14th NOVEMBER- THE HINDU EDITORIAL

 

ನಮ್ಮ ಐಎಎಸ್ ಅಕಾಡೆಮಿಯ ಸಂಪಾದಕೀಯ ಒಳನೋಟ

 

ಭಾರತದಲ್ಲಿ  ಇಸ್ಲಾಮಿಕ್ ಬ್ಯಾಂಕಿಂಗ್ ಗೆ ಅವಕಾಶವಿಲ್ಲ: ಆರ್ ಬಿ ಐ

 ( Not to pursue Islamic banking: RBI)

SOURCE-THE HINDU-http://www.thehindubusinessline.com/money-and-banking/not-to-pursue-islamic-banking-rbi/article9954809.ece

 

ಸಂದರ್ಭ:

  • ದೇಶದಲ್ಲಿ ಇಸ್ಲಾಮಿಕ್‌ ಬ್ಯಾಂಕಿಂಗ್‌ ಆರಂಭಿಸುವ ಪ್ರಸ್ತಾವವನ್ನು ಮುಂದುವರಿಸದಿರಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಮಹತ್ವದ ನಿರ್ಧಾರ ಕೈಗೊಂಡಿದೆ.

 

ಸುದ್ದಿಯಲ್ಲಿರುವುದೇಕೆ  ?

 

  • ಇಸ್ಲಾಮಿಕ್ ಬ್ಯಾಂಕಿಂಗ್ ಅನ್ನು ಭಾರತದಲ್ಲಿ ಪರಿಚಯಿಸಲಾಗುವುದಿಲ್ಲ.
  • ದೇಶದಲ್ಲಿ ಬ್ಯಾಂಕಿಂಗ್‌ ಮತ್ತು ಹಣಕಾಸು ಸೇವೆಗಳನ್ನು ಪಡೆಯಲು ಎಲ್ಲ ನಾಗರಿಕರಿಗೂ ಸಾಕಷ್ಟು ಹಾಗೂ ಸಮಾನ ಅವಕಾಶಗಳು ಲಭ್ಯವಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
  • ಭಾರತದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್ ಅನ್ನು ಪರಿಚಯಿಸುವ ಬಗ್ಗೆ ಆರ್ಬಿಐ ಮತ್ತು ಭಾರತ ಸರ್ಕಾರವು ಪರಿಶೀಲಿಸಿತು.
  • ಭಾರತದಲ್ಲಿ ಆಸಕ್ತಿ ಮುಕ್ತ ಬ್ಯಾಂಕಿಂಗ್ ಅನ್ನು ಪರಿಚಯಿಸುವ ಸಲುವಾಗಿ ಆರ್ಬಿಐ ಕಾನೂನು, ತಾಂತ್ರಿಕ ಮತ್ತು ನಿಯಂತ್ರಕ ಸಮಸ್ಯೆಗಳನ್ನು ಪರಿಶೀಲಿಸಿದೆ.

 

ಏನಿದು ಇಸ್ಲಾಮಿಕ್‌ ಬ್ಯಾಂಕಿಂಗ್‌?

  • ಬಡ್ಡಿ ವಿಧಿಸದ ತತ್ವ ಆಧರಿಸಿದ ಹಣಕಾಸು ವ್ಯವಸ್ಥೆ ಇದಾಗಿದೆ. ಇಸ್ಲಾಂ ಧರ್ಮದಲ್ಲಿ ಬಡ್ಡಿ ವಸೂಲಿ ನಿಷೇಧಿಸಲಾಗಿದೆ. ಇದಕ್ಕೆ ಇಸ್ಲಾಮಿಕ್‌ ಅಥವಾ ಷರಿಯಾ ಬ್ಯಾಂಕಿಂಗ್‌ ವ್ಯವಸ್ಥೆ ಎನ್ನುತ್ತಾರೆ.
  • ಇದರ ನಿಯಮಗಳಿರುವುದು ಶರಿಯತ್ ಕಾನೂನಿನಂತೆ. ಇದು ಗ್ರಾಹಕರು ನೀಡಿದ ಠೇವಣಿಗೆ ಬಡ್ಡಿ ನೀಡುವುದಿಲ್ಲ. ಇದು ತನಗೆ ಬರುವ ಠೇವಣಿಯಿಂದ ಸ್ಥಿರಾಸ್ಥಿಗಳನ್ನು ಖರೀದಿಸುತ್ತದೆ. ಮನೆಗಳು, ವಾಣಿಜ್ಯ- ವ್ಯಾಪಾರ ಸಮುಚ್ಚಯಗಳು, ನಿವೇಶನಗಳ ಮೇಲೆ ಇದು ಹೂಡಿಕೆ ಮಾಡುತ್ತದೆ. ಮತ್ತು ಈ ಸ್ಥಿರಾಸ್ಥಿಗಳನ್ನು ಮಾರಾಟ ಮಾಡಿ ಅದರಿಂದ ಬರುವ ಲಾಭವನ್ನು ತನ್ನ ಗ್ರಾಹಕನಿಗೆ ಹಂಚುತ್ತದೆ.

