ಣಯಿಸಲಿದೆ.

ಅರ್ಜಿದಾರರ ವಾದವೇನು?:

  • ಪುರುಷರ ವಿರುದ್ಧ ತಾರತಮ್ಯ ತೋರುವ ಐಪಿಸಿ ಸೆಕ್ಷನ್‌ 497 ಅಸಾಂವಿಧಾನಿಕವಾಗಿದ್ದು, ಇದು ಕಲಮು 14, 15, 21 ಅನ್ನು ಉಲ್ಲಂ ಸುತ್ತದೆ. ಇಬ್ಬರು ಸಮ್ಮತಿಯ ಸಮಾಗಮ ನಡೆಸಿದಾಗ ಒಬ್ಬರನ್ನು ಹೊಣೆಗಾರಿಕೆಯಿಂದ ಹೊರಗಿಡುವುದು ಸರಿಯಲ್ಲ ಎಂಬುದು ಜೋಸೆಫ್ ವಾದ.

ಕಾನೂನು  ಹೇಳೋದೇನು ?

  • ವ್ಯಕ್ತಿಯೊಬ್ಬನು ಇನ್ನೊಬ್ಬ ಪುರುಷನ ಪತ್ನಿಯೆಂದು ತಿಳಿದಿದ್ದರೂ, ಆ ಪುರುಷನ ಸಮ್ಮತಿಯಿಲ್ಲದೆ ಆ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅತ್ಯಾಚಾರದ ಅಪರಾಧವಲ್ಲ. ಅದು ವ್ಯಭಿಚಾರದ ಅಪರಾಧ. ಅಂತಹ ಕೃತ್ಯ ಎಸಗಿದ ಪುರುಷನಿಗೆ 5 ವರ್ಷಗಳ ತನಕ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಆದರೆ ಮಹಿಳೆಗೆ ಇದು ಅನ್ವಯಿಸುವುದಿಲ್ಲ ಎಂದು ಐಪಿಸಿ ಸೆಕ್ಷನ್‌ 497 ಹೇಳುತ್ತದೆ.

 

 

BACK TO BASICS

 

  • ವ್ಯಭಿಚಾರ ಎಂದರೆ ವಿವಾಹಿತ ವ್ಯಕ್ತಿ ಮತ್ತು ಅವನ / ಅವಳ ಕಾನೂನುಬದ್ಧ ಸಂಗಾತಿಯಲ್ಲದ ಒಬ್ಬ ವ್ಯಕ್ತಿಯ ನಡುವೆ ಸ್ವಯಂಪ್ರೇರಿತ ಒಮ್ಮತದ ಸಂಬಂಧ ಎಂದರ್ಥ .

 

  • ಸೆಕ್ಷನ್ 497: ಒಬ್ಬ ವ್ಯಕ್ತಿಗೆ ಆಗಲೆ ಪತಿ/ಪತ್ನಿಯಿದ್ದಾಗ್ಯೂ ಮತ್ತೊಬ್ಬರೊಂದಿಗೆ ಸ್ನೇಹದ ಹೆಸರಲ್ಲಿ ಸಂಬಂಧ ಬೆಳೆಸಿ ಲೈಂಗಿಕ ಸಾಹಚರ್ಯದ ಮಟ್ಟದವರಗೆ ಹೋದಾಗ ಅದು ಐಪಿಸಿ ಕಾನೂನಿನ ಸೆಕ್ಷನ್ 494ರ ಪ್ರಕಾರ ಎರಡನೆಯ ಮದುವೆಯೆಂದು ಪರಿಗಣಿಸಿ ಅನೂರ್ಜಿತವಾಗುತ್ತದೆ ಅಥವಾ ಸೆಕ್ಷನ್ 497ರ ಪ್ರಕಾರ ಅದು ವ್ಯಭಿಚಾರ ಎನ್ನುವ ಅಪರಾಧವಾಗಿ ಗಂಡಸಿಗೆ ಮಾತ್ರ ಶಿಕ್ಷೆಯಾಗುತ್ತದೆ.
  • ಈಗಿರುವ ಕಾನೂನಿನ ಪ್ರಕಾರವ್ಯಭಿಚಾರ ಅಪರಾಧಕ್ಕೆ ಮಹಿಳೆಗೆ ಶಿಕ್ಷೆಯಿಂದ ವಿನಾಯಿತಿ ಇದೆ. ಆದರೆ ಜೊತೆವಾಸದ ಪ್ರಕರಣದಲ್ಲಿ ಯಾವುದೇ ಸಂಗಾತಿ ಮತ್ತೊಬ್ಬ ಸಂಗಾತಿಯ ಮೇಲೆ ವ್ಯಭಿಚಾರ ಆರೋಪ ಹೊರಿಸಲು ಆಸ್ಪದವಿಲ್ಲ. ಕಾರಣ ದಾಂಪತ್ಯ ಜೀವನದಲ್ಲಿ ಲೈಂಗಿಕನಿಷ್ಠೆಯ ಉಲ್ಲಂಘನೆಗೆ ಮಾತ್ರ ಶಿಕ್ಷೆಯಿದೆ
  • ತಪ್ಪಿತಸ್ಥನಿಗೆ ಐದು ವರ್ಷಗಳವರೆಗೆ ಮತ್ತು ದಂಡದ ಜೊತೆಗೆ ಜೈಲು ಶಿಕ್ಷೆಗೆ ಒಳಪಡಿಸುತ್ತದೆ .

