28th JULY-THE HINDU EDITORIAL

ನಮ್ಮ ಐಎಎಸ್ ಅಕಾಡೆಮಿಯ ಸಂಪಾದಕೀಯ ಒಳನೋಟ

 

ಭಾರತದಲ್ಲಿ ಎಚ್ಐವಿ ಸೋಂಕಿತರ ಸಂಕ್ಷಿಪ್ತ  ವಿಶ್ಲೇಷಣೆ

 

SOURCE-THE HINDU https://www.thehindu.com/opinion/editorial/tackling-hiv/article24523560.ece

 

 

ಈ ಆರ್ಟಿಕಲ್ ನಿಂದ ಮುಖ್ಯವಾಗಿ ತಿಳಿದು ಕೊಳ್ಳಬೇಕಾದ ಅಂಶಗಳು

  • ವರದಿಯ ಪ್ರಮುಖ ಸಂಗತಿಗಳು
  • ಎಚ್‌.ಐ.ವಿ. ಎಂದರೇನು?
  • ಭಾರತದಲ್ಲಿ ಎಚ್ಐವಿ ಹರಡಲು ಕಾರಣಗಳೇನು ?
  • ಎಚ್‌.ಐ.ವಿ. ಸೋಂಕಿನ ಲಕ್ಷಣಗಳಳೇನು ?
  • ಕೌನ್ಸೆಲಿಂಗ್‌ ಎಂದರೇನು?
  • ಎಚ್‌.ಐ.ವಿ. ಪಾಸಿಟಿವ್‌ ಸ್ಥಿತಿಯನ್ನು ತಿಳಿದುಕೊಳ್ಳುವುದರಿಂದ ಆಗುವ ಅನುಕೂಲಗಳಳೇನು ?
  • ಚಿಕಿತ್ಸೆಗಳು ಅಂದರೆ ಏನು ?
  • ಎ.ಆರ್‌.ಟಿ. ಔಷಧ ಎಂದರೇನು ?
  • ಏಡ್ಸ್‌ ಹೋರಾಟದ ಚಿಹ್ನೆ ರೆಡ್‌ ರಿಬ್ಬನ್‌ ಏನನ್ನು  ಸೂಚಿಸುತ್ತದೆ ?

 

  • ಎಚ್ಐವಿ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಂಡ ಕ್ರಮಗಳೇನು ?
  1. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ
  2. ಭಾರತೀಯ ವೈದ್ಯಕೀಯ ಮಂಡಳಿ ಕಾಯಿದೆ-1956
  3. ಅನೌಪಚಾರಿಕ ಸಂಚಾರ ತಡೆಗಟ್ಟುವಿಕೆ ಕಾಯಿದೆ-1986
  4. ಎಚ್ಐವಿ ಮತ್ತು ಏಡ್ಸ್ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಮಸೂದೆ –2017
  5. ರಾಷ್ಟ್ರೀಯ ಕಾರ್ಯತಂತ್ರದ ಯೋಜನೆ (2017-24) ಮತ್ತು ಮಿಷನ್ ಸಂಪರ್ಕ್
  6. 90:90:90 ಸ್ಟ್ರಾಟಜಿ
  7. ಪ್ರಾಜೆಕ್ಟ್ ಸನ್ ರೈಸ್
  • ಮುಂದಿನ ಹಾದಿ

 

 

ಸನ್ನಿವೇಶ

  • ಕಳೆದ ಏಳು ವರ್ಷಗಳಲ್ಲಿ ದೇಶದಲ್ಲಿ ಹೊಸ ಎಚ್‌ಐವಿ ಪ್ರಕರಣಗಳ ಸಂಖ್ಯೆ ಶೇಕಡ 6 ರಷ್ಟು ಇಳಿಕೆಯಾಗಿದ್ದು, ಏಡ್ಸ್‌ನಿಂದ ಆಗುತ್ತಿರುವ ಸಾವಿನ ಪ್ರಮಾಣ ಶೇಕಡ 56.8 ರಷ್ಟು ಇಳಿಕೆಯಾಗಿದೆ ಎಂದು ವಿಶ್ವಸಂಸ್ಥೆ (UNAIDS-United Nations Programme on HIV/AIDS) ವರದಿ ಹೇಳಿದೆ.
  • 2010ರಿಂದ 2017ರವರೆಗೆ ಸರ್ಕಾರಗಳು ನಡೆಸಿದ ನಿರಂತರ ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎಂದು ವರದಿ ವಿವರಿಸಿದೆ.

