30th JULY
1.ಬ್ಲಡ್ ಮೂನ್ (Blood Moon)
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಪರೀಕ್ಷೆಗಾಗಿ -ಬ್ಲಡ್ ಮೂನ್(ರಕ್ತ ಚಂದಿರ ) ಎಂದರೇನು ? ಅದು ಹೇಗೆ ಸಂಭವಿಸುತ್ತದೆ? ಜುಲೈ 2018 ರ ಚಂದ್ರ ಗ್ರಹಣದ ಮಹತ್ವದ ಬಗ್ಗೆ .
ಮುಖ್ಯ ಪರೀಕ್ಷೆಗಾಗಿ -ಭಾರತದಲ್ಲಿನ ಗ್ರಹಣಕ್ಕೆ ಸಂಬಂಧಿಸಿದ ನಂಬಿಕೆಗಳ ಬಗ್ಗೆ ವಿಶ್ಲೇಷಿಸಿ .
ಪ್ರಮುಖ ಸುದ್ದಿ
ಗ್ರಹಣ ಎಂದರೇನು ?
- ಗ್ರಹಣವು ಒಂದು ಬಾಹ್ಶಾಕಾಶದವಸ್ತುವು ಮತ್ತೊಂದರ ನೆರಳಿನಲ್ಲಿ ಚಲಿಸಿದಾಗ ಉಂಟಾಗುವ ಒಂದು ಖಗೋಳಶಾಸ್ತ್ರೀಯ ಘಟನೆ. ಸೌರಮಂಡಲದಂತಹ ಒಂದು ತಾರಾಮಂಡಲದಲ್ಲಿ ಗ್ರಹಣ ಉಂಟಾದಾಗ, ಒಂದು ಬಗೆಯ ಸಂಯೋಗದ (ಸರಳ ರೇಖೆಯಲ್ಲಿ ಒಂದೇ ಗುರುತ್ವಾಕರ್ಷಣ ವ್ಯವಸ್ಥೆಯಲ್ಲಿನ ಮೂರು ಅಥವಾ ಹೆಚ್ಚು ಬಾಹ್ಯಾಕಾಶ ಕಾಯಗಳ ಹೊಂದಿಕೆ) ರಚನೆಯಾಗುತ್ತದೆ.
- ಗ್ರಹಣ ಪದವನ್ನು ಹಲವುವೇಳೆ, ಒಂದು ಸೂರ್ಯಗ್ರಹಣ (ಚಂದ್ರನ ನೆರಳು ಭೂಮಿಯ ಮೇಲ್ಮೈಯನ್ನು ಹಾದುಹೋಗುವ ಘಟನೆ), ಅಥವಾ ಒಂದು ಚಂದ್ರಗ್ರಹಣವನ್ನು (ಚಂದ್ರವು ಭೂಮಿಯ ನೆರಳಿನಲ್ಲಿ ಚಲಿಸುವ ಘಟನೆ) ವಿವರಿಸಲು ಬಳಸಲಾಗುತ್ತದೆ
- ದೀರ್ಘಾವಧಿಯದ್ದು ಎನ್ನಲಾಗುತ್ತಿರುವ ಚಂದ್ರಗ್ರಹಣವು ಜು.27 ರ ಮಧ್ಯರಾತ್ರಿ ನಡೆದಿದೆ . ವಿಶೇಷವೆಂದರೆ, ಇದೇ ಸಮಯದಲ್ಲಿ ಮಂಗಳ ಗ್ರಹವು ಚಂದ್ರನ ಸಮೀಪ ಬರಲಿದೆ.
ಮುಖ್ಯ ಅಂಶಗಳು
- ಸಾಮಾನ್ಯವಾಗಿ ಚಂದ್ರಗ್ರಹಣ ಮೂರರಿಂದ ನಾಲ್ಕು ಗಂಟೆಗಳ ಅವಧಿಯದ್ದಾಗಿರುತ್ತದೆ. ಹಿಂದಿನ ಚಂದ್ರಗ್ರಹಣಗಳಿಗೆ ಹೋಲಿಸಿದರೆ ಈ ಬಾರಿಯ ಚಂದ್ರಗ್ರಹಣ ಸ್ವಲ್ಪ ಹೆಚ್ಚು ನಿಮಿಷ ಕಾಣಿಸಿದೆ. ಇದು ಶತಮಾನದ ಅತಿ ದೀರ್ಘಾವಧಿಯ ಚಂದ್ರಗ್ರಹಣವೆಂದು ಗುರುತಿಸಲಾಗಿದೆ.
