13th NOVEMBER-ALL INDIA RADIO NEWS SUMMARY
1.ಕ್ವಾಡ್ ಬಲವರ್ಧನೆಗೆ ಆಸಿಯಾನ್ ವೇದಿಕೆ
ಪ್ರಮುಖ ಸುದ್ದಿ
- ಫಿಲಿಪ್ಪೀನ್ಸ್ನಲ್ಲಿ ನಡೆಯುತ್ತಿರುವ 31ನೇ ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಷ್ಯಾ ನೇಷನ್ಸ್ (ಆಸಿಯಾನ್) ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿರವರು ಭಾಗವಹಿಸಿದ್ದಾರೆ
- . ಏಷ್ಯಾ ಖಂಡದಲ್ಲಿ ಸಾರ್ವಭೌಮತ್ವ ಸ್ಥಾಪಿಸಲು ಚೀನಾ ಮುನ್ನುಗ್ಗುತ್ತಿರುವ ಬೆನ್ನಲ್ಲೇ ‘ಕ್ವಾಡ್ ’ ಹೆಸರಿನ ಚತುರ್ರಾಷ್ಟ್ರ ಒಕ್ಕೂಟದ ಮೂಲಕ ಚೀನಾ-ಪಾಕ್ ದೋಸ್ತಿಗೆ ತಿರುಗೇಟು ನೀಡಲು ಶೃಂಗಸಭೆಯನ್ನು ವೇದಿಕೆಯಾಗಿ ಬಳಸಿಕೊಳ್ಳಲು ಭಾರತ ತೀರ್ಮಾನಿಸಿದೆ .
- ಚೀನಾ ಕುಮ್ಮಕ್ಕಿನಿಂದ ಬೀಗುತ್ತಿರುವ ಉತ್ತರ ಕೊರಿಯಾ ಬಗ್ಗಿಸಲು ಅಮೆರಿಕ , ಜಪಾನ್ ಕೂಡ ಭಾರತದೊಂದಿಗೆ ಕ್ವಾಡ್ನಲ್ಲಿ ಕೈಜೋಡಿಸಿವೆ. ದ್ವಿಪಕ್ಷೀಯ ಸಂಬಂಧ ವೃದ್ಧಿ ದೃಷ್ಟಿಯಿಂದ ಆಸ್ಟ್ರೇಲಿಯಾ ಒಕ್ಕೂಟದ ಭಾಗವಾಗಿರುವುದು ವಿಶೇಷ. ಆಸಿಯಾನ್ ಒಕ್ಕೂಟದಲ್ಲಿ ಪ್ರಾದೇಶಿಕ ರಾಷ್ಟ್ರಗಳ ಸಹಭಾಗಿತ್ವ 50ನೇ ವರ್ಷ ಪೂರೈಸಿರುವುದು ಈ ಬಾರಿಯ ವಿಶೇಷ. 15ನೇ ಆಸಿಯಾನ್ -ಇಂಡಿಯಾ ಶೃಂಗಸಭೆ ಮತ್ತು 12ನೇ ಪೂರ್ವ ಏಷ್ಯಾ ಶೃಂಗಸಭೆಗಳಲ್ಲಿಯೂ ಪ್ರಧಾನಿ ಭಾಗವಹಿಸದ್ದಾರೆ.
- ಮಾಜಿ ಪ್ರಧಾನಿ ಇಂದಿರಾ ಗಾಂಧಿಯಿಂದ 1981ರ ಭೇಟಿ ಬಳಿಕ ಫಿಲಿಪ್ಪೀನ್ಸ್ಗೆ ಭೇಟಿ ನೀಡುತ್ತಿರುವ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆ ಪ್ರಧಾನಿ ಮೋದಿ ಅವರದ್ದಾಗಿದೆ.
- ಉಗ್ರ ನಿಗ್ರಹಕ್ಕೆ ಅಗ್ರ ಆದ್ಯತೆ: ಐಸಿಸ್ ಉಗ್ರರ ವಶದಲ್ಲಿದ್ದ ಫಿಲಿಪ್ಪೀನ್ಸ್ನ ಮರಾವಿ ನಗರದಲ್ಲಿ ಭಯೋತ್ಪಾದಕರ ನಿಗ್ರಹಕ್ಕೆ ಮಲೇಷ್ಯಾ ಮತ್ತು ಇಂಡೋನೇಷ್ಯಾ ಸೇನೆ ಸಹಭಾಗಿತ್ವದಲ್ಲಿ ನಡೆದ ಸಮರದಲ್ಲಿ ಫಿಲಿಪ್ಪೀನ್ಸ್ ಕಳೆದ ತಿಂಗಳು ಗೆದ್ದಿತ್ತು.
- ಇದರ ಬೆನ್ನಲ್ಲೇ ಆಯೋಜನೆಗೊಂಡಿರುವ ಶೃಂಗಸಭೆಯಲ್ಲಿ ಭಯೋತ್ಪಾದನೆ ನಿಗ್ರಹದ ಮಂತ್ರವನ್ನೇ ಪ್ರಮುಖವಾಗಿ ಆಸಿಯಾನ್ ಮುಖಂಡರು ಜಪಿಸಲಿದ್ದಾರೆ ಎನ್ನಲಾಗಿದೆ. ರೋಹಿಂಗ್ಯಾ ಮುಸ್ಲಿಮರ ವಿಚಾರದಲ್ಲಿ ಮಾನವ ಹಕ್ಕು ಉಲ್ಲಂಘನೆ ಚರ್ಚೆಗೆ ಬರಲಿದೆ ಎಂದು ಮೂಲಗಳು
ನಾಲ್ಕು ರಾಷ್ಟ್ರಗಳ ಮೊದಲ ಸಭೆ
- ದಕ್ಷಿಣ ಚೀನಾ ಸಾಗರ ಮತ್ತು ಹಿಂದು ಮಹಾಸಾಗರದಲ್ಲಿ ರಕ್ಷಣಾ ಸಹಕಾರ ಮತ್ತು ವ್ಯಾಪಾರ ವೃದ್ಧಿ ಉದ್ದೇಶದಿಂದ ರಚನೆಯಾಗಿರುವ ‘ ಕ್ವಾಡ್ ’ ಒಕ್ಕೂಟ ಆಸಿಯಾನ್ ಶೃಂಗಸಭೆ ಬೆನ್ನಲ್ಲೇ ಭಾನುವಾರ ಮೊದಲ ಅಧಿಕೃತ ಸಭೆ ನಡೆಸಿದೆ.
- ಜಪಾನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪೂರ್ವ ಏಷ್ಯಾ ಉಸ್ತುವಾರಿಯ ವಿದೇಶಾಂಗ ಜಂಟಿ ಕಾರ್ಯದರ್ಶಿ ಪ್ರಣಯ್ ವರ್ವ ಮತ್ತು ದಕ್ಷಿಣ ಏಷ್ಯಾ ಉಸ್ತುವಾರಿಯ ವಿನಯ್ ಕುಮಾರ್ ಭಾರತವನ್ನು ಪ್ರತಿನಿಧಿಸಿದ್ದರು.
- ರಾಷ್ಟ್ರಗಳ ನಡುವೆ ಸಂಪರ್ಕ ಹೆಚ್ಚಳದ ಮೂಲಕ ಆಂತರಿಕ ಪ್ರದೇಶವಾರು ಅಭಿವೃದ್ಧಿ ಹಾಗೂ ಭಯೋತ್ಪಾದನೆ ನಿಗ್ರಹಕ್ಕೆ ಪರಸ್ಪರರ ಸಹಕಾರಕ್ಕೆ ಸಭೆಯಲ್ಲಿ ಒತ್ತು ನೀಡಲಾಗಿದೆ.
- ಫಿಲಿಪ್ಪೀನ್ಸ್ ಜತೆಗಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಮಾತ್ರವಲ್ಲದೇ ಆಸಿಯಾನ್ ರಾಷ್ಟ್ರಗಳ ಜತೆಗಿನ ರಾಜತಾಂತ್ರಿಕ ಭದ್ರತೆ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಬೆಳವಣಿಗೆಗೂ ಮನಿಲಾ ಭೇಟಿ ಪುಷ್ಟಿ ನೀಡಲಿದೆ.
ಏನಿದು ಆಸಿಯಾನ್?
- 1967ರ ಆ.8ರಂಂದು ಬ್ಯಾಂಗ್ಕಾಕ್ ನಲ್ಲಿ ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್, ಸಿಂಗಾಪುರ ಮತ್ತು ಥಾಯ್ಲೆಂಡ್ ಸೇರಿ ಆಸಿಯಾನ್ ಒಕ್ಕೂಟವನ್ನು ಸ್ಥಾಪಿಸಿದವು. ವಿಶ್ವದ ಜನಸಂಖ್ಯೆಯ ನಾಲ್ಕನೇ ಒಂದು ಭಾಗ ಆಸಿಯಾನ್ ಸದಸ್ಯ ರಾಷ್ಟ್ರಗಳ ಸಾಮರ್ಥ್ಯವಾಗಿದೆ. ಒಟ್ಟಾರೆ ಜಿಡಿಪಿ ಕೊಡುಗೆ 8 ಲಕ್ಷ ಕೋಟಿ ಡಾಲರ್ನಷ್ಟಿದೆ.
ದಕ್ಷಿಣ ಚೀನಾ ಸಾಗರ ಬಿಕ್ಕಟ್ಟು ಪ್ರಮುಖ
- ಚೀನಾ ಮತ್ತು ಫಿಲಿಪ್ಪೀನ್ಸ್ ನಡುವೆ ದಕ್ಷಿಣ ಚೀನಾ ಸಮುದ್ರ ವಿಚಾರವಾಗಿ ದ್ವಿಪಕ್ಷೀಯ ಸಂಬಂಧಗಳಿಗೆ ಹಿನ್ನಡೆಯಾಗಿದ್ದರೂ ಚೀನಾ ಪ್ರಧಾನಿ ಲೀ ಕೆಕ್ಯೂಯಾಂಗ್ ಆಸಿಯಾನ್ ವೇದಿಕೆಯಲ್ಲಿ ಸ್ನೇಹದ ಹಸ್ತ ಚಾಚುವ ಮುನ್ಸೂಚನೆ ನೀಡಿದ್ದಾರೆ.
- ಸಹಕಾರ ಮತ್ತು ಸ್ನೇಹದ ಸಾಗರವಾಗಿ ದಕ್ಷಿಣ ಚೀನಾ ಸಾಗರವನ್ನು ಕಾಣಲು ನಾವು ಇಚ್ಛಿಸುತ್ತೇವೆ. ಜಂಟಿಯಾಗಿ ಉಭಯ ರಾಷ್ಟ್ರಗಳ ಅಭಿವೃದ್ಧಿಗೆ ಚೀನಾ ಒತ್ತು ನೀಡಲಿದೆ ಎಂದು ಲೀ ಹೇಳಿದ್ದಾರೆ. ಹಾಗಾಗಿ ದಕ್ಷಿಣ ಚೀನಾ ಸಾಗರ ಆಸಿಯಾನ್ ಶೃಂಗಸಭೆಯ ಚರ್ಚೆ ವಿಚಾರಗಳಲ್ಲಿ ಅಗ್ರ ಸ್ಥಾನ ಪಡೆದುಕೊಂಡರೆ ಸಂಶಯವಿಲ್ಲ. ವಿಶ್ವಸಂಸ್ಥೆಯ 1982ರ ಅಂತಾರಾಷ್ಟ್ರೀಯ ಸಾಗರ ಕಾನೂನು ಅನ್ವಯ ಭಾರತ ನೈಸರ್ಗಿಕ ಸಂಪನ್ಮೂಲಗಳಲ್ಲಿ ಸ್ವತಂತ್ರ ಸಂಚಾರಕ್ಕೆ ಬೆಂಬಲ ನೀಡುತ್ತ ಬಂದಿದೆ.
ಉದ್ದೇಶ?
- ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವೆ ಆರ್ಥಿಕ ಬೆಳವಣಿಗೆ ವೃದ್ಧಿ ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆ ಸ್ಥಾಪನೆ.
- ಆಡಳಿತಾತ್ಮಕ, ಶೈಕ್ಷಣಿಕ, ತಾಂತ್ರಿಕ ಕ್ಷೇತ್ರಗಳಲ್ಲಿ ತರಬೇತಿ, ಸಂಶೋಧನೆಗೆ ಸಹಕಾರ, ಸಂವಹನ, ಸಂಚಾರ ಸೌಲಭ್ಯ ಹೆಚ್ಚಳ
ಪ್ರಾಥಮಿಕ ತತ್ತ್ವಗಳು
- ಸಹಕಾರ, ಅನ್ಯೋನ್ಯತೆ ಒಪ್ಪಂದ 1976 ರನ್ವಯ ಸದಸ್ಯ ರಾಷ್ಟ್ರಗಳ ಪಾಲಿಸುತ್ತಿರುವ ಮೂಲ ತತ್ವಗಳು, ಪರಸ್ಪರ ಸಹಕಾರಕ್ಕೆ ಮೊದಲ ಆದ್ಯತೆ
- ದೇಶದ ಸ್ವಾತಂತ್ರ್ಯ, ಸಾರ್ವಭೌಮತ್ವ, ಸಮಾನತೆ, ಪ್ರಾದೇಶಿಕ ಸಮಗ್ರತೆಗೆ ಪರಸ್ಪರರಿಂದ ಗೌರವ.
