20th JULY
CLICK HERE TO JOIN NIALP FOUNDATION COURSE-2019
1.ನೆಲ್ಸನ್ ಮಂಡೇಲಾ ಇಂಟರ್ ನ್ಯಾಷನಲ್ ಡೇ
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಪರೀಕ್ಷೆಗಾಗಿ – ನೆಲ್ಸನ್ -ಮಂಡೇಲಾ ದಿನದ ಬಗ್ಗೆ .
ಮುಖ್ಯ ಪರೀಕ್ಷೆಗಾಗಿ – ನೆಲ್ಸನ್ ಮಂಡೇಲಾ ರವರ ಪರಂಪರೆ ಮತ್ತು ಅವರ ಸಾಧನೆಗಳೇನು ?
ಪ್ರಮುಖ ಸುದ್ದಿ
- ದಕ್ಷಿಣ ಆಫ್ರಿಕಾದ ಗಾಂಧಿ ಎಂದೇ ಪ್ರಸಿದರಾಗಿದ್ದ ನೆಲ್ಸನ್ ಮಂಡೇಲ ನೂರನೇ ವರ್ಷದ ಜನ್ಮ ದಿನವನ್ನು 07.2018 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
- ವರ್ಣಭೇದ ನೀತಿ ವಿರುದ್ದ ಹೋರಾಡಿ ಕರಿಯ ಜನಾಂಗದವರನ್ನು ಮುಖ್ಯ ವಾಹಿನಿಗೆ ತಂದು ನಿಲ್ಲಿಸಿದ ವರು.
ಮುಖ್ಯ ಅಂಶಗಳು
- 2009ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನೆಲ್ಸನ್ ಮಂಡೇಲ ಅವರು ಹುಟ್ಟಿದ ದಿನವಾದ ಜುಲೈ 18ನ್ನು ನೆಲ್ಸನ್ ಮಂಡೇಲಾ ಇಂಟರ್ ನ್ಯಾಷನಲ್ ಡೇಯನ್ನಾಗಿ ಆಚರಿಸಬೇಕೆಂದು ಘೋಷಿಸಲಾಯಿತು. 2010 ಜುಲೈ 18ರಂದು ವಿಶ್ವಸಂಸ್ಥೆ ಮೊದಲ ಬಾರಿಗೆ ಈ ದಿನವನ್ನು ಆಚರಿಸಿತು.
ನೆಲ್ಸನ್ ಮಂಡೇಲ ಅವರ ಬಗ್ಗೆ
- ನೆಲ್ಸನ್ ಮಂಡೇಲ 1918 ಜುಲೈ 18ರಂದು ದಕ್ಷಿಣ ಆಫ್ರಿಕಾದ ಉಮಾಟ್ಟಾ ಜಿಲ್ಲೆಯ ಮವೆಜೋ ಎಂಬ ಸಣ್ಣಹಳ್ಳಿಯಲ್ಲಿ ಜನಿಸಿದರು. ಮಂಡೇಲರ ಮೊದಲ ಹೆಸರು ರೋಲಿಲ್ಹಾಲ್ಹಾ ಮಂಡೇಲ, ಇವರ ತಾಯಿ ರೈಟ್ ಹ್ಯಾಂಡ್ ಹೌಸ್ ರಾಜ ಪರಂಪರೆಗೆ ಸೇರಿದವರಾಗಿದ್ದರಿಂದ ಬಾಲ್ಯವನ್ನು ಅಲ್ಲಿಯೇ ಕಳೆದರು.
- ರೋಲಿಲ್ಹಾಲ್ಹಾ ಎಂಬ ಹೆಸರನ್ನು ಸುಲಭವಾಗಿ ಉಚ್ಚರಿಸಲಾಗದೆ ಅವರಿಗೆ ನೆಲ್ಸನ್ ಎಂದು ಹೆಸರಿಟ್ಟವರು ಶಾಲಾ ಶಿಕ್ಷಕಿ ಮಿಸ್ ಮೆಡಿಂಗಾನೆ.ಕಾನೂನು ವಿಷಯದಲ್ಲಿ ಯೂನಿವರ್ಸಿಟಿ ಆಫ್ ಲಂಡನ್ ಎಕ್ಸ್ಟರ್ನಲ್ ಪ್ರೋಗ್ರಾಮ್‌ನಿಂದ ಪದವಿ ಪಡೆದರು.
- ಆಫ್ರಿಕನರ ಶಾಂತಿಗೆ ಭಂಗ ತರುವ ಪ್ರಚೋದನಕಾರಿ ಹೋರಾಟದಲ್ಲಿ ತೊಡಗಿದ್ದಾರೆಂಬ ಆಪಾದನೆ ಮೇಲೆ ಮಂಡೇಲರನು 1956 ಡಿಸೆಂಬರ್ 5ರಂದು ಬಂಧಿಸಿ, 27 ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು.
- ವರ್ಣಭೇದ ನೀತಿ ವಿರುದ್ದ ಮಂಡೇಲಾ ನಡೆಸಿದ್ದ ಹೋರಾಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದರಿಂದ 1990 ಫೆಬ್ರವರಿ 11ರಂದು ಅವರನ್ನು ಬಿಡುಗಡೆ ಮಾಡಲಾಯಿತು. ನಂತರ ಅವರು ಕರಿಯ ಜನಾಂಗದವರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಹೋರಾಟ ನಡೆಸಿದರು.
- ಮಂಡೇಲರಿಗೆ 1993ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ದೊರೆತಿದೆ. ಇದಲ್ಲದೆ 250 ಕ್ಕೂ ಹೆಚ್ಚು ಪ್ರಶಸ್ತಿಗಳು ದೊರೆತಿವೆ.
- ಇವರು ತಮ್ಮ ಆತ್ಮ ಚರಿತ್ರೆ ಲಾಂಗ್ ವಾಕ್ ಟು ಫ್ರೀಡಂ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.
- ಮಂಡೇಲರಿಗೆ ಭಾರತದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಭಾರತ ರತ್ನ ಪ್ರಶಸ್ತಿಯನ್ನು 1990ರಲ್ಲಿ ನೀಡಿ ಗೌರವಿಸಲಾಯಿತು.
ಭಾರತದೊಂದಿಗೆ ಇವರ ಸಂಬಂಧ:
- ಮಂಡೇಲ ಅವರು ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿ ವಿರುದ್ಧ ಹೋರಾಡುತ್ತಾ ಜೈಲು ಪಾಲಾಗಿದ್ದ ವೇಳೆ 1967ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಮಿಷನ್ ಸ್ಥಾಪನೆಗೊಂಡಿತು.
- ಕಚಾಲಿಯಾ ಇದರ ನೇತೃತ್ವ ವಹಿಸಿದ್ದರು. ಇಂದಿರಾಗಾಂಧಿ ಸೇರಿದಂತೆ ಅನೇಕ ಮಂದಿ ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು.
2.ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ ( ICAI)
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಪರೀಕ್ಷೆಗಾಗಿ – ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ ಬಗ್ಗೆ
ಮುಖ್ಯ ಪರೀಕ್ಷೆಗಾಗಿ -ಐ.ಸಿ.ಎ.ಐ.ಸ್ಥಳೀಯ ರಾಷ್ಟ್ರೀಯ ಸಾಮರ್ಥ್ಯವರ್ಧನೆಗೆ ಹೇಗೆ ನೆರವಾಗುತ್ತದೆ?
ಪ್ರಮುಖ ಸುದ್ದಿ
- ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಲೆಕ್ಕಪತ್ರ, ಹಣಕಾಸು ಮತ್ತು ಲೆಕ್ಕಪರಿಶೋಧನೆಯ ಜ್ಞಾನನೆಲೆಯನ್ನು ಬಹರೇನೊಳಗೆ ಬಲಪಡಿಸಲು ಒಗ್ಗೂಡಿ ಶ್ರಮಿಸುವ ಸಲುವಾಗಿ ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ ಮತ್ತು ಬಹರೇನ್ ನ ಬ್ಯಾಂಕಿಂಗ್ ಮತ್ತು ಹಣಕಾಸು ಬಹರೇನ್ ಸಂಸ್ಥೆ (ಬಿಐಬಿಎಫ್) ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.
ಪ್ರಮುಖ ಅಂಶಗಳು
- ಲೆಕ್ಕಶಾಸ್ತ್ರ ಮತ್ತು ಹಣಕಾಸಿಗೆ ಸಂಬಂಧಿಸಿದಂತೆ ಬಿಐಬಿಎಫ್.ನ ಪ್ರಸಕ್ತ ಪಠ್ಯಕ್ರಮವನ್ನು ಪರಾಮರ್ಶಿಸಿ ಬಿಐಬಿಎಫ್.ಗೆ ಐ.ಸಿ.ಎ.ಐ. ತಾಂತ್ರಿಕ ನೆರವು ಒದಗಿಸಲಿದೆ;
- ಐ.ಸಿ.ಎ.ಐ. ತನ್ನ ಸಿಎ ಕೋರ್ಸ್ ಪಠ್ಯಕ್ರಮವನ್ನು ಪರಿಚಯಿಸುವಂತೆ ಶಿಫಾರಸು ಮಾಡಲಿದ್ದು, ಅದು ಐಸಿಎಐನ ಸದಸ್ಯತ್ವವನ್ನು ಪಡೆದುಕೊಳ್ಳಲು ಇಚ್ಛಿಸುವ ಬಿಐಬಿಎಫ್ ವಿದ್ಯಾರ್ಥಿಗಳಿಗೆ ಐಸಿಎಐ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸುತ್ತದೆ;
- ಐ.ಸಿ.ಎ.ಐ. ವೃತ್ತಿಪರ ಪರೀಕ್ಷೆಯನ್ನು ನಡೆಸಲು ಅರ್ಹ ಬಿಐಬಿಎಫ್ ವಿದ್ಯಾರ್ಥಿಗಳಿಗೆ ಐ.ಸಿ.ಎ.ಐ. ತಾಂತ್ರಿಕ ನೆರವು ಒದಗಿಸುತ್ತದೆ.
