Daily Current Affairs 17th August

17th AUGUST

1.ಬ್ಯಾಂಕಿನ ಮಾಸ್ಟರ್ಸ್ ಕಾರ್ಡ್ ನ್ನು ಬ್ಲಾಕ್ ಚೈನ್ ತಂತ್ರಜ್ಞಾನ ದೊಂದಿಗೆ ಮುಳುಗಿಸಲು(mulls) ಚಿಂತನೆ

ವಿದ್ಯಾರ್ಥಿಗಳ ಗಮನಕ್ಕೆ

Mains Paper 3: Science & Technology | Awareness in the fields of IT, Space, Computers, robotics, nano-technology, bio-technology and issues relating to intellectual property rights.

(ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿಷಯಗಳು,ಭಾಹ್ಯಕಾಶ .ಕಂಪ್ಯೂಟರ್ ರೋಬೋಟ್ಸ್ ,ನ್ಯಾನೋ ತಂತಜ್ಞಾನ ,ಬಯೋ ತಂತಜ್ಞಾನ ಹಾಗು ಬೌದ್ಧಿಕ ಆಸ್ತಿಯ ಹಕ್ಕಿಗೆ ಸಂಬಂದಿಸಿದ ಅಂಶಗಳು )

UPSC  ಪರೀಕ್ಷೆಯ ದೃಷ್ಟಿಯಲ್ಲಿ ಈ ಕೆಳಗಿನ ಅಂಶಗಳು ಮುಖ್ಯ 

ಪ್ರಿಲಿಮ್ಸ್ ಗಾಗಿ (Prelims level): ಬ್ಲಾಕ್ ಚೈನ್ ತಂತ್ರಜ್ಞಾನ,  ಕ್ರಿಪ್ಟೋ -ಕರೆನ್ಸಿ -ಬಿಟ್ ಕಾಯಿನ್( crypto-currency- Bitcoin)

ಮೇನ್ಸ್ ಗಾಗಿ (Mains level): ಬ್ಲಾಕ್ ಚೈನ್ ತಂತ್ರಜ್ಞಾನದ ಅನ್ವಯಗಳಾವುವು ?? ಮತ್ತು ಬ್ಯಾಂಕಿಂಗ್ ವಲಯದಲ್ಲಿ  ಅದರ ಬಳಕೆಯಿಂದ ಆಗುವ  ಸಮಸ್ಯೆಗಳೇನು ??

ಪ್ರಮುಖ ಸುದ್ದಿ

  • ಮಾಸ್ಟರ್ ರ್ಕಾರ್ಡ್ ತನ್ನ ಕಾರ್ಯಾಚರಣೆಯನ್ನು ಬ್ಲಾಕ್ ಚೈನ್ ತಂತ್ರಜ್ಞಾನದೊಂದಿಗೆ ಅಳವಡಿಸಲು ಯೋಜಿಸುತ್ತಿದೆ ಮತ್ತು ಭಾರತದಲ್ಲಿ ಸ್ಪಷ್ಟ ನಿಯಂತ್ರಕ ಚೌಕಟ್ಟನ್ನು ನಿರ್ಮಿಸಲು ಬಯಸುತ್ತಿದೆ.

ಬ್ಲಾಕ್ ಚೈನ್ ತಂತ್ರಜ್ಞಾನವನ್ನುಯಾವ ನಿಯಂತ್ರಣದಲ್ಲಿ (Regulation) ಬರುತ್ತದೆ ??

  • .ಪ್ರಸ್ತುತ ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಅತ್ಯುತ್ತಮವಾಗಿ ಹೇಗೆ ನಿಯಂತ್ರಿಸಬೇಕೆಂಬುದನ್ನು  ಭಾರತ ಸರ್ಕಾರ ಸಚಿವಾಲಯ ಸಮಿತಿಯನ್ನು ರಚಿಸಿದೆ. ಆ ಸಮಿತಿಯು ಬ್ಲಾಕ್ಖೈನ್ ತಂತ್ರಜ್ಞಾನವನ್ನು ನಿಯಂತ್ರಣವನ್ನು   Securities and Exchange Board of India (SEBI).ಅಡಿಯಲ್ಲಿ ತರುವ ಪ್ರಸ್ತಾಪ ಹೊಂದಿದೆ. ಜೊತೆಗೆ ಅದನ್ನುReserve Bank of India.ದ ಅಡಿಯಲ್ಲಿ ನಿಯಂತ್ರಿಸಲು ಕೂಡ ಯೋಚಿಸಿದೆ 

BACK 2 BASICS (ALSO FOR ESSAY WRITING)

  • ಬ್ಲಾಕ್ ಚೈನ್ ತಂತ್ರಜ್ಞಾನ ಎನ್ನುವುದು ಕ್ರಿಪ್ಟೋ -ಕರೆನ್ಸಿಯ ತಂತ್ರಜ್ಞಾನವಾಗಿದ್ದು, ಅಂದರೆ  ಬಿಟ್ಕೋಯಿನ್ ಎಂದರ್ಥ. ಇದು ಎಲೆಕ್ಟ್ರಾನಿಕ್ ಕರೆನ್ಸಿಯಾಗಿದ್ದು, ಇದು ವಿನಿಮಯ ಕೇಂದ್ರಗಳಲ್ಲಿ ವ್ಯಾಪಾರಕ್ಕಾಗಿ  ಬಳಸುತ್ತಾರೆ. 
  • ಇದು ನಿರಂತರವಾಗಿ ದಾಖಲೆಗಳ ಪಟ್ಟಿಯೊಂದಿಗೆ ಬೆಳೆಯುತ್ತಿರುವುದರಿಂದ ಇದನ್ನು , ಇದು ಬ್ಲಾಕ್ಸ್(blocks) ಎಂದು ಕರೆಯಲ್ಪಡುತ್ತದೆ. ಇದರ ಸುರಕ್ಷತೆಗೆ  ಕ್ರಿಪ್ಟೋಗ್ರಫಿ(cryptography.) ತಂತ್ರಜ್ಞಾನವನ್ನು ಬಳಸುತ್ತಾರೆ.

ಏನಿದು ಬಿಟ್ಕಾಯಿನ್ ?

  • ಇದು ಒಂದು ಡಿಜಿಟಲ್ ಕರೆನ್ಸಿ. ಜಗತ್ತಿನ ಯಾವುದೇ ಭಾಗದಿಂದ ಕೆಲವೇ ನಿಮಿಷಗಳಲ್ಲಿ ಹಣ ಕಳಿಸಲು ಅಥವಾ ಪಡೆಯಲು ಬಳಸಬಹುದು. ಕೆಲವು ಕಡೆಗಳಲ್ಲಿ ಉತ್ಪನ್ನ ಮತ್ತು ಸೇವೆಗಳನ್ನು ಪಡೆಯಲು ಕೂಡ ಉಪಯೋಗಿಸಬಹುದು.
  • ಷೇರು ಮತ್ತು ಚಿನ್ನದಲ್ಲಿ ಹೂಡಿಕೆ ಬೇಕಾದರೂ ಮಾಡಬಹುದು. ಆದರೆ ಇಲ್ಲಿ ವರ್ಗಾವಣೆಗಳೆಲ್ಲವೂ ಇಂಟರ್‌ನೆಟ್ ಮೂಲಕ ನಡೆಯುತ್ತದೆ. ಬಿಟ್‌ಕಾಯಿನ್‌ನ ಮೌಲ್ಯವನ್ನು ಕೊನೆಯಲ್ಲಿ ನಿಮ್ಮ ಆಯ್ಕೆಯ ಕರೆನ್ಸಿಗೆ ಪರಿವರ್ತಿಸಿಕೊಳ್ಳಬಹುದು.

ಹಾಗಿದ್ದರೆ, ಇದರ ಪ್ರಮುಖ ಉಪಯೋಗಗಳೇನು?

