ನಮ್ಮ ಐಎಎಸ್ ಅಕಾಡೆಮಿ ಸಂಪಾದಕೀಯ ಒಳನೋಟ
ಡಬ್ಲ್ಯುಟಿಒ ಆಹಾರ ಭದ್ರತೆ ಕುರಿತ ಮಾತುಕತೆ ವಿಫಲ
(WTO meet ends without consensus)
SOURCE-THE HINDU- http://www.thehindu.com/business/wto-meet-ends-without-consensus/article21665445.ece
ಸನ್ನಿವೇಶ
- ಇತ್ತೀಚೆಗೆ ಬ್ಯುನೋಸ್ ಏರ್ಸ್ ನಲ್ಲಿ ನಡೆದ ವಿಶ್ವ ವ್ಯಾಪಾರ ಸಂಘಟನೆಯ ಆಹಾರ ಭದ್ರತೆ ಕುರಿತ ಮಾತುಕತೆ ಮುರಿದುಬಿದ್ದಿದೆ. ಡಬ್ಲ್ಯುಟಿಒ 164 ಸದಸ್ಯ ರಾಷ್ಟ್ರಗಳ, 11ನೇ ಸಚಿವರುಗಳ ಮಟ್ಟದ, 4 ದಿನಗಳ ಸಭೆಯು ಯಾವುದೇ ನಿರ್ಣಯವಿಲ್ಲದೆ ಮುಕ್ತಾಯವಾಗಿದೆ.
- ಅಮೆರಿಕವು ಸಾರ್ವಜನಿಕ ಆಹಾರ ದಾಸ್ತಾನು ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಬಿಗಿಪಟ್ಟು ಹಿಡಿದಿದ್ದರಿಂದ, ಸಭೆಯು ಯಾವುದೇ ನಿರ್ಣಯವಿಲ್ಲದೆ ಮುಕ್ತಾಯವಾಯಿತು.
ಆಹಾರ ಭದ್ರತೆ ಎಂದರೇನು?
- ಆಹಾರ ಭದ್ರತೆಯು ಒಂದು ಪ್ರಮುಖ ಅಂತರರಾಷ್ಟ್ರೀಯ ವಿಷಯವಾಗಿದ್ದು ಅದು ತೀವ್ರವಾದ ಚರ್ಚೆಗೆ ಕಾರಣವಾಗುತ್ತದೆ.
- ಇದು ಆಹಾರದ ಲಭ್ಯತೆ ಮತ್ತು ಅದರ ಬಳಕೆಯನ್ನು ಸೂಚಿಸುತ್ತದೆ.
- ಶಾಶ್ವತವಾದ ಆಹಾರ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು, ವ್ಯಾಪಾರಕ್ಕೆ ಸಂಬಂಧವಿಲ್ಲದ ವಿವಿಧ ವ್ಯಾಪ್ತಿಯ ವಿವಿಧ ನೀತಿಗಳನ್ನು ತರುವ ಅಗತ್ಯವಿದೆ.
ಆಹಾರ ಭದ್ರತೆಯ ಮೂರು ಮುಖ್ಯ ಅಂಶಗಳು ಯಾವುವು?
1.ಆಹಾರದ ಲಭ್ಯತೆ:(Food availability)
- ಆಹಾರವು ಸಾಕಷ್ಟು ಪ್ರಮಾಣದಲ್ಲಿ ಮತ್ತು ಸ್ಥಿರವಾದ ಆಧಾರದಲ್ಲಿ ಲಭ್ಯವಿರಬೇಕು.
- ಇದು ನಿರ್ದಿಷ್ಟ ಪ್ರದೇಶದಲ್ಲಿ ಸಂಗ್ರಹಣೆ ಮತ್ತು ಉತ್ಪಾದನೆಯನ್ನು ಪರಿಗಣಿಸುತ್ತದೆ ಮತ್ತು ವ್ಯಾಪಾರ ಅಥವಾ ಸಹಾಯದ ಮೂಲಕ ಆಹಾರವನ್ನು ಬೇರೆಡೆಯಿಂದ ತರುವ ಸಾಮರ್ಥ್ಯವನ್ನು ಸಹ ಹೊಂದಿರುತ್ತದೆ.
2.ಆಹಾರದ ಪ್ರವೇಶ/ ಸಾಮರ್ಥ್ಯ ( Food access)
- ಜನರು ಸಾಕಷ್ಟು ಪ್ರಮಾಣದಲ್ಲಿ ಆಹಾರವನ್ನು ನಿಯಮಿತವಾಗಿ ಖರೀದಿಸುವ ಮೂಲಕ ಉತ್ಪಾದಿಸುವ ಮೂಲಕ,ಉಡುಗೊರೆಗಳ ಮೂಲಕ ಅಥವಾ ಎರವಲು ಪಡೆದುಕೊಳ್ಳ್ಳುವಂತಿರಬೇಕು.
