5th OCTOBER MLP- MODEL ANSWERS

5th OCTOBER  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

GENERAL STUDIES PAPER-1(ಸಾಮಾನ್ಯ ಅಧ್ಯಾಯ)

 

1.Differentiate between earthquake magnitude and intensity. How does the modern magnitude scale work? How are large earthquakes measured?

(ಭೂಕಂಪದ ಪ್ರಮಾಣ ಮತ್ತು ತೀವ್ರತೆ ನಡುವೆ ವ್ಯತ್ಯಾಸ ತಿಳಿಸಿ . ಆಧುನಿಕ ಪರಿಮಾಣ ಪ್ರಮಾಣ  ಹೇಗೆ  ಕೆಲಸ ಮಾಡುತ್ತದೆಹಾಗು ದೊಡ್ಡ ಭೂಕಂಪಗಳನ್ನು  ಹೇಗೆ ಅಳೆಯುತ್ತವೆ? )

                                                                                                                                                                                            (200 ಪದಗಳು)

 

ಭೂಕಂಪಗಳು ನಿಸರ್ಗದಲ್ಲಿರುವ ಅತ್ಯಂತ ವಿನಾಶಕಾರಿ ಮತ್ತು ಪ್ರಬಲ ಶಕ್ತಿಗಳಲ್ಲೊಂದಾಗಿವೆ,”  . ಈ ಹೇಳಿಕೆಯು ಅತಿಶಯೋಕ್ತಿಯೇನಲ್ಲ, ಯಾಕೆಂದರೆ ಒಂದು ತೀವ್ರವಾದ ಭೂಕಂಪದಿಂದ ಹೊರಬರುವ ಶಕ್ತಿಯು, ಮೊಟ್ಟ ಮೊದಲ ಪರಮಾಣು ಬಾಂಬ್‍ನಿಂದ ಹೊರಬರುವ ಶಕ್ತಿಗಿಂತಲೂ 10,000 ಪಟ್ಟು ಹೆಚ್ಚಾಗಿರಬಹುದು.  ಈ ಭೀತಿಯನ್ನು ಹೆಚ್ಚಿಸುವ ಇನ್ನೊಂದು ವಾಸ್ತವಾಂಶವೇನೆಂದರೆ, ಭೂಕಂಪಗಳು ಯಾವುದೇ ಹವಾಮಾನದಲ್ಲಿ, ಯಾವುದೇ ಋತುವಿನಲ್ಲಿ ಮತ್ತು ಯಾವುದೇ ಸಮಯದಲ್ಲಿ ಸಂಭವಿಸಬಲ್ಲವು. ಮತ್ತು ವಿಜ್ಞಾನಿಗಳಿಗೆ ಶಕ್ತಿಶಾಲಿಯಾದ ಭೂಕಂಪಗಳು ಎಲ್ಲಿ ಆಗಬಹುದೆಂಬುದರ ಬಗ್ಗೆ ಸ್ವಲ್ಪ ಸುಳಿವು ಸಿಗಬಹುದಾದರೂ, ಅವು ಯಾವಾಗ ಆಗುವವೆಂಬುದನ್ನು ಅವರು ಖಚಿತವಾಗಿ ತಿಳಿಸಲಾರರು.

 

ಭೂಮಿಯಡಿಯಲ್ಲಿರುವ ಬಂಡೆಯ ಸಮೂಹಗಳು ತಮ್ಮ ಸ್ಥಾನವನ್ನು ಬದಲಾಯಿಸುವಾಗ ಭೂಕಂಪಗಳು ಸಂಭವಿಸುತ್ತವೆ. ಈ ರೀತಿಯ ಚಟುವಟಿಕೆಯು ನಿರಂತರವಾಗಿ ನಡೆಯುತ್ತಾ ಇರುತ್ತದೆ. ಅನೇಕವೇಳೆ, ಇದರಿಂದುಂಟಾಗುವ ಸೀಸ್ಮಿಕ್‌ ಅಲೆಗಳು ಭೂಮಿಯ ಮೇಲ್ಮೈಯಲ್ಲಿ ಗೊತ್ತಾಗುವಷ್ಟು ಪ್ರಬಲವಾಗಿರುವುದಿಲ್ಲ, ಆದರೆ ಅವುಗಳನ್ನು ಒಂದು ಸೀಸ್ಮೊಗ್ರಾಫ್‍ನಿಂದ* ಪತ್ತೆಹಚ್ಚಿ, ದಾಖಲಿಸಿಡಬಹುದು. ಬೇರೆ ಸಮಯಗಳಲ್ಲಿ, ಸಾಕಷ್ಟು ಬಂಡೆಸಿಡಿತಗಳು ಹಾಗೂ ಕದಲುವಿಕೆಯು ಉಂಟಾಗುವುದರಿಂದ, ಭೂಮಿಯ ಮೇಲ್ಮೈ ಬಿರುಸಾಗಿ ಕಂಪಿಸುತ್ತದೆ.

