6th to 9th DECEMBER
ಪರಿವಿಡಿ
INDIAN POLITY- ಸಂವಿಧಾನ ಮತ್ತು ಆಡಳಿತ
1 .ಅಂತರಾಷ್ಟ್ರಿಯ ಸೌರ ಶಕ್ತಿ ಒಕ್ಕೂಟ (INTERNATIONAL SOLAR ALLIANCE)
- ಏಷ್ಯನ್ ದೇಶಗಳ ಸಮನ್ವಯಗೊಳಿಸುವಿಕೆ ಕಾರ್ಯಪಡೆ ಸಮ್ಮೇಳನ (ASIAN HARMONIZATION WORKING PARTY)
- ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ ಏಕ ಸದಸ್ಯ ಪೀಠ ರಚಿಸಲು ಅನುಮತಿಸಿದ ಕೇಂದ್ರ ಸರಕಾರ
- ಮದುವೆ ನಂತರ ಪತ್ನಿಯ ಧರ್ಮ ಗಂಡನ ಧರ್ಮದ ಜತೆ ಸೇರುವುದಿಲ್ಲ: ಸುಪ್ರೀಂ ಕೋರ್ಟ್
- ವಾಸೆನಾರ್ ಗುಂಪಿಗೆ ಭಾರತ ಸೇರ್ಪಡೆ
- ತಾಜ್ ಸಂರಕ್ಷಣೆಗೆ ದೀರ್ಘ ಕಾಲೀನ ಕ್ರಮ ಅಗತ್ಯ: ಸುಪ್ರೀಂ ಕೋರ್ಟ್
- ತ್ರಿವಳಿ ತಲಾಖ್ ಕರಡು ಮಸೂದೆಗೆ ಒಪ್ಪಿಗೆ ನೀಡಿದ ಮೊದಲ ರಾಜ್ಯ -ಉತ್ತರ ಪ್ರದೇಶ
- ವಕೀಲರ ದುಬಾರಿ ಶುಲ್ಕ ನಿಯಂತ್ರಣಕ್ಕೆ ಕಾನೂನು
ECONOMY- ಅರ್ಥಶಾಸ್ತ್ರ
- ಮಣ್ಣಿನ ಆರೋಗ್ಯ ಕಾರ್ಡ್ ಮೊಬೈಲ್ ಅಪ್ಲಿಕೇಶನ್
- ತಾಜ್’ 2ನೇ ಉತ್ತಮ ಪಾರಂಪರಿಕ ತಾಣ
- ಭಾರತದ ಇಂಧನ ಭದ್ರತಾ ಯೋಜನೆಗಳು
- ರೆಪೋ ದರ ಯಥಾಸ್ಥಿತಿ
INTERNATIONAL RELATIONS – ಅಂತಾರಾಷ್ಟ್ರೀಯ ಸಂಬಂಧಗಳು
- ಜೆರುಸಲೇಂ ಇಸ್ರೇಲ್ ರಾಜಧಾನಿ
- ಭಾರತ- ಕ್ಯೂಬಾ ಒಪ್ಪಂದ
- ಜಿಸಿಸಿ ಮತ್ತು ಪರ್ಷಿಯನ್ ಗಲ್ಫ್ ಬಿಕ್ಕಟ್ಟು
SCIENCE AND TECHNOLOGY-ವಿಜ್ಞಾನ ಮತ್ತು ತಂತ್ರ ಜ್ಞಾನ
- ಸೂಪರ್‍ಸಾನಿಕ್ ಆಕಾಶ್ ಕ್ಷಿಪಣಿ ಪರೀಕ್ಷೆ ಯಶಸ್ವಿ
- ಅಂತರರಾಷ್ಟ್ರೀಯ ಹವಾಮಾನ ಬದಲಾವಣೆ ಸಮ್ಮೇಳನ (International Climate Change Conference)
- ಭಾರತವು ಟ್ರಕೋಮಾ ಸೋಂಕು ಮುಕ್ತ ರಾಷ್ಟ್ರ: ಕೇಂದ್ರ
- ಯಮುನಾ ತೀರದ ಪರಿಸರ ಹಾನಿಗೆ ಆರ್ಟ್ ಆಫ್ ಲಿವಿಂಗ್ ಹೊಣೆ –ಎನ್‌ಜಿಟಿ
OTHERS-ಇತರೆ ವಿಷಯಗಳು
- ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಕುಂಭಮೇಳ
- ಶಾಮಲೀ
- ಸಲಿಂಗ ವಿವಾಹಕ್ಕೆ ಅಸ್ತು ಎಂದ ಆಸ್ಟ್ರೇಲಿಯಾ
- ಸಮುದ್ರದಾಳದಲ್ಲಿ ರೋಮ್ ಸಾಮ್ರಾಜ್ಯ
INDIAN POLITY- ಸಂವಿಧಾನ ಮತ್ತು ಆಡಳಿತ
1 .ಅಂತರಾಷ್ಟ್ರಿಯ ಸೌರ ಶಕ್ತಿ ಒಕ್ಕೂಟ (INTERNATIONAL SOLAR ALLIANCE)
ಪ್ರಮುಖ ಸುದ್ದಿ
- ಅಂತಾರಾಷ್ಟ್ರೀಯ ಸೌರ ಒಕ್ಕೂಟವನ್ನು ಅಧಿಕೃತವಾಗಿ ಒಪ್ಪಂದ ಆಧಾರಿತ ಅಂತರ್ ಸರ್ಕಾರಗಳ ಸಂಘಟನೆಯಾಗಿ ಅಸ್ತಿತ್ವದಲ್ಲಿ ಬರಲಿದೆ.
ಪ್ರಮುಖ ಸಂಗತಿಗಳು (FOR PRELIMS)
- ಇದನ್ನು Conference of Parties-21 (COP-21) ಶೃಂಗಸಭೆಯ ಮೊದಲ ದಿನದಂದು, ಭಾರತೀಯ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹಾಲಾಂಡೆ ಅವರು ಹೇರಳವಾದ ಸೌರ ಶಕ್ತಿಯನ್ನು ಹೊಂದಿರುವ ದೇಶಗಳ ಒಕ್ಕೂಟವಾಗಿ ಅಂತಾರಾಷ್ಟ್ರೀಯ ಸೌರ ಒಕ್ಕೂಟವನ್ನು ಪ್ರಾರಂಭಿಸಿದರು.
- ಇದರ ಕೇಂದ್ರ ಕಚೇರಿಯು ಹರಿಯಾಣದ ಗುರ್ಗಾಂವ್ ನಲ್ಲಿದೆ.
- ಈ ಒಪ್ಪಂದವನ್ನು ಅನುಮೋದಿಸಿದ 15 ನೇ ದೇಶ ಗಿನಿಯಾ
- ಅಂತರರಾಷ್ಟ್ರೀಯ ಸೌರ ಒಕ್ಕೂಟ ಮೂರು ಉದ್ದೇಶಗಳನ್ನು ಒಳಗೊಂಡಿದೆ.ಅವುಗಳೆಂದರೆ
- ಬೇಡಿಕೆಯನ್ನು ಹೆಚ್ಚಿಸುವ ಮೂಲಕ ಬೆಲೆಯನ್ನು ತಗ್ಗಿಸುವುದು .
- ಸೌರ ತಂತ್ರಜ್ಞಾನಗಳನ್ನು ಪ್ರಮಾಣೀಕರಿಸುವುದು.
- ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು.
ಸಂಕ್ಷಿಪ್ತ ವಿಶ್ಲೇಷಣೆ (FOR MAINS)
- ಭೂಮಿಯ ವಾಯುಮಂಡಲದಲ್ಲಿ ಹಸಿರುಮನೆ ಅನಿಲಗಳ ಮಟ್ಟ ಹೆಚ್ಚಾಗುವುದರಿಂದ ಉಂಟಾಗುವ ಹವಾಗುಣ ಬದಲಾವಣೆಯ ಬಗ್ಗೆ ಹೆಚ್ಚಿನ ಕಾಳಜಿಯೊಂದಿಗೆ, ಪಳೆಯುಳಿಕೆ- ಇಂಧನಗಳಿಗೆ ಪರ್ಯಾಯವಾಗಿ ಶುದ್ಧವಾದ ಕಾರ್ಯಸಾಧ್ಯವಾದ ಸೌರ ಶಕ್ತಿ ಬಳಕೆ ವೇಗವನ್ನು ಪಡೆಯುತ್ತಿದೆ. ಸೌರ ಶಕ್ತಿಯ ಬಳಕೆಯನ್ನು ಹೆಚ್ಚಿಸಲು ಭಾರತೀಯ ಸರ್ಕಾರ ಹಲವಾರು ಪ್ರಯತ್ನಗಳನ್ನು ಕೈಗೊಂಡಿದೆ.
- ಸುಮಾರು ಒಂದು ವರ್ಷದಲ್ಲಿ ಸುಮಾರು 300 ಸ್ಪಷ್ಟ ಮತ್ತು ಬಿಸಿಲಿನ ದಿನಗಳಲ್ಲಿ, ಭಾರತದ ಭೂಪ್ರದೇಶದ ಮೇಲೆ ಅಂದಾಜು 5,000 ಟ್ರಿಲಿಯನ್ ಕಿಲೋವ್ಯಾಟ್-ಗಂಟೆಗಳಷ್ಟಿರುವ ಸೌರ ಶಕ್ತಿಯ ಸಂಭವನೀಯತೆ ಭಾರತದಲ್ಲಿರುವ ಎಲ್ಲಾ ಪಳೆಯುಳಿಕೆ ಇಂಧನ ಶಕ್ತಿ ನಿಕ್ಷೇಪಗಳ ಶಕ್ತಿಯ ಒಟ್ಟು ಉತ್ಪಾದನೆಯನ್ನು ಮೀರಿಸುತ್ತದೆ.
- ಭಾರತದಲ್ಲಿ ಸೌರಶಕ್ತಿ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದೆ. ಸೆಪ್ಟೆಂಬರ್ 2017 ರ ವೇಳೆಗೆ, ದೇಶದ ಸೌರ ಗ್ರಿಡ್ 77 ಗಿಗಾವ್ಯಾಟ್ ನಷ್ಟು ಸಾಮರ್ಥ್ಯ ಹೊಂದಿತ್ತು. ಪ್ರಸ್ತುತ, ಗ್ರಿಡ್-ಸಂಪರ್ಕಿತ ಸೌರ ವಿದ್ಯುತ್ ಉತ್ಪಾದನೆಯು ಭಾರತದ ಒಟ್ಟು ಉಪಯುಕ್ತತೆಯ ವಿದ್ಯುತ್ ಉತ್ಪಾದನೆಯ ಸುಮಾರು ಶೇಕಡಾ ೧ ರಷ್ಟಿದೆ.
- ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಡೆಸಿದ ಭಾರತದ ಭಾರಿ ಪ್ರಯತ್ನಗಳು ಸೌರ ಬೆಲೆಯಲ್ಲಿ ಗಣನೀಯ ಕುಸಿತಕ್ಕೆ ಕಾರಣವಾಗಿದೆ ಮತ್ತು ಸೌರ ವಿದ್ಯುಚ್ಛಕ್ತಿಯ ಸರಾಸರಿ ದರವು ಅದರ ಕಲ್ಲಿದ್ದಲಿನಿಂದ ಹೊರಹಾಕಲ್ಪಟ್ಟ ಪ್ರತಿರೂಪಕ್ಕಿಂತ 18 ಪ್ರತಿಶತದಷ್ಟು ಕಡಿಮೆಯಾಗಿದೆ. ಬೆಳಕು, ಪಂಪ್ ಮತ್ತು ಸಾರ್ವಜನಿಕ ಸಾರಿಗೆ ಮುಂತಾದ ಅಸಂಖ್ಯಾತ ಉದ್ದೇಶಗಳಿಗಾಗಿ ಸೌರ ವಿದ್ಯುಚ್ಛಕ್ತಿಯನ್ನು ಬಳಸಬಹುದು.
- ಸೌರ ದ್ಯುತಿವಿದ್ಯುತ್ ಜನಕ ವಿದ್ಯುತ್ ಉತ್ಪಾದನೆಯ ಹೊರತಾಗಿ, ಸೌರ ಉಷ್ಣ ಸ್ಥಾವರಗಳಲ್ಲಿ ಪ್ರಗತಿಯನ್ನು ಸಹ ಮಾಡಲಾಗಿದೆ. ಇದು ವಿದ್ಯುತ್ ಉತ್ಪಾದನೆಗೆ ಉಗಿ ಮತ್ತು ಚಕ್ರಗಳನ್ನು ಉತ್ಪಾದಿಸಲು ಸೌರ ಶಾಖವನ್ನು ಬಳಸುತ್ತದೆ. ಭಾರತದಲ್ಲಿನ ವಾಣಿಜ್ಯ ಸೌರ ಉಷ್ಣ ವಿದ್ಯುತ್ ಸ್ಥಾವರಗಳ ಪ್ರಸ್ತುತ ಸ್ಥಾಪಿತ ಸಾಮರ್ಥ್ಯವು 5 ಮೆಗಾವ್ಯಾಟ್ಗಳಷ್ಟಿದೆ. ಸೌರ-ಉಷ್ಣದ ಮತ್ತು ಸೌರ-ದ್ಯುತಿವಿದ್ಯುಜ್ಜನಕಗಳ ಸರಿಯಾದ ಮಿಶ್ರಣವು ವಿದ್ಯುತ್ ಏರುಪೇರಿನ ಸಂದರ್ಭದಲ್ಲಿ ದುಬಾರಿ ಬ್ಯಾಟರಿಯ ಅಗತ್ಯವಿಲ್ಲದಂತೆ ಮಾಡಬಲ್ಲದು.
- ಮಾರ್ಚ್ 2022 ರೊಳಗೆ ಸೌರ ಮತ್ತು ಗಾಳಿ ವಿದ್ಯುತ್ ಕ್ಷೇತ್ರದಲ್ಲಿ 175-ಗಿಗಾವ್ಯಾಟ್ ಸಾಮರ್ಥ್ಯವನ್ನು ಪಡೆಯಲು ಭಾರತ ಸರ್ಕಾರವು ಒಂದು ಸ್ವಚ್ಛ ಇಂಧನ ಜಾರಿ ಪಥವನ್ನು ಘೋಷಿಸಿದೆ. ಇದಲ್ಲದೆ, ರೈತರಿಗೆ 20 ಗಿಗಾವಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಸರ್ಕಾರ ರೂಪಿಸಿದೆ. ಇದು ಸೌರ ಶಕ್ತಿಯಿಂದ ನೀರಿನ ಪಂಪ್ ಗಳನ್ನು ಪವರ್ ಮಾಡುವಿಕೆಗಾಗಿ ಹೊಲಗಳಲ್ಲಿ 1 ರಿಂದ 2 ಮೆಗಾವ್ಯಾಟ್ ಗಾತ್ರದ ಸಣ್ಣ ಸೌರ ಯೋಜನೆಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ.
- ಸೌರ ಉಪಕರಣಗಳ ದೇಶೀಯ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಸರ್ಕಾರ ಬಯಸಿದ್ದು ಇದಕ್ಕಾಗಿನ ನೀಲ ನಕಾಶೆ ಘೋಷಿಸಲು ಮುಂದಾಗಿದೆ. ದೊಡ್ಡ ಪ್ರಮಾಣದ ಗ್ರಿಡ್-ಸಂಪರ್ಕಿತ ಸೌರ ದ್ಯುತಿವಿದ್ಯುಜ್ಜನಕ ಯೋಜನೆಗೆ ಹೊರತಾಗಿ ಸ್ಥಳೀಯ ಶಕ್ತಿ ಅಗತ್ಯಗಳಿಗಾಗಿ ಭಾರತವು ಗ್ರಿಡ್ ಸೌರಶಕ್ತಿಯನ್ನು ಅಭಿವೃದ್ಧಿಪಡಿಸುತ್ತಿದೆ.
- ವಿದ್ಯುತ್ ಉತ್ಪಾದನೆಯ ಹೊರತಾಗಿ, ಕೇಂದ್ರೀಕರಿಸಿದ ಸೌರ ಪ್ರತಿಫಲಕಗಳನ್ನು ಬಳಸಿಕೊಂಡು ನೀರು ಅಥವಾ ಗಾಳಿಯ ತಾಪನವು ವೇಗವಾಗಿ ಹೆಚ್ಚುತ್ತಿದೆ. ದಕ್ಷಿಣ ಭಾರತದಲ್ಲಿನ ಬೆಂಗಳೂರು ನಗರವು ಭಾರತದಲ್ಲಿ ಛಾವಣಿಯ ಮೇಲ್ಭಾಗದ ಸೌರ ಜಲತಾಪಕಗಳ ದೊಡ್ಡ ನಿಯೋಜನೆಯನ್ನು ಹೊಂದಿದೆ, ಇದು 200 ಮೆಗಾವ್ಯಾಟ್ ನಷ್ಟು ಉಷ್ಣದ ಸಮಾನ ಶಕ್ತಿ ಉತ್ಪಾದಿಸುತ್ತದೆ. ಛಾವಣಿಯ ಮೇಲಿನ ಉಷ್ಣ ವ್ಯವಸ್ಥೆಗಳನ್ನು ಬಳಸುತ್ತಿರುವ ನಿವಾಸಿಗಳಿಗೆ ಮಾಸಿಕ ವಿದ್ಯುಚ್ಛಕ್ತಿ ಮಸೂದೆಗಳಲ್ಲಿ 78 ಯು.ಎಸ್. ಸೆಂಟ್ಸ್ ಗಳ ರಿಯಾಯಿತಿ ನೀಡಿದ ಭಾರತದ ಮೊದಲ ನಗರ ಬೆಂಗಳೂರು ಆಗಿದೆ.
- ಬೆಂಗಳೂರಿನ ಎಲ್ಲಾ ಹೊಸ ಕಟ್ಟಡಗಳಲ್ಲಿ ಇದು ಕಡ್ಡಾಯವಾಗಿದೆ. ಮತ್ತೊಂದು ನಗರ ಪುಣೆಯಲ್ಲಿಯೂ ಹೊಸ ಕಟ್ಟಡಗಳಲ್ಲಿ ಸೌರ ಜಲತಾಪಕಗಳನ್ನು ಕಡ್ಡಾಯಗೊಳಿಸಿದೆ.
- ಸೌರ ವಿದ್ಯುತ್ ಸ್ಥಾವರಗಳ ನಿರ್ಮಾಣ ಮಾಡಲು ಜಮೀನಿನ ಕೊರತೆಯ ಸಮಸ್ಯೆಯನ್ನು ಸಹ ಗಮನಿಸಲಾಗುತ್ತಿದೆ. ಯುಟಿಲಿಟಿ-ಸ್ಕೇಲ್ ಸೌರಶಕ್ತಿ ಸ್ಥಾವರಗಳಲ್ಲಿ ಪ್ರತಿ 40 ರಿಂದ 60 ಮೆಗಾ ವ್ಯಾಟ್ ಳಷ್ಟು ವಿದ್ಯುತ್ ಉತ್ಪಾದಿಸಲು ಸುಮಾರು 1 ಚದರ ಕಿಲೋಮೀಟರ್ ಜಾಗ ಬೇಕಿದೆ.
- ಭಾರತದಲ್ಲಿ ಲಭ್ಯವಿರುವ ಭೂಮಿ ವಿರಳವಾಗಿದ್ದು ಪ್ರತಿ ತಲಾ ಭೂಮಿ ಲಭ್ಯತೆ ಕಡಿಮೆಯಾಗಿದೆ. ಈ ಸಮಸ್ಯೆಯನ್ನು ಮೀರಲು ಬೃಹತ್ ಸೌರ ವಿದ್ಯುತ್ ಸ್ಥಾವರಗಳನ್ನು ಕಾಲುವೆಗಳು, ಸರೋವರಗಳು, ಜಲಾಶಯಗಳು, ಕೃಷಿ ಕೊಳಗಳು ಮತ್ತು ಸಮುದ್ರದ ಮೇಲ್ಮೈ ವಿಸ್ತೀರ್ಣವನ್ನು ಬಳಸುವುದು ಒಂದು ದಾರಿಯಾಗಿದೆ.
- 80 ರಾಷ್ಟ್ರಗಳ ಈ ಒಕ್ಕೂಟದಲ್ಲಿ, ಸೂರ್ಯ-ಸಮೃದ್ಧ ರಾಷ್ಟ್ರಗಳಾದ ಕಟಕ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಸಂಪೂರ್ಣವಾಗಿ ಇರುವ ಅಥವಾ ಭಾಗಶಃ ಸುತ್ತುವರಿದಿರುವ ದೇಶಗಳ ಒಂದು ಸಾಮಾನ್ಯ ವೇದಿಕೆಯಾಗಿದೆ. ಇದು ಸೌರ ಶಕ್ತಿ ಬಳಕೆಯನ್ನು ಹೆಚ್ಚಿಸುವ ಒಂದು ವೇದಿಕೆಯಾಗಿದೆ. ಇದು ಜಾಗತಿಕ ಹಸಿರುಮನೆ ಹೊರಸೂಸುವಿಕೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಹಾಗೆಯೇ ಇದು ಅಗ್ಗದ ಶಕ್ತಿ.
- ಸೂಕ್ತ ಮಾನದಂಡಗಳ ನಿಯೋಜನೆ, ಸಂಪನ್ಮೂಲ ಮೌಲ್ಯಮಾಪನಗಳನ್ನು ಸುಲಭಗೊಳಿಸುವುದು, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಪ್ರದರ್ಶನ ಸೌಲಭ್ಯಗಳನ್ನು ಬೆಂಬಲಿಸುವುದು, ಸೌರ ತಂತ್ರಜ್ಞಾನಗಳ ನವೀನ ಮತ್ತು ಕೈಗೆಟುಕುವ ಅಪ್ಲಿಕೇಶನ್‌ಗಳನ ಉತ್ತೇಜಿಸುವ ದೃಷ್ಟಿಯಿಂದ ದೇಶಗಳು ಒಟ್ಟಿಗೆ ಕೆಲಸ ಮಾಡುವುವ ಗುರಿಹೊಂದಲಾಗಿದೆ.
- 2030 ರ ಹೊತ್ತಿಗೆ ಅಗತ್ಯವಿರುವ 1 ಟ್ರಿಲಿಯನ್ ಡಾಲರ್ ಹೂಡಿಕೆಗಳನ್ನು ಒಟ್ಟುಗೂಡಿಸಲು ನವೀನ ನೀತಿಗಳನ್ನು, ಯೋಜನೆಗಳು, ಕಾರ್ಯಕ್ರಮಗಳು, ಸಾಮರ್ಥ್ಯದ ನಿರ್ಮಾಣ ಕ್ರಮಗಳು ಮತ್ತು ಹಣಕಾಸಿನ ಸಲಕರಣೆಗಳನ್ನು ಸಹ ISA ಯ ಜಂಟಿ ಪ್ರಯತ್ನಗಳು ಒಳಗೊಂಡಿವೆ. ಅಂತಹ ಉಪಕ್ರಮಗಳು ಉತ್ಪಾದನೆ ಮತ್ತು ಅಭಿವೃದ್ಧಿ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಭಾವಿಸಲಾಗಿದೆ, ಬಡ ಮತ್ತು ದೂರದ ಪ್ರದೇಶಗಳ ಇಂಧನ ಸಮಸ್ಯೆಗಳನ್ನು ಪರಿಹರಿಸಲು ಸೌರ ತಂತ್ರಜ್ಞಾನಗಳ ಹೆಚ್ಚಿನ ನಿಯೋಜನೆ ಉಪಯುಕ್ತ ವಾಗಿದೆ.
- ವಿಧ್ಯಾರ್ಥಿಗಳ ಯೋಚನೆಗೆ ಒಂದು ಯೋಜನೆ
In the light of its vision and objectives, examine the progress made by the International Solar Alliance (ISA) and the challenges it’s facing in meeting its objectives
(ಅಂತರಾಷ್ಟ್ರಿಯ ಸೌರ ಶಕ್ತಿ ಒಕ್ಕೂಟದ ದೃಷ್ಟಿಕೋನ ಮತ್ತು ಉದ್ದೇಶಗಳ ಬೆಳಕಿನಲ್ಲಿ, ಅದರ ಗುರಿಗಳನ್ನು ಪೂರೈಸುವಲ್ಲಿ ಮತ್ತು ಪ್ರಗತಿಯನ್ನು ಸಾಧಿಸಲು ಎದುರಿಸುತ್ತಿರುವ ಸವಾಲುಗಳನ್ನು ಪರೀಕ್ಷಿಸಿ.)
- ಏಷ್ಯನ್ ದೇಶಗಳ ಸಮನ್ವಯಗೊಳಿಸುವಿಕೆ ಕಾರ್ಯಪಡೆ ಸಮ್ಮೇಳನ (ASIAN HARMONIZATION WORKING PARTY)
ಪ್ರಮುಖ ಸುದ್ದಿ
- ಇತ್ತೀಚೆಗೆ ದೆಹಲಿಯಲ್ಲಿ ಏಷ್ಯನ್ ದೇಶಗಳ ಸಮನ್ವಯಗೊಳಿಸುವಿಕೆ ಕಾರ್ಯಪಡೆಯ 22ನೇ ವಾರ್ಷಿಕ ಸಮ್ಮೇಳನ ನಡೆಯಿತು.
- ಈ ಸಮ್ಮೇಳನದ ಮುಖ್ಯ ಉದ್ದೇಶವೆಂದರೆ ಏಷ್ಯಾ ಖಂಡದಲ್ಲಿ ಮತ್ತು ಹೊರಗೆ ವೈದ್ಯಕೀಯ ಸಾಧನಗಳ ನಿಯಂತ್ರಣವನ್ನು ಸನ್ವಯಗೊಳಿಸುವ ನಿಟ್ಟಿನಲ್ಲಿ ಚೌಕಟ್ಟು ಅಭಿವೃದ್ಧಿಪಡಿಸಿ ಶಿಫಾರಸ್ಸು ಮಾಡುವುದು. ಏಷ್ಯನ್ ದೇಶಗಳ ಔಷಧ ನಿಯಂತ್ರಕರು ಹಾಗೂ ಉದ್ಯಮ ಕ್ಷೇತ್ರದಲ್ಲಿ ಜ್ಞಾನ ಮತ್ತು ಅನುಭವವನ್ನು ವಿನಿಮಯ ಮಾಡಿಕೊಳ್ಳುವುದು.