3.ಆಹಾರದ ಬಳಕೆ(Food utilization)
- ಸೇವಿಸಿದ ಆಹಾರ ಜನರಿಗೆ ಸಕಾರಾತ್ಮಕ ಪೌಷ್ಟಿಕಾಂಶವನ್ನು ಒದಗಿಸುವ ಪ್ರಭಾವವನ್ನು ಹೊಂದಿರಬೇಕು. ಇದು ಅಡುಗೆ, ಸಂಗ್ರಹಣೆ ಮತ್ತು ನೈರ್ಮಲ್ಯ ಅಭ್ಯಾಸಗಳು, ವ್ಯಕ್ತಿಯ ಆರೋಗ್ಯ, ನೀರು ಮತ್ತು ನಿರ್ಮಲೀಕರಣಗಳನ್ನು ಒಳಗೊಳ್ಳುತ್ತದೆ.
ಆಹಾರ ಭದ್ರತೆಯನ್ನು ಹೇಗೆ ಸಾಧಿಸಬಹುದು ?
- ಆಹಾರ ಭದ್ರತೆಯನ್ನು ಸಾಧಿಸುವ ಜವಾಬ್ದಾರಿಯು ರಾಷ್ಟ್ರೀಯ ಮಟ್ಟದಲ್ಲಿರುತ್ತದೆ .
- ಇದನ್ನು ಸಾಧಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಬಹುದು ಅವುಗಳಲ್ಲಿ ಪ್ರಮುಖ ವಾದವುಗಳೆಂದರೆ
- ಸರಿಯಾದ ಅನುಷ್ಠಾನಗೊಳಿಸುವಂತಹ ನೀತಿಗಳನ್ನು ನೀರಾವರಿ ನೀತಿಗಳು, ಪೌಷ್ಟಿಕಾಂಶ ನೀತಿಗಳು, ರಸಗೊಬ್ಬರ ಮತ್ತು ಕ್ರೆಡಿಟ್ ಪ್ರವೇಶ, ಮತ್ತು ಅಭಿವೃದ್ಧಿ ಕಾರ್ಯನೀತಿಗಳು ಸೇರಿದಂತೆ ಮುಂತಾದ ನೀತಿಗಳು-ನೀರಾವರಿ ನೀತಿಗಳು, ಪೌಷ್ಟಿಕಾಂಶ ನೀತಿಗಳು, ರಸಗೊಬ್ಬರ ಮತ್ತು ಕ್ರೆಡಿಟ್ ಪ್ರವೇಶ, ಮತ್ತು ಅಭಿವೃದ್ಧಿ ಕಾರ್ಯನೀತಿಗಳು ಸೇರಿದಂತೆ ಮುಂತಾದ ನೀತಿಗಳನ್ನು ಅಳವಡಿಸಿಕೊಳ್ಳುವುದರಿಂದ
- ವ್ಯಾಪಾರದ ಮೂಲಕ
- ಸಾರ್ವಜನಿಕ ಷೇರು ಸಂಗ್ರಹಣೆಯಾ ಮೂಲಕ
ಆಹಾರ ಭದ್ರತೆಯನ್ನು ಸಾಧಿಸುವಲ್ಲಿ ವಿಶ್ವ ವ್ಯಾಪಾರ ಸಂಘಟನೆಯ ಪಾತ್ರವೇನು ?
1.ಕೃಷಿ ಸಮಿತಿ:
- ಡಬ್ಲ್ಯುಟಿಒ ದಲ್ಲಿ ಆಹಾರ ಭದ್ರತೆಯ ಕುರಿತು ಕೃಷಿ ಸಮಿತಿಯು ಕ್ರಮಕೈಗೊಳ್ಳುತ್ತದೆ ಜೊತೆಗೆ ಕೃಷಿ ಒಪ್ಪಂದದ ಅನುಷ್ಠಾನವನ್ನು ಸಹ ನೋಡಿಕೊಳ್ಳುತ್ತದೆ.
- ಅದರ ಪ್ರಮುಖ ಜವಾಬ್ದಾರಿ ಡಬ್ಲ್ಯುಟಿಒ ಸದಸ್ಯರು ತಮ್ಮ ಬದ್ಧತೆಗಳನ್ನು ಹೇಗೆ ಅನುಸರಿಸುತ್ತಿದ್ದಾರೆ ಎಂಬುದನ್ನು ಮೇಲ್ವಿಚಾರಣೆ ಮಾಡುವುದು.