 

ಭೂವಿಜ್ಞಾನದ ಕುರಿತಾದ ಅಭಿಪ್ರಾಯವನ್ನೇ ಸಂಪೂರ್ಣವಾಗಿ ಬದಲಾಯಿಸಿಬಿಟ್ಟಿರುವ ಒಂದು ವಿಚಾರದಿಂದ, ಅಂದರೆ ಬೃಹತ್‌ ಶಿಲಾಫಲಕಗಳ ಚಲನವಲನಗಳ ಅಧ್ಯಯನದಿಂದ (ಪ್ಲೇಟ್‌ ಟ್ಯೂಟಾನಿಕ್ಸ್‌) ಒಂದು ವಿವರಣೆ ಸಿಗುತ್ತದೆ” .  “ಪ್ರಧಾನವಾದ ಏಳು ಹೊರಚಿಪ್ಪು ಫಲಕಗಳಿವೆಯೆಂದು ನಮಗೀಗ ಗೊತ್ತಿದೆ, ಅವು ಅನೇಕಾನೇಕ ಚಿಕ್ಕ ಫಲಕಗಳಾಗಿ ವಿಭಾಜಿಸಲ್ಪಟ್ಟಿವೆ ಮತ್ತು ಇವೆಲ್ಲವೂ ಪರಸ್ಪರ ಸಂಬಂಧದಲ್ಲಿ ಪ್ರತಿ ವರ್ಷ 10ರಿಂದ 130 ಮಿಲಿಮಿಾಟರ್‌ [ಒಂದು ಇಂಚಿನ 3/8ನೆಯ ಭಾಗದಿಂದ ಹಿಡಿದು 5 ಇಂಚುಗಳ] ವೇಗಪ್ರಮಾಣದಲ್ಲಿ ನಿರಂತರವಾಗಿ ಚಲಿಸುತ್ತಿರುತ್ತವೆ,” ಅದು ಇನ್ನೂ ಕೂಡಿಸುತ್ತಾ ಹೇಳುವುದೇನೆಂದರೆ, ಹೆಚ್ಚಿನ ಭೂಕಂಪಗಳು ಶಿಲಾಫಲಕಗಳ ಸೀಮೆಗಳಲ್ಲಿರುವ ಕಿರಿದಾದ ಪ್ರದೇಶಗಳಲ್ಲಿ ಆಗುತ್ತವೆ. ಹೆಚ್ಚಿನ ಭೂಕಂಪಗಳಲ್ಲಿ 90 ಪ್ರತಿಶತ ಅಲ್ಲಿಯೇ ಸಂಭವಿಸುವ ಸಾಧ್ಯತೆಯಿದೆ.

 

ಪರಿಮಾಣ ಮತ್ತು ತೀವ್ರತೆ

 

ಒಂದು ಭೂಕಂಪದ ತೀಕ್ಷ್ಣತೆಯು, ಅದರ ಪರಿಮಾಣ ಇಲ್ಲವೇ ಅದರ ತೀವ್ರತೆಯಿಂದ ಅಳೆಯಲ್ಪಡಬಹುದು. 1930ರ ದಶಕದಲ್ಲಿ ಚಾರ್ಲ್ಸ್‌ ರಿಕ್ಟರ್‌ ಎಂಬವನು, ಭೂಕಂಪಗಳ ಪರಿಮಾಣವನ್ನು ಅಳೆಯಲಿಕ್ಕಾಗಿ ಒಂದು ಮಾಪಕವನ್ನು ವಿಕಸಿಸಿದನು. ಸೀಸ್ಮೊಗ್ರಾಫ್‌ ಸ್ಟೇಷನ್‌ಗಳ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ, ರಿಕ್ಟರರ ಉಪಾಯದ ಮೇಲೆ ಆಧಾರಿಸಲ್ಪಟ್ಟ ಹೊಸ ಮಾಪಕಗಳು ವಿಕಸಿಸಲ್ಪಟ್ಟವು. ಉದಾಹರಣೆಗಾಗಿ…. CLICK HERE TO READ MORE

Share