  • ಹಣದ ತ್ವರಿತ ವರ್ಗಾವಣೆಗೆ ಇಲ್ಲಿ ಸಂಸ್ಕರಣೆ ಶುಲ್ಕ ಇರುವುದಿಲ್ಲ. ಇದ್ದರೂ ಅತ್ಯಲ್ಪ. ವಿಶ್ವಾದ್ಯಂತ ಚಲಾವಣೆ ಮಾಡಬಹುದು. ಆದರೆ ಚೀನಾ ಇತ್ತೀಚೆಗೆ ತನ್ನ ಬ್ಯಾಂಕಿಂಗ್ ವಲಯದಲ್ಲಿ ಬಳಕೆಯನ್ನು ನಿಷೇಧಿಸಿದೆ.
  • ಉತ್ಪನ್ನ, ಸೇವೆಗಳ ಖರೀದಿಗೆ ಬಳಸಬಹುದು. ಒಂದು ವೇಳೆ ನಷ್ಟವಾದರೆ ತಡೆದುಕೊಳ್ಳಬಲ್ಲೆ ಎಂಬ ನಂಬಿಕೆ ಇದ್ದರೆ ಹೂಡಿಕೆಯನ್ನೂ ಮಾಡಬಹುದು. ವರ್ಡ್‌ಪ್ರೆಸ್, ರೆಡಿಟ್, ನೇಮ್‌ಚೀಪ್ ಮತ್ತು ಫ್ಲಾಟ್ಟರ್ ಮುಂತಾದ ಆನ್‌ಲೈನ್ ತಾಣಗಳು ಬಿಟ್‌ಕಾಯಿನ್‌ಗಳನ್ನು ನೇರವಾಗಿ ಸ್ವೀಕರಿಸುತ್ತವೆ.

ಹಾಗಾದರೆ ಜಗತ್ತಿಗೆ  ಯಾವ ರೀತಿ ಪರಿಚಯವಾಯಿತು ?

  • ಅಂತರ್ಜಾಲದಲ್ಲಿ ಸತೋ ನಕಾಮೊಟೊ ಎಂಬಾತನ ಹೆಸರಿನಲ್ಲಿ 2009ರಲ್ಲಿ ಬಿಟ್‌ಕಾಯಿನ್ ಪರಿಕಲ್ಪನೆ ಮೊಟ್ಟ ಮೊದಲ ಬಾರಿಗೆ ಬಹಿರಂಗವಾಯಿತು. ಕ್ರಿಪ್ರೋಗ್ರಫಿ ಸಂಕೇತಗಳಲ್ಲಿದ್ದ ಬಿಟ್‌ಕಾಯಿನ್ ಬಳಕೆಯ ಬಗ್ಗೆ ಆತ ವಿವರಿಸಿದ್ದ.
  • 2010ರ ವೇಳೆಗೆ ನಕಾಮೊಟೊ ಯೋಜನೆಯನ್ನು ಯಾಕೋ ಕೈ ಬಿಟ್ಟಿದ್ದ. ಆಗ ತನ್ನ ಬಗ್ಗೆ ಹೆಚ್ಚೇನೂ ಹೇಳಿಕೊಳ್ಳದೆ ನಿರ್ಗಮಿಸಿದ್ದ. ಆದರೆ ಡಿಜಿಟಲ್ ತಂತ್ರಜ್ಞಾನ ಪ್ರಿಯರು ಮತ್ತು ಇತರ ಬಳಕೆದಾರರು ಬಿಟ್‌ಕಾಯಿನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು. ಬಿಟ್ ಕಾಯಿನ್ ಮುಕ್ತ ತಂತ್ರಜ್ಞಾನವಾದ್ದರಿಂದ ಜಗತ್ತಿನಾದ್ಯಂತ ಯಾರು ಬೇಕಾದರೂ ಬಳಸಬಹುದು ಮತ್ತು ಸುಧಾರಿಸಬಹುದು.

ಇದರ ಮೇಲೆ ಯಾರ ನಿಯಂತ್ರಣವೂ ಇಲ್ಲವೇ?

  • ನಮ್ಮಲ್ಲಿ ರೂಪಾಯಿ ಮೇಲೆ ಆರ್‌ಬಿಐ ನಿಯಂತ್ರಣ ಇರುವಂತೆ ಬಿಟ್‌ಕಾಯಿನ್‌ಗೆ ಯಾವುದೇ ನಿಯಂತ್ರಕ ವ್ಯವಸ್ಥೆ ಇಲ್ಲ. ಕೆಲವು ಮೂಲ ನಿಯಮಗಳನ್ನು ಹೊಂದಿರುವ ಮುಕ್ತ ಸಾಫ್ಟ್‌ವೇರ್ ತಂತ್ರಜ್ಞಾನವೇ ಇದರ ಬುನಾದಿ.
  • ಇಲ್ಲಿ ಬಳಕೆದಾರರೇ ಅದರ ನಿಯಂತ್ರಕರೂ ಆಗಿರುತ್ತಾರೆ. ಡೆವಲಪರ್‌ಗಳು ಬಿಟ್‌ಕಾಯಿನ್ ಸಾಫ್ಟ್‌ವೇರ್ ಅನ್ನು ಸುಧಾರಿಸಬಹುದು. ಆಯ್ಕೆಯ ಆವೃತ್ತಿಯ ಸಾಫ್ಟ್‌ವೇರ್ ಬಳಸಬಹುದು. ಆದರೆ ಅದರ ಮೂಲ ನಿಯಮಗಳನ್ನು (ಪ್ರೊಟೊಕಾಲ್) ತಮಗೆ ಬೇಕಾದಂತೆ ಬದಲಿಸಿಕೊಳ್ಳಲು ಸಾಧ್ಯಲ್ಲ.
  • ಮತ್ತೊಂದು ಪ್ರಮುಖ ಅಂಶವೆಂದರೆ ಇಲ್ಲಿ ನಡೆಯುವ ಪ್ರತಿಯೊಂದು ವರ್ಗಾವಣೆಯೂ ದಾಖಲಾಗುತ್ತದೆ.

ಇದರ ಉತ್ಪಾದನೆ ಹೇಗೆ?

  • ಬಿಟ್‌ಕಾಯಿನ್‌ಗಳನ್ನು ನೇರವಾಗಿ ಉತ್ಪಾದಿಸಬೇಕೆಂದರೆ ‘ಬಿಟ್‌ಕಾಯಿನ್ ಮೈನಿಂಗ್’ ಎಂಬ ಪ್ರತ್ಯೇಕ ಸಾಫ್ಟ್‌ವೇರ್ ತಂತ್ರಜ್ಞಾನವನ್ನು ಖರೀದಿಸಿ ಬಳಸಬೇಕು. ಇಲ್ಲಿ ಇಂಟರ್‌ನೆಟ್ ಆಧಾರಿತ ಅಪ್ಲಿಕೇಶನ್ ಮೂಲಕ ಮೈನಿಂಗ್ ಮಾಡಬೇಕು.
  • ಈ ಮೈನಿಂಗ್ ಪ್ರಕ್ರಿಯೆಯಲ್ಲಿ ಸಂಕೀರ್ಣ ಗಣಿತದ ಲೆಕ್ಕಾಚಾರವಿರುತ್ತದೆ. ಅದನ್ನು ಬಿಡಿಸಿದರೆ ಬಿಟ್‌ಕಾಯಿನ್‌ನ ಸಣ್ಣ ಭಾಗ ನಿಮ್ಮದಾಗುತ್ತದೆ. ಬಿಟ್‌ಕಾಯಿನ್‌ ಅನ್ನು ನಿಮ್ಮ ಕಂಪ್ಯೂಟರ್ ಅಥವಾ ಫೋನ್ ವ್ಯಾಲೆಟ್ ಅಥವಾ ಆನ್‌ಲೈನ್ ವ್ಯಾಲೆಟ್‌ನಲ್ಲಿ ಸಂಗ್ರಸಿಡಬಹುದು.
  • ನಿಮ್ಮ ಸಿಸ್ಟಮ್‌ನಲ್ಲಿ ವ್ಯಾಲೆಟ್ ಹೊಂದಲು ಕೆಲವು ಡಿಸ್ಕ್ ಸ್ಪೇಸ್ ಅಗತ್ಯ. ಆನ್‌ಲೈನ್ ವ್ಯಾಲೆಟ್ ಪಡೆಯಲು ಅಂತರ್ಜಾಲದಲ್ಲಿ ಕೆಲವು ವೆಬ್ ತಾಣಗಳನ್ನು ಸಂಪರ್ಕಿಸಬಹುದು.

