1st SEPTEMBER
1.ಏಕರೂಪ ಪೌರ ಸಂಹಿತೆ ಅನಗತ್ಯ-ರಾಷ್ಟ್ರೀಯ ಕಾನೂನು ಆಯೋಗ
SOURCE–https://indianexpress.com/article/india/law-panel-says-uniform-code-not-desirable-now-reform-family-laws-first-5334646/
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಪರೀಕ್ಷೆಗಾಗಿ– ಏಕರೂಪ ಪೌರ ಸಂಹಿತೆ ಎಂದರೇನು ? ಏಕರೂಪ ನಾಗರಿಕ ಸಂಹಿತೆಯೊಂದಿಗೆ ಸಂವಿಧಾನಾತ್ಮಕ ನಿಬಂಧನೆಗಳು.
ಮುಖ್ಯ ಪರೀಕ್ಷೆಗಾಗಿ– ಸಮಾಲೋಚನಾ ಪತ್ರ ಅವಲೋಕನ, ಹಾಗು ಸಲಹೆ ನೀಡಿರುವ ಬಗ್ಗೆ
ಪ್ರಮುಖ ಸುದ್ದಿ
- ದೇಶದಲ್ಲಿ ಸದ್ಯಕ್ಕೆ ಏಕರೂಪ ನಾಗರಿಕ ಸಂಹಿತೆ ಅಗತ್ಯವಿಲ್ಲ, ಆದರೆ ಕೌಟುಂಬಿಕ ಕಾಯ್ದೆಗಳಲ್ಲಿ ಸಮಾನತೆ ತರಬೇಕಿದೆ ಎಂದು ರಾಷ್ಟ್ರೀಯ ಕಾನೂನು ಆಯೋಗ ಅಭಿಪ್ರಾಯಪಟ್ಟಿದೆ.
ಮುಖ್ಯ ಅಂಶಗಳು
- ಸಮಾಲೋಚನಾ ಪತ್ರ ಪ್ರಕಟಿಸಿರುವ ಕಾನೂನು ಆಯೋಗ, ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ರಚಿಸುವ ಪರಿಸ್ಥಿತಿ ನಿರ್ವಣವಾಗಿಲ್ಲ. ಅದರ ಅಗತ್ಯವೂ ಇಲ್ಲ. ಇದರಿಂದ ಸಮಾಜದಲ್ಲಿ ಹಿಂದುಳಿದ ಹಾಗೂ ತುಳಿತಕ್ಕೊಳಗಾದ ಸಮುದಾಯಕ್ಕೆ ಅಭದ್ರತೆ ಸೃಷ್ಟಿಸುವುದು ಸೂಕ್ತವಲ್ಲ.
- ಬದಲಾಗಿ ಹಾಲಿ ಕಾನೂನುಗಳಿಗೆ ವಿರುದ್ಧವಾಗಿರುವ ಕೌಟುಂಬಿಕ ನಿಯಮಗಳ ಬಗ್ಗೆ ಪರಿಶೀಲನೆ ನಡೆಸಬೇಕು. ವೈಯಕ್ತಿಕ ಕಾನೂನು ಮಂಡಳಿಗಳಲ್ಲಿನ ನಿಯಮಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿರಬಾರದು ಎಂದು ಆಯೋಗ ಅಭಿಪ್ರಾಯ ಪಟ್ಟಿದೆ. ಈ ಲೇಖನ ಆಧರಿಸಿ ಚರ್ಚೆಗಳು ನಡೆಯಲಿವೆ. ಬಳಿಕ ಕೇಂದ್ರಕ್ಕೆ ವಿಸ್ತೃ ವರದಿ ನೀಡಲು ಆಯೋಗ ನಿರ್ಧರಿಸಿದೆ.