- ಈ ಸಮ್ಮೇಳನವನ್ನು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‍ಸಿಓ) ಹಾಗೂ ರಾಷ್ಟ್ರೀಯ ಔಷಧ ನಿಯಂತ್ರಣ ಪ್ರಾಧಿಕಾರ (ಎನ್‍ಡಿಆರ್‍ಎ) ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ ಆಯೋಜಿಸಿದೆ.
ಏಷ್ಯನ್ ದೇಶಗಳ ಸಮನ್ವಯಗೊಳಿಸುವಿಕೆ ಕಾರ್ಯಪಡೆ ಬಗ್ಗೆ
- ಅಂತರರಾಷ್ಟ್ರೀಯ ವೈದ್ಯಕೀಯ ಸಾಧನಗಳ ನಿಯಂತ್ರಣ ವೇದಿಕೆ (ಐಎಂಡಿಆರ್‍ಎಫ್) ಮಾರ್ಗಸೂಚಿಗೆ ಅನುಗುಣವಾಗಿ ಇದನ್ನು ರೂಪಿಸುವುದು. ಇದನ್ನು 1999ರಲ್ಲಿ ಆರಂಭಿಸಲಾಗಿದ್ದು, 30 ದೇಶಗಳ ನಿಯಂತ್ರಕರು ಮತ್ತು ಉದ್ಯಮಗಳು ಇದರ ಸದಸ್ಯತ್ವ ಪಡೆದಿವೆ.
- ಇದು ಸಂಬಂಧಪಪಟ್ಟ ಅಂತರರಾಷ್ಟ್ರೀಯ ಸಂಸ್ಥೆಗಳಾದ ಐಎಂಡಿಆರ್‍ಎಫ್. ಐಎಸ್‍ಓ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯಂಥ ಸಂಘ ಸಂಸ್ಥೆಗಳ ಜತೆಗೂಡಿ ಕಾರ್ಯನಿರ್ವಹಿಸುತ್ತದೆ.
- ಏಷ್ಯನ್ ದೇಶಗಳ ಸಮನ್ವಯಗೊಳಿಸುವಿಕೆ ಕಾರ್ಯಪಡೆಯು ಒಂದು ಲಾಭರಹಿತ ಸಂಸಥೆಯಾಗಿದ್ದು, ಇದರ ಮುಖ್ಯ ಉದ್ದೇಶವೆಂದರೆ ಏಷ್ಯಾ ಖಂಡದಲ್ಲಿ ಮತ್ತು ಹೊರಗೆ ವೈದ್ಯಕೀಯ ಸಾಧನಗಳ ನಿಯಂತ್ರಣವನ್ನು ಸನ್ವಯಗೊಳಿಸುವ ನಿಟ್ಟಿನಲ್ಲಿ ಚೌಕಟ್ಟು ಅಭಿವೃದ್ಧಿಪಡಿಸಿ ಶಿಫಾರಸ್ಸು ಮಾಡುವುದು.
- ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ ಏಕ ಸದಸ್ಯ ಪೀಠ ರಚಿಸಲು ಅನುಮತಿಸಿದ ಕೇಂದ್ರ ಸರಕಾರ
ಪ್ರಮುಖ ಸುದ್ದಿ
- ಕೇಂದ್ರ ಪರಿಸರ ಸಚಿವಾಲಯವು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅಧ್ಯಕ್ಷರು ಏಕ ಸದಸ್ಯ ಪೀಠವನ್ನು ರಚಿಸಿಕೊಳ್ಳಲು ಒಪ್ಪಿಗೆ ನೀಡಿದೆ. ಆದರೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಇದಕ್ಕೆ ಅವಕಾಶ ಇರುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಪದ್ಧತಿಗಳು ಮತ್ತು ವಿಧಿವಿಧಾನಗಳು) ನಿಯಮಾವಳಿ- 2011ಕ್ಕೆ ಸೂಕ್ತ ತಿದ್ದುಪಡಿ ತಂದಿದೆ. ಈ ಸಂಬಂಧ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಆದರೆ ಇದು ವಿಶೇಷ ಸಂದರ್ಭಗಳನ್ನು ವ್ಯಾಖ್ಯಾನಿಸಿಲ್ಲ.
ಪ್ರಮುಖ ಸುದ್ದಿ
- ಈ ನಡೆಯ ಮುಖ್ಯ ಉದ್ದೇಶವಣೆದರೆ , ಎನ್‍ಜಿಟಿಯಲ್ಲಿನ ಖಾಲಿ ಹುದ್ದೆಗಳ ಸಮಸ್ಯೆಯನ್ನು ನಿಭಾಯಿಸುವುದು. ಈ ಹಿಂದಿನ ನಿಯಮಾವಳಿಯ ಅನ್ವಯ, ಎನ್‍ಜಿಟಿ ಪೀಠದಲ್ಲಿ ಎರಡು ಅಥವಾ ಹೆಚ್ಚಿನ ಸದಸ್ಯರು ಇರಬೇಕಾಗುತ್ತದೆ. ಇದರಲ್ಲಿ ಒಬ್ಬರು ನ್ಯಾಯಾಂಗ ಸದಸ್ಯರು ಹಾಗೂ ಮತ್ತೊಬ್ಬರು ತಜ್ಞರು ಇರುತ್ತಾರೆ. ನ್ಯಾಯಾಂಗ ಹಾಗೂ ಸ್ವತಂತ್ರ ತಜ್ಞರು ಎಲ್ಲ ವ್ಯಾಜ್ಯಗಳ ತಾಂತ್ರಿಕ ಆಯಾಮಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸುತ್ತಾರೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಬಗ್ಗೆ
- ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯನ್ನು 2010ರಲ್ಲಿ ಆರಂಭಿಸಲಾಗಿದ್ದು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯ್ದೆ- 2010ರ ಅನ್ವಯ ಇದನ್ನು ಆರಂಭಿಸಲಾಗಿದೆ. ಇದರ ಮುಖ್ಯ ಉದ್ದೇಸವೆಂದರೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿಷಯಗಳನ್ನು ತಕ್ಷಣ ಮತ್ತು ಪರಿಣಾಮಕಾರಿಯಾಗಿ ವಿಲೇವಾರಿ ಮಾಡುವುದು. ಇದರ ಜತೆಗೆ ಪರಿಸರ ಸಂರಕ್ಷಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯ ಬಗೆಗಿನ ವ್ಯಾಜ್ಯಗಳನ್ನೂ ಇದು ಬಗೆಹರಿಸುತ್ತದೆ.
- ಎನ್‍ಜಿಟಿ ನೈಸರ್ಗಿಕ ನ್ಯಾಯ ತತ್ವದಿಂದ ನಿರ್ದೇಶಿತವಾಗಿದ್ದು, ನಾಗರಿಕ ಅಥವಾ ಅಪರಾಧ ದಂಡಸಂಹಿತೆಯ ವಿಧಿವಿಧಾನಗಳನ್ನು ಇದು ಒಳಗೊಂಡಿರುವುದಿಲ್ಲ. ಇದು ಯಾವುದೇ ಅರ್ಜಿಗಳು ಸಲ್ಲಿಕೆಯಾದ ಆರು ತಿಂಗಳ ಒಳಗಾಗಿ ವಿಲೇವಾರಿ ಮಾಡುವ ಹೊಣೆಗಾರಿಕೆಯನ್ನು ಹೊಂದಿರುತ್ತದೆ. ನವದೆಹಲಿಯಲ್ಲಿ ಎನ್‍ಜಿಟಿ ಇದ್ದು, ಇದರ ಪೀಠಗಳು ಭೋಪಾಲ್, ಪುಣೆ, ಕೊಲ್ಕತ್ತಾ ಹಾಗೂ ಚೆನ್ನೈಗಳಲ್ಲಿ ಇವೆ. ಇತರೆಡೆಗಳಲ್ಲಿ ಪ್ರಾದೇಶಿಕ ಪೀಠಗಳು ಇರುತ್ತವೆ.
- ಇದು ವ್ಯಾಜ್ಯಗಳನ್ನು ನ್ಯಾಯಬದ್ಧವಾಗಿ ತೀರ್ಮಾನಿಸುವ ಹೊಣೆ ಹೊಂದಿದ್ದು, ಪರಿಸರ, ಅರಣ್ಯ, ಜನರಿಗೆ ಹಾನಿಕಾರಕವಾಗುವ ರೀತಿಯಲ್ಲಿ ಪರಿಸರಾತ್ಮಕ ಬದ್ಧತೆಯನ್ನು ಪರಿಶೀಲಿಸುತ್ತದೆ.
- ಇದು ವಿಶೇಷೀಕೃತ ಸಂಸ್ಥೆಯಾಗಿದ್ದು, ಪರಿಸರಾತ್ಮಕ ವಿಷಯಗಳನ್ನು ನಿರ್ವಹಿಸುವಲ್ಲಿ ಅಗತ್ಯವಾದ ಪರಿಣತಿಯನ್ನು ಹೊಂದಿರುತ್ತದೆ. ಇದರಲ್ಲಿ ಕಾನೂನು ಹಕ್ಕುಗಳು ಮತ್ತು ಪರಿಹಾರ ನೀಡಿಕೆ ಕೂಡಾ ಸೇರುತ್ತದೆ. ಪರಿಸರ ವಿಚಾರದಲ್ಲಿ ಯಾವುದೇ ವ್ಯಕ್ತಿ ಅಥವಾ ಆಸ್ತಿಗೆ ಹಾನಿಯಾದಾಗ ಅದಕ್ಕೆ ಪರಿಸರ ವಿಚಾರದಲ್ಲಿ ಪರಿಹಾರ ನೀಡುವ ಹೊಣೆ ಇರುತ್ತದೆ. ಇದು ನೀರು ಮತ್ತಿತರ ವಿವಾದಗಳ ಬಗ್ಗೆಯೂ ಪರಿಶೀಲನೆ ನಡೆಸುತ್ತದೆ.
- ವಿಧ್ಯಾರ್ಥಿಗಳ ಯೋಚನೆಗೆ ಒಂದು ಯೋಜನೆ (MLP-GS PAPER-
)
Why was the National Green Tribunal (NGT) set up? What are its objectives? Do you think its institutional integrity and autonomy is being compromised? Critically examine.
(ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಯನ್ನು ಏಕೆ ಸ್ಥಾಪಿಸಲಾಯಿತು ? ಅದರ ಉದ್ದೇಶಗಳು ಯಾವುವು? ಸಾಂಸ್ಥಿಕ ಸಮಗ್ರತೆ ಮತ್ತು ಸ್ವಾಯತ್ತತೆಯು ರಾಜಿಯಾಗುತ್ತಿದೆ ಎಂದು ನೀವು ಯೋಚಿಸುತ್ತೀರಾ? ವಿಮರ್ಶಾತ್ಮಕವಾಗಿ ಪರೀಕ್ಷಿಸಿ.)
- ಮದುವೆ ನಂತರ ಪತ್ನಿಯ ಧರ್ಮ ಗಂಡನ ಧರ್ಮದ ಜತೆ ಸೇರುವುದಿಲ್ಲ: ಸುಪ್ರೀಂ ಕೋರ್ಟ್
ಪ್ರಮುಖ ಸುದ್ದಿ
- ಮದುವೆಯಾದ ನಂತರ ಪತ್ನಿಯು ಪತಿಯ ಧರ್ಮದವಳಾಗುವುದಿಲ್ಲ. ಅಥವಾ ಪತಿಯ ಜಾತಿಯ ಜತೆ ಪತ್ನಿಯ ಜಾತಿಯೂ ಸೇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಮುಖ ಅಂಶಗಳು
- ತಮ್ಮ ಪೋಷಕರ ಅಂತ್ಯ ಸಂಸ್ಕಾರ ಮಾಡಲು ಅವಕಾಶ ನೀಡಲಿಲ್ಲ ಎಂದು ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎ.ಎಂ. ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ಕೈಗೆತ್ತಿಕೊಂಡಿತು.
- ಬೇರೆ ಸಮುದಾಯದ ಪುರುಷನನ್ನು ವಿವಾಹವಾಗಿದ್ದ ಪಾರ್ಸಿ ಮಹಿಳೆಯು ತಂದೆ-ತಾಯಿಯ ಅಂತ್ಯ ಸಂಸ್ಕಾರ ಮಾಡುವಂತಿಲ್ಲ. ಆಕೆ ಬೇರೆ ಸಮುದಾಯದವಳಾಗಿದ್ದಾಳೆಂದು ವಲ್ಸಾದ್ ಜೊರೊಸ್ಟ್ರಿಯನ್ ಟ್ರಸ್ಟ್ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ಗೂಲ್‌ರುಕ್ ಎಂ. ಗುಪ್ತಾ ಕಾನೂನಿನ ಮೊರೆ ಹೋಗಿದ್ದರು.
- ಈಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಆಕೆ ಮದುವೆಯಾದ ಮಾತ್ರಕ್ಕೆ ಮತಾಂತರವಾಗುವ ಅಗತ್ಯವಿಲ್ಲ. ಆಕೆ ಮದುವೆಯಾದ ನಂತರ ಆಕೆಯ ಜಾತಿ ಕೂಡ ಬದಲಾವಣೆಯಾಗಬೇಕು ಎಂಬ ನಿಯಮವಿಲ್ಲ. ಆಕೆ ಪಾರ್ಸಿಯಂತೆಯೇ ಅಂತ್ಯಸಂಸ್ಕಾರ ನಡೆಸಲು ಅರ್ಹಳು ಎಂದು ತಿಳಿಸಿದೆ.
- ಸಂಪೂರ್ಣವಾಗಿ ಬದಲಾಗುವುದು ಮಹಿಳೆಯ ವೈಯಕ್ತಿಕ ನಿರ್ಧಾರದ ಮೇಲೆ ಅನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
6.ವಾಸೇನರ್ ಗುಂಪಿಗೆ ಭಾರತ ಸೇರ್ಪಡೆ
ಪ್ರಮುಖ ಸುದ್ದಿ
- ಸಾಂಪ್ರದಾಯಿಕ ಶಸ್ತ್ರಾಸ್ತ್ರ, ದ್ವಿಬಳಕೆ ಸಾಧನಗಳು ಮತ್ತು ತಂತ್ರಜ್ಞಾನಗಳ ರಫ್ತು ನಿಯಂತ್ರಿಸುವ ಪ್ರತಿಷ್ಠಿತ ‘ವಾಸೆನಾರ್ ಅರೇಂಜ್‌ಮೆಂಟ್’ (ಡಬ್ಲ್ಯುಎ) ಗುಂಪಿನಲ್ಲಿ ಭಾರತಕ್ಕೆ ಸದಸ್ಯತ್ವ ದೊರೆತಿದೆ. ದ್ವಿಬಳಕೆ ಎಂದರೆ, ನಾಗರಿಕ, ಮತ್ತು ಸೇನಾ ಬಳಕೆಗಳೆರಡಕ್ಕೂ ಉಪಯೋಗಿಸಬಹುದಾದ ತಂತ್ರಜ್ಞಾನ. ಉದಾಹರಣೆಗೆ ಪರಮಾಣು ತಂತ್ರಜ್ಞಾನ.
- ವಿಯೆನ್ನಾದಲ್ಲಿ ನಡೆದ ಡಬ್ಲ್ಯುಎ 23ನೇ ವಾರ್ಷಿಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾರತ ಡಬ್ಲ್ಯುಎಯ 42ನೇ ಸದಸ್ಯ ರಾಷ್ಟ್ರವಾಗಿದೆ.
ಪ್ರಮುಖ ಸಂಗತಿಗಳು
- ರಫ್ತು ನಿಯಂತ್ರಣ ಗುಂಪಿಗೆ ಸೇರ್ಪಡೆಯಿಂದಾಗಿ ಅಣ್ವಸ್ತ್ರ ಪ್ರಸರಣ ತಡೆ ಕ್ಷೇತ್ರದಲ್ಲಿ ಭಾರತದ ವಿಶ್ವಾಸಾರ್ಹತೆ ಹೆಚ್ಚಾಗುತ್ತದೆ. ಅಣ್ವಸ್ತ್ರ ಪ್ರಸರಣ ತಡೆ (ಎನ್‌ಪಿಟಿ) ಒಪ್ಪಂದಕ್ಕೆ ಸಹಿ ಹಾಕದಿದ್ದರೂ ಭಾರತಕ್ಕೆ ಈ ಸದಸ್ಯತ್ವ ದೊರೆತಿರುವುದು ವಿಶೇಷ.
- ಡಬ್ಲ್ಯುಎ ಸದಸ್ಯತ್ವದಿಂದಾಗಿ 48 ಸದಸ್ಯರನ್ನು ಹೊಂದಿರುವ ಪರಮಾಣು ಪೂರೈಕೆದಾರರ ಗುಂಪಿನ (ಎನ್‌ಎಸ್‌ಜಿ) ಸದಸ್ಯತ್ವಕ್ಕೆ ಭಾರತ ಇರಿಸಿರುವ ಬೇಡಿಕೆಗೆ ಹೆಚ್ಚಿನ ಬಲ ಬರುತ್ತದೆ. ಎನ್‌ಎಸ್‌ಜಿ ಸದಸ್ಯತ್ವ ಪಡೆಯುವಲ್ಲಿ ಭಾರತಕ್ಕೆ ತೊಡಕಾಗಿರುವ ಚೀನಾಕ್ಕೆ ಈ ಸದಸ್ಯತ್ವ ಇಲ್ಲ.
- ಸಾಂಪ್ರದಾಯಿಕ ಶಸ್ತ್ರಾಸ್ತ್ರ ಮತ್ತು ದ್ವಿಬಳಕೆ ಸಾಧನಗಳು ಹಾಗೂ ತಂತ್ರಜ್ಞಾನದ ವರ್ಗಾವಣೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರುವುದು ಮತ್ತು ಹೆಚ್ಚಿನ ಹೊಣೆಗಾರಿಕೆ ತೋರುವಲ್ಲಿ ಡಬ್ಲ್ಯುಎ ಮಹತ್ವದ ಪಾತ್ರ ವಹಿಸುತ್ತಿದೆ. ಈ ಗುರಿಗಳನ್ನು ನಿರ್ಲಕ್ಷಿಸಿ ಸೇನಾ ಸಾಮರ್ಥ್ಯ ವೃದ್ಧಿಗೆ ತಂತ್ರಜ್ಞಾನ ವರ್ಗಾವಣೆ ಮಾಡುವುದಿಲ್ಲ ಎಂಬುದನ್ನು ಸದಸ್ಯ ರಾಷ್ಟ್ರಗಳು ಖಾತರಿಪಡಿಸಬೇಕು. ಇಂತಹ ಶಸ್ತ್ರಾಸ್ತ್ರ ಮತ್ತು ತಂತ್ರಜ್ಞಾನ ಭಯೋತ್ಪಾದಕರ ಕೈಗೆ ಸಿಗದಂತೆ ನೋಡಿಕೊಳ್ಳುವುದು ಡಬ್ಲ್ಯುಎ ಇನ್ನೊಂದು ಗುರಿ.
- ಇನ್ನೊಂದು ಮಹತ್ವದ ರಫ್ತು ನಿಯಂತ್ರಣ ಗುಂಪಾದ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಗುಂಪಿಗೆ (ಎಂಟಿಸಿಆರ್) ಕಳೆದ ಜೂನ್‌ನಲ್ಲಿ ಭಾರತ ಸೇರ್ಪಡೆಯಾಗಿತ್ತು. ಅಮೆರಿಕದ ಜತೆಗೆ ನಾಗರಿಕ ಪರಮಾಣು ಒಪ್ಪಂದ ಮಾಡಿಕೊಂಡ ಬಳಿಕ ಜಾಗತಿಕ ಮಟ್ಟದ ವಿವಿಧ ನಿಯಂತ್ರಣ ಗುಂಪುಗಳ ಸದಸ್ಯತ್ವ ಪಡೆಯಲು ಭಾರತ ಪ್ರಯತ್ನಿಸಿದೆ. ಎನ್‌ಎಸ್‌ಜಿ, ಎಂಟಿಸಿಆರ್, ಆಸ್ಟ್ರೇಲಿಯಾ ಗುಂಪು ಮತ್ತು ಡಬ್ಲ್ಯುಎ ಅವುಗಳಲ್ಲಿ ಮುಖ್ಯವಾದವು. ಸದ್ಯ ಎರಡು ಗುಂಪುಗಳಲ್ಲಿ ಭಾರತಕ್ಕೆ ಸದಸ್ಯತ್ವ ದೊರೆತಿದೆ.
ಕಾರ್ಯ ನಿರ್ವಹಣೆ ಹೇಗೆ ?
- ಗುಂಪು ಒಂದು ನಿಯಂತ್ರಣ ಪಟ್ಟಿಯನ್ನು ಹೊಂದಿದೆ. ಸದಸ್ಯ ರಾಷ್ಟ್ರಗಳು ಒಪ್ಪಿಗೆ ನೀಡಿದ ಶಸ್ತ್ರಾಸ್ತ್ರ ಮತ್ತು ತಂತ್ರಜ್ಞಾನಗಳು ಈ ಪಟ್ಟಿಗೆ ಸೇರುತ್ತವೆ. ದ್ವಿಬಳಕೆ ಸಾಧನಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ಮಾಹಿತಿ ವಿನಿಮಯಕ್ಕೆ ಸದಸ್ಯ ರಾಷ್ಟ್ರಗಳು ಒಪ್ಪಿಗೆ ನೀಡಬೇಕು. ನಿಯಂತ್ರಣ ಪಟ್ಟಿಯಲ್ಲಿ ಇರುವ ಸಾಧನಗಳ ವರ್ಗಾವಣೆ ಬಗ್ಗೆ ಮಾಹಿತಿ ದೊರೆತರೆ ಅದನ್ನು ಡಬ್ಲ್ಯುಎ ಜತೆ ಹಂಚಿಕೊಳ್ಳಬೇಕು. ಸದಸ್ಯರಲ್ಲದ ರಾಷ್ಟ್ರಗಳಿಗೆ ಇಂತಹ ಸಾಧನಗಳನ್ನು ನೀಡಬಾರದು.
ಏನಿದು ವಾಸೆನಾರ್ ಅರೇಂಜ್ಮೆಂಟ್ ?
- ಬಹುರಾಷ್ಟ್ರೀಯ ರಫ್ತು ನಿಯಂತ್ರಣ ಸಮನ್ವಯ ಸಮಿತಿ ಎಂಬ ಗುಂಪು ಶೀತಲ ಸಮರ ಯುಗದಲ್ಲಿ ಅಸ್ತಿತ್ವದಲ್ಲಿತ್ತು. ಅದರ ಬದಲಿಗೆ 1996ರಲ್ಲಿ ಡಬ್ಲ್ಯುಎ ಜಾರಿಗೆ ಬಂತು. ಹೇಗ್‌ನ ಸಮೀಪದ ವಾಸೆನಾರ್ ಪಟ್ಟಣದಲ್ಲಿ ಈ ಒಪ್ಪಂದ ಏರ್ಪಟ್ಟ ಕಾರಣ ಗುಂಪಿಗೆ ಅದೇ ಹೆಸರು ಇರಿಸಿಕೊಳ್ಳಲಾಗಿದೆ.
- ಪರಮಾಣು ಪೂರೈಕೆದಾರರ ಗುಂಪು ಮತ್ತು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಗುಂಪುಗಳು ಕ್ರಮವಾಗಿ ಅಣ್ವಸ್ತ್ರ ಮತ್ತು ಕ್ಷಿಪಣಿ ತಂತ್ರಜ್ಞಾನ ವರ್ಗಾವಣೆ ಮೇಲೆ ನಿಗಾ ಇರಿಸಿದಂತೆ ಡಬ್ಲ್ಯುಎ, ಸಾಂಪ್ರದಾಯಿಕ ಶಸ್ತ್ರಾಸ್ತ್ರ ಮತ್ತು ದ್ವಿ ಬಳಕೆ ತಂತ್ರಜ್ಞಾನ ವರ್ಗಾವಣೆಯನ್ನು ನಿಯಂತ್ರಿಸುತ್ತದೆ.
ಭಾರತಕ್ಕೆ ಏನು ಲಾಭ ?
- ಭಾರತವು ಅಣ್ವಸ್ತ್ರ ಪ್ರಸರಣ ತಡೆ (ಎನ್‌ಪಿಟಿ) ಒಪ್ಪಂದಕ್ಕೆ ಸಹಿ ಹಾಕಿಲ್ಲ. ಈಗ ಡಬ್ಲ್ಯುಎ ಸದಸ್ಯತ್ವ ದೊರೆತಿರುವುದರಿಂದ ಅಣ್ವಸ್ತ್ರ ಪ್ರಸರಣ ತಡೆ ಕ್ಷೇತ್ರದಲ್ಲಿ ಭಾರತದ ವಿಶ್ವಾಸಾರ್ಹತೆ ಹೆಚ್ಚುತ್ತದೆ. ಎನ್‌ಎಸ್‌ಜಿ ಸದಸ್ಯತ್ವ ಪಡೆಯುವಲ್ಲಿ ಇದು ನೆರವಾಗಬಹುದು.
ಶಸ್ತ್ರಾಸ್ತ್ರ ಹಂಚಿಕೆ ನಿಯಂತ್ರಣಕ್ಕೆ ನಾಲ್ಕು ತಂಡಗಳು
- ಅಪಾಯಕಾರಿ ತಂತ್ರಜ್ಞಾನ ಹಸ್ತಾಂತರಕ್ಕೆ ಸಂಬಂಧಿಸಿದ ನಾಲ್ಕು ಗ್ರೂಪ್ಗಳಲ್ಲಿ ವಾಸ್ಸೆನ್ನಾರ್ ಅರೇಂಜ್ವೆುಂಟ್ ಒಂದು. ನ್ಯೂಕ್ಲಿಯರ್ ಸಪ್ಲೈಯರ್ಸ್ ಗ್ರೂಪ್(ಎನ್‌ಎಸ್‌ಜಿ) ನ್ಯೂಕ್ಲಿಯರ್ ವಸ್ತುಗಳು ಮತ್ತು ತಂತ್ರಜ್ಞಾನ ಆಮದನ್ನು ನಿಯಂತ್ರಿಸಿದರೆ, ವಾಸ್ಸೆನ್ನಾರ್ ಗ್ರೂಪ್ ರಾಸಾಯನಿಕ ಮತ್ತು ಜೈವಿಕ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಬಳಸುವ ವಸ್ತುಗಳ ಆಮದನ್ನು ನಿಯಂತ್ರಿಸುತ್ತದೆ.
