23rd AUGUST MLP-MODEL ANSWERS

23rd   AUGUST  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

GENERAL STUDIES PAPER-2(ಸಾಮಾನ್ಯ ಅಧ್ಯಾಯ2)

 

 1.The Constitution itself declares that the Directive Principles of State Policy (DPSP) are fundamental to the governance of the country. In the light of the statement, discuss the importance of DPSP and highlight how these are different from the Fundamental Rights?

 

(ರಾಜ್ಯ ನೀತಿ ನಿರ್ದೇಶನ ತತ್ವಗಳು (ಡಿಪಿಎಸ್ ಪಿ  ) ದೇಶದ ಆಡಳಿತಕ್ಕೆ ಮೂಲಭೂತವಾಗಿದೆ ಎಂದು ಸಂವಿಧಾನ ಸ್ವತಃ ಘೋಷಿಸುತ್ತದೆ.  ಈ ಹೇಳಿಕೆಯ ಬೆಳಕಿನಲ್ಲಿ, ಡಿಪಿಎಸ್ ಪಿ  ಪ್ರಾಮುಖ್ಯತೆಯನ್ನು ಚರ್ಚಿಸಿ ಮತ್ತು ಇವುಗಳು ಮೂಲಭೂತ ಹಕ್ಕುಗಳಿಂದ ಹೇಗೆ ಭಿನ್ನವಾಗಿವೆ ಎಂಬುದನ್ನು ವಿವರಿಸಿ)

250 ಪದಗಳು

 

ಸಂವಿಧಾನದ ಭಾಗ  IV ರಲ್ಲಿ ರಾಜ್ಯ ನಿರ್ದೇಶಕ ತತ್ವಗಳನ್ನು ಉಲ್ಲೇಖಿಸಲಾಗಿದೆ . ಸಂವಿಧಾನದ 37 ನೇ ಅಧಿನಿಯಮವು ಈ ತತ್ವಗಳು ದೇಶದ ಆಡಳಿತದಲ್ಲಿ ಮೂಲಭೂತವೆಂದು ಹೇಳುತ್ತದೆ ಮತ್ತು ಕಾನೂನುಗಳನ್ನು ರೂಪಿಸುವಲ್ಲಿ ಈ ತತ್ವಗಳನ್ನು  ಅನುಸರಿಸುವುದು   ರಾಜ್ಯದ ಕರ್ತವ್ಯ  ಎಂದು ಹೇಳಿದೆ.   ರಾಜ್ಯ ನಿರ್ದೇಶಕ ತತ್ವದ ಉದ್ದೇಶ ಕಲ್ಯಾಣ ರಾಜ್ಯದ ಸ್ಥಾಪನೆ. ಆರ್ಥಿಕ, ಸಾಮಾಜಿಕ ಪ್ರಗತಿ, ಸುಖೀ ರಾಜ್ಯವನ್ನು ಸ್ಥಾಪಿಸುವ ಉದ್ದೇಶದಿಂದ ಸಂವಿಧಾನವು ರಾಜ್ಯಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತದೆ.

ಡಾ. ಬಿ.ಆರ್. ಅಂಬೇಡ್ಕರರವರು ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ಪ್ರಸ್ತಾಪಿಸುತ್ತ “ಸರ್ಕಾರವು ಹೇಗೆ ಕಾರ್ಯ ನಿರ್ವಹಿಸಬೇಕೆಂಬುದರ ದಿಕ್ಸೂಚಿಗಳಾಗಿವೆ” ಎಂದಿದ್ದಾರೆ.

