24th AUGUST-DAILY CURRENT AFFAIRS BRIEF

24th AUGUST

 

1.ಜೇನುತುಪ್ಪ ಮತ್ತು ಅದರ ಉತ್ಪನ್ನಗಳ ಕಲಬೆರಕೆ ತಡೆಯಲು ಸೂಚನೆಯನ್ನು ನೀಡಿದ ಎಫ್ಎಸ್ಎಸ್ಎಐ

SOURCEhttps://www.business-standard.com/article/pti-stories/fssai-notifies-standards-for-honey-its-products-to-curb-adulteration-118082200372_1.html

 

ವಿದ್ಯಾರ್ಥಿಗಳ ಗಮನಕ್ಕೆ

ಪೂರ್ವಭಾವಿ ಪರೀಕ್ಷೆಗಾಗಿ  : ಹೊಸ ಗುಣಮಟ್ಟಗಳ ಸೂಚನೆ ಮತ್ತು ಎಫ್ಎಸ್ಎಸ್ಎಐ ಬಗ್ಗೆ   

 ಮುಖ್ಯ ಪರೀಕ್ಷೆಗಾಗಿ :ಆಹಾರ ಕಲಬೆರಕೆ ಮತ್ತು  ಅದನ್ನು ತಡೆಗಟ್ಟಲು ನೆಡೆಯುತ್ತಿರುವ ಪ್ರಯತ್ನಗಳು,ಹಾಗು ಜೇನುಸಾಕಣೆ ಕ್ಷೇತ್ರದ ಪ್ರಮುಖ್ಯತೆ

 

ಪ್ರಮುಖ ಸುದ್ದಿ

  • ಆಹಾರ ಉತ್ಪನ್ನಗಳ ಗುಣಮಟ್ಟ ನಿಯಂತ್ರಕ ಸಂಸ್ಥೆ (ಎಫ್ಎಸ್ಎಸ್ಎಐ) ಜೇನುತುಪ್ಪ ಮತ್ತು ಅದರ ಉತ್ಪನ್ನಗಳಿಗೆ ಆಹಾರ ಸುರಕ್ಷತಾ ಮಾನದಂಡಗಳ ಸೂಚನೆಯನ್ನು ನೀಡಿದ್ದು ಈ ಮೂಲಕ ಅದರ ಕಲಬೆರಕೆ ತಡೆಯಲು ಪ್ರಯತ್ನ ನೆಡಸಿದೆ .

ಮುಖ್ಯ ಅಂಶಗಳು

  • ಪ್ರಸ್ತುತ, ಜೇನುತುಪ್ಪ ಮತ್ತು ಅದರ ಉತ್ಪನ್ನಗಳಿಗೆ ಪ್ರತ್ಯೇಕ ಗುಣಮಟ್ಟದ ಮಾನದಂಡಗಳಿಲ್ಲ. ಸರ್ಕಾರ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಜೇನುಸಾಕಣೆಯ ಉದ್ಯಮದಲ್ಲಿ ತೊಡಗಲು ಉತ್ತೇಜನ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಜಾರಿಗೆತರಲಾಗಿದ್ದು . ಈ ಗುಣಮಟ್ಟದ ಮಾನದಂಡಗಳು  ರೈತರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಗಳನ್ನುಪಡೆಯಲು ಸಹಕಾರಿಯಾಗಲಿದೆ

 

ಗುಣಮಟ್ಟದ ಮಾನದಂಡಗಳು ರೀತಿಯಾಗಿವೆ .

  • ನಿಯತಾಂಕಗಳು: ಎಫ್ಎಸ್ಎಸ್ಎಐನ ಅಧಿಸೂಚನೆಯ ಪ್ರಕಾರ, ಜೇನುತುಪ್ಪವು 18 ನಿಯತಾಂಕಗಳನ್ನು ಹೊಂದಿರಬೇಕು ಇದರಲ್ಲಿ ಸುಕ್ರೋಸ್ ಪ್ರಮಾಣ  , ಗ್ಲುಕೋಸ್ ಅನುಪಾತ, ಪುಷ್ಪಪಾತ್ರದ ಎಣಿಕೆ, ವಿದೇಶಿ ಒಲಿಗೋಸ್ಯಾಕರೈಡ್ಗಳು (ಕೆಲವೇ ಮಾನೊಸಾಕರೈಡ್ ಅಣುಗಳ ಸಂಯೋಗದಿಂದ ಉಂಟಾಗುವ ಅಣುಗಳಳ್ಳು ಕಾರ್ಬೊಹೈಡ್ರೇಟು) ಸೇರಿವೆ.