ಬಿಟ್ಕಾಯಿನ್ ಮೈನಿಂಗ್ ಎಂದರೇನು?

  • ಸಾಮಾನ್ಯವಾಗಿ ಗಣಿಗಾರಿಕೆ(ಮೈನಿಂಗ್) ಎಂದರೆ ನಮಗೆಲ್ಲ ಗೊತ್ತೇ ಇದೆ. ಭೂಮಿಯನ್ನು ಅಗೆದು ಖನಿಜ ನಿಕ್ಷೇಪಗಳನ್ನು ಪತ್ತೆ ಹಚ್ಚಿ ಹೊರ ತೆಗೆಯುವುದು. ಬಿಟ್‌ಕಾಯಿನ್ ಮೈನಿಂಗ್‌ಗೂ ಸ್ವಲ್ಪ ಸಾಮ್ಯತೆ ಇದೆ.
  • ಇಲ್ಲಿ ನೀವು ಹೊಸ ಬಿಟ್‌ಕಾಯಿನ್‌ಗಳಿಗೋಸ್ಕರ ಬಗೆಯಬೇಕು. ತಂತ್ರಜ್ಞಾನದ ಪರಿಭಾಷೆಯಲ್ಲಿ ಹೇಳುವುದಾದರೆ ಬಿಟ್‌ಕಾಯಿನ್‌ಗಳ ಅಂದಿನ ವರ್ಗಾವಣೆಗಳ ಗಣಿತ ಲೆಕ್ಕಾಚಾರಗಳನ್ನು ಬಿಡಿಸುತ್ತಾ ಹೋಗಬೇಕು. ಹಳೆಯ ವರ್ಗಾವಣೆಗಳ ಲೆಕ್ಕಗಳ ಸಂಗ್ರಹವನ್ನು (ಲೆಡ್ಜರ್) ಬ್ಲಾಕ್ ಚೈನ್ ಎನ್ನುತ್ತಾರೆ.
  • ಆರಂಭದಲ್ಲಿ, ಅಂದರೆ 2009ರಲ್ಲಿ ಮೈನಿಂಗ್ ಮಾಡುವವರಿಗೆ ಪ್ರತಿ 10 ನಿಮಿಷಕ್ಕೆ 50 ಹೊಸ ಬಿಟ್‌ಕಾಯಿನ್‌ಗಳು ಸಿಗುತ್ತಿದ್ದವು. 2012ರಲ್ಲಿ 25ಕ್ಕೆ ಇಳಿಯಿತು. 2016ಕ್ಕೆ5ಗೆ ತಗ್ಗಲಿದೆ. ಮೈನಿಂಗ್ ಮಾಡುವವರ ಸಂಖ್ಯೆ ಹೆಚ್ಚಿದಂತೆ ಸಿಗುವ ಸಂಖ್ಯೆ ಕಡಿಮೆಯಾಗುತ್ತದೆ.

ಭಾರತದಲ್ಲಿ ಕಾನೂನುಬದ್ಧವೇ?

  • ಭಾರತದಲ್ಲಿ ಸದ್ಯಕ್ಕೆ ನಿಷೇಧವಿಲ್ಲ. ಬಿಟ್‌ಕಾಯಿನ್‌ನ ಆಗುಹೋಗುಗಳ ಬಗ್ಗೆ ತಾನು ಗಮನಿಸುತ್ತಿರುವುದಾಗಿ ಆರ್‌ಬಿಐ ಹೇಳಿದೆ. ನಿಷೇಧ ಜಾರಿಯಾಗದಿರಲು ಕಾರಣವೂ ಇಲ್ಲದಿಲ್ಲ. ಯಾಕೆಂದರೆ ಇದನ್ನು ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಇಲ್ಲವೇ ಸರಕಾರ ನಿಯಂತ್ರಿಸುತ್ತಿಲ್ಲ.
  • ಸಮೂಹದಲ್ಲಿ ಬಳಕೆಯಾಗುತ್ತಿದೆ ಹಾಗೂ ಕರೆನ್ಸಿಯ ಮಾನ್ಯತೆಯೂ ಇದಕ್ಕಿಲ್ಲ. ಆದ್ದರಿಂದ ಬಿಟ್‌ಕಾಯಿನ್ ಸಮುದಾಯವು ಇದನ್ನು ಕರೆನ್ಸಿಯ ಹಾಗೆ ಬಳಕೆಯಾಗುವ ಎಲೆಕ್ಟ್ರಾನಿಕ್ ಸ್ವರೂಪದಲ್ಲಿರುವ ದಾಖಲೆ” ಎಂದು ಕರೆಯುವುದು.

ಇದರಿಂದ ಆಗುವ ಅಪಾಯಗಳೇನು?

  • ಬಿಟ್‌ಕಾಯಿನ್‌ಗಳು ಅಪರಾಧಿಗಳಿಗೆ ಆರ್ಥಿಕ ಅಪರಾಧಗಳನ್ನು ಎಸಗಲು ಹಾದಿ ಮಾಡಿಕೊಟ್ಟಿದೆ. ಮಾದಕ ದ್ರವ್ಯಗಳ ಕಳ್ಳಸಾಗಣೆದಾರರಿಗೆ ಹಣ ವರ್ಗಾವಣೆಗೆ ಬಿಟ್‌ಕಾಯಿನ್‌ಗಳು ಬಳಕೆಯಾಗುತ್ತದೆ. ಯಾಕೆಂದರೆ ಇಲ್ಲಿ ಹಣದ ವರ್ಗಾವಣೆ ಯಾರು ಯಾರಿಗೆ ಮಾಡಿದರು ಎಂಬ ವಿವರವನ್ನು ಪತ್ತೆ ಹಚ್ಚಲಾಗುವುದಿಲ್ಲ.
  • ಇದರ ಬೆಲೆ ಕೂಡ ಕ್ಷಣ ಕ್ಷಣಕ್ಕೆ ತೀವ್ರ ಏರಿಳಿತವಾಗುತ್ತಿರುವುದರಿಂದ ಹೂಡಿಕೆದಾರರಿಗೆ ಯಾವಾಗ ಬೇಕಾದರೂ ಭಾರಿ ನಷ್ಟವಾಗಬಹುದು. ಅಲ್ಲದೆ ಬಳಕೆದಾರರು ಹೆಚ್ಚಿದಂತೆ ಲಭ್ಯತೆ ಕಡಿಮೆಯಾಗುತ್ತದೆ. ಬೇರೆ ಬೇರೆ ದೇಶಗಳ ಆರ್ಥಿಕ ಸ್ಥಿತಿ ಮೇಲೆ ಏನಿದರ ಪರಿಣಾಮ?
  • ಯುರೋಪ್‌ನಲ್ಲಿ ಈ ಕರೆನ್ಸಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಇದರ ಬಳಕೆ ವಿರುದ್ಧ ಯುರೋಪಿಯನ್ ಬ್ಯಾಂಕಿಂಗ್ ಅಥಾರಿಟಿ ಎಚ್ಚರಿಕೆ ನೀಡಿರುವುದರ ಜತೆಗೆ, ಇದರ ನಿಯಂತ್ರಣಕ್ಕೆ ಹೊಸ ವ್ಯವಸ್ಥೆ ಜಾರಿಗೊಳಿಸಬೇಕೆಂದು ಅಭಿಪ್ರಾಯಪಟ್ಟಿದೆ. ಚೀನಾದಲ್ಲಿ ಇದರ ಬಳಕೆಯನ್ನು ನಿಷೇಧಿಲಾಗಿದೆ.

