BRICS ಸಮ್ಮೇಳನವನ್ನು ಭಾರತ ಮತ್ತು ಚೀನಾ ನಡುವಿನ ಪುನಃ ಪರಸ್ಪರ ಬಾಂಧವ್ಯ ಬೆಸೆಯುವುದಕ್ಕೆ ಬಳಸಬಹುದೇ?
ಹಿನ್ನೆಲೆ:
ಕಳೆದ 2 ತಿಂಗಳಿನಿಂದ ಚೀನಾ ಮತ್ತು ಭಾರತದ ನಡುವೆ ಹುಟ್ಟಿಕೊಂಡಿದ್ದ ಡೋಕ್ಲಂ ವಿವಾದಕ್ಕೆ ತೆರೆ ಬಿದ್ದಿದೆ. ಎರಡೂ ರಾಷ್ಟ್ರಗಳು ಡೋಕ್ಲಂನಿಂದ ತಮ್ಮ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿವೆ. ಚೀನಾದಿಂದ ಹಲವು ಬೆದರಿಕೆಗಳು ಎದುರಾದ ಹೊರತಾಗಿಯೂ ಭಾರತ ಪ್ರಬುದ್ಧ, ಗೌರವಯುತ ಹಾಗೂ ತಾಳ್ಮೆಯ ಪ್ರದರ್ಶನ ನೀಡಿ, ರಾಜತಾಂತ್ರಿಕವಾಗಿ ಸೂಕ್ತ ಉತ್ತರವನ್ನೇ ನೀಡಿತು.
ಸೆಪ್ಟೆಂಬರ್ 3 ರಂದು ಚೀನಾದಲ್ಲಿ(ಕ್ಸಿಯಾಮೆನ್)ನಡೆಯಲಿರುವ 9 ನೇ ವಾರ್ಷಿಕ ಬ್ರಿಕ್ಸ್ ಶೃಂಗಸಭೆಯಲ್ಲಿ ಬ್ರೆಜಿಲ್, ರಷ್ಯಾ ಮತ್ತು ದಕ್ಷಿಣ ಆಫ್ರಿಕಾದ ಇತರ ನಾಯಕರೊಂದಿಗೆ ಭಾರತದ ಪ್ರಧಾನಿ ಮತ್ತು ಚೀನಾದ ಅಧ್ಯಕ್ಷರ ಭೇಟಿ ಏಷ್ಯನ್ ಎರಡು ದೈತ್ಯ ರಾಷ್ಟ್ರಗಳಿಗೆ ಸರಿಯಾದ ದಿಕ್ಕಿನಲ್ಲಿ ಪರಸ್ಪರ ಬಾಂಧವ್ಯವನ್ನು ರೂಪಿಸಲು ಮತ್ತೊಂದು ಅವಕಾಶ ಸಿಗುತ್ತದೆ.
ಬ್ರಿಕ್ಸ್ ಶೃಂಗಸಭೆಗೆ ಕೆಲವೇ ದಿನಗಳ ಮೊದಲು ಡೋಕ್ಲಾಮ್ ವಿವಾದಕ್ಕೆ ಭಾರತ ಮತ್ತು ಚೀನಾ ಎರಡು ರಾಷ್ಟ್ರಗಳು ರಾಜತಾಂತ್ರಿಕವಾಗಿ ತೆರೆಎಳೆದಿದೆ. ಹಾಗಾದರೆ ಆ ವಿವಾದ ಬೆಳೆದು ಹೇಗೆ ರಾಜ ತಾಂತ್ರಿಕವಾಗಿ ಅಂತ್ಯಗೊಳಿಸಿದವು …. ??
ಡೋಕ್ಲಂ ವಿವಾದ ಹುಟ್ಟಿಕೊಂಡಿದ್ದು ಹೇಗೆ?
