18th DECEMBER
1.ರೇರಾ ಆಡಳಿತವು ನಗರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ
ಪ್ರಮುಖ ಸುದ್ದಿ
- ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (RERA) ನ್ನು ಸ್ಥಾಪಿಸಲು ಆದೇಶ ನೀಡುವ ರಿಯಲ್ ಎಸ್ಟೇಟ್ (ರೆಗ್ಯುಲೇಷನ್ ಅಂಡ್ ಡೆವಲಪ್ಮೆಂಟ್) 2016 ರ ಕಾಯಿದೆಯನ್ನು , ಕಾರ್ಯವನ್ನು ನಗರ ವ್ಯವಹಾರಗಳ ಸಚಿವಾಲಯ ನೋಡಿಕೊಳ್ಳಲಿದೆ.
- ಈ ನಿಟ್ಟಿನಲ್ಲಿ ಕೇಂದ್ರ ಸರಕಾರವು 1961 ರ ಭಾರತ ಸರ್ಕಾರ (ವ್ಯವಹಾರ ಹಂಚಿಕೆ) ನಿಯಮಗಳನ್ನು ತಿದ್ದುಪಡಿ ಮಾಡಿದೆ.
ರಿಯಲ್ ಎಸ್ಟೇಟ್ (ರೆಗ್ಯುಲೇಷನ್ ಅಂಡ್ ಡೆವಲಪ್ಮೆಂಟ್) 2016 ರ ಕಾಯಿದೆ ಬಗ್ಗೆ
- ರೇರಾ ದ ಮುಖ್ಯ ಉದ್ದೇಶವೆಂದರೆ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಪ್ರಾಧಿಕಾರಕ್ಕಾಗಿ ದಕ್ಷ ಮತ್ತು ಪಾರದರ್ಶಕ ರೀತಿಯಲ್ಲಿ ಪ್ಲಾಟ್, ಅಪಾರ್ಟ್ಮೆಂಟ್ ಅಥವಾ ಕಟ್ಟಡದ ಮಾರಾಟವನ್ನು ಖಚಿತಪಡಿಸುವುದು ಮತ್ತು ರಿಯಲ್ ಎಸ್ಟೇಟ್ ವಲಯದಲ್ಲಿನ ಗ್ರಾಹಕರ ಆಸಕ್ತಿಯನ್ನು ರಕ್ಷಿಸುವುದು.
ಕಾಯ್ದೆಯ ಉಪಯೋಗ
- ಎಲ್ಲ ವ್ಯವಹಾರ ಏಕಗವಾಕ್ಷಿ ಪದ್ದತಿಯಲ್ಲಿ ನಡೆಯುವುದರಿಂದ ಒಂದೇ ಸೂರಿನಡಿ ಗ್ರಾಹಕರಿಗೆ ಮಾಹಿತಿ ಲಭಿಸಲಿದೆ.
- ಅತಿ ಕಡಿಮೆ ಸಮಯದಲ್ಲಿ ಯೋಜನೆ ಪೂರ್ಣಗೊಂಡು ಗ್ರಾಹಕರಿಗೆ ಅನುಕೂಲ ಮಾಡಿಕೊಡುತ್ತದೆ.
- ವೇಗವಾಗಿ ಯೋಜನೆ ಪೂರ್ಣಗೊಳ್ಳುವುದರಿಂದ ಬಿಲ್ಡರ್ಗಳಿಗೆ ತಮ್ಮ ಯೋಜನೆಗೆ ಮಾಡುವ ಸಾಲದ ಬಡ್ಡಿಯಲ್ಲಿ ಹೆಚ್ಚು ಪ್ರಮಾಣದ ಉಳಿತಾಯ ಸಾಧ್ಯವಾಗುತ್ತದೆ.
- ಕಾನೂನಾತ್ಮಕ ವ್ಯವಹಾರವೇ ಪ್ರಧಾನವಾಗುವುದರಿಂದ ಲಂಚ ಇತ್ಯಾದಿ ಸೋರಿಕೆ ಇಳಿಕೆಯಾಗುತ್ತದೆ. ಇದರಿಂದ ಶೇ.10 ಉಳಿತಾಯ ಬಿಲ್ಡರ್ಗಳಿಗೆ ಆಗಲಿದೆ.
- ಗುಣಮಟ್ಟಕ್ಕೆ ಆದ್ಯತೆ ನೀಡುವುದರಿಂದ ಗ್ರಾಹಕರಲ್ಲಿ ಹೆಚ್ಚು ನಂಬಿಕೆ ಗಳಿಸುವಲ್ಲಿ ಉದ್ಯಮಿಗಳು ಯಶಸ್ವಿಯಾಗುತ್ತಾರೆ.
- ಉದ್ಯಮಿಗಳು ಕೇವಲ ಗ್ರಾಹಕರ ಆಕರ್ಷಣೆಗಾಗಿ ಮಾಹಿತಿ ಹಾಕುವುದು ತಪ್ಪುತ್ತದೆ.
2.ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಬದಲು ನ್ಯಾಷನಲ್ ಮೆಡಿಕಲ್ ಕಮಿಷನ್: ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ
ಪ್ರಮುಖ ಸುದ್ದಿ
- ಈಗಿರುವ ಭಾರತೀಯ ವೈದ್ಯಕೀಯ ಮಂಡಳಿ (ಮೆಡಿಕಲ್ ಎಜುಕೇಶನ್ ರೆಗ್ಯುಲೇಟರ್ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ-ಎಂಸಿಐ) ಬದಲಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ನ್ಯಾಷನಲ್ ಮೆಡಿಕಲ್ ಕಮಿಷನ್) ಸ್ಥಾಪಿಸುವ ಮಸೂದೆಗೆ ಸಂಪುಟ ಅನುಮೋದನೆ ನೀಡಿದೆ
ಮಸೂದೆಯ ಪ್ರಮುಖ ಲಕ್ಷಣಗಳು:
- ವೈದ್ಯಕೀಯ ಸಂಸ್ಥೆಗಳಿಗೆ ಮಾನ್ಯತೆ ನೀಡುವುದು, ಪದವಿಪೂರ್ವ ಹಾಗೂ ಸ್ನಾತಕೋತ್ತರ ಶಿಕ್ಷಣ, ವೌಲ್ಯಮಾಪನ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಡಿಯಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರ ನೋಂದಣಿ ನಿರ್ವಹಿಸಲು ನಾಲ್ಕು ಸ್ವಾಯತ್ತ ಮಂಡಳಿ ರೂಪಿಸಲು ಈ ಮಸೂದೆ ಅವಕಾಶ ಕಲ್ಪಿಸಲಿದೆ.
- ಈ ಆಯೋಗ ಸರಕಾರದಿಂದ ನಾಮನಿರ್ದೇಶಿತ ಅಧ್ಯಕ್ಷರು, ಸದಸ್ಯರನ್ನು ಹೊಂದಲಿದೆ. ಸಂಪುಟ ಕಾರ್ಯದಶಿ ಅಡಿಯಲ್ಲಿ ಬರುವ ಶೋಧನಾ ಸಮಿತಿ ಈ ಮಂಡಳಿಗೆ ಸದಸ್ಯರನ್ನು ಆಯ್ಕೆ ಮಾಡಲಿದೆ. ಆಯೋಗದಲ್ಲಿ 5 ಮಂದಿ ಚುನಾಯಿತರು ಹಾಗೂ 12 ಮಂದಿ ನಿವೃತ್ತ ಅಧಿಕಾರಿಗಳು ಸದಸ್ಯರಾಗಿ ಇರಲಿದ್ದಾರೆ.
- ಸಾಮಾನ್ಯ ಪ್ರವೇಶ ಪರೀಕ್ಷೆ ಹಾಗೂ ಎಲ್ಲ ವೈದ್ಯಕೀಯ ಸ್ನಾತಕೋತ್ತರರು ಚಿಕಿತ್ಸೆ ನೀಡಲು ಪರವಾನಿಗೆ ಪಡೆಯಲು ಪರೀಕ್ಷೆ ನಡೆಸುವ ಪ್ರಸ್ತಾಪವನ್ನು ಈ ಮಸೂದೆ ಹೊಂದಿದೆ. ಈ ಪ್ರಸ್ತಾಪಿತ ಮಸೂದೆಯಂತೆ ಹೊಸ ಸ್ನಾತಕೋತ್ತರ ಕೋರ್ಸ್ ಆರಂಭಿಸಲು ಹಾಗೂ ಸೀಟಿನ ಸಂಖ್ಯೆ ಹೆಚ್ಚಿಸಲು ಯಾವುದೇ ಅನುಮತಿ ಅಗತ್ಯತೆ ಇಲ್ಲ.
ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಬಗ್ಗೆ
- 1933 ರಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾವನ್ನು ಇಂಡಿಯನ್ ಮೆಡಿಕಲ್ ಕೌನ್ಸಿಲ್ ಆಕ್ಟ್, 1933 ರ ಅಡಿಯಲ್ಲಿ ಮೊದಲ ಬಾರಿಗೆ ಸ್ಥಾಪಿಸಲಾಯಿತು.
- ಈ ಕಾಯಿದೆಯನ್ನು 1956 ರಲ್ಲಿ ರದ್ದುಪಡಿಸಿ ಮತ್ತು ಹೊಸ ಕಾಯಿದೆಯಾಗಿ ಬದಲಿಸಲಾಯಿತು. 1956 ರ ಕಾಯಿದೆಯಡಿಯಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಉದ್ದೇಶಗಳು ಸೇರಿವೆ
ಇದರ ಉದ್ದೇಶಗಳು
- ವೈದ್ಯಕೀಯ ಶಿಕ್ಷಣದಲ್ಲಿ ಪಠ್ಯಕ್ರಮದ ಮಾರ್ಗಸೂಚಿ , , ಕಾಲೇಜುಗಳು, ಕೋರ್ಸುಗಳು ಅಥವಾ ಹೆಚ್ಚಿನ ಸಂಖ್ಯೆಯ ಸೀಟುಗಳನ್ನು ತೆಗೆದುಕೊಳ್ಳಲು ಮಾನದಂಡಗಳನ್ನು ರೂಪಿಸುವುದು
- ವೈದ್ಯ ಶಿಕ್ಷಣ ಕೋರ್ಸುಗಳಿಗೆ ಮಾನ್ಯತೆ ನೀಡುವುದು .
- ವೈದ್ಯರ ನೋಂದಣಿ ಮತ್ತು ಅಖಿಲ ಭಾರತ ವೈದ್ಯಕೀಯ ನೋಂದಣಿಯ ನಿರ್ವಹಣೆ.
- ತಪ್ಪು ಮಾಡುವ ವೈದ್ಯರು ವಿರುದ್ಧ ಕ್ರಮ ತೆಗೆದುಕೊಳ್ಳುವ ಮೂಲಕ ವೈದ್ಯಕೀಯ ವೃತ್ತಿಯ ನಿಯಂತ್ರಣ
3.ಮೆಟ್ರೋ ರೈಲು ಸುರಕ್ಷತೆ ಆಯುಕ್ತರು (Commissioner of Metro Railway Safety)
ಪ್ರಮುಖ ಸುದ್ದಿ
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ರೈಲ್ವೆ “ಮೆಟ್ರೊ ರೈಲು (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯಿದೆ, 2002” ಅಡಿಯಲ್ಲಿ ರೂಪಿಸಲಾದ ಮೆಟ್ರೋ ರೈಲು ಸುರಕ್ಷತೆಯ ಆಯೋಗದ ಕಾರ್ಯಗಳನ್ನು ನಿರ್ವಹಿಸಲು ಎಲ್ಲಾ ಪೂರಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಮೆಟ್ರೊ ರೈಲು ಸುರಕ್ಷತೆ ಆಯುಕ್ತರ ಒಂದು ವೃತ್ತ ಕಚೇರಿ(ಸಿಎಂಆರ್.ಎಸ್) ಯನ್ನು ಸ್ಥಾಪಿಸಲು ತನ್ನ ಅನುಮೋದನೆ ನೀಡಿದೆ.
ಪ್ರಮುಖ ಅಂಶಗಳು
- ಹಾಲಿ ಇರುವ ಇಬ್ಬರು ರೈಲ್ವೆ ಸುರಕ್ಷತೆ ಆಯುಕ್ತರು(ಸಿಆರ್.ಎಸ್)ಗಳಿಗೆ ಎರಡು ವೃತ್ತಗಳ ಹೆಚ್ಚುವರಿ ಜವಾಬ್ದಾರಿ ವಹಿಸಲೂ ಸಂಪುಟ ಅನುಮತಿ ನೀಡಿದೆ, ಅವರು ತಮ್ಮ ಅಧಿಕಾರವನ್ನು ತಮ್ಮ ಅಧಿಕಾರ ಕ್ಷೇತ್ರ ವ್ಯಾಪ್ತಿಯಲ್ಲಿ ಬಳಸುತ್ತಾರೆ. ಈ ವೃತ್ತಗಳು ನವದೆಹಲಿಯ ಸಿ.ಎಂ.ಆರ್.ಎಸ್. ವ್ಯಾಪ್ತಿಯಡಿ ಬರುವುದಿಲ್ಲ.
- ಮೆಟ್ರೋ ರೈಲು ಸುರಕ್ಷತೆ ಆಯುಕ್ತರ ಹುದ್ದೆಯು ನಾಗರಿಕ ವಿಮಾನಯಾನ ಸಚಿವಾಲಯದಡಿಯಲ್ಲಿನ ರೈಲು ಸುರಕ್ಷತೆ ಆಯೋಗದಲ್ಲಿ ಎಚ್.ಎ.ಜಿ. (ವೇತನ ಶ್ರೇಣಿ 15)ರಲ್ಲಿರುತ್ತದೆ. ಒಂದು ವೃತ್ತ ಕಚೇರಿಯ ಸಂಬಳದ ವೆಚ್ಚವು ಸಂಸ್ಥೆಯ ಪ್ರಾರಂಭಿಕ ಸ್ಥಾಪನಾ ವೆಚ್ಚದ ಹೊರತಾಗಿ ವಾರ್ಷಿಕ 59,39,040 ರೂಪಾಯಿ ಆಗಬಹುದು ಎಂದು ಅಂದಾಜು ಮಾಡಲಾಗಿದೆ. ವೃತ್ತ ಕಚೇರಿಯ ವಾರ್ಷಿಕ ವೆಚ್ಚ 7,50,000 ಆಗಲಿದೆ.
- ಈ ಹುದ್ದೆಗಳ ಸೃಷ್ಟಿಯು, ನಾಗರಿಕ ವಿಮಾನಯಾನ ಸಚಿವಾಲಯದಡಿಯಲ್ಲಿನ ರೈಲ್ವೆ ಸುರಕ್ಷತಾ ಆಯೋಗದಲ್ಲಿ ಮೆಟ್ರೋ ರೈಲು (ಕಾರ್ಯಾಚರಣೆ ಮತ್ತು ನಿರ್ವಹಣೆ)ಕಾಯಿದೆ 2002ರಲ್ಲಿ ನಮೂದಿಸಿರುವಂತೆ ಪ್ರಯಾಣಿಕರ ಸುರಕ್ಷತೆ ಮತ್ತು ಮೆಟ್ರೋ ರೈಲು ಕಾರ್ಯಾಚರಣೆ ಸಂಬಂಧಿತ ವಿಚಾರಗಳ ಮೇಲೆ ಅಂದರೆ, ಹಾಲಿ ಇರುವ ಮತ್ತು ಮುಂದಿನ ಮೆಟ್ರೋ ರೈಲು ಯೋಜನೆಗಳ ಬಗ್ಗೆ ಗಮನ ಹರಿಸುವುದನ್ನು ಖಾತ್ರಿಪಡಿಸುತ್ತದೆ.