- ಆಯೋಗದ ಈ ಅಭಿಪ್ರಾಯದಿಂದ ಕೇಂದ್ರ ಸರ್ಕಾರದ ಏಕರೂಪ ನಾಗರಿಕ ಸಂಹಿತೆ ಪ್ರಸ್ತಾಪಕ್ಕೆ ಆರಂಭಿಕ ಹಿನ್ನಡೆಯಾಗಿದೆ. ಏಕರೂಪ ನಾಗರಿಕ ಸಂಹಿತೆ ಇರದ ಸಂದರ್ಭದಲ್ಲಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಯಾವುದೇ ನಿಯಮಗಳು ಪಾಲನೆಯಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ಇದಕ್ಕೆ ಪೂರಕವಾಗಿ ಸರ್ಕಾರ ಅಗತ್ಯ ಕಾನೂನು ರೂಪಸಬೇಕು ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಮಹಿಳಾ ಸಬಲೀಕರಣಕ್ಕೆ ಒತ್ತು
- ವಿಶೇಷವಾಗಿ ಮುಸ್ಲಿಂ ಮಹಿಳೆಯರ ವೈಯಕ್ತಿಕ ಸ್ವಾತಂತ್ರ್ಯದ ಕುರಿತು ಉಲ್ಲೇಖಿಸಿರುವ ಆಯೋಗ, ಏಕಪಕ್ಷೀಯ ವಿಚ್ಛೇದನ, ನಿಕಾಹ್ ಹಲಾಲ, ಬಹುಪತ್ನಿತ್ವ, ತ್ರಿವಳಿ ತಲಾಕ್ನಂತಹ ಸಂಪ್ರದಾಯಗಳಿಗೆ ತೆರೆ ಎಳೆಯಬೇಕು ಎಂದು ಹೇಳಿದೆ.
ದೇಶದ್ರೋಹದ ಸೆಕ್ಷನ್ ಏಕೆ ?:
- ಬ್ರಿಟಿಷರ ಕಾಲದ ದೇಶದ್ರೋಹ(ಐಪಿಸಿ ಸೆಕ್ಷನ್ 124-ಎ) ಕಾನೂನಿನ ಅಗತ್ಯವೇನಿದೆ ಎಂದು ಕಾನೂನು ಆಯೋಗವು ಸಮಾಲೋಚನಾ ಪತ್ರದಲ್ಲಿ ಪ್ರಶ್ನಿಸಿದೆ. ಪ್ರಜಾತಂತ್ರ ದೇಶದಲ್ಲಿ ಕೆಲ ವಿಚಾರಗಳಿಗೆ ಸಂಬಂಧಿಸಿ ಪರ-ವಿರೋಧ ಇರುವುದು ಸಾಮಾನ್ಯ. ಆದರೆ ದೇಶದ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ದೇಶದ್ರೋಹ ಪ್ರಕರಣ ದಾಖಲಿಸುವುದು ಎಷ್ಟರ ಮಟ್ಟಿಗೆ ಸರಿ, ಇಂದಿಗೂ ಈ ಕಾಯ್ದೆಯ ಅಗತ್ಯವಿದೆಯೇ ಎಂದು ಆಯೋಗ ಪ್ರಶ್ನಿಸಿದೆ. ಆದರೆ ದೇಶದ ವಿರುದ್ಧ ಸಂಚು ರೂಪಿಸುವುದು, ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗುವಂಥ ಗಂಭೀರ ಪ್ರಕರಣಗಳಿಗೆ ಸಂಬಂಧಿಸಿ ದೇಶದ್ರೋಹ ಪ್ರಕರಣ ದಾಖಲಿಸಬಹುದು ಎಂದಿದೆ.
BACK TO BASICS
ಏಕರೂಪ ನಾಗರಿಕ ಸಂಹಿತೆಎಂದರೇನು ?
