Daily Current Affairs 21st Setember

21ST  SEPTEMBER

 

SOURCE http://www.thehindu.com/news/national/india-ready-to-work-above-and-beyond-paris-climate-deal-swaraj/article19720090.ece

 

1.ಪ್ಯಾರಿಸ್ ಒಪ್ಪಂದವನ್ನು ಮೀರಿ ಪರಿಸರ ರಕ್ಷಣೆ ಕಾಳಜಿ ವಹಿಸಲಿದೆಭಾರತ

ಪ್ರಾಮುಖ್ಯತೆಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ

ಪ್ರಮುಖ ಸುದ್ದಿ

  • ಜೂನ್ ನಲ್ಲಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕವು ಪ್ಯಾರಿಸ್ ಒಪ್ಪಂದದಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು, ಭಾರತ ಮತ್ತು ಚೀನಾದಂತಹ ದೇಶಗಳಿಗೆ ಲಾಭಕರವಾಗಿರುವ ಈ ಕ್ರೂರ ಒಪ್ಪಂದ ಅಮೆರಿಕಕ್ಕೆ ಅನ್ಯಾಯ ಮಾಡಿದೆ ಎಂದು ಅವರು ಆರೋಪಿಸಿದ್ದರು.
  • ಈ ಅನಿಶ್ಚಿತತೆ ಮಧ್ಯೆಯು ಪ್ಯಾರಿಸ್ ಹವಾಮಾನ ಬದಲಾವಣೆಯ ಒಪ್ಪಂದಕ್ಕೆ ಭಾರತ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು.
  • ನ್ಯೂಯಾರ್ಕ್ ನಲ್ಲಿ ಹವಾಮಾನ ಬದಲಾವಣೆ ಕುರಿತು ವಿಶ್ವಸಂಸ್ಥೆ ಕಾರ್ಯದರ್ಶಿ ಜನರಲ್ ಆಂಟೊನಿಯೊ ಗುಟೆರ್ರೆಸ್ ಅವರೊಂದಿಗೆ ಕೆಲವು ಆಯ್ದ ನಾಯಕರೊಂದಿಗೆ ಸಭೆ ನಡೆಸಿದ ಬಳಿಕ ಪ್ಯಾರಿಸ್ ಒಪ್ಪಂದ ವನ್ನು ಮೀರಿ ಪರಿಸರ ರಕ್ಷಣೆ ಕಾಳಜಿ ವಹಿಸಲಿದೆ ಎಂದು ಭಾರತದ ವಿದೇಶಾಂಗ ಸಚಿವರು ಈ ಹೇಳಿಕೆ ನೀಡಿದರು.
  • ಪರಿಸರ ಮತ್ತು ತಾಯ್ನಾಡಿನ ರಕ್ಷಣೆ ಮೇಲೆ ನಂಬಿಕೆ ಇರಬೇಕಾಗಿದ್ದು ಅದಕ್ಕೆ ಒತ್ತು ನೀಡುವ ಅವಶ್ಯಕತೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಭಾರತ ಈ ನಿಟ್ಟಿನಲ್ಲಿ ತನ್ನ ಕೆಲಸವನ್ನು ಮುಂದುವರಿಸಲಿದ್ದು ಪ್ಯಾರಿಸ್ ಒಪ್ಪಂದವನ್ನು ಮೀರಿ ಕಾರ್ಯನಿರ್ವಹಿಸಲಿದೆ. ಮುಂದಿನ ಜನಾಂಗ ಉತ್ತಮ ಜೀವನ ನಡೆಸುವುದು ನಮ್ಮ ಬದ್ಧತೆಯಾಗಿದೆ ಎಂದು ಹೇಳಿದ್ದಾರೆ.
  • ಅಂತಾರಾಷ್ಟ್ರೀಯ ಸೌರ ಮೈತ್ರಿ ವಿಷಯದಲ್ಲಿ ವಿಶ್ವಸಂಸ್ಥೆಯ ಭದ್ರತಾ ಪಡೆ ಮತ್ತು ಸಂಬಂಧಪಟ್ಟ ವಿಶ್ವಸಂಸ್ಥೆಯ ಸಂಸ್ಥೆಗಳ ಜೊತೆಗೆ ಕೆಲಸ ಮಾಡಲು ಭಾರತ ಸಿದ್ಧವಿದೆ ಎಂದು ಹೇಳಿದರು.

ಮುಖ್ಯ ಪರೀಕ್ಷೆಗಾಗಿ

ಪ್ಯಾರಿಸ್ಒಪ್ಪಂದವನ್ನು ಭಾರತ ಏಕೆ ಸ್ವೀಕರಿಸಿತು..?

  • ಭಾರತವು ಹವಾಮಾನ ಬದಲಾವಣೆಯ ಪ್ಯಾರಿಸ್‌ ಒಪ್ಪಂದವನ್ನು ಸ್ಥಿರೀಕರಿಸುವ ದಾಖಲೆಗಳನ್ನು ಸಲ್ಲಿಸುವ ಮೂಲಕ ಐತಿಹಾಸಿಕ ಒಪ್ಪಂದಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿತ್ತು .
  • ಮಹಾತ್ಮ ಗಾಂಧೀಜಿ ಅವರ 147ನೇ ಜಯಂತಿಯಂದೇ ಭಾರತ ‘ಪೃಥ್ವಿಯನ್ನು ಮುಂದಿನ ತಲೆಮಾರಿಗೂ ರಕ್ಷಿಸಿಡುವ ಐತಿಹಾಸಿಕ ಪ್ಯಾರಿಸ್‌ ಒಪ್ಪಂದ’ವನ್ನು ಸೇರಿರುವುದು ವಿಶೇಷ.ಪ್ಯಾರಿಸ್‌ ಒಪ್ಪಂದ ಸ್ಥಿರೀಕರಿಸಿದ 62ನೇ ರಾಷ್ಟ್ರ ಭಾರತ
  • ವಿಶ್ವದಲ್ಲಿ ಜಾಗತಿಕ ತಾಪಮಾನ ಕಡಿಮೆ ಮಾಡುವುದು ಮತ್ತು ಜಲ ಸಂಪನ್ಮೂಲದ ಸಮರ್ಪಕ ನಿರ್ವಹಣೆಗೆ….CLICK HERE TO READ MORE

 

Share