4Th SEPTEMBER
SOURCE-THE HINDU
1.ಯುನೆಸ್ಕೋದಿಂದ ಭಾರತದ ಮೊದಲ ವಿಶ್ವ ಪರಂಪರೆಯ ನಗರ ಸ್ಥಾನ ಪಡೆದ ಅಹಮದಾಬಾದ್
priorioty(ಆದ್ಯತೆ)-ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ
ಪ್ರಿಲಿಮ್ಸ್ ಗಾಗಿ:
- ಗುಜರಾತ್ ರಾಜ್ಯದ ವಾಣಿಜ್ಯ ರಾಜಧಾನಿ ಎಂದೇ ಪ್ರಸಿದ್ದ್ದಿ ಆಗಿರುವ ಅಹಮದಾಬಾದ್ ನಗರಕ್ಕೆ ಔಪಚಾರಿಕವಾಗಿ ಯುನೆಸ್ಕೋದಿಂದ ಭಾರತದ ಮೊದಲ ವಿಶ್ವ ಪರಂಪರೆ ನಗರದ ಸ್ಥಾನಮಾನವನ್ನು ಪಡೆದಿದೆ .
- ಜುಲೈನಲ್ಲಿ ಪೋಲೆಂಡ್ ನಲ್ಲಿ ನಡೆದ ಸಭೆಯಲ್ಲಿ ಯುಎನ್ ಏಜೆನ್ಸಿಯು ಅಹಮದಾಬಾದ್ ನಗರವನ್ನು ಭಾರತದ ಮೊದಲ ವಿಶ್ವ ಪರಂಪರೆ ನಗರ ಎಂದು ಹೇಳಿತ್ತು .
- ಅಹಮದಾಬಾದ್ ನಗರಕ್ಕೆ ದೊರೆತಿರುವ ಈ ಗೌರವವು ಭಾರತದ ಮೊದಲ ನಗರ ಮತ್ತು ಏಷ್ಯಾದಲ್ಲಿ ಮೂರನೇ ಸ್ಥಾನದಲ್ಲಿದೆ.ಏಷ್ಯಾದ ಇನ್ನೆರಡು ನಗರಗಳೆಂದರೆ – ಶ್ರೀಲಂಕಾದ ಗಲ್ಲೆ ಮತ್ತು ನೇಪಾಳದ ಭಕ್ತಪುರ ಎಂಬ ಎರಡು ಪ್ರದೇಶಗಳು
- ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದಲ್ಲಿನ ವಿಶ್ವ ಪರಂಪರೆಯ ಗುಣಲಕ್ಷಣಗಳ ಸಂಖ್ಯೆಯಲ್ಲಿ ಭಾರತವು ಚೀನಾ ನಂತರ ಎರಡನೆಯ ಸ್ಥಾನದಲ್ಲಿದೆ ಮತ್ತು ಪ್ರಪಂಚದಲ್ಲಿ ಏಳನೇ ಸ್ಥಾನದಲ್ಲಿದೆ.
- ಭಾರತವು ಒಟ್ಟು 36 ವಿಶ್ವ ಪರಂಪರೆಯ ಶಿಲಾಶಾಸನಗಳನ್ನೂ ಹೊಂದಿದೆ ಅದರಲ್ಲಿ 28 ಸಂಸ್ಕೃತಿ, 7 ನೈಸರ್ಗಿಕ ಮತ್ತು 1 ಮಿಶ್ರ ಪ್ರದೇಶ.
ಮುಖ್ಯ ಪರೀಕ್ಷೆಗಾಗಿ
ಒಂದು ಪ್ರದೇಶವು ಯುನೆಸ್ಕೋದಿಂದ ವಿಶ್ವ ಪರಂಪರೆ ಸ್ಥಾನವನ್ನು ಪಡೆಯಬೇಕಾದರೆ ಅದಕ್ಕೆ ಬೇಕಾಗಿರುವ ಅರ್ಹತೆಗಳೇನು ??? ಯಾವ ರೀತಿ ನಾಮಕರಣ ಪ್ರಕ್ರಿಯೆ ನಡೆಯುತ್ತದೆ..??
- ವಿಶ್ವ ಪರಂಪರೆಯ ತಾಣವಾಗಿ ಒಂದು ತಾಣವು ಘೋಷಿಸಲ್ಪಡಬೇಕಾದರೆ ಒಂದು ದೀರ್ಘ ಪ್ರಕ್ರಿಯೆಯಿದೆ. ಒಂದು ರಾಷ್ಟ್ರವು ತನ್ನ ಎಲ್ಲಾ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಆಸ್ತಿಗಳ ಪಟ್ಟಿಯೊಂದನ್ನು ತಯಾರಿಸಬೇಕಾಗುವುದು.
- ಇದನ್ನು ತಾತ್ಕಾಲಿಕ ( ಟೆಂಟೆಟಿವ್) ಪಟ್ಟಿಯೆನ್ನುವರು. ಮುಂದೆ ಈ ಪಟ್ಟಿಯೊಳಗಿನ ತಾಣಗಳನ್ನು ಮಾತ್ರ ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲು ನಾಮಕರಣ ಸಲ್ಲಿಸಬಹುದಾಗಿರುತ್ತದೆ. ಈ ಪಟ್ಟಿಯೊಳಗಿನ ತಾಣವೊಂದನ್ನು ಆ ದೇಶವು ನಾಮಕರಣ ಕಡತಕ್ಕೆ ಸೇರಿಸುವುದು.
- ಈ ನಾಮಕರಣಕ್ಕೆ ಸಂಬಂಧಿಸಿದಂತೆ ಅವಶ್ಯವಾದ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ಯುನೆಸ್ಕೋ ನೆರವಾಗುತ್ತದೆ. ಈ ನಾಮಕರಣ ಕಡತವು ತಾಣದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಮತ್ತು ದಾಖಲೆಗಳನ್ನು ಒಳಗೊಂಡಿರಬೇಕಾಗಿರುತ್ತದೆ.