 

  • ಒಬ್ಬ ಗ್ರಾಹಕ ಮನೆ ಖರೀದಿಗೆ ಸಾಲಕ್ಕಾಗಿ ಇಸ್ಲಾಮಿಕ್ ಬ್ಯಾಂಕಿಗೆ ಅರ್ಜಿ ಸಲ್ಲಿಸಿದ ಎಂದಿಟ್ಟುಕೊಳ್ಳೋಣ. ಆಗ ಈ ಬ್ಯಾಂಕ್ ಹಣದ ಬದಲು ಆತನ ಆಸಕ್ತಿಯ ಮನೆಯನ್ನೇ ಖರೀದಿಸಿಕೊಡುತ್ತದೆ. ಆ ಮನೆಯ ಮೌಲ್ಯ ೧೦ಲಕ್ಷವಾಗಿದ್ದಲ್ಲಿ, ಆತನಿಗೆ ಕಂತಿನಲ್ಲಿ ಮರುಪಾವತಿ ಮಾಡಲು ೧೫ರಿಂದ ೨೦ ವರ್ಷಗಳ ಅವಧಿಯಲ್ಲಿ ಬ್ಯಾಂಕ್ ನಿಗದಿಪಡಿಸಿದ ಕಂತಿನಿಂದ ೨೦ರಿಂದ ೨೨ ಲಕ್ಷ ವಸೂಲಿಯಾಗುತ್ತದೆ. ಮೊದಲೇ ವಿವಿಧ ರೀತಿಯ ಮನೆ ಹಾಗೂ ನಿವೇಶನಗಳನ್ನು ಕರೀದಿಸಿಡುವ ಬ್ಯಾಂಕ್ ಗ್ರಾಹಕರಿಗೆ ಈ ರೀತಿ ನೀಡಿ ವಾಮಮಾರ್ಗದಲ್ಲಿ ಬಡ್ಡಿ ಪಡೆಯುತ್ತದೆ.

 

  • ಮುದರಾಬಾ (ಲಾಭ ಮತ್ತು ನಷ್ಟ ಹಂಚಿಕೆ), ವಾಡಿಯಾ (ಸುರಕ್ಷಿತರಕ್ಷಣೆ), ಮುಶರಕಾ (ಜಂಟಿ ಉದ್ಯಮ), ಮುರಾಬಾಹಹ್ (ವೆಚ್ಚ ) ಮತ್ತು ಐಜರ್ (ಗುತ್ತಿಗೆ) ಇವು ಇಸ್ಲಾಮಿಕ್ ಬ್ಯಾಂಕಿಂಗ್ / ಹಣಕಾಸು ವಿಧಾನಗಳಲ್ಲಿ ಕೆಲವುಗಳು

 

ಇದರ ಉದ್ದೇಶಗಳು:

 

