27th AUGUST
1.ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಾಂಬೆ ನೈಸರ್ಗಿಕ ಇತಿಹಾಸ ಸಮಾಜ –BNHS)
SOURCE-THE HINDU https://www.thehindu.com/todays-paper/tp-national/bnhs-to-open-its-regional-centre-today/article24788326.ece
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ -ಚಿಲ್ಕ ಸರೋವರದ ಬಗ್ಗೆ ಹಾಗು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಸಂಕ್ಷಿಪ್ತ ಅವಲೋಕನ
ಪ್ರಮುಖ ಸುದ್ದಿ
- ಭಾರತದ ಪ್ರಧಾನ ಏವಿಯನ್ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾದ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS)ಯು , ಚಿಲ್ಕಾ ಸರೋವರದ ಬಳಿಯಿರುವ ವೆಟ್ ಲ್ಯಾ೦ಡ್ ಸಂಶೋಧನಾ ಮತ್ತು ತರಬೇತಿ ಕೇಂದ್ರದ ಕ್ಯಾಂಪಸ್ ನಲ್ಲಿ ತನ್ನ ಮೊದಲ ಪ್ರಾದೇಶಿಕ ಕೇಂದ್ರವನ್ನು ಪ್ರಾರಂಭಿಸಿದೆ.
ಮುಖ್ಯ ಅಂಶಗಳು
- ಒಡಿಶಾದಲ್ಲಿ ತನ್ನ ಪ್ರಾದೇಶಿಕ ಕೇಂದ್ರವನ್ನು ತೆರೆಯುವ ಮೂಲಕ, ಬಿಎನ್ಎಚ್ಎಸ್ ಚಳಿಗಾಲದಲ್ಲಿ ಚಿಲ್ಕಾ ಸರೋವರಕ್ಕೆ ಬರುವ ವಿದೇಶಿ ಪಕ್ಷಿಗಳ ವಾಯು ಮಾರ್ಗವನ್ನು ಗುರುತಿಸುವ ನಿಟ್ಟಿನಲ್ಲಿ ,ಹಾಗು ಮಾದರಿ ಸಂಗ್ರಹಣೆ, ಹಕ್ಕಿ ಗಣತಿಗೆ ಸಂಬಂಧಿಸಿದ ತರಬೇತಿ, ಹಕ್ಕಿ ವಲಸೆಯ ಅಟ್ಲಾಸ್ ಪುಸ್ತಕಗಳನ್ನು ಪ್ರಕಟಿಸುವುದು, ಪಕ್ಷಿಗಳ ನಡುವೆ ವಿವಿಧ ರೋಗಗಳನ್ನು ಪರೀಕ್ಷಿಸುವುದು ಮತ್ತು ಪಕ್ಷಿಗಳು ಎಣಿಸುವ ಜೊತೆಗೆ ನಲಬಾನಾ ಪಕ್ಷಿಧಾಮದ ಸ್ಥಿತಿಯನ್ನು ಪರಿಶೀಲಿಸುವುದು ಇದರ ಉದ್ದೇಶ ವಾಗಿದೆ.
ಚಿಲ್ಕ ಸರೋವರದ ಬಗ್ಗೆ
- ಬಂಗಾಳ ಕೊಲ್ಲಿಗೆ ಹೋಗಿ ಸೇರುವ, ದಯಾ ನದಿಯ ಮುಖ ಭಾಗದಲ್ಲಿರುವ, ಭಾರತದ ಪೂರ್ವ ಕರಾವಳಿಯ ಒಡಿಶಾ ರಾಜ್ಯದ ಪುರಿ, ಖುರ್ದಾ ಮತ್ತು ಗಂಜಾಂ ಜಿಲ್ಲೆಗಳುದ್ದಕ್ಕೂ ಹರಡಿಕೊಂಡಿರುವ ಚಿಲ್ಕ ಸರೋವರ (ಚಿಲಿಕ ಸರೋವರ ) ಒಂದು ಉಪ್ಪು ನೀರಿನ ಸರೋವರವಾಗಿದೆ.
- ಅದು ಭಾರತದಲ್ಲೇ ಅತ್ಯಂತ ದೊಡ್ಡ ಕರಾವಳಿಯ ನೀರಿನ ಪ್ರದೇಶವಾಗಿದೆ ಹಾಗೂ ವಿಶ್ವದಲ್ಲೇ ಎರಡನೆಯ ಅತಿ ವಿಶಾಲವಾದ ಜಲಾವೃತ ಪ್ರದೇಶವಾಗಿದೆ.