- ಈ ನಾಮಕರಣ ಕಡತವನ್ನು ಎರಡು ಬೇರೆಬೇರೆ ಸ್ವಾಯತ್ತ ಸಂಸ್ಥೆಗಳು ಅಧ್ಯಯನ ಮಾಡುವುವು. ಈ ಸಂಸ್ಥೆಗಳೆಂದರೆ – ಅಂತಾರಾಷ್ಟ್ರೀಯ ಸ್ಮಾರಕ ಮತ್ತು ತಾಣಗಳ ಸಮಿತಿ ಹಾಗೂ ವಿಶ್ವ ಸಂರಕ್ಷಣಾ ಸಂಘ. ಈ ಸಂಸ್ಥೆಗಳು ತಮ್ಮ ಅಧ್ಯಯನದ ವರದಿಯನ್ನು ಶಿಫಾರಸುಗಳೊಂದಿಗೆ ವಿಶ್ವ ಪರಂಪರಾ ಸಮಿತಿಗೆ ಸಲ್ಲಿಸುತ್ತವೆ.
- ವರ್ಷಕ್ಕೆ ಒಂದು ಬಾರಿ ಸಭೆ ಸೇರುವ ಈ ಸಮಿತಿಯು ನಾಮಕರಣಗೊಂಡ ತಾಣವನ್ನು ವಿಶ್ವ ಪರಂಪರಾ ಪಟ್ಟಿಗೆ ಸೇರಿಸಬೇಕೇ ಯಾ ಬೇಡವೇ ಎಂಬ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದು. ಕೆಲವೊಮ್ಮೆ ಈ ಬಗೆಗಿನ ನಿರ್ಧಾರವನ್ನು ಮುಂದೂಡಿ ತಾಣದ ಬಗ್ಗೆ ಇನ್ನೂ ಹೆಚ್ಚಿನ ಅಗತ್ಯ ಮಾಹಿತಿ ನೀಡುವಂತೆ ಆ ರಾಷ್ಟ್ರಕ್ಕೆ ತಿಳಿಸಲಾಗುತ್ತದೆ.
ಇಂದು ಯಾವುದೇ ತಾಣವು ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲ್ಪಡಬೇಕಾದರೆ ಒಟ್ಟು ಹತ್ತು ಮಾನದಂಡಗಳಿಂದ ಪರೀಕ್ಷೆಗೊಳಪಡುವುದು.
2004ರ ಅಂತ್ಯದವರೆಗೆ ಸಾಂಸ್ಕೃತಿಕ ಪರಂಪರೆಯನ್ನು ಆರು ಮಾನದಂಡಗಳಿಂದ ಹಾಗೂ ಪ್ರಾಕೃತಿಕ ಪರಂಪರೆಯನ್ನು ನಾಲ್ಕು ಮಾನದಂಡಗಳಿಂದ ಅಳೆಯಲಾಗುತ್ತಿತ್ತು. 2005ರಲ್ಲಿ ಈ ಪದ್ಧತಿಯನ್ನು ಮಾರ್ಪಡಿಸಿ ಒಟ್ಟು ಹತ್ತು ಅಂಶಗಳ ಅರ್ಹತಾಪಟ್ಟಿಯನ್ನು ತಯಾರಿಸಲಾಯಿತು. ನಾಮಕರಣಗೊಂಡ ತಾಣವು ಈ ಹತ್ತರ ಪೈಕಿ ಕನಿಷ್ಟ ಒಂದಾದರೂ ಅರ್ಹತೆಯನ್ನು ಹೊಂದಿದ್ದು “ವಿಶ್ವದ ಅಮೂಲ್ಯ ಆಸ್ತಿ” ಯಾಗಿರಬೇಕಾಗಿರುತ್ತದೆ.
ಸಾಂಸ್ಕೃತಿಕ ಮಾನದಂಡಗಳು (Cultural criteria)
- ಮಾನವ ಸೃಷ್ಟಿಯ ಅದ್ಭುತ ಪ್ರತೀಕವಾಗಿರಬೇಕು.
- ವಾಸ್ತುಶಾಸ್ತ್ರ ಯಾ ತಂತ್ರಜ್ಞಾನ , ಸ್ಮಾರಕಗಳ ನಿರ್ಮಾಣ ಕಲೆ, ನಗರ ಯೋಜನೆ ಅಥವಾ ಭೂಪ್ರದೇಶವನ್ನು ಒಪ್ಪವಾಗಿ ಸಿಂಗರಿಸುವ ಕಲಾವಿನ್ಯಾಸಗಳಲ್ಲಿನ ಪ್ರಗತಿಯನ್ನು ಸಾರುವ ಪ್ರಮುಖ ಮಾನವ ಮೌಲ್ಯಗಳ ವಿನಿಮಯವು ಒಂದು ಕಾಲಾವಧಿಯಲ್ಲಿ ಅಥವಾ ವಿಶ್ವದ ಒಂದು ನಿರ್ದಿಷ್ಟ ಸಾಂಸ್ಕೃತಿಕ ಪ್ರದೇಶದಲ್ಲಿ ಜರುಗಿದುದರ ದ್ಯೋತಕವಾಗಿರಬೇಕು.
- ಒಂದು ಸಾಂಸ್ಕೃತಿಕ ಪರಂಪರೆಯ ಅಥವಾ ಇಂದು ಜೀವಂತವಾಗಿರುವ ಇಲ್ಲವೇ ನಶಿಸಿಹೋಗಿರುವ ನಾಗರಿಕತೆಯೊಂದರ ಅಪ್ರತಿಮ ದ್ಯೋತಕವಾಗಿರಬೇಕು.
