13th JUNE-THE HINDU EDITORIAL

 

ನಮ್ಮ ಐಎಎಸ್ ಅಕಾಡೆಮಿ ಸಂಪಾದಕೀಯ ಒಳನೋಟ

 

ಕೃತಕ ಬುದ್ಧಿಮತ್ತೆ

(ARTIFICIAL INTELLIGENCE   )

 

 

 SOURCE-THE HINDUhttp://www.thehindu.com/opinion/editorial/ai-garage/article24138543.ece

 

ಸನ್ನಿವೇಶ :

ಭಾರತದಲ್ಲಿ  ಕೃತಕ ಬುದ್ಧಿಮತ್ತೆ (artificial intelligence   )ಯನ್ನು  ಬಳಕೆಮಾಡುವ  ಮಹತ್ವಾಕಾಂಕ್ಷೆಯ ಚರ್ಚೆಯನ್ನು ನೀತಿ  ಆಯೋಗವು ಪ್ರಕಟಿಸಿದೆ.

 

ಕೃತಕ ಬುದ್ಧಿಮತ್ತೆ ಎಂದರೇನು?

  • ಸರಳವಾಗಿ ಹೇಳುವುದಾದರೆ ಇದು ಒಂದು ಕಂಪ್ಯೂಟರ್ ಪ್ರೋಗ್ರಾಮ್. ಇದು ಇಷ್ಟಕ್ಕೇ ಸೀಮಿತವಾಗಿದ್ದರೆ ಇದರ ಬಗ್ಗೆ ಹೆಚ್ಚು ಚರ್ಚಿಸುವ ಅವಶ್ಯಕತೆ ಇರುತ್ತಿರಲಿಲ್ಲ. ಆದರೆ, ಇದು ಸಾಮಾನ್ಯ ಕಂಪ್ಯೂಟರ್ ಪ್ರೋಗ್ರಾಮ್‌ ಅಲ್ಲ.
  • ತನ್ನ ಕಾರ್ಯವೈಖರಿಯನ್ನು ಗಮನಿಸುತ್ತಾ, ತಪ್ಪುಗಳನ್ನು ತಿದ್ದಿಕೊಳ್ಳುತ್ತಾ, ನಿರಂತರವಾಗಿ ಹೊಸ ವಿಷಯಗಳನ್ನು ತಿಳಿಯುತ್ತಾ ಕಲಿಯುತ್ತಿದೆ. ಪರಿಸ್ಥಿತಿಗಳಿಗೆ ಅನುಗುಣವಾಗಿ ತಾನೇ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ.
  • ವಿಸ್ತೃತವಾದ ಮಾಹಿತಿ ಜಾಲದಲ್ಲಿ ಬೇಕಾದ ವಿಷಯವನ್ನಷ್ಟೇ ಸುಲಭವಾಗಿ ಹೆಕ್ಕಿ ತೆಗೆಯುತ್ತಿರುವ ಕಂಪ್ಯೂಟರ್‌ಗಳು ಮತ್ತು ಚಾಲಕನ ಸಹಾಯವಿಲ್ಲದೇ ಚಲಿಸುತ್ತಿರುವ ವಾಹನಗಳು ಈ ತಂತ್ರಜ್ಞಾನದ ಪ್ರತಿಬಿಂಬವಾಗಿವೆ.

 

ಆರ್ಟಿಫಿಶಿಯಲ್ ಇಂಟಲಿಜೆನ್ಸ್ಹುಟ್ಟಿದ್ದು ಯಾವಾಗ?

  • ಇತ್ತೀಚಿಗೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) 1956ರಿಂದಲೇ ಬಳಕೆಗೆ ಬಂದಿದೆ. ಎಲ್‌ಐಎಸ್‌ಪಿ ಎನ್ನುವ ಪ್ರೊಗ್ರಾಮಿಂಗ್ ಲಾಂಗ್ವೇಜ್ ಅಭಿವೃದ್ಧಿಪಡಿಸಿದ ಜಾನ್ ಮೆಕ್‌ಕಾರ್ತಿ ಎನ್ನುವ ವಿಜ್ಞಾನಿ ಇದಕ್ಕೆ ‘ಆರ್ಟಿಫಿಶಿಯಲ್‌ ಇಂಟಲಿಜೆನ್ಸ್’ ಎಂಬ ಹೆಸರನ್ನು ಸೂಚಿಸಿದರು.
  • ಮಾನವನನ್ನು ಬಿಟ್ಟರೆ ಇತರರಿಂದ ಚೆಸ್ ಆಡಲು ಸಾಧ್ಯವೇ ಇಲ್ಲ ಎನ್ನುವ ಕಾಲದಲ್ಲಿ ಐಬಿಎಂನ ‘ಡೀಪ್‌ ಬ್ಲೂ’ ಸೂಪರ್ ಕಂಪ್ಯೂಟರ್‌ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ವಿಶ್ವ ಚೆಸ್‌ ಚಾಂಪಿಯನ್ ಆಗಿದ್ದ ಗ್ಯಾರಿ ಕಾಸ್ಪೆರೆಸೊ ಅವರನ್ನು ಸೋಲಿಸಿತು. ಈ ಘಟನೆ ನಂತರ ಕೃತಕ ಬುದ್ಧಿಮತ್ತೆಯ ಶಕ್ತಿ ಏನೆಂಬುದು ವಿಶ್ವಕ್ಕೆ ತಿಳಿಯಿತು.