- ಕ್ಷಿಪಣಿ ಮತ್ತು 500 ಕೆಜಿ ತೂಕದ ಶಸ್ತ್ರಾಸ್ತ್ರ ಒಯ್ಯಬಲ್ಲ, ಕನಿಷ್ಠ 300 ಕಿಲೋಮೀಟರ್ ದೂರದ ಸಾಮರ್ಥ್ಯ ಹೊಂದಿರುವ ಯುಎವಿಗಳ ಹಸ್ತಾಂತರವನ್ನು ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್ಎಂಟಿಸಿಆರ್) ನಿಯಂತ್ರಿಸುತ್ತದೆ. ಭಾರತ ಅಣ್ವಸ್ತ್ರ ಪ್ರಸರಣ ವಿರೋಧಿ ಒಪ್ಪಂದ(ಎನ್‌ಪಿಟಿ)ಗೆಸಹಿ ಹಾಕದ ಹೊರತಾಗಿಯೂ ಇದರ ಸದಸ್ಯತ್ವ ಪಡೆದುಕೊಂಡಿರುವ ರಾಷ್ಟ್ರಗಳೊಂದಿಗೆ ಒಪ್ಪಂದಗಳನ್ನು ನಡೆಸಲು, ತಂತ್ರಜ್ಞಾನಗಳ ಹಸ್ತಾಂತರಕ್ಕೆ ಸಹಾಯವಾಗಲಿದೆ.
- ಅಮೆರಿಕದಿಂದ ದಶಕಗಳಿಂದ ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ತಂತ್ರಜ್ಞಾನಗಳನ್ನು ಪಡೆಯಲು ಅನುಕೂಲವಾಗಲಿದೆ. ಭಾರತ ಕಳೆದ ವರ್ಷವೇ ಎಂಟಿಸಿಆರ್ನಲ್ಲಿ ಸದಸ್ಯತ್ವ ಹೊಂದಿದೆ.ನ ಇದರಲ್ಲಿ ಒಟ್ಟು 35 ಸದಸ್ಯ ರಾಷ್ಟ್ರಗಳಿವೆ. ಇದರ ಸದಸ್ಯತ್ವ ಕಾರಣದಿಂದಲೇ ಭಾರತಕ್ಕೆ ರಷ್ಯಾ ಸಹಯೋಗದಲ್ಲಿ ಸೂಪರ್‍ಸಾನಿಕ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯನ್ನು ದೇಶದಲ್ಲೇ ನಿರ್ಮಾಣ ಮಾಡಲು ಸಾಧ್ಯವಾಗಿದೆ.
- ಎನ್ಎಸ್ಜಿಯಲ್ಲಿ ಸದಸ್ಯತ್ವ ಪಡೆಯಲು ಯತ್ನಿಸಿತ್ತಾದರೂ ಅಮೆರಿಕದ ತೀವ್ರ ಒತ್ತಡದ ಹೊರತಾಗಿಯೂ ಚೀನಾ ಮಧ್ಯಪ್ರವೇಶದಿಂದ ಇದು ಸಾಧ್ಯವಾಗಿರಲಿಲ್ಲ. ರಷ್ಯಾ ಇದನ್ನು ರಾಜಕೀಯ ಪಿತೂರಿಯ ಪರಿಣಾಮ ಎಂದು ಬಣ್ಣಿಸಿತ್ತು.
- ಇನ್ನು 1985ರಲ್ಲಿ ಹುಟ್ಟಿಕೊಂಡ ಆಸ್ಟ್ರೇಲಿಯಾ ಗ್ರೂಪ್ಗೆ ಸೇರುವ ಪ್ರಯತ್ನವನ್ನೂ ಭಾರತ ಮಾಡುತ್ತಿದೆ. 1980ರಿಂದ 1988ರ ಅವಧಿಯಲ್ಲಿ ನಡೆದ ಇರಾನ್- ಇರಾಕ್ ಯುದ್ಧದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರ ಬಳಕೆ ಮತ್ತು ಅದನ್ನು ನಿಯಂತ್ರಿಸುವ ಸಲುವಾಗಿ ಹುಟ್ಟಿಕೊಂಡ ಗ್ರೂಪ್ ಇದು. ಇದು ರಾಸಾಯನಿಕ ಶಸ್ತ್ರಾಸ್ತ್ರಗಳ ಆಮದು ನಿಯಂತ್ರಣ, ರಾಸಾಯನಿಕಗಳ ಸಂಗ್ರಹ, ರಾಸಾಯನಿಕ ತಯಾರಿಕಾ ತಂತ್ರಜ್ಞಾನ ಮುಂತಾದವುಗಳ ಬಗ್ಗೆ ನಿಗಾ ವಹಿಸುತ್ತದೆ.
- ವಿಧ್ಯಾರ್ಥಿಗಳ ಯೋಚನೆಗೆ ಒಂದು ಯೋಜನೆ (MLP-GS PAPER-2)
What is Wassenaar Arrangement? India recently became member of the Wassenaar Arrangement. Discuss its significance to India
(ವಾಸೆನಾರ್ ಅರೇಂಜ್‌ಮೆಂಟ್ ಎಂದರೇನು? ಇತ್ತೀಚೆಗೆ ಭಾರತ ವಾಸೆನಾರ್ ಅರೇಂಜ್‌ಮೆಂಟ್ ಸದಸ್ಯ ರಾಷ್ಟ್ರದ ಕುರಿತು ಅದರ ಮಹತ್ವವನ್ನು ಚರ್ಚಿಸಿ)
- ತಾಜ್ ಸಂರಕ್ಷಣೆಗೆ ದೀರ್ಘ ಕಾಲೀನ ಕ್ರಮ ಅಗತ್ಯ: ಸುಪ್ರೀಂ ಕೋರ್ಟ್
ಪ್ರಮುಖ ಸುದ್ದಿ
- ತಾಜ್ ಮಹಲ್ ಸಂರಕ್ಷಣೆಗಾಗಿ ಕನಿಷ್ಠ 100 ವರ್ಷಗಳ ಕಾರ್ಯಯೋಜನೆ ಕುರಿತು ಸಮಗ್ರ ಮತ್ತು ವಿಸ್ತೃತ ವರದಿ ಸಲ್ಲಿಸುವಂತೆ ತಾಜ್ ವಲಯ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
- ‘ತಾಜ್ ವಲಯ ಪ್ರಾಧಿಕಾರ (ಟಿಟಿಝಡ್) ಸಲ್ಲಿಸಿರುವುದು ಮಧ್ಯಂತರ ವರದಿ. ಇದರಲ್ಲಿ ತಾತ್ಕಾಲಿಕ ಕ್ರಮಗಳನ್ನು ವಿವರಿಸಲಾಗಿದೆ. ಟಿಟಿಝಡ್ ಪರಿಸರ ಸೂಕ್ಷ್ಮ ವಲಯ. ಹೀಗಾಗಿ ತಾಜ್ ಮಹಲ್ ಸಂರಕ್ಷಣೆಗೆ ದೀರ್ಘ ಕಾಲೀನ ಕಾರ್ಯಸೂಚಿಯ ಅಗತ್ಯವಿದೆ’ ಎಂದು ನ್ಯಾಯಮೂರ್ತಿ ಎಂ.ಬಿ. ಲೋಕೂರ್ ಅವರಿದ್ದ ಪೀಠವು ಹೇಳಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಶರ್ಮಾ ಅವರು ಸಲ್ಲಿಸಿದ ಪ್ರಮಾಣಪತ್ರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ಪ್ರಮುಖ ಸಂಗತಿಗಳು
- ಉತ್ತರ ಪ್ರದೇಶದ ಆಗ್ರಾ, ಫಿರೋಜಾಬಾದ್, ಮಾಥುರ್, ಹಥ್ರಸ್, ಏಟಾ ಹಾಗೂ ರಾಜಸ್ಥಾನದ ಭರತ್‌ಪುರ್ ಜಿಲ್ಲೆಗಳ 10,400 ಚದರ ಕಿ.ಮೀ ವ್ಯಾಪ್ತಿಯಲ್ಲಿ ತಾಜ್ ವಲಯ ಹರಡಿಕೊಂಡಿದೆ.
- ‘ತಜ್ಞರು, ನಾಗರಿಕ ಸಮಾಜದ ಸದಸ್ಯರು ಎಲ್ಲರೂ ಒಟ್ಟಾಗಿ ಚರ್ಚಿಸಿ ಮುಂದಿನ ಪೀಳಿಗೆಗೋಸ್ಕರ ತಾಜ್ ಮಹಲ್ ಅನ್ನು ಹೇಗೆ ಸಂರಕ್ಷಿಸುವುದು ಎಂಬ ಕುರಿತು ನಿರ್ಧಾರಕ್ಕೆ ಬರಬೇಕು’ ಎಂದು ಶರ್ಮಾ ಅವರಿಗೆ ಪೀಠ ಸೂಚಿಸಿದೆ.
- ತಾಜ್ ಮಹಲ್ ಸುತ್ತಮುತ್ತ 500 ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣ ಕಾಮಗಾರಿ ನಿಷೇಧಿಸುವುದು, ಸಿಎನ್‌ಜಿ ಇಂಧನ ಬಳಕೆಯ ವಾಹನಗಳಿಗಷ್ಟೇ ಈ ಸ್ಮಾರಕದ ಸಮೀಪ ಓಡಾಡಲು ಅವಕಾಶ ನೀಡುವುದು, ವಿದ್ಯುತ್ ಜನಕಗಳ (ಜನರೇಟರ್) ಬಳಕೆ ತಗ್ಗಿಸುವ ಸಲುವಾಗಿ ನಿರಂತರ ವಿದ್ಯುತ್ ಪೂರೈಕೆ ಮಾಡುವುದು ಹಾಗೂ ಕಸ, ತ್ಯಾಜ್ಯಗಳನ್ನು ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸುವುದೂ ಸೇರಿದಂತೆ ಹಲವು ಕ್ರಮಗಳನ್ನು ಶಿಫಾರಸು ಮಾಡಲಾಗಿದೆ’ ಎಂದು ತುಷಾರ್ ಶರ್ಮಾ ವಿವರಿಸಿದರು.
- ‘ನಿರೀಕ್ಷೆಯಂತೆ ಪ್ರತಿ ಎರಡು ತಿಂಗಳಿಗೊಮ್ಮೆ ಏಕೆ ಸಭೆ ನಡೆಸುತ್ತಿಲ್ಲ’ ಎಂದೂ ನ್ಯಾಯಾಲಯ ಪ್ರಶ್ನಿಸಿದೆ.
- ತಾಜ್ ಮಹಲ್ ಸಮೀಪ ಕಾರುಗಳ ನಿಲುಗಡೆಗಾಗಿ ನಿರ್ಮಿಸಲಾದ ಬಹುಮಹಡಿ ಕಟ್ಟಡಗಳನ್ನು ನೆಲಸಮ ಮಾಡುವಂತೆ ನೀಡಿದ್ದ ತನ್ನ ಈ ಹಿಂದಿನ ಆದೇಶಕ್ಕೆ ನ್ಯಾಯಾಲಯವು ತಡೆ ನೀಡಿದೆ. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸಂಬಂಧ ಪಟ್ಟ ಪ್ರಾಧಿಕಾರಗಳಿಗೆ ಸೂಚಿಸಿದೆ.
ತಾಜ್ ಮಹಲ್
- ಭಾರತದ ಆಗ್ರಾದಲ್ಲಿರುವ ಭವ್ಯ ಸಮಾಧಿಯಾಗಿದೆ. ಇದನ್ನು ಮೊಘಲ್ ಚಕ್ರವರ್ತಿ ಷಹ ಜಹಾನ್ ತನ್ನ ಮೆಚ್ಚಿನ ಪತ್ನಿ ಮಮ್ತಾಜ್ ಮಹಲ್‌ಳ ನೆನಪಿಗಾಗಿ ಕಟ್ಟಿಸಿದನು.
- ಪರ್ಷಿಯನ್, ಭಾರತೀಯ ಮತ್ತು ಮುಸ್ಲಿಂ ವಾಸ್ತುಶೈಲಿಗಳ ಸಮ್ಮಿಶ್ರಣವಾದ ಮೊಘಲ್ ವಾಸ್ತುಶೈಲಿಗೆ ತಾಜ್ ಮಹಲ್ (“ತಾಜ್” ಎಂದೂ ಕರೆಯಲ್ಪಡುತ್ತದೆ) ಅತ್ಯುತ್ತಮ ಉದಾಹರಣೆಯೆಂದು ಪರಿಗಣಿಸಲಾಗಿದೆ.
- 1983ರಲ್ಲಿ ತಾಜ್ ಮಹಲ್ UNESCOದ ವಿಶ್ವ ಪರಂಪರೆ ತಾಣವಾಗಿ ಗುರುತಿಸಲ್ಪಟ್ಟಿತು ಮತ್ತು ಇದನ್ನು “ಭಾರತದಲ್ಲಿರುವ ಮುಸ್ಲಿಂ ಕಲೆಯ ಅನರ್ಘ್ಯ ರತ್ನ ಮತ್ತು ಜಾಗತಿಕವಾಗಿ ಮೆಚ್ಚುಗೆಯನ್ನು ಪಡೆದ ವಿಶ್ವ ಪರಂಪರೆಯ ಮೇರುಕೃತಿಗಳಲ್ಲಿ ಒಂದು” ಎಂದು ಉಲ್ಲೇಖಿಸಲಾಗಿದೆ.
- ತಾಜ್ ಮಹಲ್ ವಾಸ್ತವವಾಗಿ ಅನೇಕ ಸಂರಚನೆಗಳ ಒಂದು ಸಮಗ್ರ ಸಂಕೀರ್ಣವಾಗಿದ್ದು, ಗೌರವರ್ಣದ ಗುಮ್ಮಟಾಕಾರದ ಅಮೃತಶಿಲೆಯ ಭವ್ಯ ಸಮಾಧಿಯು ಇದರ ಅತ್ಯಂತ ಸುಪರಿಚಿತ ಭಾಗವಾಗಿದೆ. ಈ ಕಟ್ಟಡದ ನಿರ್ಮಾಣ ಕಾರ್ಯವು 1632ರಲ್ಲಿ ಪ್ರಾರಂಭವಾಗಿ, ಸರಿಸುಮಾರು 1653ರ ಹೊತ್ತಿಗೆ ಪೂರ್ಣಗೊಂಡಿತು. ಈ ಭವ್ಯ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಸಾವಿರಾರು ಕುಶಲಕರ್ಮಿಗಳು ಮತ್ತು ನುರಿತ ಕೆಲಸಗಾರರನ್ನು ಬಳಸಿಕೊಳ್ಳಲಾಗಿತ್ತು.
- ತಾಜ್ ಮಹಲ್‌ನ ನಿರ್ಮಾಣ ಕಾರ್ಯದ ಮೇಲ್ವಿಚಾರಣೆಗೆ ಅಬ್ದ್ ಉಲ್-ಕರೀಮ್ ಮಾಮುರ್ ಖಾನ್, ಮಖ್ರಾಮತ್ ಖಾನ್ ಮತ್ತು ಉಸ್ತಾದ್ ಅಹ್ಮದ್ ಲಹೌರಿ ಸೇರಿದಂತೆ ಇನ್ನೂ ಕೆಲವರನ್ನು ಒಳಗೊಂಡಂತೆ ವಾಸ್ತುಶಿಲ್ಪಿಗಳ ಮಂಡಳಿಗೆ ನೇಮಿಸಲಾಗಿತ್ತು. ಅವರಲ್ಲಿ ಲಹೌರಿರವರನ್ನು ತಾಜ್ ಮಹಲ್ ನಿರ್ಮಾಣದ ಪ್ರಧಾನ ಶಿಲ್ಪಿ ಎಂದು ಸ್ಥೂಲವಾಗಿ ಪರಿಗಣಿಸಲಾಗಿದೆ.
- ವಿಧ್ಯಾರ್ಥಿಗಳ ಯೋಚನೆಗೆ ಒಂದು ಯೋಜನೆ (MLP-GS PAPER-2)
Discuss the architectural and cultural significance of Taj Mahal.
(ತಾಜ್ ಮಹಲ್ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಕುರಿತು ಚರ್ಚಿಸಿ.)
- ತ್ರಿವಳಿ ತಲಾಖ್ ಕರಡು ಮಸೂದೆಗೆ ಒಪ್ಪಿಗೆ ನೀಡಿದ ಮೊದಲ ರಾಜ್ಯ -ಉತ್ತರ ಪ್ರದೇಶ
ಪ್ರಮುಖ ಸುದ್ದಿ
- ಕೇಂದ್ರ ಸರ್ಕಾರದ ತ್ರಿವಳಿ ತಲಾಖ್ ನಿಷೇಧ ಕರಡು ಮಸೂದೆಗೆ ಉತ್ತರ ಪ್ರದೇಶ ಸರ್ಕಾರ ಅನುಮೋದನೆ ನೀಡಿದೆ. ಆ ಮೂಲಕ ಮಸೂದೆಗೆ ಒಪ್ಪಿಗೆ ಸೂಚಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
- ‘ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಕರಡು ಮಸೂದೆ’ಯನ್ನು ಇತ್ತೀಚೆಗೆ ಎಲ್ಲ ರಾಜ್ಯ ಸರ್ಕಾರಗಳಿಗೆ ರವಾನಿಸಿದ್ದ ಕೇಂದ್ರ, ಇದೇ 10ರೊಳಗೆ ಅಭಿಪ್ರಾಯ ತಿಳಿಸುವಂತೆ ಕೋರಿತ್ತು.
- ತ್ರಿವಳಿ ತಲಾಖ್ ಜಾಮೀನುರಹಿತ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿರುವ ಕರಡು ಪ್ರಸ್ತಾವನೆಗೆ ಮಂಗಳವಾರ ರಾತ್ರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಒಪ್ಪಿಗೆ ನೀಡಿದೆ.
- ಗೃಹ ಸಚಿವ ರಾಜನಾಥ ಸಿಂಗ್ ನೇತೃತ್ವದ ಅಂತರ ಸಚಿವಾಲಯ ತಂಡ ಸಿದ್ಧಪಡಿಸಿರುವ ಕರಡು ಪ್ರಸ್ತಾವನೆಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ನಿರ್ಧರಿಸಿದೆ. ತ್ರಿವಳಿ ತಲಾಖ್ ಅಥವಾ ತಲಾಖ್ –ಏ–ಬಿದ್ದತ್‌ಗೆ ಮಾತ್ರ ಈ ಮಸೂದೆ ಅನ್ವಯಿಸಲಿದೆ.
ಹಿನ್ನಲೆ
- ಮುಸ್ಲಿಂ ಸಮುದಾಯದಲ್ಲಿ ವಿವಾಹ ವಿಚ್ಛೇದನ ನೀಡಲು ಜಾರಿಯಲ್ಲಿದ್ದ ತ್ರಿವಳಿ ತಲಾಖ್ ಪದ್ಧತಿ ಅಸಾಂವಿಧಾನಿಕ ಮತ್ತು ಸಂವಿಧಾನದ 14ನೇ ಕಲಂನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಇದೇ ಆಗಸ್ಟ್ 22ರಂದು ತೀರ್ಪು ನೀಡಿತ್ತು.
- ತ್ರಿವಳಿ ತಲಾಖ್ ಜಾಮೀನುರಹಿತ ಅಪರಾಧವಾಗಿದ್ದು, ತಲಾಖ್ ನೀಡಿದವರಿಗೆ ಮೂರು ವರ್ಷ ಶಿಕ್ಷೆ ಮತ್ತು ದಂಡ ವಿಧಿಸುವ ಪ್ರಸ್ತಾವ ಕರಡು ಮಸೂದೆಯಲ್ಲಿದೆ.
- ಗಂಡನಿಂದ ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆ ಜೀವನಾಂಶ ಪಡೆಯಲು ಅರ್ಹಳಾಗಿದ್ದು, ಚಿಕ್ಕ ವಯಸ್ಸಿನ ಮಕ್ಕಳ ಸುಪರ್ದಿ ಹಕ್ಕನ್ನೂ ಆಕೆಗೆ ನೀಡಲಾಗಿದೆ. ಮಕ್ಕಳ ಜೀವನ ನಿರ್ವಹಣೆಗಾಗಿ ಪ್ರತ್ಯೇಕ ಜೀವನಾಂಶ ಕೋರುವ ಹಕ್ಕನ್ನೂ ಆಕೆ ಪಡೆದಿದ್ದಾಳೆ.
- ವಕೀಲರ ದುಬಾರಿ ಶುಲ್ಕ ನಿಯಂತ್ರಣಕ್ಕೆ ಕಾನೂನು
ಪ್ರಮುಖ ಸುದ್ದಿ
- ಕಕ್ಷಿದಾರರಿಂದ ವಕೀಲರು ಪಡೆಯುವ ಶುಲ್ಕ ನಿಯಂತ್ರಣಕ್ಕೆ ಸೂಕ್ತ ಕಾಯ್ದೆ ಜಾರಿಗೆ ತರುವಂತೆ ಸುಪ್ರೀಂಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ವಕೀಲ ವೃತ್ತಿ ವಾಣಿಜ್ಯೀಕರಣಗೊಳ್ಳುತ್ತಿದ್ದು, ಬಡವರಿಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ನ್ಯಾ. ಆದರ್ಶ ಗೊಯೆಲ್ ಹಾಗೂ ಯು.ಯು. ಲಲಿತ್ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಮುಖ ಸಂಗತಿ
- ನೈತಿಕತೆ ಕಾಪಾಡುವುದು, ಹಣಕಾಸು ಕೊರತೆ ಯಿಂದಾಗಿ ಬಡವರು ಸರಿಯಾದ ವಕೀಲರ ಸೇವೆ ಸಿಗದೆ ವಂಚಿತರಾಗುವುದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ವಕೀಲರ ಗರಿಷ್ಠ ಶುಲ್ಕ ಮಿತಿ ಹಾಗೂ ಶುಲ್ಕದ ವಿವಿಧ ಹಂತಗಳನ್ನು ನಿರ್ಧರಿಸಬೇಕು ಎಂದು ಸೂಚಿಸಿದೆ.
- ಕೆಲ ಪ್ರಕರಣಗಳಲ್ಲಿ ಕಕ್ಷಿದಾರರಿಗೆ ಸಿಗುವ ಪರಿಹಾರ ಮೊತ್ತದಲ್ಲಿ ವಕೀಲರು ಪಾಲು ಪಡೆಯುತ್ತಾರೆ. ಇದು ವೃತ್ತಿ ನಿಯಮಕ್ಕೆ ಬಾಹಿರವಾಗಿದ್ದು, ಇಂಥ ವಕೀಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
- ಕಾನೂನು ಸೇವೆ ಪ್ರತಿಯೊಬ್ಬ ನಾಗರಿಕನ ಮೂಲ ಹಕ್ಕು. ಆದರೆ ವಕೀಲರು ನೈತಿಕತೆ ಮರೆತು ಅಪಾರ ಶುಲ್ಕ ವಸೂಲಿ ಮಾಡಿದರೆ, ಜನಸಾಮಾನ್ಯರಿಗೆ ನ್ಯಾಯ ಸಿಗುವುದು ಸಾಧ್ಯವೇ? ಎಂದು ನ್ಯಾಯಪೀಠ ಪ್ರಶ್ನಿಸಿದೆ.
ಕಾನೂನು ಆಯೋಗದ ವರದಿ
- 1988ರಲ್ಲಿ ಕಾನೂನು ಆಯೋಗ 131ನೇ ವರದಿಯಲ್ಲಿ ಈ ವಿಚಾರ ಪ್ರಸ್ತಾಪಿಸಿತ್ತು. ಹೆಚ್ಚುತ್ತಿರುವ ವಕೀಲರ ಶುಲ್ಕದಿಂದಾಗಿ ನನೆಗುದಿಗೆ ಬಿದ್ದಿರುವ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕಾಯ್ದೆ ರೂಪಿಸಬೇಕು ಎಂದು ತಿಳಿಸಿತ್ತು.
ECONOMY- ಅರ್ಥಶಾಸ್ತ್ರ
- ಮಣ್ಣಿನ ಆರೋಗ್ಯ ಕಾರ್ಡ್ ಮೊಬೈಲ್ ಅಪ್ಲಿಕೇಶನ್
ಪ್ರಮುಖ ಸುದ್ದಿ
- ವಿಶ್ವ ಮಣ್ಣಿನ ದಿನದಂದು, ರೈತರಿಗೆ ಸಹಾಯ ಮಾಡಲು ಸೈಲ್ ಹೆಲ್ತ್ ಕಾರ್ಡ್ ಮೊಬೈಲ್ ಅಪ್ಲಿಕೇಶನ್ ಅನ್ನು ಸರ್ಕಾರ ಪ್ರಾರಂಭಿಸಿದೆ.
ಪ್ರಮುಖ ಸಂಗತಿಗಳು
- ಇದು ಕ್ಷೇತ್ರ ಮಟ್ಟದ ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ ಏಕೆಂದರೆ ಕ್ಷೇತ್ರದ ಸ್ಯಾಂಪಲ್ ಸಂಗ್ರಹದ ಸಮಯದಲ್ಲಿ ಮಾದರಿ ವಿವರಗಳನ್ನು ನೋಂದಾಯಿಸುವಾಗ ಸ್ವಯಂಚಾಲಿತವಾಗಿ GIS ನಿರ್ದೇಶಾಂಕಗಳನ್ನು ಸೆರೆಹಿಡಿಯುತ್ತದೆ ಮತ್ತು ಮಾದರಿಯನ್ನು ಸಂಗ್ರಹಿಸಿರುವ ಸ್ಥಳವನ್ನು ಸೂಚಿಸುತ್ತದೆ.
- ಈ ಅಪ್ಲಿಕೇಶನ್ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗಾಗಿ ಅಭಿವೃದ್ಧಿಪಡಿಸಲಾದ ಇತರ ಅಪ್ಲಿಕೇಶನ್ಗಳಂತೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಹೆಸರು, ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ, ಲಿಂಗ, ವಿಳಾಸ, ಬೆಳೆ ವಿವರ, ಇತ್ಯಾದಿ ಸೇರಿದಂತೆ ರೈತರ ವಿವರಗಳನ್ನು ಒಳಗೊಂಡಿದೆ.
