20th AUGUST MLP
NOTE:: ದಯವಿಟ್ಟು ಗಮನಿಸಿ ಕೆಳಗಿನ ‘ಉತ್ತರಗಳು‘ ‘ಮಾದರಿ ಉತ್ತರಗಳು‘ ಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ಬರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.
GENERAL STUDIES PAPER-1(ಸಾಮಾನ್ಯ ಅಧ್ಯಾಯ –೧)
1.What is Denudation ? Explain the factors that control the Denudation .
(ಶಿಥಿಲೀಕರಣ ಎಂದರೇನು ?ಶಿಥಿಲೀಕರಣವನ್ನು ನಿಯಂತ್ರಿಸುವ ಅಂಶಗಳನ್ನು ವಿವರಿಸಿ)
(150 ಪದಗಳು)
ಭೂ ಮೇಲ್ಮೈಯಲ್ಲಿನ ಕಠಿಣವಾದ ಶಿಲೆಗಳು ಹವಾಮಾನದ ಮೂಲಾಂಶಗಳಾದ ಉಷ್ಣಾಂಶ, ವೃಷ್ಟಿ, ಒತ್ತಡ, ತೇವಾಂಶ ಮುಂತಾದವುಗಳ ಕ್ರಿಯೆಗಳಿಂದ ಒಡೆದು ಚೂರಾಗುವ ಅಥವಾ ಕ್ಷಯಿಸುವ ಪ್ರಕ್ರಿಯೆಗೆ ಶಿಥಿಲೀಕರಣ ಎನ್ನುವರು
ಅಂದರೆ ಹವಾಮಾನದ ಮೂಲಾಂಶಗಳಿಂದ ಉಂಟಾಗುವುದರಿಂದ ‘ವೆದರಿಂಗ್’ ಎನ್ನುತ್ತೇವೆ. ಶಿಥಿಲೀಕರಣವು ಶಿಲೆಗಳ ‘ವಿಯೋಜನೆ'(Disintegration) ಮತ್ತು ‘ವಿಭಜನೆ'(decompositionಯನ್ನು ಒಳಗೊಂಡಿದ್ದು, ಉತ್ಪತ್ತಿಯಾದ ಉತ್ಪನ್ನಗಳ ಸಾಗಾಣಿಕೆ ಕಾರ್ಯ ನಡೆಯುವುದಿಲ್ಲ.
ಶಿಥಿಲೀಕರಣವನ್ನು ನಿಯಂತ್ರಿಸುವ ಅಂಶಗಳು
ಇವು ಭೌಗೋಳಿಕ, ಭೂಮೇಲ್ಮೈ, ವಾಯುಗುಣದ ಮತ್ತು ರಾಸಾಯನಿಕ ಅಂಶಗಳಿವೆ.
ಭೌಗೋಳಿಕ ಅಂಶಗಳು
- ಮೂಲಶಿಲೆಯ ಸ್ವಭಾವ: ಗ್ರಾನೈಟ್ ಶಿಲೆಗಳಿಂದ ಮೆರಳುಶಿಲೆಗಳಲ್ಲಿ ಕಾಳಾದ ಮತ್ತು ಹರಳಿನ ರಚನೆಗಳು ಬಂಧಿಸಲ್ಪಟ್ಟಿರುವುದರಿಂದ ಶಿಥಲೀಕರಣದಲ್ಲಿ ಬೇಗ ವಿಭಜನೆ ಹೊಂದುತ್ತವೆ. ಅಂದರೆ ಶಿಥಿಲೀಕರಣಕ್ಕೆ ಮರಳು ಶಿಲೆಗಳ ಪ್ರತಿರೋಧ ಗ್ರಾನೈಟ್ ಶಿಲೆಗಳಿಗಿಂತ ಕಡಿಮೆ. ಶಿಲೆಗಳ ಖನಿಜೀಯ ಮತ್ತು ರಾಸಾಯನಿಕ ಸಂಯೋಜನೆಯೂ ಶಿಲೆಗಳ ಸ್ವಭಾವವನ್ನು ತಿಳಿಸುತ್ತದೆ, ಶಿಥಿಲೀಕರಣದ ದರ ಮತ್ತು ವಿಧವನ್ನು ಸಹ ತಿಳಿಸುತ್ತದೆ . ಉದಾ: ಕಾರ್ಬೋನೇಟ್ ಶಿಲೆಗಳು ಸುಣ್ಣಕಲ್ಲು (ಕ್ಯಾಲ್ಸಿಯಂ ಕಾರ್ಬೋನೇಟ್) ಖನಿಜದಿಂದ ಸಂಯೋಜನಗೊಂಡಿದ್ದು, ಶೀಘ್ರವಾದ ಮತ್ತು ರಾಸಾಯನಿಕ ರೀತಿಯ ಶಿಥಿಲೀಕರಣವುಂಟು ಮಾಡುತ್ತದೆ.