ಅನುಷ್ಠಾನದ ಕಾರ್ಯತಂತ್ರ ಹಾಗೂ ಗುರಿಗಳು:
- ಮೆಟ್ರೋ ರೈಲು ಸುರಕ್ಷತೆ ಆಯುಕ್ತರ ಹುದ್ದೆಯನ್ನು ನಾಗರಿಕ ವಿಮಾನಯಾನ ಸಚಿವಾಲಯವು, ಭಾರತೀಯ ರೈಲು ಎಂಜನಿಯರಿಂಗ್ ಸೇವೆ (ಐ.ಆರ್.ಎಸ್.ಇ., ಐ.ಆರ್.ಎಸ್.ಇ.ಇ., ಐ.ಆರ್.ಎಸ್.ಎಸ್.ಇ., ಆರ್.ಎಸ್.ಎಂ.ಇ) ಮತ್ತು ಐಆರ್.ಟಿ.ಎಸ್.ನಿಂದ, ರೈಲ್ವೆ ಇಲಾಖೆಯ ಇಚ್ಛಿತ ಅಧಿಕಾರಿಗಳನ್ನು ಯುಪಿಎಸ್.ಸಿ.ಯೊಂದಿಗೆ ಸಮಾಲೋಚಿಸಿ, ಆರಂಭದಲ್ಲಿ ರೈಲ್ವೆ ಸುರಕ್ಷತೆ ಆಯೋಗದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರ ನೇಮಕಾತಿ ನಿಯಮಗಳನ್ವಯ ಭರ್ತಿ ಮಾಡುತ್ತದೆ, ಈ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಎರಡು ತಿಂಗಳಲ್ಲಿ ಆರಂಭಿಸಲಾಗುತ್ತದೆ.
- ಮೆಟ್ರೋ ರೈಲು ಸುರಕ್ಷತೆ ಉಪ ಆಯುಕ್ತರ (ಡಿವೈ.ಸಿಎಂ.ಆರ್.ಎಸ್.) ಮತ್ತು ಬೆಂಬಲಿತ ಸಿಬ್ಬಂದಿಯ ಹುದ್ದೆಗಳ ಸೃಷ್ಟಿಯ ಪ್ರಸ್ತಾಪ ಕುರಿತಂತೆ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯೊಂದಿಗೆ ಸಮಾಲೋಚಿಸಲಾಗುತ್ತದೆ. ಅವರ ಅನುಮೋದನೆ ಬಂದ ಬಳಿಕ, ಹುದ್ದೆಗಳ ಸೃಷ್ಟಿಯ ಆದೇಶವನ್ನು ತಕ್ಷಣವೇ ಹೊರಡಿಸಲಾಗುತ್ತದೆ.
ಹಿನ್ನೆಲೆ:
- ರೈಲು ಸುರಕ್ಷತೆ ಆಯೋಗವು ನಾಗರಿಕ ವಿಮಾನಯಾನ ಸಚಿವಾಲಯ (ಭಾರತ ಸರ್ಕಾರ)ದ ಆಡಳಿತ ನಿಯಂತ್ರಣದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ರೈಲು ಸಂಚಾರ ಸುರಕ್ಷತೆ ಮತ್ತು ರೈಲು ಕಾರ್ಯಾಚರಣೆಗೆ ಸಂಬಂಧಿಸಿದ ಹಾಗೂ ರೈಲ್ವೆ ಕಾಯಿದೆ 1989ರಲ್ಲಿ ಸೂಚಿಸಲಾಗಿರುವ ಕೆಲವು ಶಾಸನಾತ್ಮಕ ಕಾರ್ಯಗಳನ್ನು ನಿರ್ವಹಿಸಲಿದೆ.
- ಈ ಕಾರ್ಯಗಳು ಪರೀಕ್ಷಾತ್ಮಕ, ತನಿಖಾತ್ಮಕ ಮತ್ತು ಸಲಹೆಯ ಸ್ವರೂಪದಲ್ಲಿರುತ್ತದೆ.
- ಆಯೋಗವು ರೈಲ್ವೆ ಕಾಯಿದೆ ಅಡಿಯಲ್ಲಿ ರೂಪಿಸಲಾಗಿರುವ ಕೆಲವು ನಿಯಮಗಳ ಅನುಸಾರ ಮತ್ತು ಕಾಲ ಕಾಲಕ್ಕೆ ಸೂಚಿಸಲಾಗುವ ಕಾರ್ಯಕಾರಿ ನಿರ್ದೇಶನಗಳಂತೆ ಕಾರ್ಯನಿರ್ವಹಿಸಲಿದೆ.
- ಆಯೋಗದ ಮಹತ್ವದ ಕಾರ್ಯವೆಂದರೆ, ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗುವ ಯಾವುದೇ ಹೊಸ ರೈಲು ಮಾರ್ಗ ರೈಲ್ವೆ ಸಚಿವಾಲಯ ಸೂಚಿಸಿರುವ ಗುಣಮಟ್ಟ ಮತ್ತು ನಿರ್ದಿಷ್ಟ ವೈಶಿಷ್ಟ್ಯ ಮತ್ತು ಹೊಸ ಮಾರ್ಗವು ಪ್ರಯಾಣಿಕರ ಸಂಚಾರಕ್ಕೆ ಎಲ್ಲ ರೀತಿಯಿಂದಲೂ ಸುರಕ್ಷಿತ ಎಂಬುದನ್ನು ಖಾತ್ರಿ ಪಡಿಸುವುದಾಗಿರುತ್ತದೆ.
- ಇದು ಇತರ ಕಾರ್ಯಗಳಾದ ಗೇಜ್ ಪರಿವರ್ತನೆ, ಜೋಡಿ ಮಾರ್ಗ ರಚನೆ ಮತ್ತು ಹಾಲಿ ಮಾರ್ಗಗಳ ವಿದ್ಯುದ್ದೀಕರಣ ಇತ್ಯಾದಿಗೂ ಅನ್ವಯವಾಗುತ್ತದೆ. ಭೀಕರ ರೈಲು ಅಪಘಾತಗಳಿಗೆ ಸಂಬಂಧಿಸಿದಂತೆ ಆಯೋಗವು ಶಾಸನಾತ್ಮಕ ತನಿಖೆಯನ್ನೂ ನಡೆಸುತ್ತದೆ ಮತ್ತು ಭಾರತದಲ್ಲಿ ರೈಲ್ವೆಯ ಸುರಕ್ಷತೆ ಸುಧಾರಣೆಗೆ ಶಿಫಾರಸು ಮಾಡುತ್ತದೆ.
- ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮತ್ತು ಸುರಕ್ಷತೆಯ ಪ್ರಮಾಣ ಪತ್ರದಲ್ಲಿ ಏಕರೂಪತೆಯ ಖಾತ್ರಿಗಾಗಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಮೆಟ್ರೋ ರೈಲು (ಕಾರ್ಯಚರಣೆ ಮತ್ತು ನಿರ್ವಹಣೆ) ಕಾಯಿದೆ 2002 ರೂಪಿಸುವ ವೇಳೆ, ಮೆಟ್ರೋ ರೈಲಿನಲ್ಲೂ ಇದೇ ರೀತಿಯ ಕಾರ್ಯಕ್ರಮಗಳನ್ನು ಮೆಟ್ರೋ ರೈಲು ಸುರಕ್ಷತೆ ಆಯುಕ್ತರಿಗೆ (ಸಿಎಂಆರ್.ಎಸ್.)ಅವರಿಗೆ ವಹಿಸಿತು. ಸಿಎಂಆರ್.ಎಸ್. ಆಡಳಿತಾತ್ಮಕವಾಗಿ ನಾಗರಿಕ ವಿಮಾನ ಯಾನ ಸಚಿವಾಲಯದಡಿಯ ಮುಖ್ಯ ರೈಲ್ವೆ ಸುರಕ್ಷತೆ ಆಯುಕ್ತರ ಅಡಿಯಲ್ಲಿರುತ್ತಾರೆ.
4.ಸಿಗರೇಟ್ ಪ್ಯಾಕ್ಗಳ ಎರಡೂ ಕಡೆ ಚಿತ್ರ ಸಹಿತ ಎಚ್ಚರಿಕೆ ಸಂದೇಶ ಮುದ್ರಿಸುವ ಆದೇಶವನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್
ಪ್ರಮುಖ ಸುದ್ದಿ
- ಸಿಗರೇಟು,ಬೀಡಿ ಸೇರಿದಂತೆ ಎಲ್ಲ ತಂಬಾಕು ಉತ್ಪನ್ನಗಳ ಮೇಲೆ ಪ್ಯಾಕ್ನ ಎರಡೂ ಬದಿಯಲ್ಲಿ ಶೇಕಡ 85ರಷ್ಟು ಚಿತ್ರಸಹಿತ ಎಚ್ಚರಿಕೆ ಸಂದೇಶ ಕಡ್ಡಾಯವಾಗಿ ಮುದ್ರಿಸಬೇಕೆಂಬ ಕೇಂದ್ರದ ತಿದ್ದುಪಡಿ ನಿಯಮವನ್ನು ಕಾನೂನುಬಾಹಿರವೆಂದು ಹೈಕೋರ್ಟ್ ರದ್ದುಪಡಿಸಿದೆ.
