17th JULY
CLICK HERE TO JOIN NIALP FOUNDATION COURSE-2019
1.ಮಗು ದತ್ತು ಸಂಪನ್ಮೂಲ ಪ್ರಾಧಿಕಾರ (Central Adoption Resource Authority)
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಪರೀಕ್ಷೆಗಾಗಿ – ಮಗು ದತ್ತು ಸಂಪನ್ಮೂಲ ಪ್ರಾಧಿಕಾರದ ಬಗ್ಗೆ
ಮುಖ್ಯ ಪರೀಕ್ಷೆಗಾಗಿ – ಮಕ್ಕಳ ಅಪಹರಣ- ಕಾಳಜಿ , ಸವಾಲುಗಳು ಮತ್ತು ನಿಯಂತ್ರಣದ ಬಗ್ಗೆ , ಈ ಕ್ರಮವನ್ನು ಕೈಗೊಳ್ಲಲು ಕಾರಣಗಳೇನು?
ಪ್ರಮುಖ ಸುದ್ದಿ
- ಮಕ್ಕಳನ್ನು ಅಕ್ರಮವಾಗಿ ದತ್ತು ಪಡಿಯುತ್ತಿರುವುದನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸಂದರ್ಭಗಳಲ್ಲಿ ಅರಿವು ಮೂಡಿಸಲು ಮತ್ತು ತಡೆಯಲು , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮುಂದಿನ ಒಂದು ತಿಂಗಳೊಳಗೆ ಎಲ್ಲಾ ಮಕ್ಕಳ ಆರೈಕೆ ಸಂಸ್ಥೆಗಳ ನೋಂದಣಿ ಮತ್ತು ಮಗು ದತ್ತು ಸಂಪನ್ಮೂಲ ಪ್ರಾಧಿಕಾರ (ಚೈಲ್ಡ್ ಅಡಾಪ್ಷನ್ ರಿಸೋರ್ಸ್ ಅಥಾರಿಟಿ- ಸಿಎಆರ್ಎ) ಗೆ ಸಂಪರ್ಕ ಕಲ್ಪಿಸಲು ರಾಜ್ಯ ಸರಕಾರಗಳನ್ನು ನಿರ್ದೇಶಿಸಿದೆ .
ಮುಖ್ಯ ಅಂಶಗಳು
ಈ ಕ್ರಮವನ್ನು ಕೈಗೊಳ್ಳಲು ಕಾರಣಗಳೇನು?
- ‘ಮಕ್ಕಳನ್ನು ವಸ್ತುಗಳಂತೆ ಹುಡುಕಿ ಆಯ್ಕೆ ಮಾಡುವ ಪರಿಪಾಠವನ್ನು ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಮಕ್ಕಳ ದತ್ತು ಪ್ರಕ್ರಿಯೆ ತುಂಬಾ ನಿಧಾನವಾಗಿತ್ತು ಮತ್ತು ಮಕ್ಕಳು ಸೂಚನಾ ಪ್ರಕಿಯೆಯಲ್ಲಿ ಬಹುಕಾಲ ಇರಬೇಕಾಗಿತ್ತು.
- ಹೊಸ ವಿಧಾನದಲ್ಲಿ ನಮ್ಮ ಬಳಿ ದತ್ತು ನೀಡಲು ಇರುವ ಎಲ್ಲ ಮಕ್ಕಳನ್ನೂ ಎಲ್ಲ ಆಸಕ್ತ ಪಾಲಕರಿಗೂ ಉಲ್ಲೇಖಿಸಬಹುದು’
ಈವರೆಗೆ ಏನಿತ್ತು?
- ಮಗುವನ್ನು ದತ್ತು ಪಡೆಯಬಯಸಿ ಸರ್ಕಾರದ ದತ್ತು ಪೋರ್ಟಲ್ ‘ಕೇರಿಂಗ್ಸ್’ ನಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡ ಪಾಲಕರಿಗೆ ಮೂರು ಮಕ್ಕಳನ್ನು ತೋರಿಸಲಾಗುತ್ತಿತ್ತು. ಈ ಪೈಕಿ ಯಾವುದಾದರೂ ಒಂದು ಮಗುವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇತ್ತು. ಆದರೆ ಇನ್ನು ಮುಂದೆ ಒಂದು ಮಗುವನ್ನಷ್ಟೇ ಸೂಚಿಸುವ ಮೂಲಕ ‘ಮಕ್ಕಳ ಆಯ್ಕೆ’ ಪ್ರಕ್ರಿಯೆ ಅಂತ್ಯಗೊಳ್ಳಲಿದೆ.
BACK TO BASICS
ಮಗು ದತ್ತು ಸಂಪನ್ಮೂಲ ಪ್ರಾಧಿಕಾರದ ಬಗ್ಗೆ
- ಮಗು ದತ್ತು ಸಂಪನ್ಮೂಲ ಪ್ರಾಧಿಕಾರ 2015 ರ ಜುವೆನೈಲ್ ಜಸ್ಟೀಸ್ ಆಕ್ಟ್ ಅಡಿಯಲ್ಲಿ ಸ್ಥಾಪಿಸಲ್ಪಟ್ಟ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಶಾಸನಬದ್ಧ ಅಂಗವಾಗಿದೆ. ಇದು ಭಾರತೀಯ ಮಕ್ಕಳನ್ನು ಅಳವಡಿಸಿಕೊಳ್ಳಲು ಒಂದು ಅಂಗಸಂಸ್ಥೆಯಾಗಿದೆ.
- ದೇಶದಲ್ಲಿ ಮತ್ತು ಅಂತರ-ರಾಷ್ಟ್ರಗಳ ಅಂಗೀಕಾರಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿಯಂತ್ರಿಸಲು ಇದು ಕಡ್ಡಾಯವಾಗಿದೆ. ಇದು ಅನಾಥ, ಕೈಬಿಟ್ಟ ಅಥವಾ ಶರಣಾದ ಮಕ್ಕಳಲ್ಲಿ ವ್ಯವಹರಿಸುತ್ತದೆ.