- ಮಾನವ ಇತಿಹಾಸದಲ್ಲಿನ ಗಣನೀಯ ಹಂತವೊಂದನ್ನು(ಹಂತಗಳನ್ನು) ಪ್ರತಿಬಿಂಬಿಸುವ ಕಟ್ಟಡ , ವಾಸ್ತುಶಿಲ್ಪ ಯಾ ತಂತ್ರಜ್ಞಾನದ ಸೃಷ್ಟಿ ಅಥವಾ ಭೂವಿನ್ಯಾಸವಾಗಿರಬೇಕು.
- ಪರಂಪರಾಗತ ಮಾನವ ನೆಲೆ ಅಥವಾ ಭೂಮಿಯ ಉಪಯೋಗ ಅಥವಾ ಸಮುದ್ರದ ಉಪಯೋಗದ ಅತ್ಯದ್ಭುತ ಪ್ರತೀಕವಾಗಿರಬೇಕು. ಇಲ್ಲವೇ ತೀವ್ರವಾಗಿ ಬದಲಾವಣೆಗೊಂಡು ಅಪಾಯಕ್ಕೀಡಾಗಿರುವ ಪ್ರಕೃತಿಯೊಡನೆ ಮಾನವನ ಒಡನಾಟದ ಅತ್ಯುತ್ತಮ ದ್ಯೋತಕವಾಗಿರಬೇಕು.
- ಘಟನೆಗಳು, ಜೀವಂತವಿರುವ ಸಂಪ್ರದಾಯಗಳು, ಮಾನವನ ನಂಬಿಕೆಗಳು, ವಿಶ್ವಮಟ್ಟದಲ್ಲಿ ಪ್ರಾಮುಖ್ಯ ಹೊಂದಿರುವ ಕಲಾತ್ಮಕ ಕೃತಿಗಳು ಯಾ ಸಾಹಿತ್ಯ ಕೃತಿಗಳೊಡನೆ ನೇರವಾಗಿ ಅಥವಾ ಸಾಕಷ್ಟು ಮಟ್ಟದ ಸಂಬಂಧ ಹೊಂದಿರಬೇಕು. ( ಸಮಿತಿಯು ಈ ಮಾನದಂಡವನ್ನು ಇತರ ಮಾನದಂಡಗಳೊಡನೆ ಅಳವಡಿಸಿ ನೋಡಬೇಕೆಂದು ಅಭಿಪ್ರಾಯಪಡುತ್ತದೆ.)
ಪ್ರಾಕೃತಿಕ (ನೈಸರ್ಗಿಕ) ಮಾನದಂಡಗಳು (Natural criteria)
- ಅತಿ ವಿಶಿಷ್ಟ ನೈಸರ್ಗಿಕ ಕ್ರಿಯೆಗಳನ್ನು ಹೊಂದಿರಬೇಕು ಇಲ್ಲವೇ ಅದ್ಭುತ ಪ್ರಕೃತಿ ಸೌಂದರ್ಯದ ಪ್ರದೇಶಗಳನ್ನು ಹೊಂದಿರಬೇಕು.
- ಭೂರಚನನೆಯಲ್ಲಿ ಆಗುತ್ತಿರುವ ಪ್ರಗತಿಯ ಸೂಚಿಗಳು ಅಥವಾ ವಿಶಿಷ್ಟ ಭೂ ಮೇಲ್ಮೈ ಲಕ್ಷಣಗಳನ್ನು ಹೊಂದಿರಬೇಕು. ಇಲ್ಲವೇ ಜೀವಿಗಳ ಇತಿಹಾಸವನ್ನೊಳಗೊಂಡಂತೆ ಭೂಮಿಯ ಇತಿಹಾಸದ ಪ್ರಮುಖ ಘಟ್ಟಗಳ ಅತ್ಯುತ್ತಮ ಉದಾಹರಣೆಯಾಗಿರಬೇಕು.
- ನೆಲದ ಮೇಲಿನ, ಸಿಹಿನೀರಿನ, ಕಡಲತೀರದ ಮತ್ತು ಸಾಗರದ ಜೀವವ್ಯವಸ್ಥೆ, ಸಸ್ಯ ಮತ್ತು ಪ್ರಾಣಿ ಸಮುದಾಯಗಳ ವಿಕಾಸ ಮತ್ತು ಬೆಳವಣಿಗೆಯಲ್ಲಿನ ಗಣನೀಯ ಜೈವಿಕ ಕ್ರಿಯೆಗಳ ಅತ್ಯುತ್ತಮ ಉದಾಹರಣೆಯಾಗಿರಬೇಕು.
- ಅಳಿವಿನಂಚಿನಲ್ಲಿರುವ ಜೀವ ಸಂಕುಲವನ್ನೂ ಒಳಗೊಂಡಂತೆ ಜೀವವೈವಿಧ್ಯದ ರಕ್ಷಣೆಗೋಸುಗ ಇರುವ ಅತಿ ಪ್ರಮುಖ ಮತ್ತು ಮಹತ್ವದ ಪ್ರಾಕೃತಿಕ ನೆಲೆಗಳನ್ನೊಳಗೊಂಡಿರಬೇಕು.
ಹಾಗಾದರೆ ಅಹಮದಬಾದ್ ನಗರವು ಯಾವ ಮಾನದಂಡದ ಆಧಾರದ ಮೇಲೆ ಆಯ್ಕೆಯಾಗಿದೆ ???
