DAILY CURRENT AFFAIRS 16th AUGUST 2017

 

 

1.. 425 ಕೋಟಿ ರೂ. ಮೌಲ್ಯದ ಏಳು ಯೋಜನೆಗಳು ಎನ್ಎಂಸಿಜಿ (NMCG) ಅನುಮೋದನೆ 

Topic: Conservation, environmental pollution and degradation, environmental impact assessment.

 

ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್‍ನ ಆಡಳಿತ ಸಮಿತಿಯು (NMCG)  425 ಕೋಟಿ ರೂ. ಮೌಲ್ಯದ  ಏಳು ಯೋಜನೆಗಳಿಗೆ ಅನುಮೋದನೆ ನೀಡಿದೆ. ಇವುಗಳಲ್ಲಿ ಒಳಚರಂಡಿ ಮೂಲಸೌಕರ್ಯ, ಘಾಟ್ ಅಭಿವೃದ್ಧಿ ಮತ್ತು ಸಂಶೋಧನೆಗಳು ಸೇರಿವೆ.

 

ಪ್ರಮುಖ ಅಂಶಗಳು

  • ಒಳಚರಂಡಿ ವಲಯದಲ್ಲಿ ತಲಾ 3 ಯೋಜನೆಗಳನ್ನು ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಕೇಂದ್ರ ಸರ್ಕಾರವು ನಿರ್ವಹಣೆ ಮತ್ತು ಕಾರ್ಯಾಚರಣೆ ವೆಚ್ಚವನ್ನು 15 ವರ್ಷಗಳ ಅವಧಿಗೆ ಎಲ್ಲ ಆರು ಯೋಜನೆಗಳಿಗೆ ನೀಡಲಿದೆ.
  • ಇದರ ಜತೆಗೆ ಶೇಕಡ 100ರ ಕೇಂದ್ರೀಯ ಅನುದಾನವೂ ಇರುತ್ತದೆ. ಹಾಗು  ಗಂಗಾನದಿಯ ನೀರು ಕೊಳೆಯಾಗದ ಗುಣಲಕ್ಷಣ ಗಂಗಾನದಿಯ ನೀರು ಮತ್ತು ಮಣ್ಣಿನ ಬಗೆಗಿನ ಸಂಶೋಧನಾ ಯೋಜನೆಗೆ ಕೂಡಾ ಅನುಮೋದನೆ ನೀಡಲಾಗಿದದೆ.
  • ಈ ಅಧ್ಯಯನವು ರಾಷ್ಟ್ರೀಯ ಪರಿಸರ ಎಂಜಿನಿಯರಿಇಂಗ್ ರೀಸರ್ಚ್ ಇನ್‍ಸ್ಟಿಟ್ಯೂಟ್ ಕೈಗೊಂಡ ಸಂಶೋಧನೆಯ ವಿಸ್ತರಿತ ಯೋಜನೆಯಾಗಿದೆ.

ರಾಷ್ಟ್ರೀಯ ಮಿಷನ್ ಫಾರ್ ಕ್ಲೀನ್ ಗಂಗಾ (National Mission for Clean Ganga:)ಬಗ್ಗೆ

  • ರಾಷ್ಟ್ರೀಯ ಮಿಷನ್ ಫಾರ್ ಕ್ಲೀನ್ ಗಂಗಾ ಎನ್ನುವುದು ರಾಷ್ಟ್ರೀಯ ಗಂಗಾನದಿ ಪುನರುಜ್ಜೀವನ, ಸಂರಕ್ಷಣೆ ಮತ್ತು ನಿರ್ವಹನೆ ಮಂಡಳಿಯ( National Ganga River Basin Authority(NGRBA)) ಅನುಷ್ಠಾನ ಘಟಕವಾಗಿದೆ.
  • ಇದನ್ನು 2011ರಲ್ಲಿ ಆರಂಭಿಸಲಾಗಿದ್ದು, ಸೊಸೈಟಿಗಳು ನೋಂದಣಿ ಕಾಯ್ದೆ- 1860ರ ಅನ್ವಯ ನೋಂದಣಿಯಾಗಿದೆ.
  • ಇದು ಈಗ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರ್ವಸತಿ ಸಚಿವಾಲಯದ (Ministry of Water Resources, River Development and Ganga Rejuvenation.) ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ.

ಗಂಗಾ ಮತ್ತು ಅದರ ಉಪನದಿಗಳನ್ನು ಸಮಗ್ರ ರೀತಿಯಲ್ಲಿ ಸ್ವಚ್ಛಗೊಳಿಸುವುದು ಇದರ ಮುಖ್ಯ ಗುರಿಯಾಗಿದೆ .

