Daily Current Affairs-12th October

12th OCTOBER

 

1.SOURCE-THE HINDU EDITORIAL

http://www.thehindu.com/todays-paper/tp-opinion/measuring-judicial-merit/article19836091.ece

 

ಪಾರದರ್ಶಕತೆ ಮತ್ತು ಭಾರತೀಯ ನ್ಯಾಯಾಲಯಗಳು

UPSC/KAS-ಪರೀಕ್ಷೆಗಾಗಿ ಈ ಆರ್ಟಿಕಲ್ ನಿಂದ  ಮುಖ್ಯವಾಗಿ ತಿಳಿದು ಕೊಳ್ಳಬೇಕಾದ ಅಂಶಗಳೆಂದರೆ

  • ನ್ಯಾಯಾಲಯದ ಈ ತೀರ್ಪಿನ ಹಿಂದಿನ ತಾರ್ಕಿಕ ಏನು?
  • ಭಾರತದ ನ್ಯಾಯಾಂಗವು ಇಂದು ಎದುರಿಸುತ್ತಿರುವ ಸಮಸ್ಯೆಗಳೇನು ?
  • ಸದ್ಯ ಇರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರವು ಯಾವ ರೀತಿ ಕ್ರಮಗಳನ್ನು ಕೈಗೊಂಡಿದೆ?
  • ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಎಂದರೇನು? ಅದರ ಕಾರ್ಯಗಳೇನು ?
  • NJAC ಯ ಸಂಯೋಜನೆ
  • ಕೊಲ್ಜಿಯಂ ಸಿಸ್ಟಮ್ ಎಂದರೇನು?

 

ಪ್ರಮುಖ ಸುದ್ದಿ

  • ನ್ಯಾಯಾಧೀಶರು ಮತ್ತು ನ್ಯಾಯಮೂರ್ತಿಗಳ ಬಡ್ತಿ, ವರ್ಗಾವಣೆ ಸಂಬಂಧ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವ ಎಲ್ಲ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್‌ನ ಜಾಲತಾಣದಲ್ಲಿ ಪ್ರಕಟಿಸಲು ಕಡೆಗೂ ಕೊಲಿಜಿಯಂ ನಿರ್ಧರಿಸಿದೆ.

 

ಪರಿಚಯ:

  • ಹೈಕೋರ್ಟ್‌ ನ್ಯಾಯಮೂರ್ತಿಗಳನ್ನು ಮುಖ್ಯ ನ್ಯಾಯಮೂರ್ತಿಗಳಾಗಿ, ಹೈಕೋರ್ಟ್‌ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಧೀಶರನ್ನು ಹೈಕೋರ್ಟ್‌ ಪೀಠಕ್ಕೆ ನೇಮಿಸಿ ಬಡ್ತಿ ನೀಡುವ ಸಂಬಂಧ ಸರ್ಕಾರಕ್ಕೆ ಕೊಲಿಜಿಯಂ ಮಾಡುವ ಶಿಫಾರಸುಗಳು ಇನ್ನು ಮುಂದೆ ಸುಪ್ರೀಂ ಕೋರ್ಟ್ ಜಾಲತಾಣದಲ್ಲಿ ಪ್ರಕಟವಾಗಲಿವೆ.
  • ಇದಕ್ಕಾಗಿ ಸುಪ್ರೀಂ ಕೋರ್ಟ್ ಅಂತರ್ಜಾಲ ತಾಣದಲ್ಲಿ ‘ಕೊಲಿಜಿಯಂ ನಿರ್ಣಯಗಳು’ ಎಂಬ ವಿಭಾಗ ಸೃಷ್ಟಿಯಾದ್ದು ಈ ನಿರ್ಧಾರ ಈಗಾಗಲೇ ಜಾರಿಯಾಗಿದೆ.
  • ಮದ್ರಾಸ್ ಹೈಕೋರ್ಟ್‌ ಮತ್ತು ಕಲ್ಕತ್ತಾ ಹೈಕೋರ್ಟ್‌ಗಳಿಗೆ ಇತ್ತೀಚೆಗೆ ಮಾಡಲಾದ ನೇಮಕಾತಿ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್‌ನ ಜಾಲತಾಣದ ಈ ವಿಭಾಗದಲ್ಲಿ ಪ್ರಕಟಿಸಲಾಗಿದೆ.
  • ಈ ನೇಮಕಾತಿಗೆ ಮುಂಚೆ ನಡೆದ ಕೊಲಿಜಿಯಂ ಕಲಾಪಗಳನ್ನು ಇದು ವಿವರಿಸುತ್ತದೆ. ಕಡೆಗೂ ತನ್ನ ನಿರ್ಧಾರಗಳ ಬಗ್ಗೆ ಪಾರದರ್ಶಕತೆ ಪ್ರದರ್ಶಿಸಲು ಕೊಲಿಜಿಯಂ ಮುಂದಾಗಿರುವುದು ಸ್ವಾಗತಾರ್ಹ.
  • ಸುಪ್ರೀಂ ಕೋರ್ಟ್ ಇತ್ತೀಚೆಗೆ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (NJAC) ಕಾಯಿದೆ ಮತ್ತು 99 ನೇ ಸಂವಿಧಾನದ ತಿದ್ದುಪಡಿಯನ್ನು ತಿರಸ್ಕರಿಸಿದೆ.

 

 ನ್ಯಾಯಾಲಯದ  ಈ ತೀರ್ಪಿನ ಹಿಂದಿನ ತಾರ್ಕಿಕ ಏನು?

  • ಕರ್ನಾಟಕ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ಜಯಂತ್ ಪಟೇಲ್ ರವರನ್ನು ಅದೇ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಉನ್ನತೀಕರಿಸುವುದಕ್ಕಿಂತ ಅಲಹಾಬಾದ್ ಹೈಕೋರ್ಟ್ ಗೆ   ವರ್ಗಾಯಿಸಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ  ಹಾಗೂ ನಂತರದ ಅವರ ರಾಜೀನಾಮೆ ವಿಚಾರದ ಸುತ್ತ ಎದ್ದ ವಿವಾದವನ್ನು ತಪ್ಪಿಸಿಸಲು  ನ್ಯಾಯಮೂರ್ತಿ ಜಯಂತ್ ಪಟೇಲ್ ಅವರ ವರ್ಗಾವಣೆ ವಿಚಾರ ಕಾನೂನು ವಲಯದಲ್ಲಿ ಟೀಕೆಗಳಿಗೆ ಕಾರಣವಾಗಿತ್ತು.
  • ನ್ಯಾಯಾಂಗದ ಸ್ವಾತಂತ್ರ್ಯಕ್ಕೂ ಈ ಪ್ರಶ್ನೆ ಸಂಬಂಧಿಸಿದ್ದರಿಂದ..CLICK HERE TO READ MORE
Share