17th October
1.SOURCE-THE HINDU EDITORIAL
ಐಕ್ಯನ್ ಮತ್ತು ನಿಶಸ್ತರಿಕರಣ
(BETWEEN DISARMAMENT AND DETERRENCE)
ಈ ಆರ್ಟಿಕಲ್ ನಿಂದ UPSC-KAS ಪರೀಕ್ಷೆಗಾಗಿ ಪ್ರಮುಖವಾಗಿ ತಿಳಿದು ಕೊಳ್ಳಬೇಕಾಗಿರುವ ಅಂಶಗಳು
ಪೀಠಿಕೆ:
ಈ ವರ್ಷದ ಪ್ರಶಸ್ತಿಯನ್ನು ಐಕ್ಯನ್ ಗೆ ನೀಡಿರುವ ಹಿಂದಿನ ತಾರ್ಕಿಕತೆ ಏನು?
ಪರಮಾಣು ನಿಷೇಧ ಒಪ್ಪಂದ ಎಂದರೇನು?
ಹಾಗು ಇದರ ಇತ್ತೀಚಿನ ಬೆಳವಣಿಗೆಗಳು
ಪರಮಾಣು ಶಸ್ತ್ರಾಸ್ತ್ರಗಳಿಂದ ಬೀರುವ ಪರಿಣಾಮಗಳು ಯಾವುವು ?
- ಪರಿಸರದ ಮೇಲೆ
2.ಮನುಷ್ಯರ ಮೇಲೆ
ಇಷ್ಟೆಲ್ಲ ಪರಿಣಾಮಬೀರಿದರು ಇದನ್ನು ಯಾಕೆ ಕೆಲವು ರಾಷ್ಟ್ರಗಳು ಉಪಯೋಗಿಸುತ್ತಿದೆ ?
ಉಪಸಂಹಾರ
ಪೀಠಿಕೆ:
ಇತ್ತೀಚೆಗೆ, 2017 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಣ್ವಸ್ತ್ರ ನಿರ್ಮೂಲನ ಅಂತಾರಾಷ್ಟ್ರೀಯ ಅಭಿಯಾನ (ಐಕ್ಯಾನ್) ಸಂಸ್ಥೆಗೆ ನೀಡಿಲಾಗಿದೆ.
- ಉತ್ತರ ಕೊರಿಯಾದ ಪರಮಾಣು ಕಾರ್ಯಕ್ರಮದಿಂದ ಜಾಗತಿಕ ಬಿಕ್ಕಟ್ಟಿನಲ್ಲಿ ಉಂಟಾದ ಪರಮಾಣು ಶಸ್ತ್ರಾಸ್ತ್ರಗಳ ಬೆದರಿಕೆಯು ತುಂಬಾ ಸ್ಪಷ್ಟವಾಗಿ ಕಂಡುಬರುತ್ತಿರುವ ಸಂದರ್ಭದಲ್ಲಿ ಈ ವರ್ಷ ಐಕ್ಯಾನ್‌ಗೆ (ಶಸ್ತ್ರಾಸ್ತ್ರಗಳನ್ನು ನಿರ್ಮೂಲನೆ ಮಾಡುವ ಅಂತರರಾಷ್ಟ್ರೀಯ ಅಭಿಯಾನ) ನೊಬೆಲ್ ಶಾಂತಿ ಪ್ರಶಸ್ತಿ ಬಂದಿದೆ.
- ಅಣ್ವಸ್ತ್ರಗಳ ನಿರ್ಮೂಲನೆ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ಪರಿಣಾಮಕಾರಿ ಅಭಿಯಾನ ನಡೆಸಿ, ಈಗಾಗಲೇ ಅಣ್ವಸ್ತ್ರಗಳನ್ನು ಹೊಂದಿರುವ ವಿಶ್ವದ ಅನೇಕ ರಾಷ್ಟ್ರಗಳ ಮನವೊಲಿಸುವಲ್ಲಿ ಐಕ್ಯಾನ್ ಮಹತ್ವದ ಪಾತ್ರ ವಹಿಸಿದೆ. ಈಗಾಗಲೇ ಅನೇಕ ರಾಷ್ಟ್ರಗಳೂ ಇದರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇದನ್ನು ಪರಿಗಣಿಸಿ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
- ಕಳೆದ ದಶಕದಲ್ಲಿ ಇದು ಎರಡನೆಯ ಬಾರಿಗೆ ನೊಬೆಲ್ ಸಮಿತಿಯು ಶಸ್ತ್ರಾಸ್ತ್ರಗಳ ನಿರ್ಮೂಲನೆ ಗುರಿಯನ್ನು ಹೊಂದಿರುವುದಕ್ಕೆ ಶಾಂತಿ ಪ್ರಶಸ್ತಿಯನ್ನು ನೀಡಿರುವುದು.