ವಿಶ್ವ ಮಣ್ಣಿನ ದಿನ’ದ ಬಗ್ಗೆ
- ಮಣ್ಣು ಒಂದು ಸ್ವಾಭಾವಿಕ ವಸ್ತು. ಸಸ್ಯಗಳ ಬೆಳವಣಿಗೆಗೆ ಅಗತ್ಯವಾಗಿರುವುದು ಮಣ್ಣು, ಈ ಸಸ್ಯಗಳು ಪ್ರತಿ ಜೀವಿಗಳಿಗೆ ಆಹಾರವನ್ನು ಒದಗಿಸುತ್ತವೆ. ನೈಸರ್ಗಿಕ ಪ್ರಕ್ರಿಯೆಗಳಿಂದ ಭೂಮಿಯ ಮೇಲೆ ಮಣ್ಣು ರೂಪುಗೊಳ್ಳಲು ಸಹಸ್ರಾರು ವರ್ಷಗಳೇ ಬೇಕಾಗಿದೆ. ಮನುಷ್ಯನ ಬದುಕು ನಿಂತಿರುವುದೇ ಮಣ್ಣಿನ ಮೇಲೆ. ಮನುಷ್ಯನಿಗೆ ಬದುಕು ನೀಡಿರುವುದೇ ಮಣ್ಣು, ಬೇಸಾಯದ ಮೂಲಕ ಬದುಕು ನಡೆಸುವುದಕ್ಕೆ ಮಣ್ಣೆ ಸಹಕಾರಿಯಾಗಿದೆ. ಜಗತ್ತಿನ ಶೇ.95 ರಷ್ಟು ಆಹಾರ ಪದಾರ್ಥ ಸಿಕ್ಕುವುದು ಮಣ್ಣಿನಿಂದ.
- ಈ ಮಣ್ಣು ಮನುಷ್ಯನ ಬದುಕಿನಲ್ಲಿ ವಹಿಸಿದ ಮಹತ್ವದ ಪಾತ್ರವನ್ನು ಮನಗಂಡು ಅದರ ರಕ್ಷಣೆಗೆ ಪಣತೊಡುವ ಉದ್ದೇಶದಿಂದ ಪ್ರತಿ ಡಿಸೆಂಬರ್ 5ನ್ನು `ವಿಶ್ವ ಮಣ್ಣಿನ ದಿನ’ ಎಂದು ಆಚರಿಸಲಾಗುತ್ತದೆ.
- ಅಂತಾರಾಷ್ಟ್ರೀ ಮಟ್ಟದಲ್ಲಿ ಮಣ್ಣಿನ ದಿನವನ್ನು ಆಚರಿಸುವಂತೆ ಅಂತಾರಾಷ್ಟ್ರೀಯ ಮಣ್ಣು ವಿಜ್ಞಾನ ಸಂಸ್ಥೆ 2002ರಲ್ಲೇ ಶಿಫಾರಸ್ಸು ಮಾಡಿತ್ತು.
- ಮೊದಲ ಬಾರಿಗೆ 2014 ಡಿಸೆಂಬರ್ 5 ರಂದು ಅಧಿಕೃತವಾಗಿ ಅಂತಾರಾಷ್ಟ್ರೀಯ ಮಣ್ಣು ದಿನವನ್ನು ಆಚರಿಸಲಾಗಿತ್ತು.
- ಪ್ರತಿ ವರ್ಷವೂ ಒಂದೊಂದು ಧ್ಯೇಯವಾಕ್ಯಗಳೊಂದಿಗೆ ಈ ದಿನ ಆಚರಣೆಗೊಳ್ಳುತ್ತದೆ. ಈ ವರ್ಷ ‘Caring for the Planet starts from the Ground’ (ಭೂಮಿಯ ಮೇಲಿನ ಕಾಳಜಿ ನೆಲದಿಂದ ಆರಂಭವಾಗುತ್ತದೆ) ಎಂಬ ಮಣ್ಣು ದಿನದ ಧ್ಯೇಯವಾಕ್ಯವಾಗಿದೆ.
- ಈಗಾಗಲೇ ಶೇ.33ರಷ್ಟು ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಂಡಿದೆ. ಪ್ಲಾಸ್ಟಿಕ್, ರಾಸಾಯನಿಕ ವಸ್ತುಗಳು ಮಣ್ಣಿನಲ್ಲಿ ಹೂತು, ಮಣ್ಣಿನ ಗುಣಮಟ್ಟಕ್ಕೆ ಕುತ್ತು ತರುತ್ತಿದೆ. ಉಳಿದ ಮಣ್ಣನ್ನಾದರೂ ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ವಿಶ್ವದಾದ್ಯಂತ ಬೇರೆ ಬೇರೆ ಸ್ಥಳಗಳಲ್ಲಿ ಮಣ್ಣಿನ ಕಾಳಜಿಯ ಕುರಿತು ಕಾರ್ಯಾಗಾರ, ಉಪನ್ಯಾಸ, ತರಬೇತಿ ನೀಡಿ ಈ ದಿನವನ್ನು ಆಚರಿಸಲಾಗುತ್ತದೆ.
ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ ಬಗ್ಗೆ
- 2015ರ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರದಿಂದ 568 ಕೋಟಿ ರೂ. ಬಜೆಟ್ನಲ್ಲಿ ಆರಂಭವಾದ ಈ ಯೋಜನೆಯಡಿಯಲ್ಲಿ ಪ್ರತೀ ರೈತನ ಭೂಮಿಯ ಮಣ್ಣನ್ನು ಪರೀಕ್ಷಿಸಿ ಆ ಮಣ್ಣಿನ ಫಲವತ್ತತೆ ಮತ್ತಿತರ ವಿಚಾರಗಳನ್ನೊಳಗೊಂಡ ಬಗ್ಗೆ ಕಾರ್ಡ್ ಒಂದನ್ನು ವಿತರಿಸಲಾಗುತ್ತಿದೆ. ವಿತರಿಸಲಾದ ಕಾರ್ಡ್ನಲ್ಲಿ ಆ ಮಣ್ಣಿನಲ್ಲಿ ಬೆಳೆಯಬಹುದಾದ ಬೆಳೆಗಳ ಬಗ್ಗೆ ಸಲಹೆಗಳಿರುತ್ತವೆ, ಜತೆಗೆ ಆ ಬೆಳೆಗೆ ಬಳಸಬೇಕಾದ ರಸಗೊಬ್ಬರ, ನೀಡಬೇಕಾದ ಖನಿಜ ಮಿಶ್ರಣಗಳ ಪ್ರಮಾಣವನ್ನು ನಮೂದು ಮಾಡಲಾಗಿರುತ್ತದೆ. ಇದರಿಂದಾಗಿ ರೈತರು ತಮ್ಮ ಭೂಮಿಯ ಫಲವತ್ತತೆಗೆ ತಕ್ಕಂಥ ಬೆಳೆಯನ್ನು ಅಧಿಕೃತ ರಸಗೊಬ್ಬರಗಳನ್ನು ಬಳಸುವ ಮೂಲಕ ಬೆಳೆದು ಹೆಚ್ಚುವರಿ ಇಳುವರಿ ಪಡೆಯಲು ಸಹಾಯವಾಗುತ್ತದೆ.
ಏನಿದು ಯೋಜನೆ?
- ದೇಶಾದ್ಯಂತ ಎಲ್ಲ ರೈತರ ಸಾಗುವಳಿ ಜಮೀನಿನ ಮಣ್ಣಿನ ಮಾದರಿಯನ್ನು ಪರೀಕ್ಷಿಸಿ ನಂತರ ಅವರಿಗೆ ಮಣ್ಣಿನ ಫಲವತ್ತತೆ ಬಗ್ಗೆ ಕಾರ್ಡ್ ನೀಡಲಾಗುತ್ತದೆ. ಪ್ರತೀ ಜಮೀನಿನ ಮಣ್ಣಿನ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗುತ್ತದೆ. ಅಲ್ಲಿ ಸೂಕ್ತ ತಜ್ಞರಿಂದ ಮಣ್ಣಿನ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗುತ್ತದೆ. ಮುಖ್ಯವಾಗಿ ಮಣ್ಣು ಒಳಗೊಂಡಿರುವ ಖನಿಜಗಳು, ರಾಸಾಯನಿಕಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತದೆ. ನಂತರ ಆ ಮಣ್ಣಿನ ಜಮೀನು ಯಾವ ಬೆಳೆಗೆ ಸೂಕ್ತ ಹಾಗು ಆ ಬೆಳೆಯ ಹೆಚ್ಚಿನ ಇಳುವರಿಗೆ ಯಾವ ರೀತಿಯ ಹಾಗು ಪ್ರಮಾಣದ ರಸಗೊಬ್ಬರ ಅವಶ್ಯಕ ಎಂಬುದನ್ನು ನಿರ್ಧರಿಸಿ ‘ಮಣ್ಣಿನ ಆರೋಗ್ಯ ಕಾರ್ಡ್’ ನಲ್ಲಿ ದಾಖಲಿಸಲಾಗುತ್ತದೆ.
ರೈತರಿಗೆ ಮಾಹಿತಿ ಹೇಗೆ?
- ಭಾರತ ಸರ್ಕಾರದ ಕೃಷಿ, ಸಹಕಾರ ಹಾಗು ರೈತ ಕಲ್ಯಾಣ ಇಲಾಖೆ ನಿಭಾಯಿಸುತ್ತಿರುವ ಮಣ್ಣಿನ ಕಾರ್ಡ್ ಯೋಜನೆಯನ್ನು ದೇಶದ ಸರ್ವ ರೈತರು ಪಡೆಯಬಹುದು. ಇದಕ್ಕೆಂತಲೇ ಕೇಂದ್ರ ಸರ್ಕಾರದ ವೆಬ್ಸೈಟ್ ಇದ್ದು, ಇದರಲ್ಲಿ ವಲಯವಾರು ಯೋಜನಾ ನಿರ್ದೇಶಕರನ್ನು ನೋಡಬಹುದು. ರೈತರು ತಮ್ಮ ವಲಯದ ಅಥವಾ ತಮ್ಮ ವಲಯಕ್ಕೆ ಸಮೀಪದ ನಿರ್ದೇಶಕರ ಅಥವಾ ಕಾರ್ಯಕರ್ತರನ್ನು ಭೇಟಿಯಾಗಿ ಮಣ್ಣಿನ ಆರೋಗ್ಯ ಕಾರ್ಡ್ ಪಡೆಯುವ ಬಗ್ಗೆ ಮಾಹಿತಿ ಪಡೆಯಬಹುದು ಹಾಗು ಮಣ್ಣಿನ ಅರೋಗ್ಯ ಕಾರ್ಡ್ಗಾಗಿ ಕೋರಿಕೆಯನ್ನು ಸಲ್ಲಿಸಬಹುದು.
- ರೈತರ ಜಮೀನಿನಿಂದ ಮಣ್ಣಿನ ಮಾದರಿ ಸಂಗ್ರಹಿಸಿದ ನಂತರ ಮುಂದಿನ ಅಂಶಗಳ ಬಗ್ಗೆ ಸಮಗ್ರವಾಗಿ ವೆಬ್ಸೈಟ್ನಲ್ಲಿ ಬಿತ್ತರಿಸಲಾಗುತ್ತದೆ. ತಮ್ಮ ಮಾದರಿ ಸಂಖ್ಯೆಯನ್ನು ಹುಡುಕುವ ಮೂಲಕ ರೈತರು ತಮ್ಮ ಮಣ್ಣಿನ ಪರೀಕ್ಷೆಯ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬಹುದು.
- ಮಣ್ಣಿನ ಮಾದರಿ ಪರೀಕ್ಷೆಯ ನಂತರ ಕಾರ್ಡ್ ಸಿದ್ಧವಾದಾಗ ಆ ಕಾರ್ಡ್ ಅನ್ನು ವೆಬ್ಸೈಟ್ನ ಮುಖಾಂತರವೂ ಪಡೆಯಬಹುದು. ವೆಬ್ಸೈಟ್ನಲ್ಲಿ ವಲಯ, ಜಿಲ್ಲಾ, ರಾಜ್ಯವಾರು ಮಣ್ಣಿನ ಗುಣಮಟ್ಟ, ರಾಸಾಯನಿಕ-ಖನಿಜ ಅಂಶಗಳ ಮಿಶ್ರಣ ಮುಂತಾದ ಮಾಹಿತಿಗಳನ್ನು ಬಿತ್ತರಿಸಲಾಗಿದೆ. ರೈತರು ಈ ವೆಬ್ಸೈಟ್ನ ಮೂಲಕ ‘ಮಣ್ಣಿನ ಆರೋಗ್ಯ’ದ ಬಗೆಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು.
ಯೋಜನೆಯ ಸ್ವರೂಪವೇನು?
- ರೈತರಿಗೆ ಲಾಭವಾಗಬೇಕಾದರೆ ರಸಗೊಬ್ಬರ ಮತ್ತಿತರ ಕೃಷಿ ಬಂಡವಾಳ ಕಡಿಮೆಯಾಗಬೇಕು. ಈ ನಿಟ್ಟಿನಲ್ಲಿ ರಸಗೊಬ್ಬರವನ್ನು ಸಮರ್ಪಕ ಬಳಕೆ ಮಾಡಲು ಮಣ್ಣಿನ ಫಲವತ್ತತೆ/ಅರೋಗ್ಯ ಬಹು ಮುಖ್ಯ. ಈ ಯೋಜನೆಯಲ್ಲಿ ಮಣ್ಣಿನ ಫಲವತ್ತತೆಯ ಆಧಾರದ ಮೇಲೆ ವೈಜ್ಞಾನಿಕವಾಗಿ ರಸಗೊಬ್ಬರ ಬಳಕೆಯ ಬಗ್ಗೆ ಮಾಹಿತಿ ನೀಡುವುದರಿಂದ ರೈತರು ಕಡಿಮೆ ಪ್ರಮಾಣದ ರಸಗೊಬ್ಬರ ಬಳಕೆ ಮಾಡಿ ಹೆಚ್ಚಿನ ಇಳುವರಿ ಪಡೆಯಲು ಸಹಕಾರಿ.
- ವಿದ್ಯಾರ್ಥಿಗಳ ಯೋಚನೆಗೆ ಒಂದು ಯೋಜನೆ (GS PAPER-3)
Write a critical note on the objectives, significance and performance of Soil Health Cards (SHC) programme.
(ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆಯ ಉದ್ದೇಶಗಳು, ಪ್ರಾಮುಖ್ಯತೆ ಮತ್ತು ಕಾರ್ಯಕ್ಷಮತೆಯ ಬಗ್ಗೆ ವಿಮರ್ಶಾತ್ಮಕ ಟಿಪ್ಪಣಿ ಬರೆಯಿರಿ.)
- ತಾಜ್’ 2ನೇ ಉತ್ತಮ ಪಾರಂಪರಿಕ ತಾಣ
ಪ್ರಮುಖ ಸುದ್ದಿ
- ಯುನೆಸ್ಕೊದ ಉತ್ತಮ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ತಾಜ್‌ಮಹಲ್ ಎರಡನೇ ಸ್ಥಾನದಲ್ಲಿದೆ ಎಂದು ಹೊಸ ಸಮೀಕ್ಷೆಯೊಂದು ತಿಳಿಸಿದೆ. ಕಾಂಬೋಡಿಯಾದ ದೇವಾಲಯ ಸಂಕೀರ್ಣ ಅಂಕೂರ್‌ವಾಟ್ ಮೊದಲ ಸ್ಥಾನ ಗಿಟ್ಟಿಸಿದೆ.
- ಯುನೆಸ್ಕೊದ ಸಾಂಸ್ಕೃತಿಕ ಮತ್ತು ನೈಸರ್ಗಿಕ ತಾಣಗಳ ಪಟ್ಟಿಯನ್ನು ಆಧರಿಸಿ ಈ ಸಮೀಕ್ಷೆ ನಡೆಸಲಾಗಿದೆ. ಪ್ರಯಾಣ ಸೌಲಭ್ಯ ಒದಗಿಸುವ ಅಂತರ್ಜಾಲ ತಾಣ ‘ಟ್ರಿಪ್ ಅಡ್ವೈಸರ್’ ಸಮೀಕ್ಷೆ ನಡೆಸಿದ್ದು, ಉತ್ತಮ ಪಾರಂಪರಿಕ ತಾಣಗಳ ಪಟ್ಟಿಯನ್ನು ಅದು ಸಿದ್ಧಪಡಿಸಿದೆ. ವಿಶ್ವದಾದ್ಯಂತ ಪ್ರವಾಸಿಗರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.
ಪ್ರಮುಖ ಸಂಗತಿ
- ‘ಅದ್ಭುತ ತಾಣ ತಾಜ್‌ಮಹಲ್‌ಗೆ ಭೇಟಿ ನೀಡಿದರೆ ನೂರಾರು ಅವಿಸ್ಮರಣೀಯ ಅನುಭವಗಳು ನಿಮ್ಮದಾಗುತ್ತವೆ. ಖಾಸಗಿ ಪ್ರವಾಸಿ ಮಾರ್ಗದರ್ಶಕರು ಇಲ್ಲಿ ಸಿಗುತ್ತಾರೆ. ಸೂರ್ಯೋದಯ, ಸೂರ್ಯಾಸ್ತ ತಾಣಗಳಲ್ಲಿ ಕಾಲ ಕಳೆಯಬಹುದು. ಸ್ಥಳೀಯ ಆಹಾರ ಸವಿಯಲು ಬಯಸುವವರಿಗೆ ಅಂಥ ಅವಕಾಶ ಮಾಡಿಕೊಡುವ ಹಲವು ಮನೆಗಳೂ ಆಗ್ರಾದಲ್ಲಿ ಇವೆ’ ಎಂದು ಟ್ರಿಪ್ ಅಡ್ವೈಸರ್ ಹೇಳಿದೆ.
- ತಾಜ್‌ಮಹಲ್‌ಗೆ ವಾರ್ಷಿಕ 80 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ.
ಇತರ ಉತ್ತಮ ತಾಣಗಳು
- ಚೀನಾ ಮಹಾಗೋಡೆ, ಮಾಚು ಪಿಚು ಕೋಟೆ (ದಕ್ಷಿಣ ಆಫ್ರಿಕಾ), ಇಗುವಾಜು ರಾಷ್ಟ್ರೀಯ ಉದ್ಯಾನ (ಬ್ರೆಜಿಲ್), ಪುರಾತನ ಗುಹೆಗಳಿರುವ ಸಸ್ಸಿ ಡಿ ಮಟೆರಾ (ಇಟಲಿ), ಅಶ್‌ವಿಟ್ಸ್ ಬಿರ್ಕೆನೌ ಸ್ಮಾರಕ ವಸ್ತುಸಂಗ್ರಹಾಲಯ, ಐತಿಹಾಸಿಕ ಕ್ರಕೋವ್ ನಗರ (ಪೋಲಂಡ್), ಇಸ್ರೇಲ್‌ನ ಜೆರುಸಲೇಮ್‌ನ ಓಲ್ಡ್ ಸಿಟಿ ಪ್ರದೇಶ ಮತ್ತು ಟರ್ಕಿಯ ಇಸ್ತಾಂಬುಲ್‌ನ ಐತಿಹಾಸಿಕ ಸ್ಥಳಗಳು.
- ಭಾರತದ ಇಂಧನ ಭದ್ರತಾ ಯೋಜನೆಗಳು
ಪ್ರಮುಖ ಸುದ್ದಿ
- ಭಾರತದ ಭರವಸೆಯ ಬೆಳವಣಿಗೆಯ ಕಥೆ ಉದ್ಯಮಶೀಲತೆ, ಜನಸಂಖ್ಯಾ ಲಾಭಾಂಶ, ದೊಡ್ಡ ಮಾರುಕಟ್ಟೆ, ಬಲಿಷ್ಠ ಕಾನೂನು ಮತ್ತು ನಿಯಂತ್ರಕ ಚೌಕಟ್ಟುಗಳು ಮತ್ತು ಪ್ರಜಾಪ್ರಭುತ್ವದ ರಾಜಕೀಯ ಮುಖ್ಯ ಕಂಬಗಳ ಮೇಲೆನಿಂತಿದೆ.
- ಭಾರತದ ಪ್ರಗತಿ ಮತ್ತು ಎಲ್ಲರಿಗೂ ಕೈಟುಕುವ ದರದಲ್ಲಿ ಇಂಧನ ನೀತಿಗೆ ಪ್ರಧಾನಿ ನರೇಂದ್ರ ಮೋದಿ ಆದ್ಯತೆ ನೀಡಿ ಇಂಧನ ಲಭ್ಯತೆ, ಶಕ್ತಿ ದಕ್ಷತೆ, ಶಕ್ತಿ ಸುಸ್ಥಿರತೆ ಮತ್ತು ಇಂಧನ ಭದ್ರತೆ ಎಂಬ ನಾಲ್ಕು ಪ್ರಮುಖ ಅಂಶಗಳಿಗೆ ಒತ್ತು ನೀಡಿದ್ದಾರೆ. ತೈಲ ಮತ್ತು ಅನಿಲ ವಲಯದಲ್ಲಿ ಹೂಡಿಕೆಗಿದ್ದ ತಡೆಗಳನ್ನು ನಿವಾರಿಸಿ ವ್ಯವಹಾರ ಸರಳಗೊಳಿಸಲು ಮತ್ತು ‘ಮೇಕ್ ಇನ್ ಇಂಡಿಯಾ’ಕ್ಕೆ ಉತ್ತೇಜನ ನೀಡಲು ಭಾರತ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ.
ಪ್ರಮುಖ ವಿಶ್ಲೇಷಣೆ (ಮುಖ್ಯ ಪರೀಕ್ಷೆಗಾಗಿ )
- ತೈಲ ಮತ್ತು ಅನಿಲ ಅನ್ವೇಷಣೆಯನ್ನು ಸುಲಭಗೊಳಿಸಲು ಹೈಡ್ರೊಕಾರ್ಬನ್ ಅನ್ವೇಷಣೆ ಮತ್ತು ಲೈಸೆನ್ಸಿಂಗ್ ಪಾಲಿಸಿ ಸೇರಿದಂತೆ ಅನೇಕ ದೊಡ್ಡ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಇದು ಎಲ್ಲಾ ಮೂರು ರೀತಿಯ ಹೈಡ್ರೊಕಾರ್ಬನ್ ಪರಿಶೋಧನೆಗೆ ಏಕ ಪರವಾನಗಿ ನೀಡುವ ವ್ಯವಸ್ಥೆ ಕಲ್ಪಿಸಿದೆ.
- ಬಹಿರಂಗ ಮತ್ತು ಪಾರದರ್ಶಕ ಹರಾಜು ವ್ಯವಸ್ಥೆಯಿಂದ ಸಣ್ಣ ಪತ್ತೆ ಹಚ್ಚಲ್ಪಟ್ಟ ಜಾಗಗಳ ಹಣಗಳಿಕೆ ಮತ್ತು ತಿಳುವಳಿಕೆಯ ಹೂಡಿಕೆಯ ನಿರ್ಧಾರಗಳನ್ನು ಸುಲಭಗೊಳಿಸಲು ರಾಷ್ಟ್ರೀಯ ದತ್ತಾಂಶ ಸಂಗ್ರಹದ ರಚನೆಯನ್ನು ಮಾಡಲಾಗಿದೆ. ಮುಂಬರುವ ವರ್ಷಗಳಲ್ಲಿ ಈ ಯೋಜನೆಗಳು ಹೂಡಿಕೆಯನ್ನು ಪ್ರೋತ್ಸಾಹಿಸಬಲ್ಲವು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಹೈಡ್ರೋಕಾರ್ಬನ್ ಗಳನ್ನು ಪತ್ತೆ ಹಚ್ಚ ಬಲ್ಲದು. ಭಾರತವು ವಿಶ್ವದಲ್ಲೇ 4 ನೇ ಅತಿದೊಡ್ಡ ರಿಫೈನರ್ ಆಗಿ ಹೊರಹೊಮ್ಮಿದೆ.
- ಪ್ರತಿ ವರ್ಷಕ್ಕೆ 235 ದಶಲಕ್ಷ ಮೆಟ್ರಿಕ್ ಟನ್ಗಳಷ್ಟು ಸಂಸ್ಕರಣೆಗೆ ಸಾಮರ್ಥ್ಯವಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ರಫ್ತುಗೆ ಕಾರಣವಾಗಿದೆ. ರಾಷ್ಟ್ರೀಯ ಗ್ಯಾಸ್ ಗ್ರಿಡ್ ಇನ್ನು 15,000 ಕಿಮೀ ಕಾಮಗಾರಿ ನಡೆಸಿದರೆ ಅದು ಪೂರ್ಣಗೊಳ್ಳಲಿದೆ. 2600 ಕಿಲೋಮೀಟರ್ ಉದ್ದದ ಪ್ರಧಾನ ಮಂತ್ರಿ ಉರ್ಜಾ ಗಂಗಾ ಪೈಪ್ ಲೈನ್ ಯೋಜನೆಯ ತ್ವರಿತ ಗತಿಯಲ್ಲಿ ನಡೆಯುತ್ತಿದೆ.
- ಈ ಶಕ್ತಿ ಸಂಪರ್ಕ ಯೋಜನೆಗಳು ಪೂರ್ವ ಭಾರತದಲ್ಲಿನ ಕೈಗಾರಿಕಾ ಅಭಿವೃದ್ಧಿಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ನಗರದ ಗ್ಯಾಸ್ ವಿತರಣೆ (ಸಿಜಿಡಿ) ನೆಟ್ವರ್ಕ್ ವಿಸ್ತರಣೆ ಮತ್ತು ಸಾರಿಗೆಗೆ ಇಂಧನವಾಗಿ ಅನಿಲವನ್ನು ಉತ್ತೇಜಿಸುವುದು ಭಾರತದ ಶಕ್ತಿಯ ಬುಟ್ಟಿಯಲ್ಲಿನ ಅನಿಲದ ಪಾಲನ್ನು ಪ್ರಸ್ತುತ ದಶಕದಲ್ಲಿ 5% ರಿಂದ 15% ರಷ್ಟಕ್ಕೆ ಹೆಚ್ಚಿಸುವ ಇತರ ಪ್ರಮುಖ ಕ್ರಮಗಳಾಗಿವೆ.