- ಒಂದು ರಾಷ್ಟ್ರದ ಆಂತರಿಕ ವಿಚಾರಗಳಲ್ಲಿ ಮತ್ತೊಂದು ರಾಷ್ಟ್ರದಿಂದ ಮೂಗುತೂರಿಸುವಿಕೆ ಸಲ್ಲ. ವ್ಯಾಜ್ಯಗಳ ಶಾಂತಿಯುತವಾಗಿ ಬಗೆಹರಿಸುವಿಕೆ.
2.ಭಯೋತ್ಪಾದನೆ: ಪಾಕ್ ಬಣ್ಣ ಮತ್ತೆ ಬಯಲು
ಪ್ರಮುಖ ಸುದ್ದಿ
- ವಿಚಿತ್ರ ಬೆಳವಣಿಗೆಯಲ್ಲಿ ಪಾಕಿಸ್ತಾನ ಸರ್ಕಾರ 26/11ರ ಮುಂಬೈ ದಾಳಿಯ ರೂವಾರಿ ಹಫೀದ್ ಸಯೀದ್ ಗೆ ಭಾರೀ ಭದ್ರತೆಯನ್ನು ಒದಗಿಸಬೇಕೆಂದು ಫರ್ಮಾನು ಹೊರಡಿಸಿದ್ದಾರೆ! ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಎಳ್ಳಷ್ಟು ಗಂಭೀರತೆಯನ್ನೂ ಪ್ರದರ್ಶಿಸುತ್ತಿಲ್ಲ ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕಿಲ್ಲ.
- ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಗೃಹ ವಿಭಾಗಕ್ಕೆ ಪತ್ರ ಬರೆದಿರುವ ಫೆಡರಲ್ ಅಧಿಕಾರಿಗಳು, ಹಫೀದ್ ಸಯೀದ್ ಗೆ ಹೆಚ್ಚಿನ ಭದ್ರತೆ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ವಿದೇಶಿ ಗುಪ್ತಚರ ಏಜೆನ್ಸಿ ಸಯೀದ್ ರನ್ನು ಕೊಲ್ಲಲು ಸಂಚು ಹೂಡಿದ್ದಾರೆ ಎಂಬುದು ಭದ್ರತೆ ಕೇಳಲು ಪ್ರಮುಖ ಕಾರಣ ಎಂದು ವಿವರಿಸಲಾಗಿದೆ.
- ನಿಷೇಧಿತ ಭಯೋತ್ಪಾದನಾ ಸಂಘಟನೆಯ ಸಯೀದ್ ನನ್ನು ಕೊಲ್ಲಲು ವಿದೇಶಿ ಗುಪ್ತಚರವು ಇಬ್ಬರಿಗೆ ರೂ.80 ಕೋಟಿ ಹಣ ನೀಡಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ಪ್ರಾಧಿಕಾರ (ಎನ್ಸಿಟಿಎ) ಹೇಳಿದೆ. ಹೀಗಾಗಿ ಜಮಾತ್ ಉದ್ ದಾವಾ ಮುಖ್ಯಸ್ಥನಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಕೇಳಲಾಗಿದೆ. ಕಳೆದ ಜನವರಿ 30ರಿಂದ ಸಯೀದ್ ನನ್ನು ಗೃಹ ಬಂಧನದಲ್ಲಿರಿಸಲಾಗಿದೆ.
- ಸಯೀದ್ ನನ್ನು ಬಿಡುಗಡೆ ಮಾಡಿದರೆ ದೇಶದಲ್ಲಿ ಕಾನೂನು ಸುವ್ಯವಸ್ಥೆಯ ಸಮಸ್ಯೆ ಉಂಟಾಗಬಹುದು ಎಂದೂ ಎನ್ಸಿಟಿಎ ತನ್ನ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದೆ.
- ಜಮಾತ್ ಉದ್ ದಾವಾ ವಿದೇಶಿ ಉಗ್ರವಾದಿ ಸಂಘಟನೆ ಎಂದು ಅಮೆರಿಕ 2014ರಲ್ಲಿ ಘೋಷಣೆ ಮಾಡಿದೆ. ಸಯೀದ್ ನ ಉಗ್ರವಾದಿ ಕೃತ್ಯಗಳ ಹಿನ್ನೆಲೆಯಲ್ಲಿ ಆತನನ್ನು ಹಿಡಿದುಕೊಟ್ಟವರಿಗೆ ಡಾಲರ್ 10 ಮಿಲಿಯನ್ ಬಹುಮಾನವನ್ನೂ ಅಮೆರಿಕ ಘೋಷಿಸಿದೆ.
- ಕಳೆದ ತಿಂಗಳು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಅಮೆರಿಕದ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ ಸನ್, ಭಯೋತ್ಪಾದನೆ ವಿಷಯದಲ್ಲಿ ಬದ್ಧತೆ ಪ್ರದರ್ಶಿಸಲು ಪಾಕಿಸ್ತಾನಕ್ಕೆ ಇದು ಕೊನೆಯ ಅವಕಾಶ ಎಂದು ಸ್ಪಷ್ಟಪಡಿಸಿದ್ದರು. ಆದರೆ ಇದನ್ನು ಪಾಕಿಸ್ತಾನ ಗಂಭೀರವಾಗಿ ತೆಗೆದುಕೊಂಡಂತೆ ಭಾಸವಾಗುತ್ತಿಲ್ಲ.