- ಈ ತಿಳಿವಳಿಕೆ ಒಪ್ಪಂದವು ಐ.ಸಿ.ಎ.ಐ. ಸದಸ್ಯರಿಗೆ ತಮ್ಮ ವೃತ್ತಿಯ ದಿಗಂತವನ್ನು ವಿಸ್ತರಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ ಮತ್ತು ಜೊತೆ ಜೊತೆಗೆ ಐ.ಸಿ.ಎ.ಐ. ಸ್ಥಳೀಯ ರಾಷ್ಟ್ರೀಯ ಸಾಮರ್ಥ್ಯವರ್ಧನೆಗೆ ನೆರವಾಗುವ ಒಂದು ಘಟಕವಾಗಿ ಪರಿಣಮಿಸುತ್ತದೆ.
- ಸದಸ್ಯರು, ವಿದ್ಯಾರ್ಥಿಗಳು ಮತ್ತು ಅವರ ಸಂಘಟನೆಗಳ ಹಿತಾಸಕ್ತಿಯಲ್ಲಿ ಪರಸ್ಪರ ಲಾಭದಾಯಕ ಸಂಬಂಧವನ್ನು ಬೆಳೆಸಲು ಒಟ್ಟಾಗಿ ಕೆಲಸ ಮಾಡುವುದು ಇದರ ಗುರಿಯಾಗಿದೆ.
ಇದರ ಫಲಾನುಭವಿಗಳು ಯಾರು ?
- ಬಹರೇನ್ ಸ್ಥಳೀಯ ವೃತ್ತಿಪರ ಲೆಕ್ಕಶಾಸ್ತ್ರ ಸಂಸ್ಥೆಯನ್ನು ಹೊಂದಿಲ್ಲದ ಕಾರಣ ಮತ್ತು ಬಿಐಬಿಎಫ್.ನೊಂದಿಗೆ ಐ.ಸಿ.ಎ.ಐ ಸಹಯೋಗ ಹೊಂದಿರುವುದರಿಂದ ಪ್ರಸ್ತುತ ಬಹರೇನಿ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಆ ದೇಶಕ್ಕೆ ತೆರಳಲು ಇಂಗಿತ ಹೊಂದಿರುವವರಿಗೆ ಇದು ಧನಾತ್ಮಕವಾಗಿ ಸುಲಭವಾಗಲಿದೆ.
- ಬಹರೇನ್ ಗೆ ಐ.ಸಿ.ಎ.ಐ. ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ನಂಬಿಕೆಯಿಟ್ಟಿದ್ದು, ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಕಾರ್ಯಕ್ಷಮತೆಯ ಕ್ಷೇತ್ರದಲ್ಲಿ ತನ್ನ ಪ್ರಜೆಗಳಿಗೆ ಉತ್ತೇಜಿಸುವ ಮತ್ತು ಅಭಿವೃದ್ಧಿಪಡಿಸುವಲ್ಲಿ ಐಸಿಎಐನ ಸಹಾಯವನ್ನು ಅಪೇಕ್ಷಿಸುತ್ತದೆ, ಇದು ಕ್ರಮೇಣ ಕೌಶಲ್ಯಕ್ಕೆ ದಾರಿ ಮಾಡಿಕೊಟ್ಟು, ಸಮರ್ಥವಾದ ಲೆಕ್ಕಪತ್ರ ವೃತ್ತಿಪರರ ನೆಲೆಯನ್ನು ಹಂತ ಹಂತವಾಗಿ ಹೆಚ್ಚಿಸುತ್ತದೆ.
BACK TO BASICS
ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ ಬಗ್ಗೆ
- ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ (ಐ.ಸಿ.ಎ.ಐ.) ಭಾರತೀಯ ಸಂಸತ್ತಿನಲ್ಲಿ ಅನುಮೋದನೆಗೊಂಡ ಕಾಯಿದೆಯಡಿ ಸ್ಥಾಪಿತವಾದ ಶಾಸನಾತ್ಮಕ ಸಂಸ್ಥೆಯಾಗಿದ್ದು, ಭಾರತದಲ್ಲಿ ಚಾರ್ಟರ್ಡ್ ಅಕೌಂಟೆಂಟರುಗಳ ಕಾಯಿದೆ 1949 ಚೌರ್ಟರ್ಡ್ ಅಕೌಂಟೆನ್ಸಿ ವೃತ್ತಿಪರರನ್ನು ನಿಯಂತ್ರಿಸುತ್ತದೆ.
- ಬಹರೇನ್ ಸಂಸ್ಥಾನದಲ್ಲಿ ಮಾನವ ಸಂಪನ್ಮೂಲದ ತರಬೇತಿ ಮತ್ತು ಅಭಿವೃದ್ಧಿಗಾಗಿ ಬಹರೇನ್ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆ (ಬಿಐಬಿಎಫ್) ಅನ್ನು 1981ರಲ್ಲಿ ಸ್ಥಾಪಿಸಲಾಗಿದೆ.
3.ಗಂಗೆ ಸ್ಥಿತಿ ವಿಷಮ: ಎನ್‌ಜಿಟಿ ತರಾಟೆ
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಪರೀಕ್ಷೆಗಾಗಿ– ಗಂಗ ನದಿಯ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಬಗ್ಗೆ
ಮುಖ್ಯ ಪರೀಕ್ಷೆಗಾಗಿ -ಗಂಗಾನದಿ ಪುನಶ್ಚೇತನ ವಿಳಂಬ ಪ್ರಕ್ರಿಯೆಗೆ ಕಾರಣಗಳೇನು ?ಸರಕಾರದ ಮುಂದಿರುವ ಸಾಲುಗಳೇನು ?
ಪ್ರಮುಖ ಸುದ್ದಿ
- ಗಂಗಾನದಿ ಪುನಶ್ಚೇತನ ವಿಳಂಬ ಪ್ರಕ್ರಿಯೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ(ಎನ್‌ಜಿಟಿ), ಪ್ರಸ್ತುತ ಗಂಗಾನದಿ ಪರಿಸ್ಥಿತಿ ಸಾಕಷ್ಟು ವಿಷಮವಾಗಿದೆ ಶುದ್ಧೀ ಕರಣಕ್ಕೆ ಯಾವುದಾರೂ ಪರಿಣಾಮಕಾರಿ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದೆ.
ಮುಖ್ಯ ಅಂಶಗಳು
- ಗಂಗಾ ಪುನಶ್ಚೇತನಕ್ಕೆ ಪ್ರಾಧಿಕಾರ ಕೈಗೊಂಡಿರುವ ಸುಧಾರಣೆ ಕ್ರಮಗಳು ಸಾಲದ್ದಾಗಿದೆ. ಗಂಗಾನದಿ ಮಾಲಿನ್ಯ ಸಂಬಂಧ ಜನಸಾಮಾನ್ಯ ರಿಂದ ಅಭಿಪ್ರಾಯ ಸಂಗ್ರ ಹಿಸಲು ಸರ್ವೆ ನಡಸಬೇಕು. ಈ ಕುರಿತು ಸಲಹೆ ಸೂಚನೆ ಪಡೆಯಬೇಕು ಎಂದು ತಾಕೀತು ಮಾಡಿದೆ.
- ಗಂಗಾನದಿ ಶುದ್ಧೀಕರಣಕ್ಕಾಗಿ ಕೇಂದ್ರ ಸರ್ಕಾರ 7 ಸಾವಿರ ಕೋಟಿ ರೂ. ವ್ಯಯಿಸಿದೆ.
ಗಂಗಾನದಿ ಬಗ್ಗೆ
- ಪಶ್ಚಿಮ ಬಂಗಾಳದ ಚಂದನ್‌ನಗರ ಗಂಗಾನದಿಯ ಉಪನದಿ ಹೂಗ್ಲಿಯ ದಂಡೆಯ ಪ್ರೆಂಚರ ಕಾಲದ ಕಾಲನಿ. ಪಟ್ಟಣದ ಪ್ರವಾಸಿ ಆಕರ್ಷಣೆಯ ಕೇಂದ್ರವಾದ ವಂಡರ್‌ಲ್ಯಾಂಡ್ ಉದ್ಯಾನವನದಲ್ಲಿ ಇರುವ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದ ಸಾಮರ್ಥ್ಯ ದ್ವಿಗುಣಗೊಂಡಿದೆ.
- ಹಿಂದೂ ಶಿಲ್ಪಗಳು ಇರುವ ಈ ಹಸಿರು ಹೊದ್ದ ಉದ್ಯಾನವನದಲ್ಲಿ ನಿಧಾನವಾಗಿ ಫಿಲ್ಟರ್‌ಗಳು, ತ್ಯಾಜ್ಯಪೈಪ್‌ಗಳು ಹೆಚ್ಚುತ್ತಿವೆ. ಆಕರ್ಷಕ ಪರಿಸರ ಇದರ ಇತಿಮಿತಿಗಳನ್ನು ಮುಚ್ಚಿಹಾಕಿದೆ. ಗಂಗೆಯನ್ನು ಸ್ವಚ್ಛಗೊಳಿಸುವ ಸರಕಾರದ ಒತ್ತಾಸೆಯ ಹಿನ್ನೆಲೆಯಲ್ಲಿ ನಿರ್ಮಾಣವಾಗಿರುವ ಈ ಘಟಕ ನಗರದ ದ್ರವ ತ್ಯಾಜ್ಯದ ಶೇಕಡ 10ರಷ್ಟನ್ನು ಮಾತ್ರ ಇದು ಸಂಸ್ಕರಿಸುತ್ತದೆ. ಬಹುತೇಕ ಮನೆಗಳು ಇನ್ನೂ ಒಳಚರಂಡಿ ಸಂಪರ್ಕ ಪಡೆದಿಲ್ಲ.