  • ಮುಸ್ಲಿಮ್ ಧರ್ಮೀಯರಿಗೆ ಬಡ್ಡಿ ರಹಿತ ಸಾಲ ನೀಡಲು ಮುಂದಾಗಿತ್ತು. ಈ ಮೂಲಕ ಧಾರ್ಮಿಕ ಕಾರಣಗಳಿಗೆ ಬ್ಯಾಂಕಿಂಗ್ ಕ್ಷೇತ್ರದಿಂದ ದೂರವೇ ಉಳಿದ ಜನರನ್ನು ಬ್ಯಾಂಕಿಂಗ್ ಕ್ಷೇತ್ರದತ್ತ ಆಕರ್ಷಿಸುವುದು ರಿಸರ್ವ್ ಬ್ಯಾಂಕಿನ ಯೋಜನೆಯಾಗಿತ್ತು

 

  • ಬಡ್ಡಿ ವ್ಯವಹಾರ ನಿಷೇಧಿಸಿರುವ ಇಸ್ಲಾಂ ಧರ್ಮದ ತತ್ವಗಳ ಆಧಾರದಲ್ಲಿ ನಡೆಯುವ ‘ಇಸ್ಲಾಮಿಕ್‌ ಬ್ಯಾಂಕಿಂಗ್‌’ ಅಥವಾ ‘ಷರಿಯಾ ಬ್ಯಾಂಕಿಂಗ್‌’ ನಿಯಮಗಳ ಮಾದರಿಯಲ್ಲಿಯೇ ಬಡ್ಡಿರಹಿತ ಬ್ಯಾಂಕಿಂಗ್‌ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ. ಸಾಲಕ್ಕೆ ಬಡ್ಡಿ ವಸೂಲಿ ಮಾಡುವುದನ್ನು ಇಸ್ಲಾಂ ಧರ್ಮದಲ್ಲಿ ನಿಷೇಧಿಸಲಾಗಿದೆ.
  • ಜೆಡ್ಡಾ ಮೂಲದ ಇಸ್ಲಾಮಿಕ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ (ಐಡಿಬಿ) ಅಹಮದಾಬಾದ್‌ನಲ್ಲಿ ಭಾರತದ ತನ್ನ ಮೊದಲ ಶಾಖೆ ಆರಂಭಿಸುವುದಾಗಿ ಈ ವರ್ಷದ ಆರಂಭದಲ್ಲಿ ಘೋಷಿಸಿತ್ತು.

ಇಸ್ಲಾಮಿಕ್ ಬ್ಯಾಂಕಿಂಗ್ ನ  ಅನುಕೂಲಗಳು ಯಾವುವು?

 

  • ಬ್ಯಾಂಕುಗಳಲ್ಲಿ ಪ್ರತ್ಯೇಕ ಇಸ್ಲಾಮಿಕ್ ಗವಾಕ್ಷಿ ಯನ್ನು ಪರಿಚಯಿಸುವಲ್ಲಿ ಅನೇಕ ಅನುಕೂಲಗಳಿವೆ:
  • ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಬಹುಪಾಲು ಕಂಪನಿಗಳು ಷರಿಯಾಟ್ ಕಾಂಪ್ಲೆಂಟ್ (ಈ ಸಂಖ್ಯೆ ಮಲೇಶಿಯಾದಲ್ಲಿನ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಹೆಚ್ಚು), ಇದರಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ   ದೊಡ್ಡ ಹಣವನ್ನು ಆಕರ್ಷಿಸುತ್ತದೆ.
  • ಭಾರತವು ಪಶ್ಚಿಮ ಏಷ್ಯಾದಿಂದ ಮತ್ತು ಶರಿಯಟ್-ಕಂಪ್ಲೈಂಟ್ ಯೋಜನೆಗಳಲ್ಲಿ ಮಾತ್ರ ಹೂಡಿಕೆದಾರರಿಂದ ದೊಡ್ಡ ಹೂಡಿಕೆಗಳನ್ನು ಆಕರ್ಷಿಸಲು ಸಾಧ್ಯವಾಗುತ್ತದೆ.
  • ಇಸ್ಲಾಮಿಕ್ ಬ್ಯಾಂಕಿಂಗ್ ವಿಂಡೋ ಮುಸ್ಲಿಂ ಸಮುದಾಯದಿಂದ ಯೋಜನೆಗಳಲ್ಲಿ ಹೂಡಿಕೆ ಮಾಡಲು ಅನೇಕರನ್ನು ಪ್ರೋತ್ಸಾಹಿಸುತ್ತದೆ.

