3rd AUGUST.-DAILY CURRENT AFFAIRS BRIEF

3rd AUGUST

 

1.ಪಿಂಗಳಿ ವೆಂಕಯ್ಯ

 

SOURCE-THE HINDU-https://www.thehindu.com/news/cities/Visakhapatnam/pingali-venkayya-remembered/article24589065.ece

 

 

ವಿದ್ಯಾರ್ಥಿಗಳ ಗಮನಕ್ಕೆ

 

ಪ್ರಿಲಿಮ್ಸ್ ಪರೀಕ್ಷೆಗಾಗಿ -ಪಿಂಗಳಿ ವೆಂಕಯ್ಯ ನವರ  ಕೊಡುಗೆಗಳ ಬಗ್ಗೆ  

ಮುಖ್ಯ ಪರೀಕ್ಷೆಗಾಗಿ -ದೇಶದರಾಷ್ಟ್ರಧ್ವಜವು ನಡೆದು ಬಂದ ದಾರಿ ಮತ್ತು‌ ಅದರ ಮಹತ್ವಪೂರ್ಣ ಘಟನೆಗಳು ಹಾಗು ಭಾರತದ ಧ್ವಜ ಸಂಹಿತೆ ಬಗ್ಗೆ

 

 

ಪ್ರಮುಖ ಸುದ್ದಿ

  • ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತೀಯ ರಾಷ್ಟ್ರೀಯ ಧ್ವಜ ವಿನ್ಯಾಸಕ ಪಿಂಗಳಿ ವೆಂಕಯ್ಯ ರವರ 141 ನೆಯ ಜನ್ಮದಿನವನ್ನು ಆಗಸ್ಟ್ 2, 2018 ರಂದು ಆಚರಿಸಲಾಯಿತು.

 

ಮುಖ್ಯ ಅಂಶಗಳು

ಪಿಂಗಳಿ ವೆಂಕಯ್ಯರವರ ಬಗ್ಗೆ

 

  • ಪಿಂಗಳಿ ವೆಂಕಯ್ಯ ಅವರು ಭಾರತ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದವರು ಮತ್ತು ಭಾರತದೇಶದ ಧ್ವಜವನ್ನು ಸ್ಥೂಲಕಲ್ಪಿಸಿದರು.ಇವರನ್ನು ಪತ್ತಿ ವೆಂಕಯ್ಯ ಅಂತ ಕರೆಯುತ್ತಿದ್ದರು.
  • ಇವರು ಆಗಸ್ಟ್ ೨, ೧೮೭೬ನೇ ಇಸ್ವಿಯಲ್ಲಿ, ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ದಿವಿ ತಾಲ್ಲೂಕಿನ ಭಟ್ಲಪೆನ್ನುಮಾರು ಗ್ರಾಮದಲ್ಲಿ ಜನಿಸಿದರು.ಇವರ ತಂದೆ ಹನುಮಂತರಾಯುರು, ಇವರ ತಾಯಿಯ ಹೆಸರು ವೆಂಕಟರತ್ನಮ್ಮ.
  • ಪ್ರಾಧಮಿಕ ವಿದ್ಯಾಭ್ಯಾಸವನ್ನು ಚಲ್ಲಪಲ್ಲಿಯಲ್ಲಿ ಮತ್ತು ಮಚಿಲೀಪಟ್ನಮಿನ ಹಿಂದು ಶಾಲೆಯಲ್ಲಿ ಮುಗಿಸಿದನಂತರ ಇವರು ಹಿಚ್ಚಿನ ಶಿಕ್ಷಣಕಾಗಿ ಕೊಲೊಂಬೊಗೆ ಹೋದರು.
  • ಭಾರತಕ್ಕೆ ಹಿಂದಿರುಗಿದನಂತರ ಇವರು ರೈಲ್ವೇ ಸಿಬ್ಬಂದಿಯ ಉದ್ಯೋಗ,ಮತ್ತು ಸರ್ಕಾರಿ ಜೀತಗಾರರಾಗಿ ಬಳ್ಳಾರಿಯಲ್ಲಿ ಮಾಡಿದರು.ದೇಶಭಕ್ತಿಯನ್ನು ನರನರಗಳಲ್ಲು ತುಂಬಿಕೊಂಡಿದ್ದ ಇವರಿಗೆ ಒಂದು ಶಾಶ್ವತ ಕೆಲಸದಲ್ಲಿ ಒಳಗೊಂಡಿರುವುದಕ್ಕೆ ಇಷ್ಟವಾಗಿರಲಿಲ್ಲ,ಸತ್ಯಾನ್ವೇಷಿಯಾಗಿದ್ದ ಇವರು ಲಾಹೋರಿನ ಆಂಗ್ಲೂ-ವೈದಿಕ ಕಳಾಶಾಲೆಯಲ್ಲಿ ಇತಿಹಾಸ,ಸಂಸ್ಕೃತ ಮುಂತಾದ ವಿಷಯಗಲಳ ಬಗ್ಗೆ ಶೋಧನೆ ಮಾಡಿದರು.ಭೂವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯುಳ್ಳಾವಾರಾಗಿದ್ದೂ ಮತ್ತು ಅದೇ ವಿಷಯದಲ್ಲಿ ಪದವೀಕೃತರಾದರು.