ಇದನ್ನು ಸಾಂಸ್ಕೃತಿಕ ಮಾನದಂಡದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ
ಪ್ರಮುಖ ವಾದವುಗಳೆಂದರೆ
- ಇದು ವ್ಯಾಪಾರ ಕ್ಷೇತ್ರ ದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕೇಂದ್ರ
- ಇಲ್ಲಿ ಹಿಂದೂ-ಮುಸ್ಲಿಂ ಸಂಸ್ಕೃತಿಯ ವಾಸ್ತುಶಿಲ್ಪದ ಮಿಶ್ರಣ ಹೊಂದಿರುವ ಕಟ್ಟಡಗಳನ್ನು ಕಾಣಬಹುದು.
- ಗಾಂಧಿಜಿ ರವರ ಸ್ವಾತಂತ್ರ್ಯ ಹೋರಾಟದ ಕೇಂದ್ರ ಬಿಂದು ಆಗಿತ್ತು.
- ನಗರದೃಶ್ಯವನ್ನು ರೂಪಿಸುವಲ್ಲಿ ಯುರೋಪಿಯನ್ ಹಸ್ತಕ್ಷೇಪಕ್ಕೆ ವಿರೋಧ ವ್ಯಕ್ತ ಪಡಿಸಿದ್ದು.
2.ಉತ್ತರ ಕೊರಿಯಾದಿಂದ ಹೈಡ್ರೋಜನ್ ಬಾಂಬ್ ಪರೀಕ್ಷೆ
priorioty(ಆದ್ಯತೆ)-ಪ್ರಿಲಿಮ್ಸ್ ಪರೀಕ್ಷೆಗಾಗಿ ಮಾತ್ರ
ಪ್ರಿಲಿಮ್ಸ್ ಗಾಗಿ:
- ಉದ್ಧಟತನ ಪ್ರದರ್ಶಿಸಿರುವ ಉತ್ತರ ಕೊರಿಯಾ ಭಾರಿ ಪರಮಾಣು ಹೈಡ್ರೋಜನ್ ಬಾಂಬ್ ಪರೀಕ್ಷೆ ಮಾಡಿದೆ. ಉತ್ತರ ಕೊರಿಯಾದ ಪುಂಗ್ಯೆ – ರಿ ನ್ಯೂಕ್ಲಿಯರ್ ಸೈಟ್ನಲ್ಲಿ ಅವರೇ ತಯಾರು ಮಾಡಿದ ಹೈಡ್ರೋಜನ್ ಬಾಂಬ್ ಪರೀಕ್ಷೆ ಮಾಡಿದೆ.
- ಇದು ಉತ್ತರ ಕೊರಿಯಾದ 6ನೇ ಪರಮಾಣು ಪರೀಕ್ಷೆಯಾಗಿದ್ದು, 5ನೇ ಪರಮಾಣು ಪರೀಕ್ಷೆಗಿಂದ ಶೇಕಡ 10 ರಷ್ಟು ಪ್ರಬಲ ಎಂದೂ ಹೇಳಲಾಗುತ್ತಿದೆ. ಈ ಹಿನ್ನೆಲೆ, ಪರೀಕ್ಷೆ ನಡೆಸಿದ ಪ್ರದೇಶದ ಬಳಿಯಲ್ಲಿ ಶೇಕಡ3ರಷ್ಟು ತೀವ್ರತೆಯಲ್ಲಿ ಪ್ರಬಲವಾದ ಭೂಕಂಪ ಸಂಭವಿಸಿದೆ.
- ಉತ್ತರ ಕೊರಿಯಾ ನಡವಳಿಕೆ ಬಗ್ಗೆ ವಿಶ್ವಸಂಸ್ಥೆ ಸಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಹಲವು ನಿಬಂಧನೆಗಳನ್ನ ಅಳವಡಿಸಿದೆ. ಆದರು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಾತ್ರ ಅದನ್ನು ಪರಿಗಣಿಸುತ್ತಿಲ್ಲ.
3.ಅಪೌಷ್ಟಿಕತೆ ನಿರ್ಮೂಲನೆಗೆ ಸಪ್ತಾಹ
priorioty(ಆದ್ಯತೆ)-ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ
ಪ್ರಿಲಿಮ್ಸ್ ಗಾಗಿ:
- ದೇಶಾದ್ಯಂತ ಸೆಪ್ಟೆಂಬರ್ 1 ರಿಂದ 7 ರವರೆಗೆ ಪೌಷ್ಟಿಕಾಂಶ ಸಪ್ತಾಹ ಆಚರಿಸಲಾಗುತ್ತಿದೆ. ”ಅತ್ಯುತ್ತಮ ಶಿಶು, ಸಣ್ಣ ಮಕ್ಕಳ ಆಹಾರ ಪದ್ಧತಿ :ಮಕ್ಕಳ ಉತ್ತಮ ಅರೋಗ್ಯ”(Optimal Infrant& Young Child Feeding practices;Better Child Health) ಎಂಬ ಘೋಷವಾಕ್ಯದೊಂದಿಗೆ ಈ ಬಾರಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
- ಇದೊಂದು ವಾರ್ಷಿಕ ಆಚರನೆಯಗಿದ್ದು, ಅರೋಗ್ಯ ದೃಷ್ಟಿಯಿಂದ ಪೌಷ್ಟಿಕತೆಯ ಪ್ರಾಮುಕ್ಯತೆ,ಉತ್ಪಾದಕತೆ, ಅರ್ಥಿಕ ಬೆಳವಣಿಗೆ ಹಾಗು ದೇಶದ ಅಭಿವೃದ್ಧಿ ಮೇಲೆ ಅಪೌಷ್ಟಿಕತೆಯ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಮೂಲ ಉದ್ದೇಶದಿಂದ ವರ್ಷಕ್ಕೊಮ್ಮೆ ಪೌಷ್ಟಿಕಾಂಶ ಸಪ್ತಾಹ ಆಯೋಜಿಸಲಾಗುತ್ತದೆ.