 

 

5.ದೇಶದ ಎಲ್ಲ ದಂಡು ಪ್ರದೇಶಗಳ ರದ್ದತಿಗೆ ಸೇನೆ ಚಿಂತನೆ

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಪರೀಕ್ಷೆಗಾಗಿ – ಕಂಟೋನ್ಮೆಂಟ್‌ (ದಂಡು ಪ್ರದೇಶ) ಪ್ರದೇಶ ವೆಂದರೇನು ?

ಮುಖ್ಯ ಪರೀಕ್ಷೆಗಾಗಿ – ದಂಡು ಪ್ರದೇಶಗಳ ರದ್ದತಿಗೆ ಕಾರಣಗಳೇನು ? ಮತ್ತು ಅದರಿಂದ  ಬೀರುವ ಪರಿಣಾಮಗಳು.

 

ಪ್ರಮುಖ ಸುದ್ದಿ 

  • ಭದ್ರತಾಪಡೆಗಳ ವೆಚ್ಚ ಉಳಿತಾಯದ ಕ್ರಮವಾಗಿ ದೇಶದ ಹಲವೆಡೆ ಸ್ಥಾಪಿಸಲಾಗಿರುವ ಸೇನಾ ಶಿಬಿರಗಳನ್ನು (ಕಂಟೋನ್ಮೆಂಟ್‌) ರದ್ದುಪಡಿಸುವ ಬಗ್ಗೆ ಭಾರತೀಯ ಸೇನೆ ಚಿಂತನೆ ನಡೆಸಿದೆ .

ಮುಖ್ಯ ಅಂಶಗಳು

  • 250 ವರ್ಷಗಳ ಹಿಂದೆ ಬ್ರಿಟಿಷರು ಮೊದಲ ಶಿಬಿರವನ್ನು ಬಾರಕ್‌ಪುರದಲ್ಲಿ ಸ್ಥಾಪಿಸಿದ್ದರು. ಬಳಿಕ ಕ್ರಮೇಣ ಸೇನಾಪಡೆಯ ಶಿಬಿರಗಳು ದೇಶಾದ್ಯಂತ ವಿಸ್ತರಣೆಯಾಗಿ, ಪ್ರಸ್ತುತ ಒಟ್ಟು 62 ಸ್ಥಳಗಳಲ್ಲಿ ನೆಲೆ ಹೊಂದಿವೆ.

