5th SEPTEMBER MLP
NOTE:: ದಯವಿಟ್ಟು ಗಮನಿಸಿ ಕೆಳಗಿನ ‘ಉತ್ತರಗಳು‘ ‘ಮಾದರಿ ಉತ್ತರಗಳು‘ ಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ಬರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.
GENERAL STUDIES PAPER-1(ಸಾಮಾನ್ಯ ಅಧ್ಯಾಯ –೧)
1.The rainfall from recent Hurricane Harvey has exceeded the amount from the previous record-bearer in 1978. Examine the reasons.
(ಇತ್ತೀಚಿನ ಚಂಡಮಾರುತ ಮಳೆಯು 1978 ರಲ್ಲಿ ಹಿಂದಿನ ದಾಖಲೆ ಪ್ರಮಾಣವನ್ನು ಮೀರಿಸಿದೆ.ಇದಕ್ಕೆ ಕಾರಣಗಳನ್ನು ಪರೀಕ್ಷಿಸಿ). (200 ಪದಗಳು)
ಚಂಡಮಾರುತ ಹವಾಮಾನಕ್ಕೆ ಸಂಬಂಧಿಸಿದ ಘಟನೆಯಾಗಿದ್ದು ಗಾಳಿಯ ಒತ್ತಡ ಕಡಿಮೆ ಇರುವ ಪ್ರದೇಶದತ್ತ ಗಾಳಿಯು ತಿರುಗುತ್ತಾ ಬರುವುದನ್ನು ಚಂಡಮಾರುತ ಎಂದು ಹೇಳುತ್ತಾರೆ. ಇಲ್ಲಿ ಗಾಳಿಯು ಪ್ರದಕ್ಷಿಣೆ ಅಥವಾ ಅಪ್ರದಕ್ಷಿಣೆಯಾಗಿ ತಿರುಗುತ್ತಿರುತ್ತದೆ. ಕಡಿಮೆ ಒತ್ತಡವೆಂದರೆ ಆ ಪ್ರದೇಸದಲ್ಲಿ ಗಾಳಿ ಕಡಿಮೆ ಪ್ರಮಾಣದಲ್ಲಿರುತ್ತದೆ ಅಲ್ಲಿ ಸಾಂದ್ರತೆ ಕಡಿಮೆಯಾಗಿ ತೂಕ (ಮಾಸ್) ಕಡಿಮೆಯಾಗುವುದು. ಆಗುಳಿದಕಡೆಯಿಂದ ಗಾಳಿ ರಭಸದಲ್ಲಿ ನುಗ್ಗುವುದು. ಗಾಳಿಯ ಚಲನೆ ಸುರುಳಿಯಾಕಾರ ಹೊಂದುವುದು.
ಚಂಡಮಾರತದ ಕೇಂದ್ರ ಅಥವಾ ಕಣ್ಣು
- ಚಂಡಮಾರುತದಲ್ಲಿ ಗಾಳಿಯು ರಭಸದಿಂದ ಸುತ್ತುವಾಗ ಸುರಳಿಯ ಮಧ್ಯದಲ್ಲಿ ನಿರ್ವಾತ ಪ್ರದೇಶ ಅಥವಾ ಶೂನ್ಯ ಪ್ರದೇಶ ಉಂಟಾಗುವುದು. ಅದು ಸುಂಟರಗಾಳಿಯ ಕೇಂದ್ರ ಅಥವಾ ಕಣ್ಣು. ಸುರುಳಿಯಲ್ಲಿ ಗಾಳಿಯು 30 ಕಿಮೀ ನಿಂದ 25೦ಕಿಮೀ.ವೇಗದವರೆಗೂ ಚಲಿಸುವುದು. ಈ ರಭಸದಲ್ಲಿ ಸಿಕ್ಕಿದ ವಸ್ತುಗಳು ಪುಡಿಯಾಗಿ ನಾಶವಾಗುವುವು. ಕೇಂದ್ರದ ಕಣ್ಣಿನಲ್ಲಿ ಸಿಕ್ಕಿದ ವಸ್ತುವು ನಿರ್ವಾದಲ್ಲಿ ಮೇಲ್ಮುಖವಾಗಿ ಚಲಿಸುವುದರಿಂದ ಆ ವಸ್ತುಗಳು ಆಕಾಸಕ್ಕೆ ಚಿಮ್ಮಿ ಎಲ್ಲಿಯೋ ಬೀಳಬಹುದು. ಕೇಂದ್ರ ಮತ್ತು ಕೇಂದ್ರದ ಹತ್ತಿರವಿರುವ ಬಿರುಗಾಳಿಗೆ ಸಿಕ್ಕಿದ ಮನೆಮಠ ಮರ ವಸ್ತುಗಳು ನಾಶವಾಗುವುವು, ಅಲ್ಲದೆ ಜೀವಹಾನಿಯಾಗುವುದು. ಉಷ್ಣವಲಯದ ವಾತಾವರಣದಲ್ಲಿ ಸಮುದ್ರದಿಂದ ಆವಿಯಾದ ತೇವಾಂಶವಿರುವುದರಿಂದ ಬಿರುಗಾಳಿಯ ಜೊತೆ ಮಳೆಯೂ ಸುರಿಯುವಿದು.
- ಚಂಡಮಾರುತವನ್ನು ಸೈಕ್ಲೋನ್, ಹರಿಕೇನ್, ಟೈಫೂನ್ (ತೂಫಾನು) ಎಂದೆಲ್ಲ ಕರೆಯಲಾಗುತ್ತದೆ. ವಾಸ್ತವದಲ್ಲಿ ಮೂರು ಪದಗಳ ಅರ್ಥ ಒಂದೇ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಇದನ್ನು ಭಿನ್ನ ಹೆಸರುಗಳಿಂದ ಕರೆಯುತ್ತಾರೆ. ಅಟ್ಲಾಂಟಿಕ್ ಪ್ರದೇಶದಲ್ಲಿ ಹರಿಕೇನ್ ಎಂದೂ, ಪೆಸಿಫಿಕ್ ತೀರದಲ್ಲಿ ಟೈಫೂನ್ ಮತ್ತು ಹಿಂದೂ ಮಹಾ ಸಾಗರದ ಭಾಗದಲ್ಲಿ ಸೈಕ್ಲೋನ್ ಎಂದು ಕರೆಯುವ ಪದ್ಧತಿ ಜಾರಿಯಲ್ಲಿದೆ.
- ಪ್ರತಿ ಚಂಡಮಾರುತಕ್ಕೂ ಹೆಸರು ಇಡಲಾಗುತ್ತದೆ. ಪ್ರಸ್ತುತ, ಜಾಗತಿಕ ಮಟ್ಟದಲ್ಲಿ ಉಷ್ಣವಲಯದ ಚಂಡಮಾರುತಗಳಿಗೆ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಆಶ್ರಯದಲ್ಲಿರುವ ಜಗತ್ತಿನ 11 ಎಚ್ಚರಿಕೆ ಕೇಂದ್ರಗಳ ಪೈಕಿ ಯಾವುದಾದರೂ..CLICK HERE TO READ MORE