- 2003 ರಲ್ಲಿ ಭಾರತವು ಅಂಗೀಕರಿಸಿದ ಇಂಟರ್-ಅಡಾಪ್ ಅಡಾಪ್ಷನ್, 1993 ರಂದು ಹೇಗ್ ಕನ್ವೆನ್ಷನ್ ಪ್ರಕಾರ ಇದು ಅಂತರ-ದೇಶದ ಅಂಗೀಕಾರಗಳೊಂದಿಗೆ ವ್ಯವಹರಿಸುತ್ತದೆ
ದತ್ತು ಪಡೆಯಲು ಇರುವ ಕಾನೂನುಗಳು
- ಹಿಂದೂ ಅಡಾಪ್ಷನ್ ಮತ್ತು ಮೇಂಟನೆನ್ಸ್ ಆಕ್ಟ್-1956 (HAMA):
- ಇದು ಭಾರತದಾದ್ಯಂತ ಹಿಂದೂಗಳಿಗಾಗಿಯೇ ಇರುವ ದತ್ತಕ ಕಾಯಿದೆ. ಇದರಲ್ಲಿ ಬುದ್ಧ, ಜೈನ್, ಸಿಖ್ ಪಂಥದವರೂ ಒಳ ಪಡುತ್ತಾರೆ. ಗಂಡು/ಹೆಣ್ಣು, ನ್ಯಾಯಸಮ್ಮತ/ ನ್ಯಾಯ ಸಮ್ಮತವಲ್ಲದ, ಪರಿತ್ಯಕ್ತ, ತಬ್ಬಲಿ ಮಗು ಯಾವುದೇ ಧರ್ಮದ್ದಿರಲಿ ಅದು ಹಿಂದೂ ಧರ್ಮದಂತೆ ಬೆಳೆಯುತ್ತಿದ್ದರೆ ಈ ಕಾಯಿದೆ ವ್ಯಾಪ್ತಿಯಲ್ಲಿ ಬರುತ್ತದೆ.
- 15 ವರ್ಷ ಮೀರಿದ ಮಗು ದತ್ತು ಹೊಂದಲು ಬರುವುದಿಲ್ಲ. ದತ್ತು ಪಡೆಯುವವರು ಹೊಂದಿರಬೇಕಾದ ಕನಿಷ್ಟ ಅರ್ಹತೆಗಳು.
2.ಗಾರ್ಡಿಯನ್ಸ್ ಮತ್ತು ವಾರ್ಡ್ಸ್ ಆಕ್ಟ್- 1890(GAWA)
- ಹಿಂದೂಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಧರ್ಮದವರಿಗೆ ಈ ಕಾನೂನು ಅನ್ವಯ. (ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಹಾಗೂ ಜೂಸ್) ಈ ಧರ್ಮಗಳ ವೈಯಕ್ತಿಕ ಕಾನೂನಿನಲ್ಲಿ ಪೂರ್ತಿ ದತ್ತು ನಿಯಮವನ್ನು ಅಳವಡಿಸಿಲ್ಲ.
- ಈ ಕಾನೂನಿನ ಪ್ರಕಾರ ದತ್ತು ಪಡೆದವರು ದತ್ತಕ ಮಗು ವಯಸ್ಕನಾಗುವವರೆಗೆ (21ವ) ಕೇವಲ ಪೋಷಕರಾಗಿರುತ್ತಾರೆ. ಹಾಗಾಗಿ ಇಲ್ಲಿ ಸ್ವಂತ ಮಗುವಿಗೆ ಸಿಗುವ ಯಾವುದೇ ಹಕ್ಕುಗಳೂ ಲಭ್ಯವಾಗುವುದಿಲ್ಲ. ಅಂತಾರಾಷ್ಟ್ರೀಯ ದತ್ತು ನಿಯಮ ಇದರಲ್ಲಿ ಬರುತ್ತದೆ.
- ಜುವೆನೈಲ್ ಜಸ್ಟೀಸ್ ಅಮೆಂಡ್‌ಮೆಂಟ್ ಅಕ್ಟ್ 2006 (GGí)
- ಇದು ಎಲ್ಲಾ ಧರ್ಮದವರಿಗೂ ಅನ್ವಯವಾಗುವ ಕಾನೂನು. ಸದ್ಯ ಗುಜರಾತ್, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಜಾರಿಯಲ್ಲಿದೆ.
2.ಭಾರತದ 13 ಬೀಚ್‌ಗಳು ಶೀಘ್ರದಲ್ಲೇ ಬ್ಲೂ ಫ್ಲ್ಯಾಗ್
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಪರೀಕ್ಷೆಗಾಗಿ -ಬ್ಲೂ ಫ್ಲಾಗ್ ಯೋಜನೆಯ ಬಗ್ಗೆ.
ಮುಖ್ಯ ಪರೀಕ್ಷೆಗಾಗಿ -ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಕಠಿಣ ಮಾನದಂಡಗಳು.
ಪ್ರಮುಖ ಸುದ್ದಿ
- ಬ್ಲೂ ಫ್ಲ್ಯಾಗ್ ಪರಿಸರ ಸ್ನೇಹಿ-ಸ್ವಚ್ಚ ಮತ್ತು ಪ್ರವಾಸಿಗರಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳನ್ನು ಹೊಂದಿರುವ ಭಾರತದ 13 ಬೀಚ್‌ಗಳು ಶೀಘ್ರದಲ್ಲೇ ಬ್ಲೂ ಫ್ಲ್ಯಾಗ್ ಹೆಗ್ಗಳಿಕೆಯನ್ನು ಪಡೆಯಲಿವೆ.