- ಮೂಲಶಿಲೆಯ ರಚನೆ: ಇದು ಖನಿಜಗಳ ಸಂಯೋಜನೆ, ಬಿರುಕುಗಳಿರುವಿಕೆ, ಬೆಡ್ಡಿಂಗ್, ಪ್ಲೇನ್ಸ್ ಇತ್ಯಾದಿಗಳಿರಿವಿಕೆಯನ್ನೊಳಗೊಂಡಿದೆ. ಬಿರುಕುಗಳು ಅಥವಾ ಜಾಯಿಂಗಳಿದ್ದರೆ ದ್ರಾವಣ ಸುಲಭವಾಗಿ ಪ್ರವೇಶಿಸಿ ವಿಭಜಿಸುವುದರಿಂದ ಶಿಥಿಲೀಕರಣಕ್ಕೆ ಪ್ರತಿರೋಧ ಕಡಿಮೆ ಅಂತೆಯೇ ಬೆಡ್ಡಿಂಗ್, ಪ್ಲೇನ್ಸ್ ಇದ್ದರೆ ಸಹ ಪ್ರತಿರೋಧ ಕಡಿಮೆ ಇರುತ್ತದೆ
ಭೂಮೇಲ್ಮೈ ಅಂಶಗಳು
- ಎತ್ತರ: ಎತ್ತರ ಹೆಚ್ಚಾದಂತೆ ಹರಿಯುವ ನೀರಿನ ಶಕ್ತಿಯು ಹೆಚ್ಚಾಗಿ, ಹೆಚ್ಚು ಶಿಥಿಲೀಕರಣವುಂಟಾಗುತ್ತದೆ. ಆದರೆ ತಗ್ಗಿನ ಪ್ರದೇಶಗಳಲ್ಲಿನ ನೀರಿನ ಇಂಗುವಿಕೆ ಸಮಸ್ಯೆ ಇರುವುದರಿಂದ ದ್ರಾವಣಿಕರಣ ಕ್ರಿಯೆ ಕಡಿಮೆ, ಆದ್ದರಿಂದ ಸವೆತವೂ ಕಡಿಮೆ.
- ಇಳಿಜಾರು: ಹೆಚ್ಚು ಮತ್ತು ಕಡಿದಾದ ಇಳಿಜಾರುಗಳಲ್ಲಿ ಶಿಥಿಲೀಕರಣ ಹೆಚ್ಚು. ಇಲ್ಲಿ ನೀರಿನ ಕ್ರಿಯೆಯೂ ಹೆಚ್ಚು.
- ಇಳಿಜಾರು ಸ್ವಭಾವ: ಮಳೆ ಮತ್ತು ಮಾರುತಗಳಿಗೆ ಎದುರಾಗುವ ಇಳಿಜಾರುಗಳಲ್ಲಿ, ರಕ್ಷಿಸಲ್ಪಟ್ಟ ಇಳಿಜಾರುಗಳಿಗಿಂತ ಶಿಥಿಲೀಕರಣ ಹೆಚ್ಚು. ಸೂರ್ಯನಿಗೆ ಎದುರಾಗುವ ಹೆಚ್ಚು ಎತ್ತರದ ಇಳಿಜಾರು ಹೆಪ್ಪುಗಟ್ಟುವಿಕೆ ಪ್ರಕ್ರಿಯೆಗೊಳಗಾಗುತ್ತದೆ ಮತ್ತು ಧ್ರುವ ಪ್ರದೇಶಗಳ ದಿಕ್ಕಿನ ಇಳಿಜಾರುಗಳು ಸೂರ್ಯನಿಗೆದುರಾಗದೆ ತುಂಬಾ ಶೀತವಾಗಿರುತ್ತದೆ.
ವಾಯುಗುಣದ ಅಂಶಗಳು
- ಉಷ್ಣಾಂಶ ಮತ್ತು ಆರ್ದ್ರತೆಗಳು ಶಿಥಿಲೀಕರಣದ ದರ ಮತ್ತು ವಿಧವನ್ನು ನಿರ್ಧರಿಸುತ್ತವೆ. ಉದಾ: ತೇವಯುತ ಪ್ರದೇಶಗಳಲ್ಲಿ ವಾಯುಗುಣವು ಮತ್ತು ಬೆಚ್ಚನೆಯದ್ದಾಗಿರುವುದರಿಂದ ಶೀಘ್ರದರದಲ್ಲಿ ರಾಸಾಯನಿಕ….CLICK HERE TO READ MORE