2.ಕೃಷಿ ಮಾರುಕಟ್ಟೆ ಮಾಹಿತಿ ವ್ಯವಸ್ಥೆ (AMIS-Agricultural Market Information System)
- ಕೃಷಿ ಮಾರುಕಟ್ಟೆ ಮಾಹಿತಿ ವ್ಯವಸ್ಥೆಗೆ ಪರಣಿತರನ್ನು ನೀಡುವ ಜವಾಬ್ದಾರಿ ಡಬ್ಲ್ಯೂ ಟಿ ಓ ಮೇಲಿದೆ. ಅದು ಯುನೈಟೆಡ್ ನೇಷನ್ಸ್ ಹೈ ಲೆವೆಲ್ ಟಾಸ್ಕ್ ಫೋರ್ಸ್ ನ ಆಧಾರದ ಮೇಲೆ ಶಿಫಾರಸನ್ನು ಮಾಡುತ್ತದೆ.
ಆಹಾರ ಭದ್ರತೆ ಕುರಿತ ಮಾತುಕತೆ ಏಕೆ ವಿಫಲವಾಯಿತು ?ಭಾರತದ ನಿಲುವುವೇನು ?
- ಎರಡನೇ ವಿಶ್ವ ಯುದ್ಧದ ನಂತರ ವ್ಯಾಪಾರ ಸಂಸ್ಥೆಗಳಾದ ಜನರಲ್ ಅಗ್ರೀಮೆಂಟ್ ಆನ್ ಟ್ರೇಡ ಅಂಡ್ ಟಾರಿಫ್ (ಗ್ಯಾಟ್), ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ)ಗಳು ಅಭಿವೃದ್ಧಿ ಹೊಂದಿದ ದೇಶಗಳ ಎಜೆಂಡಾಗಳನ್ನೇ ಉತ್ತೇಜಿಸಿದವು.
- ಅಭಿವೃದ್ಧಿ ಹೊಂದುತ್ತಿರುವ ದೇಶಗಳಾದ ಭಾರತ, ಚೀನಾಗಳು ಮುಂದಿಟ್ಟ ಆಹಾರ ಭದ್ರತೆ ಕಾರ್ಯಕ್ರಮಗಳನ್ನು ಅಭಿವೃದ್ಧಿ ಹೊಂದಿದ ದೇಶಗಳು ಒಪ್ಪದಿದ್ದ ಕಾರಣ ಈ ಪ್ರಸ್ತಾವಗಳು ಮೂಲೆಗೆ ಬಿದ್ದವು.
- ಅಭಿವೃದ್ಧಿ ಸೂಚ್ಯಂಕದ ಪಟ್ಟಿಯಲ್ಲಿ ಕೆಳ ಸ್ಥಾನಗಳಲ್ಲಿರುವ ದೇಶಗಳ ಹಸಿವು ಹಾಗೂ ಅಪೌಷ್ಠಿಕತೆ ಸಮಸ್ಯೆ ನಿವಾರಿಸುವ ಬಗ್ಗೆ ಚರ್ಚಿಸುವ ಅಜೆಂಡಾ ರೂಪಿಸಲಾಗಿತ್ತು. ಆದರೆ ಇದು ಯಶಸ್ಸು ಕಾಣಲಿಲ್ಲ.
- ವಿಶ್ವದ ಪ್ರಮುಖ ವ್ಯಾಪಾರ ಸಂಸ್ಥೆಗಳು ಅಭಿವೃದ್ಧಿಯನ್ನು ಪ್ರಮುಖ ಅಜೆಂಡಾವನ್ನಾಗಿ ಪರಿಗಣಿಸಬೇಕು. ಇಲ್ಲವಾದಲ್ಲಿ ಅವುಗಳು ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತವೆ. ಅಭಿವೃದ್ಧಿ ಪರ ಥೀಮ್ ಗಳನ್ನು ನಿರ್ಲಕ್ಷಿಸುವ ಅಭಿವೃದ್ಧಿ ಹೊಂದಿದ ದೇಶಗಳ ಧೋರಣೆ ಸಲ್ಲದು. ದೊಹಾ ರೌಂಡ್ ನ್ನು ಅಭಿವೃದ್ಧಿಯನ್ನೇ ಆದ್ಯತೆಯನ್ನಾಗಿಸಿ ರೂಪಿಸಲಾಗಿತ್ತು. ಮೂಲಭೂತ ಅವಶ್ಯಕತೆಗಳನ್ನು ದೇಶಗಳಿಗೆ ಒದಗಿಸುವ ವಿಚಾರಗಳಲ್ಲಿ ಪ್ರಶ್ನೆಗಳೇಳುವಂತೆ ಮಾಡಬಾರದು.