ಮುಖ್ಯ ಅಂಶಗಳು
- ಭಾರತದಲ್ಲಿ 13 ಬೀಚ್‌ಗಳು,ಶೀಘ್ರದಲ್ಲೇ ಬ್ಲೂ ಫ್ಲ್ಯಾಗ್ ಪ್ರಮಾಣಪತ್ರವನ್ನು ಹೊಂದಲಿವೆ. ಈ ಬೀಚ್‌ಗಳು ಭಾರತ ಮಾತ್ರವಲ್ಲದೆ ಏಷ್ಯಾದಲ್ಲೇ ಮೊದಲ ಬಾರಿಗೆ ಈ ಹೆಗ್ಗಳಿಕೆಯನ್ನು ಪಡೆಯುತ್ತಿವೆ.
- ಅವುಗಳೆಂದರೆ ಒಡಿಶಾ, ಮಹಾರಾಷ್ಟ್ರ, ಗೋವಾ, ಪುದುಚೇರಿ, ದಮನ್ ಮತ್ತು ದಿಯು, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್, ಸ್ಪೇನ್‌ನಲ್ಲಿ ಪ್ರತಿ ಆರು ಬೀಚ್‌ಗಳಲ್ಲಿ ತಲಾ ಒಂದು ಬೀಚ್ ಬ್ಲೂ ಫ್ಲ್ಯಾಗ್ ಪ್ರಮಾಣಪತ್ರವನ್ನು ಹೊಂದಿವೆ.
ಏನಿದು ಬ್ಲೂ ಫ್ಲ್ಯಾಗ್ ?
- ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಕಠಿಣ ಮಾನದಂಡಗಳನ್ನು ಪೂರೈಸಿರುವ ಸಮುದ್ರ ತೀರಗಳು, ಕಡಲ ತೀರಗಳು ಹಾಗೂ ಬೋಟಿಂಗ್ ಪ್ರವಾಸೋದ್ಯಮದ ಆಯೋಜಕರಿಗೆ ಪರಿಸರ ಶಿಕ್ಷಣ ಕುರಿತ ಪ್ರತಿಷ್ಠಾನವು (ಎಫ್ಇಇ) ಬ್ಲೂ ಫ್ಲ್ಯಾಗ್ ಹೆಸರಿನ ಪ್ರಮಾಣಪತ್ರವನ್ನು ನೀಡಿ ಗೌರವಿಸುತ್ತದೆ.
- ಎಫ್‌ಇಇ ಲಾಭರಹಿತ, ಸರಕಾರೇತರ ಸಂಸ್ಥೆಯಾಗಿದ್ದು ಪರಿಸರ ರಕ್ಷಣೆಗಾಗಿ ದುಡಿಯುತ್ತಿದೆ. ಈ ಸಂಸ್ಥೆಯಲ್ಲಿ ಯುರೋಪ್, ಆಫ್ರಿಕಾ, ಒಸೇನಿಯಾ , ಏಷ್ಯಾ, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕದ 65 ಸಂಘಟನೆಗಳು ಸದಸ್ಯತ್ವ ಪಡೆದಿವೆ.
ಮಾನದಂಡಗಳು
- ಪರಿಸರ ಶಿಕ್ಷಣ ಕುರಿತ ಕೂಪನ್ ಹೇಗನ್ ಮೂಲದ ಪ್ರತಿಷ್ಠಾನವು 1985ರಲ್ಲಿ ಬ್ಲೂ ಫ್ಲಾಗ್ ಪ್ರಶಸ್ತಿಗೆ ಹಲವಾರು ಮಾನದಂಡಗಳನ್ನು ರೂಪಿಸಿದೆ.
- ಬೀಚ್ ಗಳು ಪರಿಸರ ಸ್ನೇಹಿಯಾಗಿವೆ ಎಂಬುದನ್ನು ನಿರೂಪಿಸಲು ಅವು 33 ಗುಣಮಟ್ಟಗಳನ್ನು ಹೊಂದಿರಲೇಬೇಕಿದೆ.
- ಪ್ರಥಮ ಬಾರಿಗೆ ಪ್ಯಾರಿಸ್‌ನಿಂದ ಶುರವಾದ ಬ್ಲೂ ಫ್ಲ್ಯಾಗ್ ಟ್ಯಾಗ್ ಅನ್ನು ಎರಡೇ ವರ್ಷಗಳಲ್ಲಿ ಯುರೋಪ್‌ನ ಎಲ್ಲ ಬೀಚ್‌ಗಳು ಹೊಂದಿವೆ.
ಇದಕ್ಕೆ ಇರುವ ನಿಯಮಗಳು
- ಕರಾವಳಿ ವಲಯದ ಪರಿಸರ ವ್ಯವಸ್ಥೆ ಹಾಗೂ ಕರಾವಳಿ ವಲಯದಲ್ಲಿನ ನೈಸರ್ಗಿಕ, ಸೂಕ್ಷ್ಮ ಪ್ರದೇಶಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪ್ರದರ್ಶಿಸುವುದು, ಸ್ನಾನದ ನೀರಿನ ಗುಣಮಟ್ಟ, ಕಡಲ ತೀರದ ನೀತಿ ಸಂಹಿತೆಯ ಮಾಹಿತಿಯನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ.
- ಅತ್ಯುತ್ತಮ ನೀರಿನ ಗುಣಮಟ್ಟಕ್ಕಾಗಿ ಅಗತ್ಯ ಮಾನದಂಡಗಳ ಅನುಸರಣೆ, ಕೈಗಾರಿಕೆ ಅಥವಾ ಚರಂಡಿ ನೀರಿನ ವಿಸರ್ಜನೆಯಿಂದ ಬೀಚ್ ತೀರಗಳಿಗೆ ಯಾವುದೇ ತೊಂದರೆಯಾಗುತ್ತಿಲ್ಲ ಎಂಬುದರ ಖಾತ್ರಿ , ಹವಳದ ದಿಣ್ಣೆಗಳ ಸುರಕ್ಷತೆಯ ಬಗ್ಗೆ ನಿಗಾ, ಬೀಚ್, ನಿರ್ವಹಣಾ ಸಮಿತಿಯ ರಚನೆ, ಚೀಚ್‌ಗಳಲ್ಲಿ ತ್ಯಾಜ್ಯ ವಿಲೇವಾರಿ ತೊಟ್ಟಿಗಳನ್ನು ಲಭ್ಯವಿರುವಂತೆ ಮಾಡುವುದು, ಪ್ರತಿ ಬೀಚ್‌ಗಳಲ್ಲಿ ಜೀವರಕ್ಷಕ ಸಾಧನ ದೊರೆಯುವಂತೆ ಮಾಡುವುದು ಕಡ್ಡಾಯವಾಗಿದೆ.