- ಇಂಗಾಲದ ಹೆಜ್ಜೆಗುರುತುಗಳನ್ನು ಕಡಿಮೆ ಮಾಡಲು 21 ಕಾನ್ಫರೆನ್ಸ್ ಆಫ್ ಪಾರ್ಟೀಸ್ (ಕೊಂಪೆ) 21 ಬದ್ಧತೆಗಳು, ತೀವ್ರವಾದ ಎಥೆನಾಲ್ ಮಿಶ್ರಣ ಕಾರ್ಯಕ್ರಮಗಳ ಮೂಲಕ ಪರಿಸರೀಯ ಸ್ನೇಹಿ ಪರ್ಯಾಯ ಇಂಧನಗಳನ್ನು ಬಳಸಲು ಒತ್ತು ನೀಡಿದೆ. ವಿಶೇಷವಾಗಿ ವ್ಯರ್ಥ ತ್ಯಾಜ್ಯದಿಂದ ಇಂಧನ ಉತ್ಪಾದಿಸಲು ಆಧುನಿಕ ಎಥೆನಾಲ್ ಸ್ಥಾವರ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಇದು 2020 ರ ವೇಳೆಗೆ ಯುರೋ VI ಸಮಾನ ಮಟ್ಟಕ್ಕೆ ತಲುಪಲು ಪೂರಕವಾಗಿ ಶುದ್ಧ ಸಾರಿಗೆ ಇಂಧನವನ್ನು ಪ್ರೋತ್ಸಾಹಿಸುತ್ತದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ. ಪ್ರಧಾನ ಮಂತ್ರಿ ಉಜ್ವಲಾ ಯೋಜನಾ (ಪಿಎಂಯುವೈ) ಮೇ 2016 ರಲ್ಲಿ ಪ್ರಾರಂಭವಾಗಿದ್ದು ಈಗಾಗಲೇ ಸುಮಾರು 30 ದಶಲಕ್ಷ ಬಡ ಮಹಿಳೆಯರಿಗೆ 18 ತಿಂಗಳೊಳಗೆ ಶುದ್ಧ ಅಡುಗೆ ಅನಿಲವನ್ನು ಒದಗಿಸಿದೆ.
- ಈ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಬೃಹತ್ ಸಾಮಾಜಿಕ-ಆರ್ಥಿಕ ಮತ್ತು ಆರೋಗ್ಯಪ್ರಯೋಜನಗಳೊಂದಿಗೆ ಪರಿವರ್ತನೆಯ ನೀಲಿ ಜ್ವಾಲೆಯ ಕ್ರಾಂತಿಗೆ ಕಾರಣವಾಗಿದೆ. ಹೆಚ್ಚುವರಿಯಾಗಿ, 10 ಮಿಲಿಯನ್ ಎಲ್ಪಿಜಿ ಗ್ರಾಹಕರು ತಮ್ಮ ಸಬ್ಸಿಡಿಯನ್ನು ನೀಡುವ ಮೂಲಕ ಪಾಲ್ಗೊಳ್ಳುವಿಕೆ ಪ್ರಜಾಪ್ರಭುತ್ವದ ಮತ್ತುಸ್ವಯಂಪ್ರೇರಿತತೆಯ ಉನ್ನತ ಆದರ್ಶವನ್ನು ಸಾಬೀತು ಮಾಡಿದ್ದಾರೆ. ಇದರಿಂದಾಗಿ ಎಲ್ಪಿಜಿ ಸಂಪರ್ಕಗಳನ್ನು ಬಡ ಜನರಿಗೆ ತಲುಪಿಸಲು ಸಾಧ್ಯವಾಗಿದೆ. ‘ಪಹಲ್’ ಯೋಜನೆ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಎಲ್ಪಿಜಿ ಸಬ್ಸಿಡಿಇನಿಶಿಯೇಟಿವ್ ಸರಕಾರದ ನೇರ ವರ್ಗಾವಣೆಯಿಂದ 190 ದಶಲಕ್ಷ ಎಲ್ಪಿಜಿ ಗ್ರಾಹಕರಿಗೆ ಲಾಭವಾಗಲಿದ್ದು ಇದು ವಿಶ್ವದ ಅತಿ ದೊಡ್ಡ ಲಾಭ ವರ್ಗಾವಣೆ ಯೋಜನೆ ಎಂದು ಗಿನ್ನೆಸ್ ಪುಸ್ತಕದಿಂದ ಗುರುತಿಸಲ್ಪಟ್ಟಿದೆ.
- ಅಂತರರಾಷ್ಟ್ರೀಯ ರಂಗದಲ್ಲಿ, ಭಾರತ ತನ್ನ ಶಕ್ತಿ ಆಮದುಗಳನ್ನು ವೈವಿಧ್ಯಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ, ತೈಲ ಮತ್ತು ಅನಿಲ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ರಷ್ಯಾ ಮತ್ತು ವೆನೆಜುವೆಲಾ ದೇಶಗಳ ಹೂಡಿಕೆಗಳನ್ನು ಉತ್ತೇಜಿಸುತ್ತಿದೆ. ಭಾರತವು ವಿಶ್ವದಲ್ಲೇ ಮೂರನೇ ಅತಿದೊಡ್ಡ ಇಂಧನ ಗ್ರಾಹಕನಾಗಿದ್ದು, ವಿವಿಧ ಅಂತರರಾಷ್ಟ್ರೀಯ ಶಕ್ತಿ ಕ್ಷೇತ್ರ ಮತ್ತು ಪ್ರಾದೇಶಿಕ ಗುಂಪುಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
- ಈ ವರ್ಷದ ವಿಶ್ವ ಎಲ್ಪಿಜಿ ಅಸೋಸಿಯಶನ್ ನ್ನ ಏಷ್ಯಾ ಶೃಂಗಸಭೆಯ ಅತಿಥ್ಯವನ್ನು ದೆಹಲಿ ವಹಿಸಿಕೊಂಡಿತ್ತು. ಇದನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಉದ್ಘಾಟಿಸಿದರು. 2018 ರ ಏಪ್ರಿಲಲ್ಲಿ ಅಂತರರಾಷ್ಟ್ರೀಯ ಎನರ್ಜಿ ಫೋರಮ್ ನ ಸಚಿವರ ಅಧಿವೇಶನದ ಆತಿಥ್ಯ ವಹಿಸಲು ಭಾರತವು ಸಜ್ಜಾಗುತ್ತಿದೆ. ಬಾಂಗ್ಲಾದೇಶ, ನೇಪಾಳ ಮತ್ತು ಮಯನ್ಮಾರ್ ದೇಶಗಳೊಂದಿಗಿನ ವಿಶೇಷ ಸಂಬಂಧವನ್ನು ಅವರು ಹೊಂದಿದ್ದಾರೆ.
- ರೆಪೋ ದರ ಯಥಾಸ್ಥಿತಿ
ಪ್ರಮುಖ ಸುದ್ದಿ
- ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶೇ. 6ರ ರೆಪೋ ದರವನ್ನೆ ಮುಂದುವರಿಸಿದ್ದು, ನಗದು ಹೊಂದಾಣಿಕೆ ಸೌಕರ್ಯ (ಎಲ್ಎಎಫ್) ಅಡಿಯಲ್ಲಿ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಜತೆಗೆ ರಿವರ್ಸ್ ರೆಪೋ ದರ ಕೂಡ ಶೇ. 75ರಲ್ಲೇ ಮುಂದುವರಿಸಿದೆ.
ಪ್ರಮುಖ ಸಂಗತಿಗಳು
- ಪ್ರಸಕ್ತ ಆರ್ಥಿಕ ವರ್ಷದ ಮೂರು ಮತ್ತು ನಾಲ್ಕನೇ ತ್ರೖೆಮಾಸಿಕದಲ್ಲಿ ಹಣದುಬ್ಬರದ ಅಂದಾಜನ್ನು ಶೇ. 3ರಿಂದ 4.7ಕ್ಕೆ ಹೆಚ್ಚಿಸಿರುವ ಆರ್ಬಿಐ, ಆರ್ಥಿಕ ಪ್ರಗತಿಯ ಅಂದಾಜನ್ನು ಶೇ.6.7ರಲ್ಲಿ ಕಾಯ್ದುಕೊಂಡಿದೆ.
- ಬಡ್ಡಿದರ ಕಡಿತಕ್ಕೆ ಪೂರಕವಾದ ಆರ್ಥಿಕ ವಾತಾವರಣದ ಮುನ್ಸೂಚನೆ ಇರುವ ಕಾರಣ ಹೊಸ ಬಡ್ಡಿದರದ ನೀತಿಯನ್ನು ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಅಧ್ಯಕ್ಷತೆಯ ಹಣಕಾಸು ನೀತಿ ಸಮಿತಿ (ಎಂಪಿಸಿ) ಪ್ರಕಟಿಸುವ ನಿರೀಕ್ಷೆ ಇತ್ತು. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಆಗುತ್ತಿರುವ ಹೆಚ್ಚಳ ಹಾಗೂ 7ನೇ ವೇತನ ಆಯೋಗ ಜಾರಿಯಿಂದ ಬೊಕ್ಕಸದ ಮೇಲಾಗಿರುವ ಹೊರೆ, ದೇಶದ ಪ್ರಸ್ತುತದ ಆರ್ಥಿಕ ಸ್ಥಿತಿ ಹಿನ್ನೆಲೆಯಲ್ಲಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎನ್ನಲಾಗಿದೆ.
- ಗ್ರಾಹಕ ದರ ಸೂಚ್ಯಂಕದಲ್ಲಿ (ಸಿಪಿಐ) ಮಧ್ಯಮಾವಧಿ ಗುರಿಯನ್ನು ತಲುಪುವ ಉದ್ದೇಶದಿಂದ ಹಣದುಬ್ಬರವನ್ನು ಶೇ. 4ರಲ್ಲಿ(2 % ಅಂದಾಜಿನಲ್ಲಿ) ಕಾಯ್ದುಕೊಳ್ಳುವ ಮೂಲಕ ಪ್ರಗತಿಗೆ ಪೂರಕ ವಾತಾವರಣ ಕಲ್ಪಿಸುವ ಇರಾದೆಯನ್ನು ಎಂಪಿಸಿ ಹೊಂದಿದೆ ಎಂದು ಆರ್ಬಿಐ ತಿಳಿಸಿದೆ.
INTERNATIONAL RELATIONS – ಅಂತಾರಾಷ್ಟ್ರೀಯ ಸಂಬಂಧಗಳು
- ಜೆರುಸಲೇಂ ಇಸ್ರೇಲ್ ರಾಜಧಾನಿ
ಪ್ರಮುಖ ಸುದ್ದಿ
- ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಂ ನಗರವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾನ್ಯ ಮಾಡಿ ಆದೇಶ ಹೊರಡಿಸಿದ್ದಾರೆ. ಇದು ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ದ್ವೇಷದ ಬೆಂಕಿಗೆ ತುಪ್ಪ ಸುರಿಯಲಿದೆ ಎಂದು ವಿದೇಶಗಳು ಎಚ್ಚರಿಕೆ ನೀಡಿದ್ದರೂ, ಅಮೆರಿಕದ ಹತ್ತು ವರ್ಷಗಳ ನೀತಿಗೆ ತಿಲಾಂಜಲಿ ನೀಡಿ ಈ ನಿರ್ಧಾರವನ್ನು ಟ್ರಂಪ್ ಕೈಗೊಂಡಿದ್ದಾರೆ.
ಸಂಕ್ಷಿಪ್ತ ವಿಶ್ಲೇಷಣೆ (ಮುಖ್ಯ ಪರೀಕ್ಷೆಗಾಗಿ )
- ಒಂದು ನಗರಕ್ಕೆ ರಾಜಧಾನಿಯ ಮಾನ್ಯತೆ ನೀಡುವುದರಿಂದ ಏಕಿಷ್ಟು ಸಮಸ್ಯೆ, ಟ್ರಂಪ್ ನಿರ್ಧಾರಕ್ಕೆ ಕಾರಣವೇನು?
- ಜೆರುಸಲೇಂ ಮೇಲೆ ಇಸ್ರೇಲ್, ಪ್ಯಾಲೆಸ್ಟೀನ್… ಎರಡೂ ಹಕ್ಕು ಸಾಧಿಸುತ್ತಿವೆ. ವಾಸ್ತವದಲ್ಲಿ ಅದು ಇಸ್ರೇಲ್ ನಿಯಂತ್ರಣದಲ್ಲಿದ್ದರೂ ಈ ಕಾರಣಕ್ಕಾಗಿ ವಿವಾದಾತ್ಮಕ ನಗರ. ಜೆರುಸಲೇಂ ತನ್ನ ರಾಜಧಾನಿ ಎಂದು ಇಸ್ರೇಲ್ ಸಂಸತ್ತು ಬಹಳ ಹಿಂದೆಯೇ ನಿರ್ಣಯ ಅಂಗೀಕರಿಸಿದೆ. ಆದರೂ ಟೆಲ್‌ಅವೀವ್‌ನಿಂದಲೇ ಕಾರ್ಯನಿರ್ವಹಿಸುತ್ತಿದೆ. ಈಗಲೂ ಜೆರುಸಲೇಂನಲ್ಲಿ ಯಾವುದೇ ದೇಶದ ರಾಜತಾಂತ್ರಿಕ ಕಚೇರಿಗಳಿಲ್ಲ. 1995ರಲ್ಲಿ ಅಮೆರಿಕ ಕಾಂಗ್ರೆಸ್ ಕೂಡ ಜೆರುಸಲೇಂಗೆ ಇಸ್ರೇಲ್‌ನ ರಾಜಧಾನಿ ಎಂಬ ಮಾನ್ಯತೆ ನೀಡಿ ರಾಯಭಾರ ಕಚೇರಿ ಸ್ಥಳಾಂತರಿಸುವ ನಿರ್ಣಯ ತೆಗೆದುಕೊಂಡಿತ್ತು. ಆದರೆ ಆಗ ಇದ್ದ ಮತ್ತು ನಂತರ ಬಂದ ಅಧ್ಯಕ್ಷರು ಆರು ತಿಂಗಳಿಗೊಮ್ಮೆ ತಮ್ಮ ವಿಶೇಷಾಧಿಕಾರ ಚಲಾಯಿಸಿ ಈ ನಿರ್ಣಯದ ಜಾರಿ ಮುಂದೂಡುತ್ತ ಬಂದಿದ್ದರು. ಇದು ಟ್ರಂಪ್‌ಗೆ ಚುನಾವಣಾ ವಿಷಯವಾಗಿತ್ತು. ಆಗ ಮಾಡಿದ ವಾಗ್ದಾನವನ್ನು ಈಗ ಜಾರಿಗೊಳಿಸಿದ್ದಾರೆ. ಈ ಮೂಲಕ ರಾಜಕೀಯ ಲಾಭ ಪಡೆಯುವುದು ಅವರ ಉದ್ದೇಶ.
ಜೆರುಸಲೇಂಗೆ ಏಕಿಷ್ಟು ಮಹತ್ವ?
- ಜೆರುಸಲೇಂ ವಿಶ್ವದ ಅತ್ಯಂತ ಹಳೆಯ ಕೆಲವೇ ನಗರಗಳಲ್ಲಿ ಒಂದು. ಮೆಡಿಟರೇನಿಯನ್ ಸಮುದ್ರ ಮತ್ತು ಮೃತ ಸಮುದ್ರದ ಮಧ್ಯದಲ್ಲಿನ ಈ ನಗರ ಕ್ರಿಸ್ತಪೂರ್ವ 4500ಕ್ಕೂ ಮೊದಲೇ ಅಸ್ತಿತ್ವದಲ್ಲಿತ್ತು ಎನ್ನುತ್ತವೆ ಪುರಾತತ್ವ ಸಾಕ್ಷ್ಯಗಳು. ಇದು ಯೆಹೂದಿಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು… ಹೀಗೆ ಮೂರು ಪ್ರಮುಖ ಧರ್ಮದವರಿಗೂ ಅತ್ಯಂತ ಪವಿತ್ರ ಸ್ಥಳ. ವಿಶ್ವದಲ್ಲಿ ಇದಕ್ಕೆ ಪರ್ಯಾಯವಾದ ಇನ್ನೊಂದು ಉದಾಹರಣೆ ಇಲ್ಲ. ಪ್ರವಾದಿ ಮುಹಮ್ಮದರು ಸ್ವರ್ಗಾರೋಹಣ ಮಾಡಿದ್ದು ಇಲ್ಲಿಂದಲೇ ಎಂಬುದು ಮುಸ್ಲಿಮರ ನಂಬಿಕೆ.
- ಮೆಕ್ಕಾ, ಮದೀನಾ ನಂತರ ಇದು ಅವರ ಪಾಲಿಗೆ ಮೂರನೇ ಅತ್ಯಂತ ಪವಿತ್ರ ಸ್ಥಳ. ಏಸುವನ್ನು ಶಿಲುಬೆಗೆ ಏರಿಸಿದ ಮತ್ತು ಏಸುವಿನ ಮಹಾಪರಿನಿರ್ವಾಣ ಸ್ಥಳ ಎನ್ನುವ ಕಾರಣಕ್ಕಾಗಿ ಕ್ರೈಸ್ತರಿಗೆ ಇದು ಪುಣ್ಯ ಭೂಮಿ. ಜಗತ್ತಿನ ಎಲ್ಲ ಜೀವಿಗಳ ಸೃಷ್ಟಿ ಆರಂಭವಾದದ್ದೇ ಇಲ್ಲಿಂದ ಎಂಬ ನಂಬಿಕೆಯಿಂದಾಗಿ ಯೆಹೂದಿಗಳಿಗೂ ಈ ನಗರಕ್ಕೂ ಧಾರ್ಮಿಕವಾಗಿ ಬಿಡಲಾರದ ನಂಟು. ಅವರ ಪ್ರಕಾರ ಇಲ್ಲಿನ ಪಶ್ಚಿಮ ಗೋಡೆ ಈಗಲೂ ದೇವತೆಗಳಿರುವ ಸ್ಥಳ. ಅದರ ದರ್ಶನ, ಆರಾಧನೆ ಅವರ ಪಾಲಿಗೆ ಧಾರ್ಮಿಕ ಕರ್ತವ್ಯ. ಧರ್ಮ ಗ್ರಂಥಗಳಲ್ಲಿ ‘ಶಾಂತಿಯ ನಗರ’ ಎಂದು ಉಲ್ಲೇಖಗೊಂಡಿದ್ದರೂ ಇದರ ಮೇಲೆ ಪರಮಾಧಿಕಾರ ಸಾಧಿಸಲು ಸಾವಿರಾರು ವರ್ಷಗಳಿಂದ ನಡೆದ ಯುದ್ಧಗಳಿಗೆ ಲೆಕ್ಕವಿಲ್ಲ.
ಪೂರ್ವ ಮತ್ತು ಪಶ್ಚಿಮ ಜೆರುಸಲೇಂ. ಏನು?
- ಸಾಲೊಮನ್, ಡೆವಿಡ್‌ರಿಂದ ಹಿಡಿದು ಕಾಲಾಂತರದಲ್ಲಿ ಟರ್ಕಿಯ ಒಟ್ಟೊಮನ್ ಅರಸೊತ್ತಿಗೆಯ ವಶಕ್ಕೆ ಬಂದ ಈ ನಗರವನ್ನು ಸ್ಥೂಲವಾಗಿ ಪೂರ್ವ ಮತ್ತು ಪಶ್ಚಿಮ ಜೆರುಸಲೇಂ ಎಂದು ಎರಡು ಭಾಗಗಳಾಗಿ ಗುರುತಿಸಲಾಗುತ್ತಿದೆ. ಅಲ್ ಅಕ್ಸಾ ಮಸೀದಿ, ಪಶ್ಚಿಮ ಗೋಡೆ, ಡೋಮ್ ಆಫ್ ದಿ ರಾಕ್, ಡೋಮ್ ಆಫ್ ದಿ ಚೈನ್ ಮುಂತಾದ ಪವಿತ್ರ ಸ್ಥಳಗಳು ಹಳೆಯ ಜೆರುಸಲೇಂ ಎಂದು ಕರೆಯುವ ಪೂರ್ವ ಭಾಗದಲ್ಲಿವೆ. ಪಶ್ಚಿಮ ಜೆರುಸಲೇಂ ಸ್ವಲ್ಪ ಆಧುನಿಕ ನಗರ. 1947ರಲ್ಲಿ ವಿಶ್ವಸಂಸ್ಥೆಯು ಇದನ್ನು ಅಂತರರಾಷ್ಟ್ರೀಯ ನಗರ ಎಂದು ಘೋಷಿಸಿತ್ತು. ನಗರದ ಪಶ್ಚಿಮ ಭಾಗದಲ್ಲಿ ಯೆಹೂದಿಗಳು, ಪೂರ್ವ ಭಾಗದಲ್ಲಿ ಪ್ಯಾಲೆಸ್ಟೀನಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ಕಾರಣಕ್ಕಾಗಿ ಎರಡು ಭಾಗವಾಗಿ ಗುರುತು ಮಾಡಿತ್ತು.
- ಪಶ್ಚಿಮ ಭಾಗ ಇಸ್ರೇಲ್ ನಿಯಂತ್ರಣದಲ್ಲಿ, ಪೂರ್ವ ಭಾಗ ಜೋರ್ಡ್‌ನ್ ದೊರೆಯ ನಿಯಂತ್ರಣದಲ್ಲಿ ಇದ್ದವು. ಆದರೆ 1967ರಲ್ಲಿ ನಡೆದ ಆರು ದಿನಗಳ ಯುದ್ಧದಲ್ಲಿ ಅರಬ್ ದೇಶಗಳ ಮೇಲೆ ಇಸ್ರೇಲ್ ಜಯಗಳಿಸಿ ಪೂರ್ವ ಭಾಗವನ್ನೂ ತನ್ನ ಸುಪರ್ದಿಗೆ ತೆಗೆದುಕೊಂಡಿತು. ಅದರ ಪ್ರಕಾರ ಪೂರ್ವ– ಪಶ್ಚಿಮ ಜೆರುಸಲೇಂ ಎಂಬುದು ಇಲ್ಲವೇ ಇಲ್ಲ. ಅದು ಇಡಿಯಾಗಿ ಒಂದು ನಗರ. ಆದರೆ ಇಸ್ರೇಲ್‌ನ ಈ ವಾದ ಮತ್ತು ಆಕ್ರಮಣವನ್ನು ಅಮೆರಿಕ ಬಿಟ್ಟರೆ ಬೇರೆ ಯಾವ ದೇಶವೂ ಒಪ್ಪಿಲ್ಲ. ಪೂರ್ವ ಜೆರುಸಲೇಂ ಭಾಗವನ್ನು ಇಸ್ರೇಲ್ ಬಲವಂತವಾಗಿ ಆಕ್ರಮಿಸಿದೆ ಎಂದು ವಿಶ್ವಸಂಸ್ಥೆ ಹೇಳಿದ್ದರೂ ಇದಕ್ಕೆ ಇಸ್ರೇಲ್ ಸೊಪ್ಪು ಹಾಕಿಲ್ಲ. ಇಡೀ ನಗರವನ್ನು ತನ್ನ ಬಿಗಿಮುಷ್ಟಿಯಲ್ಲಿ ಇಟ್ಟುಕೊಂಡಿದೆ. ಪೂರ್ವ ಜೆರುಸಲೇಂನ ಧಾರ್ಮಿಕ ಪ್ರದೇಶದ ಉಸ್ತುವಾರಿಯನ್ನು ಮುಸ್ಲಿಂ ವಕ್ಫ್ ಆಡಳಿತಕ್ಕೆ ವಹಿಸಿಕೊಟ್ಟಿದ್ದರೂ ಅಲ್ಲಿ ತನ್ನ ಯೆಹೂದಿ ಪ್ರಜೆಗಳಿಗೆ ಹೊಸ ಹೊಸ ಬಡಾವಣೆ ನಿರ್ಮಿಸುತ್ತ ಪ್ಯಾಲೆಸ್ಟೀನಿ ಮುಸ್ಲಿಮರ ಪ್ರಾಬಲ್ಯ ಕಡಿಮೆ ಮಾಡುತ್ತ ನಡೆದಿದೆ.
ಟ್ರಂಪ್ ಘೋಷಣೆಗೆ ಪ್ಯಾಲೆಸ್ಟೈನ್ ವಿರೋಧ ಏಕೆ?
- ಜೆರುಸಲೇಂಗೂ ಯೆಹೂದಿಗಳಿಗೂ ಯಾವುದೇ ಧಾರ್ಮಿಕ, ಭಾವನಾತ್ಮಕ ಸಂಬಂಧ ಇಲ್ಲ ಎಂಬುದು ಪ್ಯಾಲೆಸ್ಟೀನ್ ವಿಮೋಚನಾ ರಂಗದ (ಪಿಎಲ್‌ಒ) ನೇತೃತ್ವದ ಪ್ಯಾಲೆಸ್ಟೀನ್ ಸರ್ಕಾರದ ವಾದ. ಅಲ್ಲಿ ಇಸ್ರೇಲಿಗಳ ಮೇಲುಗೈಯನ್ನು ಅದು ವಿರೋಧಿಸುತ್ತಲೇ ಬಂದಿದೆ. ಪೂರ್ವ ಜೆರುಸಲೇಂ ತನ್ನ ರಾಜಧಾನಿ ಎಂದು ಪಟ್ಟು ಹಿಡಿದಿದ್ದರೂ ವಾಸ್ತವವಾಗಿ ಅದು ರಮಲ್ಲಾದಿಂದ ಕಾರ್ಯ ನಿರ್ವಹಿಸುತ್ತಿದೆ.
- ‘ಜೆರುಸಲೇಂನ ಆಡಳಿತಾತ್ಮಕ ಸ್ವರೂಪ ಬದಲಾಯಿಸುವುದು, ಇಸ್ರೇಲ್‌ನ ರಾಜಧಾನಿ ಎಂದು ಘೋಷಿಸುವುದು ಅಂತರರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧ; ಶಾಂತಿ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ’ ಎನ್ನುತ್ತಾರೆ ಪ್ಯಾಲೆಸ್ಟೀನ್ ಅಧ್ಯಕ್ಷ ಮಹಮ್ಮೂದ್ ಅಬ್ಬಾಸ್. ಇಸ್ರೇಲ್‌ನ ಅಸ್ತಿತ್ವವನ್ನು ಮಾನ್ಯ ಮಾಡಿರುವ ಪಿಎಲ್‌ಒ ಮತ್ತು ಕೆಲ ಅರಬ್ ದೇಶಗಳು, ಇದೇ ಕಾರಣ ಮುಂದಿಟ್ಟುಕೊಂಡು ಮಾನ್ಯತೆ ರದ್ದು ಮಾಡಲು ಹಿಂಜರಿಯುವುದಿಲ್ಲ ಎಂಬ ಬೆದರಿಕೆ ಹಾಕಿವೆ. ಹಾಗೇನಾದರೂ ಆದರೆ ಪಶ್ಚಿಮ ಏಷ್ಯಾ ಮತ್ತೆ ಅಶಾಂತಿಯ ಗೂಡಾಗುತ್ತದೆ ಎಂಬುದು ವಿಶ್ವದ ಆತಂಕ.