- ಮುಂಬೈ ದಾಳಿಯಿಂದ ಪಾಕಿಸ್ತಾನದ ವರ್ಚಸ್ಸು ಜಾಗತಿಕವಾಗಿ ಕುಸಿದಿದೆ ಎಂದು ಕಳೆದ ವಾರ ಪಾಕಿಸ್ತಾನದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮತ್ತು ವಾಷಿಂಗ್ಟನ್ ನಲ್ಲಿರುವ ಪಾಕಿಸ್ತಾನದ ಹಾಲಿ ರಾಯಭಾರಿ ಐಜಾಜ್ ಅಹ್ಮದ್ ಚೌಧುರಿ ಅವರು ಹೇಳಿದ್ದರು. ಇದಲ್ಲದೆ ಹಫೀದ್ ಸಯೀದ್ ಮತ್ತು ಮಸೂದ್ ಅಜರ್ ನಂತಹ ಉಗ್ರಗಾಮಿಗಳಿಂದಾಗಿ ಪಾಕಿಸ್ತಾನ ಮುಜುಗರ ಅನುಭವಿಸುವಂತಾಗಿದೆ ಎಂದೂ ಪಾಕ್ ವಿದೇಶಾಂಗ ಸಚಿವ ಖ್ವಾಜಾ ಆಸಿಪ್ ಒಪ್ಪಿಕೊಂಡಿದ್ದಾರೆ.
- ಅಭಿವೃದ್ಧಿ ಬಗ್ಗೆ ಹೇಳಲು ಏನಿರದಿದ್ದರೂ ಸಾರ್ವತ್ರಿಕ ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ರಾಜಕೀಯ ಪಕ್ಷಗಳು ಮತ್ತು ಸರ್ಕಾರ ಧಾರ್ಮಿಕ ಮೂಲಭೂತವಾದಿಗಳು ಮತ್ತು ಉಗ್ರಗಾಮಿಗಳೊಂದಿಗೆ ನಿಕಟ ಸಂಪರ್ಕ ಸಾಧಿಸಲು ಮುಂದಾಗಿದೆ.
- ಭಾರತವನ್ನು ಗುರಿ ಮಾಡಲು ಇವರನ್ನು ಬಳಸಿಕೊಂಡರೆ ಮತ ಗಳಿಸಬಹುದು ಎಂಬ ಲೆಕ್ಕಾಚಾರ ರಾಜಕೀಯ ಪಕ್ಷಗಳದ್ದು. ಹೀಗಾಗಿ, ಸಯೀದ್ ನಂತರ ವ್ಯಕ್ತಿಗಳು ಭಾರತದ ವಿರುದ್ಧ ವಿಷ ಕಾರಲು ತಯಾರಾಗಿ ಕುಳಿತಿದ್ದಾರೆ.
- ಆದಾಗ್ಯೂ, ಜಾಗತಿಕ ಸಮುದಾಯಕ್ಕೆ ಪಾಕಿಸ್ತಾನದ ವರ್ತನೆಗಳ ಬಗ್ಗೆ ಅಚ್ಚರಿ ಏನಿಲ್ಲ. ಲಷ್ಕರ್ ಇ ತೊಯ್ಬಾ ಮತ್ತು ಜಮಾತ್ ಉದ್ ದಾವಾದಂತಹ ಉಗ್ರವಾದಿ ಸಂಘಟನೆಗಳ ವಿರುದ್ಧ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮೂರು ತಿಂಗಳಲ್ಲಿ ಸಮಗ್ರ ವರದಿ ನೀಡಬೇಕೆಂದು ಭಯೋತ್ಪಾದಕ ನಿಧಿ ಮತ್ತು ಹಣಕಾಸು ಅವ್ಯವಹಾರಗಳ ಬಗ್ಗೆ ಕಣ್ಣಿಟ್ಟಿರುವ ಜಾಗತಿಕ ನಿಗಾ ಸಂಸ್ಥೆ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್(FATF) ಪಾಕಿಸ್ತಾನ ಸರ್ಕಾರಕ್ಕೆ ಸೂಚನೆ ನೀಡಿತ್ತು.
- ಈ ಉಗ್ರವಾದಿ ಗುಂಪುಗಳಿಗೆ ಹಣ ಪೂರೈಕೆ ನಿಲ್ಲಿಸುವ ಬಗ್ಗೆ ಪಾಕಿಸ್ತಾನ ಕೇಂದ್ರ ಬ್ಯಾಂಕ್ ನಿಂದಲೂ ವರದಿಯನ್ನು ಕೇಳಲಾಗಿದೆ. FATFನ ಇಂಟರ್ನ್ಯಾಷನಲ್ಕೋಪರೇಶನ್ ರಿವ್ಯೂ ಸಭೆಯಲ್ಲಿ ಪಾಕಿಸ್ತಾನದ ಭಯೋತ್ಪಾದನೆ ಸಮಸ್ಯೆ ಬಗ್ಗೆ ಭಾರತ ಪ್ರಸ್ತಾಪಿಸಿದ್ದ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿತ್ತು.
- ಸಂಬಂಧಪಟ್ಟ ಪ್ರಾಧಿಕಾರಗಳು ನಿಯಮಗಳನ್ನು ಜಾರಿ ಮಾಡಿದ್ದರೂ, ಕೆಲ ಸಂಘಟನೆಗಳಿಗೆ ಅನಿಯಮತಿವಾಗಿ ಹಣದ ಪೂರೈಕೆಯಾಗುತ್ತಿದೆ ಎಂದು FATFನ ಏಷ್ಯಾ–ಪೆಸಿಫಿಕ್ ಕಳವಳ ವ್ಯಕ್ತಪಡಿಸಿತ್ತು.
- ವಿಶ್ವಸಂಸ್ಥೆಯ 1267 ಮತ್ತು 1373ರ ನಿರ್ಣಯಗಳಿಗೆ ಅನುಸಾರವಾಗಿ ಪಾಕಿಸ್ತಾನ ತೆಗೆದುಕೊಂಡಿರುವ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮತ್ತು ಏಜೆನ್ಸಿಗಳ ಕ್ರಮಗಳ ಬಗ್ಗೆ ವಿವರಣೆ ನೀಡಲು ಸೂಚಿಸಲಾಗಿದೆ. ನಿರ್ದಿಷ್ಟ ವ್ಯಕ್ತಿಗಳುಮತ್ತು ಸಂಘಟನೆಗಳಿಗೆ ಬರುವ ಹಣಕಾಸು ನಿಧಿ ಮತ್ತು ಆಸ್ತಿಗಳ ಬಗ್ಗೆಯೂ ಮಾಹಿತಿಯನ್ನು ಹಂಚಿಕೊಳ್ಳಲು ಹೇಳಲಾಗಿದೆ.
- ಈ ಹಿಂದೆ ಅಮೆರಿಕದ ಹಣಕಾಸು ಸೇವಾ ಇಲಾಖೆಯು ಪಾಕಿಸ್ತಾನದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಹಬೀಬ್ ಬ್ಯಾಂಕಿಗೆ ಸೂಚನೆಯೊಂದನ್ನು ನೀಡಿ, ಅಮೆರಿಕದಲ್ಲಿರುವ ತನ್ನ ಬ್ಯಾಂಕನ್ನು ಮುಚ್ಚಬೇಕು ಎಂದು ಹೇಳಿತ್ತು.