- ಟೊಬ್ಯಾಕೋ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸೇರಿದಂತೆ ಹಲವು ಸಿಗರೇಟು ಉತ್ಪಾದಿಸುವ ಕಂಪನಿಗಳು ಸಲ್ಲಿಸಿದ್ದ 50ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾ.ಬಿ.ಎಸ್.ಪಾಟೀಲ್ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಶೇಷ ವಿಭಾಗೀಯ ಪೀಠ ಈ ತೀರ್ಪು ಪ್ರಕಟಿಸಿದೆ.
ಪ್ರಮುಖ ಅಂಶಗಳು
- ಸಿಗರೇಟು ಉತ್ಪಾದನಾ ಕಂಪನಿಗಳ ಅರ್ಜಿಗಳನ್ನು ಭಾಗಶಃ ಮಾನ್ಯ ಮಾಡಿದೆ.ಅದು ”ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯಿದೆ(ಪ್ಯಾಕೇಜಿಂಗ್ ಮತ್ತು ಲೇಬಲಿಂಗ್)ನಿಯಮ 2014 ಅನ್ನು ರದ್ದುಗೊಳಿಸಿ,ಅದು ಸಂವಿಧಾನಬಾಹಿರವಾದುದು ಎಂದು ಹೇಳಿದೆ.ಆದರೆ,ಕೇಂದ್ರ ಸರಕಾರ,ನಿಯಮಗಳಿಗೆ ಅನುಗುಣವಾಗಿ ಕೋರ್ಟ್ ಮಾಡಿರುವ ವಿಶ್ಲೇಷಣೆ ಮತ್ತು ಅಭಿಪ್ರಾಯಗಳನ್ನು ಗಮನಲ್ಲಿರಿಸಿಕೊಂಡು ಸಂವಿಧಾನದ ಕಲಂ 77(3)ರಲ್ಲಿ ರಚಿಸಿರುವ ನಿಯಮಗಳನುಸಾರ ಹೊಸದಾಗಿ ಈ ಕುರಿತು ತಿದ್ದುಪಡಿ ಮಾಡಬಹುದು” ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
- ಅಲ್ಲದೆ, ಅಲ್ಲಿಯವರೆಗೆ 2008ರಲ್ಲಿ ರೂಪಿಸುರುವ ನಿಯಮದಂತೆ ಶೇ.40 ಎಚ್ಚರಿಕೆ ಸಂದೇಶ ಕಡ್ಡಾಯದ ಆದೇಶ ಮುಂದುವರಿಯಲಿದೆ ಎಂದು ನ್ಯಾಯಾಲಯ ಹೇಳಿದೆ.
- ಕೇಂದ್ರ ಸರಕಾರ 2014ರಲ್ಲಿ ನಿಯಮ ತಿದ್ದುಪಡಿ ಮಾಡಿ, ಎಲ್ಲ ಬಗೆಯ ತಂಬಾಕು ಉತ್ಪನ್ನಗಳ ಮೇಲೆ ಪ್ಯಾಕ್ನ ಎರಡೂ ಬದಿಯಲ್ಲಿ ಶೇಕಡ 85ರಷ್ಟು ಚಿತ್ರಸಹಿತ ಎಚ್ಚರಿಕೆ ಸಂದೇಶ ಕಡ್ಡಾಯವಾಗಿರಬೇಕೆಂದು ಆದೇಶ ನೀಡಿತ್ತು.
- ಅದಕ್ಕೂ ಮುನ್ನ 2008ರಲ್ಲಿ ಕೋಟ್ಪಾ ನಿಯಮಕ್ಕೆ ತಿದ್ದುಪಡಿ ಮಾಡಿದ್ದ ಕೇಂದ್ರ ಸರಕಾರ,ತಂಬಾಕು ಉತ್ಪನ್ನಗಳ ಪ್ಯಾಕೇಟ್ನ ಒಂದು ಬದಿಯಲ್ಲಿ ಶೇ.40ರಷ್ಟು ಚಿತ್ರ ಸಹಿತ ಎಚ್ಚರಿಕೆ ಸಂದೇಶ ಇರಬೇಕು ಎಂಬುದನ್ನು ಕಡ್ಡಾಯ ಮಾಡಿತ್ತು.ಅದನ್ನೂ ಸಹ ಕಾನೂನು ಬಾಹಿರ ಕ್ರಮ ಎಂದು ಸಿಗರೇಟು ತಯಾರಿಕಾ ಕಂಪನಿ ಪ್ರಶ್ನಿಸಿದ್ದವು.ಆದರೆ ಕೋರ್ಟ್,ಅವರ ವಾದವನ್ನು ತಳ್ಳಿಹಾಕಿದೆ.
- ಮೊದಲು ತಂಬಾಕು ಉತ್ಪನ್ನಗಳ ಪ್ಯಾಕೇಟ್ಗಳ ತಂಬಾಕು ಉತ್ಪನ್ನಗಳ ಕಾಯಿದೆ(ಪ್ಯಾಕೇಜಿಂಗ್ ಮತ್ತು ಲೇಬಲಿಂಗ್)ನಿಯಮ 2008 ಕಾನೂನು ಬದ್ಧವಾಗಿದೆ, ಅದನ್ನು ಊರ್ಜಿತಗೊಳಿಸಲಾಗಿದೆ ಎಂದು ಆದೇಶಿಸಿದೆ.
ಹಿನ್ನಲೆ
- ಕೇಂದ್ರ ಸರಕಾರ ಎಚ್ಚರಿಕೆ ಸಂದೇಶದ ಪ್ರಮಾಣವನ್ನು ಶೇ.85ಕ್ಕೆ ಹೆಚ್ಚಳ ಮಾಡಿ 2014ರ ಅ.15ರಂದು ಅಧಿಸೂಚನೆ ಹೊರಡಿಸಿತ್ತು.ಆದರೆ ಅದು ಜಾರಿಯಾಗಿದ್ದು 2015ರ ಏ.1ರಿಂದ.
- ಅದನ್ನು ಪ್ರಶ್ನಿಸಿ ತಂಬಾಕು ಉತ್ಪನ್ನಗಳ ತಯಾರಿಕಾ ಕಂಪನಿಗಳು ರಾಜಸ್ತಾನ, ಗುಜರಾತ್,ದೆಹಲಿ,ಕರ್ನಾಟಕ, ಬಾಂಬೆ ಮತ್ತು ಕಲ್ಕತ್ತಾ ಹೈಕೋರ್ಟ್ಗಳಲ್ಲಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದವು. ನಂತರ ಸುಪ್ರೀಂಕೋರ್ಟ್ 2016ರ ಮೇ ತಿಂಗಳಲ್ಲಿ ಎಲ್ಲ ಕೇಸುಗಳನ್ನು ಕರ್ನಾಟಕ ಹೈಕೋರ್ಟ್ಗೆ ವರ್ಗಾಯಿಸಿ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಆದೇಶ ನೀಡಿತ್ತು.
5. ರಾಷ್ಟ್ರೀಯ ಆಯುಷ್ ಮಿಷನ್ (ನಾಮ್)
ಪ್ರಮುಖ ಸುದ್ದಿ
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2400 ಕೋಟಿ ರೂಪಾಯಿ ವೆಚ್ಚದಲ್ಲಿ ಕೇಂದ್ರ ಪ್ರಾಯೋಜಿತ ರಾಷ್ಟ್ರೀಯ ಆಯುಷ್ ಅಭಿಯಾನ (ನಾಮ್) ಅನ್ನು 04.2017 ರಿಂದ 31.03.2020ರವರೆಗೆ ಮೂರು ವರ್ಷಗಳ ಅವಧಿಗೆ ಮುಂದುವರಿಸಲು ತನ್ನ ಅನುಮೋದನೆ ನೀಡಿದೆ. ಈ ಅಭಿಯಾನವನ್ನು 2014ರ ಸೆಪ್ಟೆಂಬರ್ ನಲ್ಲಿ ಆರಂಭಿಸಲಾಗಿತ್ತು.