 

  • ಕಂಟೋನ್ಮೆಂಟ್‌ ಪ್ರದೇಶಗಳ ಒಳಗಿನ ಭಾಗಗಳನ್ನು ‘ವಿಶೇಷ ಮಿಲಿಟರಿ ಠಾಣೆಗಳಾಗಿ’ ಪರಿವರ್ತಿಸಿ ಸೇನೆಯ ಸಂಪೂರ್ಣ ನಿಯಂತ್ರಣಕ್ಕೆ ನೀಡಬಹುದು. ದಂಡು ವ್ಯಾಪ್ತಿಯಲ್ಲಿ ಬರುವ ಉಳಿದ ನಾಗರಿಕ ವಸತಿ ಪ್ರದೇಶಗಳನ್ನು ನಿರ್ವಹಣೆಗಾಗಿ ಸ್ಥಳೀಯಾಡಳಿತಗಳಿಗೆ ಬಿಟ್ಟುಕೊಡಬಹುದು ಎಂದು ಸೇನೆ ರಕ್ಷಣಾ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿದೆ

 

  • ದಂಡು ಪ್ರದೇಶಗಳ ವಾರ್ಷಿಕ ನಿರ್ವಹಣೆಗಾಗಿ ದೇಶದ ರಕ್ಷಣಾ ಬಜೆಟ್ ಮೇಲೆ ಬೀಳುತ್ತಿರುವ ಒತ್ತಡವನ್ನು ಈ ಮೂಲಕ ನಿವಾರಿಸಬಹುದು. ಸದ್ಯ ದಂಡು ಪ್ರದೇಶಗಳ ನಿರ್ವಹಣೆಗಾಗಿಯೇ ವಾರ್ಷಿಕ 476 ಕೋಟಿ ರೂ ವೆಚ್ಚವಾಗುತ್ತಿದೆ. ಹೀಗಾಗಿ ಸ್ಥಳೀಯಾಡಳಿತಗಳಿಗೆ ವರ್ಗಾಯಿಸುವ ಮೂಲಕ ಭೂ ನಿರ್ವಹಣೆ ಮತ್ತು ಅತಿಕ್ರಮಣ ತಡೆ ಕ್ರಮಗಳನ್ನು ಸರಳೀಕರಿಸಬಹುದು.

 

  • ಈ ಕುರಿತು ಸಾಧ್ಯತಾ ಅಧ್ಯಯನ ನಡೆಸುವಂತೆ ಸೇನಾ ವರಿಷ್ಠ ಜನರಲ್ ಬಿಪಿನ್ ರಾವತ್ ಈಗಾಗಲೇ ಆದೇಶಿಸಿದ್ದು, ಸೆಪ್ಟೆಂಬರ್‌ ಹೊತ್ತಿಗೆ ಈ ಅಧ್ಯಯನ ಪೂರ್ಣಗೊಳ್ಳಲಿದೆ. ‘ದಂಡು ಪ್ರದೇಶಗಳನ್ನು ರದ್ದುಪಡಿಸುವ ಪ್ರಸ್ತಾವ ಹೊಸದೇನಲ್ಲ. 2015ರಲ್ಲೇ ಈ ಬಗ್ಗೆ ಪ್ರಸ್ತಾಪಿಸಲಾಗಿದ್ದು, ರಕ್ಷಣಾ ಕಾರ್ಯದರ್ಶಿಗಳ ಅಧ್ಯಕ್ಷತೆಯ ಈಗಾಗಲೇ ಒಂದು ತಂಡ ಅಧ್ಯಯನ ನಡೆಸಿದೆ. ಮೌ, ಲಖನೌ, ಅಲ್ಮೋರಾ, ಅಹ್ಮದ್‌ನಗರ, ಫಿರೋಜ್‌ಪುರ್‌ ಮತ್ತು ಯೋಲ್ ಕಂಟೋನ್ಮೆಂಟ್‌ಗಳನ್ನು ನಾಗರಿಕ ಬಳಕೆಗೆ ಬಿಟ್ಟುಕೊಡಲು ಉದ್ದೇಶಿಸಲಾಗಿದೆ. ಯೋಲ್‌ನಲ್ಲಿ ಈಗಾಗಲೇ ಈ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

 