 

ವರದಿಯ  ಪ್ರಮುಖ ಸಂಗತಿ

 

  • ಭಾರತದಲ್ಲಿ ಹೊಸ ಎಚ್‌ಐವಿ ಸೋಂಕು ಪ್ರಕರಣ 2010ರಲ್ಲಿ 2 ಲಕ್ಷ ಇದ್ದುದು 2017ರಲ್ಲಿ 88 ಸಾವಿರಕ್ಕೆ ಇಳಿದಿದೆ. ಏಡ್ಸ್ ಸಂಬಂಧಿ ಸಾವಿನ ಸಂಖ್ಯೆ 1.6 ಲಕ್ಷದಿಂದ 69 ಸಾವಿರಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಏಡ್ಸ್ ರೋಗದಿಂದ ಬಳಲುತ್ತಿರುವವರ ಸಂಖ್ಯೆ ಕೂಡಾ 23 ಲಕ್ಷದಿಂದ 21 ಲಕ್ಷಕ್ಕೆ ಇಳಿದಿದೆ ಎಂದು ವರದಿ ತಿಳಿಸಿದೆ.

 

  • ಈ ಸುಧಾರಣೆಯಲ್ಲಿ ಭಾರತ ಜಾಗತಿಕ ಸರಾಸರಿಗಿಂತ ಮುಂದಿದೆ. ಜಾಗತಿಕವಾಗಿ ಈ ಅವಧಿಯಲ್ಲಿ ಹೊಸ ಪ್ರಕರಣಗಳ ಇಳಿಕೆ ಪ್ರಮಾಣ ಶೇಕಡ 18ರಷ್ಟಾಗಿದೆ. 2020ರ ವೇಳೆಗೆ ಇದನ್ನು ಶೇಕಡ 75ಕ್ಕೆ ತಲುಪಿಸುವ ಗುರಿ ಹಾಕಿಕೊಳ್ಳಲಾಗಿದೆ.
  • ಜಾಗತಿಕವಾಗಿ ಏಡ್ಸ್‌ನಿಂದಾಗುವ ಸಾವಿನ ಸಂಖ್ಯೆ ಶೇಕಡ 34ರಷ್ಟು ಇಳಿಕೆಯಾಗಿದೆ.

 

  • ಭಾರತದಲ್ಲಿ ಒಟ್ಟು ಎಚ್ಐವಿ ರೋಗಿಗಳು: 1 ಮಿಲಿಯನ್
  • 15-49 ವರ್ಷಗಳಲ್ಲಿನ ವಯಸ್ಕರ ಪೀಡಿತ ಸಂಖ್ಯೆ  : 83%
  • 15 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ : 3%
  • ಮಹಿಳೆಯರಲ್ಲಿ: 39%
  • ಭಾರತದ ದಕ್ಷಿಣ, ಪಶ್ಚಿಮ ಮತ್ತು ಈಶಾನ್ಯ ರಾಜ್ಯಗಳಲ್ಲಿ ಎಚ್ಐವಿ ಹೆಚ್ಚು ಪ್ರಚಲಿತವಾಗಿದೆ.
  • ಭಾರತದ ದಕ್ಷಿಣ ಭಾಗದ ನಾಲ್ಕು ರಾಜ್ಯಗಳಲ್ಲಿ 55% ಎಚ್ಐವಿ ಸೋಂಕುವಿಂದ ಬಳಲುತ್ತಿದ್ದಾರೆ.
  • ಮಣಿಪುರ್, ನಾಗಾಲ್ಯಾಂಡ್ ಮತ್ತು ಮಿಜೋರಾಮ್ ನಂತಹ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ವಯಸ್ಕರಿಗೆ (15-49 ವರ್ಷಗಳು) ಎಚ್ಐವಿ  ಸೋಂಕಿದೆ.

 

ಎಚ್‌.ಐ.ವಿ. ಎಂದರೇನು?

