Daily current Affairs 8th September

8th SEPTEMBER

 

1.ಅಮರಾವತಿ-ವಿಜಯವಾಡ ನಡುವೆ ಹೈಪರ್​ಲೂಪ್

ಪ್ರಾಮುಖ್ಯತೆಪ್ರಿಲಿಮ್ಸ್ ಮತ್ತು ಮೇನ್ಸ್ ಗಾಗಿ

 

ಪ್ರಿಲಿಮ್ಸ್  ಗಾಗಿ

  • ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ ಮತ್ತು ವಿಜಯವಾಡ ನಡುವಿನ ಮೆಟ್ರೋ ಯೋಜನೆಯನ್ನು ಕೈಬಿಟ್ಟಿರುವ ರಾಜ್ಯ ಸರ್ಕಾರ ಅದರ ಬದಲು ಅತ್ಯಾಧುನಿಕ ‘ಹೈಪರ್​ಲೂಪ್’ ಸಂಚಾರ ವ್ಯವಸ್ಥೆ ಜಾರಿಗೆ ಮುಂದಾಗಿದೆ. ಹೈಪರ್​ಲೂಪ್ ಅನುಷ್ಠಾನಗೊಂಡರೆ ಅಮರಾವತಿ ಮತ್ತು ವಿಜಯವಾಡ ಮಧ್ಯದ 35 ಕಿ.ಮೀ. ದೂರವನ್ನು 5 ನಿಮಿಷದಲ್ಲೇ ಕ್ರಮಿಸಬಹುದಾಗಿದೆ.
  • ಅಮೆರಿಕದ ಟೆಸ್ಲಾ ಮತ್ತು ಸ್ಪೇಸ್​ಎಕ್ಸ್​ನ ಸ್ಥಾಪಕ ಎಲೊನ್ ಮಸ್ಕ್ ಹೈಪರ್​ಲೂಪ್ ಪ್ರಾಜೆಕ್ಟ್ ಪರಿಚಯಿಸಿದ್ದು, ಈಗಾಗಲೇ ಕೆಲ ದೇಶಗಳಲ್ಲಿ ಪ್ರಾಯೋಗಿಕ ಪರೀಕ್ಷೆಗೊಳಪಡುತ್ತಿದೆ. ಆದರೆ ಎಲ್ಲಿಯೂ ಯೋಜನೆ ಜಾರಿಯಾಗಿಲ್ಲ. ಹೈಪರ್​ಲೂಪ್ ಯೋಜನೆ ಸಂಬಂಧ ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ಸರ್ಕಾರ ಅಮೆರಿಕ ಕಂಪನಿ ಹೈಪರ್​ಲೂಪ್ ಟ್ರಾನ್ಸ್​ಪೋರ್ಟೆಶನ್ ಟೆಕ್ನಾಲಜೀಸ್ ಜತೆ ಆಂಧ್ರ ಪ್ರದೇಶದ ಎಕನಾಮಿಕ್ ಡೆವಲಪ್​ವೆುಂಟ್ ಬೋರ್ಡ್ ಮಾತುಕತೆ ನಡೆಸಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಯಾಗಲಿದ್ದು, ಹಾಗಾದಲ್ಲಿ ಭಾರತದ ಮೊದಲ ಹೈಪರ್​ಲೂಪ್ ಪ್ರಾಜೆಕ್ಟ್ ಇದಾಗಿರಲಿದೆ.

ಮುಖ್ಯ ಪರೀಕ್ಷೆಗಾಗಿ

ಭಾರತಕ್ಕೆ ಇನ್ನೂ ಬುಲೆಟ್‌ ರೈಲೇ ಬಂದಿಲ್ಲ. ಆದರೆ ಬುಲೆಟ್‌ ರೈಲಿನ ಮೂರು ಪಟ್ಟು ವೇಗದ “ಹೈಪರ್‌ಲೂಪ್‌’ ಭವಿಷ್ಯದ ಸಾರಿಗೆ ವ್ಯವಸ್ಥೆ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ.  ಶಬ್ದಕ್ಕಿಂತಲೂ ವೇಗವಾಗಿ ಚಲಿಸುವ ಈ ಸಾರಿಗೆ ತಂತ್ರಜ್ಞಾನವೇನು? 

ಏನಿದು ಹೈಪರ್‌ ಲೂಪ್‌?

ಹೈಪರ್‌ಲೂಪ್‌ ಎನ್ನುವುದು ಭವಿಷ್ಯದ ಸಾರಿಗೆ ತಂತ್ರಜ್ಞಾನ. ಗಂಟೆಗೆ 1,200 ಕಿ.ಮೀ. ವೇಗದಲ್ಲಿ ಚಲಿಸುವ…  CLICK HERE TO READ MORE

Share