- ಆದ್ದರಿಂದ ಸಂಸ್ಕರಿಸದ ಕಚ್ಚಾ ಮಲಿನ ನೀರು ಪವಿತ್ರ ಗಂಗೆಗೆ ನೇರವಾಗಿ ಹರಿಯುತ್ತದೆ.
ಮಾಲಿನ್ಯಕ್ಕೆ ಕಾರಣಗಳು ? ಅದರ ಪರಿಣಾಮ ಗಳೇನು ?
- ಕೊಲ್ಕತ್ತಾ ನಗರದ ಉತ್ತರಭಾಗ ಗಂಗೆಯ ಅತ್ಯಂತ ಮಲಿನ ಪ್ರದೇಶ. ಆದರೆ ವಾರಣಾಸಿಯ ಆಕರ್ಷಕ ಘಾಟ್‌ಗಳಂತೆ ಅಥವಾ ಕಾನ್ಪುರದ ವಿಷಕಾರಿ ಟ್ಯಾನರಿಗಳಂತೆ ಈ ಪ್ರದೇಶ ಗಮನ ಸೆಳೆದಿಲ್ಲ. ಗಂಗಾನದಿ ದಂಡೆಯ ನೂರಾರು ಪಟ್ಟಣಗಳಿಂದ ಪ್ರತಿದಿನ 700 ಕೋಟಿ ಲೀಟರ್‌ನಷ್ಟು ಕಚ್ಚಾ ತ್ಯಾಜ್ಯನೀರನ್ನು ಗಂಗೆಗೆ ನೇರವಾಗಿ ಹಾಗೂ ಉಪನದಿಗಳ ಮೂಲಕ ಹರಿಸಲಾಗುತ್ತದೆ.
- ಈ ಪೈಕಿ ಅರ್ಧದಷ್ಟು ಪಶ್ಚಿಮ ಬಂಗಾಳದಿಂದ ಬರುತ್ತದೆ ಎಂದು ಪಶ್ಚಿಮ ಬಂಗಾಳದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಕಲ್ಯಾಣ್ ರುದ್ರ ಹೇಳುತ್ತಾರೆ. ಸ್ವತಃ ಜಲತಜ್ಞರೂ ಆಗಿರುವ ಇವರು ಹಲವು ವರ್ಷಗಳಿಂದ ನದಿಯ ಸ್ಥಿತಿಗತಿಯನ್ನು ಅಧ್ಯಯನ ಮಾಡುತ್ತಿದ್ದಾರೆ.
- ಪಶ್ಚಿಮ ಬಂಗಾಳ ಗಂಗಾನದಿ ಪಾತ್ರಕ್ಕೆ ಒಟ್ಟು ಶೇಕಡ 48ರಷ್ಟು ಮಲಿನ ನೀರನ್ನು ಹರಿಸುತ್ತದೆ. ಶೇಕಡ 42ರಷ್ಟು ನೀರನ್ನು ಮಾತ್ರ ಸಂಸ್ಕರಿಸುತ್ತಿದ್ದು, 54 ಚರಂಡಿಗಳ 1,779 ದಶಲಕ್ಷ ಲೀಟರ್ ನೀರನ್ನು ಸಂಸ್ಕರಿಸದೇ ನೇರವಾಗಿ ಗಂಗೆಯ ಒಡಲಿಗೆ ಹರಿಸುತ್ತಿದೆ. ವಾಸ್ತವವಾಗಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಹಿಮಾಲಯದ ಹಿಮನದಿಗಳಿಂದ ಗಂಗೆ ಸುಮಾರು 2,500 ಕಿಲೋಮೀಟರ್ ಬಯಲು ಪ್ರದೇಶದಲ್ಲಿ ಹರಿದು ಬಂಗಾಳಕೊಲ್ಲಿ ಸೇರುತ್ತದೆ. ನದಿಯನ್ನು ಅವಲಂಬಿಸಿರುವ ಸುಮಾರು 50 ಕೋಟಿ ಮಂದಿಯಿಂದ ವಿಷಕಾರಿ ತ್ಯಾಜ್ಯಗಳನ್ನು ಒಡಲಿಗೆ ತುಂಬಿಕೊಂಡು ಸಾಗುವ ಗಂಗೆ ವಿಶ್ವದ ಅತ್ಯಂತ ಮಲಿನ ನದಿ ಎನಿಸಿಕೊಂಡಿದ್ದಾಳೆ.
- ಕೇಂದ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ಗಂಗಾನದಿ ದಂಡೆಯಲ್ಲಿ ಉತ್ಪಾದನೆಯಾಗುವ ಹತ್ತನೆ ಒಂದರಷ್ಟು ತ್ಯಾಜ್ಯ ನೀರನ್ನು ಮಾತ್ರ ಸಂಸ್ಕರಿಸಲಾಗುತ್ತದೆ.
- ಸಂಸ್ಕರಿಸದ ತ್ಯಾಜ್ಯ ನೀರು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇದು ನದಿಯ ಮಾಲಿನ್ಯಕಾರಕ ಅಂಶಗಳ ಪೈಕಿ ಶೇ. 85ರಷ್ಟು ಕೊಡುಗೆ ನೀಡುತ್ತಿದೆ. ಉಳಿದಂತೆ ಕೈಗಾರಿಕೆಗಳ ಘನ ಲೋಹಗಳು, ಕೃಷಿ ಕ್ಷೇತ್ರದ ಕೀಟನಾಶಕಗಳು, ಘನ ತ್ಯಾಜ್ಯ, ಮೃತದೇಹ ಹಾಗೂ ಜಾನುವಾರುಗಳ ಕಳೇಬರದಿಂದ ಮಲಿನವಾಗುತ್ತಿದೆ.
- ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, 100 ಮಿಲಿಲೀಟರ್ ನೀರಿನಲ್ಲಿ 60 ಲಕ್ಷ ಫೀಕಲ್ ಕೋಲಿಾರ್ಮ್ ಬ್ಯಾಕ್ಟೀರಿಯಾ ಕಂಡುಬರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದ ಪ್ರಕಾರ, 100 ಮಿಲಿಲೀಟರ್ ನೀರಿನಲ್ಲಿ ಗರಿಷ್ಠ 1,000 ಇಂಥ ಬ್ಯಾಕ್ಟೀರಿಯಾ ಇರಬಹುದು. ಈ ಸಮಸ್ಯೆ ಹೆಚ್ಚಿನ ಕಡೆಗಳಲ್ಲಿ ಕಂಡುಬರುತ್ತದೆ. ಕೇಂದ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ 2013ರ ವರದಿಯಲ್ಲಿ, ಇಡೀ ಗಂಗಾನದಿಯಲ್ಲಿ ಸ್ವೀಕಾರಾರ್ಹವಲ್ಲದ ಪ್ರಮಾಣದ ಬ್ಯಾಕ್ಟೀರಿಯಾ ಕಂಡುಬರುತ್ತಿದೆ. ಹಿಂದೂ ಯಾತ್ರಿಕರು ಪವಿತ್ರ ಸ್ಥಳವೆಂದು ಭೇಟಿ ನೀಡುವ ಗಂಗೆಯ ಮೇಲ್ಭಾಗದ ಪಟ್ಟಣಗಳ ಹೃಷಿಕೇಶ, ಹರಿದ್ವಾರಗಳಲ್ಲೂ ಇದೇ ಪರಿಸ್ಥಿತಿ ಇದೆ ಎಂದು ವಿವರಿಸಿದೆ.
- ‘‘ಪಶ್ಚಿಮ ಬಂಗಾಳ ರಾಜ್ಯಕ್ಕೇ ಸೀಮಿತವಾಗಿ ತ್ಯಾಜ್ಯನೀರು ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ 13,467 ಕೋಟಿ ರೂಪಾಯಿ ಬೇಕು ಹಾಗೂ ಪ್ರತಿ ವರ್ಷ ನಿರ್ವಹಣೆಗೆ 100 ಕೋಟಿ ರೂಪಾಯಿ ಬೇಕು’’ ಎಂದು ರುದ್ರ ಅಂದಾಜು ಮಾಡುತ್ತಾರೆ. ‘‘ಇಷ್ಟೊಂದು ಪ್ರಮಾಣದ ಹಣ ರಾಜ್ಯ ಸರಕಾರದಲ್ಲಿಲ್ಲ.
- ಹಿಂದೆ ಕೇಂದ್ರ ಸರಕಾರ ಗಂಗಾನದಿ ಹರಿಯುವ ಎಲ್ಲ ಪ್ರದೇಶಗಳ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುದಾನ ನೀಡುತ್ತಿತ್ತು. ಇದೀಗ ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಯೋಜನೆಯಡಿ, ಈ ಹೊಣೆಯನ್ನು ಹಣವಿಲ್ಲದ ರಾಜ್ಯ ಸರಕಾರಗಳಿಗೆ ವಹಿಸಲಾಗಿದೆ’’ ಎನ್ನುವುದು ಅವರ ವಿಶ್ಲೇಷಣೆ.
- ಪಶ್ಚಿಮ ಬಂಗಾಳ ಈಗಾಗಲೇ 95 ಅತಿಮಾಲಿನ್ಯಕಾರಕ ಕೈಗಾರಿಕೆಗಳನ್ನು ಮುಚ್ಚಿದೆ. ಉತ್ತರ ಪ್ರದೇಶದಲ್ಲಿ ಇಂಥ 94 ಕೈಗಾರಿಕೆಗಳನ್ನು ಮುಚ್ಚಲಾಗಿದೆ. ಆದರೆ ಇದರಿಂದ ದೊಡ್ಡ ಬದಲಾ ವಣೆಯೇನೂ ಆಗಿಲ್ಲ. ಕೊಲ್ಕತ್ತಾದಿಂದ ಭಾಗೀರಥಿ-ಹೂಗ್ಲಿವರೆಗೆ ಗಂಗಾನದಿ ದಂಡೆಯಲ್ಲಿ ಪ್ರಯಾಣ ಬೆಳೆಸಿದರೆ, ಬಾಳೆತೋಟದ ನಡುವೆ ಸರಣಿಯೋಪಾದಿಯಲ್ಲಿ ಅಕ್ರಮ ಗುಡಿ ಕೈಗಾರಿಕೆಗಳು, ಇಟ್ಟಿಗೆ ಭಟ್ಟಿಗಳು, ಕಲ್ಲಿದ್ದಲು ಉರಿಸುವ ವಿದ್ಯುತ್ ಸ್ಥಾವರಗಳು ನದಿಗೆ ತ್ಯಾಜ್ಯ ನೀರನ್ನು ಹರಿಸುವ ದೃಶ್ಯಗಳು ಕಂಡುಬರುತ್ತವೆ. ಮರಳು ಗಣಿಗಾರಿಕೆಗಾಗಿ ನದಿದಂಡೆಯ ಇಕ್ಕೆಲಗಳನ್ನು ಬರಿದು ಮಾಡುತ್ತಿದ್ದಾರೆ.
- ಆದರೆ ವಾಸ್ತವವಾಗಿ ಕೈಗಾರಿಕೆ ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳತ್ತ ಗಮನ ಹರಿಸಿರುವ ಪರಿಕಲ್ಪನೆಯೇ ತಪ್ಪುದಾರಿಗೆ ಎಳೆಯುವಂಥದ್ದು. ನದಿಪಾತ್ರದುದ್ದಕ್ಕೂ ಎಸ್‌ಟಿಪಿಗಳನ್ನು ನಿರ್ಮಿಸದಿರುವುದು ಅಥವಾ ಇವುಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸದಿರುವುದು ಸಮಸ್ಯೆಯಲ್ಲ. ಇಡೀ ಕ್ರಿಯಾಯೋಜನೆಯಂತೆ ನದಿಯುದ್ದಕ್ಕೂ ಇಂಥ ಘಟಕಗಳು ನಿರ್ಮಾಣವಾಗಿ, ಒಳಚರಂಡಿ ಸೌಲಭ್ಯ ಕಲ್ಪಿಸಿದರೂ, ಗಂಗೆ ಮಾಲಿನ್ಯ ಮುಕ್ತವಾಗುವುದಿಲ್ಲ. ಏಕೆಂದರೆ ಹಾಲಿ ಇರುವ ಸಂಸ್ಕರಣಾ ಘಟಕಗಳು ಫೀಕಲ್ ಕೋಲಿಾರಂಗಳನ್ನು ತೆಗೆಯಲು ಅಗತ್ಯವಾದ ಆಧುನಿಕ ತಂತ್ರಜ್ಞಾನವನ್ನು ಹೊಂದಿಲ್ಲ.
- 1980ರ ದಶಕದಲ್ಲಿ ಕೇಂದ್ರದ ನೆರವಿನಲ್ಲಿ ನಿರ್ಮಾಣವಾದ ಈ ಘಟಕಗಳು ಜೈವಿಕ ಆಮ್ಲಜನಕ ಬೇಡಿಕೆಯ ಹಿನ್ನೆಲೆಯಲ್ಲಿ ನಿರ್ಮಾಣಗೊಂಡಿದ್ದು, ಘನ ತ್ಯಾಜ್ಯಗಳನ್ನು ಬೇರ್ಪಡಿಸುವ ತಂತ್ರಜ್ಞಾನ ಹೊಂದಿವೆಯೇ ವಿನಃ ಚರಂಡಿ ನೀರಿನ ಕಲ್ಮಶಗಳನ್ನು ಬೇರ್ಪಡಿಸುವ ಸಾಮರ್ಥ್ಯ ಹೊಂದಿಲ್ಲ.
- ಸಮಸ್ಯೆಯ ಮೂಲ ಇರುವುದು ಗಂಗೆಯ ಹರಿವಿನಲ್ಲಿ. ನದಿಯ ಶೇಕಡ 90ರಷ್ಟು ನೀರನ್ನು ಅದು ಅರ್ಧಮಟ್ಟಕ್ಕೆ ಹರಿಯುವಾಗ ಅಂದರೆ ಕಾನ್ಪುರ ತಲುಪುವ ಮೊದಲೇ ಕೃಷಿ ಉದ್ದೇಶಕ್ಕೆ ತಿರುಗಿಸಲಾ ಗುತ್ತದೆ. ಈ ಕಾರಣದಿಂದ ಇದು ಮಾಲಿನ್ಯವನ್ನು ತೆಗೆಹಾಕಲು ಅಥವಾ ವಿಷಕಾರಿ ಅಂಶವನ್ನು ದುರ್ಬಲಗೊಳಿಸುವ ಅವಕಾಶವೇ ಇಲ್ಲ. ನದಿಯ ನೈಸರ್ಗಿಕ ಹರಿವನ್ನು ಪುನರ್ ಸ್ಥಾಪಿಸುವ ಅಗತ್ಯವನ್ನು ತಜ್ಞರೂ ಒಪ್ಪಿಕೊಳ್ಳುತ್ತಾರೆ. ಆದರೆ ಜಲವಿದ್ಯುತ್ ಯೋಜನೆಗಾಗಿ ಅಣೆಕಟ್ಟುಗಳನ್ನು ಹಲವೆಡೆ ನಿರ್ಮಿಸಿ, ಮುಕ್ತ ಹರಿವನ್ನು ತಡೆಯಲಾಗುತ್ತಿದೆ.
- ಈ ವರ್ಷ ನದಿ ನೀರಿನ ಮಟ್ಟ ತೀರಾ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ರಾಕ್ಕ ಕಲ್ಲಿದ್ದಲು ಆಧರಿತ ಉಷ್ಣವಿದ್ಯುತ್ ಘಟಕ ಉತ್ಪಾದನೆ ಸ್ಥಗಿತಗೊಳಿಸಬೇಕಾಯಿತು. ಏಕೆಂದರೆ ಕಲ್ಲಿದ್ದಲು ತರುವ ನಾವೆಗಳು ನದಿ ದಾಟುವಷ್ಟೂ ನೀರು ಇರಲಿಲ್ಲ. ನದಿಪಾತ್ರದ ಎಲ್ಲ ಪ್ರದೇಶಗಳಲ್ಲಿ ಅಂತರ್ಜಲವನ್ನು ಕೃಷಿ ಉದ್ದೇಶಕ್ಕೆ ಮೇಲೆತ್ತಿ ಹರಿಸುವ ಕಾರಣದಿಂದ, ನದಿ ಮಟ್ಟ ಗಣನೀಯವಾಗಿ ಕುಸಿದಿತ್ತು. ಇದಕ್ಕಿಂತ ಹೆಚ್ಚಾಗಿ ಉತ್ತರಾಖಂಡದ ಗಂಗೋತ್ರಿ ಹಿಮಕಾಲುವೆ ವರ್ಷಕ್ಕೆ 20 ಮೀಟರ್‌ನಷ್ಟು ಕಡಿಮೆಯಾಗುತ್ತಿರುವುದರಿಂದ ನದಿ ಹರಿವಿನ ಪ್ರಮಾಣ ಕುಸಿದಿದೆ. ಆದರೆ ಗಂಗಾ ಕ್ರಿಯಾಯೋಜನೆಯ ಹೊಸ ಅವತರಣಿಕೆ ನದಿ ಹರಿವನ್ನು ಸುಧಾರಿಸುವ ಯಾವ ಯೋಜನೆಯನ್ನೂ ಒಳಗೊಂಡಿಲ್ಲ ಎಂದು ಪರಿಸರವಾದಿಗಳು ಅಭಿಪ್ರಾಯಪಡುತ್ತಾರೆ.
- ಈ ನೀರನ್ನೇ ಜನ ಕುಡಿಯಲು, ಸ್ನಾನಕ್ಕೆ ಮತ್ತು ಬಟ್ಟೆ ತೊಳೆಯಲು ಬಳಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ನದಿಗೆ ಸ್ವಯಂ ಪರಿಶುದ್ಧಗೊಳಿಸಿಕೊಳ್ಳುವ ಗುಣವಿದೆ ಎಂಬ ನಂಬಿಕೆ ಪ್ರಬಲವಾಗಿದ್ದರೂ, ವಿಷಕಾರಿ ಅಂಶಗಳು ರೋಗದ ಅಪಾಯವನ್ನು ಹರಡುತ್ತಲೇ ಇವೆ. ದೇಶದಲ್ಲಿ ಮೃತಪಡುತ್ತಿರುವ ಐದು ವರ್ಷಕ್ಕಿಂತ ಕೆಳಗಿನ ಪ್ರತಿ ಮೂರು ಮಕ್ಕಳ ಪೈಕಿ ಒಂದು ಮಗು ಅತಿಸಾರಕ್ಕೆ ಬಲಿಯಾಗುತ್ತಿದೆ. ಪರಾವಲಂಬಿ ಜೀವಿಯ ಸೋಂಕಿನಿಂದ ಉಂಟಾಗುವ ಭೇದಿಗೆ ಅಸಂಖ್ಯಾತ ಮಕ್ಕಳು ಬಲಿಯಾಗುತ್ತಿವೆ. ಗಂಗಾನದಿ ಪ್ರದೇಶದ ಜನ ದೇಶದ ಇತರ ಯಾವುದೇ ಭಾಗದ ಜನಕ್ಕಿಂತ ಹೆಚ್ಚಾಗಿ ಕ್ಯಾನ್ಸರ್ ಅಪಾಯ ಎದುರಿಸುತ್ತಿದ್ದಾರೆ.