  • ಆದರೆ ಈ ಕ್ರಮ ಹಲವು ವಿವಾದಗಳಿಗೆ ಕಾರಣವಾಗಲಿದೆ. ಯಾಕೆಂದರೆ ಹಿಂದೆಯೂ ಈ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಪ್ರಭಾವಿ ಬಿಲ್ಡರ್‌ಗಳು, ರಾಜಕಾರಣಿಗಳು ಸೇನೆಯ ದಂಡು ಪ್ರದೇಶಗಳ ಭೂಮಿ ಮೇಲೆ ಕಣ್ಣಿಟ್ಟಿದ್ದಾರೆ. ದಿಲ್ಲಿ, ಮುಂಬಯಿ, ಲಖನೌ, ಕೋಲ್ಕತ, ಅಂಬಾಲಾ ಮತ್ತು ಇತರ ಪ್ರಮುಖ ನಗರ ಪ್ರದೇಶಗಳಲ್ಲಿ ಈಗಾಗಲೇ ಭೂಮಿಯ ತೀವ್ರ ಕೊರತೆ ಉಂಟಾಗಿದ್ದು ರಿಯಲ್ ಎಸ್ಟೇಟ್‌ ಉದ್ಯಮ ಕಂಗೆಟ್ಟಿದೆ.

 

  • ಎಲ್ಲ 62 ಕಂಟೋನ್ಮೆಂಟ್‌ ಪ್ರದೇಶಗಳಲ್ಲಿ ಮುಚ್ಚಲಾದ ಎಲ್ಲ ರಸ್ತೆಗಳನ್ನು ಸಾರ್ವಜನಿಕ ಬಳಕೆಗೆ ತೆರೆಯುವಂತೆ ರಕ್ಷಣಾ ಸಚಿವಾಲಯದ ನಿರ್ಧಾರವನ್ನು ಮಿಲಿಟರಿ ಸಮುದಾಯದ ಬಹುಮಂದಿ ಈಗಾಗಲೇ ವಿರೋಧಿಸಿದ್ದಾರೆ.

 

  • ರಕ್ಷಣಾ ಸಚಿವಾಲಯದ ಅಧೀನದಲ್ಲಿ ದೇಶಾದ್ಯಂತ ಒಟ್ಟು 3 ಲಕ್ಷ ಎಕರೆ ಭೂಮಿಯಿದ್ದು, ಈ ಪೈಕಿ ಸುಮಾರು 2 ಲಕ್ಷ ಎಕರೆ ಭೂಮಿ 19 ರಾಜ್ಯಗಳಲ್ಲಿರುವ 62 ಕಂಟೋನ್ಮೆಂಟ್‌ಗಳ ವ್ಯಾಪ್ತಿಗೆ ಸೇರಿದೆ. ಬಹುತೇಕ ಕಂಟೋನ್ಮೆಂಟ್‌ಗಳು ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾಗಿದ್ದು, ಜನವಸತಿ ಪ್ರದೇಶ ಅಥವಾ ಪಟ್ಟಣಗಳ ಹೊರವಲಯದಲ್ಲಿವೆ.

 

  • ಆದರೆ ಇದೀಗ ನಗರೀಕರಣದ ಭರಾಟೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂಟೋನ್ಮೆಂಟ್‌ ಪ್ರದೇಶಗಳು ನಗರಗಳ ಒಳಗೆ ಬಂದುಬಿಟ್ಟಿವೆ.

 

  • ಸ್ವಾತಂತ್ರ್ಯದ ಬಳಿಕ ಕಂಟೋನ್ಮೆಂಟ್‌ ಸ್ಥಾಪನೆಯ ಕಲ್ಪನೆಯಿಂದ ಸೇನೆ ಕ್ರಮೇಣ ದೂರ ಸರಿದಿದೆ. ಕಂಟೋನ್ಮೆಂಟ್‌ ಪ್ರದೇಶಗಳಲ್ಲಿ ಸೇನಾ ಸಿಬ್ಬಂದಿಗಳು ಮತ್ತು ನಾಗರಿಕ ಅಧಿಕಾರಿಗಳ ನಡುವೆ ಘರ್ಷಣೆ ಆಗಾಗ ನಡೆಯುತ್ತಲೇ ಇರುತ್ತವೆ.