ಚೀನಾ ಡೋಕ್ಲಂನಲ್ಲಿ ಜೂನ್ 16ರಂದು ರಸ್ತೆ ನಿರ್ಮಾಣ ಕಾರ್ಯ ಆರಂಭಿಸಿತ್ತು. ಭಾರತ ಇದಕ್ಕೆ ವಿರೋಧ ವ್ಯಕ್ತಪಡಿಸಿತು. ಇದಕ್ಕೆ ಪ್ರತಿಯಾಗಿ ಚೀನಾ ಅತಿಕ್ರಮ ಪ್ರವೇಶ ಮಾಡಿತು. ಭಾರತದ ಎರಡು ಬಂಕರ್ಗಳನ್ನು ಹಾಳುಗೆಡವಿತು. ಡೋಕ್ಲಂ ಪ್ರದೇಶದಲ್ಲಿ ಚೀನಾ, ಸಿಕ್ಕಿಂ ಮತ್ತು ಭೂತಾನ್ನ ಗಡಿಗಳು ಸೇರುತ್ತವೆ. ಭೂತಾನ್ ಮತ್ತು ಚೀನಾ ಎರಡೂ ಈ ಭೂಭಾಗ ತಮಗೆ ಸೇರಿದ್ದೆಂದು ವಾದಿಸುತ್ತವೆ. ಭಾರತ ಭೂತಾನ್ ಗೆ ಬೆಂಬಲಿಸುತ್ತಿದೆ.
ಈ ವಿವಾದಕ್ಕೆ ಎರಡು ರಾಷ್ಟ್ರಗಳ ಒಪ್ಪಂದವೇನು?
ಎರಡೂ ರಾಷ್ಟ್ರಗಳು ಡೋಕ್ಲಂನಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಿವೆ. ಜೂನ್ 16ಕ್ಕೂ ಮೊದಲು ಅಲ್ಲಿ ಯಾವ ಪರಿಸ್ಥಿತಿಯಿತ್ತೋ ಅದೇ ಸ್ಥಿತಿ ಮುಂದುವರಿಯಲಿದೆ. ಚೀನಾ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲವಾದರೂ ಅದು ರಸ್ತೆ ನಿರ್ವಣದ ಸಲಕರಣೆಗಳು ಮತ್ತು ಬುಲ್ಡೋಜರ್ಗಳನ್ನು ಹಿಂದಕ್ಕೆ ತರಿಸಿಕೊಂಡಿದೆ. ಆದರೆ ಎರಡೂ ರಾಷ್ಟ್ರಗಳು ಈ ಪ್ರದೇಶದ ಬಗ್ಗೆ ನಿಗಾವಹಿಸಲಿವೆ.
ಭಾರತ ಪಾಠ ಕಲಿಯಬೇಕಂತೆ!
- ಡೋಕ್ಲಂನಲ್ಲಿ ನಡೆಯುತ್ತಿದ್ದ ಭಾರತ ಹಾಗೂ ಚೀನಾ ಸೈನಿಕರ ತಿಕ್ಕಾಟ ಕೊನೆಗೊಂಡ ಬೆನ್ನಲ್ಲೇ, ಈ ಘಟನೆಯಿಂದ ಭಾರತ ಪಾಠ ಕಲಿಯಬೇಕು ಎಂದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ವಿು (ಪಿಎಲ್ಎ) ಹೇಳಿದೆ. ಗಡಿ ವಿಚಾರಕ್ಕೆ ಸಂಬಂಧ ಪಟ್ಟ ಒಪ್ಪಂದ, ಅಂತಾರಾಷ್ಟ್ರೀಯ ಕಾನೂನನ್ನು ಗೌರವಿಸಿ ಚೀನಾದ ಜತೆ ಸೇರಿ ಕಾರ್ಯನಿರ್ವಹಿಸುವ ಮೂಲಕ ಭಾರತ ಗಡಿಶಾಂತಿ ಕಾಯ್ದುಕೊಳ್ಳಬೇಕು ಎಂದು ಪಿಎಲ್ಎನ ಹಿರಿಯರೊಬ್ಬರು ಹೇಳಿದ್ದಾರೆ.