- ರಾಷ್ಟ್ರೀಯ ಕ್ಯಾನ್ಸರ್ ರಿಜಿಸ್ಟ್ರಿ ಕಾರ್ಯಕ್ರಮದ ಅಧ್ಯಯನದ ಪ್ರಕಾರ, ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ, ಪಶ್ಚಿಮ ಬಂಗಾಳ ಹಾಗೂ ಬಿಹಾರದ ಪ್ರವಾಹಪ್ರದೇಶಗಳಲ್ಲಿ ಆತಂಕಕಾರಿ ಪ್ರಮಾಣದ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಇಲ್ಲಿ ಕಿಡ್ನಿ, ಮೂತ್ರಕೋಶ, ಲಿವರ್, ಮೂತ್ರನಾಳ, ಚರ್ಮದ ಕ್ಯಾನ್ಸರ್ ಸಾಮಾನ್ಯ. ದಿಲ್ಲಿಯ ಮಹಿಳೆಯರಲ್ಲಿ ವಿಶ್ವದಲ್ಲೇ ಅತ್ಯಕ ಪ್ರಮಾಣದ ಮೂತ್ರಕೋಶ ಕ್ಯಾನ್ಸರ್ ಕಂಡುಬರುತ್ತದೆ.
- ವಿಸ್ತೃತ ಆರೋಗ್ಯ ಪರಿಣಾಮಗಳೂ ಇವೆ. ಚರಂಡಿಗಳ ತ್ಯಾಜ್ಯಗಳು ಕೆಡಿಎನ್-1 ಎಂಬ ಜೀನ್‌ಗಳನ್ನು ಹರಡುತ್ತಿದ್ದು, ಸೂಪರ್‌ಬಗ್ ಬ್ಯಾಕ್ಟೀರಿಯಾಗಳನ್ನು ಇದು ಒಳಗೊಂಡಿರುತ್ತದೆ. ಇದು ಯಾವುದೇ ಬಗೆಯ ಆ್ಯಂಟಿಬಯೋಟಿಕ್ಸ್‌ಗೆ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಇದು ದಿಲ್ಲಿಯ ಯಮುನಾ ತೀರದಲ್ಲಿ ಹಾಗೂ ಗಂಗೆಯ ಮೇಲ್ಭಾಗದ ಯಾತ್ರಾಸ್ಥಳಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕೆಲ ಸ್ಥಳೀಯ ಅಧ್ಯಯನಗಳನ್ನು ಹೊರತುಪಡಿಸಿ, ಇವುಗಳ ಪರಿಣಾಮವನ್ನು ನಿಖರವಾಗಿ ಅಧ್ಯಯನ ಮಾಡಿಲ್ಲ.
ಸರಕಾರ ನಡೆಸಿದ ಪ್ರಯತ್ನಗಳೇನು ?
- ಗಂಗಾನದಿಯ ನೀರಿನ ಗುಣಮಟ್ಟ ಸುಧಾರಣೆ ಉದ್ದೇಶದೊಂದಿಗೆ ಗಂಗಾ ಕ್ರಿಯಾ ಯೋಜನೆ (ಜಿ.ಎ.ಪಿ.) ಮೊದಲ ಹಂತವನ್ನು 1985ರಲ್ಲಿ ಆರಂಭಿಸಲಾಯಿತು ಮತ್ತು ನಂತರ ಜಿ.ಎ.ಪಿ. ಎರಡನೇ ಹಂತಕ್ಕೆ 1993ರಲ್ಲಿ ಚಾಲನೆ ನೀಡಲಾಯಿತು.
- ನಂತರ ಅದನ್ನು ಗಂಗಾ ನದಿಯ ಕೆಲವು ಉಪ ನದಿಗಳನ್ನೂ ಸೇರ್ಪಡೆ ಮಾಡಲು ವಿಸ್ತರಿಸಲಾಯಿತು. ಮೇ 2015ರಲ್ಲಿ ಕೇಂದ್ರ ಸರ್ಕಾರ ಗಂಗಾ ನದಿಯ ಮತ್ತು ಅದರ ಉಪ ನದಿಗಳ ಪುನಶ್ಚೇತನಕ್ಕಾಗಿ ಸಮಗ್ರ ಕಾರ್ಯಕ್ರಮ ರೂಪಿಸಲು ಕೇಂದ್ರ ಸರ್ಕಾರದಿಂದ ನೂರರಷ್ಟು ಹಣಕಾಸು ನೀಡುವ ಕೇಂದ್ರೀಯ ಯೋಜನೆಯಾಗಿ ನಮಾಮಿ ಗಂಗೆ ಕಾರ್ಯಕ್ರಮಕ್ಕೆ ಅನುಮೋದನೆ ನೀಡಿತು.
- ಈ ಕಾರ್ಯಕ್ರಮ, ನೀರಿನ ಗುಣಮಟ್ಟ ಕುಸಿಯದಂತೆ ತಡೆಯುವಲ್ಲಿ ಸಾಧಾರಣ ಸಾಧನೆ ಮಾಡಿತಾದರೂ, ಅದಕ್ಕೆ ಅದರ ಜಾರಿಗೆ ಕೆಲವು ಮಿತಿಗಳು ಇದ್ದವು.
- ಎನ್.ಎಂ.ಸಿ.ಜಿ. 2012ರಿಂದ ಒಂದು ನೋಂದಾಯಿತ ಸೊಸೈಟಿಯಾಗಿ ಕಾರ್ಯ ನಿರ್ವಹಿಸುತ್ತಿತ್ತಾದರೂ, ಸಂಸ್ಥೆಗಳು ಯೋಜನೆಯ ಜಾರಿಗೆ ಹಣ ನೀಡುವ ಅವಕಾಶ ಬಹುತೇಕ ಸೀಮಿತವಾಗಿತ್ತು. ಗಂಗಾ ನದಿಗೆ ಎದುರಾಗಿದ್ದ ಕೆಲವು ಭೀತಿಗಳ ವಿಚಾರದಲ್ಲಿ ಕಾಗ್ನಿಜೆನ್ಸ್ ತೆಗೆದುಕೊಳ್ಳಲು ಅದಕ್ಕೆ ಆದೇಶ ಇರಲಿಲ್ಲ ಅಥವಾ ಸಂಬಂಧಿತ ಪ್ರಾಧಿಕಾರಗಳಿಗೆ/ಮಾಲಿನ್ಯ ಉಂಟುಮಾಡುವವರಿಗೆ ನಿರ್ದೇಶನ ನೀಡಲೂ ಅಧಿಕಾರ ಇರಲಿಲ್ಲ. ಆದಾಗ್ಯೂ ಈ ಸಂಸ್ಥೆಯನ್ನು ಜನರ ದೃಷ್ಟಿಯಲ್ಲಿ ಹಾಗೂ ವಿವಿಧ ನ್ಯಾಯಾಲಯಗಳ ದೃಷ್ಟಿಯಲ್ಲಿ ಗಂಗಾ ನದಿಯ ಮೇಲ್ವಿಚಾರಕನನ್ನಾಗಿ ಮತ್ತು ಜವಾಬ್ದಾರನನ್ನಾಗಿ ಮಾಡಲಾಗಿತ್ತು. ಇಂಥ ಪರಿಸ್ಥಿತಿಗಳನ್ನು ಎದುರಿಸಲು ಒಟ್ಟಾರೆಯಾಗಿ ಅಭಿಯಾನ ಸಜ್ಜಾಗಿರಲಿಲ್ಲ.
- ಆದರೆ, ಇದು ಗಂಗಾ ನದಿಯ ಪುನಶ್ಚೇತನ ಮಾಡುತ್ತದೆ ಮತ್ತು ಅದಕ್ಕೆ ಬರುತ್ತಿರುವ ಮಾಲಿನ್ಯವನ್ನು ಸಮರ್ಥವಾಗಿ ತಡೆಯುವ ಖಾತ್ರಿ ಒದಗಿಸುತ್ತದೆ, ನದಿಯಲ್ಲಿ ಪರಿಸರಾತ್ಮಕ ಹರಿವು ಕಾಪಾಡುತ್ತದೆ, ಮಲಿನಗೊಳಿಸುವ ಕೈಗಾರಿಕೆಗಳಿಗೆ ನಿರ್ಬಂಧ ಹೇರುತ್ತದೆ ಮತ್ತು ಅದರ ಅನುಸರಣೆಗೆ ಪರಿಶೀಲನೆ ಕೈಗೊಳ್ಳುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಇದರ ಜೊತೆಗೆ ಅದು ದತ್ತಾಂಶ ಪ್ರಸಾರ ನಿರ್ವಹಿಸುತ್ತದೆ ಮತ್ತು ನದಿಯ ಪರಿಸ್ಥಿತಿ ಬಗ್ಗೆ ಸಂಶೋಧನೆ ಕೈಗೊಳ್ಳತ್ತದೆ ಎಂದೂ ಪ್ರಸ್ತಾಪಿಸಲಾಗಿತ್ತು.