 

ಇದನ್ನು ಜಾರಿಗೆ ತರಲು ಕೈಗೊಂಡ ಕ್ರಮಗಳೇನು ?

  • ಹಣಕಾಸು ವಲಯದ ಸುಧಾರಣೆಗಳಿಗೆ ಸಂಬಂಧಿಸಿದಂತೆ 2008ರಲ್ಲಿ ರಘುರಾಂ ರಾಜನ್‌ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ದೇಶದಲ್ಲಿ ಬಡ್ಡಿ ದರ ರಹಿತ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿಗೆ ತರುವ ಅಗತ್ಯ ಇದೆ ಎಂದು ಸಮಿತಿ ಅಭಿಪ್ರಾಯಪಟ್ಟಿತ್ತು.

 

  • ಕೆಲ ನಂಬಿಕೆಗಳ ಪ್ರಕಾರ, ಬಡ್ಡಿ ಪಾವತಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಬಡ್ಡಿ ರಹಿತ ಬ್ಯಾಂಕಿಂಗ್‌ ಸೌಲಭ್ಯಗಳು ಇಲ್ಲದ ಕಾರಣಕ್ಕೆ ಆರ್ಥಿಕವಾಗಿ ಹಿಂದುಳಿದವರೂ ಬ್ಯಾಂಕಿಂಗ್‌ ಸೇವೆಗಳಿಂದ ವಂಚಿತರಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

 

  • ಆನಂತರ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಆರ್‌ಬಿಐ ಇನ್ನೊಂದು ಸಮಿತಿ ರಚಿಸಿತ್ತು. ಬಡ್ಡಿ ರಹಿತ ಬ್ಯಾಂಕಿಂಗ್‌ ಸೇವೆ ಜಾರಿಗೆ ತರುವುದರ ಕಾನೂನು, ತಾಂತ್ರಿಕ ಮತ್ತು ನಿಯಂತ್ರಣ ವಿಷಯಗಳನ್ನು ಪರಿಶೀಲಿಸಿ ವರದಿ ನೀಡಲು ಈ ಸಮಿತಿಗೆ ಸೂಚಿಸಲಾಗಿತ್ತು.

 

  • ಇಸ್ಲಾಮಿಕ್‌ ಬ್ಯಾಂಕಿಂಗ್‌ ವ್ಯವಸ್ಥೆಯು ಸಾಂಪ್ರದಾಯಿಕ ಬ್ಯಾಂಕಿಂಗ್‌ಗಿಂತ ಭಿನ್ನವಾದ ಹಣಕಾಸು ವ್ಯವಸ್ಥೆಯಾಗಿದೆ. ವಿವಿಧ ನಿಯಂತ್ರಣ ಕ್ರಮ, ಮೇಲ್ವಿಚಾರಣೆಯ ಸವಾಲುಗಳ್ನೂ ಈ ವ್ಯವಸ್ಥೆ ಒಳಗೊಂಡಿವೆ.

 

  • ದೇಶಿ ಬ್ಯಾಂಕ್‌ಗಳು ಈ ವ್ಯವಸ್ಥೆ ಬಗ್ಗೆ ಯಾವುದೇ ಅನುಭವ ಹೊಂದಿಲ್ಲ. ಹಂತ ಹಂತವಾಗಿ ಇಸ್ಲಾಮಿಕ್‌ ಬ್ಯಾಂಕಿಂಗ್‌ ಜಾರಿಗೆ ತರಬಹುದು ಎಂದು ಸಮಿತಿ ತನ್ನ ಅಭಿಪ್ರಾಯ ತಿಳಿಸಿತ್ತು.