3.ಸಾಮೂಹಿಕ ಹಲ್ಲೆ ಪ್ರಕರಣದ ಶಿಕ್ಷೆಗೆ ಪ್ರತ್ಯೇಕ ಕಾನೂನು ರೂಪಿಸಿ: ಸುಪ್ರೀಂ ಕೋರ್ಟ್
ಪ್ರಮುಖ ಸುದ್ದಿ
- ದೇಶದ ಅನೇಕ ಭಾಗಗಳಲ್ಲಿ ಸಾಮೂಹಿಕ ಮಾರಣಾಂತಿಕ ಹಲ್ಲೆ ಪ್ರಕರಣಗಳ ವಿರುದ್ಧ ಸುಪ್ರೀಂ ಕೋರ್ಟ್ ಗರಂ ಆಗಿದೆ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲು ಸಂವಿಧಾನಬದ್ಧ ಪ್ರತ್ಯೇಕ ಕಾನೂನು ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ಮುಖ್ಯ ಅಂಶಗಳು
- ದೇಶದ ಯಾರೊಬ್ಬರಿಗೂ ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರವಿಲ್ಲ. ಇಂತಹ ಹೇಯ ಕೃತ್ಯಗಳನ್ನು ಸಹಿಸುವುದೂ ಇಲ್ಲ. ಸಾರ್ವಜನಿಕ ಹಿತಾಸಕ್ತಿಯ ಹೆಸರಲ್ಲಿ ಕಾನೂನು ಕೈಗೆತ್ತಿಕೊಂಡು, ಒಬ್ಬರ ಮೇಲೆ ಜನರೇ ಹಲ್ಲೆ ನಡೆಸುವುದು ತಪ್ಪು. ಇಂತಹುದರಲ್ಲಿ ಭಾಗಿಯಾಗುವವರನ್ನು ನಿರ್ದಾಕ್ಷಿಣ್ಯವಾಗಿ ದಂಡಿಸಬೇಕು ಎಂದು ಸರ್ವೋಚ್ಚನ್ಯಾಯಾಲಯ ಅಭಿಪ್ರಾಯಪಟ್ಟಿದೆ.
- ಕೇಂದ್ರ ಹಾಗೂ ಆಯಾ ರಾಜ್ಯ ಸರಕಾರಗಳು ಸಾರ್ವಜನಿಕರಿಂದ ಹಲ್ಲೆ ಪ್ರಕರಣಗಳನ್ನು ತಡೆಯಲು ಅಗತ್ಯ ಕಾನೂನು ರೂಪಿಸಬೇಕು ಎಂದು ಆದೇಶಿಸಿದೆ . ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸುಪ್ರೀಂ ಕೋರ್ಟ್‌ಗೆ ಈ ಕುರಿತು ವರದಿಯನ್ನೂ ಸಲ್ಲಿಸಬೇಕು
- ಒಬ್ಬ ವ್ಯಕ್ತಿಯ ಮೇಲೆ ಜನರು ಹಲ್ಲೆ ನಡೆಸುವುದು ತಪ್ಪು. ಅದು ಗೋವು ಕಳ್ಳತನ ಪ್ರಕರಣ ಆಗಿರಬಹುದು ಅಥವಾ ಮಕ್ಕಳ ಕಳ್ಳನಾಗಿರಬಹುದು. ಇಲ್ಲಿ ಕಾರಣ ಮುಖ್ಯವಾಗದು. ಜನರು ಕಾನೂನು ಕೈಗೆತ್ತಿಕೊಳ್ಳುವುದು ಅಪರಾಧವೇ ಆಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
- ಗೋವು ಸಂರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯಲು ಆಯಾ ರಾಜ್ಯಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರತಿ ಜಿಲ್ಲೆಯಲ್ಲಿ ಒಬ್ಬ ನೋಡೆಲ್ ಅಧಿಕಾರಿಯನ್ನೂ ನೇಮಿಸುವಂತೆ 2016 ರ ಸೆ.6 ರಂದು ಸುಪ್ರೀಂ ಕೋರ್ಟ್ ತಿಳಿಸಿತ್ತು. ಅಧಿಕಾರಿಗಳು ಗೋವು ಸಂರಕ್ಷಣೆಯ ಹೆಸರಲ್ಲಿ ಓಡಾಡುವವರ ಮೇಲೆ ನಿಗಾ ಇಡುವಂತೆಯೂ ಹೇಳಿತ್ತು.
- ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶದ ಭಾಗದಲ್ಲಿ ಸಾರ್ವಜನಿಕರಿಂದ ಹಲ್ಲೆ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ವರದಿ ಸಲ್ಲಿಸುವಂತೆಯೂ ಕೋರ್ಟ್ ತಿಳಿಸಿತ್ತು,
ಪ್ರಮುಖ ಕಾರಣ
- ಸಾಮಾಜಿಕ ತಾಣ, ವಾಟ್ಸ್‌ಪ್‌ಗಳಲ್ಲಿ ಮಕ್ಕಳ ಕಳ್ಳತನದ ಬಗ್ಗೆ ಸುಳ್ಳು ಸಂದೇಶಗಳು ಹರಿದಾಡುತ್ತಿರುವುದರಿಂದ ಸಾರ್ವಜನಿಕರಿಂದ ಹಲ್ಲೆ ಪ್ರಕರಣಗಳು ಹೆಚ್ಚುತ್ತಿದೆ. ಮಹಾರಾಷ್ಟ್ರದಲ್ಲಿ ಭಾನುವಾರ ಐವರನ್ನು ಸಾರ್ವಜನಿಕರು ಹಲ್ಲೆ ಮಾಡಿದ ಘಟನೆ ನಡೆದಿತ್ತು. ತಮಿಳುನಾಡಿನ ಪರೆಮಂಪಟ್ಟಿಯ ಇಬ್ಬರ ಮೇಲೆ ಹಲ್ಲೆ ನಡೆಯುವುದು ಸ್ವಲ್ಪದರಲ್ಲೇ ತಪ್ಪಿಹೋಗಿದೆ. ಈವರೆಗೆ ಮಕ್ಕಳ ಕಳ್ಳತನದ ಹೆಸರಲ್ಲಿ 13 ಹಲ್ಲೆ ಪ್ರಕರಣಗಳಲ್ಲಿ 29 ಮಂದಿ ಜೀವ ಕಳೆದುಕೊಂಡಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಇಂತಹ ಪ್ರಕರಣ ಹೆಚ್ಚಾಗಿದೆ.
- ಕಳೆದ ತಿಂಗಳು ಜಾರ್ಖಂಡ್‌ನಲ್ಲಿ ಗೋ ರಕ್ಷಣಾ ತಂಡವು ಗೋ ಕಳ್ಳರು ಎಂದು ತಿಳಿದು ಇಬ್ಬರು ಮುಸಲ್ಮಾನರ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಜಾರ್ಖಂಡ್ ಕೋರ್ಟ್ 11ಮಂದಿಗೆ ಶಿಕ್ಷೆ ವಿಧಿಸಿತ್ತು.
- 2015ರ ಬಳಿಕ ಗೋ ಕಳ್ಳತನದ ಹೆಸರಲ್ಲಿ ನಡೆದ ಸಾರ್ವಜನಿಕ ಹಲ್ಲೆಯಲ್ಲಿ ಕೇವಲ ಒಂದು ಪ್ರಕರಣದಲ್ಲಿ ಮಾತ್ರ ಶಿಕ್ಷೆ ಪ್ರಕಟಿಸಲಾಗಿದೆ. ಉತ್ತರ ಪ್ರದೇಶದಲ್ಲೂ ಗೋ ಹಂತಕರೆಂದು ಅನುಮಾನಿಸಿ ಒಬ್ಬರನ್ನು ಸಾರ್ವಜನಿಕರು ಥಳಿಸಿ ಹತ್ಯೆ ಮಾಡಿದ್ದರು.
4.ಸೋಷಿಯಲ್ ಮೀಡಿಯಾ ಹಬ್ ಪ್ರಸ್ತಾವನೆ
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಪರೀಕ್ಷೆಗಾಗಿ– ಸೋಷಿಯಲ್ ಮೀಡಿಯಾ ಹಬ್- ವೈಶಿಷ್ಟ್ಯತೆ ಗಳು ಮತ್ತು ಕಳವಳಗಳು, ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕರ ಪಾತ್ರಗಳ ಬಗ್ಗೆ .
ಮುಖ್ಯ ಪರೀಕ್ಷೆಗಾಗಿ –ಪ್ರಸ್ತಾವಿತ ಸೋಷಿಯಲ್ ಮೀಡಿಯಾ ಹಬ್ ಸುತ್ತಲಿನ ವಿವಾದಗಳೇನು
ಪ್ರಮುಖ ಸುದ್ದಿ
- ಈ ಹಬ್‌ಗಳ ಮೂಲಕ ಸರ್ಕಾರ ಜಾರಿಗೆ ತಂದಿರುವ ಕಲ್ಯಾಣ ಯೋಜನೆಗಳ ಸೋಷಿಯಲ್ ಮೀಡಿಯಾ ಕ್ಯಾಂಪೇನ್‌ಗಳು, ಮತ್ತು ಇದನ್ನು ಅಭಿವೃದ್ಧಿಪಡಿಸುವ ಮಾರ್ಗಗಳು ಯಾವುದು ಎನ್ನುವ ಬಗ್ಗೆ ನಿಗಾವಹಿಸಲಾಗುತ್ತದೆ.ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ, ಲಿಂಕ್ಡ್ ಇನ್, ಬ್ಲಾಗ್‌ಗಳು ಮತ್ತು ನ್ಯೂಸ್ ಚಾನೆಲ್‌ಗಳ ಬಗ್ಗೆ ನಿಗಾ ಇರಿಸಲಾಗುತ್ತದೆ.
ಮುಖ್ಯ ಅಂಶಗಳು
ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಮನವಿಯಲ್ಲೇನಿದೆ?
- ಸರ್ಕಾರ ಹೀಗೆ ಕಾನೂನು ರಚನೆ ಇಲ್ಲದೆಯೇ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸುವುದು ಜನರ ಭಾವನೆಗಳ ವ್ಯಕ್ತಪಡಿಸುವಿಕೆಗೆ ಅಡ್ಡಿಪಡಿಸಿದಂತೆ.
- ಇದು ಸಂವಿಧಾನದ 19(1)(ಎ)ಕಲಂನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿದಂತೆ, ಸಂವಿಧಾನದ ಕಲಂ 14,19(1)(ಎ) ಮತ್ತು 21ರ ಉಲ್ಲಂಘನೆಯಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.
ಇದರಿಂದ ಆಗುವ ಅನುಕೂಲಗಳೇನು?
- ಈ ಮಾಹಿತಿಗಳು ಸರ್ಕಾರ ನೂತನ ಯೋಜನೆಗಳನ್ನು, ನೀತಿಗಳನ್ನು ರೂಪಿಸಲು ಅನುಕೂಲಕರವಾಗಿರುತ್ತವೆ. ಅಲ್ಲದೆ ಕೆಳಹಂತದಿಂದಲೇ ಯೋಜನೆಗಳ ಅನುಷ್ಠಾನಕ್ಕೆ ಸಹಕಾರಿಯಾಗಿರುತ್ತದೆ.