ವೈಶಿಷ್ಟ್ಯಗಳು:
- ಕಡಿಮೆ ವೆಚ್ಚದಲ್ಲಿ ಆಯುಷ್ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಆಯುಷ್ ಸಚಿವಾಲಯವು ಸಾರ್ವತ್ರಿಕ ಪ್ರವೇಶದೊಂದಿಗೆ ನಾಮ್ ಅನ್ನು ಅನುಷ್ಠಾನಕ್ಕೆ ತಂದಿದೆ.
- ಆಯುಷ್ ಆಸ್ಪತ್ರೆಗಳನ್ನು ಮತ್ತು ಚಿಕಿತ್ಸಾಲಯಗಳನ್ನು ಮೇಲ್ದರ್ಜೆಗೇರಿಸುವುದು,
- ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್.ಸಿ.), ಸಮುದಾಯ ಆರೋಗ್ಯ ಕೇಂದ್ರ(ಸಿಎಚ್.ಸಿ) ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಆಯುಷ್ ಸೌಲಭ್ಯವನ್ನೂ ಕಲ್ಪಿಸುವುದು,
- ಆಯುಷ್ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಸರ್ಕಾರ, ಎ.ಎಸ್.ಯು ಮತ್ತು ಎಚ್ ಔಷಧ ಮಳಿಗೆಗಳನ್ನು ನವೀಕರಿಸುವ ಮೂಲಕ ರಾಜ್ಯ ಮಟ್ಟದಲ್ಲಿ ಸಾಂಸ್ಥಿಕ ಸಾಮರ್ಥ್ಯವನ್ನು ಬಲಪಡಿಸುವುದು.
- ಔಷಧ ಪರೀಕ್ಷಾ ಪ್ರಯೋಗಾಲಯಗಳು ಮತ್ತು ಎ.ಎಸ್.ಯು. ಮತ್ತು ಎಚ್ ಜಾರಿ ವ್ಯವಸ್ಥೆ,
- ಸುಸ್ಥಿರ ಗುಣಮಟ್ಟದ ಕಚ್ಚಾ ಸಾಮಗ್ರಿಗಳ ಪೂರೈಕೆಗಾಗಿ ಉತ್ತಮ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಔಷಧ ಸಸ್ಯಗಳ ಕೃಷಿಗೆ ಬೆಂಬಲ ನೀಡುವುದು ಮತ್ತು ಔಷಧ ಸಸ್ಯಗಳ ದಾಸ್ತಾನು ಮತ್ತು ಮಾರುಕಟ್ಟೆಗಾಗಿ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು.
- ಆಯುಷ್ ಆರೋಗ್ಯ ಸೇವೆ/ಶಿಕ್ಷಣ ಒದಗಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರದ ಪ್ರಯತ್ನಗಳಿಗೆ ಬೆಂಬಲ ನೀಡುವ ಮೂಲಕ ದೇಶದಲ್ಲಿ ಅದರಲ್ಲೂ ಅತಿ ಸೂಕ್ಷ್ಮ ಮತ್ತು ದೂರದ ಪ್ರದೇಶಗಳಲ್ಲಿ ಆರೋಗ್ಯ ಸೇವೆಯಲ್ಲಿನ ಕಂದಕವನ್ನು ನಾಮ್ ನಿವಾರಿಸುತ್ತಿದೆ. ನಾಮ್ ಅಡಿಯಲ್ಲಿ ಅಂಥ ಕ್ಷೇತ್ರಗಳ ನಿರ್ದಿಷ್ಟ ಅಗತ್ಯಗಳಿಗೆ ಮತ್ತು ತಮ್ಮ ವಾರ್ಷಿಕ ಯೋಜನೆಯಲ್ಲಿ ಉನ್ನತ ಸಂಪನ್ಮೂಲಗಳಿಗೆ ಹೆಚ್ಚಿನ ಹಂಚಿಕೆ ಮಾಡಲು ವಿಶೇಷ ಒತ್ತು ನೀಡಲಾಗುತ್ತಿದೆ.
ಈ ಅಭಿಯಾನದ ನಿರೀಕ್ಷಿತ ಫಲಶ್ರುತಿ ಈ ಕೆಳಗಿನಂತಿದೆ:
- ಆಯುಷ್ ಸೇವೆ ಒದಗಿಸುವ ಆರೋಗ್ಯ ಸೇವೆಗಳ ಸೌಲಭ್ಯಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಆಯುಷ್ ಆರೋಗ್ಯ ಸೇವೆಗಳ ಉತ್ತಮ ಲಭ್ಯತೆ ಮತ್ತು ಔಷಧಗಳ ಮತ್ತು ಮಾನವ ಸಂಪನ್ಮೂಲದ ಲಭ್ಯತೆ.
- ಆಯುಷ್ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಿಸುವ ಮೂಲಕ ಆಯುಷ್ ಶಿಕ್ಷಣದ ಸುಧಾರಣೆ.
- ಕಠಿಣ ಜಾರಿ ಕಾರ್ಯವಿಧಾನವೂ ಸೇರಿದಂತೆ ಗುಣಮಟ್ಟದ ಔಷಧ ಮಳಿಗೆಗಳ ಮತ್ತು ಔಷಧ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡುವ ಮೂಲಕ ಗುಣಮಟ್ಟದ ಆಯುಷ್ ಔಷಧಗಳ ಲಭ್ಯತೆಯಲ್ಲಿನ ಸುಧಾರಣೆ.
- ಯೋಗಾ ಮತ್ತು ಪ್ರಕೃತಿ ಚಿಕಿತ್ಸೆಯನ್ನು ರೋಗತಡೆ ವಿಧಾನದ ಆರೋಗ್ಯ ವ್ಯವಸ್ಥೆಯಾಗಿ ಅಂಗೀಕರಿಸುವ ಕುರಿತು ಜಾಗೃತಿ ಹೆಚ್ಚಿಸುವುದು.
- ಗಿಡಮೂಲಿಕೆಯ ಕಚ್ಚಾ ಸಾಮಗ್ರಿಗಳ ಹೆಚ್ಚುತ್ತಿರುವ ದೇಶೀಯ ಬೇಡಿಕೆಯನ್ನು ಪೂರೈಸಲು ಮತ್ತು ರಫ್ತು ಉತ್ತೇಜಿಸಲು.
ಹಿನ್ನೆಲೆ:
- ಆಯುರ್ವೇದ, ಸಿದ್ಧ, ಯುನಾನಿ ಮತ್ತು ಹೋಮಿಯೋಪತಿ (ಎ.ಎಸ್.ಯು ಮತ್ತು ಎಚ್) ಯಂತಹ ಪ್ರಾಚೀನ ವೈದ್ಯ ಪದ್ಧತಿಯ ಮೂಲಕ ಪ್ರತಿನಿಧಿಸಲ್ಪಟ್ಟಿರುವ ಭಾರತದ ಅನುಪಮ ಪರಂಪರೆಯ ಮೇಲೆ ರೋಗ ತಡೆಗಟ್ಟುವ ಮತ್ತು ಉತ್ತೇಜಕ ಆರೋಗ್ಯ ರಕ್ಷಣೆಗಾಗಿ ಜ್ಞಾನದ ನಿಧಿಯಾಗಿ ನಿರ್ಮಾಣ ಮಾಡುವ ಉದ್ದೇಶವನ್ನು ರಾಷ್ಟ್ರೀಯ ಆಯುಷ್ ಅಭಿಯಾನ ಹೊಂದಿದೆ.
- ಭಾರತೀಯ ವೈದ್ಯ ಪದ್ಧತಿಗಳ ಧನಾತ್ಮಕ ವೈಶಿಷ್ಟ್ಯಗಳು ಅದರ ವೈವಿಧ್ಯತೆ ಮತ್ತು ನಮ್ಯತೆ; ಲಭ್ಯತೆ; ಕೈಗೆಟಕುವ ದರ, ದೊಡ್ಡ ಸಂಖ್ಯೆಯ ಸಾರ್ವಜನಿಕರ ವಿಸ್ತೃತ ಅಂಗೀಕಾರ, ತುಲನಾತ್ಮಕವಾಗಿ ಅತ್ಯಂತ ಕಡಿಮೆ ವೆಚ್ಚ ಮತ್ತು ಹೆಚ್ಚುತ್ತಿರುವ ಆರ್ಥಿಕ ಮೌಲ್ಯವಾಗಿದ್ದು, ದೊಡ್ಡ ವರ್ಗದ ಜನರ ಅಗತ್ಯವಾಗಿರುವ ಆರೋಗ್ಯ ರಕ್ಷಣೆಯಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿವೆ.