  • ಇದು ಎರಡು ಸ್ತರಗಳ ವ್ಯವಸ್ಥಾಪನಾ ಸಂರಚನೆಯನ್ನು ಹೊಂದಿದ್ದು, ಆಡಳಿತ ಮಂಡಳಿ ಹಾಗೂ ಕಾರ್ಯಕಾರಿ ಸಮಿತಿಯನ್ನು (Governing Council and Executive Committee.) ಹೊಂದಿದೆ. ಈ ಎರಡಕ್ಕೂ ಮಹಾನಿರ್ದೇಶಕರು, NMCG ಆಡಳಿತ ಮಂಡಳಿ ಮುಖ್ಯಸ್ಥರಾಗಿರುತ್ತಾರೆ.ಈ ಆಡಳಿತ ಮಂಡಳಿ 1000 ಕೋಟಿ ರೂಪಾಯಿವರೆಗಿನ ಯೊಜನೆಗಳಿಗೆ ಅನುಮೋದನೆ ನೀಡುವ ಅಧಿಕಾರ ಹೊಂದಿದೆ.
  • ರಾಷ್ಟ್ರೀಯ ಮಟ್ಟದಲ್ಲಿ ರಚನೆಯಂತೆಯೇ, ರಾಜ್ಯ ಕಾರ್ಯಕ್ರಮ ನಿರ್ವಹಣಾ ಗುಂಪುಗಳು (SPMGs) ರಾಜ್ಯ ಗಂಗಾ ಸಮಿತಿಗಳನ್ನು ಅನುಷ್ಠಾನಗೊಳಿಸುವಂತೆ ಕಾರ್ಯ ನಿರ್ವಹಿಸುತ್ತದೆ.
  • NMCG ಯಾ ಡೈರೆಕ್ಟರ್ ಜನರಲ್  (DG)ರವರು  ಭಾರತದ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಯಾಗಿರುತ್ತಾರೆ. NMCG ನ ಒಟ್ಟಾರೆ ಮೇಲ್ವಿಚಾರಣೆಯಲ್ಲಿನ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ, ರಾಜ್ಯಗಳ ಹಿರಿಯ ಅಧಿಕಾರಿಗಳ ನೇತೃತ್ವದ ರಾಜ್ಯ ಮಟ್ಟದ ಕಾರ್ಯಕ್ರಮ ನಿರ್ವಹಣಾ ಗುಂಪುಗಳು (SPMG ಗಳು) ಸಹ  ಕಾರ್ಯ ನಿರ್ವಹಿಸುತ್ತದೆ

 SOURCE-PIB

 

2.ಭಾರತಕ್ಕೆ ಸ್ವದೇಶಿ  ಜಿಪಿಎಸ್ ನಾವಿಕ್

 ವಿದ್ಯಾರ್ಥಿಗಳ ಗಮನಕ್ಕೆ

MAINS PAPER-3 Achievements of Indians in science & technology; indigenization of technology and developing new technology.

(ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು, ತಂತ್ರಜ್ಞಾನದ ಸ್ಥಳೀಯೀಕರಣ ಮತ್ತು ಹೊಸ ತಂತ್ರಜ್ಞಾನದ ಅಭಿವೃದ್ಧಿ .)

UPSC ದೃಷ್ಟಿಕೋನದಿಂದ, ಈ ಕೆಳಗಿನ ವಿಷಯಗಳು ಮುಖ್ಯ

ಪೂರ್ವಭಾವಿ ಪರೀಕ್ಷೆ ಗೆ (Prelims level): ಇದರ ಹೆಸರು ಮತ್ತು  ಇದರಲ್ಲಿ ಒಳಗೊಂಡಿರುವ ಏಜೆನ್ಸಿಗಳ ಬಗ್ಗೆ ಹಾಗು  ಅದರ  ಗುರಿ ಮತ್ತು ಉದ್ದೇಶಗಳೇನು. ಯಾವ ದೇಶದಲ್ಲಿ ಯಾವ ರೀತಿಯ ಜಿಪಿಎಸ್ ವ್ಯವಸ್ಥೆಯಿದೆ

ಮುಖ್ಯಾ ಪರೀಕ್ಷೆ ಗೆ (Mains Level):  ಪ್ರಬಂಧ ಬರವಣಿಗೆಗೆ ,ಸಾಮಾನ್ಯ ಅಧ್ಯಾಯ ಪತ್ರಿಕೆಗೆ  ಮತ್ತು ಸಂದರ್ಶನಕ್ಕೆ

 

ಪ್ರಮುಖ ಸುದ್ದಿ

  • ವಸ್ತು, , ವಿಷಯ ಮತ್ತು ವ್ಯಕ್ತಿಯ ಇರುವಿಕೆಯ ನಿಖರ ಮಾಹಿತಿ ನೀಡುವಂತಹ ದೇಶೀಯ ಜಿಪಿಎಸ್​ನ್ನು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹಾಗೂ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಅಡಿ ಬರುವ ರಾಷ್ಟ್ರೀಯ ಭೌತವಿಜ್ಞಾನ ಪ್ರಯೋಗಾಲಯ (ಸಿಎಸ್​ಐಆರ್-ಎನ್​ಪಿಎಲ್) ನಿರ್ಮಿಸಿದೆ. ಇದಕ್ಕೆ ನ್ಯಾವಿಗೇಶನ್ ವಿದ್ ಇಂಡಿಯನ್ ಕಾನ್‍ಸ್ಟಲೇಷನ್ ನಾವಿಕ್ (Navigation with Indian Constellation – NAVIC) ಎಂದು ಹೆಸರಿಡಲಾಗಿದೆ.
  • ಈವರೆಗೆ ಭಾರತ ಜಿಪಿಎಸ್​ಗಾಗಿ ಅಮೆರಿಕ ಮೂಲದ ಎನ್​ಐಎಸ್​ಟಿ ಸಂಸ್ಥೆಯ ಮೇಲೆ ಅವಲಂಬಿತವಾಗಿತ್ತು. NAVIC  ಸಮಯ ಮತ್ತು ತರಂಗಾಂತರಗಳನ್ನು ನಿಖರವಾಗಿ ಗುರುತಿಸುತ್ತದೆ. ಇದರಿಂದ ಉಪಗ್ರಹ ಆಧಾರಿತ ಜಿಪಿಎಸ್​ನ ಕಾಲ ಮಾನವು ಭಾರತ ಸ್ಟ್ಯಾಂಡರ್ಡ್ ಟೈಮ್ೆ ( ​IST) ನಿಖರವಾಗಿ ಹೊಂದಿಕೊಳ್ಳಲಿದೆ. ಇದನ್ನು ದೆಹಲಿ ಮೂಲದ ಎನ್​ಪಿಎಲ್ ನಿರ್ವಹಿಸಲಿದೆ.