- ಅಲ್ ಖೈದಾ ಮತ್ತಿತರ ಕೆಲ ಸಂಘಟನೆಗಳಿಗೆ ಈ ಬ್ಯಾಂಕ್ ನಿಂದ ಹಣ ರವಾನೆಯಾಗುತ್ತಿದೆ ಎಂಬ ವರದಿಗಳ ಆಧಾರದ ಮೇಲೆ ಈ ಆದೇಶ ನೀಡಿತ್ತು. ಸೌದಿ ಬ್ಯಾಂಕ್ ಸಹಕಾರದಿಂದಲೇ ಈ ಬ್ಯಾಂಕ್ ಕಾರ್ಯನಿರ್ವಹಿಸುತ್ತಿತ್ತು.
- ಏತನ್ಮಧ್ಯೆ, ಪಾಕಿಸ್ತಾನದಿಂದ ವರದಿ ಕೇಳುವುದನ್ನು ತಡೆಯಲು ಎಫ್ಎಟಿಎಫ್ ಮೇಲೆ ಚೀನಾ ಸಾಕಷ್ಟು ತಡೆಯೊಡ್ಡುವ ಪ್ರಯತ್ನ ಮಾಡಿದರೂ, ಈ ಸಂಸ್ಥೆ ಮೇಲೆ ಹಕ್ಕು ಸಾಧಿಸುವ ಅಧಿಕಾರ ಯಾರಿಗೂ ಇಲ್ಲ. ಹೀಗಾಗಿ ಬೀಜಿಂಗ್ ಇದರಲ್ಲಿ ಯಶ ಕಾಣಲಿಲ್ಲ. ಅಲ್ಲದೆ ಚೀನಾಕ್ಕೆ ಯಾವ ದೇಶವೂ ಬೆಂಬಲ ನೀಡಲಿಲ್ಲ. ಭಯೋತ್ಪಾದನೆ ಎಂಬ ಪೆಡಂಭೂತವನ್ನು ಹೊಡೆದಟ್ಟಲು ಅಂತರಾಷ್ಟ್ರೀಯ ಸಮುದಾಯ ಒಗ್ಗೂಡಿದೆ ಎಂಬುದನ್ನೂ ಈ ಬೆಳವಣಿಗೆಯಿಂದ ತಿಳಿದುಕೊಳ್ಳಬಹುದಾಗಿದೆ.
- ದೇಶದ ಎಲ್ಲ ಗ್ರಾಮ ಪಂಚಾಯತ್ಗಳಲ್ಲಿ ೨೦೧೯ರ ಮಾರ್ಚ್ ವೇಳೆಗೆ ಅತಿ ವೇಗದ ಅಂತರ್ಜಾಲ ಸೌಲಭ್ಯ ಕಲ್ಪಿಸುವ ಭಾರತನೆಟ್ನ ಎರಡನೇ ಮತ್ತು ಅಂತಿಮ ಹಂತದ ಯೋಜನೆಗೆ ಇಂದು ಚಾಲನೆ
ಪ್ರಮುಖ ಸುದ್ದಿ
- ದೇಶದ ಎಲ್ಲ ಗ್ರಾಮ ಪಂಚಾಯತ್ಗಳಲ್ಲಿ ೨೦೧೯ರ ಮಾರ್ಚ್ ವೇಳೆಗೆ ಅತಿ ವೇಗದ ಅಂತರ್ಜಾಲ ಸೌಲಭ್ಯ ಕಲ್ಪಿಸುವ ಭಾರತನೆಟ್ನ ಎರಡನೇ ಮತ್ತು ಅಂತಿಮ ಹಂತದ ಯೋಜನೆಗೆ ಇಂದು ಚಾಲನೆ ದೊರೆಯಲಿದೆ. ೩೪ ಸಾವಿರ ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ.
- ಭಾರತ್ನೆಟ್ ಅನುಷ್ಠಾನಕ್ಕೆ ರಾಜ್ಯಗಳ ನಡುವಣ ಒಪ್ಪಂದಕ್ಕೆ ದೂರಸಂಪರ್ಕ ಇಲಾಖೆ ನವದೆಹಲಿಯಲ್ಲಿ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಿದೆ.
- ಈ ಎರಡನೇ ಹಂತದಲ್ಲಿ ಉಳಿದ ಎಲ್ಲ ಒಂದೂವರೆ ಲಕ್ಷ ಗ್ರಾಮ ಪಂಚಾಯತ್ಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ.
- ಎಲ್ಲ ರಾಜ್ಯಗಳ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರು ಮತ್ತು ಕಾರ್ಯದರ್ಶಿಗಳು ಈ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
- ಭಾರತ್ನೆಟ್ ಯೋಜನೆಯ ಮೊದಲ ಹಂತದಲ್ಲಿ ಒಂದು ಲಕ್ಷ ಗ್ರಾಮ ಪಂಚಾಯತ್ಗಳಿಗೆ ಆಪ್ಟಿಕಲ್ ಫೈಬರ್ ಜಾಲದ ಮೂಲಕ ಬ್ರಾಡ್ಬ್ಯಾಂಡ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
- 4 ನೇ ಭಾರತ-ಕೆನಡಾ ವಾರ್ಷಿಕ ಮಂತ್ರಿ ಮಾತುಕತೆ ಇಂದು ಪ್ರಾರಂಭ
ಪ್ರಮುಖ ಸುದ್ದಿ
- ನಾಲ್ಕನೇ ಭಾರತ-ಕೆನಡಾ ವಾರ್ಷಿಕ ಮಂತ್ರಿ ಸಂಭಾಷಣೆ ಇಂದು ನವದೆಹಲಿಯಲ್ಲಿ ಪ್ರಾರಂಭವಾಗುತ್ತದೆ.
- ಭಾರತೀಯ ನಿಯೋಗವನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ನೇತೃತ್ವ ವಹಿಸಿದ್ದಾರೆ ಮತ್ತು ಕೆನಡಾದ ಅಂತರರಾಷ್ಟ್ರೀಯ ವಾಣಿಜ್ಯ ಸಚಿವ ಫ್ರಾಂಕೋಯಿಸ್-ಫಿಲಿಪ್ ಶಾಂಪೇನ್ ಕೆನಡಿಯನ್ ನಿಯೋಗವನ್ನು ಮುನ್ನಡೆಸುತ್ತಾನೆ.