- ಅಲ್ಲದೆ ಸಾಮಾನ್ಯ ವ್ಯಕ್ತಿಯೊಬ್ಬ ಸರ್ಕಾರದ ಬಗೆಗಿರಲಿ, ಅದರ ಯೋಜನೆ ಬಗೆಗಿರಲಿ ನೀಡುವ ದೂರುಗಳು ನೇರವಾಗಿ ಸರ್ಕಾರವನ್ನು ತಲುಪಲು ಸಾಧ್ಯವಾಗಲಿದೆ.
ಇದಕ್ಕೆ ಸುತ್ತಿಕೊಂಡಿರುವ ವಿವಾದಗಳೇನು ?
- ವ್ಯಕ್ತಿಯ ಪ್ರೈವಸಿ ಧಕ್ಕೆ
ಸೋಷಿಯಲ್ ಮಿಡಿಯಾದಲ್ಲಿ ನಡೆಯುವ ಸಂಭಾಷಣೆ, ಚರ್ಚೆ, ಮಾತುಕತೆ, ವ್ಯಕ್ತಿಯ ಪ್ರೈವಸಿ ಮೇಲೆ ನಿಗಾ ಇಡಲಿದೆ. ಸೋಷಿಯಲ್ ಮಿಡಿಯಾದಲ್ಲಿ ನಡೆಯುವ ಚರ್ಚೆ ಆಧರಿಸಿ ಬಳಕೆದಾರರನ್ನು ವರ್ಗೀಕರಣ ಮಾಡಲಿದೆ. ಸಂಭಾಷಣೆ ಆಧರಿಸಿ ಪಾಸಿಟಿವ್, ನೆಗೆಟಿವ್, ನ್ಯೂಟ್ರಲ್ ಎಂದು ಮೂರು ಗುಂಪುಗಳನ್ನಾಗಿ ವರ್ಗೀಕರಿಸಲಿದೆ ಎಂದು ಹೇಳಲಾಗುತ್ತಿದೆ.
- ಕಣ್ಗಾವಲಿಗೆ ಪತ್ರಕರ್ತರ ನೇಮಕ
ಬಳಕೆದಾರರಿಗೆ ಸರ್ಕಾರದ ಯೋಜನೆಗಳ ಮಾಹಿತಿ ಹಾಗೂ ರಾಜಕೀಯ ಸುದ್ದಿಗಳು ತಲುಪುವ “ರಿಯಲ್ ಟೈಮ್” ಅನ್ನು ಟ್ರ್ಯಾಕ್ ಮಾಡುವ ಉದ್ದೇಶ ಹೊಂದಿದೆ ಎಂಬ ಆರೋಪವಿದೆ. ಸೋಷಿಯಲ್ ಮಿಡಿಯಾದ ನಿಗಾ ಇಡುವುದ್ದಾಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಪತ್ರಕರ್ತರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವ ಇರಾದೆ ಸರ್ಕಾರಕ್ಕಿದೆ.
- ನೆಗೆಟಿವ್ ಒಪಿನಿಯನ್ ಪಾಸಿಟಿವ್ ಮಾಡುವ ಉದ್ದೇಶ
ಸರ್ಕಾರದ ಯೋಜನೆಗಳ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳನ್ನು ಸಕಾರಾತ್ಮಕವಾಗಿ ಪರಿವರ್ತಿಸಿ, ಸರ್ಕಾರದ ಯೋಜನೆಗಳನ್ನು ಪ್ರಮೋಟ್ ಮಾಡಲು ಸಲಹೆ, ಸೂಚನೆ ಪಡೆದುಕೊಳ್ಳುವ ಉದ್ದೇಶ ಹೊಂದಿದೆ.
5.ಹೆತ್ತವರಿಗೆ ಕೈಕೊಟ್ರೆ ಕೈತಪ್ಪುತ್ತದೆ ಆಸ್ತಿ-ಬಾಂಬೆ ಹೈಕೋರ್ಟ್
ಪ್ರಮುಖ ಸುದ್ದಿ
- ಮಕ್ಕಳು ಕಿರುಕುಳ ನೀಡಿದರೆ ಅಥವಾ ಆರೈಕೆಯನ್ನು ಕಡೆಗಣಿಸಿದರೆ ಉಡುಗೊರೆಯಾಗಿ ನೀಡಿದ್ದ ಆಸ್ತಿಯ ಭಾಗವನ್ನು ವೃದ್ಧ ಪಾಲಕರು ಹಿಂಪಡೆಯಬಹುದು ಎಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಹಿರಿಯ ನಾಗರಿಕರ ಜೀವನನಿರ್ವಹಣೆ ವಿಶೇಷ ಕಾಯ್ದೆಯನ್ನು ಉಲ್ಲೇಖಿಸಿ ನ್ಯಾಯಾಧಿಕರಣ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ.
ಮುಖ್ಯ ಅಂಶಗಳು
- ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ, 2007ರನ್ವಯ ವೃದ್ಧ ಪಾಲಕರನ್ನು ಮಕ್ಕಳು ಕಡೆಗಣಿಸುವುದು ಅಪರಾಧ ಮೂರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
- 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕ ಮಕ್ಕಳಿಂದ ಜೀವನ ನಿರ್ವಹಣೆ ವೆಚ್ಚ ಪಡೆಯಬಹುದು. ಇದಕ್ಕೆ ಮಕ್ಕಳಿಂದ ಆಕ್ಷೇಪವಿದ್ದಲ್ಲಿ ವಿಶೇಷ ನ್ಯಾಯಾಧಿಕರಣದ ಮೂಲಕ ಪಾಲಕರು ಕನಿಷ್ಠ – ರೂ.10,000 ತನಕ ನಿರ್ವಹಣೆ ವೆಚ್ಚ ಪಡೆಯಬಹುದು.