ಈ ಯೋಜನೆ ಯನ್ನು ನಿರ್ಮಿಸಿದ ಉದ್ದೇಶವೇನು..?

  • 1999 ರ ಕಾರ್ಗಿಲ್ ಯುದ್ಧದ ವೇಳೆ ಪಾಕಿಸ್ತಾನ ಸೇನೆ ಭಾರತಕ್ಕೆ ನುಸುಳಿತ್ತು. ಈ ವೇಳೆ ಭಾರತ ಅಮೆರಿಕಗೆ ಜಿಪಿಎಸ್ ಮಾಹಿತಿ ನೀಡುವಂತೆ ಮನವಿ ಸಲ್ಲಿಸಿತ್ತು. ಆದರೆ ಅಮೆರಿಕ ಮಾಹಿತಿ ನೀಡುಲು ಸಾಧ್ಯವಿಲ್ಲ ಎಂದು ಹೇಳಿತ್ತು.
  • ಹೀಗಾಗಿ ಭಾರತೀಯ ವಿಜ್ಞಾನಿಗಳು ಸ್ವದೇಶಿ ಜಿಪಿಎಸ್ ವ್ಯವಸ್ಥೆ ನಿರ್ಮಿಸಲು ಮುಂದಾಗಿದ್ದರು. ಈ ಯೋಜನೆಗಾಗಿ ಒಟ್ಟು 1420 ಕೋಟಿ ರೂ. ಹಣವನ್ನು ಇಸ್ರೋ ವೆಚ್ಚ ಮಾಡಿದೆ

  ಇದರಿಂದ ಆಗುವ  ಉಪಯೋಗಗಳೇನು ?