- ಭಾರತ ಹಲವು ಧರ್ಮ-ಜಾತಿಗಳ ದೇಶ. ವಿವಿಧ ರೀತಿ ಆಚರಣೆಗಳು ಅಸ್ತಿತ್ವದಲ್ಲಿದೆ. ಸದ್ಯದ ಕಾನೂನುಗಳೂ ಆಯಾ ಧರ್ಮದ ವಿವಿಧ ಅಭ್ಯಾಸಗಳಿಗೆ ಅನುಗುಣವಾಗಿದೆ. ಇದರಿಂದಾಗಿ ವೈಯಕ್ತಿಕ ಕಾನೂನುಗಳೂ ವಿವಿಧ ಧರ್ಮಗಳಿಗೆ ಬೇರೆ ಬೇರೆಯ ರೀತಿಯಲ್ಲಿವೆ.
- ಇದಕ್ಕೆ ಹೊರತಾಗಿ ವೈಯಕ್ತಿಕ ಕಾನೂನುಗಳಾದ, ವಿಶೇಷವಾಗಿ ವಿವಾಹ, ವಿಚ್ಛೇದನ, ಆಸ್ತಿ ಹಂಚಿಕೆ, ಉತ್ತರಾಧಿಕಾರ ವಿಚಾರಗಳಿಗೆ ಏಕರೂಪದ ಕಾನೂನು ತರುವುದು ಇದರ ಉದ್ದೇಶ. ಇದನ್ನೇ ಏಕರೂಪ ನಾಗರಿಕ ಸಂಹಿತೆ ಎನ್ನುತ್ತಾರೆ.
- ಸದ್ಯ ವಿಚ್ಛೇದನವನ್ನು ತೆಗೆದುಕೊಂಡರೆ, ಹಿಂದೂಗಳಲ್ಲೊಂದು, ಮುಸಲ್ಮಾನರಲ್ಲೊಂದು, ಕ್ರೈಸ್ತರಲ್ಲೊಂದು ಎಂಬಂತೆ ಕಾನೂನು ಜಾರಿಯಲ್ಲಿದೆ.
ಏಕರೂಪ ನಾಗರಿಕ ಸಂಹಿತೆ ಬೇಡಿಕೆ ಶುರುವಾದ್ದೆಲ್ಲಿಂದ?
- ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತ ಚರ್ಚೆ ಇಂದು ನಿನ್ನೆಯದಲ್ಲ. ಬ್ರಿಟಿಷರ ಕಾಲದಿಂದ ಅದು ಹುಟ್ಟಿದೆ. ಬ್ರಿಟಿಷ್ ಆಡಳಿತದ ವೇಳೆ ಭಾರತದಲ್ಲಿ ಏಕರೂಪದ ಕಾನೂನು ಬೇಕು ಎಂಬ ಬಗ್ಗೆ ದಿ ಲೆಕ್ಸ್ ಲೊಸಿ ವರದಿ 1840ರಲ್ಲಿ ಸಲ್ಲಿಕೆಯಾಗಿತ್ತು.
- ಸ್ವಾತಂತ್ರ್ಯನಂತರವೂ ಸಂವಿಧಾನ ರಚನೆ ಸಂದರ್ಭ ಇದು ಚರ್ಚೆಯಾಗಿತ್ತು. ಬಳಿಕ ಸಂವಿಧಾನ ರಚನೆ ಸಂದರ್ಭ ಏಕರೂಪ ನಾಗರಿಕ ಸಂಹಿತೆ ಅಳವಡಿಸುವುದು ಸರ್ಕಾರದ ಕರ್ತವ್ಯ ಎಂದು ಹೇಳಲಾಗಿತ್ತು. ಸಂವಿಧಾನದ 44ನೇ ಕಲಂನಲ್ಲಿ ಈ ಬಗ್ಗೆ ಹೇಳಲಾಗಿದೆ. 1985ರ ಶಾ ಬಾನು ಪ್ರಕರಣದ ಬಳಿಕ ಏಕರೂಪನಾಗರಿಕ ಸಂಹಿತೆ ಕುರಿತ ಚರ್ಚೆಗಳು ತೀವ್ರಗೊಂಡಿತು .
