13th AUGUST
1.ಟ್ರಿಪಲ್ ತಲಾಕ್ ಮಸೂದೆ
SOURCE-THE HINDU https://www.thehindu.com/news/national/activists-slam-cong-for-stalling-triple-talaq-bill/article24668126.ece
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಪರಿಕ್ಷೆಗಾಗಿ -ಟ್ರಿಪಲ್ ತಲಾಕ್ ಎಂದರೇನು? ಈ ಮಸೂದೆಯಲ್ಲಿರುವ ಪ್ರಮುಖ ನಿಬಂಧನೆಗಳೇನು ?.
ಮುಖ್ಯ ಪರೀಕ್ಸೆಗಾಗಿ -ಟ್ರಿಪಲ್ ತಲಾಕ್ ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸುಪ್ರೀಂ ಕೋರ್ಟ್ ಮಾಡಿದ ಅವಲೋಕನಗಳನ್ನು ವಿವರಿಸಿ ?
ಪ್ರಮುಖ ಸುದ್ದಿ
- ಪತ್ನಿಗೆ ತ್ರಿವಳಿ ತಲಾಕ್ ನೀಡುವ ಪತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುವ “ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ’ ಮಸೂದೆಯಲ್ಲಿ ಮುಸ್ಲಿಂ ಪುರುಷರಿಗೆ ಜಾಮೀನು ಪಡೆಯುವ ಅವಕಾಶವನ್ನು ಕಲ್ಪಿಸುವ ತಿದ್ದುಪಡಿಗೆ ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿತು.
- ತ್ರಿವಳಿ ತಲಾಕ್ ನಿಷೇಧದ ಮಸೂದೆ ಎಂದೇ ತಿಳಿಯಲ್ಪಟ್ಟಿರುವ ಈ ಮಸೂದೆಯನ್ನು ಲೋಕಸಭೆ ಪಾಸು ಮಾಡಿದೆ; ಆದರೆ ರಾಜ್ಯಸಭೆಯಲ್ಲಿ ಅದು ಬಾಕಿ ಉಳಿದಿದೆ.
ಮುಖ್ಯ ಅಂಶಗಳು
ಈ ಮಸೂದೆ ಯಲ್ಲೇನಿದೆ?
- ತ್ರಿಬಲ್ ತಲಾಖ್ ಕಾಯ್ದೆ ಅನ್ವಯ ಇದು ಜಾಮೀನು ರಹಿತ ಅಪರಾಧವಾಗಿಯೇ ಮುಂದುವರೆಯಲಿದೆ. ಆದರೆ, ಮ್ಯಾಜಿಸ್ಟ್ರೇಟ್ ಅವರು ಜಾಮೀನು ನೀಡುವಂತೆ ತಿದ್ದುಪಡಿ ತರಲಾಗುತ್ತದೆ.
- ಆಗಸ್ಟ್ 22ರಂದು ಸುಪ್ರೀಂಕೋರ್ಟ್ ತ್ರಿವಳಿ ತಲಾಖ್ ಅನ್ನು 6 ತಿಂಗಳ ಕಾಲ ನಿಷೇಧಿಸಿತ್ತು. ಈ ಸಂಬಂಧ ಕಾನೂನು ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.
- ಈ ಹಿನ್ನಲೆಯಲ್ಲಿ ಕೇಂದ್ರ ಕಾನೂನು ಇಲಾಖೆ ಸಿದ್ಧಪಡಿಸಿದ ಕಾನೂನಿಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಕಾನೂನಿನಲ್ಲಿ ತ್ರಿವಳಿ ತಲಾಖ್ ಅಪರಾಧ ಎಂದು ಘೋಷಣೆ ಮಾಡಲಾಗಿದೆ.
- ತಲಾಖ್ ನೀಡುವ ಪುರುಷರಿಗೆ 3 ವರ್ಷದ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಅಧಿಕಾರ ನೀಡಲಾಗಿದೆ. ಮಹಿಳೆಯರು ಪರಿಹಾರ ಕೇಳಲು ಅವಕಾಶ ನೀಡಲಾಗಿದೆ.