- ಜನ್ಮದಾತರು, ಮಲತಾಯಿ ಹಾಗೂ ತಂದೆ, ದತ್ತು ಪಡೆದವರು, ಅಜ್ಜ ಮತ್ತು ಅಜ್ಜಿ ಅಥವಾ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಜೀವನ ನಿರ್ವಹಣೆ ವೆಚ್ಚ ಕೇಳಲು ಅರ್ಹರು.
- ಪ್ರಾಪ್ತ ವಯಸ್ಸಿನ ಮಕ್ಕಳು, ಮೊಮ್ಮಕ್ಕಳು (ಪುರುಷ ಮತ್ತು ಮಹಿಳೆ) ಪಾಲಕರ ಆರೈಕೆ, ನಿರ್ವಹಣೆ ಮಾಡಬೇಕಾದವರು.
- ಮಕ್ಕಳಿಲ್ಲದ ಹಿರಿಯ ನಾಗರಿಕರು, ತಮ್ಮ ಆಸ್ತಿಯನ್ನು ನೀಡಿರುವ ಅಥವಾ ಪಡೆಯುವ ಸಂಬಂಧಿಯಿಂದ ನಿರ್ವಹಣೆ ವೆಚ್ಚ ಪಡೆಯಬಹುದಾಗಿದೆ.
6.ಮೀರ್‌ಕೆಎಟಿ-ಸೂಪರ್ ರೇಡಿಯೋ ಟೆಲಿಸ್ಕೋಪ್
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ –ಮೀರ್‌ಕೆಎಟಿ-ಸೂಪರ್ ರೇಡಿಯೋ ಟೆಲಿಸ್ಕೋಪ್ ನ – ಉದ್ದೇಶಗಳು ಮತ್ತು ಪ್ರಮುಖ ಲಕ್ಷಣಗಳು.
ಪ್ರಮುಖ ಸುದ್ದಿ
- ಬ್ರಹ್ಮಾಂಡದ ರಹಸ್ಯಗಳನ್ನು ತಿಳಿಸುವ ವಿಶ್ವದ ಅತಿ ದೊಡ್ಡ ದೂರದರ್ಶಕ ಮೀರ್‌ಕೆಎಟಿ-ಸೂಪರ್ ರೇಡಿಯೋ ಟೆಲಿಸ್ಕೋಪ್ ಅನ್ನು ಇತ್ತೀಚೆಗಷ್ಟೆ ದಕ್ಷಿಣ ಆಫ್ರಿಕಾದ ಕಾರ್ನರ್ ವೊನ್‌ನಲ್ಲಿ ಅನಾವರಣ ಮಾಡಲಾಯಿತು.
ಮುಖ್ಯ ಅಂಶಗಳು
ಮೀರ್ಕೆಎಟಿ ರೇಡಿಯೋ ದೂರದರ್ಶಕ ವಿಶೇಷತೆ
- ಕೆಎಟಿ-7 (ಕರೋ ಅರೇ ಟೆಲಿಸ್ಕೋಪ್) ರ ಮುಂದುವರಿದ ಭಾಗವೇ ಮೀರ್‌ಕೆಎಟಿ.ಎಸ್ ಕೆಎ ಆತಿಥ್ಯ ವಹಿಸುವ ಸಲುವಾಗಿ ತನ್ನ ಸಾಮರ್ಥ್ಯ ಪ್ರದರ್ಶಿಸಲು ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನ ಉತ್ತರದಲ್ಲಿರುವ ಅರೆ- ಮರುಭೂಮಿಯ ಕರೂ ಪ್ರದೇಶದಲ್ಲಿ ಮೀರ್‌ಕೆಎಟಿ ಅನ್ನು ನಿರ್ಮಿಸಿದೆ.
- ದಕ್ಷಿಣ ಗೋಳಾರ್ಧದಲ್ಲಿ ಇದೇ ಅತಿ ದೊಡ್ಡ ರೇಡಿಯೋ ಟೆಲಿಸ್ಕೋಪ್ ಎನಿಸಿಕೊಳ್ಳಲಿದೆ. 44 ಬಿಲಿಯನ್ ರಾಂಡ್ (Rand) (ರೂ.22,80,03,44,664) ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದ್ದು, 2020ರ ವೇಳೆಗೆ ವಿಶ್ವದ ಅತಿ ದೊಡ್ಡ ಮತ್ತು ಶಕ್ತಿಶಾಲಿ ದೂರದರ್ಶಕವಾಗಲಿದೆ.
- ತಾರಾಗಣ ಹೇಗೆ ಉಗಮವಾಯಿತು, ಹೇಗೆ ವಿಕಾಸವಾಯಿತು, ಇಲ್ಲಿಗೆ ಹೇಗೆ ಬಂದವು ಎಂಬಿತ್ಯಾದಿ ಕೆಲ ಪ್ರಮುಖ ವಿಜ್ಞಾನ ಸಂಬಂಧಿತ ಪ್ರಶ್ನೆಗಳಿಗೆ ಮೀರ್‌ಕೆಎಟಿ ಉತ್ತರ ನೀಡಲಿದೆ.
- ಸುಮಾರು 1 ಮಿಲಿಯನ್ ಚದರ ಮೀಟರ್ ನಲ್ಲಿ ಎಸ್‌ಕೆಎ ನಿರ್ಮಿಸಲಾಗಿದೆ. ಸಾವಿರಾರು ಡಿಶ್, ಮಿಲಿಯನ್‌ನಷ್ಟು ಆ್ಯಂಟೆನಾಗಳನ್ನು ಬಳಸಿ ಖಗೋಳಶಾಸ್ತ್ರಜ್ಞರು ಆಕಾಶದ ಬಗ್ಗೆ ಸಮೀಕ್ಷೆ ನಡೆಸುತ್ತಾರೆ.