ಭಾರತಕ್ಕೆ ಏಕರೂಪದ ನಾಗರಿಕ ಸಂಹಿತೆ ಏಕೆ ಬೇಕು?
- ಭಾರತ ಸಂವಿಧಾನದ ೪೪ನೆಯ ಅನುಚ್ಛೇದ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಬೇಕು ಎಂದು ಹೇಳಿದೆ. ಆದರೆ, ರಾಜ್ಯನೀತಿ ನಿರ್ದೇಶಕ ತತ್ವದ ಅಂಶಗಳ ಅಡಿಯಲ್ಲಿ ಇದು ಕಡ್ಡಾಯವಲ್ಲ ಎಂದಿರುವ ಕಾರಣ ಈ ಅನುಚ್ಛೇದವನ್ನು ಜಾರಿಗೆ ತರದೇ ದೇಶವನ್ನಾಳಿದ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣದ ಸರಕನ್ನಾಗಿ ಮಾಡಿಕೊಂಡಿದೆ.
- ಧರ್ಮಾಧಾರಿತವಾಗಿ ನಡೆಯುವ ಕಾನೂನಿನ ದೌರ್ಜನ್ಯಗಳನ್ನು ತಡೆಗಟ್ಟಲು ಈ ಸಂಹಿತೆ ಬೇಕು.
- ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎಂಬ ವ್ಯತ್ಯಾಸವನ್ನು ಹೋಗಲಾಡಿಸಲು ಪೂರಕವಾಗಿ ಇದು ಬೇಕು. ಇದು ಎಲ್ಲ ಧರ್ಮ ಹಾಗೂ ಜಾತಿಗಳೂ ಒಂದೇ ಎನ್ನುವ ಭಾವನೆಯನ್ನು ಮೂಡಿಸಲು ಸಹಕಾರಿ.
- ಧರ್ಮಾಧಾರಿತ ಕಾನೂನಿನಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ತಡೆಯಲು ಪೂರಕ.
- ಸಂವಿಧಾನದ ಅನುಚ್ಛೇದ ೨೫ ಹಾಗೂ ೨೬ ದೇಶವಾಸಿಗಳಿಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದ್ದು, ಸಿಸಿಸಿಯಿಂದ ಇದು ಉಲ್ಲಂಘನೆಯಾಗುವುದಿಲ್ಲ ಎನ್ನುವುದನ್ನು ಅರಿಯಬೇಕು.
- ಏಕರೂಪದ ನಾಗರಿಕ ಸಂಹಿತೆಯ ಅವಶ್ಯಕತೆ ಇನ್ನೊಂದು ಕಾರಣವೆಂದರೆ ಲಿಂಗ ಭೇದವನ್ನು ಹೋಗಲಾಡಿಸಲು . ಮಹಿಳೆಯರ ಹಕ್ಕುಗಳು ಹಿಂದೂ ಅಥವಾ ಮುಸಲ್ಮಾನರ ಧಾರ್ಮಿಕ ಕಾನೂನಿನಡಿಯಲ್ಲಿ ಸೀಮಿತವಾಗಿವೆ. ಟ್ರಿಪಲ್ ತಾಲಾಕ್ ಇದಕ್ಕೆ ಒಂದು ಶ್ರೇಷ್ಠ ಉದಾಹರಣೆಯಾಗಿದೆ.
ಧರ್ಮಕ್ಕೆ ಸಂಬಂಧಿಸಿದ ಸಂವಿಧಾನದ ವಿವಿಧ ನಿಬಂಧನೆಗಳು ಯಾವುವು?