- ಅಸ್ತಿತ್ವದಲ್ಲಿರುವ ವಿಶ್ವ ವ್ಯಾಪಾರ ನಿಯಮಗಳ ಅಡಿಯಲ್ಲಿ, ಡಬ್ಲ್ಯುಟಿಒ ಸದಸ್ಯ ದೇಶದ ಆಹಾರ ಸಬ್ಸಿಡಿ ಮಸೂದೆಯು 10% ಮೌಲ್ಯದ ಮಿತಿಯನ್ನು ದಾಟಬಾರದು. ಆದರೆ ಇದು ಉದ್ದೇಶಗಳ ಈಡೇರಿಕೆಗೆ ಪೂರಕವಾಗಿಲ್ಲ. ಏಕೆಂದರೆ ಭಾರತ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ, 2013ರ ಅಡಿಯಲ್ಲಿ 600 ಮಿಲಿಯನ್ ಜನರಿಗೆ ಕಡಿಮೆ ಬೆಲೆಯಲ್ಲಿ ಒದಗಿಸಲು ಶ್ರಮಿಸುತ್ತಿದೆ. ಆಹಾರ ಭದ್ರತೆಗೆ ಸಂಬಂಧಿಸಿದಂತೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಭಾರತ ಒತ್ತಾಯ ಹೇರುತ್ತಲೇ ಇದೆ.
- ಕೃಷಿ ವಿಷಯದಲ್ಲಿ ಸಾಕಷ್ಟು ತಿದ್ದುಪಡಿಗಳನ್ನು ತರಬೇಕು ಎಂದೂ ಹೇಳಿದೆ. ಸಾರ್ವಜನಿಕ ಸ್ಟಾಕ್ ಹೋಲ್ಡಿಂಗ್ ಯೋಜನೆಗಳು ವ್ಯಾಪಾರಗಳ ಮೇಲೆ ಪರಿಣಾಮ ಬೀರಿ ಆ ಮೂಲಕ ಇತರೆ ದೇಶಗಳ ಆಹಾರ ಭದ್ರತೆ ಮೇಲೆ ಹಾನಿ ಉಂಟು ಮಾಡಬಾರದು ಎಂಬುದು ಭಾರತದ ಕಳಕಳಿ.
- ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜಾಗತಿಕ ವ್ಯಾಪಾರದ ಕ್ರಮದಲ್ಲಿ ಅಸ್ಪಷ್ಟತೆ ಇದೆ. ಅನೇಕ ಅಭಿವೃದ್ಧಿ ಹೊಂದಿದ ದೇಶಗಳು ದೀರ್ಘಾವಧಿಯವರೆಗೆ ವ್ಯಾಪಾರ ವಿರೂಪಗೊಳಿಸುವ ಕೃಷಿ ಸಬ್ಸಿಡಿಯನ್ನು ಒದಗಿಸಿವೆ. ಪಾಶ್ಚಿಮಾತ್ಯ ಕೃಷಿ ಮಾರುಕಟ್ಟೆಗಳಿಗೆ ಮೂರನೇ ವಿಶ್ವದ ರೈತರ ಪ್ರವೇಶವನ್ನು ನಿರಾಕರಿಸಲಾಗಿದೆ.
- ಸಾರ್ವಜನಿಕ ಆಹಾರ ಸ್ಟಾಕ್ಹೋಲ್ಡಿಂಗ್ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕಂಡುಹಿಡಿಯುವ ಅಗತ್ಯಕ್ಕೆ ಮುಂಚೆಯೇ ಒಪ್ಪಿಗೆ ನೀಡಲಾಗಿದೆ. ಆದರೆ ಕೆಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ನಿರ್ಧಾರವು ಇದಕ್ಕೆ ವಿರುದ್ಧವಾಗಿರುವುದು ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಬೇಸರ ತರಿಸಿರುವುದು ಸುಳ್ಳಲ್ಲ.