SOURCE-PIB

 

 

2.ಜಿಎಸ್ಟಿ ಅಡಿಯಲ್ಲಿ ವೇ ಬಿಲ್ ನಿಬಂಧನೆ

ವಿದ್ಯಾರ್ಥಿಗಳ ಗಮನಕ್ಕೆ

Mains Paper 3: Economy | Mobilization of resources

ಭಾರತದ ಅರ್ಥವ್ಯವಸ್ಥೆ ಹಾಗು ಯೋಜನೆ ,ಸಂಪತ್ತು ಕ್ರೋಡೀಕರಣ.

UPSC  ಪರೀಕ್ಷೆಯ ದೃಷ್ಟಿಯಲ್ಲಿ ಈ ಕೆಳಗಿನ ಅಂಶಗಳು ಮುಖ್ಯ 

ಪ್ರಿಲಿಮ್ಸ್ ಗಾಗಿ (Prelims level)- GST ಬಗ್ಗೆ , ಇ-ವೇ ಬಿಲ್

Mains level (ಮುಖ್ಯ ಪರೀಕ್ಷೆಗಾಗಿ): ದೇಶದಲ್ಲಿ ಜಾರಿಯಾಗಿರುವ ಸರಕು ಮತ್ತು ಸೇವಾ ತೆರಿಗೆ  (ಜಿಎಸ್‌ಟಿ) ಯ  ಆಡಳಿತದ ಕುರಿತು  ಚರ್ಚಿಸಿ

ಪ್ರಮುಖ ಸುದ್ದಿ

  • ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಡಿ (ಜಿಎಸ್‌ಟಿ) ಅಡುಗೆ ಅನಿಲ, ಸೀಮೆಎಣ್ಣೆ, ಚಿನ್ನಾಭರಣಗಳ ಅಂತರರಾಜ್ಯ ಸಾಗಾಣಿಕೆಗೆ ಎಲೆಕ್ಟ್ರಾನಿಕ್‌ ಪರ್ಮಿಟ್‌ನಿಂದ (ಇ–ವೇ ಬಿಲ್‌) ವಿನಾಯ್ತಿ ನೀಡಲಾಗಿದೆ.

ವೇ ಬಿಲ್ ಎಂದರೇನು??

  • 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಸರಕುಗಳ ಅಂತರರಾಜ್ಯ ಸಾಗಾಣಿಕೆಯಲ್ಲಿ ತೆರಿಗೆ ತಪ್ಪಿಸುವುದನ್ನು ತಡೆಯಲು ಇ–ವೇ ಬಿಲ್‌ ಪಡೆಯುವುದು ಕಡ್ಡಾಯ ಮಾಡಲಾಗಿದೆ. ಅದಿನ್ನೂ ಕಾರ್ಯರೂಪಕ್ಕೆ ಬರಬೇಕಾಗಿದೆ.
  • ಗೃಹ ಬಳಕೆಗೆ ವಿತರಿಸುವ ಎಲ್‌ಪಿಜಿ, ಪಡಿತರ ವ್ಯವಸ್ಥೆ ಮೂಲಕ ವಿತರಿಸುವ ಸೀಮೆಎಣ್ಣೆಯ ಅಂತರ ರಾಜ್ಯ ಸಾಗಾಣಿಕೆ ಕೈಗೊಳ್ಳುವ ಮುನ್ನ ಆನ್‌ಲೈನ್‌ನಲ್ಲಿ ನೋಂದಣಿ ಮಾಡುವುದರಿಂದ ರಿಯಾಯ್ತಿ ನೀಡಲಾಗಿದೆ.
  • ಮೀನು, ಜೇನು, ಹಣ್ಣು, ತರಕಾರಿ, ಹಾಲು, ದವಸ ಧಾನ್ಯ, ಜಾನುವಾರು, ಕಚ್ಚಾ ರೇಷ್ಮೆ, ಖಾದಿ, ಮಣ್ಣಿನ ಪಾತ್ರೆ , ಪೂಜಾ ಸಾಮಗ್ರಿಗಳೂ ಈ ವಿನಾಯ್ತಿ ಪಟ್ಟಿಯಲ್ಲಿ ಸೇರಿವೆ.
  • ತಲೆಗೂದಲು, ಹೆಪ್ಪುಗಟ್ಟಿಸಿದ ವೀರ್ಯ ಮತ್ತು ಗರ್ಭನಿರೋಧಕಗಳಿಗೂ ವಿನಾಯ್ತಿ ನೀಡಲಾಗಿದೆ. ವಿದೇಶಿ ಬಂದರುಗಳಿಂದ ದೇಶಿ ಬಂದರುಗಳಿಗೆ ಬರುವ ಸರಕಿಗೂ ಈ ನಿಬಂಧನೆಯಿಂದ ಸಡಿಲಿಕೆ ನೀಡಲಾಗಿದೆ.
  • ಇ–ವೇ ಬಿಲ್‌ ನೀಡಲು ಅಗತ್ಯವಾದ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗುತ್ತಿದ್ದು, ಅಕ್ಟೋಬರ್‌ ಹೊತ್ತಿಗೆ ಜಾರಿಗೆ ಬರುವ ನಿರೀಕ್ಷೆ ಇದೆ.  ಸಾಗಿಸುವ ಸರಕು, ಪೂರೈಕೆದಾರ, ಖರೀದಿದಾರ, ಸರಕು ಸಾಗಿಸುವ ಸಂಸ್ಥೆಯ ವಿವರಗಳು ಈ ಆನ್‌ಲೈನ್‌ ಪರ್ಮಿಟ್‌ನಲ್ಲಿ ಇರಲಿವೆ.
  • ಸರಕು ಸಾಗಿಸುವ ವಾಹನವನ್ನು ತೆರಿಗೆ ಅಧಿಕಾರಿಗಳು ತಪಾಸಣೆ ನಡೆಸಿದಾಗ ಇಂತಹ ವಿವರಗಳನ್ನು ಪರಿಶೀಲಿಸಲಿದ್ದಾರೆ. ಇದರಿಂದ ಅಂತರ ರಾಜ್ಯ ವಾಣಿಜ್ಯ ವಹಿವಾಟಿನ ಮೇಲೆ ನಿಗಾ ಇಡಲು ಇ–ವೇ ಬಿಲ್‌ ನೆರವಾಗಲಿದೆ.
  • ಜಿಎಸ್‌ಟಿ ಜಾರಿಗೆ ಬಂದ ನಂತರ ಬಹುತೇಕ ರಾಜ್ಯಗಳು ಈ ಮೊದಲಿನ ಪರೋಕ್ಷ ತೆರಿಗೆ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿದ್ದ ಚೆಕ್‌ಪೋಸ್ಟ್‌ಗಳನ್ನು ರದ್ದುಪಡಿಸಿವೆ. ಇದರಿಂದ ರಾಜ್ಯಗಳ ನಡುವೆ ಸರಕುಗಳನ್ನು ತ್ವರಿತವಾಗಿ ಸಾಗಾಟ ಮಾಡಲು ಸಾಧ್ಯವಾಗಿದೆ.