- ಸಮಾನತೆಯನ್ನು ಹೇಳುವ 14ನೇ ವಿಧಿ,
- ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುವ 25ನೇ ವಿಧಿ
- ಧಾರ್ಮಿಕ ಸಂಸ್ಥೆಗಳ ಸ್ಥಾಪನೆ ಮತ್ತು ನಿರ್ವಹಿಸುವ ಹಕ್ಕು.- 26 ನೇ ವಿಧಿ
- ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆಯ ವಿಷಯದ ಬಗ್ಗೆ.-28 ನೇ ವಿಧಿ
ಏಕ ನಾಗರಿಕ ಸಂಹಿತೆ ಜಾರಿಗೆ ಬಂದರೆ ಬಂದರೆ ಆಗುವ ಪ್ರಯೋಜನಗಳೇನು ?
- ಜಾತ್ಯತೀತ ರಾಷ್ಟ್ರವನ್ನಾಗಿಸಲು:
ಸಂವಿಧಾನ ಪೀಠಿಕೆಯ ಆಶಯದಂತೆ ಜಾತ್ಯತೀತತೆಯನ್ನು ಸಾಕಾರಗೊಳಿಸಲು ಸಿಸಿಸಿ ಅಗತ್ಯವಿದೆ. ಪ್ರಸ್ತುತ ರಾಷ್ಟ್ರದಲ್ಲಿ ಧರ್ಮ ಹಾಗೂ ಜಾತಿ ಆಧಾರದಲ್ಲಿ ನೆಲೆಸಿರುವ ವ್ಯತ್ಯಾಸವನ್ನು ಅಳಿಸಬೇಕಿದೆ. ಧರ್ಮಗಳ ಒಳಗೆ ವಿಧಿಸಿರುವ ಕಾನೂನು ಧರ್ಮಕ್ಕಷ್ಟೇ ಸೀಮಿತವಾಗಿರಬೇಕು. ಬದಲಾಗಿ, ದೇಶದ ವ್ಯವಸ್ಥೆಯಲ್ಲಿ ಅನ್ವಯವಾಗಬಾರದು. ಹೀಗಾಗಿ, ಇದನ್ನು ಹೋಗಲಾಡಿಸಿ, ಧರ್ಮಾಧಾರಿತ ಜಾತ್ಯತೀತವನ್ನು ಹೋಗಲಾಡಿಸಲು ಸಿಸಿಸಿ ಅಗತ್ಯವಿದೆ.
- ನ್ಯಾಯಾಂಗದ ಮೇಲಿನ ಹೊರೆಯನ್ನು ಕಡಿತಗೊಳಿಸಲು:
ವಿವಿಧ ಧರ್ಮ ಹಾಗೂ ಜಾತಿ ಆಧಾರದಲ್ಲಿ ನಿಯಮಾವಳಿಗಳನ್ನು ಮಾಡಿಕೊಳ್ಳುವುದರಿಂದ ಉಂಟಾಗುತ್ತಿರುವ ಕಾನೂನು ತೊಡಕುಗಳನ್ನು ಸರಿದೂಗಿಸಿ, ನ್ಯಾಯಾಂಗದ ಮೇಲಿನ ಹೊರೆಯನ್ನು ಕಡಿತಗೊಳಿಸಬಹುದು. ಹಲವು ವೈಯಕ್ತಿಕ ಕಾನೂನುಗಳಲ್ಲಿ ಇರುವಂತಹ ಲೋಪದೋಷಗಳನ್ನು ತೊಡೆದು ಹಾಕಿ, ದೇಶಕ್ಕೆ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿ, ಸಮಾನ ನ್ಯಾಯ ಒದಗಿಸಬಹುದು.
- ಸಮಾನತೆಯನ್ನು ಸಾರಬಹುದು:
ದೇಶದ ಅಭಿವೃದ್ಧಿಗೆ ತೊಡಕಾಗಿರುವ ಅನಿಷ್ಠ ಪದ್ದತಿಗಳನ್ನು ತೊಡೆದು ಹಾಕಿ, ಅಭಿವೃದ್ಧಿಗೆ ಪೂರಕವಾಗಿ ಎಲ್ಲರಿಗೂ ಒಂದೇ ಎಂಬ ನ್ಯಾಯವನ್ನು ಒದಗಿಸಲು ಸಾಧ್ಯ.