ಮುಖ್ಯ ಪರೀಕ್ಷೆಗಾಗಿ
ಈ ಸಪ್ತಾಹದ ಪ್ರಮುಖಾಂಶಗಳೇನು ?? ಹಾಗು ಪೌಷ್ಟಿಕತೆಯ ಪ್ರಾಮುಖ್ಯತೆತೆಯೇನು
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಆಹಾರ ಮತ್ತು ಪೌಷ್ಟಿಕಾಂಶ ಮಂಡಳಿಯ ಆಯಾ ರಾಜ್ಯ /ಕೇಂದ್ರಾಡಳಿತ ಪ್ರದೇಶಗಳ ಸಂಭದಿಸಿದ ಸರ್ಕಾರಿ ಇಲಾಖೆಗಳು, ರಾಷ್ಟೀಯ ಸಂಸ್ಥೆಗಳು ಹಾಗು ಏನ್ ಜಿಓಗಳ ಸಹಯೋಗದಲ್ಲಿ ಸಪ್ತಾಹ ಆಯೋಜಿಸುತ್ತದೆ.
- ಕಾರ್ಯಗಾರ ಹಾಗು ತರಬೇತಿ ಕಾರ್ಯಕ್ರಮ,ಜಾಗೃತಿ ಮೂಡಿಸುವ ಕ್ಯಾಂಪು ಗಳೂ, ಸಮುದಾಯ ಸಭೆಗಳ ಮೂಲಕ ಜಾಗೃತಿ ಮುದುಸಲಾಗುತ್ತದೆ. ದೆಶ್ಯಾದ್ಯಂತ ಎಲ್ಲ ರಾಜ್ಯಗಳ ಎಲ್ಲ ಜಿಲ್ಲೆಗಳಲ್ಲೂ ಸಪ್ತಾಹದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ.
ಪೌಷ್ಟಿಕತೆಯ ಪ್ರಾಮುಖ್ಯತೆ
- ಪ್ರಸ್ತುತ ಹಾಗು ಮುಂದಿನ ತಲೆಮಾರಿನ ಅರೋಗ್ಯ ಮತ್ತು ಅಭಿವೃದ್ಧಿ ದೃಷ್ಟಿಯಲ್ಲಿ ಪೌಷ್ಟಿಕತೆಯ ಪಾತ್ರ ಪ್ರಧನವಾದದು. ಹುಟ್ಟುವಾಗಲೇ ತೂಕ ಕಡಿಮೆ ಇರುತ್ತದೆ. ಇದರಿಂದ, ಭವಿಷ್ಯದಲ್ಲಿ ಮದುಮೇಹ ಅಥವಾ ಹೃದಯ ಸಂಬಧಿ ಕಾಯಿಲೆಗಳು ಬರಬಹುದಾದ ಸಾದ್ಯತೆ ಇರುತ್ತದೆ.
- ಪೌಷ್ಟಿಕಾಂಶ ಕೊರತೆ ಇರುವ (ಕುಪೋಷಿತ )ಮಕ್ಕಳ ಬುದ್ಧಿಮಟ್ಟ( ಐಕ್ಯೂ) ಮತ್ತು ಗ್ರಹಿಕೆ ಸಾಮರ್ಥ್ಯ ಕಡಿಮೆ ಇರುತ್ತದೆ. ಇದು ಮಕ್ಕಳ ಶಾಲಾ ಚಟುವಟಿಕೆಗಳಲ್ಲಿ ಹಾಗು ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣವಾಗುತ್ತದೆ.
- ಮುಂದಿನ ದಿನಗಳಲ್ಲೂ ಅವರ ಉತ್ಪಾದಕತೆ ಕಡಿಮೆ ಇರುತ್ತದೆ. ಎಲ್ಲ ವಯೋಮಾನದವರು ಉತ್ತಮ ಪೌಷ್ಟಿಕಾಂಶವುಳ್ಳವರಾಗಿದ್ದರೆ,ಅವರನ್ನು ರಾಷ್ಟ್ರೀಯ ಅರ್ಥಿಕ ಅಸ್ತಿ ಎಂದೇ ಹೇಳಬಹುದು ಜನರಲ್ಲಿ ಪೌಷ್ಟಿಕತೆಯ ಮಟ್ಟ ಹೆಚ್ಚಿಸಿದರೆ ರಾಷ್ಟೀಯ ಅಭಿವೃದ್ಧಿಗೆ ಪೋರಕವಾಗಲಿದೆ.
- ಸಣ್ಣ ಮಕ್ಕಳಲ್ಲಿ ಅಪೌಷ್ಟಿಕತೆ ದೊಡ್ಡ ಸಮಸ್ಯೆಯಾಗಿ ತಲೆದೋರಿದೆ ಇನ್ನೊಂದು ಬೃಹತ್ ಅರೋಗ್ಯ ಸಮಸ್ಯೆಯು ಹೌದು. ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ -4 ರ (NFHS4)ಪ್ರಕಾರ ದೇಶದ ಪೌಷ್ಟಿಕ ಮಟ್ಟ ಉತ್ತಮ ಪ್ರಮಾಣದಲ್ಲಿಲ್ಲ. ವೇಷಶವಾಗಿ ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಿದೆ.
- ನ್ಯಾಷನಲ್ ಫ್ಯಾಮಿಲಿ ಸರ್ವೇ -3 (NFHS3)ಕ್ಕೆ ಹೋಲಿಸಿದರೆ ಶೇ. 9.6 ರಷ್ಟು ಕಡಿಮೆ ತೂಕದ ಮಕ್ಕಳ ಪ್ರಮಾಣ ಶೇ.6.8ಕ್ಕಿಳಿದಿದೆ. ರಕ್ತ ಹಿನತೆ ಯಿಂದ ಬಳಲುವವರ ಪ್ರಮಾಣ ಶೇ. 11ರಷ್ಟು ಕಡಿಮೆಯಾಗಿದೆ. ಅಪೌಷ್ಟಿಕತೆ ಬಡತನಕ್ಕೆ ಕಾರಣವಾಗುತ್ತದಲ್ಲದೆ ವೈಯಕ್ತಿಕ ಅರೋಗ್ಯ ಮತ್ತು ಅಭಿವೃದ್ಧಿಗೂ ಧಕ್ಕೆಯಾಗುತ್ತದೆ.
