14th AUGUST.-DAILY CURRENT AFFAIRS BRIEF

14th AUGUST

 

1.ವಾಸಯೋಗ್ಯ ಸೂಚ್ಯಂಕ(Ease of living index)

SOURCE-THE HINDU https://www.thehindu.com/news/national/tamil-nadu/no-tn-city-among-top-ten-in-ease-of-living/article24685351.ece

 

ವಿದ್ಯಾರ್ಥಿಗಳ ಗಮನಕ್ಕೆ

 

ಪ್ರಿಲಿಮ್ಸ್ ಪರೀಕ್ಷೆಗಾಗಿ -ವಾಸಯೋಗ್ಯ ಸೂಚ್ಯಂಕದ ಬಗ್ಗೆ

ಮುಖ್ಯ ಪರೀಕ್ಷೆಗಾಗಿ -ನಗರ ಯೋಜನೆ ಮತ್ತು ನಿರ್ವಹಣೆಯನ್ನು  ಉತ್ತೇಜಿಸಲು ಸರಕಾರ ಕೈಗೊಳ್ಳಬೇಕಾದ ಕ್ರಮಗಳೇನು ?

 

ಪ್ರಮುಖ ಸುದ್ದಿ

  • ನಗರ ಯೋಜನೆ ಮತ್ತು ನಿರ್ವಹಣೆಗೆ ಉತ್ತೇಜಿಸುವ ಸಲುವಾಗಿ ಹಾಗೂ ಜಾಗತಿಕ ಮತ್ತು ರಾಷ್ಟ್ರೀಯ ಮಟ್ಟದ ಜೀವನ ನಿರ್ವಹಣೆ ಗುಣಮಟ್ಟವನ್ನು ನಗರಗಳು ಅಳವಡಿಸಿಕೊಳ್ಳಲಿ ಎಂಬ ಉದ್ದೇಶದಿಂದ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ‘ವಾಸಯೋಗ್ಯ ಸೂಚ್ಯಂಕ’ ಬಿಡುಗಡೆ ಮಾಡಿದೆ.

 

ಮುಖ್ಯ ಅಂಶಗಳು

ವಿವಿಧ ರಾಜ್ಯ ಗಳ ಶ್ರೇಯಾಂಕ 

  • ಮಹಾರಾಷ್ಟ್ರದ ಪುಣೆ ದೇಶದ ಅತ್ಯುತ್ತಮ ವಾಸಯೋಗ್ಯ ನಗರ ಎಂದು ವಾಸಯೋಗ್ಯ ನಗರಗಳ ಸೂಚ್ಯಂಕ ಹೇಳಿದೆ.
  • ಟಾಪ್‌ 10 ಪಟ್ಟಿಯಲ್ಲಿ ಮಹಾರಾಷ್ಟ್ರದ 3 ನಗರಗಳು ಸ್ಥಾನ ಪಡೆದಿವೆ. ಪುಣೆ ನಂತರದ ಸ್ಥಾನದಲ್ಲಿ ನವಿ ಮುಂಬಯಿ ಮತ್ತು ಗ್ರೇಟರ್ ಮುಂಬಯಿ ಇದ್ದು, ಸಮೀಕ್ಷೆಗೆ ಒಳಪಡಿಸಿದ 111 ನಗರಗಳ ಪೈಕಿ ಉತ್ತರ ಪ್ರದೇಶದ ರಾಂಪುರ ಕೊನೆಯ ಸ್ಥಾನ ಪಡೆದಿದೆ. ರಾಷ್ಟ್ರರಾಜಧಾನಿ ದಿಲ್ಲಿಗೆ 65ನೇ ಸ್ಥಾನ ಲಭ್ಯವಾಗಿದ್ದರೆ, ಕೋಲ್ಕತಾ ಮಾತ್ರ ಸ್ಪರ್ಧೆಯಿಂದ ಹೊರಗುಳಿದಿತ್ತು.
  • ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಹೆಚ್ಚಿನ ಸಂಖ್ಯೆಯ ದೊಡ್ಡ ನಗರಗಳಿದ್ದರೂ, ಅವುಗಳನ್ನು ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

 

  • 2017ರ ಜೂನ್​ನಲ್ಲಿ ಸಚಿವಾಲಯ ದೇಶಾದ್ಯಂತ ನಗರಗಳಿಗೆ ರ‍್ಯಾಂಕಿಂಗ್ ನೀಡಲು ನಿರ್ಧರಿಸಿತು. ಈ ವರ್ಷದ ಜನವರಿ 19ರಂದು ಒಟ್ಟು 111 ನಗರಗಳನ್ನು ಆಯ್ಕೆ ಮಾಡಿಕೊಂಡು ಸಮೀಕ್ಷೆ ಆರಂಭಿಸಲಾಗಿತ್ತು. ಸಾಂಸ್ಥಿಕ, ಸಾಮಾಜಿಕ, ಆರ್ಥಿಕ, ಭೌತಿಕ ಅಭಿವೃದ್ಧಿ ಪರಿಗಣಿಸಿ ನಗರಗಳಿಗೆ ರ‍್ಯಾಂಕಿಂಗ್ ನೀಡಲಾಗಿದೆ. ಪ್ರತಿ ನಗರಗಳನ್ನು ಒಟ್ಟು 15 ವರ್ಗಗಳ ಹಾಗೂ 78ನ ಮಾನದಂಡಗಳ ಅನುಸಾರ ಮೌಲ್ಯಮಾಪನ ಮಾಡಲಾಗಿದೆ.

 

ಮೌಲ್ಯಮಾಪನ ಹೇಗಾಯಿತು?

 

  • ನಗರ ಆಡಳಿತ ಅಧಿಕಾರಿಗಳಿಗೆ ರಾಷ್ಟ್ರೀಯ ಓರಿಯಂಟೇಷನ್ ಕಾರ್ಯಾಗಾರ ನಡೆಸಲಾಗಿತ್ತು. ಇದರಲ್ಲಿ ಮೌಲ್ಯಮಾಪನದ ರೂಪರೇಷೆಗಳ ಬಗ್ಗೆ ಮಾಹಿತಿ ನೀಡಲಾಗಿತ್ತು. ಬಳಿಕ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರ ಸಚಿವಾಲಯದಿಂದ 33 ರಾಜ್ಯ ಮಟ್ಟದ ಕಾರ್ಯಾಗಾರವನ್ನು…..CLICK HERE TO READ MORE
Share