- ವೈಯಕ್ತಿಕ ಸಂಹಿತೆಯಿಂದಾಗುವ ತೊಂದರೆ ತಪ್ಪಲಿದೆ
ಧರ್ಮ ರಕ್ಷಣೆ ಹಾಗೂ ಅನುಯಾಯಿಗಳ ರಕ್ಷಣೆ ಹೆಸರಿನಲ್ಲಿ ರೂಪಿಸಲಾಗಿರುವ ಹಲವಾರು ವೈಯಕ್ತಿಕ ಕಾನೂನುಗಳು ವಾಸ್ತವವಾಗಿ, ಆ ಧರ್ಮದ ಅನುಯಾಯಿಗಳಿಗೆ ನಿಜವಾದ ಸ್ವಾತಂತ್ರ್ಯವನ್ನು ಒದಗಿಸಿಲ್ಲ. ಕೆಲವೊಂದು ಧರ್ಮದಲ್ಲಿ ಅದರಲ್ಲೂ ಪ್ರಮುಖವಾಗಿ ಶಾಂತಿಯನ್ನು ಪ್ರತಿಪಾದಿಸುತ್ತೇವೆ ಎಂದು ಹೇಳಿಕೊಳ್ಳುವ ಭಾರತದ ಅಲ್ಪಸಂಖ್ಯಾತ(?)ರಾಗಿರುವ ಧರ್ಮದ ವೈಯಕ್ತಿಕ ಕಾನೂನಿನಿಂದ ಆ ಧರ್ಮೀಯರೇ ಯಾತನೆ ಅನುಭವಿಸುತ್ತಿರುವುದು ಅನೇಕ ಪ್ರಸಂಗಗಳಲ್ಲಿ ಸಾಬೀತಾಗಿದೆ. ಇಂತಹ ಪದ್ದತಿಗಳನ್ನು ತೊಡೆಯಲು ಸಹಕಾರಿ.
- ಮುಸ್ಲಿಂ ಮಹಿಳೆರಿಗೆ ಸಹಕಾರಿ:
ಏಕಪತ್ನಿತ್ವ ಭಾರತೀಯ ಸಂಪ್ರದಾಯದಲ್ಲಿ ನಡೆದುಬಂದ ಧರ್ಮಾತೀತ ವ್ಯವಸ್ಥೆ. ಆದರೆ, ಮುಸ್ಲಿಮರಲ್ಲಿ ಬಹುಪತ್ನಿತ್ವ ಇರುವ ಕಾರಣ, ಆ ಮಹಿಳೆಯರು ಅನ್ಯಾಯಕ್ಕೊಳಗಾಗಿದ್ದಾರೆ ಎನ್ನುವುದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ. ಹೀಗಾಗಿ, ಏಕರೂಪ ನಾಗರಿಕ ಜಾರಿಗೊಳಿಸಿದ್ದೇ ಆದಲ್ಲಿ, ಇಂತಹ ಅನ್ಯಾಯಗಳನ್ನು ತಡೆಗಟ್ಟಬಹುದು. ಇದರೊಂದಿಗೆ ಪ್ರಿತ್ರಾರ್ಜಿತ ಆಸ್ತಿಯಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಹಕ್ಕು ಪಡೆಯುತ್ತಾರೆ. ಯಾವುದೇ ಧರ್ಮ ಏಳ್ಗೆಗೆ ಆ ಧರ್ಮದ ಮಹಿಳಾ ಪ್ರಾತನಿಧ್ಯ ಮುಖ್ಯ. ಹೀಗಾಗಿ, ಈ ಸಂಹಿತೆಯಿಂದ ಸಮಾನ ನ್ಯಾಯ ದೊರಕುವುದು ಸಾಧ್ಯ.