- ಅಲ್ಲದೆ ಇದು ರಾಷ್ಟೀಯ ಸಮಸ್ಯೆಗಳಲ್ಲಿ ಒಂದಾಗಿದ್ದು ಕಡಿಮೆ ಉತ್ಪಾದಕತೆ ಹಾಗು ಆರ್ಥಿಕವಾಗಿ ಹಿಂದುಳಿಯುವಿಕೆಗೆ ಕಾರಣವಾಗುತ್ತದೆ. ವೈಯಕ್ತಿವಾಗಿ ಪೌಷ್ಟಿಕತೆಯ ಮಟ್ಟ ಹೆಚ್ಚಿಸಲೇಬೇಕು. ಹಲವು ಕ್ಷೇತ್ರಗಳ ಸಹಯೋಗ ದೊಂದಿಗೆ ಅಪೌಷ್ಟಿಕತೆ ಯನ್ನು ನಿಯಂತ್ರಿಸಬೇಕಿದೆ.
ಅಪೌಷ್ಟಿಕತೆಗೆ ಪ್ರಮುಖ ಕಾರಣಗಳಾವುವು ಹಾಗು ಅದನ್ನು ಯಾವ ರೀತಿ ನಿಯಂತ್ರಿಸಬಹುದು..???
ಅಪೌಷ್ಟಿಕತೆ ಎಂದರೆ ಕೆಲವೊಂದು ಪೋಷಕಾಂಶಗಳ ಕೊರತೆ ಅಥವಾ ಅತಿಯಾದ ಬಳಕೆಯಿಂದ ಉಂಟಾಗುವ ಪೋಷಕಾಂಶಗಳ ಅಸಮತೋಲನ. ಅಸಮತೋಲನದಲ್ಲಿ ಕೊರತೆಯೇ ಹೆಚ್ಚು.
ಅಪೌಷ್ಟಿಕತೆಗೆ ಕಾರಣಗಳು
* ಅವಶ್ಯಕತೆಗಳಿಗಿಂತ ಕಡಿಮೆ ಆಹಾರ ಸೇವಿಸುವುದು
* ಮಕ್ಕಳ ಲಾಲನೆ ಪಾಲನೆಯಲ್ಲಿ ಗಮನವಿಲ್ಲವಿರುವುದು
* ರೋಗಗಳಿಂದ ನರಳುವುದು
* ಪೌಷ್ಟಿಕ ಅಭದ್ರತೆ
* ಆಹಾರದ ಪೋಷಕಾಂಶಗಳ ಬಗ್ಗೆ ಅರಿವಿಲ್ಲದಿರುವುದು
* ಸ್ವಚ್ಛತೆಯ ಕೊರತೆ
* ಗರ್ಭಾವಸ್ಥೆಯ ಸಮಯದಲ್ಲಿ ರಕ್ತಹೀನತೆ ಮತ್ತು ಪೋಷಕಾಂಶಗಳ ಕೊರತೆ
* ಅವಧಿ ಪೂರ್ಣವಾಗದೆ ಪ್ರಸವವಾಗುವುದು ಅಥವಾ ಕಡಿಮೆ ತೂಕದ ಮಗು ಜನಿಸುವುದು
ನಿವಾರಣೆ
* ಪೌಷ್ಟಿಕ ಆಹಾರದ ಬಗ್ಗೆ ತಾಯಂದಿರಿಗೆ ತರಬೇತಿ ನೀಡುವುದರ ಮೂಲಕ ವಿವಿಧ ಪೋಷಕಾಂಶಗಳ ಅವಶ್ಯಕತೆ ಮತ್ತು ಉಪಯೋಗಗಳನ್ನು ತಿಳಿಸಬೇಕು.
* ಮಕ್ಕಳು ಬೆಳೆಯುವ, ವಾಸಿಸುವ ಪರಿಸರದ ಸ್ವಚ್ಛತೆಯ ಬಗ್ಗೆ ಗಮನ ಕೊಡುವುದು
* ವಿವಿಧ ಪೂರಕ ಆಹಾರಗಳು ಮತ್ತು ಅದರಿಂದಾಗುವ ಉಪಯೋಗಗಳ ಬಗ್ಗೆ ಅರಿವು ಮೂಡಿಸುವುದು.
* ಮನೆಯಲ್ಲಿ ಸಿಗುವ ವಸ್ತುಗಳಲ್ಲೇ ಪೌಷ್ಟಿಕ ಆಹಾರ ತಯಾರಿಕೆ ಕ್ರಮ ತಿಳಿಸುವುದು
* ಜೀವನದ ವಿವಿಧ ಹಂತಗಳಲ್ಲಿ ಅಂದರೆ ಮಗು, ಪ್ರೌಢಾವಸ್ಥೆ, ವಯಸ್ಕರು, ಗರ್ಭಾವಸ್ಥೆ, ಬಾಣಂತಿ ಸಮಯ ಹೀಗೆ ಪ್ರತಿಯೊಂದು ಹಂತಗಳಲ್ಲಿ ಪೋಷಕಾಂಶಗಳ ಅವಶ್ಯಕತೆ ಮತ್ತು ಕೊರತೆಯಿಂದಾಗುವ ತೊಂದರೆಗಳ ಬಗ್ಗೆ ತಿಳಿಸುವುದು.