 

  • ಕಂಟೋನ್ಮೆಂಟ್‌ಗಳ ಕಾರ್ಯನಿರ್ವಹಣೆ ಬಗ್ಗೆ ಹಲವು ಅರೆಮಿಲಿಟರಿ ಸಮಿತಿಗಳು ಮತ್ತು ಸಿಎಜಿ ವರದಿಗಳು ಪ್ರತಿಕೂಲವಾಗಿವೆ. ವಿಶೇಷ ಕಂಟೋನ್ಮೆಂಟ್‌ ಕಾಯ್ದೆಯ ಅಡಿಯಲ್ಲಿ ಈ ದಂಡು ಪ್ರದೇಶಗಳು ತಮ್ಮದೇ ಆದ ಕಾನೂನು ಮತ್ತು ಆಡಳಿತ ವ್ಯವಸ್ಥೆ ಹೊಂದಿವೆ. ಈ ಅವಕಾಶಗಳನ್ನೇ ದುರುಪಯೋಗಪಡಿಸಿಕೊಂಡು ಅನಧಿಕೃತ ನಿರ್ಮಾಣ, ಅತಿಕ್ರಮಣ ಹಾಗೂ ಅಕ್ರಮ ಲೀಸ್‌ಗಳಂತಹ ಪ್ರಕರಣಗಳು ನಡೆದಿವೆ.

 

  • ಲೀಸ್‌ಗಳ ಅವಧಿ ಮುಗಿದಿದ್ದಲ್ಲಿ ಭಾರತ ಸರಕಾರ ಈ ಭೂಮಿಗಳನ್ನು ವಶಪಡಿಸಿಕೊಂಡು ಸೇನೆಯ ಮೂಲಸೌಕರ್ಯ ವೃದ್ಧಿಗೆ ಬಳಸಿಕೊಳ್ಳಬಹುದಾಗಿದೆ.

 

  • ಕಂಟೋನ್ಮೆಂಟ್‌ ವ್ಯಾಪ್ತಿ ಒಳಗೆ ವಾಸಿಸುತ್ತಿರುವ ಜನತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹಲವು ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

 

  • ‘ಜಿಎಸ್‌ಟಿ ಜಾರಿಯೊಂದಿಗೆ ಕಂಟೋನ್ಮೆಂಟ್‌ಗಳ ವ್ಯಾಪ್ತಿಯಲ್ಲಿ ಟೋಲ್‌ ಸಂಗ್ರಹಣಾ ವ್ಯವಸ್ಥೆಯೂ ರದ್ದಾಗಿದೆ. ಹೀಗಾಗಿ ಕಂಟೋನ್ಮೆಂಟ್‌ಗಳ ನಿರ್ವಹಣೆಗೆ ನಿಧಿಯ ಕೊರತೆಯೂ ಕಾಡುತ್ತಿದೆ. ಅಲ್ಲದೆ ರಾಜ್ಯ ಸರಕಾರಗಳು ಜಿಎಸ್‌ಟಿ ಆದಾಯವನ್ನು ಕಂಟೋನ್ಮೆಂಟ್‌ ಮಂಡಳಿಗಳ ಜತೆ ಹಂಚಿಕೊಳ್ಳಲು ನಿರಾಕರಿಸುತ್ತಿವೆ’ .

 

6.ಗ್ರಾಮೀಣ ಸ್ವಚ್ಛತೆ ಸಮೀಕ್ಷೆ

ಪ್ರಮುಖ ಸುದ್ದಿ

  • ದೇಶದ ಎಲ್ಲ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳ ಸ್ವಚ್ಛತೆಯ ಸಮೀಕ್ಷೆ ‘ಗ್ರಾಮೀಣ ಸ್ವಚ್ಛ ಸರ್ವೇಕ್ಷಣೆ 2018’ಕ್ಕೆ ಚಾಲನೆ ನೀಡಲಾಗಿದೆ. ಈ ಸಮೀಕ್ಷೆಯ ಆಧಾರದಲ್ಲಿ ಜಿಲ್ಲೆಗಳು ಮತ್ತು ರಾಜ್ಯಗಳಿಗೆ ಶ್ರೇಣಿ ನೀಡಲಾಗುವುದು.

 

ಸಮೀಕ್ಷೆ ಯಾರಿಂದ?

  • ಖಾಸಗಿ ಸಂಸ್ಥೆಯು ಸಮೀಕ್ಷೆ ನಡೆಸಲಿದೆ
  • ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಪ್ರಾಯೋಜಕತ್ವ

 

ಎಲ್ಲೆಲ್ಲಿ ಸಮೀಕ್ಷೆ?