- ಪ್ರಸಕ್ತ ಸುತ್ತಿನ ಸಚಿವ ಸಂವಾದದಲ್ಲಿ ಭಾರತ-ಕೆನಡಾ ಪಾಲುದಾರಿಕೆಯನ್ನು ಹೆಚ್ಚಿಸಲು ಭಾರತ ಮತ್ತು ಕೆನಡಾ ಕೆಲವು ಪ್ರಮುಖ ವಾಣಿಜ್ಯ ಚಾಲಕರ ಮೇಲೆ ಕೇಂದ್ರೀಕರಿಸುತ್ತಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
- ಸರಕು ಮತ್ತು ಸೇವೆಗಳೆರಡನ್ನೂ ಒಳಗೊಳ್ಳುವ ಪ್ರಗತಿಶೀಲ, ಸಮತೋಲಿತ, ಮತ್ತು ಪರಸ್ಪರ ಪ್ರಯೋಜನಕಾರಿ ಒಪ್ಪಂದಕ್ಕಾಗಿ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದ ತ್ವರಿತವಾದ ತೀರ್ಮಾನಕ್ಕೆ ಕೆಲಸ ಮಾಡಲು ಪ್ರಯತ್ನಗಳನ್ನು ಮಾಡಲಾಗುವುದು.
- ಸಿಇಪಿಎ ಮತ್ತು ವಿದೇಶಿ ಹೂಡಿಕೆ ಪ್ರಚಾರ ಮತ್ತು ರಕ್ಷಣಾ ಒಪ್ಪಂದದ ಮುಂಚಿನ ತೀರ್ಮಾನವನ್ನು ವಿಸ್ತರಿಸುವ ವಿಧಾನಗಳನ್ನು ಅನ್ವೇಷಿಸಲು ಎರಡೂ ದೇಶಗಳ ವ್ಯಾಪಾರ ಮಂತ್ರಿಗಳು ಸಮಸ್ಯೆಗಳನ್ನು ಚರ್ಚಿಸಲು ಸಾಧ್ಯತೆಗಳಿವೆ.
- ಭಾರತ-ಬೆಲ್ಜಿಯಂ ಒಪ್ಪಂದಗಳು: ಆಳವಾದ ಸಂಬಂಧದತ್ತ
ಪ್ರಮುಖ ಸುದ್ದಿ
- ಭಾರತದೊಂದಿಗೆ ರಾಜಕೀಯ ಮತ್ತು ಆರ್ಥಿಕ ವ್ಯವಹಾರವನ್ನು ಬಲಿಷ್ಠಗೊಳಿಸುವ ಗುರಿಯೊಂದಿಗೆ ಬೆಲ್ಜಿಯಂನ ರಾಜ ಕುಟುಂಬವು ಭಾರತಕ್ಕೆ 7 ದಿನಗಳ ಭೇಟಿಗೆ ಆಗಮಿಸಿದೆ.
- ಬೆಲ್ಜಿಯಂಗೆ ಎರಡನೇ ಅತಿ ದೊಡ್ಡ ರಫ್ತುದಾರ ದೇಶವಾಗಿರುವ ಭಾರತವು, ಐರೋಪ್ಯ ಒಕ್ಕೂಟದ ಹೊರಗೆ ಭಾರತದ ಮೂರನೇ ಅತಿ ದೊಡ್ಡ ವ್ಯಾಪಾರ ಪಾಲುದಾರನಾಗಿದೆ. ಭಾರತ ಮತ್ತು ಬೆಲ್ಜಿಯಂ ನಡುವಿನ ವ್ಯವಹಾರ ವಿಸ್ತರಣೆಗೆ ಸಾಕಷ್ಟು ಅವಕಾಶವಿದೆ.
- ತಮ್ಮ ರಾಜತಾಂತ್ರಿಕ ಸಂಬಂಧದ 70ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಬೆಲ್ಜಿಯಂನ ದೊರೆ ಪಿಲಿಫಿ ಮತ್ತು ರಾಣಿ ಮಥಿಲ್ದೆ ಭಾರತಕ್ಕೆ ಭೇಟಿ ನೀಡಿದ್ದಾರೆ. 2013ರಲ್ಲಿ ಬೆಲ್ಜಿಯಂನ ದೊರೆಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಪಿಲಿಫ್ಪೆ ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿಯಿದು.
- ದೊರೆ ಪಿಲಿಫ್ಪೆ ತಮ್ಮೊಂದಿಗೆ 90 ಸದಸ್ಯರ ಬೃಹತ್ ಬ್ಯುಸಿನೆಸ್ ಪ್ರತಿನಿಧಿಗಳನ್ನು ಕರೆದು ಕೊಂಡು ಬಂದಿದ್ದು ಭಾರತದೊಂದಿಗೆ ವ್ಯಾಪಾರ ಮತ್ತು ಹೂಡಿಕೆ ನಡೆಸಲು ಆ ದೇಶದ ಪ್ರಬಲ ಆಸೆಯನ್ನು ಇದು ಬಿಂಬಿಸುತ್ತದೆ.
- ಇತ್ತೀಚಿನ ವರ್ಷಗಳಲ್ಲಿ, ಬೆಲ್ಜಿಯಂಗೆ ಭಾರತದ ಹೂಡಿಕೆಯನ್ನು ಸೆಳೆಯಲು ಆ ದೇಶ ವಿಶೇಷ ಪ್ರಯತ್ನ ನಡೆಸುತ್ತಿದೆ. ಬೆಲ್ಜಿಯಂನ ಐಟಿ ಉದ್ದಿಮೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಸುಮಾರು 18,000 ಭಾರತೀಯರಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ ಭಾರತವು 62 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಸರಕುಗಳನ್ನು ಬೆಲ್ಜಿಯಂನಿಂದ ಆಮದು ಮಾಡಿಕೊಂಡಿದೆ. 2016-17 ರ ಸಾಲಿನಲ್ಲಿ 5.65 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ರಫ್ತು ವಹಿವಾಟು ಬೆಲ್ಜಿಯಂ ನೊಂದಿಗೆ ನಡೆದಿದೆ.
- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಅಧಿಕೃತ ಭೇಟಿಯ ಸಂದರ್ಭದಲ್ಲಿ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವಿಷಯಗಳ ಬಗ್ಗೆ ಮಾತುಕತೆ ನಡೆದಿದೆ ಎಂದು ವಿದೇಶಾಂಗ ಸಚಿವಾಲಯವು ಉಲ್ಲೇಖಿಸಿದೆ. ಭಾರತವು ಬೆಲ್ಜಿಯಂ ನೊಂದಿಗೆ ಐತಿಹಾಸಿಕ ಸಂಬಂಧ ಹೊಂದಿದ್ದು ಪ್ರಥಮ ಮಹಾ ಯುದ್ಧದಲ್ಲಿ ಭಾರತೀಯ ಸೈನಿಕರು ಬೆಲ್ಜಿಯಂಗಾಗಿ ಹೋರಾಡಿದ್ದರು.
- ಬೆಲ್ಜಿಯಂ ಕೂಡ ಬಹುಪಕ್ಷೀಯ ವೇದಿಕೆಗಳಲ್ಲಿ ಭಾರತವನ್ನು ಬೆಂಬಲಿಸುತ್ತಿದೆ. ಭಾರತದ ಭಯೋತ್ಪಾದನೆಯ ವಿರುದ್ಧದ ಹೋರಾಟ, ವಲಸೆ, ವ್ಯಾಪಾರ ಮತ್ತು ಹೂಡಿಕೆ, ಭಾರತ ಮತ್ತು ಇಯು ಸಂಬಂಧ, ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದ, ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟ ಮತ್ತು ಬ್ರೀಕ್ಸೀಟ್ ಬಗ್ಗೆ ಭಾರತದ ಅಭಿಪ್ರಾಯಗಳ ಬಗ್ಗೆ ಸಮಾಲೋಚನೆ ನಡೆದಿದೆ.
- ಭಾರತದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬೆಲ್ಜಿಯಂ ದೊರೆ ಮೇಕ್ ಇನ್ ಇಂಡಿಯಾ, ಕ್ಲೀನ್ ಇಂಡಿಯಾ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಬೆಲ್ಜಿಯಂ ಕಂಪೆನಿಗಳು ಭಾಗಿಯಾಗಲು ಉತ್ಸುಕವಾಗಿವೆ ಎಂದು ಹೇಳಿದರು. ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಭಾರತದ ಅಭ್ಯರ್ಥಿ ಆಗಿರುವ ನ್ಯಾ. ದಲ್ವೀರ್ ಭಂಡಾರಿ ಅವರ ಉಮೇದುದಾರಿಕೆಯನ್ನು ಅವರು ಬೆಂಬಲಿಸಿದರು. 2019-20ರ ಸಾಲಿಗೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ತಾತ್ಕಾಲಿಕ ಸ್ಥಾನಕ್ಕೆ ಬೆಲ್ಜಿಯಂ ಅನ್ನು ಭಾರತ ಬೆಂಬಲಿಸಿತ್ತು.
- ಉಭಯ ದೇಶಗಳ ನಡುವೆ 38 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದು ಪ್ರಸಕ್ತ ಇರುವ ಸಂಬಂಧಕ್ಕೆ ಇನ್ನಷ್ಚು ಬಲ ತುಂಬಲು ಉಭಯ ದೇಶಗಳು ಬಯಸುತ್ತಿರುವುದನ್ನು ಸೂಚಿಸುತ್ತಿದೆ. ಈ ಒಪ್ಪಂದಗಳು ಸ್ಮಾರ್ಟ್ ಸಿಟಿಯಿಂದ ಹಿಡಿದು ಶೈಕ್ಷಣಿಕ ಮತ್ತು ವ್ಯವಹಾರ ಸಹಕಾರದ ಬಗ್ಗೆ ಇದೆ. ಮುಂಬೈ ಮತ್ತು ದೆಹಲಿಯಲ್ಲಿ ಒಟ್ಟು 13 ಬ್ಯುಸಿನೆಸ್ ಸಮಾವೇಶಗಳನ್ನು ಆಯೋಜಿಸಲಾಗಿತ್ತು.
- ದೆಹಲಿಯಲ್ಲಿ ನಡೆದ ಸೆಮಿನಾರ್ ಗಳಲ್ಲಿ ವಿರಳ ಸಂಪನ್ಮೂಲಗಳ ಸಮರ್ಪಕ ಬಳಕೆ, ಎಲ್ಲರಿಗೂ ವೈಯಕ್ತಿಕ ಆರೋಗ್ಯ ಕಾಳಜಿ, ಅನ್ವೇಷಣೆ, ಕೈಗಾರಿಕೆ 0, ಸುಸ್ಥಿರತೆ ಮತ್ತು ವ್ಯಾಪಾರ; ವಿಜ್ಞಾನ & ತಂತ್ರಜ್ಞಾನ ಸಹಕಾರ, ಬೃಹತ್ ಕೈಗಾರಿಕೆ ಮತ್ತು ಆಹಾರ ಸಂಸ್ಕರಣೆಗೆ ಬೆಲ್ಜಿಯಂ ತಂತ್ರಜ್ಞಾನಗಳ ಬಗ್ಗೆ ಕೇಂದ್ರಿಕೃತಗೊಂಡಿತ್ತು. ಮುಂಬೈಯಲ್ಲಿ ನಡೆದ ಸೆಮಿನಾರ್ ನಲ್ಲಿ ವಜ್ರದ ವ್ಯಾಪಾರದಲ್ಲಿನ ಉತ್ತಮ ಪದ್ಧತಿಗಳು, ಸ್ಮಾರ್ಟ್ ಸಿಟಿ ಮತ್ತು ಕೈಗಾರಿಕೆಗಳಿಗೆ ಪರಿಹಾರ, ಜೀವ ವಿಜ್ಞಾನ ಮತ್ತು ಆರೋಗ್ಯ ಕಾಳಜಿ, ಡಿಜಿಟಲೀಕರಣ ಮತ್ತು ಭಾರತದಲ್ಲಿನ ಬ್ಯುಸಿನೆಸ್ ಅವಕಾಶಗಳನ್ನು ಶೋಧಿಸುವುದರತ್ತ ಗಮನ ಹರಿಸಿತ್ತು.
- ಮುಂಬೈಯಲ್ಲಿ, ದೊರೆ ಫಿಲೀಫ್ ವಜ್ರ ವ್ಯಾಪಾರಿಗಳೊಂದಿಗೆ ಗುಂಡು ಮೇಜಿನ ಸಭೆ ನಡೆಸಿದರು. 2008ರ ಭಯೋತ್ಪಾದಕರ ದಾಳಿಗೆ ಬಲಿಯಾದವರ ಸ್ಮಾರಕಕ್ಕೆ ಭೇಟಿ ನೀಡಿದರು.
- ಭಾರತ ಮತ್ತು ಬೆಲ್ಜಿಯಂ ನ ಸಂಬಂಧ 1947ರಷ್ಟು ಹಳೆಯದು. ಆಗ ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧ ಆರಂಭಿಸಿದ ಐರೋಪ್ಯ ದೇಶಗಳಲ್ಲಿ ಬೆಲ್ಜಿಯಂ ಕೂಡ ಒಂದು. ಅಂದಿನಿಂದ ಇಂದಿನವರೆಗೂ ಭಾರತ ಮತ್ತು ಬೆಲ್ಜಿಯಂ ಸಂಬಂಧ ಏರುಗತಿಯಲ್ಲಿದೆ.ವ ಎರಡು ಪ್ರಬುದ್ಧ ಪ್ರಜಾಪ್ರಭುತ್ವವಾದಿ ದೇಶಗಳು ಕಾನೂನಿಗೆ ಬದ್ಧವಾಗಿ, ಒಕ್ಕೂಟ ವ್ಯವಸ್ಥೆ ಮತ್ತು ವೈವಿಧ್ಯತೆಯನ್ನು ಹೊಂದಿದೆ. ಪರಸ್ಪರ ಆಸಕ್ತಿಯ ವಿಷಯಗಳಲ್ಲಿ ಭಾರತ ಮತ್ತು ಬೆಲ್ಜಿಯಂ ನಿಕಟ ಸಂಬಂಧ ಹೊಂದುವ ಬಯಕೆಯನ್ನು ಉಭಯ ದೇಶಗಳು ವ್ಯಕ್ತಪಡಿಸಿವೆ. ವ್ಯಾಪಾರ ಮತ್ತು ಹೂಡಿಕೆ ಇಂತಹ ಒಂದು ಕ್ಷೇತ್ರವಾಗಿದ್ದು ಉಭಯ ದೇಶಗಳಿಗೂ ಇದರಿಂದ ಲಾಭವಾಗಲಿದೆ.
- ಬೆಲ್ಜಿಯಂ ನ ರಾಜಕುಟುಂಬದ ಭಾರತ ಭೇಟಿಯೂ ಅತ್ಯಂತ ಸೂಕ್ತ ಸಮಯದಲ್ಲಿ ನಡೆದಿದೆ. ಉಭಯ ದೇಶಗಳು ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರಿ ಅವಕಾಶಗಳನ್ನು ಹೊಂದಿದೆ.ಈ ಅವಕಾಶಗಳ ಸದ್ಭಳಕೆ ಮಾಡಿಕೊಳ್ಳುವತ್ತ ಭಾರತ ಮತ್ತು ಬೆಲ್ಜಿಯಂ ಪ್ರಯತ್ನ ನಡೆಸಬೇಕಿದೆ.
6.ಸಿಟಿಸಿಆರ್ ಹಾಗೂ ಸೈಬರ್ ಮತ್ತು ಮಾಹಿತಿ ಭದ್ರತಾ ಪಡೆ-ಸಿಐಎಸ್ ಎಂಬ ಎರಡು ನೂತನ ಆಡಳಿತಾತ್ಮಕ ವಿಭಾಗಗಳನ್ನು ರಚಿಸಿದ ಕೇಂದ್ರ ಗೃಹ ಸಚಿವಾಲಯ
ಪ್ರಮುಖ ಸುದ್ದಿ
- ಹೆಚ್ಚುತ್ತಿರುವ ಭದ್ರತಾ ಸವಾಲುಗಳನ್ನು ನಿಭಾಯಿಸಲು ಕೇಂದ್ರ ಗೃಹ ಸಚಿವಾಲಯ ೨ ನೂತನ ವಿಭಾಗಗಳನ್ನು ರಚಿಸಿದೆ.
- ಭಯೋತ್ಪಾದನೆ ಮತ್ತು ತೀವ್ರವಾದ ಹತ್ತಿಕ್ಕುವ ವಿಭಾಗ -ಸಿಟಿಸಿಆರ್ ಹಾಗೂ ಸೈಬರ್ ಮತ್ತು ಮಾಹಿತಿ ಭದ್ರತಾ ಪಡೆ-ಸಿಐಎಸ್ ಎಂಬ ಈ ಎರಡು ಆಡಳಿತಾತ್ಮಕ ವಿಭಾಗಗಳನ್ನು ರಚಿಸಲಾಗಿದೆ.
- ಸಿಟಿಸಿಆರ್ ವಿಭಾಗ ಗೃಹ ಸಚಿವಾಲಯದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಹಲವು ವಿಭಾಗಗಳನ್ನು ಒಳಗೊಂಡಿದ್ದು, ಆಂತರಿಕ ಭದ್ರತೆ -೨ ವಿಭಾಗದ ನವೀಕೃತ ಆವೃತ್ತಿಯಾಗಿದೆ.
- ಸಿಐಎಸ್ ವಿಭಾಗವು ಆನ್ಲೈನ್ ಬೆದರಿಕೆ ಮತ್ತು ಸೈಬರ್ ಅಪರಾಧಗಳ ಬಗ್ಗೆ ಕಾರ್ಯನಿರ್ವಹಿಸಲಿದೆ. ಗೃಹ ಸಚಿವಾಲಯದ ನ್ಯಾಯಾಂಗ ವಿಭಾಗ ಹಾಗೂ ಕೇಂದ್ರ – ರಾಜ್ಯ ವಿಭಾಗಗಳನ್ನು ಅಂತಾರಾಷ್ಟ್ರೀಯ ಸಹಕಾರ ಮತ್ತು ಸಾರ್ವಜನಿಕ ದೂರುಗಳ ವಿಭಾಗಗಳಂತೆ ಸಮೀಕರಿಸಲಾಗಿದೆ.
- ಸಮಸ್ಯೆಗಳನ್ನು ಬೇರುಮಟ್ಟದಿಂದ ಹತ್ತಿಕ್ಕುವ ಬಗ್ಗೆ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಆಲೋಚನಾ ಕ್ರಮವಾಗಿ ಈ ನೂತನ ವಿಭಾಗಗಳನ್ನು ರಚಿಸಲಾಗಿದೆ.
- ಪ್ರಸ್ತುತ ಸಚಿವಾಲಯದ ೧೮ ವಿಭಾಗಗಳು ಮಂದುವರೆದಿದ್ದು ಇವುಗಳಿಗೆ ಜಂಟಿ-ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಮುಖ್ಯಸ್ಥರಾಗಿದ್ದಾರೆ.