- ಹತ್ತು ಸದಸ್ಯ ರಾಷ್ಟ್ರಗಳು ಎಸ್‌ಕೆಎಯ ಆಧಾರ ಸ್ತಂಭವಾಗಿವೆ. ಇದರ ವಿನ್ಯಾಸ ಮತ್ತು ಅಭಿವೃದ್ಧಿ ಕೆಲಸಗಳಲ್ಲಿ ಸುಮಾರು 20 ದೇಶದ 100 ಸಂಘಟನೆಗಳು ಭಾಗವಹಿಸುತ್ತವೆ.
ONLY FOR PRELIMS
7.ಗನ್ಗೂ ವಿಶಿಷ್ಟ ಗುರುತಿನ ಸಂಖ್ಯೆ
ಪ್ರಮುಖ ಸುದ್ದಿ
- ಈಗಾಗಲೇ ಪರವಾನಗಿ ಪಡೆದ ಶಸ್ತ್ರ ಹೊಂದಿದವರು ಮತ್ತು ಹೊಸದಾಗಿ ಪರವಾನಗಿ ಪಡೆಯುತ್ತಿರುವವರ ರಾಷ್ಟ್ರೀಯ ದತ್ತಾಂಶ ಸಂಗ್ರಹ (ಡೇಟಾಬೇಸ್) ಮುಂದಿನ ವರ್ಷ ಏಪ್ರಿಲ್ಗೆ ಸಿದ್ಧವಾಗಲಿದೆ. ಜತೆಗೆ ಎಲ್ಲ ಗನ್ಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ (ಯುಐಎನ್) ನೀಡಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.
- ಇದರೊಂದಿಗೆ ಅಧಿಕೃತ ಗನ್ ಪರವಾನಗಿ ಹೊಂದಿದವರ ವಿವರ ಒಂದೇ ಕಡೆ ಸಿಗಲಿದೆ. ಗನ್ ಪರವಾನಗಿ ಪಡೆದವರು ಸಮಾರಂಭಗಳಲ್ಲಿ ಸಂಭ್ರಮಕ್ಕಾಗಿ ಹಾರಿಸಿದ ಗುಂಡುಗಳಿಂದ ಆಗುವ ಅಪಘಾತ ಹಾಗೂ ವಿವಿಧ ರೀತಿಯ ಅಪರಾಧಗಳಲ್ಲಿ ಅವರು ಭಾಗಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ. ಹಾಗಾಗಿ ಅಧಿಕೃತ ಗನ್ಗಳಿಗೆ ಯುಐಎನ್ ನೀಡಲಾಗುವುದು. ಬಹುಶಸ್ತ್ರಗಳನ್ನು ಹೊಂದಿರುವವರು
- ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ಪರವಾನಗಿಗೆ ಅರ್ಜಿ ಸಲ್ಲಿಸಿ ಯುಐಎನ್ ಪಡೆಯುವುದು ಕೂಡ ಕಡ್ಡಾಯವಾಗಿದೆ. ನೂತನ ಕ್ರಮಕ್ಕಾಗಿ 1959ರ ಶಸ್ತ್ರಗಳ ಕಾಯ್ದೆಗೆ ತಿದ್ದುಪಡಿ ತರಲಾಗಿದೆ
- 2016ರ ಡಿಸೆಂಬರ್ 31ರವರೆಗೆ ದೇಶದಲ್ಲಿ 69 ಲಕ್ಷ ಮಂದಿ ಗನ್ ಪರವಾನಗಿ ಹೊಂದಿದ್ದರು. ಉತ್ತರಪ್ರದೇಶದಲ್ಲಿ ಅತಿಹೆಚ್ಚು ಅಂದರೆ 12.77 ಲಕ್ಷ ಮಂದಿಗೆ ಗನ್ ಪರವಾನಗಿ ನೀಡಲಾಗಿತ್ತು. ಜಮ್ಮು- ಕಾಶ್ಮೀರದಲ್ಲಿ 3.69 ಲಕ್ಷ ಮಂದಿ ಹಾಗೂ ಪಂಜಾಬ್ನಲ್ಲಿ 3.59 ಲಕ್ಷ ಮಂದಿ ಬಳಿ ಅಧಿಕೃತವಾದ ಗನ್ ಇತ್ತು.
8.ಭಾರತಕ್ಕೆ ಡಬ್ಲ್ಯುಸಿಒ ಉಪಾಧ್ಯಕ್ಷ ಸ್ಥಾನ
ಪ್ರಮುಖ ಸುದ್ದಿ
- ವಿಶ್ವ ಕಸ್ಟಮ್ ಸಂಸ್ಥೆ (ಡಬ್ಲ್ಯುಸಿಒ)ಯ ಉಪಾಧ್ಯಕ್ಷ ಅಥವಾ ಏಷ್ಯಾ ಪೆಸಿಫಿಕ್‌ನ ಪ್ರಾದೇಶಿಕ ಮುಖ್ಯಸ್ಥ ಸ್ಥಾನಕ್ಕೆ ಭಾರತ ಅಯ್ಕೆಯಾಗಿದೆ. ಜುಲೈ 2018ರಿಂದಜೂನ್ 2020ರವರೆಗೆ ಭಾರತ ಇದರ ಮುಂದಾಳತ್ವ ವಹಿಸಲಿದೆ.
- ಕೇಂದ್ರಪರೋಕ್ಷತೆರಿಗೆ ಮತ್ತು – ಕಸ್ಟಮ್ (ಸಿಬಿಐಸಿ) ನವದೆಹಲಿಯಲ್ಲಿ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಸಹಯೋಗದೊಂದಿಗೆ ಕಾರ್ಯ ಕ್ರಮವನ್ನು ಆಯೋಜಿಸಿತ್ತು. 1952ರಲ್ಲಿ ಕಸ್ಟಮ್ ಕೋ-ಆಪರೇಟಿವ್ ಕೌನ್ಸಿಲ್ (ಸಿಸಿಸಿ) ಆಗಿ ಪ್ರಾರಂಭವಾದ ಡಬ್ಲ್ಯುಸಿಒ ಸ್ವತಂತ್ರ ಅಂತರಸರ್ಕಾರೇತರ ಸಂಸ್ಥೆಯಾಗಿದೆ.