ನಮ್ಮ ಐಎಎಸ್ ಅಕಾಡೆಮಿ ಯ ಸಂಪಾದಕೀಯ ಒಳನೋಟ
ಐಪಿಸಿ ಸೆಕ್ಷನ್ 377 ಪರಿಶೀಲಿಸುವ ಸಮಯವೇ ?
ಸಂದರ್ಭ:
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ಕ್ಕೆ ಸಂಬಂಧಿಸಿದಂತೆ 2013ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ವ್ಯಕ್ತಿಯ ಮೂಲಭೂತಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ ಹಾಗು . ‘ಅಸಹಜ’ ಲೈಂಗಿಕ ಕ್ರಿಯೆಯು ನಿಸರ್ಗಕ್ಕೆ ವಿರುದ್ಧವಾದುದು ಮತ್ತು ಶಿಕ್ಷಾರ್ಹ ಅಪರಾಧ ಎಂದು ಸೆಕ್ಷನ್ 377 ಹೇಳುತ್ತದೆ. 2009ರಲ್ಲಿ ದೆಹಲಿ ಹೈಕೋರ್ಟ್ ಇದು ಅಪರಾಧವಲ್ಲ ಎಂದು ಹೇಳಿತ್ತು. ಆದರೆ 2013ರಲ್ಲಿ ಸುಪ್ರೀಂ ಕೋರ್ಟ್ ಇದು ಅಪರಾಧ ಎಂದೇ ಹೇಳಿತ್ತು. ಲೈಂಗಿಕ ಒಲವು ಖಾಸಗಿತನದ ಹಕ್ಕು ಎಂದು ಈಗ ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ ಇದೇ ವಿಚಾರವು ಈಗ ಸುಪ್ರೀಂ ಕೋರ್ಟ್‌ನ ಐದು ಸದಸ್ಯರ ಮತ್ತೊಂದು ಪೀಠದಲ್ಲಿ ವಿಚಾರಣೆಯಲ್ಲಿ ಇರುವುದರಿಂದ ಒಂಬತ್ತು ಸದಸ್ಯರ ಪೀಠವು ಈ ಬಗ್ಗೆ ಹೆಚ್ಚಿನ ವಿವರಣೆ ನೀಡಿಲ್ಲ.
‘ಲೈಂಗಿಕತೆಯು ಖಾಸಗಿತನ ಮತ್ತು ಘನತೆಯ ವಿಚಾರ. ವ್ಯಕ್ತಿಯ ಲೈಂಗಿಕತೆಯ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವುದರಿಂದ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಲೈಂಗಿಕತೆ ವಿಚಾರದಲ್ಲಿ ವ್ಯಕ್ತಿಯನ್ನು ಸಾಮಾಜಿಕವಾಗಿ ತೆಗಳುವ ಮತ್ತು ತಿರಸ್ಕರಿಸುವ ಆತಂಕವಿದೆ. ಇದರ ಜತೆಯಲ್ಲಿ ಸೆಕ್ಷನ್ 377 ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷೆಯನ್ನೂ ವಿಧಿಸುತ್ತದೆ. ಇದು ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ವಿಚಾರ. ನ್ಯಾಯಮೂರ್ತಿ ಕೌಶಲ್ ಅವರ ಪೀಠವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೇ ಮಂದಿಯನ್ನು ವಿಚಾರಣೆಗೆ ಒಳಪಡಿಸಿತ್ತು. ಸಣ್ಣ ಪ್ರಮಾಣದ ವಿಚಾರಣೆಯ ಆಧಾರದಲ್ಲೇ ಲೈಂಗಿಕ ಅಲ್ಪಸಂಖ್ಯಾತರ ಲೈಂಗಿಕ ಒಲವನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿರುವುದು ಸರಿಯಲ್ಲ.
‘ಲೈಂಗಿಕ ಒಲವು ಖಾಸಗಿತನದ ಮಹತ್ವದ ಅಂಶಗಳಲ್ಲಿ ಒಂದು. ಅದರ ಆಧಾರದಲ್ಲಿ ಯಾವುದೇ ವ್ಯಕ್ತಿಯನ್ನು ಅಸಮಾನತೆಗೆ ಗುರಿಮಾಡುವುದು ಆತನ ಘನತೆಗೆ ತರುವ ಧಕ್ಕೆಯೇ ಹೌದು. ಸಮಾಜದಲ್ಲಿನ ಪ್ರತಿಯೊಬ್ಬರ ಲೈಂಗಿಕ ಒಲವನ್ನು ರಕ್ಷಿಸಬೇಕು ಎಂದು ಸಮಾನತೆ ಪ್ರತಿಪಾದಿಸುತ್ತದೆ. ಖಾಸಗಿತನದ ಹಕ್ಕು ಮತ್ತು ಲೈಂಗಿಕ ಒಲವಿನ ರಕ್ಷಣೆ ಸಂವಿಧಾನದ 14, 15 ಮತ್ತು 21ನೇ ವಿಧಿಗಳು ನೀಡಿರುವ ಮೂಲಭೂತಹಕ್ಕುಗಳ ಜೀವಾಳವೇ ಆಗಿದೆ’
ಹಾಗದರೆ ಏನಿದು ಸೆಕ್ಷನ್ 377 …??
ಸಲಿಂಗ ಕಾಮ ಅನ್ನುವುದು ಇತ್ತೀಚೆಗೆ ಬಂದಿರುವುದಲ್ಲ 1860ರಲ್ಲಿ ಭಾರತದ ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಪರಿಚಯಿಸಲ್ಪಟ್ಟ ಇದು ಅನಾದಿ ಕಾಲದಿಂದಲೂ ಇದೆ. ಸ್ವತಂತ್ರ್ಯ ಪೂರ್ವದಲ್ಲಿ ಗುಲಾಮಗಿರಿ ಪದ್ದತಿ ಜಾರಿಯಲ್ಲಿತ್ತು CLICK HERE TO READ MORE