  • ಭಾರತೀಯ ಸ್ಟ್ಯಾಂಡರ್ಡ್ ಕಾಲಮಾನಕ್ಕೆ ಜಿಪಿಎಸ್ ಸಮಯ ಹೊಂದಾಣಿಕೆ ನಿತ್ಯದ ಸೇವೆಗಳಿಗೆ ಅತ್ಯಗತ್ಯ. ಇದರಿಂದ ಹಣಕಾಸು ವರ್ಗಾವಣೆ, ಷೇರು ನಿರ್ವಹಣೆ, ಡಿಜಿಟಲ್ ದಾಖಲಾತಿ, ಟೈಮ್ ಸ್ಟ್ಯಾಂಪಿಂಗ್, ಸೈಬರ್ ಕ್ರೖೆಂ ತಡೆಗಟ್ಟುವಿಕೆ ಮತ್ತು ರಾಷ್ಟ್ರೀಯ ಭದ್ರತೆಗೆ ಅನುಕೂಲವಾಗಲಿದೆ. ಇವೆಲ್ಲದರಲ್ಲೂ ನಿಖರ ಸಮಯ ಪರಿಪಾಲನೆ ಆಗಲಿದೆ.
  • ಜಿಪಿಎಸ್ ತಂತ್ರಜ್ಞಾನದಲ್ಲಿ ಸಮಯದ ನಿಖರತೆ ಬಹಳ ಮುಖ್ಯ. ಒಂದು ನ್ಯಾನೊ ಸೆಕೆಂಡ್ ಎಂದರೆ 30 ಸೆಂಟಿ ಮೀಟರ್ ದೂರದಷ್ಟು ಬೆಳಕು ಚಲಿಸುವ ಅವಧಿ. ಈ ಹಿನ್ನೆಲೆಯಲ್ಲಿ ವಿಶ್ಲೇಷಿಸುವುದಾದರೆ ಉಪಗ್ರಹಗಳ ಚಲನೆ ಮತ್ತು ವಾಸ್ತವದ ಸಮಯಕ್ಕೂ ವ್ಯತ್ಯಾಸವಾಗುತ್ತದೆ. ಎನ್​ಐಎಸ್​ಟಿ ಸಮಯದಲ್ಲಿ ಬಹಳಷ್ಟು ನಿಖರತೆ ಕಾಯ್ದುಕೊಂಡಿದ್ದರೂ ಜಾಗತಿಕ ಗಡಿಯಾರದ ಸಮಯಕ್ಕೆ ಸರಾಸರಿ 20 ನ್ಯಾನೊ ಸೆಕೆಂಡ್​ಗಳಷ್ಟು ಹಿಂದೆ ಅಥವಾ ಮುಂದೆ ಇರುತ್ತದೆ.
  • ಇದು ಕೆಲವೊಮ್ಮೆ ಬಾಹ್ಯಾಕಾಶ ಯೋಜನೆಗಳಿಗೆ ಭಾರಿ ಹಿನ್ನಡೆ ಉಂಟುಮಾಡುತ್ತದೆ. ಆದ್ದರಿಂದ ಇಂತಹ ವ್ಯತ್ಯಾಸವನ್ನು ಹೋಗಲಾಡಿಸಿ ದೇಶೀಯ ತಂತ್ರಜ್ಞಾನದಲ್ಲಿ ಸಮಯದ ನಿಖರತೆಯನ್ನು ಕಾಯ್ದುಕೊಳ್ಳಲು ಇಸ್ರೋ ‘ನಾವಿಕ್‘ ಜಿಪಿಎಸ್ ಅಭಿವೃದ್ಧಿಗೆ ಮುಂದಡಿ ಇರಿಸಿದೆ.
  • ಭಾರತ ಸಹಿತ ವಿಶ್ವದ ಬಹುತೇಕ ರಾಷ್ಟ್ರಗಳು ಸದ್ಯ ಅಮೆರಿಕ ಮೂಲದ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಸ್ಟ್ಯಾಂಡರ್ಡ್ ಮತ್ತು ಟೆಕ್ನಾಲಜಿ (ಎನ್​ಐಎಸ್​ಟಿ) ಅಭಿವೃದ್ಧಿ ಪಡಿಸಿರುವ ಜಿಪಿಎಸ್ ತಂತ್ರಜ್ಞಾನ ಬಳಕೆ ಮಾಡುತ್ತಿವೆ. ಇದರಿಂದ ಸ್ಥಳೀಯ ಸ್ಟ್ಯಾಂಡರ್ಡ್ ಸಮಯಕ್ಕೂ ಎನ್​ಐಎಸ್​ಟಿ ಒದಗಿಸುವ ಸಮಯಕ್ಕೂ ಮೈಕ್ರೋ ಸೆಕೆಂಡ್​ಗಳಷ್ಟು ವ್ಯತ್ಯಾಸ ಇದೆ. ನಾವಿಕ್​ನಿಂದ ಈ ವ್ಯತ್ಯಾಸ ಕೂಡ ದೂರವಾಗಲಿದೆ. ಭದ್ರತೆ ಮತ್ತಿತರ ಮಹತ್ವದ ಯೋಜನೆಗಳಿಂದ ಇದರಿಂದ ಪ್ರಯೋಜನ ಆಗಲಿದೆ.

ನಾವಿಕ್​ ನೆರವಿಗೆ ಏಳು ಉಪಗ್ರಹ

  • ನಾವಿಕ್ ಯೋಜನೆಯ ಸಾಕಾರಕ್ಕೆ ಇಸ್ರೋ ಈಗಾಗಲೇ IRNSS (ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ) ಸರಣಿಯಲ್ಲಿ ಏಳು ಉಪಗ್ರಹಗಳನ್ನು 2013ರ ಜುಲೈನಿಂದ 2016ರ ಏಪ್ರಿಲ್ ಅವಧಿಯಲ್ಲಿ ಉಡಾಯಿಸಿದೆ.
  • 1349 ಕೋಟಿ ರೂ.ಗಳನ್ನು ಈ ಯೋಜನೆಗಳಿಗೆ ವೆಚ್ಚ ಮಾಡಿದೆ. ಈ ಉಪಗ್ರಹಗಳು 2018ರಿಂದ ಕಾರ್ಯಾರಂಭ ಮಾಡಲಿದ್ದು, 1500 ಕಿ.ಮೀ. ಪ್ರಾದೇಶಿಕ ವಲಯದ ವ್ಯಾಪ್ತಿಯಲ್ಲಿ ಇದು ಸಕ್ರಿಯವಾಗಿರಲಿದೆ. ದೇಶೀಯ ತಂತ್ರಜ್ಞಾನದ ನ್ಯಾವಿಗೇಷನ್ ಉಪಗ್ರಹ ಹೊಂದಿದ ವಿಶ್ವದ 5ನೇ ರಾಷ್ಟ್ರ ಎಂಬ ಶ್ರೇಯಕ್ಕೆ ಭಾರತ ಪಾತ್ರವಾಗಲಿದೆ. ಅಮೆರಿಕ, ಚೀನಾ ಮತ್ತು ರಷ್ಯಾಗಳು ಈಗಾಗಲೇ ಇಂತಹ ವ್ಯವಸ್ಥೆ ಹೊಂದಿವೆ.

  ಯಾವ ದೇಶದಲ್ಲಿ ಯಾವ ರೀತಿಯ ವ್ಯವಸ್ಥೆ ಯಿದ..?