 

ಇದರ ವಿಶೇಷವೇನು?

  • ಸುತ್ತಮುತ್ತಲಿನ ಪರಿಸರ, ಪರಿಸ್ಥಿತಿಗಳನ್ನು ಗ್ರಹಿಸಿ ಪ್ರತಿಕ್ರಿಯಿಸುವ ಗುಣ, ಭಾಷೆಗಳನ್ನು ಗುರುತಿಸುವಿಕೆ, ಹೀಗೆ ಸಾಮಾನ್ಯ ಉಪಕರಣಗಳಿಂದ ಹಿಡಿದು ಸ್ವಯಂ ಆಗಿ ಕಲಿಯುವ ಯಂತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಕೆಲಸ ಮಾಡುತ್ತದೆ.

 

  • ಹಳೆಯ ಮಾಹಿತಿಯನ್ನು ಕಲೆಹಾಕಿ ಪರಿಸ್ಥಿತಿಗಳಿಗೆ ಅನುಗುಣವಾಗಿ ಪ್ರೋಗ್ರಾಮಿಂಗ್ ಮಾಡಿಕೊಂಡು ಅದರ ಅಧಾರವಾಗಿ ಕೆಲಸ ಮಾಡುತ್ತದೆ. ಇದಕ್ಕೆ ಆಯಾ ಕೆಲಸಗಳಿಗೆ ಅಗತ್ಯವಾದ ನೆನಪಿನ ಶಕ್ತಿ ಮಾತ್ರ ಇರುತ್ತದೆ. ಉದಾಹರಣೆಗೆ ಸ್ವಯಂಚಾಲಿತ ವಾಹನ, ಯಂತ್ರಗಳು, ಚಾಟ್‌ಬೋಟ್ಸ್, ಪರ್ಸನಲ್ ಡಿಜಿಟಲ್ ಅಸಿಸ್ಟಂಟ್‌ ಮುಂತಾದವು ಇದಕ್ಕೆ ಸೂಕ್ತ ನಿದರ್ಶನಗಳಾಗಿವೆ.

 

ಅನುಕೂಲಗಳು 

  • ಮನುಷ್ಯರಿಗೆ ಹೋಲಿಸಿದರೆ ಕಡಿಮೆ ದೋಷದರ ವನ್ನು ಹೊಂದಿರುವುದರ ಜೊತೆಗೆ ಉತ್ತಮ ನಿಖರತೆ ಮತ್ತು ಖಚಿತತೆಯನ್ನು ಹೊಂದಿದೆ . ಉದಾ: ರೊಬೊಟಿಕ್ ರೇಡಿಯೊ ಶಸ್ತ್ರಚಿಕಿತ್ಸೆ
  • ಇದು ಅತೀಯಾದ ಕಾರ್ಯ ವೇಗವನ್ನು ಹೊಂದಿದೆ.
  • ಇದಕ್ಕೆ ಸುತ್ತಮುತ್ತಲಿನ ವಾತಾವರಣದ ಪ್ರಭಾವಬೀರುವುದಿಲ್ಲ
  • ಮುನ್ಸೂಚನಾ ತಂತ್ರಜ್ಞಾನದ ಮೂಲಕ ಬಳಕೆದಾರರಿಗೆ ಉತ್ತಮ ಅನುಭವ ನೀಡುತ್ತದೆ .ಉದಾ :ಯಾವುದಾದರೂ ಮಾಹಿತಿಗಾಗಿ ಗೂಗಲ್‌ನಲ್ಲಿ ಎರಡು ಅಕ್ಷರಗಳನ್ನು ಟೈಪ್‌ ಮಾಡುತ್ತಿದ್ದಂತೇ ನಾವು ಏನು ಹುಡುಕಲು ಪ್ರಯತ್ನಿಸುತ್ತಿದ್ದೇವೆ ಎಂದು ಊಹಿಸಿಸುವುದು ಇದರಿಂದಲೇ.
  • ಇದು ಮನರಂಜನೆ ಅಥವಾ ಇತರೆ ಕಾರ್ಯಕ್ಕಾಗಿ ಮಾನವನ ಜೊತೆ ಸಂವಹನ ನಡೆಸುತ್ತದೆ . ಉದಾ. ಸೋಫಿಯಾ ರೋಬೋಟ್
  • ಇದರಿಂದ ಭಾವನೆಗಳ ರಹಿತ ಕಡಿಮೆ ಅಥವಾ ಯಾವುದೇ ತಪ್ಪುಗಳಳಿಲ್ಲದೆ ತರ್ಕಬದ್ಧ ನಿರ್ಧಾರಗಳನ್ನು ಮಾಡಬಹುದು.