SOURCE-PIB

 

3. ಮಾರಣಾಂತಿಕ ಬ್ಯಾಕ್ಟೀರಿಯಾಗಳ ನಾಶಕ್ಕೆ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಹೊಸ ಸಾಧನೆ

ವಿದ್ಯಾರ್ಥಿಗಳ ಗಮನಕ್ಕೆ

Mains Paper 3:Achievements of Indians in science & technology; indigenization of technology and developing new technology  (ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆ ತಂತ್ರಜ್ಞಾನದ ಸ್ವದೆಶಿಕರಣ .ಹಾಗು ನೂತನ ತಂತಜ್ಞಾನದ ಅಭಿವೃದ್ಧಿ).

UPSC  ಪರೀಕ್ಷೆಯ ದೃಷ್ಟಿಯಲ್ಲಿ ಈ ಕೆಳಗಿನ ಅಂಶಗಳು ಮುಖ್ಯ 

ಪ್ರಿಲಿಮ್ಸ್ ಗಾಗಿ (Prelims level): ಕಡಿಮೆ

ಮೇನ್ಸ್ ಗಾಗಿ (Mains level): ತುಂಬ ಉಪಯುಕತತ್ತೇ ಏಕೆಂದರೆ ಈ ಸಾಧನವನ್ನು ಅಭಿರುದ್ದಿ ಪಡಿಸುತ್ತಿರುವುದು ನಮ್ಮ ಕರ್ನಾಟಕದ IISC ಯವರು . ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ  UPSC/KAS ಪರೀಕ್ಷೆಯ ಯಾವ ಹಂತದಲ್ಲಾದರೂ ಪ್ರಶ್ನೆ ಕೇಳಬಹುದು .

ಪ್ರಮುಖ ಸುದ್ದಿ

  • ಬ್ಯಾಕ್ಟೀರಿಯಾಗಳನ್ನು ಪತ್ತೆ ಮಾಡಿ ಚುಚ್ಚಿ ನಾಶಪಡಿಸುವುದೇ ಹೊಸ ಸಾಧನದ ಕೆಲಸ. ಇದನ್ನು ಬ್ಲಾಕ್‌ ಟೈಟೇನಿಯಂನಿಂದ ಅಭಿವೃದ್ಧಿಪಡಿಸಲಾಗಿದೆ.  ‘ಟೈಟೇನಿಯಂ ನ್ಯಾನೊ ಪಿಲ್ಲರ್‌’ಗಳನ್ನು ಬಳಸಿ ಬ್ಯಾಕ್ಟೀರಿಯಾ ಕೋಶಗಳನ್ನು ಚುಚ್ಚಿ ನಾಶ ಪಡಿಸಬಹುದಾದ ‘ಬ್ಯಾಕ್ಟೀರಿಯಾ ನಿರೋಧಕ ಮೇಲ್ಮೈ’ಯನ್ನು(anti bactirial surface) ಭಾರತೀಯ ವಿಜ್ಞಾನ ಸಂಸ್ಥೆಯ ವರು ಅಭಿವೃದ್ಧಿಪಡಿಸಿದ್ದಾರೆ.
  • ಇದನ್ನು ಈಗಾಗಲೇ ಬ್ಯಾಕ್ಟೀರಿಯಾ ಮತ್ತು ಮಾನವ ಕೋಶಗಳ ಮೇಲೆ ಪ್ರಯೋಗ ನಡೆಸಿದ್ದಾರೆ,ಪ್ರಾಣಿಗಳ ದೇಹದಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಪ್ರಯೋಗ ಆರಂಭಿಸಲಾಗಿದೆ. ಮಾನವ ದೇಹದಲ್ಲಿ ಪ್ರಯೋಗ ನಡೆಸಲು ಪ್ರಯೋಗಾಲಯ ತಜ್ಞರ ಜತೆ ಮಾತುಕತೆ ನಡೆಸಿದ್ದಾರೆ.
  • ಮುಂಬರುವ ದಿನಗಳಲ್ಲಿ  ಮಾರಣಾಂತಿಕ ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸಲು ಇದು ಕ್ರಾಂತಿಕಾರಕ ವೈದ್ಯಕೀಯ ಸಾಧನವಾಗುವುದರಲ್ಲಿ ಸಂದೇಹವೇ ಇಲ್ಲ’ ಎಂದು   ತಿಳಿಸಿದ್ದಾರೆ.
  • ‘ಈ ಸಾಧನ ಆವಿಷ್ಕರಿಸಲು ಪ್ರೇರಣೆ ಪಡೆದದ್ದು ಪ್ರಕೃತಿಯಿಂದ. ಕೆಲವು ಜೀವಿಗಳಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ ವ್ಯವಸ್ಥೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಅಳವಡಿಸಿಕೊಳ್ಳಲಾಗಿದೆ. ತಿಮಿಂಗಿಲ ಮತ್ತು ಕೆಲವು ಬಗೆಯ ಜೀವಿಗಳಲ್ಲಿ ಬ್ಯಾಕ್ಟೀರಿಯಾ ನಿರೋಧಕ ವ್ಯವಸ್ಥೆ ಇರುತ್ತದೆ. ತಿಮಿಂಗಿಲಗಳ ಕಿವಿರು ಅಥವಾ ರೆಕ್ಕೆಗಳ ಮೇಲೆ ದೊರಗಾದ ರಚನೆ ಇರುತ್ತದೆ. ಇದು ಬ್ಯಾಕ್ಟೀರಿಯಾಗಳು ಅಂಟಿಕೊಳ್ಳದಂತೆ ನಿವಾರಿಸಿಕೊಳ್ಳುತ್ತವೆ.
  • ಇದೇ ರೀತಿ ಕೆಲವು ಬಗೆಯ ಕೀಟಗಳ ರೆಕ್ಕೆಗಳಲ್ಲಿಯೂ ನ್ಯಾನೊ ಪಿಲ್ಲರ್‌ಗಳು ಇರುತ್ತವೆ. ಸೂಜಿ ರೀತಿಯ ಸ್ತಂಭಗಳು ಎನ್ನಬಹುದು. ಇವು ಬ್ಯಾಕ್ಟೀರಿಯಾಗಳನ್ನು ಹುಡುಕಿ ಚುಚ್ಚಿ ಕೊಲ್ಲುತ್ತವೆ. ಇದನ್ನೇ ಮಾದರಿಯನ್ನಾಗಿ ಇಟ್ಟುಕೊಂಡು ಬ್ಯಾಕ್ಟೀರಿಯಾ ಕೊಲ್ಲುವ ವಿಧಾನವನ್ನು ಅಭಿವೃದ್ಧಿಪಡಿಸಲಾಗಿದೆ.

ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ??

  • ಟೈಟೇನಿಯಂ ಲೋಹ ಬಳಸಿ ಅತಿ ಸೂಕ್ಷ್ಮ ಸ್ತಂಭಗಳು ಅಥವಾ ಸೂಜಿಯಂತಹ ಹುಲುಸಾದ ಸಮೂಹವನ್ನೇ ಸೃಷ್ಟಿಸಲಾಗುತ್ತದೆ. ರಾಸಾಯನಿಕವಾಗಿ ತುರಿಕೆಗೆ ಪ್ರೇರೇಪಿಸುವ ಸಂವೇದನೆ ಉಂಟಾದಾಗ ಸೂಜಿಗಳು ಕ್ರಿಯಾಶೀಲಗೊಂಡು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ. ಇದನ್ನು ‘ಪ್ರತಿಕ್ರಿಯಾತ್ಮಕ ಐಯಾನ್‌ ಇಚಿಂಗ್‌’ ಎನ್ನಲಾಗುತ್ತದೆ.
  • ಟೈಟೇನಿಯಂ ಅನ್ನು ಮೈಕ್ರೊ ಎಲೆಕ್ಟ್ರಾನಿಕ್‌ ಉದ್ಯಮ ಕ್ಷೇತ್ರದಲ್ಲಿ ‘ಕಪ್ಪು ಸಿಲಿಕಾನ್‌’ ಉತ್ಪಾದಿಸಲು ಬಳಸಲಾಗುತ್ತಿದೆ. ಇದಕ್ಕೆ ಬೆಳಕನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆ. ಆದ್ದರಿಂದ ಎಲೆಕ್ಟ್ರಾನಿಕ್‌ ಸಾಧನಗಳು ಮತ್ತು ಫೊಟೊವೋಲ್ಟಿಕ್‌ಗಳಲ್ಲಿ ಇವುಗಳನ್ನು ಬಳಸುತ್ತಾರೆ. ಕಪ್ಪು ಸಿಲಿಕಾನ್‌ ಅನ್ನು ನೇರವಾಗಿ ವೈದ್ಯಕೀಯ ಉದ್ದೇಶಕ್ಕೆ ಬಳಸಲು ಸಾಧ್ಯವಿಲ್ಲ. ಅದೇ ತಂತ್ರ ಟೈಟೇನಿಯಂ ಮೇಲೆ ಅನ್ವಯಗೊಳಿಸಿ ‘ಬ್ಲಾಕ್‌ ಟೈಟೇನಿಯಂ’ ಅನ್ನು ವಿಜ್ಞಾನಿಗಳ ತಂಡ ಸೃಷ್ಟಿಸಿತು.
  • ಮಂಡಿ, ಮೊಣಕಾಲು ಜೋಡಣೆ, ದೇಹದೊಳಗೆ ಸ್ಕ್ರೂ ಅಳವಡಿಕೆಗೆ ಬ್ಲಾಕ್‌ ಟೈಟೇನಿಯಂ ಬಳಸಲಾಗುತ್ತಿದೆ. ಇದರ ವಿಶೇಷತೆ ಎಂದರೆ ಮಾನವ ದೇಹದಲ್ಲಿ ಅಳವಡಿಸಿದಾಗ ಬ್ಯಾಕ್ಟೀರಿಯಾ ಸೋಂಕಿಗೆ ಒಳಗಾಗದು ಮತ್ತು ಮಲಿನಗೊಳ್ಳುವುದಿಲ್ಲ. ಕಪ್ಪು ಟೈಟೇನಿಯಂ ಕೇವಲ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆಯೇ ಹೊರತು ದೇಹದ ಇತರ ಯಾವುದೇ ಕೋಶಗಳ ತಂಟೆಗೂ ಹೋಗುವುದಿಲ್ಲ.
  • ಕಪ್ಪು ಟೈಟೇನಿಯಂನಿಂದ ಮಾಡಿದ ನ್ಯಾನೊ ಪಿಲ್ಲರ್‌ಗಳನ್ನು ಪ್ರಯೋಗಕ್ಕೆ ಒಳಪಡಿಸಿದಾಗ ಉದರ ಬೇನೆಗೆ ಕಾರಣವಾಗುವ ಬ್ಯಾಕ್ಟೀರಿಯಾ ಇಶ್ಚರಿಯಾ ಕೋಲಿಯನ್ನು ಶೇ 95, ಸಿಸ್ಮಿಕ್‌ ಫೈಬ್ರೊಸಿಸ್‌ಗೆ ಕಾರಣವಾಗುವ ಸ್ಯುಡೊಮೊನಸ್‌ ಅರ್ಗೂನೊಸವನ್ನು ಶೇ 98, ಮೈಕ್ರೋ ಬ್ಯಾಕ್ಟೀರಿಯಂ ಅನ್ನು ಶೇ 92 ಮತ್ತು ಸ್ಟೆಫಿಲೊಕೊಸ್‌ ಅನ್ನು ಶೇ 22 ರಷ್ಟು ನಾಶಪಡಿಸಿತ್ತದೆ.

ಮನುಕುಲದ ನಂ 1 ಶತ್ರು- ಬ್ಯಾಕ್ಟೀರಿಯಾ

  • ಮನುಕುಲದ ನಂ 1 ಶತ್ರು ಎಂದರೆ ಬ್ಯಾಕ್ಟೀರಿಯಾ, ವೈರಸ್‌, ಫಂಗೈಗಳು. ವಿವಿಧ ಬಗೆಯ ರೋಗಗಳ ವಾಹಕವಾಗಿರುವ ಬ್ಯಾಕ್ಟೀರಿಯಾಗಳಿಂದ ವಿಶ್ವದಲ್ಲಿ ಪ್ರತಿ ನಿತ್ಯ 50 ಸಾವಿರಕ್ಕೂ ಹೆಚ್ಚು ಜನ ಸಾಯುತ್ತಿದ್ದಾರೆ.

ಬ್ಯಾಕ್ಟೀರಿಯಾನಾಶದ ವಿಧಾನ

  • ಬ್ಯಾಕ್ಟೀರಿಯಾ, ವೈರಸ್‌ಗಳ ನಾಶಕ್ಕೆ ವಿವಿಧ ರೀತಿಯ ರೋಗ ನಿರೋಧಕ ಔಷಧಗಳನ್ನು ಬಳಸಲಾಗುತ್ತಿದೆ. ವಿಚಿತ್ರವೆಂದರೆ, ಬಹಳಷ್ಟು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿವೆ. ಬ್ಯಾಕ್ಟೀರಿಯಾ, ವೈರಸ್‌, ಪ್ರೊಟೊಜೊನ್‌ಗಳ ಸರ್ವ ನಾಶಕ್ಕೆ ಜಗತ್ತಿನ ವಿಜ್ಞಾನಿಗಳು ಪರಿಣಾಮಕಾರಿ ಔಷಧಿ ಸಂಶೋಧಿಸಲು ಪೈಪೋಟಿಗೆ ಬಿದ್ದಿದ್ದಾರೆ.

ಸೂಪರ್ಬಗ್ಹಾವಳಿ

  • ಬ್ಯಾಕ್ಟೀರಿಯಾಗಳು ಮನುಷ್ಯನಿಗಿಂತ ಎಷ್ಟೋ ಪಟ್ಟು ಬುದ್ಧಿವಂತಿಕೆ ಹೊಂದಿರುವಂತೆ ಕಾಣುತ್ತದೆ. ಯಾವುದೇ ಔಷಧಕ್ಕೂ ಜಗ್ಗದೆ ನಿರೋಧಕ ಶಕ್ತಿ ಬೆಳೆಸಿಕೊಂಡು ‘ಸೂಪರ್‌ಬಗ್‌’ ಆಗಿ ರೂಪಾಂತರಗೊಳ್ಳುತ್ತಿವೆ. ಇದು ವಿಜ್ಞಾನಿಗಳನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ.

ಹೇಗೆ ಕೆಲಸ ಮಾಡುತ್ತದೆ..??

  • ಸೂಜಿಯಂತಹ ನ್ಯಾನೊ ಪಿಲ್ಲರ್‌ಗಳು ಬ್ಯಾಕ್ಟೀರಿಯಾಗಳನ್ನು ಹುಡುಕಿ, ಸೆಳೆದು ಚುಚ್ಚಿ ಕೊಲ್ಲುತ್ತವೆ. ಕೆಲವು ಬಗೆಯ ಕೀಟಗಳು ಪ್ರಕೃತಿದತ್ತವಾಗಿ ಈ ವ್ಯವಸ್ಥೆಯನ್ನು ಹೊಂದಿವೆ.

SOURCE-THE HINDU

4. ಮಂಡಿಚಿಪ್ಪು ಕಸಿ ಶಸ್ತ್ರಚಿಕಿತ್ಸೆ ದರ ಶೇ.69 ಕಡಿತ

ವಿದ್ಯಾರ್ಥಿಗಳ ಗಮನಕ್ಕೆ

Mains Paper 2: Governance | Issues relating to development and management of Social Sector/Services relating to Health, Education, Human Resources.

(ಅರೋಗ್ಯ ,ಶಿಕ್ಷಣ ,ಮಾನವ ಸಂಪನ್ಮೂಲಗಳು ಇವೆ ಮುಂತಾದ ಸಾಮಾಜಿಕ ಕ್ಷೇತ್ರಗಳ ಅಭಿವೃಧ್ಧಿ ನಿರ್ವಹಣೆಗೆ ಸಂಬಂದಿಸಿದ ಅಂಶಗಳು )

 UPSC  ಪರೀಕ್ಷೆಯ ದೃಷ್ಟಿಯಲ್ಲಿ ಈ ಕೆಳಗಿನ ಅಂಶಗಳು ಮುಖ್ಯ 

ಪ್ರಿಲಿಮ್ಸ್ ಗಾಗಿ (Prelims level)- : NPPA

ಮೇನ್ಸ್ ಗಾಗಿ (Mains level) :ಸರ್ಕಾರದಿಂದ ಉತ್ತಮ ಹೆಜ್ಜೆ. ಇದು ಮಧ್ಯಕಾಲೀನ ವರ್ಗ ಮತ್ತು ಬಡ ಕುಟುಂಬಗಳಿಗೆ ತುಂಬಾ ಸಹಾಯಕವಾಗಬಲ್ಲದು. ಎಲ್ಲ ಚಿಕಿತ್ಸೆ ಗಳನ್ನೂ ಯಾಕೆ ಈ ರೀತಿಯಲ್ಲಿ ತರಲು ಆಗುತ್ತಿಲ್ಲ… ??

 ಪ್ರಮುಖ ಸುದ್ದಿ

  • ಹೃದ್ರೋಗಿಗಳಿಗೆ ಬೇಕಾದ ಸ್ಟೆಂಟ್‌ಗಳ ಬೆಲೆಯನ್ನು ಇಳಿಸಿದ ಬೆನ್ನಲ್ಲೇ ಇದೀಗ ಮಂಡಿಚಿಪ್ಪು ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೂ ಕೇಂದ್ರ ಸರಕಾರ ರಿಲೀಫ್ ನೀಡಿದೆ.
  • ಮಂಡಿಚಿಪ್ಪಿನ ಕಸಿ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಶೇ.80-90 ಉತ್ಪನ್ನಗಳು ದೇಶೀಯವಾಗಿ ತಯಾರಾಗುವುದಿಲ್ಲ. ಇವಕ್ಕಾಗಿ ಭಾರತವು ಬಹುರಾಷ್ಟ್ರೀಯ ಕಂಪನಿಗಳನ್ನೇ ಅವಲಂಬಿಸಬೇಕಾಗಿತ್ತು. ಪರಿಸ್ಥಿತಿಯ ಲಾಭ ಪಡೆಯುತ್ತಿದ್ದ ಬಹುರಾಷ್ಟ್ರೀಯ ಕಂಪನಿಗಳು ಮಂಡಿಚಿಪ್ಪಿನ ಕಸಿಗಳನ್ನು ದುಬಾರಿ ಬೆಲೆ ಮಾರಾಟ ಮಾಡುತ್ತಿದ್ದವು. ಹೀಗಾಗಿ, ಸರ್ಕಾರ ಅವುಗಳ ಬೆಲೆ ನಿಯಂತ್ರಿಸಲು ನಿರ್ಧರಿಸಿತು .
  • ರಾಷ್ಟ್ರೀಯ ಔಷಧೀಯ ದರ ನಿಗದಿ ಪ್ರಾಧಿಕಾರ (ಎನ್​ಪಿಪಿಎ) ದರಗಳ ದತ್ತಾಂಶದ ವಿಶ್ಲೇಷಣೆ ನಡೆಸಿ, ಸರ್ಕಾರಕ್ಕೆ ಮಾಹಿತಿ ನೀಡಿತ್ತು. ವರದಿಯಲ್ಲಿ ಭಾರಿ ದರ ವ್ಯತ್ಯಾಸ ಇರುವುದು ಸ್ಪಷ್ಟವಾಗಿತ್ತು. ಇಂತಹ ಲಾಭಕೋರತನಕ್ಕೆ ಕಡಿವಾಣ ಹಾಕಲು ಈ ಕ್ರಮ ಅನಿವಾರ್ಯವಾಯಿತೆಯಿತ್ತು
  • ಭಾರತದಲ್ಲಿ ಪ್ರತಿವರ್ಷ2 ಲಕ್ಷ ಮಂದಿ ಮಂಡಿ ಚಿಪ್ಪಿನ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಇದೀಗ ದರ ನಿಯಂತ್ರಣ ಜಾರಿಗೆ ಬಂದಿರುವುದರಿಂದ, ಇಂತಹ ಶಸ್ತ್ರಚಿಕಿತ್ಸೆಗೆ ಒಳಗಾದವರೆಲ್ಲರಿಂದ ಒಟ್ಟು 1,500 ಕೋಟಿ ರೂ. ಉಳಿತಾಯವಾಗುತ್ತದೆ ಎಂದು ಅಂದಾಜಿಸಲಾಗಿದೆ.
  • NPPA ಪ್ರಕಾರ, ಕೇಂದ್ರ ಸರ್ಕಾರವು ಅಂತಹ “ಮೊಣಕಾಲು ಕಸಿ ಸಂದರ್ಭದಲ್ಲಿ ಅಸಾಮಾನ್ಯ ಪರಿಸ್ಥಿತಿ ಅಸ್ತಿತ್ವದಲ್ಲಿದೆ” ಎಂದು ಕಂಡುಹಿಡಿದಿದೆ

The National Pharmaceutical Pricing Authority (NPPA) and the Department of Pharmaceuticals (DOP) come under Ministry of Chemicals and Fertilisers.

SOURCE-INDIAN EXPRESS

 

ಪ್ರಿಲಿಮ್ಸ್ ಗೆ ಮಾತ್ರ (ONLY FOR PRELIMS)

1.ಮೆಲ್ಬೋರ್ನ್- ಜಾಗತಿಕ ಜೀವನಯೋಗ್ಯ ನಗರಗಳ ಪಟ್ಟಿಯಲ್ಲಿ  ಪ್ರಥಮ

  • ಎಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್(Economist Intelligence Unit’s (EIU) )Global Liveability Index. ಸಿದ್ಧಪಡಿಸುವ 2017ರ ಜಾಗತಿಕ ಜೀವನಯೋಗ್ಯ ದೇಶಗಳ ಕುರಿತ ವರದಿಯಲ್ಲಿ ಮೆಲ್ಬೋರ್ನ್ ಅಗ್ರಸ್ಥಾನದಲ್ಲಿದೆ.
  • ಆರೋಗ್ಯ ಸುರಕ್ಷೆ, ಶಿಕ್ಷಣ, ಸುಭದ್ರತೆ,, ಪರಿಸರ, ಸಂಸ್ಕೃತಿ ಹಾಗೂ ಮೂಲಸೌಕರ್ಯ ಮಾನದಂಡಗಳ ಆಧಾರದ ಮೇಲೆ ಮೆಲ್ಬೋರ್ನ್ ನಗರಗಳ  ಪ್ರಥಮ ಸ್ಥಾನಗಳಿಸಿದೆ  .
  • ಅಗ್ರ   ಅಥವಾ ಕೊನೆಯ ಹತ್ತು ನಗರಗಳ ಪಟ್ಟಿಯಲ್ಲಿ ಭಾರತದ ಯಾವುದೇ ನಗರಗಳು ಸ್ಥಾನ ಪಡೆದಿಲ್ಲ.

.ಪ್ರಥಮ  ಐದು ಸ್ಥಾನ ಗಳಿಸಿರುವ  ನಗರಗಳು:

1.ಮೆಲ್ಬರ್ನ್

2.ವಿಯೆನ್ನಾ

3.ವ್ಯಾಂಕೋವರ್

4.ಟೊರೊಂಟೊ

5.ಅಡಿಲೇಡ್, ಕ್ಯಾಲ್ಗರಿ.

SOURCE- THE HINDU

 2.ಮೆಟ್ರೊ: ಹೊಸ ನೀತಿಗೆ ಒಪ್ಪಿಗೆ

  • ದೇಶದ ಮತ್ತಷ್ಟು ನಗರಗಳಿಗೆ ಮೆಟ್ರೊ ರೈಲು ಯೋಜನೆಯನ್ನು ವಿಸ್ತರಿಸುವ ಮತ್ತು ಸಾಮೂಹಿಕ ತ್ವರಿತವಾದ ಸಾರಿಗೆ ವ್ಯವಸ್ಥೆಗೆ ಖಾಸಗಿ ಬಂಡವಾಳವನ್ನು ಇನ್ನಷ್ಟು ಆಕರ್ಷಿಸುವ ಉದ್ದೇಶದಿಂದ ಹೊಸ ಮೆಟ್ರೊ ರೈಲು ನೀತಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
  • ಈ ನೀತಿಯು ಸಮಗ್ರ ನಗರ ಅಭಿವೃದ್ಧಿ, ವೆಚ್ಚ ಕಡಿತ ಮತ್ತು ಬಹು ಹಂತದ ಸಾರಿಗೆ ವ್ಯವಸ್ಥೆಗೆ ಹೆಚ್ಚು ಗಮನ ನೀಡಲಿದೆ.
  • ಹೆಚ್ಚು ಸಂಪನ್ಮೂಲಗಳನ್ನು ಬೇಡುವ, ಭಾರಿ ಹಣದ ಅಗತ್ಯವಿರುವ ಮೆಟ್ರೊ ಯೋಜನೆಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆ ಮತ್ತು ಹಣಕಾಸು ನೆರವು ಪಡೆಯಲು ವಿನೂತನ ವಿಧಾನ ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ’ .
  • ಹೊಸ ನೀತಿಯ ಪ್ರಕಾರ, ಮೆಟ್ರೊ ಯೋಜನೆಗಳಲ್ಲಿ ಖಾಸಗಿ ಪಾಲುದಾರಿಕೆ ಕಡ್ಡಾಯ.
  • ‘ರಾಜ್ಯಗಳು ಇಡೀ ಯೋಜನೆಗೆ ಖಾಸಗಿಯವರ ನೆರವು ಪಡೆಯಬಹುದು ಅಥವಾ ಸ್ವಯಂಚಾಲಿತ ಶುಲ್ಕ ಸಂಗ್ರಹ ವ್ಯವಸ್ಥೆ/ ಮೆಟ್ರೊ ಕಾರ್ಯಾಚರಣೆ/ ಮೆಟ್ರೊ ಸೇವೆಗಳ ನಿರ್ವಣೆಗಳಂತಹ ಸೇವೆಗಳಿಗೆ ಖಾಸಗಿವರ ಸಹಭಾಗಿತ್ವ ಪಡೆಯಬಹುದು’ಎಂದು ನೀತಿ ಹೇಳುತ್ತದೆ.
  • ಅಲ್ಲದೇ, ಯೋಜನೆಗಳಿಗೆ ಪ್ರಸ್ತಾವ ಸಲ್ಲಿಸುವಾಗ ಹತ್ತಿರದ ಮೆಟ್ರೊ ನಿಲ್ದಾಣಗಳಿಂದ ಕನಿಷ್ಠ 5 ಕಿ.ಮೀ ದೂರದವರೆಗೆ ಯಾವ ರೀತಿ ಸಂಪರ್ಕ ಕಲ್ಪಿಸಲಾಗುತ್ತದೆ ಎಂಬುದನ್ನೂ ಕಡ್ಡಾಯವಾಗಿ ವಿವರಿಸಬೇಕು.
  • ಯೋಜನೆಗೆ ಹಣ ಕ್ರೋಡೀಕರಿಸಲು ನಿಲ್ದಾಣಗಳಲ್ಲಿ ಅಥವಾ ನಗರದಲ್ಲಿ ಖಾಲಿ ಇರುವ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ರಾಜ್ಯಗಳಿಗೆ ಈ ನೀತಿ ಅವಕಾಶ ಕಲ್ಪಿಸುತ್ತದೆ.

SOURCE-PIB

3.ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣಕ್ಕಾಗಿ ಕಾರ್ಪಸ್ ನಿಧಿ

  • “ಮಾಧ್ಯಮಿಕ ಮತ್ತು ಉಚ್ಛ್ತರ್ ಶಿಕ್ಷಾ ಕೋಶ್” (MUSK) ಎಂದು ಕರೆಯಲ್ಪಡುವ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣಕ್ಕಾಗಿ ಅಸಮರ್ಪಕ ಕೊಳವನ್ನು ರಚಿಸುವುದಕ್ಕಾಗಿ ಕೇಂದ್ರೀಯ ಕ್ಯಾಬಿನೆಟ್ ತನ್ನ ಅನುಮೋದನೆಯನ್ನು ನೀಡಿದೆ. 
  • ಆಡಳಿತ ಮತ್ತು ನಿರ್ವಹಣೆಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development.) ವಹಿಸಿಕೊಂಡಿದೆ.
  • ಭಾರತದ ಸಾರ್ವಜನಿಕ ಖಾತೆಗಳ ಆಸಕ್ತಿಯೇತರ ಬೇರಿಂಗ್ ವಿಭಾಗದಲ್ಲಿ MUSK ಅನ್ನು ರಿಸರ್ವ್ ಫಂಡ್ (ಕಾರ್ಪಸ್ ನಿಧಿ ) ಎಂದು ನಿರ್ವಹಿಸಲಾಗುತ್ತದೆ.
  • MUSK ಯಿಂದ ಉಂಟಾಗುವ ನಿಧಿಯನ್ನು ಶಿಕ್ಷಣ ಕ್ಷೇತ್ರದ ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು, ಹಾಗು ಇದು ದೇಶದಾದ್ಯಂತ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಲಭ್ಯವಾಗುತ್ತದೆ.

SOURCE-PIB

4.ಜಾಗತಿಕ ಪರಿಸರ ಸೌಲಭ್ಯ (Global Environment Facility (GEF) ) ಒಪ್ಪಂದಕ್ಕೆ ಭಾರತ ಸಹಿ

  • ಜಾಗತಿಕ ಪರಿಸರ ಸೌಲಭ್ಯ ಅನುದಾನಕ್ಕೆ ಸಂಬಂಧಿಸಿದಂತೆ ಭಾರತ ವೀಶ್ವಬ್ಯಾಂಕ್ ಜತೆ ಒಪ್ಪಂದಕ್ಕೆ  ಸಹಿ ಮಾಡಿದೆ. ಈ ಮಹತ್ವದ ಯೋಜನೆಗೆ ವಿಶ್ವಬ್ಯಾಂಕ್ ಸಂಪೂರ್ಣ ನೆರವು ನೀಡಲಿದ್ದು,  ಈ ಯೋಜನೆಯ ಅವಧಿ ಐದು ವರ್ಷಗಳಾಗಿರುತ್ತವೆ.
  • ಅರಣ್ಯ ಇಲಾಖೆಯ ಸಂಸ್ಥೆಗಲನ್ನು ಬಲಗೊಳಿಸುವುದು ಮತ್ತು ಅರಣ್ಯ ಪರಿಸರ ವ್ಯವಸ್ಥೆ ಸೇವೆಯನ್ನು ವಿಸ್ತ್ರುತಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
  • ಕೇ೦ದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಪರಿಸರ ವ್ಯವಸ್ಥೆ ಸೇವಾ ಸುಧಾರಣೆ ಯೋಜನೆಯನ್ನು ಜಾರಿಗೆ ತರಲಿದೆ.

SOURCE-PIB

Share