 

  • ಒಟ್ಟು 30 ದೇಶಗಳ ರಾಷ್ಟ್ರಧ್ವಜಗಳನ್ನು 5 ವರ್ಷಗಳ ಕಾಲ ಅಭ್ಯಸಿಸಿ, ಕೊನೆಗೆ ತ್ಯಾಗ, ಶಾಂತಿ, ಸಮೃದ್ಧಿಯ ಸಂಕೇತವಾದ ಕೇಸರಿ, ಬಿಳಿ, ಹಸಿರಿನ ತ್ರಿವರ್ಣಧ್ವಜವನ್ನು ವಿನ್ಯಾಸಗೊಳಿಸಿದರು. ಪಿಂಗಳಿ ಅವರು ವಿನ್ಯಾಸಗೊಳಿಸಿದ ಧ್ವಜವನ್ನೇ ಜುಲೈ 22, 1947 ರಲ್ಲಿ ರಾಷ್ಟ್ರಧ್ವಜವನ್ನಾಗಿ ಅಂಗೀಕರಿಸಲಾಯಿತು. 2009 ರಲ್ಲಿ ಇವರಿಗೆ ಗೌರವ ನೀಡುವುದಕ್ಕಾಗಿ, ಇವರ ಭಾವಚಿತ್ರವನ್ನು ಹೊಂದಿದ ಸ್ಟಾಂಪ್ ಅನ್ನೂ ಬಿಡುಗಡೆಮಾಡಲಾಗಿತ್ತು. 1963 ರ ಜುಲೈ 4 ರಂದು ಅವರು ಇಹಲೋಕ ತ್ಯಜಿಸಿದರು.

 

ಭಾರತೀಯ ರಾಷ್ಟ್ರೀಯ ಧ್ವಜದ ವಿಕಾಸದ  ಬಗ್ಗೆ

 

  • ಪ್ರಥಮವಾಗಿ ನಮ್ಮ ರಾಷ್ಟ್ರಧ್ವಜವನ್ನು ಆಗಸ್ಟ್‌ 7, 1906ರಲ್ಲಿ ಕೋಲ್ಕತ್ತಾದ ಪಾರ್ಸಿ ಬಗನ್‌ ಸ್ಕ್ವೇರ್‌ (ಗ್ರೀನ್‌ ಪಾರ್ಕ್‌)ನಲ್ಲಿ ಹಾರಿಸಲಾಯಿತು. 1907ರಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಮೇಡಮ್‌ ಭಿಕಾಜಿ ಕಾಮ ಮತ್ತವರ ತಂಡ 1907ರಲ್ಲಿ ಎರಡನೇ ರಾಷ್ಟ್ರಧ್ವಜವನ್ನು ಪ್ಯಾರಿಸ್‌ನಲ್ಲಿ….CLICK HERE TO READ MORE
Share