- ಭೂಮಿಯ ನೆರಳು ಚಂದ್ರನನ್ನು ಸಂಪೂರ್ಣವಾಗಿ ಆವರಿಸಿಕೊಂಡ ಬಳಿಕ ಚಂದ್ರನ ಬಣ್ಣ ನಸುಗೆಂಪು ಬಣ್ಣಕ್ಕೆ ತಿರುಗಲಿದೆ. ಜ.31 ರಂದು ಚಂದ್ರಗ್ರಹಣವಾಗಿದ್ದಾಗ ಇದೇ ರೀತಿ ಕಂಡುಬಂದಿತ್ತು. ಅಂದಿನ ಚಂದ್ರನನ್ನು ‘ಸೂಪರ್ ಬ್ಲಡ್ ಮೂನ್’ ಎಂದು ಕರೆದರೆ, ಈ ಬಾರಿ ಗ್ರಹಣಕ್ಕೊಳಗಾಗುತ್ತಿರುವ ಚಂದ್ರನಿಗೆ ‘ಬ್ಲಡ್ ಮೂನ್’ ಎಂದು ಹೆಸರಿಸಲಾಗಿದೆ.
- ಮಂಗಳ ಗ್ರಹವೂ ಚಂದ್ರನ ಸಮೀಪಕ್ಕೆ ಬರಲಿರುವುದು ಈ ಬಾರಿಯ ಚಂದ್ರಗ್ರಹಣದ ವಿಶೇಷ.
- ಅತಿ ದೀರ್ಘಾವಧಿ ಕೆಂಪು ಚಂದ್ರ ಬಾನಂಗಳದಲ್ಲಿ ಗೋಚರಿಸುತ್ತಾನೆ. ನೂರು ವರ್ಷಗಳಿಗೊಮ್ಮೆ ನಭೋಮಂಡಲದಲ್ಲಿ ಇಂತಹದ್ದೊಂದು ಕೌತುಕ ಸಂಭವಿಸುತ್ತದೆ. ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲೇ ನೋಡಲು ಸಾಧ್ಯವಿದೆ. ಜತೆಗೆ ಸಮೀಪದಲ್ಲೇ ಬರುವ ಮಂಗಳ ಗ್ರಹವನ್ನೂ ನೋಡಬಹುದು.
ಚಂದ್ರಗ್ರಹಣ ಎಂದರೇನು ?(Lunar Eclipse)
- ಭೂಮಿಯ ಸೂರ್ಯವಿಮುಖ ಪಾಶ್ರ್ವದಲ್ಲಿ ಶಂಕ್ವಾಕಾರದ ನೆರಳು ಉಂಟಾಗಿರುತ್ತದೆ. ಇದಕ್ಕೆ ಭೂಮಿಯ ನೆರಳಿನ ಶಂಕು ಅಥವಾ ದಟ್ಟ ನೆರಳಿನ ಶಂಕು (ಅಂಬ್ರ) ಎಂದು ಹೆಸರು. . ಇದಕ್ಕೆ ಅರೆನೆರಳಿನ ಶಂಕು (ಪಿನಂಬ್ರ) ಎಂದು ಹೆಸರು.
- ಈ ವಲಯದಿಂದ ನೋಡುವಾತನಿಗೆ ಸೂರ್ಯನ ಕೆಲವು ಭಾಗ ಮಾತ್ರ ಕಾಣುವುದಷ್ಟೆ. ಉಳಿದ ಭಾಗವನ್ನು ಭೂಮಿ ಮರೆ ಮಾಡಿರುತ್ತದೆ. ವೃತ್ತ ಭೂಮಿಯ ಸುತ್ತು ಇರುವ ಚಂದ್ರನ ಕಕ್ಷೆಯನ್ನು ಸೂಚಿಸುವುದು.
- ಸೂರ್ಯ, ಭೂಮಿ ವ್ಯಾಸಗಳನ್ನೂ ಅವುಗಳ ಕೇಂದ್ರಗಳ ನಡುವಿನ ಸರಾಸರಿ ಅಂತರವನ್ನೂ ತೆಗೆದುಕೊಂಡು ಲೆಕ್ಕ ಹಾಕಿದರೆ ಶಂಕ್ವಾಕಾರದ ದಟ್ಟ ನೆರಳಿನ ಉದ್ದ ಭೂವ್ಯಾಸದ ಸುಮಾರು 108 ಪಾಲು ದೊಡ್ಡದು ಎಂದು ತಿಳಿಯುವುದು. ಅಂದರೆ ದಟ್ಟ ನೆರಳಿನ ಶೃಂಗ ಭೂಕೇಂದ್ರದಿಂದ ಸರಾಸರಿ ಸುಮಾರು 858,000 ಮೈಲಿಗಳಷ್ಟು ದೂರದಲ್ಲಿರುತ್ತದೆ.
