7th SEPTEMBER- DAILY CURRENT AFFAIRS BRIEF

7th SEPTEMBER

 

1.ಇರಾನಿನ ಚಬಹಾರ್ ಬಂದರು ಶೀಘ್ರ ಭಾರತಕ್ಕೆ ಹಸ್ತಾಂತರ

SOURCE- https://economictimes.indiatimes.com/news/economy/foreign-trade/iran-to-handover-chabahar-port-to-indian-firm-for-operation-in-a-month-iranian-minister/articleshow/65708918.cms

 

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಪರೀಕ್ಷೆಗಾಗಿ -ಚಬಹಾರ್ ಬಂದರು ಬಗ್ಗೆ

ಮುಖ್ಯ ಪರೀಕ್ಷೆಗಾಗಿ -ಭಾರತಕ್ಕೆ ಚಬಹಾರ್ ಬಂದರು ಏಕೆ ಮಹತ್ವದ್ದಾಗಿದೆ ಎಂಬುದನ್ನು ವಿಶ್ಲೇಷಿಸಿ

 

ಪ್ರಮುಖ ಸುದ್ದಿ

  • ಭಾರತ-ಅಮೆರಿಕ ನಡುವಣ 2+2 ಮಾತುಕತೆ ಕಡೆಗೆ ಜಗತ್ತಿನ ಗಮನ ಕೇಂದ್ರೀಕೃತವಾಗಿರುವ ಮಧ್ಯೆಯೇ ಇರಾನ್‌ ನಿಯೋಗವೊಂದು ದಿಲ್ಲಿಗೆ ಆಗಮಿಸಿ ನೇಪಥ್ಯದಲ್ಲಿ ಕಾರ್ಯನಿರತವಾಗಿದೆ.
  • ವ್ಯೂಹಾತ್ಮಕವಾಗಿ ಮಹತ್ವ ಪಡೆದಿರುವ ಚಬಹಾರ್ ಬಂದರು ನಿರ್ಮಾಣಕ್ಕೆ ಹಣಕಾಸು ಪಾವತಿ ವಿಧಾನ ಕುರಿತು ಸಮಾಲೋಚನೆ ನಡೆಸುತ್ತಿದೆ. ಅಲ್ಲದೆ, ಭಾರತದಿಂದ ರೈಲ್ವೇ ಮತ್ತು ಭಾರೀ ಎಂಜಿನಿಯರಿಂಗ್ ಸರಕುಗಳನ್ನು ಖರೀದಿಸುವ ಬಗ್ಗೆಯೂ ಆಸಕ್ತಿ ತೋರಿದೆ.

 

ಮುಖ್ಯ ಅಂಶಗಳು

  • ಇರಾನ್ ವಿರುದ್ಧ ಅಮೆರಿಕ ಹೇರಿದ ನಿಷೇಧಗಳನ್ನು ನಿಷ್ಫಲಗೊಳಿಸುವ ಹಾಗೂ ಕಚ್ಚಾ ತೈಲ ಬೆಲೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಯುಕೋ ಬ್ಯಾಂಕ್ ಮತ್ತು ಬ್ಯಾಂಕ್‌ ಪಸರ್‌ಗಡ್‌ ನಡುವೆ ಪಾವತಿ ವ್ಯವಸ್ಥೆಯೊಂದನ್ನು ರೂಪಿಸಲು ಸಮಾಲೋಚನೆ ನಡೆದಿದೆ. ಇತ್ತೀಚೆಗಷ್ಟೇ ಭಾರತದಲ್ಲಿ ಶಾಖೆ ತೆರೆಯಲು ಇರಾನಿನ ಬ್ಯಾಂಕ್‌ಗೆ ಅನುಮತಿ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ.

 

  • ಇರಾನ್‌ನ ಸಾರಿಗೆ ಸಚಿವ ಅಬ್ಬಾಸ್‌ ಅಹ್ಮದ್‌ ಅಖೌಂಡಿ ನೇತೃತ್ವದ ನಿಯೋಗ ಭಾರತದ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ, ಚಬಹಾರ್ ಬಂದರನ್ನು ಶೀಘ್ರವೇ ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ಭರವಸೆ ನೀಡಿದರು.

ಚಬಹಾರ್ ಬಂದರು ಎಲ್ಲಿದೆ ?

  • ಚಬಹಾರ್ ಬಂದರು ಇರಾನಿನ ಓಮಾನ್ ಕೊಲ್ಲಿಯಲ್ಲಿದೆ ಮತ್ತು ಇದು ಇರಾನ್ ದೇಶದ ಏಕೈಕ ಸಾಗರ ಬಂದರು.
  • ಈ ಬಂದರು ಶಕ್ತಿ-ಸಮೃದ್ಧ ಪರ್ಷಿಯನ್ ಗಲ್ಫ್ ರಾಷ್ಟ್ರಗಳ ದಕ್ಷಿಣದ ಕರಾವಳಿಗೆ ಪ್ರವೇಶವನ್ನು ನೀಡುತ್ತದೆ…CLICK HERE TO READ MORE
Share