6.ಈಶಾನ್ಯ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆ (NESIDS)
ಪ್ರಮುಖ ಸುದ್ದಿ
- ಕೇಂದ್ರ ಸರ್ಕಾರ ಕೇಂದ್ರ ಪ್ರಾಯೋಜಿತ ಈಶಾನ್ಯ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೆ ಒಪ್ಪಿಗೆ ನೀಡಿದೆ. 2017-18ನೇ ಸಾಲಿನಲ್ಲಿ ಇದು ಜಾರಿಗೆ ಬರಲಿದೆ.
- ಈ ಯೋಜನೆಗೆ ಶೇಕಡ 100ರಷ್ಟು ಅನುದಾನವನ್ನು ಕೇಂದ್ರ ಸರ್ಕಾರವೇ ಒದಗಿಸುತ್ತದೆ ಹಾಗೂ 2020ರ ಮಾರ್ಚ್ವರೆಗೆ ಈಶಾನ್ಯ ರಾಜ್ಯಗಳಲ್ಲಿ ನಿರ್ದಿಷ್ಟ ಮೂಲಸೌಕರ್ಯ ವಲಯದಲ್ಲಿನ ಅಂತರವನ್ನು ಬಗೆಹರಿಸಲು ಇದು ಪೂರಕವಾಗಲಿದೆ.
ಎನ್ಇಎಸ್ಐಡಿಎಸ್ ಪ್ರಮುಖ ಲಕ್ಷಣಗಳು
- ಕೇಂದ್ರ ಪ್ರಾಯೋಜಿತ ಈಶಾನ್ಯ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯು ಮುಖ್ಯವಾಗಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದ್ದು ಪ್ರಮುಖವಾಗಿ ಈ ಕೆಳಗಿನ ಕ್ಷೇತ್ರಗಳನ್ನು ಇದು ಒಳಗೊಳ್ಳುತ್ತದೆ.
- ಭೌತಿಕ ಮೂಲಸೌಕರ್ಯವಾದ ನೀರು ಸರಬರಾಜು, ವಿದ್ಯುತ್, ಸಂಪರ್ಕ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಯೋಜನೆಯನ್ನು ಒಳಗೊಳ್ಳಲಿದೆ.
- ಸಾಮಾಜಿಕ ವಲಯದ ಮೂಲಸೌಕರ್ಯಗಳು. ಇದರಲ್ಲಿ ಮುಖ್ಯವಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಲಾಗುತ್ತದೆ.
ಈಶಾನ್ಯ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಪ್ರಯೋಜನಗಳು
- ಕೇಂದ್ರ ಸರ್ಕಾರದ ಕೇಂದ್ರ ಪ್ರಾಯೋಜಿತ ಈಶಾನ್ಯ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಸೃಷ್ಟಿಸಲಾದ ಮೂಲಸೌಕರ್ಯದಿಂದ ಕೇವಲ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ಕ್ಷೇತ್ರಗಳನ್ನು ಬಲಪಡಿಸುವುದು ಮಾತ್ರವಲ್ಲದೇ, ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಾಗಿ ಪ್ರಚಾರವಾಗದೇ ಇರುವ ಪ್ರವಾಸೋದ್ಯಮ ವಲಯದ ಅವಕಾಶಗಳನ್ನು ಕೂಡಾ ಬಳಕೆ ಮಾಡಿಕೊಳ್ಳುವುದು ಇದರ ಉದ್ದೇಶ.
- ಈ ಮೂಲಕ ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಿಕೊಡಲಾಗುತ್ತದೆ. ಈ ಯೋಜನೆಯು ಇಡೀ ಈಶಾನ್ಯ ರಾಜ್ಯಗಳ ಅಭಿವೃದ್ಧಿಯ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಲಿದೆ.
ಎನ್ಎಲ್ಸಿಪಿಆರ್ ನಿಧಿ ಬಗ್ಗೆ
- ಇದಕ್ಕಾಗಿ ಕೇಂದ್ರ ಸರ್ಕಾರವು ಹಾಲಿ ಇರುವ ಲ್ಯಾಪ್ಸ್ ಆಗದ ಕೇಂದ್ರೀಯ ಸಂಪನ್ಮೂಲಗಳ ನಿಧಿಯನ್ನು ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 2020ರ ಮಾರ್ಚ್ವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ.
- ಇದರ ಅನುದಾನ ಹಂಚಿಕೆ ಪ್ರಮಾಣ 90 : 10 ಅಂತರದಲ್ಲಿರುತ್ತದೆ. ಇದಕ್ಕೆ 53 ಸಾವಿರ ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ. ಇದು ಎಲ್ಲ ಜಾರಿ ಹಂತದಲ್ಲಿರುವ ಯೋಜನೆಗಳು ಪೂರ್ಣಗೊಳ್ಳಲು ನೆರವಾಗಲಿದೆ.
- ಇದರ ವಿಸ್ತ೦ತವಾದ ಉದ್ದೇಶವೆಂದರೆ, ಈಶಾನ್ಯ ರಾಜ್ಯಗಳಲ್ಲಿ ಸಾಮಾಜಿಕ ಮೂಲಸೌಕರ್ಯ ವಲಯದಲ್ಲಿ ತ್ವರಿತವಾದ ಅಭಿವೃದ್ಧಿ ಸಾಧಿಸಲು ನೆರವಾಗುವುದು. ಅದರಲ್ಲೂ ಮುಖ್ಯವಾಗಿ ಕೆಲ ವಲಯಗಳಿಗೆ ಸಿಕ್ಕಿಂನಲ್ಲಿ ಭಾರಿ ಪ್ರಮಾಣದ ನೆರವು ಬರುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವುದು.
- ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವಾಲಯ ಎನ್ಎಲ್ಸಿಪಿಆರ್ನಿಂದ ಇದಕ್ಕೆ ಅನುದಾನ ಮಂಜೂರು ಮಾಡಲಿದ್ದು, ವಿವಿಧ ಈಶಾನ್ಯ ರಾಜ್ಯಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಇದು ನೆರವಾಗಲಿದೆ. ಎನ್ಎಲ್ಸಿಪಿಆರ್ ಕೇಂದ್ರ ಯೋಜನೆಯಡಿ ಸಾಮಾನ್ಯ ಬಜೆಟ್ನಲ್ಲಿ ಇದಕ್ಕೆ ಅಗತ್ಯವಾದ ನೆರವು ನೀಡಲಾಗುತ್ತದೆ.
7. ಸಾಗರ ಶಾಸ್ತ್ರ ಕಾರ್ಯಕಾಚರಣೆಯ ಅಂತಾರಾಷ್ಟ್ರೀಯ ತರಬೇತಿ ಕೇಂದ್ರ (International Training Centre for Operational Oceanography)
ಪ್ರಮುಖ ಸುದ್ದಿ
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಹೈದ್ರಾಬಾದ್ ನಲ್ಲಿ ಯುನೆಸ್ಕೋದ ಪ್ರವರ್ಗ-2 ಕೇಂದ್ರ (ಸಿ 2 ಸಿ) ಆಗಿ ಸಮುದ್ರಶಾಸ್ತ್ರ ಕಾರ್ಯಚರಣೆಯ ಅಂತಾರಾಷ್ಟ್ರೀಯ ತರಬೇತಿ ಕೇಂದ್ರವನ್ನು ಸ್ಥಾಪಿಸಲು ತನ್ನ ಅನುಮೋದನೆ ನೀಡಿದೆ.
- ಹಿಂದೂ ಮಹಾಸಾಗರದ ಅಂಚಿನ (ಐಓಆರ್) ರಾಷ್ಟ್ರಗಳು, ಹಿಂದೂ ಮಹಾಸಾಗರ ಮತ್ತು ಅಟ್ಲಾಂಟಿಕ್ ಸಾಗರದ ಗಡಿಯ ಆಫ್ರಿಕಾ ದೇಶಗಳು, ಯುನೆಸ್ಕೋ ಚೌಕಟ್ಟಿನಡಿಯಲ್ಲಿ ಬರುವ ಸಣ್ಣ ದ್ವೀಪಗಳ ಸಾಮರ್ಥ್ಯ ಅಭಿವೃದ್ಧಿಯ ನಿಟ್ಟಿನಲ್ಲಿ ತರಬೇತಿ ಕೇಂದ್ರ ಸ್ಥಾಪಿಸುವುದು ಈ ಒಪ್ಪಂದದ ಉದ್ದೇಶವಾಗಿದೆ.