 

  ರಾಜ್ಯ ನಿರ್ದೇಶಕ ತತ್ವಗಳ ಮಹತ್ವ

 

  • ರಾಜ್ಯ ನಿರ್ದೇಶಕ ತತ್ವಗಳು ಮಹತ್ತರವಾದ ಮೌಲ್ಯವನ್ನು ಹೊಂದಿವೆ ಏಕೆಂದರೆ ಅವು ಭಾರತೀಯ ರಾಜಕೀಯದ ಗುರಿಗೆ  ‘ಆರ್ಥಿಕ ಪ್ರಜಾಪ್ರಭುತ್ವ’ವಾಗಿದ್ದು’ ರಾಜಕೀಯ ಪ್ರಜಾಪ್ರಭುತ್ವ ‘ದಿಂದ ಭಿನ್ನವಾಗಿದೆ ಎಂದು ತಿಳಿಸುತ್ತವೆ
  • ಸಂವಿಧಾನವು ಹೊಂದಿರುವ ಗುರಿಗಳಾದ ಸಾಮಾಜಿಕ ಮತ್ತು ಆರ್ಥಿಕ ಕ್ರಮದ ಬಗ್ಗೆ  ಮೂಲಭೂತ ತತ್ವಗಳು  ಸರ್ಕಾರಗಳನ್ನು ನೆನಪಿಸುತ್ತವೆ

 

  • ರಾಜ್ಯ ನಿರ್ದೇಶಕ ತತ್ವಗಳು ನ್ಯಾಯಾಧೀಶರು ತಮ್ಮ ನ್ಯಾಯಾಂಗ ಪರಿಶೀಲನೆಯ ಅಧಿಕಾರವನ್ನು ಬಳಸಿಕೊಳ್ಳುವಲ್ಲಿ ಸಹಾಯ ಮಾಡಿವೆ , ಅಂದರೆ, ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ನಿರ್ಧರಿಸುವಾಗ ಇವು ಸಹಾಯ ಮಾಡಿವೆ.

 

  • ಅಧಿಕಾರದಲ್ಲಿ ಪಕ್ಷದ ಬದಲಾವಣೆಗಳ ಹೊರತಾಗಿಯೂ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ರಾಜ್ಯ ನಿರ್ದೇಶಕ ತತ್ವಗಳು ದೇಶೀಯ ಮತ್ತು ವಿದೇಶಿ ನೀತಿಗಳಲ್ಲಿ ಸ್ಥಿರತೆ ಮತ್ತು ನಿರಂತರತೆಯನ್ನು ಹೊಂದಲು ಸಹಾಯ ಮಾಡಿವೆ .

 

  • ರಾಜ್ಯ ನಿರ್ದೇಶಕ ತತ್ವಗಳು ನಾಗರಿಕರ ಮೂಲಭೂತ ಹಕ್ಕುಗಳಿಗೆ ಪೂರಕವಾಗಿವೆ ಇವು ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳನ್ನು ಒದಗಿಸುವ  ಭಾಗ III ರ ನಿರ್ವಾತವನ್ನು ತುಂಬುತ್ತವೆ.

 

  • ರಾಜ್ಯ ನಿರ್ದೇಶಕ ತತ್ವಗಳ ಅನುಷ್ಠಾನವು ನಾಗರಿಕರಿಂದ ಮೂಲಭೂತ ಹಕ್ಕುಗಳ ಸಂಪೂರ್ಣ ಮತ್ತು ಸರಿಯಾದ ಸದ್ಬಳಕೆಗೆ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸುತ್ತದೆ. ರಾಜಕೀಯ ಪ್ರಜಾಪ್ರಭುತ್ವ, ಆರ್ಥಿಕ ಪ್ರಜಾಪ್ರಭುತ್ವವಿಲ್ಲದೆ, ಅರ್ಥವಿಲ್ಲ ಎಂಬುದನ್ನು ತಿಳಿಸುತ್ತವೆ.
  • ರಾಜ್ಯ ನಿರ್ದೇಶಕ ತತ್ವಗಳು ಪ್ರತಿ ಪಕ್ಷದವರನ್ನು ಸದೃಢಗೊಳಿಸುತ್ತವೆ ಮತ್ತು ಆಡಳಿತ ಪಕ್ಷಗಳ ಕೆಲಸವನ್ನು ರಾಜ್ಯ ನಿರ್ದೇಶಕ ತತ್ವಗಳ ಆಧಾರದ  ಮೇಲೆ  ಟೀಕಿಸಲು ಅನುವು ಮಾಡಿಕೊಡುತ್ತವೆ.