4.ಎರಡನೇ ಮಹಿಳಾ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
priorioty(ಆದ್ಯತೆ)-ಪ್ರಿಲಿಮ್ಸ್ ಪರೀಕ್ಷೆಗಾಗಿ ಮಾತ್ರ
ಪ್ರಿಲಿಮ್ಸ್ ಗಾಗಿ:
- ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ನಂತರ, ಎರಡನೇ ಮಹಿಳಾ ರಕ್ಷಣಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ನೇಮಕಗೊಂಡರು. ಈ ಮೊದಲು ಇವರು ವಾಣಿಜ್ಯ ಸಚಿವೆ ಖಾತೆ ನಿಭಾಯಿಸುತ್ತಿದ್ದರು.
- 1982 ರ ವರೆಗೂ ಇಂದಿರಾ ಗಾಂಧಿ ರಕ್ಷಣಾ ಖಾತೆ ನಿಭಾಯಿಸಿದ್ದರು. ಪಕ್ಷದ ವಕ್ತಾರೆಯಾಗಿ ಕೇಂದ್ರ ಸರಕಾರದ ಹಲವು ನಿಲುವುಗಳನ್ನು ಸಮರ್ಥಿಸಿದ್ದರು.
- ಇವರು ಕರ್ನಾಟಕದಿಂದ ಸಂಸದೆಯಾಗಿ ಆಯ್ಕೆಯಾದವರು.
SOURCE- OTHER NEWS PAPERS
priorioty(ಆದ್ಯತೆ)-ಪ್ರಿಲಿಮ್ಸ್ ಪರೀಕ್ಷೆಗಾಗಿ ಮಾತ್ರ
5.ಕೃಷಿ ಸಹಾಯಧನಕ್ಕೆ ಭಾರತ –ಚೀನಾ ವಿರೋಧ
- ಮುಂದುವರಿದ ರಾಷ್ಟಗಳು ಅಧಿಕ ಪ್ರಮಾಣದ ಕೃಷಿ ಸಹಾಯಧನ ನಿಡುತ್ತಿರುವುದರಿಂದ ವಾಣಿಜ್ಯ ವ್ಯವಹಾಗಳಿಗೆ ತೊಂದಯಾಗುತ್ತಿದ್ದು, ಈ ರೀತಿಯ ಸಹಾಯಧನವನ್ನು ನಿಷೇದಿಸುವಂತೆ ಕೋರಿ ಭಾರತ-ಚೀನಾಗಳೆರಡು ಜಂಟಿಯಾಗಿ ವಿಶ್ವ ವಾಣಿಜ್ಯ ಸಂಘಟನೆ (WTO)ಯಲ್ಲಿ ಪ್ರಸ್ತಾಪ ಸಲ್ಲಿಸಿವೆ.
- ಅಮೇರಿಕ,ಯುರೋಪಿಯನ್ ಒಕ್ಕೂಟ,ಕೆನಡ ಸೇರಿದಂತೆ ಮುಂದುವರಿದ ರಾಷ್ಟ್ರಗಳು ಸ್ಥಿರವಾಗಿ ತಮ್ಮ ರೈತರಿಗೆ ಬೃಹತ್ ಮೊತ್ತದ ಸಹಾಯಧನ ನೀಡುತ್ತಿದೆ.ಈ ನೀತಿ ವಾಣಿಜ್ಯ ವ್ಯವಹಾರಕ್ಕೆ ತೊಂದರೆಯಾಗುತ್ತಿದೆ ಎಂದು ಭಾರತ ಚೀನಾಗಳೆರಡು ವಿರೋದಿಸುತ್ತಲೇ ಬಂದಿದ್ದು ಈಗ ಮತ್ತೊಮ್ಮೆ ವಿರೋಧ ವ್ಯಕ್ತಪಡಿಸಿದೆ.
- ಈ ರೀತಿಯ ಸಹಾಯಧನಕ್ಕೆ WTO ವಲಯದಲ್ಲಿ ಒಟ್ಟು ಮೊತ್ತದ ಬೆಂಬಲ (Aggregate Measurement of Support -AMS )ಅಥವಾ ಅಂಬರ್ ಬಾಕ್ಸ್ ಸಪೋರ್ಟ್ ಎಂದು ಕರೆಯಲಾಗುತ್ತದೆ.
- ಮುಂದುವರಿದ ರಾಷ್ಟ್ರಗಳಲ್ಲಿ ನಿರ್ದಿಷ್ಟ ಮೀತಿಗಿಂತಲೂ ಅಧಿಕ ಪ್ರಮಾಣದ ಸಹಾಯಧನ ನೀಡಲಾಗುತ್ತಿದೆ.
- ಮೂರೂ ವಿಧದ ಸಹಾಯಧನ –
- ಅಂಬರ್ -ವಾಣಿಜ್ಯ ವ್ಯವಹಾರಕ್ಕೆ ತೊಂದರೆ ಉಂಟುಮಾಡುವ ಪ್ರಮಾಣ
- ಬ್ಲೂ (ನೀಲಿ)-ಯಂತ್ರಿತ ಪ್ರಮಾಣದ ಸಹಾಯಧನ
- ಗ್ರೀನ್ (ಹಸಿರು)-ವಾಣಿಜ್ಯ ವ್ಯವಹಾರಗಳಿಗೆ ತೊಂದರೆ ಉಂಟುಮಾಡುವುದಿಲ್ಲ.
