20th JULY MLP-MODEL ANSWERS

20th  JULY  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

 

GENERAL STUDIES PAPER-1(ಸಾಮಾನ್ಯ ಅಧ್ಯಾಯ)

 

1.Sant Kabir’s teachings are inspired by several religion reflecting the overall philosophy of Bhakti Movement. Examine.

(ಸಂತ ಕಬೀರ್ ರವರ  ಬೋಧನೆಗಳು ಭಕ್ತಿ ಚಳವಳಿಯ  ತತ್ತ್ವವನ್ನು ಪ್ರತಿಬಿಂಬಿಸುವ ಹಲವಾರು ಧರ್ಮಗಳಿಂದ ಸ್ಫೂರ್ತಿಗೊಂಡಿದೆ. ಪರೀಕ್ಷಿಸಿಸಿ .)

 (150 ಪದಗಳು)

 

ಕಬೀರ್ ರವರು  ಭಾರತದ ಒಬ್ಬ ಅನುಭಾವಿ ಕವಿ ಮತ್ತು ಸಂತನಾಗಿದ್ದರು , ಮತ್ತು ಇವರ  ಬರಹಗಳು ಭಕ್ತಿ ಚಳುವಳಿಯ ಮೇಲೆ ಮಹತ್ತರ ಪ್ರಭಾವಬೀರಿವೆ. ಕಬೀರ್‌ರವರ  ಕೊಡುಗೆಯನ್ನು ಇಂದು, ಅವರನ್ನು ಅದರ ಸ್ಥಾಪಕನೆಂದು ಗುರುತಿಸುವ ಮತ್ತು ಸಂತ ಮತ ಪಂಥಗಳಲ್ಲಿ ಒಂದಾದ ಒಂದು ಧಾರ್ಮಿಕ ಸಮುದಾಯವಾದ, ಕಬೀರ್ ಪಂಥ ಮುಂದಕ್ಕೆ ಸಾಗಿಸುತ್ತಿದೆ.

 

ಒಬ್ಬ  ಕವಿಯಾಗಿ, ಕಬೀರ್ ರವರು  ಭಾರತದಲ್ಲಿ ಅಸ್ತಿತ್ವದಲ್ಲಿದ್ದಲ್ಲಿರುವ  ಹಲವಾರು  ವರ್ಗಗಳನ್ನು  ಮೀರಿಸಿದವರು . ಅವರು ಆಧ್ಯಾತ್ಮಿಕ ಜೀವನದಲ್ಲಿ ಆಳವಾಗಿ ಚಿತ್ರಿಸಲ್ಪಟ್ಟರೂ, ಅವರು ಎಲ್ಲಾ ಪಂಥಗಳನ್ನು ಬಹಿರಂಗವಾಗಿ ಟೀಕಿಸಿದರು ಮತ್ತು ಮಾನವ ಅಸ್ತಿತ್ವದ ವಿವಿಧ   ಅಂಶಗಳ ಮೇಲೆ ಅವರ ನೇರ ಮುನ್ನಡೆಯೊಂದಿಗೆ, ಭಾರತೀಯ ತತ್ತ್ವಶಾಸ್ತ್ರಕ್ಕೆ ಹೊಸ ದಿಕ್ಕನ್ನು ನೀಡಿದರು. ಈ ಕಾರಣಕ್ಕಾಗಿಯೇ ಕಬೀರ್ ರವರು  ಪ್ರಪಂಚದಾದ್ಯಂತ ಹೆಚ್ಚಿನ ಗೌರವವನ್ನು ಹೊಂದಿದ್ದಾರೆ.

 

ಸಂತ ಕಬೀರ್ ಅವರ ಬೋಧನೆಗಳು ಅನೇಕ ಧರ್ಮಗಳಿಂದ ಸ್ಫೂರ್ತಿಗೊಂಡಿದೆ.

 

  • ಶುಷ್ಕ ಆಚಾರ, ಭಾವಹೀನ ಪುಜನ ಇಂಥ ವ್ಯರ್ಥವರ್ತನವನ್ನು ಕಬೀರ್ ಖಂಡಿಸಿ, ನಿಷ್ಕಾಮಕರ್ಮದ ಉಪದೇಶಕನಾದ. ರಾಮಾನಂದನಲ್ಲಿಗೆ ಹೋಗಿ ಅವನನ್ನು ಗುರುವಾಗಿ ಸ್ವೀಕರಿಸಿದ. ದೇವರನ್ನು ರಾಮ ಎಂದು ರಹೀಮ್ ಎಂದು ಹೇಗೆ ಕರೆದರೂ ಸರಿಯೇ, ಭಕ್ತಿಯಿಂದ ಕರೆಯಿರಿ, ಎಂದು ಹೇಳಿ ಕಬೀರ್ ಆಚಾರವಂತ ಹಿಂದೂ ಆಚಾರವಂತ ಮುಸಲ್ಮಾನ ಇವರ ಎರಡು ಸಮುದಾಯವನ್ನೂ ಹಗೆ ಮಾಡಿಕೊಂಡ. ಆದರೆ ಇವರನ್ನು ಮೆಚ್ಚಿ ಅನೇಕ ಜನ ಇವನ ಅನುಯಾಯಿಗಳಾದರು.
  • ಕಬೀರನ ಉಪದೇಶಗಳಲ್ಲಿ ಸೂಫಿಪಂಥದ ಮತ್ತು ವೇದಾಂತಧರ್ಮದ ಸಾಮರಸ್ಯವನ್ನು ಕಾಣಬಹುದು. ವೇದಾಂತಿಯಾಗಿದ್ದರೂ ಈತ ಆರಾಧಿಸುತ್ತಿದ್ದ ದೇವರು ನಿರ್ಗುಣಬ್ರಹ್ಮನೇ ಸಗುಣೇಶ್ವರನೆ ಎಂಬ ವಿಷಯದಲ್ಲಿ ವಿವಾದ ಹುಟ್ಟಿದೆ. ಇವನು ನಿರ್ಗುಣ ಪಂಥಕ್ಕೆ ಸೇರಿದವನೆಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಮತ್ತೆ ಕೆಲವರು ಇವನ ಇಷ್ಟದೇವತೆ ರಾಮನಾಗಿದ್ದನೆಂದೂ ಇವನು ಸಗುಣೇಶ್ವರೋಪಾಸಕನೆಂದೂ ಅಭಿಪ್ರಾಯ ಪಡುತ್ತಾರೆ. ಇವನಿಗೆ ಕರ್ಮ ಮತ್ತು ಪುನರ್ಜನ್ಮಗಳಲ್ಲಿ ನಂಬಿಕೆ ಇದ್ದಂತೆ ತೋರುತ್ತದೆ. ಇವನ ಪದ್ಯಗಳಲ್ಲಿ….CLICK HERE TO READ MORE
Share