 

ಮೂಲಭೂತ ಹಕ್ಕುಗಳು ಮತ್ತು ನೀತಿ ನಿರ್ದೇಶಕ ತತ್ವಗಳ ನಡುವಿನ ವ್ಯತ್ಯಾಸಗಳು

 

ಮೂಲಭೂತ ಹಕ್ಕುಗಳು        ನೀತಿ ನಿರ್ದೇಶಕ ತತ್ವಗಳ
1. ಇವು ಸರ್ಕಾರಗಳ ದೃಷ್ಟಿಯಿಂದ ನಕಾರಾತ್ಮಕ ಅಜ್ಞೆಗಳಿದ್ದಂತೆ , ಅಂದರೆ ಇಲ್ಲಿರುವ ಕೆಲ ಅಂಶಗಳ ಮೇಲೆ ಸರ್ಕಾರ ಕ್ರಮ ವಹಿಸದಂತೆ ನಿಷೀಧಿಸಲಾಗಿದೆ.

 

ಉದಾ:  ೧೫ನೇ ವಿಧಿಯು ರಾಜ್ಯವು ತನ್ನ ನಾಗರೀಕರನ್ನು ಧರ್ಮ ,ಜಾತಿ ಲಿಂಗ , ಹುಟ್ಟಿದ ಸ್ಥಳ ಮೊದಲಾದವುಗಳ ಆಧಾರದ ಮೇಲೆ ತಾರತಮ್ಯ ಮಾಡಬಾರದೆಂದು ನಿರ್ಬಂಧ ಹೇರಿದೆ.

೨೧ ನೇ ವಿಧಿಯು ಯಾವುದೇ  ಕಾರಣಕ್ಕೂ ವ್ಯಕ್ತಿಯ ಜೀವ,ವೈಯಕ್ತಿಕ ಸ್ವಾತಂತ್ರ್ಯಕ್ಕೆ ಚ್ಯುತಿ ತರಬಾರದೆಂದು ತಿಳಿಸುತ್ತದೆ .

1. ಇವು ಸರ್ಕಾರಕ್ಕೆ ಸಕಾರಾತ್ಮ ಸೂಚನೆಗಳನ್ನು ನೀಡುತ್ತವೆ , ಅಂದರೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲು ಅವಕಾಶ ಕಲಿಸುತ್ತವೆ .

 

ಉದಾ: ಗ್ರಾಮ ಪಂಚಾಯಿತಿ ರಚನೆ ಮಾಡಲು,ಸಂಪತ್ತಿನ ಕೇಂದ್ರೀಕರಣಕ್ಕೆ ತಡೆಯೊದ್ದಲು , ಪಾನ ನಿಷೇಧ ಮಾಡಲು ,ಐತಿಹಾಸಿಕ ಸ್ಮಾರಕ ರಕ್ಷಿಸಲು, ಅಂತರಾಷ್ಟ್ರೀಯ ಶಾಂತಿ  ಕಾಪಾಡಲು ಸೂಚಿಸುತ್ತವೆ .

2.ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದರೆ  ಪರಿಹಾರಕ್ಕೆ  ನಾಗರೀಕರು ನೇರವಾಗಿ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಮೊರೆ ಹೋಗಬಹುದು.