ಅನಾನುಕೂಲಗಳು:

  • ಇದರ ಆರಂಭಿಕ ವೆಚ್ಚ ತುಂಬಾ ಹೆಚ್ಚು
  • ಅವರಿಗೆ ಪರಿಚಯವಿಲ್ಲದ ಪರಿಸ್ಥಿತಿಯನ್ನು ಎದುರಿಸಿದರೆ ಇದರಿಂದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ.
  • ದುರಸ್ತಿ ವೆಚ್ಚಗಳು ಸಹ ಹೆಚ್ಚು
  • ಇದು ವಿನಾಶಕ್ಕೆ ಕಾರಣವಾಗಬಹುದು. ಉದಾ. ಭಯೋತ್ಪಾದಕರು
  • ಉದ್ಯೋಗದಲ್ಲಿ ಪರಿಣಾಮ ಬೀರಬಹುದು
  • ನೈತಿಕ ಕಾಳಜಿಗಳ ಮೇಲು ಸಹ ಪರಿಣಾಮ ಬೀರುತ್ತದೆ

 

ಇದರ ಬಳಕೆ

ಕೃತಕ ಬುದ್ಧಿಮತ್ತೆಯನ್ನು ಪ್ರಾಥಮಿಕವಾಗಿ ಮೂರು ಕ್ಷೇತ್ರಗಳಲ್ಲಿ –

1) ಸಂವೇದನಾ ವಿಜ್ಞಾನ

2)ಪ್ರಕೃತಿ ಸಹಜವೇದಿಕೆ

3) ರೊಬೋಟಿಕ್ಸ್ ಬಳಸಲಾಗುತ್ತಿದೆ.

 

  • ಸಂವೇದನಾ ವಿಜ್ಞಾನ ಕ್ಷೇತ್ರ- ಇಂಟೆಲಿಜೆಂಟ್ ಏಜೆಂಟ್ ಆಗಿ, ತಜ್ಞ ವ್ಯವಸ್ಥೆ, ದತ್ತಾಂಶ ಸಂಗ್ರಹ, ಜೆನೆಟಿಕ್ ಅಲ್ಗೋರಿಥಮ್ ಫುಝಿ ಲಾಜಿಕ್, ನರವ್ಯೂಹಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆಯಲ್ಲಿದೆ.
  • ಪ್ರಕೃತಿ ಸಹಜ ವೇದಿಕೆ – ಮಾತನ್ನು ಗ್ರಹಿಸುವುದು, ಸಹಜ ಭಾಷಾ ವೇದಿಕೆ, ವರ್ಚುವಲ್ ರಿಯಾಲಿಟಿ (ಭ್ರಾಮಕ ವಾಸ್ತವ), ಮಿದುಳಿನ ಕ್ರಿಯೆಗಳು
  • ರೊಬೋಟಿಕ್ಸ್ – ದೃಶ್ಯ, ಧ್ವನಿ ಸ್ಪರ್ಶವನ್ನು ಗ್ರಹಿಸುವುದು, ಜಾಣ್ಮೆ ಅಥವಾ ಬುದ್ಧಿಮತ್ತೆ, ಚಲನೆ, ಸ್ವತಂತ್ರವಾಗಿ ಗುರಿ ನಿರ್ಧರಿಸುವಂತ ಸಾಮರ್ಥ್ಯ

 

 ಭಾರತಕ್ಕೆ  ಇದರ ಅಗತ್ಯತೆ  ಏನು ?