4.ಮಹಾತ್ಮಾಗಾಂಧಿ ಅವರ 150ನೇ ಜಯಂತಿಯ ಸಂದರ್ಭದಲ್ಲಿ ಕೈದಿಗಳ ವಿಶೇಷ ವಿಮೋಚನೆಗೆ ಸಂಪುಟದ ಅನುಮೋದನೆ
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಪರೀಕ್ಷೆಗಾಗಿ -ಚಂಪಾರಣ್ ಸತ್ಯಾಗ್ರಹ ,ಮಹಾತ್ಮಾಗಾಂಧಿ ಜಯಂತಿ ಬಗ್ಗೆ
ಮುಖ್ಯ ಪರೀಕ್ಷೆಗಾಗಿ –ಸ್ವಾತಂತ್ರ ಹೋರಾಟದಲ್ಲಿ ಮಹಾತ್ಮಾಗಾಂಧಿಜಿಯವ ಪಾತ್ರ, ರಾಷ್ಟ್ರಪತಿ ಮತ್ತು ರಾಜ್ಯ ಪಾಲರ ಕ್ಷಮೆಯಾಚಿಸುವ ಅಧಿಕಾರದ ಬಗ್ಗೆ
ಪ್ರಮುಖ ಸುದ್ದಿ
- ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ,ಮಹಾತ್ಮಾಗಾಂಧಿ ಅವರ 150ನೇ ಜಯಂತಿಯ ಆಚರಣೆಯ ಭಾಗವಾಗಿ ಕೈದಿಗಳ ವಿಶೇಷ ಬಿಡುಗಡೆ ಕರುಣಿಸಲು ತನ್ನ ಅನುಮೋದನೆ ನೀಡಿದೆ.
ಮುಖ್ಯ ಅಂಶಗಳು
- ಮಹಾತ್ಮಾಗಾಂಧಿ ಅವರ 150ನೇ ಜಯಂತಿಯ ಸ್ಮರಣೆಯ ಭಾಗವಾಗಿ, ಕೈದಿಗಳನ್ನು ಮೂರು ಹಂತಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಪ್ರಥಮ ಹಂತದಲ್ಲಿ 2018ರರ ಅಕ್ಟೋಬರ್ 2ರಂದು (ಮಹಾತ್ಮಾಗಾಂಧಿ ಅವರ ಜಯಂತಿಯಂದು) ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ, ಎರಡನೇ ಹಂತದಲ್ಲಿ 2019ರ ಏಪ್ರಿಲ್ 10ರಂದು (ಚಂಪಾರಣ್ ಸತ್ಯಾಗ್ರಹದ ವರ್ಷಾಚರಣೆಯಂದು) ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಮತ್ತು ಮೂರನೇ ಹಂತದಲ್ಲಿ 2019ರ ಅಕ್ಟೋಬರ್ 2ರಂದು (ಮಹಾತ್ಮಾ ಗಾಂಧಿ ಅವರ ಜಯಂತಿಯಂದು) ಕೈದಿಗಳ ಬಿಡುಗಡೆ ಮಾಡಲಾಗುತ್ತದೆ:-
ಯಾವ ಆಧಾರವನ್ನು ಪರಿಗಣಿಸಿ ಕೈದಿಗಳನ್ನು ವಿಶೇಷ ಬಿಡುಗಡೆ ಮಾಡಲಾಗುತ್ತದೆ ?
- ವಿಧಿಸಲಾಗಿರುವ ವಾಸ್ತವ ಶಿಕ್ಷೆಯ ಅವಧಿಯಲ್ಲಿ ಶೇ.50ರಷ್ಟು ಪೂರ್ಣಗೊಳಿಸಿರುವ 55 ವರ್ಷ ಮತ್ತು ಮೇಲ್ಪಟ್ಟ ಮಹಿಳಾ ಅಪರಾಧಿಗಳು.
- ವಿಧಿಸಲಾಗಿರುವ ವಾಸ್ತವ ಶಿಕ್ಷೆಯ ಅವಧಿಯಲ್ಲಿ ಶೇ.50ರಷ್ಟು ಪೂರ್ಣಗೊಳಿಸಿರುವ 55 ವರ್ಷ ಮತ್ತು ಮೇಲ್ಪಟ್ಟ ತೃತೀಯಲಿಂಗಿ ಅಪರಾಧಿಗಳು.
- ವಿಧಿಸಲಾಗಿರುವ ವಾಸ್ತವ ಶಿಕ್ಷೆಯ ಅವಧಿಯಲ್ಲಿ ಶೇ.50ರಷ್ಟು ಪೂರ್ಣಗೊಳಿಸಿರುವ 60 ವರ್ಷ ಮತ್ತು ಮೇಲ್ಪಟ್ಟ ಪುರುಷ ಅಪರಾಧಿಗಳು.
- ವಿಧಿಸಲಾಗಿರುವ ವಾಸ್ತವ ಶಿಕ್ಷೆಯ ಅವಧಿಯಲ್ಲಿ ಶೇ.50ರಷ್ಟು ಪೂರ್ಣಗೊಳಿಸಿರುವ ಶೇ.70 ಅಥವಾ ಮೇಲ್ಪಟ್ಟ ಪ್ರಮಾಣದ ವೈಕಲ್ಯವನ್ನು ಹೊಂದಿದ ವಿಕಲಚೇತನರು/ದಿವ್ಯಾಂಗದ ಅಪರಾಧಿಗಳು.
- ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಅಪರಾಧಿಗಳು.
- ವಿಧಿಸಲಾಗಿರುವ ವಾಸ್ತವ ಶಿಕ್ಷೆಯ ಅವಧಿಯಲ್ಲಿ ಮೂರನೇ ಎರಡರಷ್ಟು (ಶೇ.66) ಪೂರ್ಣಗೊಳಿಸಿರುವ ಕೈದಿಗಳು.
- ಈ ವಿಶೇಷ ಬಿಡುಗಡೆಯ ಸೌಲಭ್ಯವನ್ನು ಗಂಭೀರ ಸ್ವರೂಪದ ಮತ್ತು ಘೋರ ಅಪರಾಧ ಅಂದರೆ ವರದಕ್ಷಿಣೆ ಸಾವು, ಅತ್ಯಾಚಾರ, ಮಾನವ ಕಳ್ಳಸಾಗಣೆ ಮತ್ತು ಪೋಟಾ, ಯುಎಪಿಎ, ಟಾಡಾ, ಎಫ್.ಐ.ಸಿ.ಎನ್, ಪೋಸ್ಕೋ ಕಾಯಿದೆ, ಅಕ್ರಮ ಹಣ ವರ್ಗಾವಣೆ, ಫೆಮಾ, ಎನ್.ಡಿ.ಪಿ.ಎಸ್,ಭ್ರಷ್ಟಾಚಾರ ನಿಗ್ರಹ ಕಾಯಿದೆ ಇತ್ಯಾದಿಗಳ ಅಡಿಯಲ್ಲಿ ಶಿಕ್ಷೆಗೆ ಗುರಿಯಾದ; ಮರಣದಂಡನೆ ಅಥವಾ ಮರಣದಂಡನೆಯ ಬದಲಿಗೆ ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾದಂಥ ಅಪರಾಧಗಳಿಗೆ ಶಿಕ್ಷೆಗೊಳಗಾದ ಕೈದಿಗಳಿಗೆ ನೀಡಲಾಗುವುದಿಲ್ಲ.
- ಗೃಹ ವ್ಯವಹಾರಗಳ ಸಚಿವಾಲಯವು ಅರ್ಹ ಕೈದಿಗಳ ಬಿಡುಗಡೆಗೆ ಪ್ರಕ್ರಿಯೆ ಆರಂಭಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಲಿದೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತಗಳಿಗೆ ಪ್ರಕರಣಗಳ ಪರಿಶೀಲನೆಗೆ ಸಮಿತಿ ರಚಿಸುವಂತೆಯೂ ಸಲಹೆ ನೀಡಲಾಗುತ್ತದೆ.
- ರಾಜ್ಯ ಸರ್ಕಾರಗಳು ಸಮಿತಿಯ ಶಿಫಾರಸುಗಳನ್ನು ಪರಿಗಣನೆ ಮತ್ತು ಸಂವಿಧಾನದ 161ನೇ ವಿಧಿಯಡಿ ಅನುಮೋದನೆಗಾಗಿ ರಾಜ್ಯಪಾಲರುಗಳ ಮುಂದೆ ಸಲ್ಲಿಸಲಿವೆ. ಅನುಮೋದನೆಯ ಬಳಿಕ 2018ರ ಅಕ್ಟೋಬರ್ 2, 2019ರ ಏಪ್ರಿಲ್ 10 ಮತ್ತು 2019ರ ಅಕ್ಟೋಬರ್ 2ರಂದು ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ.
ಹಿನ್ನೆಲೆ:
- ಮಹಾತ್ಮಾಗಾಂಧಿ ಅವರ 150ನೇ ಜಯಂತಿ ಮಹತ್ವದ ಸಂದರ್ಭವಾಗಿದ್ದು, ಈ ಮಹತ್ವದ ಸಂದರ್ಭದಲ್ಲಿ ಕೈದಿಗಳಿಗೆ ವಿಶೇಷವಾದ ವಿಮೋಚನೆ ನೀಡುವುದು ಅಪೇಕ್ಷಣೀಯ ಮತ್ತು ಸ್ಮರಣಾರ್ಥವೆಂದು ಮತ್ತು ರಾಷ್ಟ್ರಪಿತನಿಗೆ ಹಾಗೂ ಮಹಾತ್ಮಾಗಾಂಧಿ ಅವರು ಪ್ರತಿಪಾದಿಸುತ್ತಿದ್ದ ಮಾನವೀಯ ಮೌಲ್ಯಗಳಿಗೆ ಗೌರವಾರ್ಪಣೆ ಎಂದು ಪರಿಗಣಿಸಲಾಗಿದೆ.