ಈ ವರ್ಷದ ಪ್ರಶಸ್ತಿಯನ್ನು ಐಕ್ಯನ್ ಗೆ ನೀಡಿರುವ ಹಿಂದಿನ ತಾರ್ಕಿಕತೆ ಏನು?
- ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಅಣ್ವಸ್ತ್ರ ಬಳಕೆಯ ಬೆದರಿಕೆಗಳು ವಿನಿಮಯ ಆಗುತ್ತಿದೆ. ಇರಾನ್ ಜತೆಗೆ ಅಮೆರಿಕ ಮತ್ತು ಇತರ ದೇಶಗಳು 2015ರಲ್ಲಿ ಮಾಡಿಕೊಂಡ ಅಣ್ವಸ್ತ್ರ ತಯಾರಿಕೆ ನಿಷೇಧ ಒಪ್ಪಂದ ಅನಿಶ್ಚಿತವಾಗಿ ಎರಡು ವರ್ಷ ಕಳೆಯಿತು . ಇಂತಹ ಸಂದರ್ಭದಲ್ಲಿ ಅಣು ನಿಶ್ಶಸ್ತ್ರೀಕರಣಕ್ಕೆ ಬಲ ತುಂಬುವುದಕ್ಕಾಗಿ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ ಪ್ರಯತ್ನಿಸಿದೆ.
- ಹೆಚ್ಚು ಸದ್ದು ಗದ್ದಲವಿಲ್ಲದೆ ಕೆಲಸ ಮಾಡುತ್ತಿರುವ ಐಕ್ಯಾನ್ಗೆ ಪ್ರಶಸ್ತಿ ಘೋಷಿಸುವ ಮೂಲಕ ನೊಬೆಲ್ ಪ್ರಶಸ್ತಿಯು ಅಚ್ಚರಿ ಮೂಡಿಸಿದೆ. ಅಣ್ವಸ್ತ್ರ ತಯಾರಿಕೆ ತಡೆಯುವುದಕ್ಕೆ ಇರಾನ್ ಜತೆಗೆ ಅತ್ಯಂತ ಸಂಕೀರ್ಣ ಒಪ್ಪಂದವನ್ನು ಹಲವು ಸುತ್ತು ಮಾತುಕತೆ ಮತ್ತು ಸಂಧಾನದ ಮೂಲಕ ಮಾಡಲಾಗಿದೆ. ಹಾಗಾಗಿ ಈ ಒಪ್ಪಂದದ ಹಿಂದೆ ಇದ್ದವರಿಗೆ ಈ ಬಾರಿಯ ಶಾಂತಿ ನೊಬೆಲ್ ಪುರಸ್ಕಾರ ದೊರೆಯಬಹುದು ಎಂಬ ನಿರೀಕ್ಷೆ ಇತ್ತು. `
- ಅಣ್ವಸ್ತ್ರ ನಿಷೇಧಕ್ಕಾಗಿ ವಿಶ್ವಸಂಸ್ಥೆಯು ರೂಪಿಸಿದ ಒಪ್ಪಂದಕ್ಕೆ ಜುಲೈಯಲ್ಲಿ 122 ದೇಶಗಳು ಸಹಿ ಮಾಡಿವೆ. ಆದರೆ ಈ ಒಪ್ಪಂದಕ್ಕೆ ಅಣ್ವಸ್ತ್ರ ಹೊಂದಿರುವ ದೇಶಗಳಾದ ಅಮೆರಿಕ, ರಷ್ಯಾ, ಚೀನಾ, ಬ್ರಿಟನ್, ಫ್ರಾನ್ಸ್, ಭಾರತ, ಇಸ್ರೇಲ್ ಮತ್ತು ಪಾಕಿಸ್ತಾನ ಸಹಿ ಮಾಡಿಲ್ಲ. `ಜಾಗತಿಕ ಮಟ್ಟದಲ್ಲಿ ಅತಿಯಾದ ಉದ್ವಿಗ್ನತೆ ಇದೆ.
- ಭೀತಿ ಸೃಷ್ಟಿಸುವ ಬೆದರಿಕೆ ಮಾತುಗಳು ಬಹಳ ಸುಲಭವಾಗಿ, ನಿಷ್ಕರುಣೆಯಿಂದ ಊಹಿಸಲಾಗದಂತಹ ಕ್ರೌರ್ಯಕ್ಕೆ ನಮ್ಮನ್ನು ತಳ್ಳಬಹುದು. ಅಣ್ವಸ್ತ್ರ ಯುದ್ಧದ ಭೀತಿ ಮತ್ತೆ ಗಾಢವಾಗಿ ಕಾಡುತ್ತಿದೆ. ಅಣ್ವಸ್ತ್ರಗಳಿಗೆ ತಮ್ಮ ವಿರೋಧವನ್ನು…….CLICK HERE TO READ MORE AND REAMING TOPICS