- ಇದಕ್ಕೆಲ್ಲಾ ಶಾಶ್ವತ ಪರಿಹಾರ ಬೇಕು ಎಂಬ ಬಗ್ಗೆ 2013ರಲ್ಲಿ ಬಾಲಿಯಲ್ಲಿ ನಡೆದ ಮಿನಿಸ್ಟೀರಿಯಲ್ ಮೀಟಿಂಗ್ ನಲ್ಲೂ ವಿಶ್ವ ವ್ಯಾಪಾರ ಕೇಂದ್ರದ ಸದಸ್ಯರು ಚರ್ಚಿಸಿದ್ದರು. ಶಾಂತಿಯುತ ಕ್ರಮಕ್ಕೆ (peace clause) ಇಲ್ಲಿ ಸಮ್ಮತಿ ಸೂಚಿಸಲಾಗಿತ್ತು. ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಅವಶ್ಯಕತೆಗಳಿಗೆ ತಕ್ಕಂತೆ ನಿಯಮ ರೂಪಿಸಬೇಕು ಎಂದೂ ಕೇಳಿಕೊಳ್ಳಲಾಗಿತ್ತು.
- ಭಾರತ ಮತ್ತು ಇನ್ನಿತರ ಅಭಿವೃದ್ಧಿ ಹೊಂದಿದ ದೇಶಗಳು ಇ-ವಾಣಿಜ್ಯ, ಹೂಡಿಕೆ ಅನುಕೂಲಗಳು, ಮೀನುಗಾರಿಕೆ ಸಬ್ಸಿಡಿಗಳನ್ನು ಕಡಿತಗೊಳಿಸುವ ಕ್ರಮಗಳು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಸ್ಎಂಇಗಳು) ಸಂಬಂಧಿಸಿದ ವಿಷಯಗಳಿಗೆ ಭಾರೀ ವಿರೋಧವನ್ನು ಮುಂದಿಟ್ಟಿವೆ.
- ಇ-ಕಾಮರ್ಸ್ ಮತ್ತು ಹೂಡಿಕೆಯ ಸೌಕರ್ಯಗಳಂತಹ ಹೊಸ ವಿಭಾಗಗಳು ಆಹಾರ ಸುರಕ್ಷತೆಯ ಸಮಸ್ಯೆಗಳಿಗೆ ಸೀಮಿತ ಪರಿಹಾರಗಳನ್ನು ಮಾತ್ರ ಹೊಂದಿವೆ. ಆದರೆ ಇದು ದೊಡ್ಡ ಜನಸಂಖ್ಯೆ ಮೇಲೆ ಪರಿಣಾಮ ಬೀರುತ್ತದೆ.
- ಅಮೆರಿಕವು ಸಾರ್ವಜನಿಕ ಆಹಾರ ದಾಸ್ತಾನು ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಬಿಗಿಪಟ್ಟು ಹಿಡಿದಿದ್ದರಿಂದ, ಸಭೆಯು ಯಾವುದೇ ನಿರ್ಣಯವಿಲ್ಲದೆ ಮುಕ್ತಾಯವಾಯಿತು.
ಮುಂದಿನ ಹಾದಿ
- ಪೋಷಕಾಂಶ ಕೊರತೆಯಿಂದ ಬಳಲುವ ಜಗತ್ತಿನ ಪ್ರತೀ ಮೂರು ಮಕ್ಕಳಲ್ಲಿ ಒಂದು ಮಗು ಭಾರತದಲ್ಲಿದೆ. ನಮ್ಮಲ್ಲಿ ಶೇಕಡಾ ೮೦ರಷ್ಟು ೬ರಿಂದ ೩೫ ತಿಂಗಳಿನ ಮಕ್ಕಳು ರಕ್ತಹೀನವಾಗಿವೆ. ಮಾತ್ರವಲ್ಲ, ನಮ್ಮ ದೇಶದ ಶೇಕಡಾ ೫೦ ಮಕ್ಕಳ ಮರಣಕ್ಕೆ ಪೋಷಕಾಂಶಗಳ ಕೊರತೆಯೇ ಕಾರಣ.
- ಬಡತನ, ಹಸಿವು ಮತ್ತು ರೈತರ ಆತ್ಮಹತ್ಯೆ ಪ್ರಕರಣಗಳು ಜಗತ್ತಿನ ಹಲವೆಡೆ ಕೇಳಿಬರುತ್ತಿರುವಾಗ ವಿಶ್ವಾಸಾರ್ಹ ಬಹುಪಕ್ಷೀಯ ವ್ಯವಸ್ಥೆಯು ಕೇವಲ ಗಣ್ಯ ಗುಂಪುಗಳ ಮಾತಿಗೆ ಮಾತ್ರ ಆದ್ಯತೆ ನೀಡುವುದು ತರವಲ್ಲ. ಸರ್ವ ಸಮ್ಮತಿಯ ನಿರ್ಧಾರಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೀನ ರಾಷ್ಟ್ರ ದಾನಿಗಳಿಗೆ ಕಿವಿಯಾಗಬೇಕಿದೆ.