  • ಶಾಲೆಗಳು
  • ಅಂಗನವಾಡಿಗಳು
  • ಸಂತೆ ಸ್ಥಳಗಳು
  • ಪಂಚಾಯಿತಿ

 

ಮಾನದಂಡಗಳೇನು?

 

  • ಸಾರ್ವಜನಿಕ ಸ್ಥಳಗಳ ಸಮೀಕ್ಷೆ
  • ಸ್ವಚ್ಛತೆಯ ಬಗ್ಗೆ ಜನರ ಗ್ರಹಿಕೆ
  • ಸುಧಾರಣೆಗೆ ಜನರ ಶಿಫಾರಸುಗಳು
  • ಸ್ವಚ್ಛ ಭಾರತ ಅಭಿಯಾನದಲ್ಲಿರುವ ದತ್ತಾಂಶಗಳು

 

ಶ್ರೇಣಿ ನಿರ್ಧಾರ ಹೇಗೆ?

  • ಸಚಿವಾಲಯದಲ್ಲಿರುವ ಸಮಗ್ರ ಮಾಹಿತಿ ನಿರ್ವಹಣೆ ವ್ಯವಸ್ಥೆಯಲ್ಲಿ ಇರುವ ಸೇವಾ ಮಟ್ಟದಲ್ಲಿನ ಪ್ರಗತಿಯ ದತ್ತಾಂಶ.
  • ಮಾನದಂಡಗಳನ್ನು ಅನುಸರಿಸಿ ಸಾರ್ವಜನಿಕ ಸ್ಥಳಗಳ ಬಗ್ಗೆ ಖಾಸಗಿ ಸಂಸ್ಥೆಯು ನಡೆಸಿದ ಸಮೀಕ್ಷೆ.
  • ನೇರವಾಗಿ ಮತ್ತು ಮೊಬೈಲ್‌ ಆ್ಯಪ್‌ ಮೂಲಕ ಗ್ರಾಮೀಣ ಜನರು ನೀಡಿದ ಮಾಹಿತಿ.

 

 

ONLY FOR PRELIMS

 

7.ಸಾಮಾಜಿಕ ಮಾಧ್ಯಮ ಕೇಂದ್ರ ಸ್ಥಾಪನೆಗೆ ಸುಪ್ರೀಂ ಕಿಡಿ

ಪ್ರಮುಖ ಸುದ್ದಿ

 

  • ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ, ‘ಕೇಂದ್ರ ಸರ್ಕಾರ ಜನರ ವಾಟ್ಸ್​ಆಪ್ ಸಂದೇಶಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ’ ಎಂದು ಅಭಿಪ್ರಾಯಪಟ್ಟಿದೆ.

 

  • ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿರುವ ಪೀಠ, ಎರಡು ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಹೇಳಿದೆ.

ಏನಿದು ಕಣ್ಗಾವಲು ರಾಜ್ಯ?

 

  • ರಾಜ್ಯದ ಪ್ರತಿಯೊಂದು ಪ್ರಜೆ ಮೇಲೆ ಕಾನೂನುಬದ್ಧವಾಗಿ ಸರ್ಕಾರ ಕಣ್ಣಿಡುವ ವ್ಯವಸ್ಥೆಯೇ ಕಣ್ಗಾವಲು ರಾಜ್ಯ. ಪ್ರಜೆಗಳ ಚಟುವಟಿಕೆ, ವ್ಯವಹಾರಗಳು, ಅವರ ಸ್ನೇಹಿತರ ಬಗ್ಗೆ ಮಾಹಿತಿ ಸಹಿತ ಎಲ್ಲ ವಿಷಯಗಳ ಮೇಲೆ ನಿಗಾ ಇರಿಸಲಾಗುತ್ತದೆ. ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಇದು ನೆರವಾಗಲಿದೆ ಎನ್ನುವುದು ಉದ್ದೇಶ.