 

 

ಮಿತಿಗಳು ಮತ್ತು ಮಾನದಂಡಗಳು:

  • ಎಫ್ಎಸ್ಎಸ್ಎಐ ಜೇನುತುಪ್ಪದಲ್ಲಿ ಸುಕ್ರೋಸ್ ಪ್ರಮಾಣ ಗರಿಷ್ಠ ಶೇ 5% ಮಿತಿಯನ್ನು ನಿಗದಿಪಡಿಸಿದೆ ಮತ್ತು ಕಾರ್ವಿಯಾಲ್ಲೊಸಾ ಮತ್ತು ಹನಿಡ್ಯೂ ಜೇನುತುಪ್ಪಕ್ಕೆ ಶೇ 10% ರಷ್ಟು ನಿಗದಿತವಾಗಿದೆ. ತೇವಾಂಶ ಪ್ರಮಾಣ ಶೇಕಡಾವಾರು ಗರಿಷ್ಠ 20% ಇರಬೇಕು  ಮತ್ತು ಪುಷ್ಪಪಾತ್ರದ ಎಣಿಕೆಯು ಪ್ರತಿ ಗ್ರಾಂ ಗೆ 25,000 ಇರಬೇಕು  ಎಂದು ಸೂಚನೆ ನೀಡಿದೆ.
  • ಜೇನಿನ ಉಪ-ಉತ್ಪನ್ನಗಳಿಗೆ ಸಂಬಂಧಿಸಿದಂತೆ, ಎಫ್ಎಸ್ಎಸ್ಎಐ ‘ಜೇನು ಮೇಣ ‘ ಮತ್ತು ‘ರಾಯಲ್ ಜೆಲ್ಲಿ’ ಗಾಗಿ ಸ್ಥಿರ ಮಾನದಂಡಗಳನ್ನು ಸೂಚನೆಯಲ್ಲಿ ಉಲ್ಲೇಖಿಸಿದೆ .
  • ನಿಯಂತ್ರಕರು ಜೇನುತುಪ್ಪವನ್ನು ಈ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ ಜೇನುತುಪ್ಪವು ಒಂದು ನೈಸರ್ಗಿಕ ಸಿಹಿಯಾಗಿದ್ದು , ಜೇನುತುಪ್ಪವನ್ನು ಜೇನುಹುಳುಗಳು ಹೂವುಗಳ ಮಕರಂದ ಅಥವಾ ಸಸ್ಯಗಳ ಸ್ರವಿಸುವಿಕೆಯಿಂದ ಉತ್ಪತ್ತಿಮಾಡುತ್ತವೆ ನಂತರ ಜೇನುಹುಳಗಳು ಜೇನನ್ನು ಸಂಗ್ರಹಿಸಿ ,ರೂಪಾಂತರಗೊಳಿಸಿ ಜೇನುಹಲ್ಲೆಗಳಲ್ಲಿ ಸಂಗ್ರಹಿಸಿಡುತವೆ ಎಂದು ವ್ಯಾಖ್ಯಾನಿಸಿದೆ .
  • ಒಂದು ಪದಾರ್ಥವನ್ನು ಜೇನುತುಪ್ಪ ಎಂದು ಮಾರಾಟ ಮಾಡುತಿದ್ದರೆ  ಅದಕ್ಕೆ ಯಾವುದೆ ಆಹಾರ ಪದಾರ್ಥಗಳ್ಳನು ಅಥವಾ ಆಹಾರ ಉಪಪದಾರ್ಥಗಳನ್ನು ಸೇರಿಸುವಂತಿಲ್ಲ ಮತ್ತು ಜೇನಿನ ಪ್ರಮುಖ ಅಂಶಗಳು ಹಾಗು ಅದರ ಗುಣಮಟ್ಟ ಕ್ಷೀಣಿಸುವ ರೀತಿಯಲ್ಲಿ ಜೇನಿನ ಸಂಸ್ಕರಣೆ ಮಾಡಬಾರದು ಎಂದು ಸೂಚನೆಯಲ್ಲಿ ತಿಳಿಸಿದೆ
  • ಲೇಬಲಿಂಗ್: ಜೇನುತುಪ್ಪವು ಯಾವುದೇ ಒಂದು ನಿರ್ದಿಷ್ಟ ಮೂಲದಿಂದ ಬಂದಿದ್ದರೆ ಅಂದರೆ ಜೇನು  ಹೂವಿನ ಅಥವಾ ಸಸ್ಯ ಮೂಲದದಿಂದ ಆಗಿದ್ದರೆ ಅದನ್ನು ಲೇಬಲಿಂಗ್ ಮೇಲೆ ನಮೊದಿಸಬಹುದು ಮತ್ತು ಆ ಮೂಲದೊಂದಿಗೆ ಅನುಗುಣವಾದ ಅಂಗಾಂಗ, ಭೌತ,  ರಾಸಾಯನಿಕ ಮತ್ತು ಇನ್ನಿತರ ಸೂಕ್ಷ್ಮ ಗುಣಗಳನ್ನು ಹೊಂದಿದರೆ ಅದನ್ನು ಸಹ ಉಲ್ಲೇಖಿಸಬಹುದು ಎಂದು ಹೇಳಿದೆ .

 

  • ಪುಷ್ಪಪಾತ್ರದ ಎಣಿಕೆ(ಪರಾಗ ಲೆಕ್ಕ)-ಒಂದು ವೇಳೆ ಜೇನು ‘ಮೊನೋಫ್ಲೋರಲ್ ಹನಿ’ ಅಂದರೆ ” ಒಂದೇ ಜಾತಿಗೆ ಸೆರಿದ ಹೂವಿನ ಜೇನಾಗಿದ್ದರೆ ” ಜೇನಿನಲ್ಲಿ ಪರಾಗ ಲೆಕ್ಕವೂ  ಪರಾಗಸ್ಪರ್ಶದ ಶೇ  45% ಕ್ಕಿಂತ ಕಡಿಮೆ ಇರಬಾರದು ಎಂದು ಹೇಳಿದೆ . ‘ಮಲ್ಟಿ ಹೂವಿನ ಹನಿ’ ಅಂದರೆ ವಿವಿಧ ಹೂವಿನಿಂದಾದ ಜೇನಿನಲ್ಲಿ , ಪರಾಗ ಲೆಕ್ಕವೂ ಯಾವುದೇ ಸಸ್ಯ ಜಾತಿಗಳ  ಒಟ್ಟಾರೆ ಪರಾಗಸ್ಪರ್ಶದ ಶೇಕಡಾ 45 ರಷ್ಟು ಮೀರಬಾರದು.

ಕ್ಷೇತ್ರದ ಮಹತ್ವ:

 

  • ಭಾರತ ದೇಶದಲ್ಲಿ ವಾರ್ಷಿಕವಾಗಿ ಸುಮಾರು 90,000 ಟನ್ಗಳಷ್ಟು ಜೇನುತುಪ್ಪವನ್ನು ಉತ್ಪಾದಿಸಲಾಗುತ್ತದೆ. ಸುಮಾರು 30 ಲಕ್ಷ ಜೇನುಹುಳಗಳ ವಸಾಹತುಗಳು ಇದ್ದು ಸುಮಾರು 5 ಲಕ್ಷ ಜನರು ಜೇನುಸಾಕಣೆ  ವ್ಯವಹಾರದಲ್ಲಿ ತೊಡಗಿದ್ದಾರೆ
  • ತೋಟಗಾರಿಕೆ ಸಮಗ್ರ ಅಭಿವೃದ್ಧಿಗಾಗಿ ಮಿಷನ್ ಅಡಿಯಲ್ಲಿ ತೋಟಗಾರಿಕೆಯ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರವು ಜೇನು ಉತ್ಪಾದನೆಯನ್ನು ಉತ್ತೇಜಿಸುತ್ತಿದೆ ಮತ್ತು ವೈಜ್ಞಾನಿಕ ಜೇನುಸಾಕಣೆಯ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ವಿವಿಧ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ…..CLICK HERE TO READ MORE
Share