  • ಹ್ಯೂಮನ್‌ ಇಮ್ಯೂನೊಡಿಫಿಶಿಯನ್ಸಿ ವೈರಸ್‌ – ಎನ್ನುವುದು ಎಚ್‌.ಐ.ವಿ. (HIV)ಯ ವಿಸ್ತೃತರೂಪ:
  • ಹ್ಯೂಮನ್‌ (ಮಾನವ) – ಅಂದರೆ ಈ ವೈರಸ್‌ ಮನುಷ್ಯರನ್ನು ಮಾತ್ರ ಬಾಧಿಸುತ್ತದೆ ಎಂದರ್ಥ.
  • ಇಮ್ಯೂನೊಡಿಫಿಶಿಯನ್ಸಿ (ರೋಗ ನಿರೋಧಕ ಕೊರತೆ) ಅಂದರೆ – ದೇಹದ ರೋಗ ನಿರೋಧಕ ಶಕ್ತಿ ಕ್ಷೀಣಿಸಿದೆ ಎಂದರ್ಥ. ವೈರಸ್‌ ಅಂದರೆ ರೋಗ ನಿರೋಧಕ ಶಕ್ತಿಯನ್ನು ಕ್ಷೀಣಿಸುವಂತೆ ಮಾಡುವ ಒಂದು ಸೂಕ್ಷ್ಮಾಣುಜೀವಿ.

 

  • ಏಡ್ಸ್‌ ಎಂದರೆ ಅಕ್ವಯರ್ಡ್‌ ಇಮ್ಯೂನೊ ಡಿಫೀಶಿಯನ್ಸಿ ಸಿಂಡ್ರೋಮ್‌. ಅಂದರೆ ಇದು ಮಾನವನು ಎಚ್‌.ಐ.ವಿ. ಎಂಬ ವೈರಸ್‌ನಿಂದ ಸೋಂಕಿತಗೊಂಡಿದ್ದಾನೆ, ಇದು ಆನುವಂಶಿಕವಾದುದಲ್ಲ ಎಂಬುದನ್ನು ತಿಳಿಸುತ್ತದೆ.

 

  • ಇಮ್ಯೂನ್‌ ಡಿಫೀಶಿಯನ್ಸಿ (ರೋಗ ನಿರೋಧಕ ಕೊರತೆಯ ಸಿಂಡ್ರೋಮ್‌ (ರೋಗ ಲಕ್ಷಣಕೂಟ) – ಅಂದರೆ ವ್ಯಕ್ತಿಯು ಎಚ್‌.ಐ.ವಿ.ಯಿಂದ ಸೋಂಕಿತನಾಗಿದ್ದಾನೆ ಮತ್ತು ಅದು ಉಲ್ಬಣಿತ ಸ್ಥಿತಿಯನ್ನು ತಲುಪಿದೆ ಎಂದು ಸೂಚಿಸುವ ಲಕ್ಷಣ ಅಥವಾ ಕಾಯಿಲೆಗಳ ಸಮೂಹ.

 

ಭಾರತದಲ್ಲಿ ಎಚ್ಐವಿ ಹರಡಲು ಕಾರಣಗಳೇನು ?

 

  • ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಎಚ್‌.ಐ.ವಿ. ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
  • ಹೆತ್ತವರಿಂದ, ಸೋಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯಲ್ಲಿ, ಪ್ರಸವ ಸಮಯದಲ್ಲಿ ಮತ್ತು ಎದೆಹಾಲು ಉಣಿಸುವಿಕೆ ಸಂದರ್ಭದಲ್ಲಿ ಹರಡಬಹುದು.
  • ರಕ್ತದ ಮೂಲಕ ಎಚ್‌.ಐ.ವಿ. ಸೋಂಕಿತ ರಕ್ತ ಮತ್ತು ರಕ್ತದ ಉತ್ಪನ್ನಗಳನ್ನು ಸ್ವೀಕರಿಸುವುದರಿಂದ ಹರಡಬಹುದು.
  • ಸೋಂಕಿತ ವ್ಯಕ್ತಿಯೊಂದಿಗೆ ಸೂಜಿ, ಸಿರಿಂಜುಗಳನ್ನು ಹಂಚಿಕೊಳ್ಳುವುದರಿಂದ ಎಚ್‌.ಐ.ವಿ. ಹರಡಬಹುದು.
  • ನಮ್ಮ ದೇಹದಲ್ಲಿ ಸಿ.ಡಿ. 4 ಎಂಬ ಒಂದು ರೀತಿಯ ಜೀವಕೋಶಗಳಿರುತ್ತವೆ. ಈ ರೀತಿಯ ಜೀವಕೋಶಗಳು…CLICK HERE TO READ MORE
Share