- ಚಂದ್ರ ಮತ್ತು ಭೂ ಕೇಂದ್ರಗಳ ನಡುವಿನ ಅಂತರ ಭೂ ವ್ಯಾಸದ ಸುಮಾರು 30 ರಷ್ಟು ಉಂಟು. ಇದು ಸರಾಸರಿ ಸುಮಾರು 239,000 ಮೈಲಿಗಳೆನ್ನಬಹುದು. ಆದ್ದರಿಂದ ಭೂಮಿಯ ಉಪಗ್ರಹವಾದ ಚಂದ್ರ ಭೂಮಿ ತನ್ನ ಹಿಂದಕ್ಕೆಡೆಯುವ ದಟ್ಟ ನೆರಳಿನ ಶಂಕುವಿನ ಮೂಲಕ ಹಾದುಹೋಗುವ ಸಂಭಾವ್ಯತೆ ಉಂಟು.
- ದಟ್ಟ ನೆರಳಿನ ಭಾಗದ ಒತ್ತಿಗೆ ಅರೆನೆರಳಿನ ಭಾಗಗಳು ಇವೆ. ಆದ್ದರಿಂದ ಚಂದ್ರ ದಟ್ಟ ನೆರಳಿನ ಭಾಗವನ್ನು ಪ್ರವೇಶಿಸುವ ಮುನ್ನ ಮತ್ತು ಅದನ್ನು ಹಾದು ಹೋದ ತರುವಾಯ ಅರೆನೆರಳಿನ ಭಾಗದ ಮೂಲಕ ಹೋಗಲೇಬೇಕು.
- ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಯ ಸುತ್ತ ಸಂಚರಿಸುವಾಗ ಭೂಮಿಯ ನೆರಳಿನೊಳಕ್ಕೆ ಬಂದರೆ ಆಗ ಚಂದ್ರಗ್ರಹಣವಾಗುತ್ತದೆ. ಈ ಗ್ರಹಣವಾಗಬೇಕಾದರೆ ಸೂರ್ಯ ಭೂಮಿ ಮತ್ತು ಚಂದ್ರ ಇವು ಮೂರೂ ಸುಮಾರಾಗಿ ಒಂದೇ ಸರಳ ರೇಖೆಯಲ್ಲಿರಬೇಕು. ಚಂದ್ರ ತನ್ನ ಪಥದ ಒಂದು ಪಾತಬಿಂದುವಿನಲ್ಲೋ (ರಾಹು ಇಲ್ಲವೆ ಕೇತು) ಇಲ್ಲವೇ ಅದರ ಹತ್ತಿರವೋ ಇದ್ದು ಸೂರ್ಯನೊಂದಿಗೆ ವಿಯುತಿಯಲ್ಲಿದ್ದರೆ (ಅಪೊಸಿಷನ್) ಅಂದರೆ ಹುಣ್ಣಿಮೆಯಾಗಿದ್ದರೆ ಆಗ ಚಂದ್ರ ಗ್ರಹಣವಾಗುತ್ತದೆ.
- ಚಂದ್ರಪಥ ನೇರವಾಗಿ ದಟ್ಟ ನೆರಳಿನ ಮಧ್ಯೆ ಹಾದು ಹೋಗಬಹುದು ಇಲ್ಲವೇ ಸ್ವಲ್ಪ ಮೇಲೆ ಅಥವಾ ಕೆಳಗೆ ಹೋಗಬಹುದು. ಇವು ಪಾತರೇಖೆಯ ವಿನ್ಯಾಸವನ್ನು ಅವಲಂಬಿಸಿರುತ್ತವೆ. ಅರೆನೆರಳಿನ ಮೂಲಕ ಚಂದ್ರ ಹಾದು ಹೋಗುವಾಗ ಚಂದ್ರ ಬಿಂಬಿಸುವ ಬೆಳಕು ಸ್ವಲ್ಪ ಮಂಕಾಗಬಹುದು. ದಟ್ಟ ನೆರಳಿನ ಹತ್ತಿರ ಹೋದ ಹಾಗೆಲ್ಲ ಈ ಬೆಳಕು ಕಡಿಮೆಯಾಗುತ್ತ ಹೋಗಿ ಆ ಭಾಗವನ್ನು ಪ್ರವೇಶಿಸುತ್ತಿರುವಾಗ ಚಂದ್ರನ ಸ್ವಲ್ಪ ಭಾಗಕ್ಕೆ ಬೆಳಕು ಕಡಿದುಹೋದ ಹಾಗಾಗುತ್ತದೆ. ಇದಕ್ಕೆ ಚಂದ್ರನ ಪಾಶ್ರ್ವಗ್ರಹಣ ಎಂದು ಹೆಸರು.