5.ಬಾಲ್ಯ ವಿವಾಹ ಅಮಾನ್ಯ
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಪರೀಕ್ಷೆಗಾಗಿ–ಕನ್ಯಾಶ್ರೀ ಪ್ರಕಲ್ಪಾ ಉಪಕ್ರಮದ ಬಗ್ಗೆ , ವಿಶ್ವಸಂಸ್ಥೆ ಸಾರ್ವಜನಿಕ ಸೇವಾ ಪ್ರಶಸ್ತಿ ಬಗ್ಗೆ
ಮುಖ್ಯ ಪರೀಕ್ಷೆಗಾಗಿ -ಬಾಲ್ಯ ವಿವಾಹ ತಡೆಯಲು ಎದುರಿಸುವ ಸವಾಲುಗಳೇನು ಮತ್ತು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳೇನು ?
ಪ್ರಮುಖ ಸುದ್ದಿ
- ಭವಿಷ್ಯದಲ್ಲಿ ನಡೆಯುವ ಎಲ್ಲಾ ಬಾಲ್ಯ ವಿವಾಹಗಳನ್ನೂ ಅಮಾನ್ಯ ಎಂದು ಪರಿಗಣಿಸುವ ಪ್ರಸ್ತಾವನೆಯೊಂದನ್ನು ಸಂಪುಟ ಸಭೆಯ ಮುಂದಿರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನಿರ್ಧರಿಸಿದೆ.
ಮುಖ್ಯ ಅಂಶಗಳು
- ಈ ಪ್ರಸ್ತಾವನೆಗೆ ಸಂಪುಟದ ಅನುಮೋದನೆ ದೊರೆತಲ್ಲಿ, ಬಾಲ್ಯ ವಿವಾಹ ನಿಷೇಧ ಸಂಬಂಧಿತ ಕಾಯಿದೆಗೆ ತಿದ್ದುಪಡಿ ತರಲಾಗುವುದು. ಪ್ರಸ್ತುತ, ಜಿಲ್ಲಾ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸುವವರೆಗೂ ಬಾಲ್ಯ ವಿವಾಹ ಕಾನೂನು ಪ್ರಕಾರ ಅಸಿಂಧುವಾಗುವುದಿಲ್ಲ
ಪ್ರಸ್ತುತ ಯಾವ ರೀತಿ ಇದೆ ?
- ಭಾರತೀಯ ಸಮಾಜದಲ್ಲಿ ಬಾಲ್ಯವಿವಾಹ ಪದ್ಧತಿಯು ಒಂದು ಸಾಮಾಜಿಕ ಸಂಗತಿಯಾಗಿದೆ. ಈ ಪದ್ಧತಿಯಲ್ಲಿ ಚಿಕ್ಕವಯಸ್ಸಿನ ಹುಡುಗಿಯರಿಗೆ (ಸಾಮಾನ್ಯವಾಗಿ ೧೫ ವಯಸ್ಸಿಗಿಂತ ಕೆಳಗಿನ ಹೆಣ್ಣು ಮಕ್ಕಳು) ವಯಸ್ಸಾದ ಪುರುಷರೊಂದಿಗೆ ಮದುವೆ ಮಾಡುತ್ತಾರೆ.
- ಎರಡನೇ ವಿಧದ ಪದ್ಧತಿಯೇನೆಂದರೆ; ತಂದೆತಾಯಿಗಳು ಬಾಲ್ಯದಲ್ಲಿಯೇ ಗಂಡು ಮತ್ತು ಹೆಣ್ಣು ಶಿಶುವನ್ನು ಭವಿಷ್ಯದಲ್ಲಿ ಬಾಲ್ಯವಿವಾಹ ಮಾಡಿಸುವಂತೆ ಆಣೆಮಾಡಿರುತ್ತಾರೆ. ಈ ಪದ್ಧತಿಯಲ್ಲಿ ಗಂಡು ಮತ್ತು ಹೆಣ್ಣುಮಕ್ಕಳು ತಮಗೆ ಮದುವೆಯಾಗುವ ಪ್ರಾಪ್ತ ವಯಸ್ಸಾಗುವ ತನಕ ಹಾಗು ವಿವಾಹವನ್ನು ನೆರವೇರಿಸುವ ತನಕ ಒಬ್ಬರನ್ನೊಬ್ಬರು ಸಂಧಿಸುವಂತಿಲ್ಲ.
- ಕಾನೂನಿನ ಪ್ರಕಾರ ಪುರುಷರಿಗೆ ಮದುವೆಯಾಗುವ ಪ್ರಾಪ್ತ ವಯಸ್ಸು ೨೧ ಹಾಗು ಹೆಣ್ಣುಮಕ್ಕಳಿಗೆ ೧೮ ವರ್ಷಗಳು. ಯಾರೇ ತಂದೆ ತಾಯಿಗಳು ತಮ್ಮ ಮಕ್ಕಳ ಮದುವೆಯನ್ನು ಅಪ್ರಾಪ್ತ ವಯಸ್ಸಿನಲ್ಲಿ ನೆರವೇರಿಸಿದ್ದೇ ಆದರೆ ಅದನ್ನು ವರ್ಜ್ಯ/ರದ್ದುಗೊಳಿಸಬಹುದಾಗಿದೆ.
ಬಾಲ್ಯ ವಿವಾಹದಿಂದ ಆಗುವ ದುಷ್ಪರಿಣಾಮಗಳೇನು ?
- ಅಪ್ರಾಪ್ತ ವಯಸ್ಸಿನಲ್ಲಿ ಅಥವಾ ಎಳೆ ವಯಸ್ಸಿನಲ್ಲಿ ಹುಡುಗಿಯರಿಗೆ ಮದುವೆಯಾಗಿ ಅವರು ಶೀಘ್ರ ಸಮಯದಲ್ಲಿಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಬಹುಬೇಗನೆ ಮಕ್ಕಳಾಗಿ ಅವರು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಉದಾ:- ಹೆಚ್.ಐ.ವಿ. ಮತ್ತು ರೋಗಗಳಿಗೆ ತುತ್ತಾಗುವ ಸಂಭವವಿದೆ.
- ಸ್ಥಾನಮಾನದ ಅರಿವಿರದ, ಸಬಲರಾಗಿಲ್ಲದ ಮತ್ತು ಇನ್ನೂ ಪ್ರೌಢಾವಸ್ಥೆಯನ್ನು ಹೊಂದದ ಚಿಕ್ಕ ಹುಡುಗಿಯರು ಮನೆಯಲ್ಲಿ ದೌರ್ಜನ್ಯ, ಲೈಂಗಿದ ಶೋಷಣೆ ಮತ್ತು ಸಾಮಾಜಿಕ ಪ್ರತ್ಯೇಕತೆಗೆಗುರಿಯಾಗುವರು.
- ಬಾಲ್ಯದಲ್ಲಿ ಮದುವೆಯಾಗುವ ಕಾರಣದಿಂದ ಶಿಕ್ಷಣ ದ ಕೊರತೆಯುಂಟಾಗಿ, ಸಮರ್ಪಕ ಉದ್ಯೋಗ ಸಿಗದೆ ದೀರ್ಘಕಾಲದ ಬಡತನಕ್ಕೆ ತುತ್ತಾಗುತ್ತಾರೆ.
- ಬಾಲ್ಯವಿವಾಹದಿಂದ ಹೆಣ್ಣುಮಕ್ಕಳು, ನಿಷ್ಕಾರಣವಾದ ಅಸಮಾನತೆ, ಖಾಯಿಲೆ ಮತ್ತು ಬಡತನದಂತಹ ಸಮಸ್ಯೆಗಳಿಗೆ ಸತತವಾಗಿ ಗುರಿಯಾಗುತ್ತಾರೆ.
- ಎಳೆವಯಸ್ಸಿನಲ್ಲಿಯೇ ಮದುವೆಯಾಗಿರುವುದರಿಂದ ಹೆಣ್ಣುಮಕ್ಕಳಿಗೆ ಇನ್ನೂ ದೈಹಿಕವಾಗಿ ಬಲ ಹೊಂದಿಲ್ಲದೆ ಇರುವುದರಿಂದ ತಾಯಿ ಮತ್ತು ಶಿಶು ಮರಣ ಪ್ರಮಾಣ ಹೆಚ್ಚಾಗುತ್ತದೆ.
ಬಾಲ್ಯ ವಿವಾಹಕ್ಕೆ ಕಾರಣಗಳೇನು ?
- ಬಡತನ
- ಹೆಣ್ಣುಮಕ್ಕಳ ಕಡಿಮೆ ಶಿಕ್ಷಣ ಮಟ್ಟ
- ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಹೊರೆ ಎಂದು ಭಾವಿಸುವುದರಿಂದ ಹೆಣ್ಣುಮಕ್ಕಳಿಗೆ ಕಡಿಮೆ ಸ್ಥಾನಮಾನ.
- ಸಾಮಾಜಿಕ ಪದ್ಧತಿ ಮತ್ತು ಸಂಪ್ರದಾಯಗಳು.
ಸರ್ಕಾರ ಮತ್ತು ಸರ್ಕಾರೇತರ ಸಂಘಟನೆಗಳು ಕೈಗೊಂಡಿರುವ ಕ್ರಮಗಳೇನು ?.
- ಬಾಲ್ಯವಿವಾಹದ ವಿರುದ್ಧ ಕಾನೂನನ್ನು ರಚಿಸುವುದು.
- ಹೆಣ್ಣುಮಕ್ಕಳಿಗೆ ಹೆಚ್ಚು ಶಿಕ್ಷಣ ದೊರಕುವಂತೆ ಮಾಡುವುದು.