  1. ಅಮೆರಿಕ-ಜಿಪಿಎಸ್
  2. ರಷ್ಯಾ -ಜಿಎಲ್​ಒಎನ್​ಎಎಸ್​ಎಸ್
  3. ಐರೋಪ್ಯ ಒಕ್ಕೂಟ – ಗೆಲಿಲಿಯೋ
  4. ಚೀನಾ – ಬೈಡೋ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್

SOURCE-PIB

 

3.ಬಾಲ್ಯ ವಿವಾಹ ಕಾಯಿದೆ ಯಲ್ಲಿನ ದೋಷದ  ಬಗ್ಗೆ ವಿವರಣೆ ಕೇಳಿದ- ಸುಪ್ರೀಂ ಕೋರ್ಟ್

ವಿದ್ಯಾರ್ಥಿಗಳ ಗಮನಕ್ಕೆ

Mains Paper 2: Polity Welfare schemes for vulnerable sections of the population by the Centre and States and the performance of these schemes; mechanisms, laws, institutions and Bodies constituted for the protection and betterment of these vulnerable sections. 

(ಸಾಮಾನ್ಯ ಅಧ್ಯಾಯ –2: ಪಾಲಿಟಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಸಮಾಜದ ಕೆಳವರ್ಗದ ಏಳಿಗೆಗೆ ಹಾಕಿಕೊಂಡಿರುವ ಕಲ್ಯಾಣ ಕಾರ್ಯಕ್ರಮಗಳು ಹಾಗು ಕಾರ್ಯಕ್ರಮಗಳ ಸಾಧನೆಯ   ಪರಾಮರ್ಶೆ .ದಲಿತ ವರ್ಗಗಳ ರಕ್ಷಣೆ ಹಾಗು ಏಳಿಗೆಗೆ ನಿರೂಪಿಸಿರುವ ತಂತ್ರಗಳು ,ಕಾನೂನುಗಳು ,ಸಂಸ್ಥೆಗಳು ಹಾಗು ಮಂಡಳಿಗಳು )

UPSC ದೃಷ್ಟಿಕೋನದಿಂದ, ಈ ಕೆಳಗಿನ ವಿಷಯಗಳು ಮುಖ್ಯ.

ಪ್ರಿಲಿಮ್ಸ್ ಗಾಗಿ( Prelims level):   2012 ರ ಲೈಂಗಿಕ ಅಪರಾಧಗಳ ಮಕ್ಕಳ ರಕ್ಷಣೆ ಕಾಯಿದೆಯಿಂದ (POCSO)

ಮುಖ್ಯಾ ಪರೀಕ್ಷೆ  ಗಾಗಿ Mains level : ಭಾರತದಲ್ಲಿ ಬಾಲ್ಯ ವಿವಾಹಗಳು, POCSO  ಕಾಯಿದೆ

ಪ್ರಮುಖ  ಸುದ್ದಿ

  • ಬಾಲ್ಯ ವಿವಾಹ ಪ್ರಕರಣಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಎಷ್ಟು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂಬ ಮಾಹಿತಿ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
  • ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಪ್ರಕಾರ ಎಷ್ಟು ಮಂದಿ ಬಾಲ್ಯ ವಿವಾಹ ತಡೆ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂಬ ಮಾಹಿತಿ ಕೊಡುವಂತೆಯೂ ಹೇಳಿದೆ.
  • ದೇಶದಲ್ಲಿ ಬಾಲ್ಯ ವಿವಾಹ ವ್ಯವಸ್ಥೆಯು ಈಗಲೂ ಅಸ್ತಿತ್ವದಲ್ಲಿರುವುದರಿಂದ ಬಾಲಕಿಯರ ವಿವಾಹಿತ   ಸಂಬಂಧಗಳ ವಯಸ್ಸು 18 ರಿಂದ 15 ಕ್ಕೆ ಕಡಿಮೆ ಮಾಡಬೇಕು ಹಾಗು ಅದನ್ನು ಲೌಕಿಕವಾಗಿ   ಭಾವಿಸಬೇಕಾಗಿದೆ ಎಂದು ಕೇಂದ್ರ ಸರ್ಕಾರವು  ಪಾರ್ಲಿಮೆಂಟ್ ಗೆ ಹೇಳಿತ್ತು.
  • 15ರಿಂದ 18 ವರ್ಷದೊಳಗೆ ಮದುವೆಯಾದ ಬಾಲಕಿಯರ ಆರೋಗ್ಯ ಹದಗೆಟ್ಟಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ‘ಇಂಡಿಪೆಂಡೆಂಟ್‌ ಥಾಟ್‌’ಎನ್‌ಜಿಒ ಕೋರ್ಟ್ ಗೆ ನೀಡಿತ್ತು

ತಾರತಮ್ಯದ ಕಾನೂನು (Discriminatory law)