- ದಟ್ಟ ನೆರಳಿನ ಭಾಗದಲ್ಲಿ ಪೂರ್ತ ಮುಳುಗಿದರೆ ಚಂದ್ರನ ಪೂರ್ಣಗ್ರಹಣವಾಗುತ್ತದೆ. ಚಂದ್ರ ತನ್ನ ಪಥದಲ್ಲಿ ಮುಂದುವರಿದಂತೆ ಪೂರ್ಣ ಗ್ರಹಣವು ಪಾಶ್ರ್ವಗ್ರಹಣವಾಗಿ ಮೋಕ್ಷಗೊಂಡು ಅರೆನೆರಳಿನ ಭಾಗದಲ್ಲಿ ಮುಳುಗಿ ಹೊರಬರುತ್ತದೆ. ಪೂರ್ಣಗ್ರಹಣವಾಗುವುದಕ್ಕೆ ಮುಂಚೆ ಮತ್ತು ಆದ ಮೇಲೆ ಪಾಶ್ರ್ವಗ್ರಹಣವಾಗುತ್ತದೆ ಎಂಬುದನ್ನು ಗಮನಿಸಬೇಕು.
- ಭೂಮಿಯ ದಟ್ಟ ನೆರಳಿನ ಭಾಗವನ್ನು ಚಂದ್ರ ಸ್ಪರ್ಶಿಸಿ ಮುಂದಕ್ಕೆ ಸರಿದಾಗ ಮಾತ್ರ ಚಂದ್ರಗ್ರಹಣವಾಗಿದೆ ಎನ್ನುತ್ತಾರೆ. ಅರೆ ನೆರಳಿನ ಭಾಗದಲ್ಲಿದ್ದಾಗ ಆಗುವ ಗ್ರಹಣಕ್ಕೆ ಜನರು ಅಷ್ಟೇನೂ ಪ್ರಾಮುಖ್ಯ ನೀಡುವುದಿಲ್ಲ. ಅದನ್ನು ಆಸಕ್ತಿಯಿಂದ ವೀಕ್ಷಿಸುವುದೂ ಇಲ್ಲ. ಭೂಮಿಯನ್ನು ಚಂದ್ರ ಪಶ್ಚಿಮದಿಂದ ಪೂರ್ವಕ್ಕೆ ಸುತ್ತುತ್ತಿರುವುದರಿಂದ ಗ್ರಹಣವಾಗುವಾಗ ಚಂದ್ರನ ಪೂರ್ವಭಾಗದಲ್ಲಿ ಸ್ಪರ್ಶವೂ ಪಶ್ಚಿಮ ಭಾಗದಲ್ಲಿ ಮೋಕ್ಷವೂ ಆಗುತ್ತವೆ.
- ಚಂದ್ರ ಕ್ಷಿತಿಜಕ್ಕಿಂತ ಮೇಲಿದ್ದಾಗ ಗ್ರಹಣವಾದರೆ ಅದನ್ನು ನೋಡಲು ಸಾಧ್ಯವಾಗುವ ಭೂಮಿಯ ಮೇಲಿನ ಭಾಗ ಹೆಚ್ಚು. ಇದು ಭೂಮಿಯ ಮೇಲ್ಮೈಯ ಸುಮಾರು ಅರ್ಧಕ್ಕಿಂತ ಹೆಚ್ಚು ಭಾಗಗಳಿಂದ ಕಾಣಿಸುತ್ತದೆ. ಅದೂ ಅಲ್ಲದೆ ಎಲ್ಲ ಕಡೆಗಳಿಂದಲೂ ಒಂದೇ ತರಹ ಗ್ರಹಣ ಕಾಣಿಸುತ್ತದೆ.
ರಕ್ತ ಚಂದ್ರ(BLOOD MOON) ಎಂದರೇನು ?
- ರಕ್ತ ಚಂದ್ರ ಅಥವಾ ಕೆಂಪು ಚಂದ್ರ ಗ್ರಹಣದ ಸಮಯದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು ಚಂದ್ರ ಕಾಂತಿ ಕಳೆದುಕೊಳ್ಳುತ್ತಾನೆ. ಖಗ್ರಾಸ ಚಂದ್ರ ಗ್ರಹಣದಲ್ಲಿ ಭೂಮಿಯ ಸಂಪೂರ್ಣ ನೆರಳು ಚಂದ್ರನ ಮೇಲೆ ಬಿದ್ದು, ನಂತರ ಭೂಮಿ ಕೊಂಚ ಸರಿದಾಗ ಸೂರ್ಯ ಕಿರಣಗಳು ಭೂಮಿಯ ಅಂಚಿನಿಂದ…….CLICK HERE TO READ MORE