 

  • ಎಲ್ಲರನ್ನೂ ಬ್ಯಾಂಕಿಂಗ್‌ ವ್ಯವಸ್ಥೆಯ ವ್ಯಾಪ್ತಿಗೆ ತರಲು (ಆರ್ಥಿಕ ಸೇರ್ಪಡೆ) ಬಡ್ಡಿ ರಹಿತ ಬ್ಯಾಂಕಿಂಗ್‌ ಸೇವೆ ಅಗತ್ಯವಾಗಿದೆ. ಬಡ್ಡಿ ರಹಿತ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಪಡೆಯುವ ಹಣಕಾಸು ನೆರವನ್ನು ಇತರ ಹಣಕಾಸು ಸೌಲಭ್ಯಗಳ ಜತೆ ಸೇರ್ಪಡೆ ಮಾಡುವಂತಿರಲಿಲ್ಲ. ಹೀಗಾಗಿ ಈ ಬ್ಯಾಂಕಿಂಗ್‌ ಸೇವೆಯನ್ನು ಪ್ರತ್ಯೇಕವಾಗಿಯೇ ನಿರ್ವಹಿಸಬೇಕಾಗುತ್ತದೆ ಎಂದೂ ವರದಿಯಲ್ಲಿ ಹೇಳಲಾಗಿತ್ತು.

 

ಭಾರತದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್ ನಿಂದ ಬೀರುವ  ಪರಿಣಾಮಗಳು ಯಾವುವು?

 

  • ಭಾರತವು ಜಾತ್ಯತೀತ ರಾಷ್ಟ್ರ . ಹಾಗಾಗಿ ಧರ್ಮದ ಹೆಸರಿನೊಂದಿಗೆ ಯಾವುದೇ ಹಣಕಾಸು ಸಂಸ್ಥೆಯನ್ನು ತೆರೆಯುವುದರಿಂದ ಇತರ ಧಾರ್ಮಿಕ ಗುಂಪುಗಳ ನಡುವೆ ಪ್ರಶ್ನೆಯನ್ನು ಹೆಚ್ಚಿಸಬಹುದು.
  • ಷರಿಯಾ ಬ್ಯಾಂಕಿಂಗ್ನಲ್ಲಿ ತರಬೇತಿ ಪಡೆದವರ ಸಾಕಷ್ಟುಮಾನವಶಕ್ತಿ ಕೊರತೆಯಿದೆ.
  • ಭಾರತದಲ್ಲಿನ ಪ್ರಸ್ತುತ ಬ್ಯಾಂಕಿಂಗ್ ನಿಯಮಗಳು ಮತ್ತು ನಿಬಂಧನೆಗಳು ಭಾರತದಲ್ಲಿ ಇಸ್ಲಾಮಿಕ್ ಹಣಕಾಸು ಕಾರ್ಯಾಚರಣೆಗೆ ಸಂಪೂರ್ಣ ಹಣಕಾಸು ಸೇರ್ಪಡೆ ಸಾಧಿಸುವಲ್ಲಿ ಅಡಚಣೆಯನ್ನು ಸೃಷ್ಟಿಸಲು ಅನುಮತಿಸುವುದಿಲ್ಲ.
  • ಬ್ಯಾಂಕಿಂಗ್ ರೆಗ್ಯುಲೇಷನ್ ಆಕ್ಟ್ ನ ಸೆಕ್ಷನ್ 8, ಬ್ಯಾಂಕಿಂಗ್ ಕಂಪೆನಿಯು ಸರಕುಗಳ ಮಾರಾಟ ಅಥವಾ ಖರೀದಿಸುವ ಅಥವಾ ವಿನಿಮಯ ಮಾಡುವಲ್ಲಿ ವ್ಯವಹರಿಸುವುದಿಲ್ಲ ಎಂದು ಆದೇಶಿಸುತ್ತದೆ, ಇದು ಭಾರತದಲ್ಲಿ ಮುರಾಭಾದಂತಹ ಶರಿಯಾ-ಕಂಪ್ಲೈಂಟ್ ವಿನ್ಯಾಸಗಳಲ್ಲಿ ಪ್ರಚಲಿತವಾಗಿದೆ.
  • ಇಸ್ಲಾಮಿಕ್ ಬ್ಯಾಂಕಿಂಗ್ ಭಯೋತ್ಪಾದಕ ನಿಧಿಯ ಪ್ರವೇಶಕ್ಕಾಗಿ ದಾರಿ ಮಾಡಿಕೊಡಬಹುದು.
Share