- ಹಾನಿಕಾರವಾದ ಸಾಂಸ್ಕೃತಿಕ ಪದ್ಧತಿಗಳನ್ನು ಬದಲಾಯಿಸುವುದು.
- ಸಮುದಾಯ ಕಾರ್ಯಕ್ರಮಗಳನ್ನು ಬೆಂಬಲಿಸುವುದು.
- ವಿದೇಶಿ ನೆರವನ್ನು ಗರಿಷ್ಠಗೊಳಿಸುವುದು.
- ಬಾಲಿಕಾ ವಧುಗಳ ಅಗತ್ಯತೆಯನ್ನು ಪೂರೈಸುವುದು.
- ಕಾರ್ಯಕ್ರಮಗಳ ಮೌಲ್ಯಮಾಪನ ಮಾಡಿ ಅವುಗಳ ಸಫಲತೆಯನ್ನು ತೀಳಿಯುವುದು.
ಸರ್ಕಾರದ ಕ್ರಮಗಳು
- ಬಾಲ್ಯ ವಿವಾಹ ತಡೆ ಕಾಯ್ದೆ.
- ಬಾಲ್ಯ ವಿವಾಹವನ್ನು ನಿಗ್ರಹಿಸಲು ಹಾಗೂ ಮದುವೆಯನ್ನು ಊರ್ಜಿತಗೊಳಿಸಲು ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಮದುವೆಗಳನ್ನು ನೋಂದಣಿ ಮಾಡಿಸುವುದನ್ನು ಕಡ್ಡಾಯ ಮಾಡಲಾಗಿದೆ.
ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರದ ಕನ್ಯಾಶ್ರೀ ಪ್ರಕಲ್ಪಾ (ಹೆಣ್ಣು ಮಕ್ಕಳ) ಯೋಜನೆಗಾಗಿ ವಿಶ್ವಸಂಸ್ಥೆ ಸಾರ್ವಜನಿಕ ಸೇವಾ ಪ್ರಶಸ್ತಿ ಲಭಿಸಿದೆ.
- ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ವಿಶ್ವಸಂಸ್ಥೆ ಸಾರ್ವಜನಿಕ ಸೇವಾ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯನ್ನು ಮಮತಾ ಬ್ಯಾನರ್ಜಿ ರವರು ಹೇಗ್ ನಲ್ಲಿ ಸ್ವೀಕರಿಸಿದರು. ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರದ ಕನ್ಯಾಶ್ರೀ ಪ್ರಕಲ್ಪಾ (ಹೆಣ್ಣು ಮಕ್ಕಳ) ಯೋಜನೆಗಾಗಿ ಈ ಪ್ರಶಸ್ತಿ ಲಭಿಸಿದೆ. ಪಶ್ಚಿಮ ಬಂಗಾಳದ ಕನ್ಯಾಶ್ರೀ ಪ್ರಕಲ್ಪಾ ಯೋಜನೆಯು 62 ರಾಷ್ಟ್ರಗಳಿಂದ ವಿಶ್ವಸಂಸ್ಥೆಯ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ 552 ಯೋಜನೆಗಳ ಪೈಕಿ ಮೊದಲನೆಯದಾಗಿ ಹೊರಹೊಮ್ಮಿದೆ.
- ಏಷ್ಯಾ-ಪೆಸಿಫಿಕ್ ವಿಭಾಗದಲ್ಲಿ ಪಶ್ಚಿಮ ಬಂಗಾಳಕ್ಕೆ ಗುಂಪಿನಲ್ಲಿ ಈ ವಿಭಾಗಕ್ಕೆ ನೀಡಲಾಗಿದೆ: ‘ಅಂತರ್ಗತ ಸೇವೆ ಮತ್ತು ಭಾಗವಹಿಸುವಿಕೆ ಮೂಲಕ ಬಡವರಿಗೆ ಹಾಗೂ ದುರ್ಬಲ ವರ್ಗದವರಿಗೆ ಸೇವೆಯನ್ನು ಒದಗಿಸುತ್ತಿರುವ ವಿಭಾಗದಲ್ಲಿ ಈ ಪ್ರಶಸ್ತಿ ಸಂದಿದೆ. ಬಾಲ್ಯ ಶಿಕ್ಷಣ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಅರ್ಜೆಂಟೈನಾ ಲ್ಯಾಟಿನ್ ಅಮೆರಿಕಾ-ಕೆರಿಬಿಯನ್ ವಲಯದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವೆಸ್ಟರ್ನ್ ಗ್ರೂಪ್ ವಿಭಾಗದಲ್ಲಿ ಯುನೈಟೆಡ್ ಕಿಂಗ್ಡಮ್ ಗೆ ಪ್ರಶಸ್ತಿ ಲಭಿಸಿದೆ. ಹಿರಿಯ ನಾಗರಿಕರನ್ನು ಮೋಸಗೊಳಿಸದಂತೆ ತಡೆಗಟ್ಟುವ ಕಾರ್ಯಕ್ರಮಕ್ಕೆ ಯುಕೆ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಕನ್ಯಾಶ್ರೀ ಪ್ರಕಲ್ಪಾ ಬಗ್ಗೆ
- ಕನ್ಯಾಶ್ರೀ ಪ್ರಕಲ್ಪಾ ಹದಿಹರೆಯದ ಹುಡುಗಿಯರ ಜೀವನ ಮತ್ತು ಸ್ಥಿತಿಯನ್ನು ಸುಧಾರಿಸಲು ಪಶ್ಚಿಮ ಬಂಗಾಳ ಸರಕಾರದ ಒಂದು ಉಪಕ್ರಮವಾಗಿದೆ. ಈ ಯೋಜನೆಯಡಿ ಅನಾನುಕೂಲಕರ ಕುಟುಂಬಗಳ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಹಣಕಾಸಿನ ಸಹಾಯವನ್ನು ಒದಗಿಸಲಾಗುತ್ತದೆ.
- ಇದು ಬಾಲ್ಯ ವಿವಾಹವನ್ನು ತಡೆಗಟ್ಟುವ ಗುರಿ ಹೊಂದಿದೆ. ಶೈಕ್ಷಣಿಕ ಸಾಧನೆ, ಬಾಲ್ಯ ವಿವಾಹ ತಡೆಗಟ್ಟುವುದು ಮತ್ತು ಆರ್ಥಿಕ ಸೇರ್ಪಡೆ ಯೋಜನೆಯ ಉದ್ದೇಶಗಳು. ಅಕ್ಟೋಬರ್ 2013ರಲ್ಲಿ ಮಮತಾ ಬ್ಯಾನರ್ಜಿ ಈ ಯೋಜನೆಯನ್ನು ಪ್ರಾರಂಭಿಸಿದರು.
6 ರಾಷ್ಟ್ರಪತಿ ವಾಹನಕ್ಕೂ ನಂಬರ್ ಪ್ಲೇಟ್ ಕಡ್ಡಾಯ
ಪ್ರಮುಖ ಸುದ್ದಿ
- ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಗಳ ವಾಹನಗಳ ಮೇಲೆ ನೋಂದಣಿ ಸಂಖ್ಯೆಯನ್ನು ಪ್ರದರ್ಶಿಸಬೇಕು ಎಂದು ದಿಲ್ಲಿ ಹೈಕೋಟ್ ತೀರ್ಪು ನೀಡಿದೆ.
ಮುಖ್ಯ ಅಂಶಗಳು
- ಪ್ರಸ್ತುತ ರಾಷ್ಟ್ರಪತಿ, ಉಪರಾಷ್ಟ್ರಪ, ರಾಜ್ಯಪಾಲರು/ ಲೆಫ್ಟಿನೆಂಟ್ ಗವರ್ನರ್ ಗಳು ಸೇರಿದಂತೆ ಸಾಂವಿಧಾನಿಕ ಹುದ್ದೆಯಲ್ಲಿರುವವರ ವಾಹನಗಳ ಮೇಲೆ ನೋಂದಣಿ ಫಲಕದ ಜಾಗದಲ್ಲಿ ರಾಷ್ಟ್ರೀಯ ಚಿಹ್ನೆಯನ್ನು ಮಾತ್ರ ಪ್ರದರ್ಶಿಸಲಾಗುತ್ತಿದೆ.
- ಗಣ್ಯರ ವಾಹನಗಳನ್ನು ಉಗ್ರರು ಮತ್ತು ದುಷ್ಕರ್ಮಿಗಳು ಸುಲಭವಾಗಿ ಗುರುತಿಸಿ, ದಾಳಿ ನಡೆಸಲು ಅವಕಾಶವಿರುವುದರಿಂದ, ಈ ಪದ್ದತಿಯನ್ನು ಕೈಬಿಡಬೇಕೆಂದು ಕೋರಿ ಸಾಮಾಜಿಕ ಸೇವಾ ಸಂಸ್ಥೆಯೊಂದು ಕೋರ್ಟ್ ಮೆಟ್ಟಿಲೇರಿತ್ತು.
- ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಟ್ಟಿದಯ ಪ್ರಧಾನಿ ನರೇಂದ್ರ ಮೋದಿ, ತಮ್ಮ ವಾಹನದಲ್ಲಿ ನಂಬರ್ ಪ್ಲೇಟ್ ಪ್ರದರ್ಶನ ಗೊಳ್ಳುವಂತೆ ನೋಡಿಕೊಂಡಿದ್ದಾರೆ.
- ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವವರು ಎನ್ನುವ ಗುರುತಾಗಿ ಕಾರಿಗೆ ನಂಬರ್ ಪ್ಲೇಟ್ ಬದಲು ರಾಷ್ಟ್ರಲಾಂಛನ ಅಳವಡಿಸಲಾಗುತ್ತಿತ್ತು..
CLICK HERE TO JOIN NIALP FOUNDATION COURSE-2019