  • ಅತ್ಯಾಚಾರಕ್ಕೆ ಶಾಸನಬದ್ಧ ವಿನಾಯಿತಿಯು  ಜೀವನ, ಸ್ವಾತಂತ್ರ್ಯ, ಸಮಾನತೆಗೆ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ತಾರತಮ್ಯವನ್ನುಂಟುಮಾಡುತ್ತಿದೆ.
  • ಈ ವಿನಾಯಿತಿಯು 2013 ರ ಕ್ರಿಮಿನಲ್ ಲಾ (ತಿದ್ದುಪಡಿ) ಕಾಯಿದೆಯ ಒಂದು  ಭಾಗವಾಗಿದೆ ಮತ್ತು ಇದು 2012 ರ ಲೈಂಗಿಕ ಅಪರಾಧಗಳ ಮಕ್ಕಳ ರಕ್ಷಣೆಗೆ ಕಾಯ್ದೆಗೆ  (POCSO). ವಿರುದ್ಧವಾಗಿದೆ
  • ಈ ಕಾನೂನು “ಸಂಬಂಧಪಟ್ಟ ಸಂತ್ರಸ್ತ ಹೆಣ್ಣುಮಕ್ಕಳಿಗೆ ಮಾತ್ರವಲ್ಲದೇ ಮುಂದಿನ ತಲೆಮಾರುಗಳನ್ನು  ಉಲ್ಲಂಘಿಸುತ್ತದೆ
  • 18 ವರ್ಷದೊಳಗಿನ ಹುಡುಗಿ ಮಗುವಾಗಿದ್ದಾಗ ಮಾತ್ರ ,POCSO ಅಡಿಯಲ್ಲಿ ಬರುತ್ತದೆ. ಆದರೆ ಒಮ್ಮೆ ಅವಳು ವಿವಾಹವಾಗಿದ್ದರೆ Exception 2 to Section 375 of the IPC. ಪ್ರಕಾರ POCSO ಅಡಿಯಲ್ಲಿ ಬರುವುದಿಲ್ಲ .  ಇದು ಸಂಪೂರ್ಣವಾಗಿ ಅಸಮಂಜಸವಾಗಿದೆ.

BACK 2 BASICS

ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ ಅಧಿನಿಯಮ-POCSO Act 2012

  • ಹದಿನೆಂಟು ವರ್ಷಗಳ ಕೆಳಗಿನ ಯಾವುದೇ ವ್ಯಕ್ತಿಯನ್ನು ಮಗುವೆಂದು ಪರಿಗಣಿಸುತ್ತಾರೆ
  • ಮಕ್ಕಳ ಹಿತರಕ್ಷಣೆಗಾಗಿ 20ನೇ ನವೆಂಬರ್ 1989ರಲ್ಲಿ ವಿಶ್ವ ಸಂಸ್ಥೆಯು ಮಕ್ಕಳ ಹಕ್ಕುಗಳನ್ನು ಪ್ರತಿಪಾದಿಸಿತು. ಭಾರತ ಸರಕಾರವು ಡಿಸೆಂಬರ್ 1992ರಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಹಾಕಿತು.
  • ಇದರ ಪ್ರಕಾರ ಮಗುವಿನ ಗೌಪ್ಯತೆ ಮತ್ತು ಏಕಾಂತತೆಯ ಹಕ್ಕನ್ನು ಕಾಪಾಡುವುದು ಹಾಗೂ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಇಂತಹ ಅಪರಾಧಗಳನ್ನು ತಡೆಯಲು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯಿದೆಯನ್ನು 2012 ನವೆಂಬರ್‍ನಿಂದ ಜಾರಿಗೆ ತರಲಾಗಿದೆ. ಇಂತಹ ಪ್ರಕರಣಗಳನ್ನು ವಿಚಾರಣೆ ಮಾಡಲು ವಿಶೇಷ ನ್ಯಾಯಾಲಯಗಳನ್ನು ರಚಿಸಲಾಗಿದೆ.

ಕಾಯ್ದೆಯ ಉದ್ದೇಶ

  • ಲೈಂಗಿಕ ಕಿರುಕುಳ, ಲೈಂಗಿಕ ಶೋಷಣೆ, ಲೈಂಗಿಕ ಹಲ್ಲೆಗಳಿಂದ ಮಕ್ಕಳಿಗೆ ರಕ್ಷಣೆ
  • 18 ವರ್ಷ ಕೆಳಗಿನವರ ಮೇಲೆ ನಡೆಸುವ ಲೈಂಗಿಕ ದೌರ್ಜನ್ಯ, ಲೈಂಗಿಕ ಹಲ್ಲೆಗಳಿಂದ ರಕ್ಷಣೆ
  • ಪೋಕ್ಸೋ ಅಡಿ ಲೈಂಗಿಕ ಅಪರಾಧಗಳು ಮತ್ತು ಶಿಕ್ಷೆ
  • ಲೈಂಗಿಕ ದೌರ್ಜನ್ಯದಂತಹ ದುಷ್ಕತ್ಯಕ್ಕೆ ಸಹಾಯ ಮಾಡುವುದೂ ಒಂದು ಅಪರಾಧವಾಗಿರುತ್ತದೆ.