ಸಾಗರಶಾಸ್ತ್ರ ಕಾರ್ಯಚರಣೆ ಎಂದರೇನು ?
- ಸಾಗರಶಾಸ್ತ್ರ ಕಾರ್ಯಚರಣೆಯು ಮೀನುಗಾರ, ವಿಪತ್ತು ನಿರ್ವಹಣೆ, ಹಡಗು, ಬಂದರುಗಳು, ಕರಾವಳಿ ರಾಷ್ಟ್ರಗಳು, ನೌಕಾಪಡೆ, ಕರಾವಳಿ ಭದ್ರತೆ, ಪರಿಸರ, ಕಡಲಾಚೆಯ ಉದ್ಯಮಗಳ ದೈನಂದಿನ ಕಾರ್ಯಾಚರಣೆ ಒಳಗೊಂಡಂತೆ ವಿವಿಧ ಕ್ಷೇತ್ರಗಳಿಗೆ ಮಾಹಿತಿ ಸೇವೆಗಳನ್ನು ಒದಗಿಸುವ ಸಲುವಾಗಿ ವ್ಯವಸ್ಥಿತ ಸಮುದ್ರಶಾಸ್ತ್ರದ ಅಧ್ಯಯನಗಳನ್ನು ನಡೆಸುವ ಒಂದು ಚಟುವಟಿಕೆಯಾಗಿದೆ.
ಮಹತ್ವ
- ಈ ಕೇಂದ್ರವು ಸಾಮರ್ಥ್ಯವರ್ಧನೆ ಮತ್ತು ತರಬೇತಿ, ಜ್ಞಾನ ವಿನಿಮಯ ಮತ್ತು ಮಾಹಿತಿಯ ವಿನಿಮಯ ಕ್ಷೇತ್ರದಲ್ಲಿ ನೆರವು ಒದಗಿಸುತ್ತದೆ ಮತ್ತು ಯುನೆಸ್ಕೋದ ಕ್ರಮದ ಪರಿಣಾಮ ಮತ್ತು ಯುನೆಸ್ಕೋದ ಮತ್ತು ದೃಷ್ಟಿಯನ್ನು ಹೆಚ್ಚಿಸುವ ಮೂಲಕ ಅದರ ಅಂತರ ಸರ್ಕಾರೀಯ ಸಾಗರಶಾಸ್ತ್ರ ಆಯೋಗ (ಐಓಸಿ) ಮೌಲ್ಯಯುತ ಸಂಪನ್ಮೂಲ ಪ್ರತಿನಿಧಿಸುತ್ತದೆ.
- ಯುನೆಸ್ಕೋ ಪ್ರವರ್ಗ -2 ಕೇಂದ್ರ ಸ್ಥಾಪನೆಯು ಭಾರತಕ್ಕೆ ಹಿಂದೂ ಮಹಾಸಾಗರದಲ್ಲಿ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮಲು ಅವಕಾಶ ಒದಗಿಸುತ್ತದೆ. ಇದು ಹಿಂದೂ ಮಹಾಸಾಗರದ ಗಡಿಯ ಆಫ್ರಿಕಾ ದೇಶಗಳು ಹಾಗೂ ದಕ್ಷಿಣ ಏಷ್ಯಾ ಸೇರಿದಂತೆ ಹಿಂದೂ ಮಹಾಸಾಗರದಂಚಿನ ರಾಷ್ಟ್ರಗಳೊಂದಿಗೆ ಸಹಕಾರ ಮತ್ತು ಕಾರ್ಯಕ್ರಮಗಳ ಸುಧಾರಣೆ ಸಾಧಿಸಲು ಭಾರತಕ್ಕೆ ನೆರವಾಗಲಿದೆ.
- ಕೇಂದ್ರದ ಸ್ಥಾಪನೆಯು ಸಾಗರ ಮತ್ತು ಕರಾವಳಿ ಸಮರ್ಥನೀಯತೆಯ ಸಮಸ್ಯೆಗಳನ್ನು ಬಗೆಹರಿಸಲು ವಿಶ್ವಾದ್ಯಂತ ಹೆಚ್ಚುತ್ತಿರುವ ತಾಂತ್ರಿಕ ಮತ್ತು ನಿರ್ವಹಣಾ ಸಾಮರ್ಥ್ಯವನ್ನು ನಿರ್ಮಿಸುವ ಅಗತ್ಯಕ್ಕೆ ಸ್ಪಂದಿಸುತ್ತದೆ ಮತ್ತು ಸಾಗರ ನೈಸರ್ಗಿಕ ಅಪಾಯಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಸಜ್ಜುಗೊಳಿಸುತ್ತದೆ. ಈ ಕೇಂದ್ರವು,ಭೌಗೋಳಿಕ ಪ್ರದೇಶದಲ್ಲಿ ಸಾಗರ ವೈಜ್ಞಾನಿಕ ಸಂಶೋಧನಾ ಸಾಮರ್ಥ್ಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಸ್ಥಿರ ಅಭಿವೃದ್ಧಿ ಗುರಿ -14 (ಎಸ್.ಡಿ.ಜಿ 14) ಗುರಿ ಸಾಧನೆಗೂ ಕೊಡುಗೆ ನೀಡಲಿದೆ, ಇದು ಮುಂದುವರಿಯುತ್ತಿರುವ ಸಣ್ಣ ದ್ವೀಪರಾಷ್ಟ್ರಗಳು, ಅತಿ ಕಡಿಮೆ ಅಭಿವೃದ್ದಿ ಹೊಂದಿರುವ ರಾಷ್ಟ್ರಗಳಿಗೆ ಬೆಂಬಲ ನೀಡುವ ಬದ್ಧತೆಯನ್ನೂ ಪೂರೈಸಲಿದೆ.
- ಈ ಸಿ2ಸಿ ವಿದ್ಯಾರ್ಥಿಗಳ ಮತ್ತು ಇತರ ಸ್ಪರ್ಧಿಗಳ ಕೌಶಲ ಸುಧಾರಣೆಯ ಇಂಗಿತ ಹೊಂದಿದೆ, ಇದು ಭಾರತದೊಳಗೆ ಮತ್ತು ಹೊರಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿದೆ. ಸಿ2ಸಿ ಸ್ಥಾಪನೆಯು ಭಾರತದಲ್ಲಿ ಉದ್ಯೋಗ ಸೃಷ್ಟಿಗೆ ಪೂರಕ ಬೆಳವಣಿಗೆ ಒದಗಿಸುತ್ತದೆ ಎಂದೂ ನಿರೀಕ್ಷಿಸಲಾಗಿದೆ. ಈ ಕೇಂದ್ರವು ಪ್ರಸ್ತುತ ಹೈದ್ರಾಬಾದ್ ನ ಭಾರತೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (ಐಎನ್.ಸಿ.ಓ.ಐ.ಎಸ್.)ದಲ್ಲಿ ಲಭ್ಯವಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಕಾರ್ಯಾರಂಭ ಮಾಡುತ್ತಿದೆ.
8. ಭಾರತ ಮತ್ತು ಕೊಲಂಬಿಯಾ ನಡುವೆ ಕೃಷಿ ಮತ್ತು ಮೀನುಗಾರಿಕೆ ಕ್ಷೇತ್ರದಲ್ಲಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ
ಪ್ರಮುಖ ಸುದ್ದಿ
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೃಷಿ ಮತ್ತು ಮೀನುಗಾರಿಕೆ ಕ್ಷೇತ್ರದಲ್ಲಿ ಭಾರತ ಮತ್ತು ಕೊಲಂಬಿಯಾ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಈ ತಿಳಿವಳಿಕೆ ಒಪ್ಪಂದವು ಕೃಷಿ ಮತ್ತು ಮೀನುಗಾರಿಕೆ ಕ್ಷೇತ್ರದಲ್ಲಿ ಈ ಕೆಳಗಿನ ಸಹಕಾರವನ್ನು ಒದಗಿಸುತ್ತದೆ:
- ನಾವಿನ್ಯಪೂರ್ಣ ಕೃಷಿ ಪದ್ಧತಿಗಳು/ದೃಷ್ಟಿಕೋನಗಳು
- ಹೊಸ ಕೃಷಿ ಯಾಂತ್ರೀಕರಣ
ಕೃಷಿ ಮಾರುಕಟ್ಟೆಯಲ್ಲಿನ ಯಶಸ್ವೀ ಮಾದರಿಗಳು
- ಬಿತ್ತನೆಬೀಜ ಉತ್ಪಾದನೆಗಾಗಿ ಕೃಷಿ ಕಂಪನಿಗಳ ಸಹಯೋಗದೊಂದಿಗೆ ಯೋಜನೆ ಅಭಿವೃದ್ಧಿಪಡಿಸುವುದು.