- ವಿಧ್ಯಾರ್ಥಿಗಳ ಯೋಚನೆಗೆ ಒಂದು ಯೋಜನೆ(GS PAPER-2)
What are the possible consequences of the U.S. President Donald Trump’s decision to recognise Jerusalem as the capital of Israel. In your opinion, what should be India’s stance on this issue?
(ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಂ ಮಾನ್ಯ ಮಾಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರದ ಸಂಭಾವ್ಯ ಪರಿಣಾಮಗಳು ಯಾವುವು. ಈ ವಿಷಯದ ಬಗ್ಗೆ ಭಾರತದ ನಿಲುವು ಏನಾಗಿರಬೇಕು? ನಿಮ್ಮ ಅಭಿಪ್ರಾಯ ತಿಳಿಸಿ)
- ಭಾರತ- ಕ್ಯೂಬಾ ಒಪ್ಪಂದ
ಪ್ರಮುಖ ಸುದ್ದಿ
- ಭಾರತ ಹಾಗೂ ಕ್ಯೂಬಾ ಎರಡು ದೇಶಗಳು ಆರೋಗ್ಯ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಒಪ್ಪಂದ ಮಾಡಿಕೊಂಡಿವೆ.ಈ ಒಪ್ಪಂದದ ಮುಖ್ಯ ಉದ್ದೇಶವೆಂದರೆ, ಸಮಗ್ರವಾದ ಅಂತರ ಸಚಿವಾಲಯ ಮತ್ತು ಅಂತರ ಸಾಂಸ್ಥಿಕ ಸಹಕಾರವನ್ನು ಆರೋಗ್ಯಕ್ಷೇತ್ರದಲ್ಲಿ ವಿನಿಮಯ ಮಾಡಿಕೊಳ್ಳುವುದು.
- ಇದು ಆರೋಗ್ಯ ಕ್ಷೇತ್ರದಲ್ಲಿ ಪರಸ್ಪರ ಜ್ಞಾನ ವಿನಿಮಯಕ್ಕೆ ಅವಕಾಶ ಮಾಡಿಕೊಡುತ್ತದೆ. ಎರಡು ದೇಶಗಳ ನಡುವೆ ಆರೋಗ್ಯ ಕ್ಷೇತ್ರದಲ್ಲಿ ಪರಸ್ಪರ ಸಹಕಾರದ ಚೌಕಟ್ಟು ರೂಪಿಸುವಲ್ಲಿ ಇದು ಮಹತ್ವದ್ದಾಗಿದೆ.
ಪ್ರಮುಖ ಅಂಶಗಳು
- ಇದು ಔಷಧ ಕ್ಷೇತ್ರ, ವೈದ್ಯಕೀಯ ಸಾಧನಗಳು ಮತ್ತು ಮಾಹಿತಿಗಳ ವಿನಿಮಯಕ್ಕೆ ಕೂಡಾ ಅವಕಾಶ ಮಾಡಿಕೊಡುತ್ತದೆ. ಇದು ಔಷಧ ಉತ್ಪಾದನೆ ಮತ್ತು ಇತರ ಗುರುತಿಸಲ್ಪಟ್ಟ ಪ್ರದೇಶದಲ್ಲಿ ವಹಿವಾಟು ಅಭಿವೃದ್ಧಿ ಅವಕಾಶಗಳ ಉತ್ತೇಜನಕ್ಕೆ ಕೂಡಾ ಸಹಕಾರಿಯಾಗಿದೆ. ಈ ಒಪ್ಪಂದ ಜೀವರಕ್ಷಕ ಮತ್ತು ಅಗತ್ಯ ಔಷದಿಗಳ ಖರೀದಿ ಹಾಗೂ ಔಷಧ ಪೂರೈಕೆ ಮೂಲಗಳಿಗೆ ನೆರವು ನೀಡುವ ವ್ಯವಸ್ಥೆಯನ್ನು ಕೂಡಾ ಒಳಗೊಂಡಿರುತ್ತದೆ.
- ವೈದ್ಯರಿಗೆ, ಅಧಿಕಾರಿಗಳಿಗೆ, ಇತರ ಆರೋಗ್ಯ ಕಾರ್ಯಕರ್ತರಿಗೆ ಮತ್ತು ತಜ್ಞರಿಗೆ ತರಬೇತಿ ನೀಡುವುದು ಹಾಗೂ ಮಾಹಿತಿ ವಿನಿಮಯ ಮಾಡಿಕೊಳ್ಳುವುದು. ಇದು ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಆರೋಗ್ಯ ಸೇವೆ ಮತ್ತು ಆರೋಗ್ಯ ಕಾಳಜಿ ಸೌಲಭ್ಯವನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶ.
- ಉತ್ಪಾದನೆಯಲ್ಲಿ ಸುರಕ್ಷತೆ, ವರ್ಗಾವಣೆ, ವಿತರಣೆ ಮತ್ತು ಆಹಾರ ವಿತರಣೆಯಲ್ಲಿ ಸುರಕ್ಷತೆಗೆ ಇದು ಒತ್ತು ನೀಡಲಿದೆ. ನೈರ್ಮಲ್ಯ ಮತ್ತು ಆಹಾರ ಸುರಕ್ಷೆ ಬಗ್ಗೆ ನಾಗರಿಕರಿಗೆ ಮಾಹಿತಿ ಮತ್ತು ಸಂವಹನವನ್ನು ಒದಗಿಸುವುದು ಹಾಗೂ ಆರೋಗ್ಯಕರ ಆಹಾರ ಸೇವನೆ ಹವ್ಯಾಸಗಳನ್ನು ಜನಸಾಮಾನ್ಯರಲ್ಲಿ ರೂಢಿಸುವುದು ಇದರ ಗುರಿಯಾಗಿದೆ.
- ಸಾಂಕ್ರಾಮಿಕವಲ್ಲದ ರೋಗಗಳ ತಡೆಗೆ ಸಹಭಾಗಿತ್ವವನ್ನು ಅಭಿವೃದ್ಧಿಪಡಿಸುವುದು ಹಾಗೂ ಪರಸ್ಪರ ಆಸಕ್ತಿಯ ವಿಷಯಗಳಲ್ಲಿ ಉಭಯ ದೇಶಗಳಿಗೆ ಲಾಭವಾಗುವಂತೆ ಕ್ರಮಗಳನ್ನು ಕೈಗೊಳ್ಳುವುದು ಇದರ ಉದ್ದೇಶ. ಹೃದ್ರೋಗ, ಕ್ಯಾನ್ಸರ್, ಮಾನಸಿಕ ಆರೋಗ್ಯ ಹಾಗೂ ಮರೆಗುಳಿತನದಂಥ ಸುಸ್ಥಿರ ಅಭಿವೃದ್ಧಿ ಗುರಿಯ ಅಂಶಗಳಿಗೆ ಒತ್ತು ನೀಡುವುದು ಸೇರಿದೆ. ಇದು ಹವಾಮಾನ ಬದಲಾವಣೆ ಪರಿಣಾಮವು ಸಾಂಕ್ರಾಮಿಕ ಹಾಗೂ ಇತರ ಸೊಳ್ಳೆಗಳಿಂದ ಹರಡುವ ರೋಗದ ಬಗ್ಗೆ ಒತ್ತು ನೀಡುವುದು ಈ ಒಪ್ಪಂದದ ಇನ್ನೊಂದು ಪ್ರಮುಖ ಅಂಶವಾಗಿದೆ
- ಜಿಸಿಸಿ ಮತ್ತು ಪರ್ಷಿಯನ್ ಗಲ್ಫ್ ಬಿಕ್ಕಟ್ಟು
ಪ್ರಮುಖ ಸುದ್ದಿ
- ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಸೌದಿ ಅರೇಬಿಯಾ ವಿಧ್ಯುಕ್ತವಾಗಿ ಹೊಸ ಆರ್ಥಿಕ ಹಾಗೂ ಪಾಲುದಾರಿಕೆ ಗುಂಪನ್ನು ರಚಿಸಿಕೊಂಡಿದ್ದು, ಇದಕ್ಕೆ ಜಂಟಿ ಸಹಕಾರ ಸಮಿತಿ ಎಂದು ಹೆಸರಿಸಲಾಗಿದೆ. ಇದು ಗಲ್ಫ್ ಸಹಕಾರ ಮಂಡಳಿ (ಜಿಸಿಸಿ)ಯಿಂದ ಭಿನ್ನವಾಗಿದೆ.
ಮುಖ್ಯ ಅಂಶಗಳು
- ಇದರಿಂದಾಗಿ ಇತರ ಆರು ಜಿಸಿಸಿ ಸದಸ್ಯರನ್ನು ಕಡೆಗಣಿಸಿದಂತಾಗಿದ್ದು, ಸೌದಿ ಅರೇಬಿಯಾ ನೇತೃತ್ವದ ಅರಬ್ ದೇಶಗಳು ರಾಜತಾಂತ್ರಿಕ ಸಂಘರ್ಷವನ್ನು ಕತಾರ್‍ನೊಂದಿಗೆ ಹೊಂದಿದ ಹಿನ್ನೆಲೆಯಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ. ಅರ್ಧದಷ್ಟು ದೇಶಗಳು ಕತಾರ್‍ನನ್ನು ನಿಷೇಧಿಸಿದ್ದು, ಆ ಆದೇಶ ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ನೀಡುತ್ತಿದೆ ಎಂದು ಆಪಾದಿಸಿವೆ.
- ಹೊಸ ಸಮಿತಿಯು ಮುಖ್ಯವಾಗಿ ಯುಎಇ ಮತ್ತು ಸೌದಿ ಅರೇಬಿಯಾ ನಡುವೆ ಎಲ್ಲ ಕ್ಷೇತ್ರಗಳಲ್ಲಿ ಸಹಕಾರ ಹಾಗೂ ಸಮನ್ವಯನ್ನು ಸಾಧಿಸುವ ಗುರಿ ಹೊಂದಿದೆ. ಮಿಲಿಟರಿ, ರಾಜಕೀಯ, ಆರ್ಥಿಕ, ವ್ಯಾಪಾರ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಕೂಡಾ ಪರಸ್ಪರ ಸಹಕಾರ ನೀಡಲಿವೆ ಮತ್ತು ಪರಸ್ಪರ ದಏಶಗಳ ಹಿತಾಸಕ್ತಿಯನ್ನು ಕಾಯ್ದುಕೊಳ್ಳಿವೆ.
- ಇದರ ಮುಖ್ಯಸ್ಥರಾಗಿ ಅಬುದಾಬಿ ರಾಜ ಶೇಖ್ ಮೊಹ್ಮದ್ ಬಿನ್ ಝಯೇದ್ ಅಲ್ ನಹ್ಯಾನ್ ಹಾಗೂ ಯುಎಇ ಉಪಪ್ರಧಾನಿ ಶೇಕ್ ಮಸೂರ್ ಬಿನ್ ಝಯೇದ್ ಅಲ್ ನಹ್ಯಾನ್ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುವರು.
ಗಲ್ಫ್ ಸಹಕಾರ ಮಂಡಳಿ ಬಗ್ಗೆ (Gulf Cooperation Council (GCC))
- ಗಲ್ಫ್ ಸಹಕಾರ ಮಂಡಳಿಯು ರಾಜಕೀಯ ಹಾಗೂ ಆರ್ಥಿಕ ಒಕ್ಕುಟವಾಗಿದ್ದು, ಅರೇಬಿಯನ್ ಭೂಭಾಗದ ಕುವೈತ್, ಒಮನ್, ಬಹರೇನ್, ಕತಾರ್, ಸೌದಿಅರೇಬಿಯಾ ಹಾಗೂ ಯುಎಇಯನ್ನು ಒಳಗೊಂಡಿದೆ.
- ಇದು ಆರ್ಥಿಕ ಭದ್ರತೆ, ಸಾಂಸ್ಕøತಿಕ ಹಾಗೂ ಸಾಮಾಜಿಕ ಸಹಕಾರಗಳನ್ನು ಆರು ದೇಶಗಳ ನಡುವೆ ಬಲಗೊಳಿಸುವ ಗುರಿ ಹೊಂದಿದೆ. ಪ್ರಾದೇಶಿಕ ವ್ಯವಹಾರಗಳ ಸಹಕಾರ ವಿಚಾರದ ಬಗ್ಗೆ ಚರ್ಚಿಸಲು ವಾರ್ಷಿಕವಾಗಿ ಶೃಂಗಸಭೆ ನಡೆಸುತ್ತವೆ.
- ಜಿಸಿಸಿ ಒಪ್ಪಂದಕ್ಕೆ 1981ರಲ್ಲಿ ಸಹಿ ಮಾಡಲಾಗಿದ್ದು, ಆಗ ಇದು ವಿಧ್ಯುಕ್ತವಾಗಿ ಚಾಲನೆ ಪಡೆದಿದೆ. ಇದರ ಕೇಂದ್ರ ಕಚೇರಿ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‍ನಲ್ಲಿದೆ.
- ಜಿಸಿಸಿಯ ಎಲ್ಲ ಸದಸ್ಯ ದೇಶಗಳು ರಾಜಪ್ರಭುತ್ವವನ್ನು ಹೊಂದಿದ್ದು, ಇದರಲ್ಲಿ ಕುವೈತ್, ಕತಾರ್ ಮತ್ತು ಬಹರೈನ್‍ನಲ್ಲಿ ಸಂವಿಧಾನಾತ್ಮಕ ರಾಜಪ್ರಭುತ್ವವಿದೆ. ಒಮನ್ ಮತ್ತು ಸೌದಿ ಅರೇಬಿಯಾ ಹೀಗೆ ಎರಡು ಸಂಪೂರ್ಣ ರಾಜಪ್ರಭುತ್ವ ಹೊಂದಿದ್ದರೆ, ಯುಎಪಿ ಒಕ್ಕೂಟ ರಾಜಪ್ರಭುತ್ವವನ್ನು ಹೊಂದಿದೆ. ಇದರಲ್ಲಿ ಏಳು ರಾಜ್ಯಗಳಿದ್ದು, ತನ್ನದೇ ಅಮೀರ್‍ಗಳನ್ನು ಇವು ಹೊಂದಿರುತ್ತವೆ.
ಪ್ರಮುಖ ವಿಶ್ಲೇಷಣೆ (ಮುಖ್ಯ ಪರೀಕ್ಷೆಗಾಗಿ )
- ಕತಾರ್ ಮತ್ತು ಸೌದಿ ಅರೇಬಿಯಾ, ಬಹ್ರೇನ್ ಮತ್ತು ಯುಎಇ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಸಮುದಾಯದಿಂದ ಉಂಟಾದ ಕಳವಳದ ನಂತರ 38 ನೇ GCC ಶೃಂಗಸಭೆ ಈ ವಾರ ಕುವೈಟ್ ಸಿಟಿಯಲ್ಲಿ ನಡೆಯಿತು. ಸಭೆ ಆರಂಭಗೊಂಡ ಕೇವಲ ಹದಿನೈದು ನಿಮಿಷಗಳ ನಂತರ ಅದು ಹಠಾತ್ ಅಂತ್ಯಗೊಂಡಿತು.
- ಕತಾರ್ ಬಿಕ್ಕಟ್ಟಿನಲ್ಲಿ ಶೇಖ್ ಸಬಾಹ್ ಅಲ್ ಅಹ್ಮದ್ ಅಲ್-ಜಬೇರ್ ಅಲ್-ಸಬಾಹ್, ಎಮಿರ್ ಶೇಖ್ ತಮೀಮ್ ಬಿನ್ ಹಮಾದ್ ಅಲ್ ಥಾನಿ ಮತ್ತು ಎಮಿರ್ ಆಫ್ ಕುವೈತ್ ಮತ್ತು ಅತಿಥೇಯರು ಆಗಿದ್ದಾರೆ. ಅವರು ಬಿಕ್ಕಟ್ಟು ಶಮನಕ್ಕೆ ಮಧ್ಯಸ್ಥಿಕೆ ವಹಿಸಿಕೊಂಡಿದ್ದಾರೆ. ಆದರೆ ನಿರ್ಬಂಧ ಹೇರಿರುವ ದೇಶಗಳ ಯಾವುದೇ ಪ್ರಮುಖರು ಭಾಗಿಯಾಗಿರಲಿಲ್ಲ.
- ಕುವೈಟ್ ಶೃಂಗಸಭೆಯ ಕಾರ್ಯಸೂಚಿಯನ್ನು ಬಹಿರಂಗ ಪಡಿಸಿರಲಿಲ್ಲ. ಆದರೆ ಗಲ್ಫ್ ಬಿಕ್ಕಟ್ಟನ್ನು ಅದರ ಆದ್ಯತೆಯೆಂದು ಉಲ್ಲೇಖಿಸಲಾಗಿತ್ತು . ಈ ಬೆಳವಣಿಗೆ ಜಿಸಿಸಿಯ ಸಂರಚನೆಯನ್ನೇ ಗುಮಾನಿಯಿಂದ ನೋಡುವಂತೆ ಮಾಡಿದೆ. ಯುಎಸಿಯು ತಾನು ಸೌದಿ ಅರೇಬಿಯಾದೊಂದಿಗೆ ಹೆಚ್ಚಿನ ಆರ್ಥಿಕಮ ರಾಜಕೀಯ ಮತ್ತು ಮಿಲಿಟರಿ ಒಪ್ಪಂದಗಳನ್ನು ಪ್ರತ್ಯೇಕವಾಗಿ ಮಾಡಿಕೊಳ್ಳುವುದಾಗಿ ಹೇಳಿದ್ದು ಯುಎಇ ಅಧ್ಯಕ್ಷ ಮತ್ತು ಅಬುಧಾಬಿ ಆಡಳಿತಗಾರ ಶೇಖ್ ಖಲೀಫಾ ಬಿನ್ ಜಾಯೆದ್ “ಜಂಟಿ ಸಹಕಾರ ಸಮಿತಿ”ಯನ್ನು ಅನುಮೋದಿಸಿದ್ದಾರೆ. ಯುಎಇಯ ಯುವ ರಾಜ ಹಮ್ದಾನ್ ಬಿನ್ ಅಲ್ ಮಕ್ತೂನ್ ಮತ್ತು ಸೌದಿ ಅರೇಬಿಯಾ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಹತ್ತಿರದ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ ಮತ್ತು ಇರಾನ್ ವಿರುದ್ಧ ಸಂಘರ್ಷದ ನಿಲುವು ತಾಳಿದ್ದಾರೆ ಎಂದು ಹೇಳಲಾಗಿದೆ.
- ಜಿಸಿಸಿ ರಚನೆಯು ‘ಸವಾಲಿಗಳನ್ನು ಎದುರಿಸಲು ಉತ್ತಮ ಪ್ರಕ್ರಿಯೆಗಳನ್ನು’ ಹೊಂದುವ ರೀತಿಯಲ್ಲಿ ಬದಲಾಗಬೇಕು ಮತ್ತು ಜಿಸಿಸಿ ಯೊಳಗಿನ ಆಂತರಿಕ ಬಿಕ್ಕಟ್ಟನ್ನು ನಿಭಾಯಿಸಲು ಒಂದು ಕಾರ್ಯಪಡೆ ಸ್ಥಾಪಿಸುವ ಸಾಧ್ಯತೆಯಿದೆ ಎಂದು ಶೇಖ್ ಸಬಾ ಘೋಷಿಸಿದ್ದಾರೆ. ಕುವೈಟ್ ನಲ್ಲಿ ನಡೆದ 38 ನೇ ವಾರ್ಷಿಕ ಜಿಸಿಸಿ ಶೃಂಗಸಭೆಯು ಕತಾರ್ ನ ಮೇಲೆ ನಿರ್ಬಂಧ ಹೇರಿದ ಸೌದಿ ನೇತೃತ್ವದ ಅದರ ಮಿತ್ರರಾಷ್ಟ್ರುಗಳ ನಡೆ ಘಟಿಸಿದ ಆರು ತಿಂಗಳ ಬಳಿಕ ನಡೆದಿದೆ. ಅದಾಗ್ಯೂ 144 ನೇ ಜಿಸಿಸಿ ವಿದೇಶಾಂಗ ಮಂತ್ರಿಗಳ ಸಭೆ ಕುವೈತ್ ನಲ್ಲಿ ನಡೆದಾಗ ಎಲ್ಲ ಆರು ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರು ಭಾಗವಹಿಸಿದ್ದರು.
- ಜಿಸಿಸಿ ಸಭೆಯ ಬಹಿಷ್ಕಾರವು ನಿರ್ಬಂಧ ಹೇರಿದ ಮೂರು ದೇಶಗಳು ಪ್ರಸಕ್ತ ಸ್ವರೂಪದಲ್ಲಿ ಜಿಸಿಸಿಗೆ ಯಾವುದೇ ಭವಿಷ್ಯವಿಲ್ಲ ಎಂಬುದನ್ನು ಭಾವಿಸಿರುವ ಸ್ಪಷ್ಟ ಸೂಚನೆ. ಈ ನಡೆಯು ಜಿಸಿಸಿಯ ಅಸ್ತಿತ್ವವನ್ನು ನಗಣ್ಯಗೊಳಿಸಲಿದೆ ಮತ್ತು ಮತ್ತು ಕುವೈಟ್ ನ ಮಧ್ಯಸ್ಥಿಕೆಯ ಭರವಸೆಗೆ ಕಲ್ಲು ಹಾಕಬಹುದಾಗಿದೆ.
- ಬಹಿಷ್ಕಾರದ ಆರಂಭದಲ್ಲಿ ಕತಾರ್ ಅನ್ನು ದೂಷಿಸಲಾಗುತ್ತು. ಆದರೆ ದೋಹಾವು ತನ್ನ ಆರ್ಥಿಕತೆಯಲ್ಲಿ ತಿದ್ದುಪಡಿ ಮಾಡಿತನ್ನ ಕಾರ್ಯತಂತ್ರಗಳ ಆಯ್ಕೆಗಳನ್ನು ತ್ವರಿತವಾಗಿ ಸರಿಹೊಂದಿಸಿ ತಾನು ಮಾತುಕತೆಗಳಿಗೆ ಇನ್ನೂ ಮುಕ್ತವಾಗಿದ್ದೇನೆ ಎಂಬ ಸಂದೇಶವನ್ನು ರವಾನಿಸಿತು. ಫ್ರಾನ್ಸ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳೊಂದಿಗೆ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಂಡು ಟರ್ಕಿ ಮತ್ತು ಇರಾನ್ ಜೊತೆ ಸಾರಿಗೆ ಮತ್ತು ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿದ ಕತಾರ್ ತನ್ನನ್ನು ಏಕಾಂಗಿಯನ್ನಾಗಿಸಿ ಕಟ್ಟಿ ಹಾಕುವ ಪ್ರಯತ್ನ ಪರಿಣಾಮ ಬೀರದು. ಬದಲಾಗಿ ತಾನು ಇರಾನ್ ಜೊತೆ ಇನ್ನಷ್ಟು ಆತ್ಮೀಯಗೊಂಡು ಸೌದಿ ನೇತೃತ್ವದ ದೇಶಗಳ ಬಹಿಷ್ಠಾರ ಅವುಗಳಿಗೇ ತಿರುಗುಬಾಣವಾಗುವ ನಡೆಯನ್ನು ಪ್ರದರ್ಶಿಸಿದೆ. ಕತಾರ್ ನಲ್ಲಿ ಯುಎಸ್ ಮತ್ತು ಟರ್ಕಿಯ ಮಿಲಿಟರಿ ನೆಲೆಗಳಿರುವ ಕಾರಣದಿಂದ ಮಿಲಿಟರಿ ಹಸ್ತಕ್ಷೇಪ ನಡೆಸುವುದು ಸೌದಿ ಮತ್ತದರ ಮಿತ್ರರಾಷ್ಟ್ರಗಳಿಗೆ ಅಸಾಧ್ಯ
- ಹೆಚ್ಚುವರಿಯಾಗಿ, ಮತ್ತೊಂದು ವಿವಾದದ ವಿಷಯವೆಂದರೆ ಯೆಮೆನ್ ನಲ್ಲಿ, 2015 ರಿಂದ ಸೌದಿ ನೇತೃತ್ವದ ಹಸ್ತಕ್ಷೇಪವು ಅಲ್ಲಿ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ. ಈ ವಾರ ಹೌತಿ ಬಂಡುಕೋರರಿಂದ ಮಾಜಿ ಯೆಮೆನಿ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ರ ಹತ್ಯೆ ನಡೆಯುವುದರೊಂದಿಗೆ ಸೌದಿಗಳು ತಮ್ಮ ಅತಿದೊಡ್ಡ ಹಿನ್ನಡೆ ಪಡೆದರು. ಇರಾನ್ ಬೆಂಬಲದೊಂದಿಗೆ ಹೂತೈಸ್ ಗೆ ಕತಾರ್ ನೆರವು ನೀಡುತ್ತಿದೆ ಎಂಬ ಟೀಕೆಗಳು ವ್ಯಕ್ತವಾದವು.
- ಈ ಪ್ರದೇಶದಲ್ಲಿ ರಾಜತಾಂತ್ರಿಕ ಬಿಕ್ಕಟ್ಟನ್ನು ಬಗೆಹರಿಸಲು ಪಾಶ್ಚಾತ್ಯ ಶಕ್ತಿಗಳ ಅಸಮರ್ಥತೆ ಮತ್ತು ಕತಾರ್ ಮತ್ತು ಲೆಬನಾನ್ ನಂತಹ ಸಣ್ಣ ರಾಷ್ಟ್ರಗಳ ಹೆಚ್ಚುತ್ತಿರುವ ಪ್ರತಿರೋಧ ಪ್ರಾದೇಶಿಕ ರಾಷ್ಟ್ರಗಳ ಪೈಪೋಟಿಗೆ ಕಾರಣವಾಗಿದೆ. ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಅವರು ಕತಾರ್ ಬಿಕ್ಕಟ್ಟನ್ನು “ಒಂದು ಸಣ್ಣ ಸಮಸ್ಯೆ” ಎಂದು ಕರೆದಿದ್ದು ಕತಾರ್ ನತ್ತ ಆ ಮೂಲಕ ಇರಾನ್ ವಿರುದ್ಧದ ಕಠಿಣ ಕ್ರಮಗಳು ಮುಂದುವರಿಯಲಿದೆ ಎಂಬ ಸಂದೇಶ ನೀಡಿದ್ದಾರೆ. ವಮುಂದುವರಿಯುತ್ತದೆ ಎಂದು ತೋರುತ್ತದೆ.