- ವೋಟ್ ಬ್ಯಾಂಕ್ ರಾಜಕಾರಣಕ್ಕೆ ಅಂತ್ಯ ಹಾಡಲಿದೆ
ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಎನ್ನುವ ಅನಿಷ್ಠ ಪದ್ದತಿ ಬೇರೂರಿದೆ. ಇದರ ಪರಿಣಾಮ ದೇಶದ ರಾಜಕೀಯ ಪಕ್ಷಗಳು ಮತಕ್ಕಾಗಿ ಒಂದು ಸಮುದಾಯವನ್ನು ಓಲೈಸುವ, ಅದೇ ಸಮುದಾಯವನ್ನು ಆರೈಕೆ ಮಾಡುವ ಕಾರ್ಯ ಮಾಡುತ್ತಾ, ಮತ್ತೊಂದು ಸಮುದಾಯವನ್ನು ನಿರ್ಲಕ್ಷಿಸುತ್ತಿವೆ. ಏಕರೂಪ ನಾಗರಿಕ ಸಂಹಿತೆ ಜಾರಿಯಾದದ್ದೇ ಆದಲ್ಲಿ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಅಂತ್ಯ ಹಾಡಲು ಸಹಕಾರಿಯಾಗುತ್ತದೆ.
ಇದರ ಅನುಷ್ಠಾನಕ್ಕೆ ಇರುವ ಅಡಚಣೆಗಳು ಯಾವುವು?
- ದೇಶದ ಎಲ್ಲ ನಾಗರಿಕರಿಗೆ ಧರ್ಮ ಹಾಗೂ ಜಾತಿಯನ್ನು ಮೀರಿ ಸಮಾನ ನ್ಯಾಯ ದೊರೆಯಬೇಕು ಎಂಬ ಉದ್ದೇಶದಿಂದ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕಿದೆ.
- ಆದರೆ, ಧರ್ಮ ಹಾಗೂ ಜಾತಿಯನ್ನೇ ಮುಂದು ಮಾಡಿಕೊಂಡು ರಾಜಕೀಯ ಮಾಡುವ ಕೀಳುಮಟ್ಟದ ಸಂಸ್ಕೃತಿಯನ್ನು ಹಿಂದೆಯೇ ರಾಜಕೀಯ ಪಕ್ಷಗಳು ಹುಟ್ಟು ಹಾಕಿದೆ.
- ಪರಿಣಾಮ ವೋಟ್ ಬ್ಯಾಂಕ್ ರಾಜಕಾರಣ ಎಂಬ ವಿಷಜಂತು ಬೃಹದಾಕಾರವಾಗಿ ಬೆಳೆದುನಿಂತಿದೆ.ಹೀಗಾಗಿ, ರಾಜಕೀಯ ಸ್ವಾರ್ಥ ಹಿತಾಸಕ್ತಿಯೇ ಈ ಸಂಹಿತೆ ಜಾರಿಯಾಗದೇ ಇರಲು ಮೂಲ ಕಾರಣ ಎನ್ನಬಹುದು.
- ಪ್ರಮುಖವಾಗಿ ಈ ಸಂಹಿತೆ ಜಾರಿಯಾದರೆ, ವೈಯಕ್ತಿಕ ಕಾನೂನುಗಳು ನಿಷ್ಕ್ರಿಯಗೊಂಡು ಎಲ್ಲರೂ ಒಂದೇ ಕಾನೂನಿನ ಅಡಿ ಒಳಪಡಬೇಕಾಗುತ್ತದೆ. ಇದರಿಂದ ಒಂದು ಧರ್ಮವನ್ನೇ ವೋಟ್ ಬ್ಯಾಂಕನ್ನಾಗಿ ಮಾಡಿಕೊಂಡಿರುವ ಪಕ್ಷಗಳಿಗೆ ರಾಜಕೀಯವಾಗಿ ಹೊಡೆತ ಬೀಳುತ್ತದೆ ಎನ್ನುವುದು ಅವರ…CLICK HERE TO READ MORE