ವಿವಿಧ ರೀತಿಯ ಮಕ್ಕಳ ದುರುಪಯೋಗದ ಅಪರಾಧಗಳಿಗೆ ನಿಖರವಾದ  ವ್ಯಾಖ್ಯಾನಗಳು

  • ಕಠಿಣ ಶಿಕ್ಷೆ
  • ಕಡ್ಡಾಯ ವರದಿ
  • ಮಕ್ಕಳ ಸ್ನೇಹಿ ವಿಧಾನಗಳು
  • ಕಾಯಿದೆಯ 45 ನೇ ವಿಭಾಗದಡಿಯಲ್ಲಿ, ನಿಯಮಗಳನ್ನು ಮಾಡುವ ಅಧಿಕಾರವು ಕೇಂದ್ರ ಸರಕಾರಕ್ಕಿದೆ.
  • ಆರೈಕೆ ಮತ್ತು ರಕ್ಷಣೆಗಾಗಿ ವ್ಯವಸ್ಥೆ
  • ವಿಶೇಷ ನ್ಯಾಯಾಲಯದಿಂದ ಪರಿಹಾರವನ್ನು ನೀಡುವ ಮಾನದಂಡ

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ(The National Commission for the Protection of Child Rights (NCPCR))ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಜ್ಯ ಆಯೋಗಗಳು (State Commissions for the Protection of Child Rights (SCPCRs)) ಆಕ್ಟ್ ನ್ನು  ಅನುಷ್ಠಾನಕ್ಕೆ  ತರುವ   ಅಧಿಕಾರವನ್ನು  ಹೊಂದಿದೆ

ಮುಖ್ಯ ಪರೀಕ್ಷೆ ಯಲ್ಲಿ  ಪ್ರಬಂಧ ಬರವಣಿಗೆಗಾಗಿ

ಮದುವೆಗೆ ಹುಡುಗಿಗೆ 18 ವರ್ಷ ಏಕೆ ನಿಗದಿ ಮಾಡಲಾಗಿದೆ?

  • ಹಿಂದಿನ ಕಾಲದಲ್ಲಿ ಬಾಲ್ಯ ವಿವಾಹ ಪದ್ದತಿ ಚಾಲ್ತಿಯಲ್ಲಿತ್ತು. ಆಗ ಸಮಾಜದ ಮೇಲಾಗುತ್ತಿದ್ದ ಸಮಸ್ಯೆಗಳನ್ನೆಲ್ಲಾ ಗಮನಿಸಿ 1929ರಲ್ಲೇ ಕಾನೂನು ತಜ್ಞರು ತೀವ್ರ ಅಧ್ಯಯನ ನಡೆಸಿ ಬಾಲ್ಯ ವಿವಾಹ ಪದ್ದತಿ ನಿಷೇಧ ಕಾಯಿದೆ ಜಾರಿಗೆ ತರಲಾಯಿತು.
  • ಆನಂತರವೂ ಬಾಲ್ಯ ವಿವಾಹ ಅಲ್ಲಲ್ಲಿ ನಡೆಯುತ್ತಿತ್ತು ಮತ್ತು ಮದುವೆಗೆ ವಯಸ್ಸಿನ ಮಿತಿ ಇರಲಿಲ್ಲ. ಸ್ವಾತಂತ್ರ್ಯಾನಂತರ 1955ರಲ್ಲಿ ಹಿಂದೂ ವಿವಾಹ ಕಾಯಿದೆ ಜಾರಿಗೆ ತಂದು, ಆ ಪ್ರಕಾರ ಮದುವೆಗೆ ಹುಡುಗನ ವಯಸ್ಸು 21 ಹಾಗೂ ಹುಡುಗಿಯ ವಯಸ್ಸು 18 ಎಂದು ನಿಗದಿ ಮಾಡಲಾಗಿತ್ತು. ಹುಡುಗಿಗೆ ಏಕೆ 18 ವರ್ಷ ನಿಗದಿ ಮಾಡಲಾಗಿತ್ತು ಎಂದರೆ, 18ವರ್ಷದ ವೇಳೆ ಹುಡುಗಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಂಸಾರದ ಜವಾಬ್ದಾರಿಯನ್ನು ಹೊರುವ ಸ್ಥಿತಿಯಲ್ಲಿ ಇರುತ್ತಾಳೆ ಎಂದು.
  • ಹಾಗೆ ನೋಡಿದರೆ, 18 ಕೂಡ ಕಡಿಮೆಯೇ. ಎಷ್ಟೋ ಸಂದರ್ಭಗಳಲ್ಲಿ ಹುಡುಗಿಗೆ 18 ತುಂಬಿ ಆಕೆ ಖುತುಮತಿಯಾಗಿ ದೈಹಿಕವಾಗಿ ಮದುವೆಗೆ ಸಿದ್ಧಳಿದ್ದರೂ, ಮಾನಸಿಕವಾಗಿ ಆಕೆಗೆ ಸಂಸಾರ ನಿಭಾಯಿಸುವಷ್ಟು ಬೆಳೆದಿರುವುದಿಲ್ಲ. ಹಾಗಾಗಿಯೇ ಈಗಿರುವ 18 ವಯಸ್ಸನ್ನು ಇನ್ನೂ ಹೆಚ್ಚಳ ಮಾಡಬೇಕು ಎಂಬ ಕೂಗು ಇದೆ.

ಹುಡುಗಿಯ ಮದುವೆ ವಯಸ್ಸನ್ನು 16ಕ್ಕೆ ಇಳಿಸಿದರೆ ಏನಾಗುತ್ತದೆ?

