8th SEPTEMBER
1.ಅಮರಾವತಿ-ವಿಜಯವಾಡ ನಡುವೆ ಹೈಪರ್ಲೂಪ್
ಪ್ರಾಮುಖ್ಯತೆ –ಪ್ರಿಲಿಮ್ಸ್ ಮತ್ತು ಮೇನ್ಸ್ ಗಾಗಿ
ಪ್ರಿಲಿಮ್ಸ್ ಗಾಗಿ
- ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ ಮತ್ತು ವಿಜಯವಾಡ ನಡುವಿನ ಮೆಟ್ರೋ ಯೋಜನೆಯನ್ನು ಕೈಬಿಟ್ಟಿರುವ ರಾಜ್ಯ ಸರ್ಕಾರ ಅದರ ಬದಲು ಅತ್ಯಾಧುನಿಕ ‘ಹೈಪರ್ಲೂಪ್’ ಸಂಚಾರ ವ್ಯವಸ್ಥೆ ಜಾರಿಗೆ ಮುಂದಾಗಿದೆ. ಹೈಪರ್ಲೂಪ್ ಅನುಷ್ಠಾನಗೊಂಡರೆ ಅಮರಾವತಿ ಮತ್ತು ವಿಜಯವಾಡ ಮಧ್ಯದ 35 ಕಿ.ಮೀ. ದೂರವನ್ನು 5 ನಿಮಿಷದಲ್ಲೇ ಕ್ರಮಿಸಬಹುದಾಗಿದೆ.
- ಅಮೆರಿಕದ ಟೆಸ್ಲಾ ಮತ್ತು ಸ್ಪೇಸ್ಎಕ್ಸ್ನ ಸ್ಥಾಪಕ ಎಲೊನ್ ಮಸ್ಕ್ ಹೈಪರ್ಲೂಪ್ ಪ್ರಾಜೆಕ್ಟ್ ಪರಿಚಯಿಸಿದ್ದು, ಈಗಾಗಲೇ ಕೆಲ ದೇಶಗಳಲ್ಲಿ ಪ್ರಾಯೋಗಿಕ ಪರೀಕ್ಷೆಗೊಳಪಡುತ್ತಿದೆ. ಆದರೆ ಎಲ್ಲಿಯೂ ಯೋಜನೆ ಜಾರಿಯಾಗಿಲ್ಲ. ಹೈಪರ್ಲೂಪ್ ಯೋಜನೆ ಸಂಬಂಧ ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ಸರ್ಕಾರ ಅಮೆರಿಕ ಕಂಪನಿ ಹೈಪರ್ಲೂಪ್ ಟ್ರಾನ್ಸ್ಪೋರ್ಟೆಶನ್ ಟೆಕ್ನಾಲಜೀಸ್ ಜತೆ ಆಂಧ್ರ ಪ್ರದೇಶದ ಎಕನಾಮಿಕ್ ಡೆವಲಪ್ವೆುಂಟ್ ಬೋರ್ಡ್ ಮಾತುಕತೆ ನಡೆಸಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಯಾಗಲಿದ್ದು, ಹಾಗಾದಲ್ಲಿ ಭಾರತದ ಮೊದಲ ಹೈಪರ್ಲೂಪ್ ಪ್ರಾಜೆಕ್ಟ್ ಇದಾಗಿರಲಿದೆ.
ಮುಖ್ಯ ಪರೀಕ್ಷೆಗಾಗಿ
ಭಾರತಕ್ಕೆ ಇನ್ನೂ ಬುಲೆಟ್ ರೈಲೇ ಬಂದಿಲ್ಲ. ಆದರೆ ಬುಲೆಟ್ ರೈಲಿನ ಮೂರು ಪಟ್ಟು ವೇಗದ “ಹೈಪರ್ಲೂಪ್’ ಭವಿಷ್ಯದ ಸಾರಿಗೆ ವ್ಯವಸ್ಥೆ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ. ಶಬ್ದಕ್ಕಿಂತಲೂ ವೇಗವಾಗಿ ಚಲಿಸುವ ಈ ಸಾರಿಗೆ ತಂತ್ರಜ್ಞಾನವೇನು?
ಏನಿದು ಹೈಪರ್ ಲೂಪ್?
ಹೈಪರ್ಲೂಪ್ ಎನ್ನುವುದು ಭವಿಷ್ಯದ ಸಾರಿಗೆ ತಂತ್ರಜ್ಞಾನ. ಗಂಟೆಗೆ 1,200 ಕಿ.ಮೀ. ವೇಗದಲ್ಲಿ ಚಲಿಸುವ… CLICK HERE TO READ MORE