ಹಿನ್ನೆಲೆ:
- 2015 ರಲ್ಲಿ ಉತ್ತರಾಖಂಡದ 35 ವರ್ಷದ ನಿವಾಸಿ ಶಯಾರಾ ಬಾನೊ ಅವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಿದರು. 15 ವರ್ಷ ಮದುವೆಯ ಬಳಿಕ ತನ್ನ ಗಂಡ ಪತ್ರದಲ್ಲಿ ಮೂರು ಬಾರಿ ತಲಕ್ ಎಂದು ಬರೆದು ಕಳುಹಿಸಿದ್ದರು. ತಲಾಕ್–ಇ–ಬಿದಾತ್, ಬಹುಪತ್ನಿತ್ವ ಮತ್ತು ನಿಕಾ ಹಲಾಲಾ ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಘೋಷಿಸಲು ಅವರು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಸಿದ್ದರು.
- ಸಂವಿಧಾನದ 14, 15, 21 ಮತ್ತು 25 ರ ವಿಧಿ ಅಡಿಯಲ್ಲಿ ಇವುಗಳೆಲ್ಲವು ಖಾತರಿಪಡಿಸುವ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಮನವಿಯಲ್ಲಿ ಹೇಳಿದ್ದರು.
- ತದನಂತರದ ಮುಂದಿನ ಕೆಲವು ತಿಂಗಳುಗಳಲ್ಲಿ ಇತರ ಹಲವು ಮಹಿಳೆಯರು ತಮ್ಮ ಅರ್ಜಿಯೊಂದಿಗೆ ಸಾಲಾಗಿದ್ದರು ಮಹಿಳೆಯರಿಗೆ ಟ್ರಿಪಲ್ ತಾಲಾಕ್ ಅನ್ನು ಉಚ್ಚರಿಸಲಾಗುವುದಿಲ್ಲ ಮತ್ತು 1937 ರ ಷರಿಯಾ ಆಕ್ಟ್ ಅಡಿಯಲ್ಲಿ ನ್ಯಾಯಾಲಯದ ಮೂಲಕ ವಿಚ್ಛೇದನ ಪಡೆಯುತ್ತೇವೆ ಎಂದಿದ್ದರು.
ಟ್ರಿಪಲ್ ತಲಾಕ್ ಎಂದರೇನು?
- ಇಸ್ಲಾಂನಲ್ಲಿ ಮೂರು ವಿಧದ ತಲಾಖ್ (ವಿಚ್ಛೇದನ) ಇದೆ: ಅಹ್ಸಾನ್, ಹಸನ್ ಮತ್ತು ತಲಾಕ್–ಇ–ಬಿಡ್ಡತ್ (ಟ್ರಿಪಲ್ ಅಥವಾ ಇನ್ಸ್ ಟ್ಯಾಂಟ್ ತಲಾಕ್). ಅಹ್ಸಾನ್ ಮತ್ತು ಹಸನ್ರನ್ನು ಹಿಂತೆಗೆದುಕೊಳ್ಳಲಾಗುವುದು ಆದರೆ ಬಿಡ್ಡತ್ ನ್ನು ಒಂದು ಸರಿ ನೀಡಿದರೆ ಮಾರ್ಪಡಿಸಲಾಗುವುದಿಲ್ಲ.
- ಬಿಡ್ಡತ್ ಅನ್ನು ಪಾಪಪೂರಿತವೆಂದು ಪರಿಗಣಿಸಲಾಗುತ್ತದೆ ಆದರೆ ಇಸ್ಲಾಮಿಕ್ ಕಾನೂನಿನಲ್ಲಿ ಇದಕ್ಕೆ ಅನುಮತಿ ಇದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ 20 ಕ್ಕೂ ಹೆಚ್ಚು ಮುಸ್ಲಿಂ ರಾಷ್ಟ್ರಗಳಲ್ಲಿ….CLICK HERE TO READ MORE