- ಪರ್ಷಿಯನ್ ಕೊಲ್ಲಿಯ ಪರಿಸ್ಥಿತಿಯು ಹೆಚ್ಚು ಉದ್ವಿಗ್ನತೆಯನ್ನು ತೋರುತ್ತಿರುವಾಗ, ಪ್ರದೇಶದ ಎಲ್ಲ ದೇಶಗಳೊಂದಿಗೆ ಬಲವಾದ ಆರ್ಥಿಕ ಮತ್ತು ರಾಜಕೀಯ ಸಂಬಂಧಗಳನ್ನು ಹೊಂದಿರುವ ಭಾರತವು ಪ್ರಾದೇಶಿಕ ಶಕ್ತಿಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಭಾರತ ಕಾಲಕಾಲಕ್ಕೆ ಕರೆ ನೀಡಿದೆ. ಹೊಸ ದೆಹಲಿಯ ಬಗ್ಗೆ ಜಿ.ಸಿ.ಸಿ ನಾಯಕತ್ವಕ್ಕೆ ಭಾರಿ ಗೌರವವಿದೆ. ಭಾರತ ತೈಲ ಮತ್ತು ಅನಿಲ ಆಮದುಗಳಿಗಾಗಿ ಈ ಪ್ರದೇಶವನ್ನು ಅವಲಂಬಿಸಿದೆ ಮತ್ತು ಭಾರತದ ದೊಡ್ಡ ವಲಸಿಗ ಜನಸಂಖ್ಯೆಯು $ 50 ಶತಕೋಟಿ ಮೌಲ್ಯದ ಹಣವನ್ನು ಭಾರತಕ್ಕೆ ರವಾನೆ ಮಾಡುತ್ತಿದೆ.
- ಸಮತೋಲನವನ್ನು ಹಾಳುನ ಮಾಡುವ ಬೆಳವಣಿಗೆಗಳು ತೈಲ ಮತ್ತು ಅನಿಲ ಸರಬರಾಜಿಗೆ ತೊಂದರೆ ಮಾಡಿದರೆ, ಭಾರತದ ನಾಗರಿಕರಿಗೆ ಹಾನಿಯಾದರೆ ಗಲ್ಫ್ ಯುದ್ಧದ ಸಂದರ್ಭದಲ್ಲಿ ಆದಂತೆ ಭಾರತೀಯರಿಗೆ ಕಷ್ಟವಾಗಬಹುದು.
- ಪರ್ಷಿಯಾದ ಕೊಲ್ಲಿಯು ಮಧ್ಯಪ್ರಾಚ್ಯದಲ್ಲಿ ಭಾರತದ ಅತಿ ದೊಡ್ಡ ವ್ಯಾಪಾರಿ ಪಾಲುದಾರನಾಗಿ ಉಳಿದಿದೆ. ಗಲ್ಫ್ ರಾಷ್ಟ್ರಗಳ ಆಂತರಿಕ ವ್ಯವಹಾರಗಳಲ್ಲಿ ಹೊರಗಿನ ಆಟಗಾರರ ಹಸ್ತಕ್ಷೇಪವಿಲ್ಲದೆಯೇ ಪ್ರಾದೇಶಿಕ ಸ್ಥಿರತೆಗಾಗಿ ಕರೆದೊಯ್ಯುವ ಮೂಲಕ ಭಾರತವನ್ನು ಪ್ರಬುದ್ಧತೆಗೆ ಒಳಪಡಿಸುವುದಕ್ಕಾಗಿ ಭಾರತವು ಮುಕ್ತಾಯವನ್ನು ಪ್ರದರ್ಶಿಸಿದೆ. ಅಂತಹ ಒಂದು ಕಾರ್ಯತಂತ್ರದ ನಿರಂತರತೆ ಈ ಸಮಯದಲ್ಲಿ ಪ್ರಮುಖ ಮತ್ತು ಅನಿವಾರ್ಯವಾಗಿದೆ.
SCIENCE AND TECHNOLOGY-ವಿಜ್ಞಾನ ಮತ್ತು ತಂತ್ರ ಜ್ಞಾನ
- ಸೂಪರ್‍ಸಾನಿಕ್ ಆಕಾಶ್ ಕ್ಷಿಪಣಿ ಪರೀಕ್ಷೆ ಯಶಸ್ವಿ
ಪ್ರಮುಖ ಸುದ್ದಿ
- ದೇಶೀಯವಾಗಿ ನಿರ್ಮಿಸಲಾಗಿರುವ ಭೂ ಮೇಲ್ಮೈನಿಂದ ಆಕಾಶಕ್ಕೆ ಚಿಮ್ಮುವ ಸೂಪರ್ ಸಾನಿಕ್ ಆಕಾಶ್ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
- ಒಡಿಶಾದ ಚಾಂದಿಪುರ್ನಲ್ಲಿರುವ ಪರೀಕ್ಷಾ ವಲಯದಿಂದ ಯಶಸ್ವಿಯಾಗಿ ಕ್ಷಿಪಣಿಯ ಪರೀಕ್ಷೆ ನಡೆಸಲಾಯಿತು. ಆಕಾಶ್ ಕ್ಷಿಪಣಿಯಲ್ಲಿ ತರಂಗಾಂತರಗಳನ್ನು ಸ್ವೀಕರಿಸುವ ತಂತ್ರಜ್ಞಾನವನ್ನು ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿದೆ.
- ಇದು ಭೂಮಿಯ ಮೇಲ್ಮೈನಿಂದ ಗಾಳಿಗೆ ಚಿಮ್ಮುವ ಮೊಟ್ಟಮೊದಲ ಸೂಪರ್‍ಸಾನಿಕ್ ಕ್ಷಿಪಣಿಯಾಗಿದ್ದು, ದೇಶೀಯವಾಗಿ ಅಭಿವೃದ್ಧಿಪಡಿಸಿದ ಸೀಕರ್‍ನಿಂದ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು. ಇದರಿಂದಾಗಿ ಭಾರತ ಯಾವುದೇ ಬಗೆಯ ಮೇಲ್ಮೈ ಕ್ಷಿಪಣಿಯನ್ನು ತಡೆಯುವ ಸಾಮಥ್ರ್ಯವನ್ನೂ ಹೊಂದಲಿದೆ.
ಆಕಾಶ್ ಕ್ಷಿಪಣಿ ಬಗ್ಗೆ
- ಆಕಾಶ್ ಕ್ಷಿಪಣಿ 55 ಕೆ.ಜಿ. ಸಿಡಿತಲೆ ಹೊತ್ತು 25 ಕಿ.ಮೀ. ದೂರದ ಗುರಿಯನ್ನು ನಿಖರವಾಗಿ ತಲುಪುವ ಸಾಮರ್ಥ್ಯ ಹೊಂದಿದೆ. ಎಲ್ಲಾ ವಿಧದ ಹವಾಗುಣದಲ್ಲಿ ಈ ಕ್ಷಿಪಣಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತದೆ. ಈ ಕ್ಷಿಪಣಿ ವ್ಯವಸ್ಥೆ ಸಂಪೂರ್ಣವಾಗಿ ಸ್ವಯಂ ಚಾಲಿತವಾಗಿದ್ದು, ಆಕಾಶದ ಯಾವುದೇ ದಿಕ್ಕಿನಿಂದ ದಾಳಿ ನಡೆದರೂ ಸಹ ಅದನ್ನು ತಡೆಯುತ್ತದೆ. ಜತೆಗೆ ಈ ಕ್ಷಿಪಣಿ ವ್ಯವಸ್ಥೆ ವಿಮಾನ, ಎಲ್ಲಾ ವಿಧದ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
- ಆಕಾಶ್ ಕ್ಷಿಪಣಿಯನ್ನು ಶೀಘ್ರದಲ್ಲೇ ಸೇನೆಗೆ ಸೇರ್ಪಡೆ ಮಾಡಲಾಗುವುದು. ಈ ಕ್ಷಿಪಣಿಯ ಯಶಸ್ವಿ ಪರೀಕ್ಷೆಯಿಂದ ಭಾರತ ಯಾವುದೇ ವಿಧದ ಭೂ ಮೇಲ್ಮೈನಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಯನ್ನು ನಿರ್ಮಿಸಲು ಸಮರ್ಥವಾಗಿದೆ ಎಂಬುದು ಸಾಬೀತಾಗಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.
- ಅಂತರರಾಷ್ಟ್ರೀಯ ಹವಾಮಾನ ಬದಲಾವಣೆ ಸಮ್ಮೇಳನ (International Climate Change Conference)
ಪ್ರಮುಖ ಸುದ್ದಿ
- ಇತ್ತೀಚೆಗೆ ನೇಪಾಳದಲ್ಲಿ ಅಂತರರಾಷ್ಟ್ರೀಯ ಹವಾಮಾನ ಬದಲಾವಣೆ ಕುರಿತ ಸಮ್ಮೇಳನ ನಡೆಯಿತು. ರಿಸಿಲಿಯೆಂಟ್ ಹಿಂದು ಖುಷ್ ಹಿಮಾಲಯ: ಡೆವಲಪಿಂಗ್ ಸೊಲ್ಯೂಶನ್ಸ್ ಟವಡ್ರ್ಸ್ ಎ ಸಸ್ಟೈನೇಬಲ್ ಫ್ಯೂಚರ್ ಆಫ್ ಏಷ್ಯಾ” ಎಂಬ ಶೀರ್ಷಿಕೆಯಡಿ ಇದನ್ನು ಆಯೋಜಿಸಲಾಗಿದೆ.
- ಇದನ್ನು ನೇಪಾಳದ ಪರಿಸರ ಸಚಿವಾಲಯವು ಅಂತರರಾಷ್ಟ್ರೀಯ ಸಮಗ್ರ ಪರ್ವತ ಅಭಿವೃದ್ಧಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿತ್ತು.
ಪ್ರಮುಖ ಸಂಗತಿಗಳು
- ಈ ಸಮ್ಮೇಳನದ ಮುಖ್ಯ ಉದ್ದೇಶವೆಂದರೆ, ಏಷ್ಯಾಖಂಡದ ಸುಸ್ಥಿರ ಅಭಿವೃದ್ಧಿ ಭವಿಷ್ಯಕ್ಕಾಗಿ ವಾತಾವರಣವನ್ನು ಸಜ್ಜುಗೊಳಿಸುವುದು ಹಾಗು ಹವಾಮಾನ ಬದಲಾವಣೆಯ ಪರಿಣಾಮವನ್ನು ಕನಿಷ್ಠಗೊಳಿಸುವುದು.
- ಇದಕ್ಕೆ ಪೂರಕವಾದ ಕಟ್ಟಡಗಳನ್ನು ನಿರ್ಮಿಸುವುದು, ಪ್ರಾದೇಶಿಕ ಸಹಕಾರವನ್ನು ಹೆಚ್ಚಿಸುವುದು ಹಾಗೂ ಮಾಹಿತಿಗಳ ಅಂತರವನ್ನು ಕಡಿಮೆ ಮಾಡುವುದು ಇದರ ಮುಖ್ಯವಾದ ಉದ್ದೇಸವಾಗಿದೆ.
- ಈ ಸಮ್ಮೇಳನದಲ್ಲಿ 300ಕ್ಕೂ ಅಧಿಕ ತಜ್ಞರು ಏಷ್ಯಾದ ವಿವಿಧ ದೇಶಗಳಿಂದ ಆಗಮಿಸಿದ್ದರು. ಭಾರತ, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ ಮತ್ತು ಮ್ಯಾನ್ಮಾರ್ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಹಿಂದು ಖುಷ್ ಹಿಮಾಲಯದ ಬಗ್ಗೆ
- ಹಿಂದು ಖುಷ್ ಹಿಮಾಲಯ ಎನ್ನುವುದು ಒಂದು ಪರ್ವತ ಶ್ರೇಣಿಯಾಗಿದ್ದು, ಇದು ಅಪ್ಘಾನಿಸ್ತಾನದಿಂದ ಮ್ಯಾನ್ಮಾರ್‍ವರೆಗೆ ಹಬ್ಬಿದೆ. ಇದು ಪ್ರಮುಖ 10 ನದಿಗಳ ವ್ಯವಸ್ಥೆಗೆ ಮೂಲವಾಗಿದ್ದು, ಪರಿಸರ ಸೇವೆಗಳು ಹಾಗೂ ಜೀವನಾಧಾರಕ್ಕಾಗಿ 210 ದಶಲಕ್ಷ ಮಂದಿಗೆ ಅವಕಾಶವನ್ನು ಮತ್ತು ನೀರನ್ನು ಒದಗಿಸುತ್ತವೆ.
- ಈ ಭಾಗವು ಕೆಳಭಾಗದ ಜನರಿಗಾಗಿ ಸುಮಾರು 130 ಶತಕೋಟಿ ಮಂದಿಯ ನೀರಿನ ಅಗತ್ಯತೆಗಳನ್ನು ಪೂರೈಸಲು ಶಕ್ತವಾಗಲಿದೆ.
- ಭಾರತವು ಟ್ರಕೋಮಾ ಸೋಂಕು ಮುಕ್ತ ರಾಷ್ಟ್ರ: ಕೇಂದ್ರ
ಪ್ರಮುಖ ಸುದ್ದಿ
- ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಾಡ್ಡಾ ಅವರು ಮಕ್ಕಳಲ್ಲಿ ಸಾಂಕ್ರಾಮಿಕ ಕುರುಡುತನಕ್ಕೆ ಪ್ರಮುಖ ಕಾರಣವಾಗುವ ಸೋಂಕು ಟ್ರಕೋಮಾ ದಿಂದ ಭಾರತ ಮುಕ್ತವಾಗಿದೆ ಎಂದು ಘೋಷಿಸಿದ್ದಾರೆ.
- ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್) ನ ನೇತ್ರವಿಜ್ಞಾನ ವಿಭಾಗದಲ್ಲಿ ನೆರೆದಿದ್ದ ಹಿರಿಯ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ಸಚಿವರು ಈ ಘೋಷಣೆ ಮಾಡಿದ್ದಾರೆ.
ಪ್ರಮುಖ ಸಂಗತಿಗಳು
- “ಸಮೀಕ್ಷೆ ನಡೆಸಿದ್ದ ಎಲ್ಲಾ ಜಿಲ್ಲೆಗಳಲ್ಲಿ ಒತ್ಟಾರೆ ಕೇವಲ ಶೇ. 7ರಷ್ಟು ಮಕ್ಕಳಲ್ಲಿ ಮಾತ್ರವೇ ಈ ಟ್ರಕೋಮಾ ಸೋಂಕು ಕಂಡು ಬಂದಿದೆ. ಇದು ಡಬ್ಲ್ಯೂಎಚ್ ಓ ನಿಂದ ವ್ಯಾಖ್ಯಾನಿಸಲ್ಪಟ್ಟಿರುವ ಟ್ರಾಕೊಮಾದ ಸೋಂಕಿನ ಮಾನದಂಡಕ್ಕಿಂತ ಕಡಿಮೆಯಾಗಿದೆ.
- ಸಮೀಕ್ಷೆಯ ಪ್ರಕಾರ, ಮಕ್ಕಳಲ್ಲಿ ಸಕ್ರಿಯ ಟ್ರಾಕೊಮಾ ಸೋಂಕು ಕಾಣಿಸಿಕೊಂಡಿಲ್ಲ.” ಎಂದು ಸಚಿವ ನಾಡ್ಡಾ ಹೇಳಿದ್ದಾರೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಕ್ರಿಯ ಸೋಂಕಿನ ಪ್ರಮಾಣವು ಶೇಕಡಾ 5 ಕ್ಕಿಂತ ಕಡಿಮೆಯಿದ್ದರೆ ಅಂತಹಾ ದೇಶವನ್ನು ಟ್ರಕೋಮಾ ಸೋಂಕು ಮುಕ್ತ ಪ್ರದೇಶವೆಂದು ಘೊಷಿಸಲಾಗುತ್ತದೆ.
- ವೈದ್ಯಕೀಯ ವಿಜ್ಞಾನಗಳ ಪ್ರಕಾರ, ಟ್ರಕೋಮಾ ಕಣ್ಣಿನ ದೀರ್ಘಕಾಲದ ಸೋಂಕಿನ ಕಾಯಿಲೆಯಾಗಿದ್ದು, ಮಕ್ಕಳಲ್ಲಿ ಕುರುಡುತನ ಕಾಣಿಸಿಕೊಳ್ಳುವ ಪ್ರಮುಖ ಕಾರಣವಾಗಿದೆ. ಕಲುಷಿತ ಪರಿಸರ ಮತ್ತು ನೈರ್ಮಲ್ಯ ಕೊರತೆ ಯಿಂದಾಗಿ ಈ ಸೋಂಕು ಕಾಣಿಸಿಕೊಳ್ಳುತ್ತದೆ.
ಪ್ರಮುಖ ಸುದ್ದಿ
- ವಿಶ್ವ ಸಾಂಸ್ಕೃತಿಕ ಉತ್ಸವ ಆಯೋಜಿಸಿ ಯಮುನಾ ನದಿ ದಂಡೆಯ ಪರಿಸರಕ್ಕೆ ಹಾನಿಯಾಗಿರುವುದಕ್ಕೆ ಶ್ರೀಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಹೊಣೆ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ(ಎನ್‌ಜಿಟಿ) ಹೇಳಿದೆ.
ಪ್ರಮುಖ ಸಂಗತಿಗಳು
- ದೆಹಲಿಯ ಹೊರವಲಯದಲ್ಲಿರುವ ಯಮುನಾ ನದಿ ದಂಡೆಯ ಮೇಲೆ ಆರ್ಟ್ ಆಫ್ ಲಿವಿಂಗ್ 2016ರ ಮಾರ್ಚ್‌ನಲ್ಲಿ ಸಾಂಸ್ಕೃತಿಕ ಉತ್ಸವ ಆಯೋಜಿಸಿತ್ತು.
- ಎನ್‌ಜಿಟಿಯ ಅಧ್ಯಕ್ಷ ಸ್ವತಂತ್ರ ಕುಮಾರ್ ಅವರ ನೇತೃತ್ವದ ಪೀಠ, ಯಮುನಾ ತೀರದಲ್ಲಿ ವಿಶ್ವ ಸಂಸ್ಕೃತಿ ಉತ್ಸವ ಆಯೋಜನೆಯಿಂದ ಅಲ್ಲಿನ ಪರಿಸರಕ್ಕೆ ಹೆಚ್ಚಿನ ಹಾನಿಯಾಗಿದೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆ ದಂಡ ಪಾವತಿ ಮಾಡಿದ ಬಳಿಕ, ಆ ಹಣವನ್ನು ನದಿ ತಿರದ ಪರಿಸರ ಪುನರುಜ್ಜೀವನ ಯೋಜನೆಗಳಿಗೆ ಬಳಸುವಂತೆ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ(ಡಿಡಿಎ) ಸೂಚಿಸಿದೆ.
- ಪರಿಸರ ಹಾನಿ ಮಧ್ಯಂತರ ಪರಿಹಾರವಾಗಿ ಆರ್ಟ್ ಆಫ್ ಲಿವಿಂಗ್‌ಗೆ ಈಗ ಯಾವುದೆ ಹೆಚ್ಚುವರಿ ದಂಡ ವಿಧಿಸುವುದಿಲ್ಲ. ಎನ್‌ಜಿಟಿ ಈ ಹಿಂದೆ ವಿಧಿಸಿದ್ದ ₹ 5 ಕೋಟಿ ಪರಿಸರ ಹಾನಿ ಪರಿಹಾರವನ್ನು ನದಿ ತೀರದ ಪರಿಸರ ಪುನರುಜ್ಜೀವನಗೊಳಿಸಲು ಬಳಸಿ ಎಂದು ಪೀಠ ಹೇಳಿದೆ.
- ‘ತಜ್ಞ ಸಮಿತಿಯಿಂದ ಸಲ್ಲಿಸಿದ ವರದಿಯ ಪ್ರಕಾರ, ಯಮುನಾ ತೀರಕ್ಕೆ ಹಾನಿಯಾಗುವ ಕುರಿತು ನಾವು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯನ್ನು ಜವಾಬ್ದಾರರನ್ನಾಸುತ್ತೇವೆ’ ಎಂದು ಪೀಠ ಹೇಳಿದೆ.
- ನ್ಯಾಯಮೂರ್ತಿ ಜಾವದ್ ರಹೀಮ್ ಮತ್ತು ತಜ್ಞ ಸದಸ್ಯರಾದ ಬಿ.ಎಸ್. ಸಜ್ವಾನ್ ಅವರನ್ನೊಳಗೊಂಡ ಪೀಠ, ನದಿ ತೀರದಲ್ಲಿ ಉಂಟಾದ ಹಾನಿಯನ್ನು ನಿರ್ಣಯಿಸಲು ಮತ್ತು ತಜ್ಞರ ಸಮಿತಿಯ ಶಿಫಾರಸಿನ ಅನುಸಾರವಾಗಿ ಪುನಃ ವೆಚ್ಚವನ್ನು ಲೆಕ್ಕಹಾಕಲು ಡಿಡಿಎಗೆ ನಿರ್ದೇಶನ ನೀಡಿದೆ.
- ವಿಶ್ವ ಸಾಂಸ್ಕೃತಿಕ ಉತ್ಸವದಿಂದಾಗಿ ಯಮುನಾ ನದಿ ತೀರ ಹಾನಿಗೊಳಗಾಗಿದೆ ಎಂದು ಎನ್‌ಜಿಟಿ ರಚಿಸಿದ್ದ ತಜ್ಞರ ಸಮಿತಿ ವರದಿ ಸಲ್ಲಿಸಿದ್ದರಿಂದ ನದಿ ತೀರದ ಪುನರುಜ್ಜೀವನಕ್ಕಾಗಿ ಪರಿಸರ ಪರಿಹಾರದ ರೂಪದಲ್ಲಿ 42 ಕೋಟಿ ದಂಡ ಪಾವತಿಸಬೇಕು ಎಂದು ಎನ್‌ಜಿಟಿ ಈ ಹಿಂದೆ ಆದೇಶಿಸಿತ್ತು.
ಯಮುನಾ ನದಿ ಬಗ್ಗೆ
- ಯಮುನಾ ನದಿಯು ಗಂಗಾ ನದಿಯ ಒಂದು ಪ್ರಮುಖ ಉಪನದಿ. ಯಮುನೆಯ ಉಗಮಸ್ಥಾನ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ಯಮುನೋತ್ರಿ. ಯಮುನೋತ್ರಿಯಿಂದ ಸುಮಾರು ೧೩೭೦ ಕಿ.ಮೀ. ಪ್ರವಹಿಸಿದ ನಂತರ ಉತ್ತರಪ್ರದೇಶದ ಅಲಹಾಬಾದ್ (ಪ್ರಯಾಗ)ದಲ್ಲಿ ಯಮುನಾ ನದಿಯು ಗಂಗಾ ನದಿಯನ್ನು ಕೂಡಿಕೊಳ್ಳುತ್ತದೆ.
- ತನ್ನ ಹಾದಿಯಲ್ಲಿ ಯಮುನೆಯು ಉತ್ತರಾಖಂಡ, ಹರ್ಯಾಣ, ದೆಹಲಿ ಹಾಗೂ ಉತ್ತರಪ್ರದೇಶ ರಾಜ್ಯಗಳಲ್ಲಿ ಹರಿಯುವಳು. ದೆಹಲಿ, ಮಥುರಾ ಮತ್ತು ಆಗ್ರಾ ಯಮುನಾ ನದಿಯ ತೀರದ ಪ್ರಮುಖ ಪಟ್ಟಣಗಳು.
- ಗಂಗಾ ನದಿಯ ಅತ್ಯಂತ ದೊಡ್ಡ ಉಪನದಿಯಾದ ಯಮುನಾ ನದಿಗೆ ಉಪನದಿಗಳು ಹಲವು. ಇವುಗಳಲ್ಲಿ ಮುಖ್ಯವಾದುವೆಂದರೆ- ಚಂಬಲ್ , ಬೇತ್ವಾ , ತೋನ್ಸ್ ಮತ್ತು ಕೇನ್. ಇವುಗಳಲ್ಲಿ ತೋನ್ಸ್ ಎಲ್ಲಕ್ಕಿಂತ ಉದ್ದವಾದುದು.
OTHERS-ಇತರೆ ವಿಷಯಗಳು
- ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಕುಂಭಮೇಳ
ಪ್ರಮುಖ ಸುದ್ದಿ
- ಭಾರತದಲ್ಲಿ ಪ್ರತಿವರ್ಷ ನಡೆಯುವ ಕುಂಭಮೇಳವನ್ನು ‘ಮನುಕುಲದ ಅತ್ಯಂತ ವಿಶಿಷ್ಟ ಸಾಂಸ್ಕೃತಿಕ ಪರಂಪರೆ’ ಎಂದು ಯುನೆಸ್ಕೊ ಗೌರವಿಸಿದೆ. ಈ ಕುರಿತು ಯುನೆಸ್ಕೊ ಟ್ವೀಟ್ ಮಾಡಿದೆ.
ಪ್ರಮುಖ ಅಂಶಗಳು
- ದಕ್ಷಿಣ ಆಫ್ರಿಕಾದ ಜೆಜುವಿನಲ್ಲಿ ಸಭೆ ಸೇರಿದ, ವಿಶಿಷ್ಟ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ರಚಿಸಲಾದ ವಿಶ್ವಸಂಸ್ಥೆಯ ಅಂತರಸರ್ಕಾರೀಯ ಸಮಿತಿಯು ಕುಂಭಮೇಳವನ್ನು ‘ಮನುಕುಲದ ಅತ್ಯಂತ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ಪ್ರತಿನಿಧಿ ಪಟ್ಟಿ’ಯಲ್ಲಿ ಗುರುತಿಸಿದೆ.
- ಧಾರ್ಮಿಕ ಪ್ರವಾಸಿಗರು ಪಾಲ್ಗೊಳ್ಳುವ ವಿಶ್ವದ ಬೃಹತ್ ಆಚರಣೆ ಎಂದು ಕುಂಭಮೇಳವನ್ನು ಪರಿಗಣಿಸಲಾಗಿದೆಧಾರ್ಮಿಕ ಪ್ರವಾಸಿಗರು ಪಾಲ್ಗೊಳ್ಳುವ ವಿಶ್ವದ ಬೃಹತ್ ಆಚರಣೆ ಎಂದು ಕುಂಭಮೇಳವನ್ನು ಪರಿಗಣಿಸಲಾಗಿದೆ .
