23rd JULY MLP-MODEL ANSWERS

23rd  JULY  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

GENERAL STUDIES PAPER-1(ಸಾಮಾನ್ಯ ಅಧ್ಯಾಯ)

 

1.Critically assess the contribution made by Dr Ambedkar to empowerment of women in India.

(ಭಾರತದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಡಾ ಅಂಬೇಡ್ಕರ್ ರವರು ನೀಡಿದ  ಕೊಡುಗೆಗಳನ್ನು   ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಿ.)

250 ಪದಗಳು

 

 

ಭಾರತ ಸ್ವತಂತ್ರಗೊಂಡು ಸಂವಿಧಾನವು ಅನುಷ್ಠಾನಗೊಂಡರೂ ಮಹಿಳೆಯರ ಜೀವನ ಕ್ರಮದಲ್ಲಿ ಏನೂ ಸುಧಾರಣೆ ಬರಲಿಲ್ಲ. ಮಹಿಳಾ ಅಧ್ಯಯನದ ಮೂಲಕವೇ ಭಾರತದ ಸಮಾಜ ಅಧ್ಯಯನ ಮಾಡಿ, ಪ್ರಯೋಗಶೀಲ ಸಮತಾ ಸಮಾಜವೊಂದನ್ನು ಕ್ರಾಂತಿಯ ಮೂಲಕ ಕಟ್ಟಿದ ಬುದ್ಧನ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಅಂಬೇಡ್ಕರ್‍  ಬಾಲಿಕಾ ವಿವಾಹ, ಸತಿ ಪದ್ಧತಿ, ಬಲವಂತದ ವೈಧವ್ಯ, ಬಲವಂತದ ಬ್ರಹ್ಮಚರ್ಯ, ವಯಸ್ಸಾದ ಪುರುಷರು ಮತ್ತು ವಿಧುರರೊಡನೆ ಬಾಲಿಕಾ ವಿವಾಹ ಇವು ಹೇಗೆ ಮಹಿಳೆಯ ಮೂಲಕವೇ ಸಮಾಜವನ್ನು ನಿಯಂತ್ರಿಸುವ ಜಾತಿಯ ಕಟ್ಟಳೆಗಳಾಗಿವೆ ಎಂಬುದನ್ನು ತಮ್ಮ “ಭಾರತದಲ್ಲಿ ಜಾತಿಗಳು” (ಜಾತಿಗಳ ಹುಟ್ಟು, ರಚನೆ, ಸ್ವರೂಪ) ಎಂಬ ಸಂಶೋಧನಾ ಅಧ್ಯಯನದ ಮೂಲಕ ಕಂಡುಕೊಂಡರು.

ಭಾರತದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಡಾ ಅಂಬೇಡ್ಕರ್ ರವರು ನೀಡಿದ  ಕೊಡುಗೆ   

  • ಭಾರತದ ಮನುಷ್ಯನ ವಿಕಾಸದ ಹಾಗೂ ಆತ್ಮೋನ್ನತಿಯ ಹಂತಗಳನ್ನು ನಿರೂಪಿಸಿದ ಮನುವಿನ ಆಶ್ರಮಧರ್ಮ ಪದ್ಧತಿಯಲ್ಲಿ ಮಹಿಳೆ ಇಲ್ಲ. ಚಾತುರ್ವರ್ಣ ಪದ್ಧತಿಯಲ್ಲಿ ಅವಳಿಗೆ ಸ್ಥಾನಮಾನಗಳನ್ನು ಕಲ್ಪಿಸಲಾಗಿಲ್ಲ. ಹೀಗಾಗಿ ಇದೊಂದು ಅನೈಸರ್ಗಿಕ ಮತ್ತು ಅವೈಜ್ಞಾನಿಕವಾದ ಆಗಿದ್ದು, ಸ್ಥಾಪಿತ ನಂಬಿಕೆಯ ಮೂಲಕ ಇದನ್ನು ಜನಮಾನಸದಲ್ಲಿ ಕಟ್ಟಲಾಗಿದೆ ಎಂದು ಅಂಬೇಡ್ಕರ್‍ ವಾದಿಸಿದರು.   ಖಾರವಾಗಿ ಪ್ರಶ್ನಿಸಿದರು.  ಮದುವೆಯಿಂದಲೇ ಹೆಣ್ಣಿನ ಸ್ಥಾನ ನಿರ್ಣಯವಾಗುವುದಾದರೆ ಯೋಗ್ಯತಾನುಸಾರ ವರ್ಣವೆಂಬ ಚಾತುರ್ವಣ್ರ್ಯದ ತತ್ವವೆಲ್ಲಿ ಉಳಿಯಿತು. ಯೋಗ್ಯತಾನುಗುಣವಾಗಿಯೇ ಅದರ ವರ್ಣವನ್ನು ನಿರ್ಣಯಿಸುವುದಾದರೆ ಆ ವರ್ಗೀಕರಣ ನಾಮ ಮಾತ್ರವೇ  ನಾಮ ಮಾತ್ರ ಎಂದಾದರೆ ಅದು ನಿಸ್ಪ್ರಯೋಜಕ ಎಂದಾಗುತ್ತದೆ, ಮತ್ತು ಚಾತುರ್ವಣ್ರ್ಯವು ಸ್ತ್ರೀಯರಿಗೆ ಅನ್ವಯಿಸುವುದಿಲ್ಲವೆಂದು ಒಪ್ಪಬೇಕಾಗುತ್ತದೆ.  ಸ್ತ್ರೀ ಬ್ಯಾರಿಸ್ಟರುಗಳು ಉಂಟು, ಹೆಂಡ ತಯಾರಿಸುವ, ಕಸಾಯಿಖಾನೆ ನಡೆಸುವ ಸ್ತ್ರೀಯರನ್ನು ನಮ್ಮ ಸಮಾಜ ಒಪ್ಪಿಕೊಂಡಿತು. ಚತುರ್ವರ್ಣವನ್ನು ಸ್ತ್ರೀಯರಿಗೆ ಅನ್ವಯಿಸುವುದರಿಂದಲೇ ಹೀಗಾಗುವುದೆಂದು ಹೇಳುವುದು ಸಾಹಸದ ಮಾತು. ಈ ಬಗೆಯ ಕಷ್ಟಗಳಿರುವುದರಿಂದ ಚಾತುರ್ವಣ್ರ್ಯ ಪದ್ಧತಿಯ ಪುನರುಜ್ಜೀವನ ಸಾಧ್ಯವೆಂದು ಯಾವ ಬುದ್ಧಿವಂತನೂ ನಂಬಲಾರನು” ಎಂದು ಶ್ರೇಣೀಕ ಪದ್ಧತಿಯನ್ನು ವಿರೋಧಿಸಿದರು.
  • ಈ ಚಾತುರ್ವರ್ಣ್ಯ ಪದ್ಧತಿಯು ಆರಂಭದಲ್ಲಿ ವರ್ಗ ಸ್ವಭಾವಗಳನ್ನು ಹೊಂದಿದ್ದನ್ನು, ಅನಂತರ ಅದು ಜಾತಿ ಸ್ವರೂಪವನ್ನು ಪಡೆದು ಸಾಮಾಜಿಕ ಒಳಗೊಳ್ಳುವಿಕೆ, ಸಮಪಾಲುದಾರಿಕೆ ಮತ್ತು ಸಹಭಾಗಿತ್ವವನ್ನು ನಿರಾಕರಿಸುವ ಮೂಲಕ ಮೇಲ್ವರ್ಗ, ಕೆಳವರ್ಗ ಮತ್ತು ಕೀಳುವರ್ಗಗಳ ಜೊತೆ ಮೇಲು, ಕೀಳು ಎಂಬ ಅಸ್ಪøಶ್ಯತಾಚರಣೆ ಮೂಲಕ ಅಖಂಡ ಭಾರತವನ್ನು ಭಾರತ ಮತ್ತು ಬಹಿಷ್ಕøತ ಭಾರತವಾಗಿ ವಿಭಜಿಸಿತು. ಚಾತುರ್ವಣ್ರ್ಯದ ಅತ್ಯಂತ ಕೆಳವರ್ಣವಾದ ಶೂದ್ರವರ್ಗದಲ್ಲಿಯ ಅಂಚಿನ ಸಮುದಾಯ/ಜಾತಿ ಜನರೊಂದಿಗೆ ನಾಲ್ಕೂ ವರ್ಣದ ಮಹಿಳೆಯರೂ ಸೇರಿಸಲ್ಪಟ್ಟಿದ್ದಾರೆ. ಜಾತಿ ಶ್ರೇಣೀಕರಣದಲ್ಲಿ ಮೇಲಿನಿಂದ ಕೆಳಕ್ಕೆ ಹೋದಂತೆ ಅವರ ಶೋಷಣೆ ಹೆಚ್ಚುತ್ತ ಹೋಗುತ್ತದಾದರೂ ಅಧಿಕಾರ ವಂಚಿತ ಕೇಂದ್ರಗಳಲ್ಲಿ ಸಮಾನ ಸ್ಥೀತಿಯಲ್ಲಿದ್ದಾರೆ. ದಲಿತ ಮತ್ತು ಭಾರತದ ಎಲ್ಲ ಮಹಿಳೆಯರು ಅಧಿಕಾರ ಮತ್ತು ಆಸ್ತಿವಂಚಿತರಾಗಿರುವುದರಿಂದ ಬಹುಜನ ವರ್ಗವೊಂದು ಹೀನ ಸ್ಥಿತಿಯನ್ನು ತಲುಪಿತ್ತು ಮತ್ತು ಸೇವಕ ವರ್ಗವಾಗಿ ನಿಯುಕ್ತಿಗೊಂಡಿತ್ತು.
  • “ವರ್ಗ ಜಾತಿ ಹಾಗೂ ಪಿತೃಪ್ರಧಾನ ವ್ಯವಸ್ಥೆಗಳ ಪರಾಧೀನತೆಯ ಮುಖಾಂತರ ಭಾರತದಲ್ಲಿ ಮಹಿಳೆಯರ ಪರಾಧೀನತೆ ತೀವ್ರಗೊಂಡಿದೆ. ಭಾರತೀಯ ಸಂದರ್ಭದಲ್ಲಿ ಜಾತಿ ವ್ಯವಸ್ಥೆ ಮಹಿಳೆಯ ಪರಾಧೀನತೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಜಾತಿ ಮೂಲದ ಶ್ರಮ ವಿಭಜನೆ, ಜಾತಿ ಪಂಚಾಯತಿ, ಜಾತಿ ಮೂಲದ ವೈಯಕ್ತಿಕ ಕಾನೂನುಗಳು ಮಹಿಳೆಯ ಪರಾಧೀನತೆಗೆ ಕೊಡುಗೆ ಸಲ್ಲಿಸುತ್ತದೆ. ವಿವಾಹ, ವಿವಾಹ ವಿಚ್ಛೇದನ, ಮರುವಿವಾಹ, ಉತ್ತರಾಧಿಕಾರ ಇತ್ಯಾದಿಗಳಲ್ಲಿ ಜಾತಿ ಆಧಾರಿತ ಕಾನೂನುಗಳು ಹಾಗೂ ನಿರ್ಬಂಧಗಳು ಮಹಿಳೆ ಪುರುಷನನ್ನು ಅವಲಂಭಿಸುವಂತೆ ಮಾಡಿ ನಿರ್ಗತಿಕಳನ್ನಾಗಿಸುತ್ತದೆ”- ಇವೆಲ್ಲವೂ ಪುರುಷಾಧಿಕಾರವನ್ನು ಹೊಂದಿದ್ದು, ಮಹಿಳೆಗೆ ವಿಚ್ಛೇದನದ ಅಧಿಕಾರವನ್ನು ನೀಡಿಲ್ಲ. ಭಾರತ ಸಮಾಜದ ಸಂಕೀರ್ಣತೆಗಳ ಸಿಕ್ಕು ಬಿಡಿಸುವುದು ಮತ್ತು ಜಾತಿ ವಿನಾಶ ಮಾಡುವುದು ಮಹಿಳೆಯ ಆಯ್ಕೆ ಮತ್ತು ನಿರಾಕರಣೆ ಸ್ವಾತಂತ್ರ್ಯದಿಂದ ಮಾತ್ರ ಸಾಧ್ಯವೆಂದು ಅರಿತ ಅಂಬೇಡ್ಕರ್‍ರು ಮಹಿಳೆಯರ ಬಿಡುಗಡೆಯಲ್ಲಿಯೇ ಸಾಮಾಜಿಕ ವಿಮೋಚನೆ ಇದೆ ಎಂದು ನಂಬಿದ್ದರು. ಮಹಿಳೆಗೆ ಸಂವಿಧಾನಿಕವಾದ ಹಕ್ಕು ಮತ್ತು ಅಧಿಕಾರ ಸಿಗಬೇಕೆಂಬ ಸಂಕಲ್ಪದಿಂದ ಸಂವಿಧಾನ….CLICK HERE TO READ MORE
Share