- ಭಾರತೀಯ ಉಪಖಂಡದಲ್ಲಿ ವಲಸೆ ಬರುವ ಪಕ್ಷಿಗಳಿಗೆ ಅದು ಚಳಿಗಾಲದ ಆಶ್ರಯದಾಣ. ಈ ಸರೋವರವು ಅಳಿವಿನ ಅಂಚಿನಲ್ಲಿರುವ ಅನೇಕ ಗಿಡಗಳು ಹಾಗೂ ಪ್ರಾಣಿಗಳ ತಳಿಗಳಿಗೆ ಆಶ್ರಯ ಸ್ಥಾನವಾಗಿದೆ.
- ಸರೋವರದ ಅಭಿವೃದ್ಧಿಗೊಂಡ ಸ್ಥಿತಿಗಳನ್ನು ಮನಗಂಡು 2002ರಲ್ಲಿ ಚಿಲ್ಕವನ್ನು ಮಾಂಟ್ರಾಕ್ಸ್ ದಾಖಲೆಗಳಿಂದ ಹೊರಗೆ ಹಾಕಲಾಯಿತು. ಚಿಲ್ಕ ಸರೋವರವು ಮಾಂಟ್ರಾಕ್ಸ್ ದಾಖಲೆಗಳಿಂದ ಹೊರಹಾಕಲ್ಪಟ್ ಮೊಟ್ಟಮೊದಲ ರಾಮ್ಸಾಸ್ ತಾಣವಾಗಿದೆ.
- ವಲಸೆ ಬರುವ ಹಕ್ಕಿಗಳಿಗೆ ಚಿಲ್ಕ ಸರೋವರವು ಭಾರತೀಯ ಪರ್ಯಾಯದ್ವೀಪದ ಅತಿ ದೊಡ್ಡ ಚಳಿಗಾಲದ ಆಶ್ರಯತಾಣವಾಗಿದೆ. ಇದು ದೇಶದಜೈವಿಕವೈವಿಧ್ಯತೆಯನ್ನು ಬಿಂಬಿಸುವ ಪ್ರಮುಖತಾಣಗಳಲ್ಲಿ ಒಂದಾಗಿದೆ. IUCN ಕೆಂಪು ಪಟ್ಟಿಯಲ್ಲಿ ಉಲ್ಲೇಖಿಸಲ್ಪಟ್ಟಿರುವ ಪ್ರಾಣಾಪಾಯದಲ್ಲಿರುವ/ ಅಳಿವಿನಂಚಿನಲ್ಲಿರುವ ಕೆಲವು ಪ್ರಾಣಿವರ್ಗಗಳು ತಮ್ಮ ಜೀವನಚಕ್ರದಲ್ಲಿನ ಸ್ವಲ್ಪ ಭಾಗವನ್ನಾದರೂ ಈ ಸರೋವರದಲ್ಲಿ ಕಳೆಯುತ್ತವೆ.
- ನಳಬನ ದ್ವೀಪವು ಚಿಲಿಕ ಸರೋವರಕ್ಕೆ ಅಧಿಸೂಚಿತವಾದ ರಾಮ್ಸಾರ್ ಕ್ಲಿನ್ನಭೂಮಿಗಳ ಕೇಂದ್ರ ಪ್ರದೇಶವಾಗಿದೆ. ಒರಿಯಾ ಭಾಷೆಯಲ್ಲಿ ನಳಬನ ಎಂದರೆ ಒಂದು ಕಳೆಗಳಿಂದ ಆವೃತವಾದ ದ್ವೀಪ ಎಂದರ್ಥ.
ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಬಗ್ಗೆ
- 1883 ರಂದು ಸ್ಥಾಪನೆಯಾದ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಯು , ಸಂರಕ್ಷಣಾ ಮತ್ತು ಜೀವವೈವಿಧ್ಯ ಸಂಶೋಧನೆಯಲ್ಲಿ ತೊಡಗಿರುವ ಭಾರತದ ಅತಿದೊಡ್ಡ ಸರ್ಕಾರೇತರ ಸಂಸ್ಥೆಗಳಲ್ಲಿ ಒಂದಾಗಿದೆ.
- ಇದನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ‘ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ’ ಎಂದು ಗೊತ್ತುಪಡಿಸಲಾಗಿದೆ…..CLICK HERE TO READ MORE