ಭೂತಾನ್ ಮೇಲೆ ಒತ್ತಡ
- ತಾನು ಪ್ರಸ್ತಾವಿಸುತ್ತಿರುವ ‘ಪ್ಯಾಕೇಜ್ ಡೀಲ್’ ಒಂದನ್ನು ಒಪ್ಪಿಕೊಳ್ಳುವಂತೆ ಚೀನಾ ಕಳೆದೆರಡು ದಶಕದಿಂದಲೂ ಭೂತಾನ್ ಅನ್ನು ಇನ್ನಿಲ್ಲದಂತೆ ಒತ್ತಾಯಿಸುತ್ತಿದೆ, ಪ್ರಚೋದಿಸುತ್ತಿದೆ; ಇದರನ್ವಯ, ಡೋಕ್ಲಂ ಪ್ರಸ್ಥಭೂಮಿಯನ್ನು ಭೂತಾನ್ ಚೀನಾಕ್ಕೆ ಬಿಟ್ಟುಕೊಟ್ಟರೆ, ಅದಕ್ಕೆ ಪ್ರತಿಯಾಗಿ ಉತ್ತರದ ಭೂತಾನ್ನಲ್ಲಿನ ಜಕುರ್ಲುಂಗ್ ಮತ್ತು ಪಸಾಮ್೦ಗ್ ಕಣಿವೆಗಳಲ್ಲಿನ 495 ಚ.ಕಿ.ಮೀ. ವಿಸ್ತೀರ್ಣದ ಭೂಪ್ರದೇಶದ ಮೇಲಿನ ತನ್ನ ಹಕ್ಕುಗಳನ್ನು ತಾನು ಬಿಟ್ಟುಕೊಡುವುದಾಗಿ ಚೀನಾ ಭೂತಾನ್ ಗೆ ಪ್ರಲೋಭನೆ ತೋರಿಸುತ್ತಿದೆ.
- ಆದರೆ ಡೋಕ್ಲಂ ಪ್ರಸ್ಥಭೂಮಿ ಕುರಿತಾಗಿ, ಅದರಲ್ಲೂ ನಿರ್ದಿಷ್ಟವಾಗಿ ಝೊಂಪಿರಿ ಪರ್ವತಶ್ರೇಣಿಯ ಬಗ್ಗೆ ಭಾರತಕ್ಕಿರುವ ‘ಸೇನಾ ದೃಷ್ಟಿಕೋನ’ ತೀರಾ ಸೂಕ್ಷ್ಮ ಸ್ವರೂಪದ್ದು ಎಂಬುದರಲ್ಲಿ ಎರಡು ಮಾತಿಲ್ಲ; ’ CHICKEN’S NECK’ ಪ್ರದೇಶ ಎಂದೇ ಜನಜನಿತವಾಗಿರುವ ಸಿಲಿಗುರಿ ಚಾಚುಪಟ್ಟಿ ವಲಯದಂಥ ‘ವ್ಯೂಹಾತ್ಮಕವಾಗಿ ದಾಳಿಗೀಡಾಗಬಹುದಾದ ಅಥವಾ ಭೇದ್ಯವಾಗಬಹುದಾದ’ ಪ್ರದೇಶಕ್ಕಿಂತ ಈ ಪರ್ವತಶ್ರೇಣಿ ಮೇಲ್ಮಟ್ಟದಲ್ಲಿದೆ ಎಂಬುದು ಈ ಆತಂಕಕ್ಕೆ ಕಾರಣ.
ಚೀನಾ ನಿಲುವು ಬದಲಾಗಲು ಕಾರಣ
- ಜಿನ್ಪಿಂಗ್ ಹಂಬಲ: ಮುಂದಿನ ತಿಂಗಳು ಚೀನಾದಲ್ಲಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಚೈನಾದ(ಸಿಪಿಸಿ) 19ನೇ ರಾಷ್ಟ್ರೀಯ ಸಮಾವೇಶ ನಡೆಯಲಿದೆ. ಇದರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ರ ಅಧಿಕಾರಾವಧಿಯನ್ನು ಇನ್ನೂ 5 ವರ್ಷ ಮುಂದುವರಿಸುವ ಸಾಧ್ಯತೆಯಿದೆ. ಗಡಿ ವಿವಾದ ಹೆಚ್ಚಾಗಿದ್ದಲ್ಲಿ ಅವರ ನಾಯಕತ್ವಕ್ಕೆ ವಿರೋಧ ವ್ಯಕ್ತವಾಗುವ ಸಾಧ್ಯತೆಯಿತ್ತು.
- ಗಡಿಯಲ್ಲಿ ಭಾರತ ಸೈನಿಕರು: ಡೋಕ್ಲಂ ಭಾಗದಲ್ಲಿ ಚೀನಾ ತನ್ನ ಸೈನಿಕರ ಸಂಖ್ಯೆಯನ್ನು ಏರಿಸುತ್ತಿದ್ದಂತೆ ಭಾರತ ಕೂಡ ಗಡಿಯಲ್ಲಿ ನಿಯೋಜಿಸಿದ್ದ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಿತ್ತು. ಭಾರತಕ್ಕೆ ಭೂತಾನ್ನ ಬೆಂಬಲವೂ ಇತ್ತು. ಭೂತಾನ್ನ ಮನವಿಯ ಮೇರೆಗೇ ಭಾರತದ ಸೈನಿಕರು ಡೋಕ್ಲಂ ತಲುಪಿದ್ದರು.
- ಯುದ್ಧ ನಡೆದರೂ ಭಾರಿ ನಷ್ಟ: ಒಂದು ವೇಳೆ ಭಾರತ ಮತ್ತು ಚೀನಾದ ನಡುವೆ ಯುದ್ಧ ನಡೆದರೂ ಇದರಿಂದ ಎರಡೂ ರಾಷ್ಟ್ರಗಳಿಗೆ ಭಾರಿ ನಷ್ಟವಾಗಲಿದೆ. ಎರಡೂ ರಾಷ್ಟ್ರಗಳು ಬಲಿಷ್ಠವಾಗಿರುವುದರಿಂದ ಯಾವ ದೇಶಕ್ಕೆ ಗೆಲುವು ಸಿಗಲಿದೆ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ.
- ಭಾರತಕ್ಕೆ ಜಪಾನ್–ಅಮೆರಿಕ ಬೆಂಬಲ: ಡೋಕ್ಲಂ ವಿಚಾರದ ಬಗ್ಗೆ ಯಾವುದೇ ತೀರ್ವನಕ್ಕೆ ಬರಲು ಚೀನಾ ಒಪ್ಪಿರಲಿಲ್ಲ. ಇದು ಚೀನಾಗೆ ಮಾರಕವಾಗಿ ಪರಿಣಮಿಸಿತು. ಡೋಕ್ಲಂ ವಿಷಯದಲ್ಲಿ ಜಪಾನ್ ಭಾರತಕ್ಕೆ ಬಹಿರಂಗ ಬೆಂಬಲ ನೀಡಿತು. ಅತ್ತ ಅಮೆರಿಕ ಕೂಡ ಡೋಕ್ಲಂನಲ್ಲಿ ಹಿಂದೆ ಇದ್ದ ಪರಿಸ್ಥಿತಿ ಮುಂದುವರಿಸಲು ಬೆಂಬಲಿಸುವುದಾಗಿ ಹೇಳಿತು.
- ಥ್ರಿ ವಾರ್ ಫೇರ್ ಸ್ಟ್ರಾಟಜಿ ಫೇಲ್: ಥ್ರಿ ವಾರ್ ಫೇರ್ ಸ್ಟ್ರಾಟಜಿ ಮೂಲಕ ಚೀನಾ ಭಾರತಕ್ಕೆ ಹಲವು ಬೆದರಿಕೆಗಳನ್ನು ಹಾಕಿತ್ತು. ಕಳೆದ ಎರಡು ತಿಂಗಳುಗಳಲ್ಲಿ ನೀಡಿದ ಈ ಬೆದರಿಕೆಗಳು ಅಂತಾರಾಷ್ಟ್ರೀಯ ವಲಯದ ಗಮನ ಸೆಳೆಯಲು ವಿಫಲವಾದವು.
- ವ್ಯಾಪಾರ ವಹಿವಾಟಿಗೆ ಅನುಕೂಲ: ಡೋಕ್ಲಂ ವಿವಾದ ಅಂತ್ಯಗೊಂಡಿರುವುದರಿಂದ ಚೀನಾ ಮತ್ತು ಭಾರತದ ವ್ಯಾಪಾರ ವಹಿವಾಟಿಗೆ ಆಗಿದ್ದ ಅಡ್ಡಿಯೂ ದೂರವಾಗುವ ಸಾಧ್ಯತೆಯಿದೆ. ಡೋಕ್ಲಂ ವಿವಾದ ತೀವ್ರವಾದ ನಂತರದಲ್ಲಿ ಚೀನಾದ ಎಲೆಕ್ಟ್ರಾನಿಕ್ ಮತ್ತು ಟೆಲಿಕಾಂ ವಸ್ತುಗಳ ಆಮದಿಗೆ ಕೆಲ ನಿರ್ಬಂಧಗಳನ್ನು ಹೇರಲಾಗಿದೆ. ಭಾರತ ಚೀನಾದ ಉತ್ಪನ್ನಗಳಿಗೆ ಬಹುದೊಡ್ಡ ಮಾರುಕಟ್ಟೆಯಾಗಿದ್ದು, ಭಾರತದ ಈ ಕ್ರಮ ಚೀನಾದ ವ್ಯಾಪಾರ ಕ್ಷೇತ್ರಕ್ಕೆ ಬಹುದೊಡ್ಡ ಪೆಟ್ಟು ನೀಡಿತ್ತು.
- ಬ್ರಿಕ್ಸ್ ಸಮಾವೇಶ: ಮುಂದಿನ ವಾರ ಚೀನಾದಲ್ಲಿ(ಕ್ಸಿಯಾಮೆನ್) ನಡೆಯಲಿರುವ ಬ್ರಿಕ್ಸ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳದಿರುವ ಸಾಧ್ಯತೆಯಿತ್ತು. ವಿವಾದದ ಹಿನ್ನೆಲೆಯಲ್ಲಿ ಮೋದಿ ಚೀನಾಗೆ ತೆರಳುವ ಬಗ್ಗೆ ಯಾವುದೇ ಸೂಚನೆ ನೀಡಿರಲಿಲ್ಲ. ಒಂದು ವೇಳೆ ಮೋದಿ ತೆರಳದಿದ್ದಲ್ಲಿ ಅಂತಾರಾಷ್ಟ್ರೀಯ ವಲಯದಲ್ಲಿ ಚೀನಾಗೆ ತೀವ್ರ ಮುಖಭಂಗವಾಗುತ್ತಿತ್ತು. ಅಲ್ಲದೆ ಭಾರತ ಕಳೆದ ಮೇ ನಲ್ಲಿ ನಡೆದ ‘ಒನ್ ಬೆಲ್ಟ್ ಒನ್ ರೋಡ್’ ಸಮಾವೇಶದಲ್ಲೂ ಪಾಲ್ಗೊಂಡಿರಲಿಲ್ಲ. ಚೀನಾ ಮತ್ತು ಪಾಕಿಸ್ತಾನದ ಕಾರಿಡಾರ್ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಿಂದ ಹಾದು ಹೋಗಲಿದೆ. ಇದು ಭಾರತದ ಸಾರ್ವಭೌಮತ್ವಕ್ಕೆ ಅಡ್ಡಿಯಾಗಲಿದೆ ಎನ್ನುವುದು ಭಾರತದ ವಾದವಾಗಿತ್ತು.
ಎರಡೂ ಕಡೆಗಳಲ್ಲಿ ಸಹಕಾರದಲ್ಲಿನ ಅವಕಾಶಗಳು ವಿಶ್ವ ವೇದಿಕೆಯಲ್ಲಿ ಹೇಳಬೇಕೆಂದರೆ, ಅವುಗಳಲ್ಲಿ ಪ್ರತಿಯೊಂದೂ ಪ್ರತ್ಯೇಕವಾದ ಪ್ರಾದೇಶಿಕ ಮಹತ್ವಾಕಾಂಕ್ಷೆಗಳನ್ನು ಮೀರಿಸುತ್ತವೆ.
ಬ್ರಿಕ್ಸ್ ಸಮಾವೇಶ ಇಪ್ಪತ್ತೊಂದನೇ ಶತಮಾನದಲ್ಲಿ ಆರ್ಥಿಕ ಬೆಳವಣಿಗೆಗೆ ಯಂತ್ರ
ಬ್ರಿಕ್ಸ್ ಮೂಲತಃ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ಅಥವಾ ‘ಬ್ರಿಕ್’ (Brazil, Russia, India and China, or BRIC) ಎನ್ನುವ ನಾಲ್ಕು ಸದಸ್ಯರ ಗುಂಪು ಆಗಿತ್ತು. ನಾಲ್ಕೂ ದೇಶಗಳ ಮೊದಲ ಬ್ರಿಕ್ ಶೃಂಗಸಭೆಯು 2009 ರಲ್ಲಿ, ರಶಿಯಾದ ಯೆಕಟೇನ್ಬರ್ಗ್,ನಲ್ಲಿ ನಡೆಯಿತು. ಕೇವಲ ಎರಡು ವರ್ಷಗಳ ನಂತರ,2001 ರಲ್ಲಿ ಜಿಮ್ ಒ ನೀಲ್ ರವರಿಂದ ಒಂದು ಯೋಜನೆ ಪ್ರಕಟಣೆಯಾಗಿ ಉತ್ತಮ ಜಾಗತಿಕ ಆರ್ಥಿಕ ಸಹಕಾರಕ್ಕೆ ‘ಬ್ರಿಕ್ ‘ (BRIC)ಎಂಬ ಒಂದು ಯೋಜನೆ ಸೃಷ್ಟಿಸಲ್ಪಟ್ಟಿತ್ತು. ಇದು ಉತ್ತಮ ಜಾಗತಿಕ ಆರ್ಥಿಕ ಸಂಬಂಧ ಬೆಳೆಸುವ ಉದ್ದೇಶ ಹೊಂದಿತ್ತು.
2010 ರಲ್ಲಿ ದಕ್ಷಿಣ ಆಫ್ರಿಕಾ “ದ್ರಿಕ್” ಜೊತೆ ಸೇರಿತು. ದಕ್ಷಿಣ ಆಫ್ರಿಕಾ ಅಧಿಕೃತವಾಗಿ ‘ಬ್ರಿಕ್’ ಗುಂಪು ಸೇರಿದ್ದರಿಂದ ‘ಬ್ರಿಕ್’ ಗೆ ಮರುನಾಮಕರಣ ಮಾಡುವ ಅಗತ್ಯ ಉಂಟಾಯಿತು. ಅದನ್ನು ‘ಬ್ರಿಕ್ಸ್’ BRICS ಎಂದು BRIC ಗೆ S (South Africa) ಸೇರಿಸಿ ಹೊಸದಾಗಿ ನಾಮಕರಣ ಮಾಡಲಾಯಿತು. ಈ ಐದು ಬ್ರಿಕ್ಸ್ ದೇಶಗಳಲ್ಲಿ 360 ಕೋಟಿ ಜನರು ಇದ್ದು, ವಿಶ್ವದ ಅರ್ಧ ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ.
ಇಂದು ಇಪ್ಪತ್ತೊಂದನೇ ಶತಮಾನದಲ್ಲಿ ಆರ್ಥಿಕ ಬೆಳವಣಿಗೆಯ ಎಂಜಿನ್ ಎಂದೇ ಸಂಕೇತವಾಗಿರುವ , ಬ್ರಿಕ್ಸ್ ಬದಲಾಗುತ್ತಿರುವ ಭೂ-ರಾಜಕೀಯ ಮತ್ತು ಭೂ-ಆರ್ಥಿಕ ಪ್ರಪಂಚದ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತಿದೆ
ಹಲವು ವರ್ಷಗಳಿಂದ ಹೆಚ್ಚು ಬದಲಾವಣೆಗಳು ಕಂಡುಬರುತ್ತಿವೆ ಅವುಗಳೆಂದರೆ
ಎರಡನೇ ಜಾಗತಿಕ ಯುದ್ಧದ ಅಂತ್ಯದ ನಂತರ ಚೀನಾದ ಉದಯವು ಯುಎಸ್ ಪ್ರಾಬಲ್ಯ ಮತ್ತು ಪಶ್ಚಿಮದ ಆರ್ಥಿಕ ಮತ್ತು ರಾಜಕೀಯ ಪ್ರಾಬಲ್ಯಕ್ಕೆ ಅತಿದೊಡ್ಡ ಸವಾಲು ಮಾತ್ರವಲ್ಲದೆ, ಇದು ಬಹು-ಧ್ರುವ ಪ್ರಪಂಚದ ಅಸ್ತಿತ್ವಕ್ಕೆ ದಾರಿಮಾಡಿಕೊಟ್ಟಿದೆ.
- ಬ್ರಿಕ್ಸ್ ರಾಷ್ಟ್ರಗಳು ಒಟ್ಟಾಗಿವೆ
- ತಮ್ಮ ರಫ್ತುಗಳನ್ನು ಉತ್ತೇಜಿಸಿತ್ತಿವೆ
- ಅಂತರರಾಷ್ಟ್ರೀಯ ಕಾನೂನು ವಿವಾದಗಳಲ್ಲಿ ಪ್ರತಿಸ್ಪಂದಿಸುತ್ತಿವೆ
- ವಿಶ್ವ ಬ್ಯಾಂಕ್ ಮತ್ತು ತಮ್ಮ ಷೇರುಗಳ ಹೆಚ್ಚಳಕ್ಕೆ ಯಶಸ್ವಿಯಾಗಿ ಸಮಾಲೋಚಿಸುತ್ತಿವೆ .
ಭಾರತ ಮತ್ತು ಚೀನಾ ಸಾಮಾನ್ಯ ನೆಲವನ್ನು ಕಂಡುಕೊಳ್ಳುವ ಅಗತ್ಯತೆಯಿದೆ
ಮೊದಲ ದಶಕದ BRICS ಅಸ್ತಿತ್ವ ನಿಕಟತೆ (close,) ಹತ್ತಿರಕ್ಕೆ ಬರುತ್ತಿರುವಾಗ , ಹೆಚ್ಚು ಆರ್ಥಿಕವಾಗಿ ಸಾಧಿಸಿದರು – ಸಹಜವಾಗಿ, ರಾಜಕೀಯವಾಗಿ ಅಪೇಕ್ಷಿಸುವಂತೆ ಉಳಿದಿದೆ.
ಇಂದು, ಮತ್ತೊಂದು ಪ್ರಮುಖ ವಿಶ್ವ ವಿದ್ಯಮಾನವು ಈ ಬ್ರಿಕ್ಸ್ ರಾಷ್ಟ್ರದ ಗುಂಪಿಗೆ ತೋರಿಸುತ್ತಿದೆ ಅದೇನೆಂದರೆ – ಪಶ್ಚಿಮ ಭಾಗದಲ್ಲಿ ಹೆಚ್ಚುತ್ತಿರುವ ಆಂತರಿಕತೆ.
ಕಳೆದ ದಶಕದಲ್ಲಿ ವಿಶ್ವ ಸಂಸ್ಥೆಗಳಿಗೆ ಆರ್ಥಿಕವಾಗಿ ಹೆಚ್ಚು ಸಮಂಜಸವಾಗಲು ಅವಕಾಶವನ್ನು ಒದಗಿಸಿದಂತೆ, ಮುಂದಿನ ದಶಕವು ರಾಜಕೀಯವಾಗಿ ಹಾಗೆ ಮಾಡಲು ಅವಕಾಶವನ್ನು ಒದಗಿಸಬೇಕು .
ಅದರ ಯಶಸ್ಸು, ಭಾರತ ಮತ್ತು ಚೀನಾ ಆರ್ಥಿಕ ಹಿನ್ನಡೆಗೆ ಮುಂಚೆಯೇ ಸಾಮಾನ್ಯ ನೆಲವನ್ನು ಹುಡುಕಬೇಕಾಗಿದೆ.
ಬ್ರಿಕ್ಸ್ ರಾಷ್ಟ್ರಗಳ, ಅದರಲ್ಲೂ ನಿರ್ದಿಷ್ಟವಾಗಿ ಭಾರತ ಮತ್ತು ಚೀನಾಗಳ ನಡುವಿನ ಸಹಕಾರದ ಕೊರತೆ, ಪಶ್ಚಿಮ ಮಾಧ್ಯಮ ಮಾರುಕಟ್ಟೆಗಳು ಹೆಚ್ಚಾಗಿ ಒತ್ತಿಹೇಳುತ್ತಿದೆ .
ಅದೇ ರೀತಿ ಭಾರತ ಮತ್ತು ಚೀನಾ ಎರಡು ದೇಶಗಳ ನಡುವಿನ ಭಿನ್ನತೆಗಳು ಅಸ್ತಿತ್ವದಲ್ಲಿದ್ದರು ,ಸಹ ಒಂದೇ ವೇದಿಕೆಯಲ್ಲಿ ಎರಡು ರಾಷ್ಟ್ರಗಳು ಕುಳಿತುಕೊಳ್ಳುತ್ತಿವೆ ಎಂದು ಮನನ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಎರಡು ದೇಶಗಳ ಪ್ರಕಾಶಮಾನವಾದ ಭವಿಷ್ಯಕ್ಕಾಗಿ ಪ್ರಬಲವಾದ ಸಹಭಾಗಿತ್ವದ ಅಗತ್ಯತೆ ಇದೆ
ಮುಂದೆ ನಡೆಯಲಿರುವ ಶೃಂಗಸಭೆಯಲ್ಲಿ ಎರಡು ರಾಷ್ಟ್ರ ಗಳು ಒಂದೇ ಧ್ವನಿಯಲ್ಲಿ ಮಾತನಾಡುವುದು ಮತ್ತು ಬ್ರಿಕ್ಸ್ ರಾಷ್ಟ್ರಗಳ ನಡುವೆ ವಿಶ್ವದ ಒಗ್ಗೂಡಿಸುವಿಕೆಯ ಅಂಶಗಳನ್ನು ಪ್ರದರ್ಶಿಸಲು ರಶಿಯಾ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ಖಂಡಿತವಾಗಿ ಭಾರತ ಮತ್ತು ಚೀನಾವನ್ನು ಪರಿಗಣಿಸಲಿವೆ. “ಪ್ರಕಾಶಮಾನವಾದ ಭವಿಷ್ಯಕ್ಕಾಗಿ ಪ್ರಬಲವಾದ ಸಹಭಾಗಿತ್ವ” ಎಂಬ ಶಿಖರದ ವಿಷಯದ ಅನುಸಾರ, ಭಾರತ ಮತ್ತು ಚೀನಾ ಬ್ರಿಕ್ಸ್ ಸಭೆಯನ್ನು ಪರಸ್ಪರ ಸಹಕಾರದ ಮನೆಯ ವಾತಾವರಣ ನಿರ್ಮಿಸಲು ಬಳಸಿಕೊಳ್ಳಬೇಕೇ ಹೊರೆತು ಎರಡು ರಾಷ್ಟ್ರ ಗಳ ನಡುವೆ ತಡೆ ಗೋಡೆಗಳನ್ನು ನಿರ್ಮಿಸುವುದಕ್ಕಾಗಲ್ಲ .