6. ವಿಶ್ವದಲ್ಲಿಯೇ ಒಂಬತ್ತನೇ ಸ್ಥಾನ ಪಡೆದ ಸಿಎಸ್ಐ ಅರ್
- ಭಾರತದ ಅತಿ ದೊಡ್ಡ ಸ್ವಾಯತ ಸಾರ್ವಜನಿಕ ಸಂಶೋದನೆ ಮತ್ತು ಅಭಿವೃದ್ಧಿ ಸಂಸ್ಥೆ ಸಿಎಸ್ಐ ಅರ್ (ಕೌನ್ಸಿಲ್ ಆಫ್ ಸೈತಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್) ವಿಶ್ವದ ಅತ್ಯುತ್ತಮ ಸಂಶೋಧನಾ ಸಂಸ್ಥೆಗಳಲ್ಲಿ 9 ನೇ ಸ್ಥಾನ ಪಡದಿದೆ.
- ರ್ರ್ಯಾಂಕ್ ಗಳನ್ನೂ ಸಂಸ್ಥೆಗಳ ಸಂಶೋಧನಾ ಕಾರ್ಯಕ್ಷಮತೆ,ನಾವೀನ್ಯತೆ,ವೈಜ್ಞಾನಿಕ,ಅರ್ಥಿಕ ಹಾಗು ಸಾಮಾಜಿಕ ಪರಿಣಾಮಗಳನ್ನು ಆಧರಿಸಿ ನೀಡಲಾಗಿದೆ.ಈ ಕುರಿತ 2017 ರ ವರದಿಯನ್ನು ಸಿಮಗೋ ಇನ್ಸ್ಟಿಟ್ಯೂಟ್ ಬಿಡುಗಡೆಗೊಳಿಸಿದ್ದು,ವಿಶ್ವದ 1207 ಸರ್ಕಾರಿ ಸಂಸ್ಥೆಗಳನ್ನು ಸಮೀಕ್ಷೆಗೆ ಒಲೆಪದಿಸಲಾಗಿತ್ತು.
- ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋದನೆ ಮತ್ತು ಅಭಿವೃದ್ಧಿಯ ,ಮೂಲಕವೇ ಹೆಸರಾಗಿರುವ ಸಿಎಸ್ಐಅರ್, ದೇಶಾದ್ಯಂತ 38 ರಾಷ್ಟೀಯ ಪ್ರಯೋಗಾಲಯಗಳು ಹಾಗು 38 ಸಂಪರ್ಕ ಕೇಂದ್ರಗಳನ್ನು ಹೊಂದಿದೆ
7.ಶಿಕ್ಷಣ ಸಂಸ್ಥೆಗಳೊಂದಿಗೆ ಜಲ ಆಯೋಗ ಒಪ್ಪಂದ
- ಆಣೆಕಟ್ಟು ಸಾಮರ್ಥ್ಯ ಹೆಚ್ಚಿಸಲು ಮತ್ತು ಪುನರ್ವಸತಿ ಕಲ್ಪಿಸಲು ಕೇಂದ್ರೀಯ ಜಲ ಆಯೋಗವು ಐಐಟಿ ಕ್ಯಾಲಿಕಟ್ ಹಾಗು ಐಐಟಿ ರೂರ್ಕೆಲಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪ್ರಾಯೋಗಿಕ ಪರೀಕ್ಷಾ ವ್ಯವಸ್ಥೆ ಬಲಪಡಿಸುವುದು. ಅಣೆಕಟ್ಟಿನ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದು
- ಹಾಗು ಸಂಶೋದನೆಗೆ ಒತ್ತು ನೀಡುವುದು ಸೇರಿದಂತೆ ವಿವಿಧ ಉದ್ದೇಶಗಳನ್ನು ಒಪ್ಪಂದ ಹೊಂದಿದೆ.ಅಣೆಕಟ್ಟೆಯ ಸಾಮರ್ಥ್ಯ ಹಾಗು ಸುರಕ್ಷತೆ ಹೆಚ್ಚಿಸುವುದು ಒಪ್ಪಂದದ ಮೂಲ ಉದ್ದೇಶ. ನಿಗದಿತ ಪ್ರದೇಶಗಳಲ್ಲಿ ಆಯ್ಕೆ ಮಾಡಿದ ಶಿಕ್ಷಣ ಸಂಸ್ಥೆಗಳ ಅಣೆಕಟ್ಟಿಗೆ ಸಂಬಧಿಸಿದ ತನಿಖೆ,ಪರೀಕ್ಷೆ ನಡೆಸುತ್ತದೆ.
8.ಮುಖ್ಯ ಚುನಾವಣಾ ಆಯುಕ್ತರಾಗಿ ಸುನಿಲ್ ಆರೋರಾ
- ಮಾಹಿತಿ ಮತ್ತು ಪ್ರಸಾರ ಇಲಾಖೆಯ ಮಾಜಿ ಕಾರ್ಯದರ್ಶಿ ಸುನಿಲ್ ಆರೋರಾ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.ಇವರು ಮುಂದಿನ ನಾಲ್ಕು ವರ್ಷಗಳ ಕಾಲ ಇವರು ಈ ಅತ್ಯುನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ.
- 2016 ರಲ್ಲಿ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದ್ದಿದರು.ಕೌಶಲ ಅಭಿವೃದ್ಧಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ ಇವರು, ಹಣಕಾಸು ನಾಗರಿಕ ವಿಮಾನಯಾನ ಇಲಾಖೆ, ಜವಳಿ ಸಚಿವಾಲಯ ದಲ್ಲಿ ಸೇವೆ ಸಲ್ಲಿಸಿದ್ದಾರೆ.ಅರೋಗ್ಯ ಇಲಾಖೆ ಮತ್ತು ಯೋಜನಾ ಅಯೋಗದಲ್ಲಿಯು ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.ಇವರು ರಾಜಸ್ಥಾನದ ರಾಜ್ಯ ಕೈಗಾರಿಕೆ ಅಭಿವೃದ್ಧಿ ಮತ್ತು ಹೂಡಿಕೆ ನಿಗಮ ಲಿಮಿಟೆಡ್ ನ ಅಧ್ಯಕ್ಷರೂ ಆಗಿದ್ದರು.