  • ಅತ್ಯಾಚಾರಗಳನ್ನು ತಡೆಗಟ್ಟಲು 16 ಕ್ಕೆ ಹುಡುಗಿಗೆ ಮದುವೆ ಮಾಡಿದರೆ ಒಳ್ಳೆಯದು ಎಂಬುದು ಶುದ್ಧ ತಪ್ಪು. 16ಕ್ಕೆ ವಯಸ್ಸು ಇಳಿಸಿದಾಕ್ಷಣ ಅತ್ಯಾಚಾರಗಳು ನಿಂತು ಹೋಗುತ್ತವೆಯೇ? ಹಾಗಿದ್ದರೆ 3 ವರ್ಷದ ಮಗುವಿನ ಮೇಲೂ ಅತ್ಯಾಚಾರ ಆಗುತ್ತದೆ. ಹಾಗೆಂದು ಮೂರು ವರ್ಷಕ್ಕೆ ಮದುವೆ ಮಾಡಲಾಗುತ್ತದೆಯೇ? ಹಾಗೆ ಮಾಡಿದರೆ ಮತ್ತೆ ನಾವು ಬಾಲ್ಯ ವಿವಾಹ ಪದ್ದತಿಗೆ ಮರಳಿದಂತಾಗುತ್ತದೆ.
  • ಎಲ್ಲ ವಯಸ್ಸಿನ ಮಹಿಳೆಯರೂ ಅತ್ಯಾಚಾರಕ್ಕೆ ಒಳಗಾಗುತ್ತರೆ, ಅತ್ಯಾಚಾರ ಮಾಡುವ ಮನಸ್ಥಿತಿ ಇರುವವನು ಮದುವೆ ಆಗಿದೆಯೇ, ಇಲ್ಲವೇ ಎಂದು ನೋಡಿ ಅತ್ಯಾಚಾರ ಎಸಗುವುದಿಲ್ಲ. ಅತ್ಯಾಚಾರ ಮಾಡಿದವವನ್ನು ಹಿಡಿದು ಶಿಕ್ಷಿಸಲು ಕಾನೂನು, ಪೊಲೀಸ್, ಕೋರ್ಟ್‌ಗಳಿವೆ. ಅತ್ಯಾಚಾರ ಮಾಡುವುದು ಅಪರಾಧ, ಅಂತಹವರನ್ನು ಶಿಕ್ಷಿಸುವ ಬದಲು, ಮದುವೆ ಎಂಬ ಸಂಸ್ಥೆಯನ್ನೇ ಬಲಿಕೊಟ್ಟರೆ ಹೇಗೆ?.
  • ಇನ್ನೂ ಮುಖ್ಯವಾಗಿ 16ನೇ ವಯಸ್ಸಿಗೆ ಈಗಿನ ಕಾಲಮಾನದಲ್ಲಿ ಹೆಣ್ಣು ಮಕ್ಕಳು ದೈಹಿಕವಾಗಿ ಮೈ ಕೈ ತುಂಬಿಕೊಂಡು ಬೆಳೆದು ಮದುವೆಗೆ ಸಿದ್ಧರಿರಬಹುದು, ಆದರೆ ಅವರು ಮಾನಸಿಕವಾಗಿ ಪ್ರಬುದ್ಧರಾಗಿರುವುದಿಲ್ಲ. ಮದುವೆ ಆಗಬೇಕಾದರೆ ಹುಡುಗಿ ದೈಹಿಕ ಹಾಗೂ ಮಾನಸಿಕ ಎರಡೂ ರೀತಿಯಲ್ಲಿ ಸಿದ್ಧಳಿರಬೇಕು.

16ಕ್ಕೆ ಇಳಿಸಬೇಕು ಎಂಬ ಹೇಳಿಕೆ ನ್ಯಾಯಾಂಗ ನಿಂದನೆ ಆಗುವುದಿಲ್ಲವೇ?

  • ಹುಡುಗಿಯರ ಮದುವೆ ವಯಸ್ಸನ್ನು 16ಕ್ಕೆ ಇಳಿಸಬೇಕು ಎಂಬ ಹೇಳಿಕೆ ನ್ಯಾಯಾಂಗ ನಿಂದನೆ ಆಗುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ತಮಗೆ ಅನ್ನಿಸಿದ್ದನ್ನು ಹೇಳುವ ಹಕ್ಕಿದೆ. ಅವರ ಹೇಳಿಕೆಯೇ ಅಂತಿಮವಲ್ಲ, ಅದು ಕಾನೂನು ಆಗಬೇಕು. ಶಾಸನ ರೂಪಿಸುವುದು ಅಷ್ಟು ಸುಲಭವಲ್ಲ.
  • ಕೇಂದ್ರ ಸರಕಾರ ಮೊದಲು ಆ ಬಗ್ಗೆ ನಿರ್ಧಾರ ಕೈಗೊಂಡು ವಿಧೇಯಕ ಸಿದ್ದಪಡಿಸಿ ಅದನ್ನು ಸಂಸತ್ತಿನ ಉಭಯ ಸದನಗಳ ಮುಂದಿಟ್ಟು ಸುಧೀರ್ಘ ಸಮಾಲೋಚನೆ ನಂತರವಷ್ಟೇ ಅದಕ್ಕೆ ಶಾಸನ ರೂಪ ನೀಡಬೇಕು.

 

SOURCE-THE HINDU

 

 

Share