- ವಿಶ್ವದ ಅತ್ಯಂತ ದೊಡ್ಡ ಉತ್ಸವವಾದ ಕುಂಭಮೇಳ ಭಾರತದ ನಾಲ್ಕು ಕಡೆಗಳಲ್ಲಿ ನಡೆಯುತ್ತದೆ. ಹರಿದ್ವಾರ ಹಾಗೂ ಅಲಹಾಬಾದ್ ನ ಗಂಗಾ ತೀರದಲ್ಲಿ ಹಾಗೂ ಉಜ್ಜಯನಿಯ ಕ್ಷಿಪ್ರ ನದಿ ಹಾಗೂ ನಾಸಿಕದ ಗೋದಾವರಿ ನದಿಯ ತೀರದಲ್ಲಿ ನಡೆಯುತ್ತದೆ
- . ಅಲಹಾಬಾದ್, ಹರಿದ್ವಾರ, ಉಜ್ಜಯಿನಿ ಹಾಗೂ ನಾಸಿಕ್‌ಗಳಲ್ಲಿ ಭಕ್ತರು ಪವಿತ್ರ ನದಿಗಳಲ್ಲಿ ಕುಂಭಮೇಳ ಸ್ನಾನ ಮಾಡುತ್ತಾರೆ.
- ‘ಸಂತರು, ಸಾಧುಗಳು ತಮ್ಮ ಶಿಷ್ಯರಿಗೆ ಪಾರಂಪರಿಕ ಆಚರಣೆ ಮತ್ತು ಪಠಣಗಳ ಬಗ್ಗೆ ತಿಳಿಸುತ್ತಿದ್ದರು. ಈ ಗುರು–ಶಿಷ್ಯ ಪರಂಪರೆಯ ಮೂಲಕವೇ ಕುಂಭಮೇಳಕ್ಕೆ ಸಂಬಂಧಿಸಿದ ಜ್ಞಾನ ಮತ್ತು ಕೌಶಲವು ಪ್ರವಹಿಸುತ್ತಾ ಬಂದಿದೆ’ ಎಂದು ಸಮಿತಿಯು ಹೇಳಿದೆ.
- ಈ ಪಟ್ಟಿಗೆ ಸೇರುವುದರಿಂದ, ಸಾಂಸ್ಕೃತಿಕ ಪರಂಪರೆ ಆಚರಣೆಯಲ್ಲಿ ಭಾಗವಹಿಸಲು ಮತ್ತು ಅವುಗಳನ್ನು ಪ್ರಚುರಪಡಿಸಲು ಅಂತರರಾಷ್ಟ್ರೀಯ ಸಹಕಾರ ಸಿಗುತ್ತದೆ.
ಕುಂಭಮೇಳದ ಬಗ್ಗೆ
- ಹಿಂದೂ ಧಾರ್ಮಿಕ ಸಂಪ್ರದಾಯಕ್ಕೆ ಸೇರಿದ ಅತಿ ದೊಡ್ಡ ಮೇಳ. ಉತ್ತರ ಭಾರತದ ಪ್ರಯಾಗ ಮತ್ತು ಹರಿದ್ವಾರಗಳಲ್ಲಿ ನಡೆಯುವ ಈ ಮೇಳದಲ್ಲಿ ಹೆಚ್ಚಾಗಿ ಸಂನ್ಯಾಸಿಗಳು ಭಾಗವಹಿಸುವರು. ಭಾರತದ ಎಲ್ಲ ಕಡೆಗಳಿಂದಲೂ ಲಕ್ಷಾಂತರ ಯಾತ್ರಿಕರು ಇಲ್ಲಿಗೆ ಬರುತ್ತಾರೆ. ಗಂಗಾ, ಯಮುನಾ ಮತ್ತು ಸರಸ್ವತೀ ನದಿಗಳು ಸೇರುವ ತ್ರಿವೇಣಿ ಸಂಗಮವಾದ ಪ್ರಯಾಗವೇ ಕುಂಭಮೇಳದ ಕೇಂದ್ರ.
- ಇಲ್ಲಿ ಎರಡು ಬಗೆಯ ಮೇಳಗಳು ನಡೆಯುತ್ತವೆ. ವರ್ಷಂಪ್ರತಿ ನಡೆಯುವ ಮೇಳಕ್ಕೆ ಮಾಷ್ ಮೇಳವೆನ್ನುತ್ತಾರೆ. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮೇಳಕ್ಕೆ ಕುಂಭಮೇಳವೆನ್ನುತ್ತಾರೆ. ಸೂರ್ಯ ಮೇಷ, ಗುರು ಮತ್ತು ಕುಂಭ ರಾಶಿಗಳನ್ನು ಪ್ರವೇಶಿಸಿದ ಅಪೂರ್ವ ಸಮಯದಲ್ಲಿ ಈ ಮೇಳ ನಡೆಯುತ್ತದೆ.
- ಬಿತ್ತನೆ ಕಾಲದಲ್ಲಿ ಒಳ್ಳೆಯ ಫಸಲು ಪಡೆಯಲು ಒಂದು ಫಲೋತ್ಪಾದಕ ಹಬ್ಬವನ್ನಾಗಿ ಇದನ್ನು ಉತ್ತರಭಾರತದಲ್ಲಿ ಆಚರಿಸುತ್ತಿದ್ದರೆಂದು ಕಾಣಬರುತ್ತದೆ. ಸಾಮಾನ್ಯವಾಗಿ ಈ ಹಬ್ಬಗಳು ನದೀ ತೀರದಲ್ಲಿ ನಡೆಯುತ್ತಿದ್ದವು. ಸೂರ್ಯ ಕುಂಭರಾಶಿಯನ್ನು ಪ್ರವೇಶಿಸುವ ಪ್ರಶಸ್ತ ಕಾಲದಲ್ಲಿ ಮಡಕೆಯ ತುಂಬ ಬಿತ್ತನೆ ಧಾನ್ಯಗಳನ್ನು ತುಂಬಿಕೊಂಡು ಬಂದ ಜನ ನದೀತೀರದಲ್ಲಿ ಕಲೆತು, ನೀರಿನಲ್ಲಿ ಅವನ್ನು ಅದ್ದಿ ಊರಿಗೆ ತೆಗೆದುಕೊಂಡು ಹೋಗಿ ಅವುಗಳಲ್ಲಿನ ಬೀಜಗಳನ್ನು ಇತರ ಬೀಜಗಳೊಂದಿಗೆ ಬೆರೆಸಿ ಮಾಡುತ್ತಿದ್ದರು. ಈ ರೀತಿ ಮಾಡಿದರೆ ಅತಿ ಹೆಚ್ಚಿನ ಬೆಳೆ ಪಡೆಯಬಹುದೆಂಬ ಬಯಕೆಯೂ ಇಂಥ ಹಬ್ಬಗಳನ್ನು ಆಚರಿಸಲು ಹಿನ್ನಲೆಯಾಗಿರಬೇಕು.
- ದೇವತೆಗಳು ಮತ್ತು ರಾಕ್ಷಸರು ಕ್ಷೀರಸಮುದ್ರವನ್ನು ಕಡೆದಾಗ ಬಂದಂಥ ಅಮೃತದ ಕುಂಭವನ್ನು ರಾಕ್ಷಸರು ಕದ್ದು ಓಡುತ್ತಿರುವಾಗ ದೇವಾಸುರರಲ್ಲಿ ಯುದ್ಧ ನಡೆಯಿತು. ಆ ಸಮಯದಲ್ಲಿ ರಾಕ್ಷಸರು ನಾಲ್ಕು ಸ್ಧಳಗಳಲ್ಲಿ ಆ ಕುಂಭವನ್ನು ಇಟ್ಟರೆಂದು ಒಂದು ಹೇಳಿಕೆಯೂ ನಾಲ್ಕು ಕಡೆ ಅಮೃತವನ್ನು ಚೆಲ್ಲಿದರೆಂದು ಇನ್ನೊಂದು ಹೇಳಿಕೆಯೂ ಪುರಾಣಗಳಲ್ಲಿದೆ.
- ಈ ಮೇಳಗಳ ಪ್ರಾಚೀನತೆ ಬುದ್ಧನ ಕಾಲಕ್ಕೆ ಹೋಗುವುದಾದರೂ ಏಳನೆಯ ಶತಮಾನಕ್ಕೆ ಹಿಂದಿನಿಂದಲೂ ಈ ಮೇಳಗಳು ನಡೆದು ಬರುತ್ತಿರುವುದಕ್ಕೆ ಸಾಕಷ್ಟು ಆಧಾರಗಳಿವೆ. ಚಕ್ರವರ್ತಿ ಶ್ರೀಹರ್ಷ ಚೀನದ ಯಾತ್ರಿಕ ಹ್ಯುಯೆನ್‍ತ್ಸಾಂಗನ್ನು ಅಲಹಾಬಾದಿನಲ್ಲಿ ನಡೆದ ಮೇಳಕ್ಕೆ ಬರಮಾಡಿಕೊಂಡು ಆತನ ಸಮ್ಮುಖದಲ್ಲಿ ಎಲ್ಲ ಧರ್ಮದ ಸಂನ್ಯಾಸಿಗಳಿಗೂ ದೀನದಲಿತರಿಗೂ ಯಥೇಚ್ಚವಾಗಿ ದಾನಧರ್ಮ ಮಾಡಿದನೆಂದು ಇತಿಹಾಸದಿಂದ ತಿಳಿದುಬರುತ್ತದೆ.
- ಅದ್ವೈತದ ಅಧ್ವರ್ಯುಗಳಾದ ಶಂಕರಾಚಾರ್ಯರಿಗೂ ಈ ಮೇಳಕ್ಕೂ ನಿಕಟ ಸಂಬಂಧವಿದೆ ಎನ್ನಲಾಗಿದೆ. ಆಚಾರ್ಯರು ತಮ್ಮ ದಿಗ್ವಿಜಯ ಯಾತ್ರೆಯ ಕಾಲದಲ್ಲಿ ತ್ರಿವೇಣಿ ಸಂಗಮಕ್ಕೆ ಬಂದು ಅಲ್ಲಿನ ಸಂನ್ಯಾಸಿಗಳಲ್ಲಿ ದಶನಾಮೀ ಸಂಪ್ರದಾಯ ಏರ್ಪಡಿಸಿ ಕುಂಭಮೇಳವನ್ನು ವ್ಯವಸ್ಧೆ ಮಾಡಿದರಂತೆ.
- ಲೋಕಹಿತಕ್ಕಾಗಿ ಶ್ರಮಿಸುವುದು ಈ ದಶನಾಮೀ ಸಂಪ್ರದಾಯದವರ ಗುರಿ. ಈ ಸಂನ್ಯಾಸಿಗಳು ತಮ್ಮ ಇಷ್ಟ ಸಿದ್ಧಿಗಾಗಿ ತಮ್ಮ ಹೆಸರಿನ ಮುಂದೆ ತೀರ್ಥ, ಆಶ್ರಮ, ವನ, ಅರಣ್ಯ, ಗಿರಿ, ಪರ್ವತ, ಸಾಗರ, ಸರಸ್ವತೀ, ಭಾರತೀ, ಪುರೀ ಎಂಬ ಪದಗಳನ್ನು ಸೇರಿಸಿಕೊಳ್ಳುತ್ತಾರೆ. ಕುಂಭಮೇಳಗಳಲ್ಲಿ ಇವರುಗಳ ಪಾತ್ರ ವಿಶಿಷ್ಟವಾದುದು.
- ಕುಂಭಮೇಳಗಳು ಧಾರ್ಮಿಕ ದೃಷ್ಟಿಯಿಂದ ಎಷ್ಟು ಪ್ರಖ್ಯಾತವಾಗಿವೆಯೋ ಅಪಖ್ಯಾತಿಗೂ ಅಷ್ಟೇ ಹೆಸರಾಗಿವೆ. ಕೊಲೆ, ಸುಲಿಗೆ, ಮಾನಭಂಗ, ಅಪಹರಣ ಮುಂತಾದುವುಗಳಿಗೆ ಈ ಮೇಳಗಳು ಪ್ರಸಿದ್ಧಿ ಪಡೆದಿವೆ. ಲಕ್ಷಾಂತರ ಜನ ಇಲ್ಲಿ ಸೇರುವುದರಿಂದ ಪ್ಲೇಗು. ಕಾಲರ ಮುಂತಾದ ಅಂಟುಜಾಡ್ಯಗಳು ಸುಲಭವಾಗಿ ಹರಡುತ್ತವೆ. 1760ರಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಗೋಸಾಯಿಗಳು ಮತ್ತು ಬೈರಾಗಿಗಳಿಗೆ ಯುದ್ಧವಾಗಿ 18,000ಜನ ಸತ್ತರು. ಅದೇ ಸ್ಧಳದಲ್ಲಿ 1795ರಲ್ಲಿ ಸಿಖ್ ಯಾತ್ರಿಕರು 5,000 ಗೋಸಾಹಿಗಳನ್ನು ಕೊಂದರು.
- ಈ ಮೇಳದ ಒಂದು ಅಂಗವಾಗಿ ಹಿಂದೂ ಪಂಥದ ಎಲ್ಲ ವರ್ಗದ ಬೈರಾಗಿಗಳೂ ಸಂನ್ಯಾಸಿಗಳೂ ಸೇರಿ ಹಿಂದೂ ಧರ್ಮದ ಸಮ್ಮೇಳನ ನಡೆಸುವರು. ಇಲ್ಲಿ ಆಧ್ಯಾತ್ಮಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ಮಂಥನ ನಡೆಯುವುದು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ದಿಗಂಬರ ಸಾಧುಗಳ ಮೆರವಣಿಗೆ, ಭಕ್ತಾದಿಗಳ ಕೈಂಕರ್ಯ-ಇವು ಅದ್ದೂರಿಯಾಗಿ ನಡೆಯುತ್ತವೆ.
ಯುನೆಸ್ಕೊ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಆಯ್ಕೆಯಾಗಲು ಮಾನದಂಡಗಳು
- ೨೦೦೪ರ ಅಂತ್ಯದವರೆಗೆ ಸಾಂಸ್ಕೃತಿಕ ಪರಂಪರೆಯನ್ನು ಆರು ಮಾನದಂಡಗಳಿಂದ ಹಾಗೂ ಪ್ರಾಕೃತಿಕ ಪರಂಪರೆಯನ್ನು ನಾಲ್ಕು ಮಾನದಂಡಗಳಿಂದ ಅಳೆಯಲಾಗುತ್ತಿತ್ತು. ೨೦೦೫ರಲ್ಲಿ ಈ ಪದ್ಧತಿಯನ್ನು ಮಾರ್ಪಡಿಸಿ ಒಟ್ಟು ಹತ್ತು ಅಂಶಗಳ ಅರ್ಹತಾಪಟ್ಟಿಯನ್ನು ತಯಾರಿಸಲಾಯಿತು. ನಾಮಕರಣಗೊಂಡ ತಾಣವು ಈ ಹತ್ತರ ಪೈಕಿ ಕನಿಷ್ಟ ಒಂದಾದರೂ ಅರ್ಹತೆಯನ್ನು ಹೊಂದಿದ್ದು “ವಿಶ್ವದ ಅಮೂಲ್ಯ ಆಸ್ತಿ” ಯಾಗಿರಬೇಕಾಗಿರುತ್ತದೆ.
ಸಾಂಸ್ಕೃತಿಕ ಮಾನದಂಡಗಳು
- ಮಾನವ ಸೃಷ್ಟಿಯ ಅದ್ಭುತ ಪ್ರತೀಕವಾಗಿರಬೇಕು.
- ವಾಸ್ತುಶಾಸ್ತ್ರ ಯಾ ತಂತ್ರಜ್ಞಾನ , ಸ್ಮಾರಕಗಳ ನಿರ್ಮಾಣ ಕಲೆ, ನಗರ ಯೋಜನೆ ಅಥವಾ ಭೂಪ್ರದೇಶವನ್ನು ಒಪ್ಪವಾಗಿ ಸಿಂಗರಿಸುವ ಕಲಾವಿನ್ಯಾಸಗಳಲ್ಲಿನ ಪ್ರಗತಿಯನ್ನು ಸಾರುವ ಪ್ರಮುಖ ಮಾನವ ಮೌಲ್ಯಗಳ ವಿನಿಮಯವು ಒಂದು ಕಾಲಾವಧಿಯಲ್ಲಿ ಅಥವಾ ವಿಶ್ವದ ಒಂದು ನಿರ್ದಿಷ್ಟ ಸಾಂಸ್ಕೃತಿಕ ಪ್ರದೇಶದಲ್ಲಿ ಜರುಗಿದುದರ ದ್ಯೋತಕವಾಗಿರಬೇಕು.
- ಒಂದು ಸಾಂಸ್ಕೃತಿಕ ಪರಂಪರೆಯ ಅಥವಾ ಇಂದು ಜೀವಂತವಾಗಿರುವ ಇಲ್ಲವೇ ನಶಿಸಿಹೋಗಿರುವ ನಾಗರಿಕತೆಯೊಂದರ ಅಪ್ರತಿಮ ದ್ಯೋತಕವಾಗಿರಬೇಕು.
- ಮಾನವ ಇತಿಹಾಸದಲ್ಲಿನ ಗಣನೀಯ ಹಂತವೊಂದನ್ನು(ಹಂತಗಳನ್ನು) ಪ್ರತಿಬಿಂಬಿಸುವ ಕಟ್ಟಡ , ವಾಸ್ತುಶಿಲ್ಪ ಯಾ ತಂತ್ರಜ್ಞಾನದ ಸೃಷ್ಟಿ ಅಥವಾ ಭೂವಿನ್ಯಾಸವಾಗಿರಬೇಕು.
- ಪರಂಪರಾಗತ ಮಾನವ ನೆಲೆ ಅಥವಾ ಭೂಮಿಯ ಉಪಯೋಗ ಅಥವಾ ಸಮುದ್ರದ ಉಪಯೋಗದ ಅತ್ಯದ್ಭುತ ಪ್ರತೀಕವಾಗಿರಬೇಕು. ಇಲ್ಲವೇ ತೀವ್ರವಾಗಿ ಬದಲಾವಣೆಗೊಂಡು ಅಪಾಯಕ್ಕೀಡಾಗಿರುವ ಪ್ರಕೃತಿಯೊಡನೆ ಮಾನವನ ಒಡನಾಟದ ಅತ್ಯುತ್ತಮ ದ್ಯೋತಕವಾಗಿರಬೇಕು.
- ಘಟನೆಗಳು, ಜೀವಂತವಿರುವ ಸಂಪ್ರದಾಯಗಳು, ಮಾನವನ ನಂಬಿಕೆಗಳು, ವಿಶ್ವಮಟ್ಟದಲ್ಲಿ ಪ್ರಾಮುಖ್ಯ ಹೊಂದಿರುವ ಕಲಾತ್ಮಕ ಕೃತಿಗಳು ಯಾ ಸಾಹಿತ್ಯ ಕೃತಿಗಳೊಡನೆ ನೇರವಾಗಿ ಅಥವಾ ಸಾಕಷ್ಟು ಮಟ್ಟದ ಸಂಬಂಧ ಹೊಂದಿರಬೇಕು.
- ಶಾಮಲೀ
ಪ್ರಮುಖ ಸುದ್ದಿ
- ರಾಷ್ಟ್ರ ರಾಜಧಾನಿ ವಲಯಕ್ಕೆ ಉತ್ತರ ಪ್ರದೇಶದ ಶಾಮಲೀ ಜಿಲ್ಲೆಯನ್ನು ಸೇರ್ಪಡೆ ಮಾಡಲಾಗಿದೆ. ಈ ಮೂಲಕ, ಈ ವಲಯಕ್ಕೆ ಒಟ್ಟಾರೆ 23 ಜಿಲ್ಲೆಗಳು ಸೇರ್ಪಡೆಯಾದಂತಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ರಾಷ್ಟ್ರ ರಾಜಧಾನಿ ವಲಯ ಯೋಜನಾ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮುಖ್ಯ ಸಂಗತಿಗಳು
- ಎನ್‍ಸಿಆರ್‍ಗೆ ಸೇರ್ಪಡೆಯಾಗುವ ನಗರಗಳಲ್ಲಿ ಮೂಲಸೌಕರ್ಯ ಕ್ಷೇತ್ರದ ಅಭಿವೃದ್ಧಿಗೆ ಆಕರ್ಷಕ ಬಡ್ಡಿದರಗಳ ಹಣಕಾಸು ಸೌಲಭ್ಯ ಒದಗಿಸಲಾಗುತ್ತದೆ.
- ದೆಹಲಿ ಹೊರತುಪಡಿಸಿ ಪ್ರಸ್ತುತ, 22 ಜಿಲ್ಲೆಗಳು ಎನ್‍ಸಿಆರ್‍ನಲ್ಲಿವೆ. ಇವುಗಳಲ್ಲಿ 13 ಹರಿಯಾಣ, 7 ಉತ್ತರ ಪ್ರದೇಶ, 2 ರಾಜಸ್ತಾನ ರಾಜ್ಯಗಳಿಗೆ ಸೇರಿದ ಜಿಲ್ಲೆಗಳಾಗಿವೆ.
- ಎನ್‍ಸಿಆರ್‍ಗೆ ಸೇರ್ಪಡೆಯಾಗುವ ರಾಜ್ಯಗಳು ಆಯಾ ಜಿಲ್ಲೆಗಳಿಗೆ ಸಂಬಂಧಿಸಿದ ಉಪವಲಯ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಹಾಗೂ 2018ರ ಮಾರ್ಚ್ ಒಳಗೆ ಅವುಗಳನ್ನು ಪೂರ್ಣಗೊಳಿಸಬೇಕೆಂದು ನಿರ್ಧರಿಸಲಾಗಿದೆ .
- 1985ರಲ್ಲಿ ರಾಷ್ಟ್ರ ರಾಜಧಾನಿ ವಲಯ ಯೋಜನಾ ಮಂಡಳಿ ಸ್ಥಾಪಿತವಾಗಿದ್ದು, ರಾಜಧಾನಿಗೆ ಸಾಮೀಪ್ಯ ಹೊಂದಿರುವ ಪ್ರದೇಶಗಳ ಭೂಮಿ ಮೇಲೆ ನಿಯಂತ್ರಣ ಹೊಂದಲು ನೀತಿ ರೂಪಿಸುವುದು, ಮೂಲಸೌಕರ್ಯ ಅಭಿವೃದ್ಧಿ ಉತ್ತೇಜಿಸುವುದು ಇದರ ಪ್ರಮುಖ ಕೆಲಸ.
- ಸಲಿಂಗ ವಿವಾಹಕ್ಕೆ ಅಸ್ತು ಎಂದ ಆಸ್ಟ್ರೇಲಿಯಾ
ಪ್ರಮುಖ ಸುದ್ದಿ
- ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ವಿಶ್ವದ 26 ರಾಷ್ಟ್ರಗಳಲ್ಲಿ ಆಸ್ಟ್ರೇಲಿಯಾವೂ ಇದೀಗ ಸೇರಿಕೊಂಡಿದೆ.
- ಆ ಮೂಲಕ ಈ ಕಾನೂನು ಬಾಹಿರವಾಗಿದ್ದ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ಸರಕಾರದ ಕ್ರಮವನ್ನು ಸ್ವಾಗತಿಸಿ, ಸಲಿಂಗ ಪ್ರೇಮಿಗಳು ‘ಡೇ ಫಾರ್ ಲವ್’ ಎಂದು ಸಂಭ್ರಮಿಸಿದ್ದಾರೆ.
- ಸಮುದ್ರದಾಳದಲ್ಲಿ ರೋಮ್ ಸಾಮ್ರಾಜ್ಯ
ಪ್ರಮುಖ ಸುದ್ದಿ
- ರೋಮನ್ ಕಾಲದಲ್ಲಿದ್ದ ನಗರವೊಂದು ಸಮುದ್ರದಾಳದಲ್ಲಿ ಪತ್ತೆಯಾಗಿದೆ. ಇಟಲಿಯ ಪಶ್ಚಿಮ ಭಾಗದಲ್ಲಿರುವ ಈ ನಗರ ಈಗ ನೀರಿನಿಂದ ಆವೃತವಾಗಿದೆ. 1,700 ವರ್ಷಗಳಿಗಿಂತಲೂ ಹೆಚ್ಚು ಪುರಾತನ ಎಂದು ಗುರುತಿಸಲಾಗಿದೆ.
- ಅಂದು ನಿರ್ಮಾಣ ಮಾಡಲಾದ ಶಿಲಾಮೂರ್ತಿಗಳು ಈಗ ವಿನಾಶದ ಸ್ಥಿತಿ ತಲುಪಿವೆ. ಕೆಲ ಮೂರ್ತಿಗಳ ಕೈ ಮುರಿದು ಹೋದರೆ, ಇನ್ನೂ ಕೆಲ ಮೂರ್ತಿಯ ತಲೆಗಳು ಭಗ್ನಗೊಂಡಿವೆ.
- ಇತ್ತೀಚೆಗೆ ಈ ಭಾಗದಲ್ಲಿ ಜ್ವಾಲಾಮುಖಿ ಚಟುವಟಿಕೆಗಳು ಹೆಚ್ಚುತ್ತಿವೆ. ಈ ಕಾರಣಗಳಿಂದ ಪಳೆಯುಳಿಕೆಗಳು ಇನ್ನಷ್ಟು ವಿನಾಶ ಹೊಂದುತ್ತಿದೆ. ಇಲ್ಲಿ ರಸ್ತೆಗಳು, ಗೋಡೆಗಳು ಸಹ ಪತ್ತೆಯಾಗಿವೆ ಎಂದು ಅಧ್ಯಯನ ತಂಡ ತಿಳಿಸಿದೆ.
- ಅಂದು ಈ ನಗರ ಎಷ್ಟು ಸಮೃದ್ಧಿಯಾಗಿತ್ತು ಎಂಬುದಕ್ಕೆ ಇಲ್ಲಿರುವ ದೇವಾಲಯಗಳು, ಬೃಹತ್ ಮನೆಗಳು ಸಾಕ್ಷಿಯಾಗಿವೆ. ಈ ಭಾಗದ ನೀರಿನಲ್ಲಿ ಇಳಿದರೆ ನಮಗೆ ಇತಿಹಾಸದ ಪುಟದಲ್ಲಿ ಇಳಿದಂತೆ ಭಾಸವಾಗುತ್ತದೆ.
- ಈ ಭಾಗದಲ್ಲಿ ಸುತ್ತಾಡಿದರೆ ಗತಕಾಲದ ವೈಭವ ಕಣ್ಣಮುಂದೆ ಹಾದು ಹೋಗುತ್ತದೆ ಎಂದು ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಈಗಷ್ಟೇ ಅಧ್ಯಯನ ಮಾಡಲು ಅವಕಾಶ ದೊರೆತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರಗಳು ಉತ್ಖನನವಾಗುವ ನಿರೀಕ್ಷೆ ಇದೆ.