 

೩೨ನೇ ವಿಧಿಯ ಪ್ರಕಾರ    ಹೈಕೋರ್ಟ್ ಮತ್ತು  ಸುಪ್ರೀಂಕೋರ್ಟ್ಗಳು  ರಿಟ್ ಗಳನ್ನು  ಜಾರಿ ಮಾಡುವ ಮೂಲಕ  ಚ್ಯುತಿಯಾಗಿರುವ  ಹಕ್ಕುಗಳನ್ನು ಪುನರ್ಸ್ಥಾಪಿಸುವ ಅಧಿಕಾರ ಹೊಂದಿವೆ 

2. ಇವುಗಳನ್ನು ಅನುಷ್ಟಾನಗೊಳಿಸದಿದ್ದಲ್ಲಿ ಅಥವಾ  ಉಲ್ಲಂಘನೆಯಾದಲ್ಲಿ ಅಂತಹವುಗಳನ್ನು ನ್ಯಾಯಾಲಯದ ಮೂಲಕ  ಜಾರಿಗೊಳಿಸಲು ಅಥವಾ ಪ್ರಶ್ನಿಸಲು ಅವಕಾಶವಿಲ್ಲ .

 

೩೭ನೇ ವಿಧಿಯು ಸಂವಿಧಾನದ ೪ನೇ ಭಾಗ (ನೀತಿ ನಿರ್ದೇಶಕ ತತ್ವಗಳು ) ವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ ಎಂದು ತಿಳಿಸಿದೆ

3. ರಾಜಕೀಯ ಪ್ರಜಾಪ್ರಭುತ್ವಕ್ಕೆ(Political Democracy) ಅವಕಾಶ ನೀಡುತ್ತವೆ

 

3.ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವದ(Social and Economic Democracy) ಗುರಿ ಹೊಂದಿವೆ
4.ಸಂವಿಧಾನವೇ ಇವುಗಳನ್ನು ಈಗಾಗಲೇ ಜಾರಿಗೊಳಿಸಿದ್ದು , ಸಂವಿಧಾನಾತ್ಮಕವಾಗಿ ರಕ್ಷಣೆ ನೀಡಲಾಗಿದೆ . 4. ಇವುಗಳಲ್ಲಿ ಕೆಲವನ್ನು ಶಾಸನದ ಮೂಲಕ ಅನುಶ್ತಾನಗೊಲಿಸಲಾಗಿದೆಯಾದರೂ , ಇನ್ನೂ ಅನೇಕ ತತ್ವಗಳನ್ನು ಅನುಷ್ಟಾನಗೊಲಿಸಬೇಕಾಗಿದೆ .
5. ಇವು ಸಂವಿಧಾನಿಕ ಹಾಗು ಶಾಸನೀಯ ಆಧಾರವನ್ನು ಹೊಂದಿವೆ 5. ಇವುಗಳಿಗೆ ಸಂವಿಧಾನವು ಯಾವುದೇ ಶಾಸನೀಯ ಆಧಾರವನ್ನು ನೀಡಿಲ್ಲ .
6.ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇವುಗಳನ್ನು ಅಮಾನತ್ತು ಗೊಳಿಸಬಹುದು 6.ಇವುಗಳನ್ನು ಅಮಾನತ್ತುಗೊಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಕಾರಣ ಇವು ಸಾರ್ವಕಾಲಿಕ  ಅಮಾನತ್ತು ಗೊಂಡಿರುವ ಸ್ಥಿತಿಯಲ್ಲೇ ಇರುವಂತಹವು .
7.ವೈಯಕ್ತಿಕ ಕಲ್ಯಾಣ ಇವುಗಳ ಮುಖ್ಯ ಉದ್ದೇಶ 7.ಸಮುದಾಯದ ಕಲ್ಯಾಣ ಇವುಗಳ ಮುಖ್ಯ ಉದ್ದೇಶ

 

 

ಹೀಗೆ ಈ ತತ್ವಗಳು ಅನೇಕ ರೀತಿಯಲ್ಲಿ ಮಹತ್ವವನ್ನು ಹೊಂದಿವೆ.ನಮ್ಮ ಈ ನೀತಿ ನಿರ್ದೇಶಕ ತತ್ವಗಳು ಏನೇ ನ್ಯೂನ್ಯತೆಗಳನ್ನು ಹೊಂದಿದ್ದರೂ….CLICK HERE TO READ MORE

Share