 

 

8.ಭಾರತೀಯ ವಿಶ್ವವಿದ್ಯಾಲಯಗಳ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಪ್ರೊ. ಸಂದೀಪ್ ಸಾಂ ಚೇತಿ ನೇಮಕ

ಪ್ರಮುಖ ಸುದ್ದಿ

 

  • ಭಾರತೀಯ ವಿಶ್ವವಿದ್ಯಾಲಯಗಳ ಅಸೋಸಿಯೇಷನ್‌ನ (ಎಐಯು) 97ನೇ ಅಧ್ಯಕ್ಷರಾಗಿ ಪ್ರೊ. ಸಂದೀಪ್ ಸಾಂ ಚೇತಿ ನೇಮಕರಾಗಿದ್ದಾರೆ.
  • ಎಐಯು ಪ್ರಸ್ತುತ 720 ಉಪಕುಲಪತಿಗಳು ಪ್ರತಿನಿಧಿಸುತ್ತದೆ. ಭಾರತದ ಎಲ್ಲಾ ವಿಶ್ವವಿದ್ಯಾನಿಲಯಗಳ ಪ್ರತಿನಿಧಿಯಾಗಿರುವ ಎಐಯು ವಿಶ್ವವಿದ್ಯಾನಿಲಯಗಳ ನಡುವೆ ಸಮನ್ವಯ ಮತ್ತು ಪರಸ್ಪರ ಸಮಾಲೋಚನೆ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳೊಂದಿಗೆ ಸಂಬಂಧ ಹೊಂದಿದೆ.

 

9.ಆಂಧ್ರದಲ್ಲಿ ಅನ್ನ ಕ್ಯಾಂಟೀನ್ ಆರಂಭ

ಪ್ರಮುಖ ಸುದ್ದಿ

 

  • ಆಂಧ್ರಪ್ರದೇಶ ಸರ್ಕಾರ ರಾಜ್ಯದ ಹಲವು ಭಾಗಗಳಲ್ಲಿ ಬಹುನಿರೀಕ್ಷಿತ ಅನ್ನ ಕ್ಯಾಂಟೀನ್ (ಅಣ್ಣ) ಯೋಜನೆಯನ್ನು ಆರಂಭಿಸಿದೆ.

 

  • ಮೊದಲ ಹಂತದಲ್ಲಿ 60 ಕ್ಯಾಂಟೀನ್‌ಗಳನ್ನು ಆರಂಭಿಸಲಾಗಿದೆ. ಅಕ್ಷಯ ಪಾತ್ರ ಫೌಂಡೇಷನ್ ಈ ಯೋಜನೆಯ ನಿರ್ವಹಣೆ ಮಾಡಲಿದೆ.
  • 2014 ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕ್ಯಾಂಟಿನ್ ಯೋಜನೆ ಆರಂಭಿಸುವುದಾಗಿ ತೆಲುಗು ದೇಶಂ ಪಕ್ಷ ಘೋಷಿಸಿತ್ತು. ಆದರೆ, ಹಣಕಾಸಿನ ಕೊರತೆಯಿಂದಾಗಿ ಯೋಜನ ವಿಳಂಬವಾಗಿತ್ತು.
  • ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಕ್ಯಾಂಟಿನ್‌ಗಳ ಬಗ್ಗೆ ಅಧ್ಯಯನ ನಡೆಸಿದ್ದರು.

 

 

10.ಹಿಮಾ ದಾಸ್‌ಗೆ ದಾಖಲೆಯ ಚಿನ್ನ

ಪ್ರಮುಖ ಸುದ್ದಿ

 

  • ಭಾರತದ ಹಿಮಾ ದಾಸ್ ಅವರು ವಿಶ್ವ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ದಾಖಲೆ ಮಾಡಿದರು. ಮಹಿಳೆಯರ 400 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ 46 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.
  • ಸೀಮಾ ಪೂನಿಯಾ (ಡಿಸ್ಕಸ್‌ನಲ್ಲಿ ಕಂಚು, 2002), ನವಜೀತ್ ಕೌರ್ ಧಿಲ್ಲೋನ್ (ಡಿಸ್ಕಸ್‌ನಲ್ಲಿ ಕಂಚು, 2014) ಈ ಹಿಂದೆ ಪದಕ ಗೆದ್ದಿದ್ದರು.
  • ಕಳೆದ ವರ್ಷ ಪುರುಷರ ವಿಭಾಗದ ಡಿಸ್ಕಸ್ ಥ್ರೋದಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದಿದ್ದರು.

 

CLICK HERE TO JOIN NIALP FOUNDATION COURSE-2019

Share