  • ಇದರಿಂದ ಆರ್ಥಿಕ ಪ್ರಯೋಜನವನ್ನು ಪಡೆದುಕೊಳ್ಳಲು
  • ಅಕ್ಸೆನ್ಚರ್ ಸಂಶೋಧನೆಯ ಪ್ರಕಾರ, AIನಿಂದ 2035 ರ ವೇಳೆಗೆ ಭಾರತದ ವಾರ್ಷಿಕ ಬೆಳವಣಿಗೆ ದರವನ್ನು 3 ಪ್ರತಿಶತದಷ್ಟು ಹೆಚ್ಚಿಸುತ್ತದೆ ಎಂದು ಅಂದಾಜಿಸಲಾಗಿದೆ.
  • ಸಾಮಾಜಿಕ ಅಭಿವೃದ್ಧಿಗಾಗಿ ಮತ್ತು ಅಂತರ್ಗತ ಬೆಳವಣಿಗೆಗಾಗಿ.

 

ಭಾರತದಲ್ಲಿ AI ಬೆಳವಣಿಗೆಗಳು:

 

  ಉದ್ಯಮದಲ್ಲಿ

  • ಪ್ರಾಥಮಿಕ ಹಂತದ ಕಂಪನಿಗಳ ಕೇಂದ್ರೀಕೃತವು AI ಗಳ ಮೇಲೆ    ಹೆಚ್ಚಳ ಕಂಡುಬಂದಿದೆ
  • PwC ಸಂಶೋಧನೆಯ ಪ್ರಕಾರ, ಭಾರತದಲ್ಲಿ 36 ಪ್ರತಿಶತದಷ್ಟು ದೊಡ್ಡ ಹಣಕಾಸು ಸಂಸ್ಥೆಗಳು AI ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡಿದೆ.
  • ಭಾರತದಲ್ಲಿ ಕೃತಕ ಬುದ್ಧಿಮತ್ತೆ ಉದ್ಯಮವು ವಾರ್ಷಿಕವಾಗಿ $ 180 ಮಿಲಿಯನ್ ಆದಾಯದ ಬರಬಹುದು ಎಂದು ಅಂದಾಜಿಸಲಾಗಿದೆ.

ರಕ್ಷಣಾ ಕ್ಷೇತ್ರದಲ್ಲಿ :

  • DRDO ದಲ್ಲಿನ ಕೃತಕ ಬುದ್ಧಿಮತ್ತೆ ಮತ್ತು ರೋಬಾಟಿಕ್ಸ್ ಕೇಂದ್ರ(CAIR) ಕೃತಕ ಬುದ್ಧಿಮತ್ತೆ ಬಗ್ಗೆ ಸಂಶೋಧನೆ ನಡೆಸುತ್ತಿದೆ.
  • ಭಾರತೀಯ ಸೇನೆಯು ಈಗಾಗಲೇ ನಿಷ್ಕ್ರಿಯವಾದ ಸಸ್ಪೆನ್ಷನ್, ಸ್ನೇಕ್ ರೋಬೋಟ್, ವಾಲ್-ಕ್ಲೈಂಬಿಂಗ್ ರೋಬೋಟ್, ಮತ್ತು ರೋಬೋಟ್ ಸೆಂಟ್ರಿ,ಯನ್ನು ಹೊಂದಿದೆ .
  • ಮಲ್ಟಿ ಏಜೆಂಟ್ ರೊಬೊಟಿಕ್ಸ್ ಫ್ರೇಮ್ವರ್ಕ್ (MARF) ಅನ್ನು ಅಭಿವೃದ್ಧಿಪಡಿಸುವ ಯೋಜನೆಯೊಂದರಲ್ಲಿ CAIR ಕಾರ್ಯನಿರ್ವಹಿಸುತ್ತಿದೆ.

ಆರೋಗ್ಯ ವಲಯ:

 

  • ನೀತಿ ಅಯೋಗವು ಮೈಕ್ರೋಸಾಫ್ಟ್ ಮತ್ತು ಫಾರಸ್ ಹೆಲ್ತ್ ನೊಂದಿಗೆ  ಡಯಾಬಿಟಿಕ್ ರೆಟಿನೋಪತಿಯ ಆರಂಭಿಕ ಪತ್ತೆಹಚ್ಚುವಿಕೆಯನ್ನು ಪ್ರಾಯೋಗಿಕ ಯೋಜನೆಯಾಗಿ ಪರಿಚಯಿಸಲು ಕೆಲಸ ಮಾಡುತ್ತಿದೆ.
  • ಸಾಮಾನ್ಯ ಕಣ್ಣಿನ ಸಮಸ್ಯೆಗಳನ್ನು ಪತ್ತೆಹಚ್ಚಲು ತ್ರಿನೇತ್ರವೆಂಬ ಸಾಧನ ವನ್ನು ಫೋರಸ್ ಹೆಲ್ತ್  ಅಭಿವೃದ್ಧಿಪಡಿಸಿದೆ.

ಕೃಷಿವಲಯದಲ್ಲಿ:

  • ನೀತಿ ಆಯೋಗ ಮತ್ತು ಐಬಿಎಂ ಕಂಪನಿ ಸಹಯೋಗದಿಂದ ಬೆಳೆ ಇಳುವರಿಯನ್ನು ಹೆಚ್ಚಿಸಲು  AI ಬಳಸಿಕೊಂಡು  ರೈತರಿಗೆ ನೈಜ ಸಮಯ ಸಲಹಾ ಒದಗಿಸಲು ಕಾರ್ಯನಿರ್ವಹಿಸುತ್ತಿದೆ .

ಶಿಕ್ಷಣ ಕ್ಷೇತ್ರದಲ್ಲಿ :

 

  • ಆಂಧ್ರಪ್ರದೇಶ ಸರಕಾರವು ಮೈಕ್ರೋಸಾಫ್ಟ್ ನ ಸಹಯೋಗದೊಂದಿಗೆ ಶಾಲೆ ಬಿಟ್ಟಿರುವ ಮಕ್ಕಳ ಬಗ್ಗೆ  ಮುನ್ಸೂಚಿಸಲು ಮತ್ತು ಅದರ  ಸಮಸ್ಯೆಯನ್ನು ಬಗೆಹರಿಸಲು ಕಾರ್ಯನಿರ್ವಹಿಸುತ್ತಿದೆ.

ನೀತಿ ಆಯೋಗವು  ಅದರ ಇತ್ತೀಚಿನ ಚರ್ಚೆಯಲ್ಲಿ ಕೃತಕ ಬುದ್ಧಿಮತ್ತೆ ಕುರಿತು ರಾಷ್ಟ್ರೀಯ ತಂತ್ರವನ್ನು ತಿಳಿಸಿದೆ ಹಾಗು  ಕೃತಕ ಬುದ್ಧಿಮತ್ತೆಯನ್ನು ಅನ್ವಯಿಸಲು 5 ಕೋರ್ ಪ್ರದೇಶಗಳನ್ನು ಗುರುತಿಸಿದೆ ಅವುಗಳೆಂದರೆ

  • ಅರೋಗ್ಯ : ಗುಣಮಟ್ಟದ ಆರೋಗ್ಯ ರಕ್ಷಣೆಗೆ ಮತ್ತು ಲಭ್ಯತೆ
  • ವ್ಯವಸಾಯ: ರೈತರ ಆದಾಯ, ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು .
  • ಶಿಕ್ಷಣ: ಸುಧಾರಿತ ಪ್ರವೇಶ ಮತ್ತು ಶಿಕ್ಷಣದ ಗುಣಮಟ್ಟ ವನ್ನು ಅಭಿವೃದಿಯಿಸುವುದು
  • ಮೂಲಸೌಕರ್ಯ: ಬೆಳೆಯುತ್ತಿರುವ ನಗರ ಜನಸಂಖ್ಯೆಗೆ ಸಮರ್ಥ ಮತ್ತು ಸಂಪರ್ಕ ಮೂಲಸೌಕರ್ಯ ಒದಗಿಸುವುದು
  • ಸಾರಿಗೆ: ಸಾರಿಗೆ ಮತ್ತು ಸುರಕ್ಷಿತ ಸಂಚಾರ ವಿಧಾನಗಳು ಮತ್ತು ಉತ್ತಮ ಸಂಚಾರ ಮತ್ತು ದಟ್ಟಣೆ ಸಮಸ್ಯೆಗಳ ಬಗ್ಗೆ

 

ಮುಂದಿನ ಹಾದಿ

ಕೃತಕ ಬುದ್ಧಿಮತ್ತೆ ವಿಜೃಂಭಿಸಿದರೆ ಹಲವರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.ಇದರ ಶಕ್ತಿಯಿಂದ ಕೆಲಸ ಮಾಡುವ ಸ್ವಯಂಚಾಲಿತ ಪರಿಕರಗಳನ್ನು ಭಯೋತ್ಪಾದಕರು, ಕಳ್ಳರು ದುರುದ್ದೇಶಗಳಿಗೆ ಬಳಸಿಕೊಳ್ಳುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಇದನ್ನೆಲ್ಲ ಗಮನಿಸಿಕೊಂಡು ಸರ್ಕಾರವು ಅಭಿವೃದ್ಧಿ ನಡೆಸಬೇಕಾಗಿದೆ.

 

Share