- ತೋಟಗಾರಿಕೆ (ತರಕಾರಿ, ಹಣ್ಣು ಮತ್ತು ಹೂವು)ಯಲ್ಲಿ ನಾವಿನ್ಯಪೂರ್ಣ ಉತ್ಪಾದನೆ ಮಾದರಿ ಮತ್ತು ಮೌಲ್ಯ ಸೃಷ್ಟಿ ಪ್ರಕ್ರಿಯೆಗಳು.
- ಮಾಹಿತಿಯ ವಿನಿಮಯ/ಎಸ್.ಪಿ.ಎಸ್. ತಜ್ಞರ ಭೇಟಿ ವಿನಿಮಯ
ತೈಲ ತಾಳೆ ಮತ್ತು ಎಣ್ಣೆ ಕಾಳು ಸಂಶೋಧನೆಯಲ್ಲಿ ಸಹಕಾರ
- ಮೀನುಗಾರಿಕಾ ಕ್ಷೇತ್ರದಲ್ಲಿ ಸಾಗರ ಕೈಗಾರಿಕಾ ಮೀನುಗಾರಿಕೆ, ಅಕ್ವಾ ಕಲ್ಚರ್ ಮತ್ತು ಸಂಶೋಧನೆ ಹಾಗೂ ತರಬೇತಿ,
- ಸಣ್ಣ ಮತ್ತು ದೊಡ್ಡದಾಗಿ ಮೆಲುಕು ಹಾಕುವ ಪ್ರಾಣಿಗಳು (ಜಾನುವಾರು, ಕುರಿ ಮತ್ತು ಮೇಕೆ) ಹಾಗೂ ಹಂದಿ ಉತ್ಪಾದಕತೆ, ಕಾಯಿಲೆಗಳು ಮತ್ತು ರೋಗಪತ್ತೆ, ಮತ್ತು
- ಹಂದಿ ಮಾಂಸ ಸಂಸ್ಕರಣೆ ಮತ್ತು ಮೌಲ್ಯವರ್ಧನೆ.
- ಈ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ, ಮುಂದಿನ ಎರಡು ವರ್ಷಗಳಲ್ಲಿ ಕೆಲಸದ ಯೋಜನೆಗಳನ್ನು ತಯಾರಿಸಲು / ಅಂತಿಮಗೊಳಿಸಲು, ಆ ಅವಧಿಯಲ್ಲಿ ಕೈಗೊಳ್ಳಬೇಕಾದ / ಚಟುವಟಿಕೆಗಳನ್ನು ನಿರ್ಧಿಷ್ಟಪಡಿಸಲು ಒಂದು ಜಂಟಿ ಕಾರ್ಯ ಗುಂಪು (ಜೆಡಬ್ಲ್ಯುಜಿ)ಯನ್ನು ಸ್ಥಾಪಿಸಲಾಗುತ್ತದೆ.
- ಈ ತಿಳಿವಳಿಕೆ ಒಪ್ಪಂದವು ಮೊದಲಿಗೆ ಐದು ವರ್ಷಗಳ ಅವಧಿಯದ್ದಾಗಿರುತ್ತದೆ ಮತ್ತು ಇಬ್ಬರೂ ಪಕ್ಷಕಾರರು ಅದನ್ನು ರದ್ದುಪಡಿಸುವ ಇಂಗಿತ/ ಇಚ್ಛೆ ವ್ಯಕ್ತಪಡಿಸದಿದ್ದಲ್ಲಿ ತಂತಾನೆ ಮುಂದಿನ ಐದು ವರ್ಷಗಳ ಅವಧಿಗೆ ವಿಸ್ತರಣೆಯಾಗಲಿದೆ.
ONLY FOR PRELIMS
9. ನ್ಯಾಯ ಗ್ರಾಮ್ ಯೋಜನೆ
- ಇದು ಅಲಹಾಬಾದ್ ಹೈಕೋರ್ಟ್ ನಲ್ಲಿ ನ್ಯಾಯಾಂಗ ಅಕಾಡೆಮಿ ಮತ್ತು ಆಡಿಟೋರಿಯಂನೊಂದಿನ ಮಾದರಿ ಪಟ್ಟಣ
- ಇದಕ್ಕೆ ಯು.ಪಿ. ರಾಜ್ಯ ಸರ್ಕಾರವು ಈ ನ್ಯಾಯಾಂಗ ಮೂಲಸೌಕರ್ಯಕ್ಕೆ ಹಣವನ್ನು ಒದಗಿಸಿದೆ.
- ಯು.ಪಿ ಸಾರ್ವಜನಿಕ ಕಾರ್ಯಗಳ ಇಲಾಖೆ ನಾಮನಿರ್ದೇಶಿತ ನಿರ್ಮಾಣ ಸಂಸ್ಥೆಯಾಗಿದೆ.
- ಸಮಕಾಲೀನ ಶಾಸನ ಮತ್ತು ಕಾನೂನಿನ ಕ್ಷೇತ್ರದಲ್ಲಿನ ಬೆಳವಣಿಗೆಯಲ್ಲಿ ನ್ಯಾಯಾಧೀಶರಿಗೆ ಸಹಾಯ ಮಾಡುತ್ತದೆ.
10. ಐಎಎಫ್‘ನಲ್ಲಿ 45 ವರ್ಷ ಸುದೀರ್ಘ ಸೇವೆ ಸಲ್ಲಿಸಿದ್ದ ಎಂಐ-8 ಪ್ರತಾಪ್ ಹೆಲಿಕಾಪ್ಟರ್‘ಗೆ ವಿದಾಯ
- ಭಾರತೀಯ ವಾಯುಪಡೆಯಲ್ಲಿ (ಐಎಎಫ್) 45 ವರ್ಷಗಳ ಕಾಲ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ಎಂಐ-8 ಹೆಲಿಕಾಪ್ಟರ್ ಪ್ರತಾಪ್ ಇತ್ತೀಚಿಗೆ ವಾಯುನೆಲೆಯಲ್ಲಿ ತನ್ನ ಕೊನೆಯ ಹಾರಾಟ ನಡೆಸಿದವು.
- ಸುಮಾರು 50 ರಾಷ್ಟ್ರಗಳ ಸೇನೆಯಲ್ಲಿ ಬಳಕೆಯಿದ್ದ ಎಂಐ-8 ಹೆಲಿಕಾಪ್ಟರ್, 2015ರವರೆಗೆ ಮೂರನೇ ಅತೀ ಹೆಚ್ಚು ಬಳಕೆಯ ಹೆಲಿಕಾಪ್ಟರ್ ಆಗಿ ಗುರುತಿಸಿಕೊಂಡಿತ್ತು. 1971ರಲ್ಲಿ ರಷ್ಯಾದಿಂದ ದೇಶಕ್ಕೆ ಆಮದಾದ ಎಂಐ-8 ಹೆಲಿಕಾಪ್ಟರ್ ಭಾರತೀಯ ವಾಯುಪಡೆಗೆ 1972ರಲ್ಲಿ ಸೇರ್ಪಡೆಯಾಗಿತ್ತು.
- 1971ರಿಂದ 1988ರವರೆಗೆ ಒಟ್ಟು 107 ಎಂಐ-8 ಹೆಲಿಕಾಪ್ಟರ್ ಗಳನ್ನು ಪ್ರತಾಪ್ ಹೆಸರಿನಲ್ಲಿ ಸೇರ್ಪಡೆಗೊಳಿಸಿದ್ದು, ದೇಶದ ಆಂತರಿಕ ಭದ್ರತೆ, ಯುದ್ಧ ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿವೆ.