7th AUGUST MLP
NOTE:: ದಯವಿಟ್ಟು ಗಮನಿಸಿ ಕೆಳಗಿನ ‘ಉತ್ತರಗಳು‘ ‘ಮಾದರಿ ಉತ್ತರಗಳು‘ ಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ಬರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.
GENERAL STUDIES PAPER-1(ಸಾಮಾನ್ಯ ಅಧ್ಯಾಯ –೧)
1.What are the reasons why the industrial revolution only occurs in Europe in the 18th century, but not in in other parts of the world, especially in China, India ? Critically Examine the social consequences of it .
(ಕೈಗಾರಿಕಾ ಕ್ರಾಂತಿಯು ೧೮ನೇ ಶತಮಾನದಲ್ಲಿ ಯುರೋಪ್ನಲ್ಲಿ ಮಾತ್ರ ಸಂಭವಿಸಿ, ಜಗತ್ತಿನ ಇತರೆ ಭಾಗಗಳಲ್ಲಿ ವಿಶೇಷವಾಗಿ ಚೀನಾ, ಭಾರತ ಮತ್ತು ಮಧ್ಯಪ್ರಾಚ್ಯ ವಿಶೇಷವಾಗಿ ಸಂಭವಿಸದಿರಲು ಕಾರಣಗಳೇನು ?ಹಾಗು ಇದರಿಂದ ಬೀರಿದ ಸಾಮಾಜಿಕ ಪರಿಣಾಮಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಿ)
200 ಪದಗಳು
ಕೈಗಾರಿಕಾ ಕ್ರಾಂತಿಯು ೧೮ ಮತ್ತು ೧೯ನೇ ಶತಮಾನದ ಅವಧಿಯಲ್ಲಿ ಸಂಭವಿಸಿದೆ. ಆ ಅವಧಿಯಲ್ಲಿ ಕೃಷಿ, ಉತ್ಪಾದನೆ,ಗಣಿಗಾರಿಕೆ ಮತ್ತು ಸಾರಿಗೆಯಲ್ಲಿ ಪ್ರಮುಖ ಬದಲಾವಣೆಗಳಿಂದ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಗಳ ಮೇಲೆ ಗಾಢಪರಿಣಾಮ ಬೀರಿತು. ಯುನೈಟೆಡ್ ಕಿಂಗ್ಡಮ್ನಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿ ತರುವಾಯ ಯುರೋಪ್ನಾದ್ಯಂತ, ಉತ್ತರ ಅಮೆರಿಕ ಮತ್ತು ಅಂತಿಮವಾಗಿ ವಿಶ್ವದಲ್ಲಿ ಹರಡಿತು. ಕೈಗಾರಿಕಾ ಕ್ರಾಂತಿಯ ಪ್ರಾರಂಭವು ಮಾನವ ಇತಿಹಾಸದಲ್ಲಿ ಪ್ರಮುಖ ತಿರುವೆಂದು ಗುರುತಿಸಲಾಗಿದೆ; ಬಹುತೇಕ ಜನಜೀವನದ ಪ್ರತಿಯೊಂದು ಅಂಶದ ಮೇಲೆ ಅಂತಿಮವಾಗಿ ಕೆಲವು ರೀತಿಯಲ್ಲಿ ಪ್ರಭಾವ ಬೀರಿತು.
ಪ್ರಥಮ ಕೈಗಾರಿಕೆ ಕ್ರಾಂತಿಯು ೧೮ನೇ ಶತಮಾನದಲ್ಲಿ ಪ್ರಾರಂಭವಾಗಿ ೧೮೫೦ರ ಆಸುಪಾಸಿನಲ್ಲಿ ಎರಡನೇ ಹಂತದ ಕೈಗಾರಿಕಾ ಕ್ರಾಂತಿಯ ಜತೆ ವಿಲೀನಗೊಂಡಿತು. ಆ ಸಂದರ್ಭದಲ್ಲಿ ಉಗಿ-ಶಕ್ತಿ ಚಾಲಿತ ಹಡಗುಗಳು, ರೈಲ್ವೆಗಳ ಅಭಿವೃದ್ಧಿಯಿಂದ ಮತ್ತು ನಂತರ ೧೯ನೇ ಶತಮಾನದಲ್ಲಿ ಆಂತರಿಕ ದಹನ ಯಂತ್ರ ಮತ್ತು ವಿದ್ಯುಚ್ಛಕ್ತಿ ಉತ್ಪಾದನೆಯೊಂದಿಗೆ ತಾಂತ್ರಿಕ ಮತ್ತು ಆರ್ಥಿಕ ಪ್ರಗತಿ ವೇಗದ ಗತಿ ಪಡೆದುಕೊಂಡಿತು.
ಯುರೋಪ್ನಲ್ಲಿ ಸಂಭವಿಸಲು ಕಾರಣಗಳು
- 1623 ಡಚ್ ಈಸ್ಟ್ ಇಂಡಿಯ ಕಂಪೆನಿ ಬಾಂಡ್.ಯುರೋಪಿಯನ್ 17ನೇ ಶತಮಾನದ ವಸಾಹತು ವಿಸ್ತರಣೆ,ಅಂತಾರಾಷ್ಟ್ರೀಯ ವ್ಯಾಪಾರ,ಮತ್ತು ಹಣಕಾಸು ಮಾರುಕಟ್ಟೆಗಳ ಸೃಷ್ಟಿಯಿಂದ ಹೊಸ ಕಾನೂನು ಮತ್ತು ಹಣಕಾಸು ಪರಿಸರವನ್ನು ನಿರ್ಮಿಸಿದೆ,ಅದು 18ನೇ ಶತಮಾನದ ಕೈಗಾರಿಕಾ ಬೆಳವಣಿಗೆಯನ್ನು ಬೆಂಬಲಿಸಿತು ಮತ್ತು ಅನುಕೂಲ ಕಲ್ಪಿಸಿತು.
- ಕೈಗಾರಿಕಾ ಕ್ರಾಂತಿಯು ೧೮ನೇ ಶತಮಾನದಲ್ಲಿ ಯುರೋಪ್ನಲ್ಲಿ ಮಾತ್ರ ಸಂಭವಿಸಿ, ಜಗತ್ತಿನ ಇತರೆ ಭಾಗಗಳಲ್ಲಿ ವಿಶೇಷವಾಗಿ ಚೀನಾ, ಭಾರತ ಮತ್ತು ಮಧ್ಯಪ್ರಾಚ್ಯ ಅಥವಾ ಇತರೆ ಕಾಲಗಳಾದ ಪ್ರಾಚೀನ ಅಥವಾ ಮಧ್ಯಯುಗಗಳಲ್ಲಿ ವಿಶೇಷವಾಗಿ ಸಂಭವಿಸದಿರಲು ಕಾರಣಗಳೇನು ಎಂಬ ಪ್ರಶ್ನೆಯು ಇತಿಹಾಸಕಾರರಿಗೆ ಆಸಕ್ತಿ ಕೆರಳಿಸಿತು. ಇದಕ್ಕೆ ಶಿಕ್ಷಣ,ತಾಂತ್ರಿಕ ಬದಲಾವಣೆಗಳು , “ಆಧುನಿಕ ಸರ್ಕಾರ”, “ಆಧುನಿಕ” ಉದ್ಯೋಗದ ನಡವಳಿಕೆಗಳು,ಪರಿಸರ ಮತ್ತು ಸಂಸ್ಕೃತಿ ಸೇರಿದಂತೆ ಅಸಂಖ್ಯಾತ ಅಂಶಗಳನ್ನು ಸಲಹೆ ಮಾಡಲಾಯಿತು. ಜ್ಞಾನೋದಯದ ಯುಗವೆಂದರೆ ಬಹುಸಂಖ್ಯಾತ ಸಾಕ್ಷರ ಜನಸಂಖ್ಯೆಯಲ್ಲದೇ ಕೆಲಸದ ಬಗ್ಗೆ ಹೆಚ್ಚು ಆಧುನಿಕ ದೃಷ್ಟಿಕೋನ ಹೊಂದಿದವರೆಂದು ಅರ್ಥ.
- ಆದಾಗ್ಯೂ, ಅನೇಕ ಇತಿಹಾಸಕಾರರು ಯುರೋಪ್ ಮತ್ತು ಚೀನಾ ಹೆಚ್ಚುಕಡಿಮೆ ಸಮಾನ ಎಂಬ ವಾದವನ್ನು ಒಪ್ಪಲಿಲ್ಲ. ಪಶ್ಚಿಮ ಯುರೋಪ್ನಲ್ಲಿ ೧೮ನೇ ಶತಮಾನದ ಅಂತ್ಯದಲ್ಲಿ ತಲಾದಾಯ ಕೊಳ್ಳುವ ಶಕ್ತಿಯ ಹೋಲಿಕೆಯಲ್ಲಿ ಹೆಚ್ಚುಕಡಿಮೆ ೧೫೦೦ ಡಾಲರ್ಗಳೆಂದು ಇತ್ತೀಚಿಗೆ ಅಂದಾಜು ಮಾಡಲಾಗಿತ್ತು(ಬ್ರಿಟನ್ ಸುಮಾರು ೨೦೦೦ ಡಾಲರ್ ತಲಾದಾಯ ಹೊಂದಿದೆ). ಆದರೆ ಚೀನವನ್ನು ಇದಕ್ಕೆ ಹೋಲಿಸಿದಾಗ ಅದು ೪೫೦ ಡಾಲರ್ ತಲಾದಾಯ ಹೊಂದಿತ್ತು. ಅಲ್ಲದೇ ಸರಾಸರಿ ಬಡ್ಡಿದರ ಬ್ರಿಟನ್ನಲ್ಲಿ ೫% ಮತ್ತು ಚೀನದಲ್ಲಿ ೩೦%ಗಿಂತ ಹೆಚ್ಚಾಗಿದೆ.ಇವು ಬ್ರಿಟನ್ನಲ್ಲಿ ಬಂಡವಾಳ ಅತ್ಯಂತ ವಿಪುಲವಾಗಿತ್ತೆಂದು ಸ್ಪಷ್ಟಪಡಿಸುತ್ತದೆ.
- ಡೇವಿಡ್ ಲ್ಯಾಂಡೆಸ್ ಮತ್ತು ಮ್ಯಾಕ್ಸ್ ವೆಬರ್ ಮುಂತಾದ ಇತಿಹಾಸಕಾರರು ಚೀನ ಮತ್ತು ಯುರೋಪ್ನಲ್ಲಿನ ಭಿನ್ನ ಧಾರ್ಮಿಕ ಪದ್ಧತಿಗಳು ಕೈಗಾರಿಕಾ ಕ್ರಾಂತಿ ಸಂಭವಿಸಿದ ಸ್ಥಳದಲ್ಲಿ ನಿರ್ದೇಶಿಸಿದವೆಂದು ಕಾರಣ ನೀಡಿದ್ದಾರೆ. ಯುರೋಪ್ ಧರ್ಮ ಮತ್ತು ನಂಬಿಕೆಗಳು ಬಹುತೇಕ ಜುಡೊ-ಕ್ರಿಶ್ಚಿಯಾನಿಟಿ ಮತ್ತು ಗ್ರೀಕ್ ಚಿಂತನೆಯ ಉತ್ಪನ್ನಗಳು. ಇದಕ್ಕೆ ವಿರುದ್ಧವಾಗಿ, ಚೀನದ ಸಮಾಜವು ಕನ್ಫ್ಯೂಷಿಯಸ್,ಮೆನ್ಸಿಯಸ್, ಹಾನ್ ಫೈಜಿ ಲಿಗಾಲಿಸಂ, ಲಾವೊ ತ್ಸು ಟಾವೈಸಂ ಮತ್ತು ಬುದ್ಧ, ಬುದ್ಧಿಸಂ ಮುಂತಾದ ವ್ಯಕ್ತಿಗಳಿಂದ ಸಂಸ್ಥಾಪನೆಯಾಯಿತು. ಬ್ರಹ್ಮಾಂಡವು ತರ್ಕಸಮ್ಮತ ಮತ್ತು ಚಿರಂತನ ನಿಯಮಗಳಿಂದ ಆಳಲ್ಪಡುತ್ತದೆಂದು ಐರೋಪ್ಯರು ನಂಬಿದ್ದರೆ, ಪೂರ್ವ ದೇಶಗಳು ಬ್ರಹ್ಮಾಂಡವು ನಿರಂತರ ಪರಿವರ್ತನೆಯಿಂದ ಕೂಡಿರುವುದಾಗಿ ನಂಬಿದ್ದರು. ಬೌದ್ಧರು ಮತ್ತು ಟಾವೊವಾದಿಗಳು ತರ್ಕಸಮ್ಮತ ತಿಳಿವಳಿಕೆಯ ಸಾಮರ್ಥ್ಯ ಪಡೆದಿರಲಿಲ್ಲ.
- ಭಾರತಕ್ಕೆ ಸಂಬಂಧಿಸಿದಂತೆ, ಮಾರ್ಕ್ಸ್ವಾದಿ ಇತಿಹಾಸಕಾರ ರಜನಿ ಪಾಲ್ಮೆ ದತ್ “ಭಾರತದಲ್ಲಿ ಕೈಗಾರಿಕಾ ಕ್ರಾಂತಿಗೆ ಹಣಕಾಸು ಪೂರೈಸಬೇಕಾಗಿದ್ದ ಬಂಡವಾಳವು ಬದಲಿಗೆ ಇಂಗ್ಲೆಂಡ್ ಕೈಗಾರಿಕಾ ಕ್ರಾಂತಿಗೆ ಹಣಕಾಸು ಪೂರೈಸಿತು” ಎಂದು ವಿಶ್ಲೇಷಿಸಿದ್ದಾರೆ. ಚೀನಾಗೆ ವ್ಯತಿರಿಕ್ತವಾಗಿ ಭಾರತ ಅನೇಕ ಪೈಪೋಟಿಯ ಪ್ರಭುತ್ವಗಳಾಗಿ ಹೋಳಾಯಿತು.ಅವುಗಳಲ್ಲಿ ಮೂರು ಮುಖ್ಯ ಪ್ರಭುತ್ವಗಳು ಮರಾಠರು, ಸಿಖ್ಖರು ಮತ್ತು ಮೊಘಲರು. ಇದರ ಜತೆಗೆ ಆರ್ಥಿಕತೆಯು ಎರಡು ಕ್ಷೇತ್ರಗಳ ಮೇಲೆ ಹೆಚ್ಚು ಅವಲಂಬಿತವಾಗಿತ್ತು-ಜೀವನಾಧಾರವಾದ ಕೃಷಿ ಮತ್ತು ಹತ್ತಿ. ತಾಂತ್ರಿಕ ಸಂಶೋಧನೆ ವಿರಳವಾಗಿದ್ದು ಕಂಡುಬಂತು. ಬ್ರಿಟನ್ ಸ್ವಾಧೀನಕ್ಕೆ ಮುಂಚಿತವಾಗಿ ನಿರಂಕುಶ ರಾಜಪ್ರಭುತ್ವಗಳು ಅರಮನೆಯ ಭಂಡಾರಗಳಲ್ಲಿ ಅಪಾರ ಪ್ರಮಾಣದ ಸಂಪತ್ತನ್ನು ದಾಸ್ತಾನಿರಿಸಿದ್ದರೆಂದು ನಂಬಲಾಗಿತ್ತು. ಚೀನ,ಭಾರತ ಮತ್ತು ಮಧ್ಯಪ್ರಾಚ್ಯದ ನಿರಂಕುಶವಾದಿ ಪ್ರಭುತ್ವಗಳು ಉತ್ಪಾದನೆ ಮತ್ತು ರಫ್ತುಗಳನ್ನು ಉತ್ತೇಜಿಸುವಲ್ಲಿ ವಿಫಲವಾದವು. ತಮ್ಮ ಪ್ರಜೆಗಳ ಯೋಗಕ್ಷೇಮದ ಬಗ್ಗೆ ಕಡಿಮೆ ಆಸಕ್ತಿ ಹೊಂದಿದ್ದವು.
ಬ್ರಿಟನ್ ನಲ್ಲಿ ಸಂಭವಿಸಲು ಕಾರಣಗಳು
- ಕೈಗಾರಿಕಾ ಕ್ರಾಂತಿ ಪ್ರಗತಿ ಹೊಂದುತ್ತಿದ್ದಂತೆ ಬ್ರಿಟಿಷ್ ಉತ್ಪಾದಿತ ಇಳುವರಿ ಇತರೆ ಆರ್ಥಿಕತೆಗಳಿಗಿಂತ ಮುನ್ನುಗ್ಗಿತು.
- ಕೈಗಾರಿಕೆ ಕ್ರಾಂತಿಯ ಪ್ರಾರಂಭ ಕುರಿತ ಚರ್ಚೆಯಲ್ಲಿ ಇತರೆ ರಾಷ್ಟ್ರಗಳಿಗಿಂತ ಗ್ರೇಟ್ ಬ್ರಿಟನ್ ಹೊಂದಿದ್ದ ಅಪಾರ ಮೇಲುಗೈ ಕೂಡ ಒಳಗೊಂಡಿದೆ. ಬ್ರಿಟನ್ ತನ್ನ ಅನೇಕ ಸಾಗರೋತ್ತರ ವಸಾಹತುಗಳಿಂದ ನೈಸರ್ಗಿಕ ಅಥವಾ ಹಣಕಾಸು ಸಂಪನ್ಮೂಲಗಳನ್ನು ಸ್ವೀಕರಿಸಿದ ಪ್ರಾಮುಖ್ಯತೆ ಮತ್ತು ಆಫ್ರಿಕಾ ಮತ್ತು ಕ್ಯಾರಿಬಿಯನ್ ನಡುವೆ ಬ್ರಿಟಿಷ್ ಗುಲಾಮ ವ್ಯಾಪಾರದಿಂದ ಹುಟ್ಟಿದ ಲಾಭಗಳು ಕೈಗಾರಿಕೆ ಬಂಡವಾಳ ಉತ್ತೇಜನಕ್ಕೆ ನೆರವಾಗಿದ್ದರ ಪ್ರಾಮುಖ್ಯತೆ ಕುರಿತು ಕೆಲವರು ಒತ್ತಿಹೇಳಿದ್ದಾರೆ.
- ಆದಾಗ್ಯೂ ಗುಲಾಮ ವ್ಯಾಪಾರ ಮತ್ತು ವೆಸ್ಟ್ ಇಂಡೀಸ್ ತೋಟಗಾರಿಕೆಗಳು ಕೈಗಾರಿಕೆ ಕ್ರಾಂತಿಯ ವರ್ಷಗಳಲ್ಲಿ ಬ್ರಿಟಿಷ್ ರಾಷ್ಟ್ರೀಯ ಆದಾಯಕ್ಕೆ ಕೇವಲ ೫% ಒದಗಿಸಿತೆಂದು ಹೇಳಲಾಗಿದೆ. ಕೈಗಾರಿಕೆ ಕ್ರಾಂತಿಯ ಸಂದರ್ಭದಲ್ಲಿ ಗುಲಾಮಗಿರಿಯು ಬ್ರಿಟನ್ನಲ್ಲಿ ಕನಿಷ್ಠ ಆರ್ಥಿಕ ಲಾಭಗಳಿಗೆ ಕಾರಣವಾದರೂ,ಕ್ಯಾರಿಬಿಯನ್ ಮೂಲದ ಬೇಡಿಕೆ ಇಂಗ್ಲೆಂಡ್ ಕೈಗಾರಿಕೆ ಉತ್ಪಾದನೆಗೆ ೧೨% ಕಾರಣವಾಯಿತು.
- ಪರ್ಯಾಯವಾಗಿ,ದೊಡ್ಡ ವಾಣಿಜ್ಯ ನೆಲೆಯಿಂದ ಹೆಚ್ಚಿನ ವ್ಯಾಪಾರ ಉದಾರೀಕರಣವು ಬ್ರಿಟನ್ಗೆ ದೃಢ ರಾಜಪ್ರಭುತ್ವಗಳನ್ನು ಹೊಂದಿದ ವಿಶೇಷವಾಗಿ ಚೀನಾ ಮತ್ತು ರಷ್ಯಾಗಿಂತ ಹೆಚ್ಚು ಪರಿಣಾಮಕಾರಿಯಾಗಿ ಹೊರಹೊಮ್ಮುತ್ತಿರುವ ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಗಳನ್ನು ಉತ್ಪಾದಿಸಿ ಬಳಸಲು ಅವಕಾಶ ನೀಡಿರಬಹುದು. ಹಣಕಾಸು ಲೂಟಿ ಮತ್ತು ಆರ್ಥಿಕ ಕುಸಿತದಿಂದ ವಿನಾಶಗೊಳ್ಳದ ಏಕೈಕ ಐರೋಪ್ಯ ರಾಷ್ಟ್ರ ಮತ್ತು ಉಪಯುಕ್ತ ಗಾತ್ರದ ಯಾವುದೇ ವಾಣಿಜ್ಯ ಹಡಗನ್ನು ಹೊಂದಿರುವ ರಾಷ್ಟ್ರವಾಗಿ ಬ್ರಿಟನ್ ನೆಪೋಲಿಯನ್ ಯುದ್ಧಗಳಿಂದ ಹೊರಹೊಮ್ಮಿದೆ(ಐರೋಪ್ಯ ವಾಣಿಜ್ಯ ಹಡಗುಗಳು ಯುದ್ಧದ ಸಂದರ್ಭದಲ್ಲಿ ರಾಯಲ್ ನೇವಿಯಿಂದ ನಾಶವಾಗಿತ್ತು.
- ಪೂರ್ವ ಸ್ವರೂಪಗಳ ಅನೇಕ ಉತ್ಪಾದಿತ ಸರಕುಗಳಿಗೆ ಮಾರುಕಟ್ಟೆಗಳಿವೆಯೆಂದು ಬ್ರಿಟನ್ ವ್ಯಾಪಕ ರಫ್ತು ಗೃಹಕೈಗಾರಿಕೆಗಳು ಕೂಡ ಖಾತರಿಮಾಡಿಕೊಂಡವು. ಆ ಸಂಘರ್ಷದಲ್ಲಿ ಬ್ರಿಟನ್ ಬಹುತೇಕ ಯುದ್ಧವು ಸಾಗರೋತ್ತರ ನಡೆಯುವುದರಲ್ಲಿ ಫಲಿತಾಂಶ ಒದಗಿಸಿತು.ಇದರಿಂದ ಯುರೋಪ್ನ ಬಹುತೇಕ ಭಾಗದ ಮೇಲೆ ಪರಿಣಾಮ ಬೀರಿದ ಪ್ರಾದೇಶಿಕ ಆಕ್ರಮಣದ ವಿನಾಶಕಾರಿ ಪ್ರಭಾವಗಳನ್ನು ತಗ್ಗಿಸಿದವು. ಬ್ರಿಟನ್ ಬೌಗೋಳಿಕ ಸ್ಥಾನ ಕೂಡ ಇನ್ನಷ್ಟು ನೆರವಾಯಿತು-ಅದು ಯುರೋಪ್ನ ಪ್ರಧಾನ ಭೂಭಾಗದಿಂದ ಪ್ರತ್ಯೇಕಗೊಂಡ ದ್ವೀಪ.
- ಬ್ರಿಟನ್ ಹೊಂದಿದ್ದ ಮುಖ್ಯ ಸಂಪನ್ಮೂಲಗಳ ಲಭ್ಯತೆಯಿಂದ ಕೈಗಾರಿಕಾ ಕ್ರಾಂತಿಯಲ್ಲಿ ಯಶಸ್ವಿಯಾಗಲು ಸಮರ್ಥವಾಯಿತು ಎಂಬ ಇನ್ನೊಂದು ಸಿದ್ಧಾಂತವಿದೆ. ಅದರ ಸಣ್ಣ ಬೌಗೋಳಿಕ ಗಾತ್ರಕ್ಕೆ ದಟ್ಟವಾದ ಜನಸಂಖ್ಯೆಯನ್ನು ಹೊಂದಿದೆ. ಸಾಮಾನ್ಯ ಭೂಮಿಯ ಎನ್ಕ್ಲೋಸರ್(ಒಟ್ಟು ಸಾಗುವಳಿಗೆ ಭೂ ಆಕ್ರಮಣ) ಮತ್ತು ಸಂಬಂಧಿತ ಕೃಷಿ ಕ್ರಾಂತಿಯಿಂದ ಕಾರ್ಮಿಕಶಕ್ತಿಯ ಪೂರೈಕೆ ತಕ್ಷಣವೇ ಲಭ್ಯವಾಯಿತು. ನಾರ್ಥ್ ಆಫ್ ಇಂಗ್ಲೆಂಡ್, ಇಂಗ್ಲಿಷ್ ಮಿಡ್ಲ್ಯಾಂಡ್ಸ್, ಸೌತ್ ವೇಲ್ಸ್ ಮತ್ತು ಸ್ಕಾಟಿಷ್ ಲೋಲ್ಯಾಂಡ್ಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸ್ಥಳೀಯ ಹೊಂದಾಣಿಕೆಗಳು ಕೂಡ ಇದ್ದವು. ಕಲ್ಲಿದ್ದಲು, ಕಬ್ಬಿಣ,ಸೀಸ,ತಾಮ್ರ,ಸತು,ಸುಣ್ಣದ ಕಲ್ಲು ಮತ್ತು ಜಲಶಕ್ತಿಯ ಸ್ಥಳೀಯ ಪೂರೈಕೆಯಿಂದ ಕೈಗಾರಿಕೆಯ ಅಭಿವೃದ್ಧಿ ಮತ್ತು ವಿಸ್ತರಣೆಗೆ ಅತ್ಯುತ್ಕೃಷ್ಟ ಅನುಕೂಲಗಳನ್ನು ಕಲ್ಪಿಸಿದವು. ಅಲ್ಲದೇ, ವಾಯವ್ಯ ಇಂಗ್ಲೆಂಡ್ನ ಸೌಮ್ಯ ಹವಾಮಾನ ಪರಿಸ್ಥಿತಿಗಳು ಹತ್ತಿಯಿಂದ ನೂಲು ತೆಗೆಯುವುದಕ್ಕೆ ಸೂಕ್ತ ಸ್ಥಿತಿಗಳನ್ನು ಕಲ್ಪಿಸಿ,ವಸ್ತ್ರೋದ್ಯಮ ಕೈಗಾರಿಕೆಯ ಹುಟ್ಟಿಗೆ ನೈಸರ್ಗಿಕ ಆರಂಭಿಕ ಅಂಶವನ್ನು ಒದಗಿಸಿತು.
- ಬ್ರಿಟನ್ನಲ್ಲಿ ೧೬೮೮ರ ಆಸುಪಾಸಿನಲ್ಲಿ ಸ್ಥಿರವಾದ ರಾಜಕೀಯ ಪರಿಸ್ಥಿತಿ ಮತ್ತು ಬ್ರಿಟನ್ ಸಮಾಜದ ಬದಲಾವಣೆಗೆ ತಕ್ಷಣವೇ ಗ್ರಹಿಸುವ ಶಕ್ತಿಯು(ಇತರೆ ಐರೋಪ್ಯ ರಾಷ್ಟ್ರಗಳಿಗೆ ಹೋಲಿಸಿದಾಗ) ಕೈಗಾರಿಕೆ ಕ್ರಾಂತಿಗೆ ಪ್ರಶಸ್ತವಾದ ಅಂಶಗಳೆಂದು ಹೇಳಲಾಗಿದೆ. ಎನ್ಕ್ಲೋಸರ್ ಆಂದೋಳನದಿಂದ ಬಹುತೇಕ ಭಾಗದಲ್ಲಿ ಕೈಗಾರೀಕರಣಕ್ಕೆ ಪ್ರತಿಭಟನೆಯ ಮಹತ್ವದ ಮೂಲವಾಗಿದ್ದ ರೈತಾಪಿವರ್ಗ ನಾಶವಾಯಿತು ಮತ್ತು ಭೂಮಿ ಹೊಂದಿದ ಮೇಲ್ವರ್ಗದ ಜನರು ವಾಣಿಜ್ಯ ಹಿತಾಸಕ್ತಿಗಳನ್ನು ಬೆಳೆಸಿಕೊಂಡರು.ಅದರಿಂದ ಬಂಡವಾಳಶಾಹಿಯ ಬೆಳವಣಿಗೆಗೆ ತೊಡಕುಗಳನ್ನು ನಿವಾರಿಸುವಲ್ಲಿ ಅವರು ಆದ್ಯಪ್ರವರ್ತಕರಾದರು .
ಸಾಮಾಜಿಕ ಪರಿಣಾಮಗಳು
- ಸಾಮಾಜಿಕ ರಚನೆಗೆ ಸಂಬಂಧಿಸಿದಂತೆ, ಕೈಗಾರಿಕಾ ಕ್ರಾಂತಿಯು ಭೂಮಾಲೀಕ ಗಣ್ಯವರ್ಗದ ವ್ಯಕ್ತಿಗಳು ಮತ್ತು ಕೆಳವರ್ಗದ ಜನರ ವಿರುದ್ಧ ಮಧ್ಯಮವರ್ಗದ ಕೈಗಾರಿಕೋದ್ಯಮಿಗಳು ಮತ್ತು ಉದ್ಯಮಿಗಳಿಗೆ ಲಭಿಸಿದ ಜಯಕ್ಕೆ ಸಾಕ್ಷಿಯಾಗಿದೆ.
- ಸಾಮಾನ್ಯ ದುಡಿಯುವ ವರ್ಗದ ಜನರು ಹೊಸ ಗಿರಣಿಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ಹೆಚ್ಚೆಚ್ಚು ಅವಕಾಶಗಳನ್ನು ಕಂಡುಕೊಂಡರು. ಆದರೆ ಅಲ್ಲಿ ಕಠಿಣ ದುಡಿಮೆ ಪರಿಸ್ಥಿತಿಗಳ ಜತೆಗೆ ಸುದೀರ್ಘಾವಧಿಯ ಕೆಲಸವಿತ್ತು ಮತ್ತು ಯಂತ್ರಗಳ ವೇಗ ಮೇಲುಗೈ ಪಡೆಯಿತು. ಆದಾಗ್ಯೂ,ಕಠಿಣ ದುಡಿಮೆ ಪರಿಸ್ಥಿತಿಗಳು ಕೈಗಾರಿಕಾ ಕ್ರಾಂತಿ ಸಂಭವಿಸುವುದಕ್ಕೆ ಬಹು ಹಿಂದೆಯೇ ಪ್ರಚಲಿತದಲ್ಲಿತ್ತು. ಕೈಗಾರಿಕಾ-ಪೂರ್ವ ಸಮಾಜವು ಸ್ಥಿರವಾಗಿತ್ತು ಮತ್ತು ಆಗಾಗ್ಗೆ ಕ್ರೌರ್ಯದಿಂದ…..CLICK HERE TO READ MORE