18th JULY
CLICK HERE TO JOIN NIALP FOUNDATION COURSE-2019
1.ಗ್ರಾಹಕರೇ ಡೇಟಾದ ನೈಜ ಮಾಲೀಕರು-ಟ್ರಾಯ್
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಪರೀಕ್ಷೆಗಾಗಿ -ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಬಗ್ಗೆ
ಮುಖ್ಯ ಪರೀಕ್ಷೆಗಾಗಿ – ವೈಯಕ್ತಿಕ ಮಾಹಿತಿಯನ್ನು ಖಾಸಗಿತನದಿಂದ ಹೇಗೆ ರಕ್ಷಿಸಬಹುದು?
ಪ್ರಮುಖ ಸುದ್ದಿ
- ಅಂತರ್ಜಾಲ, ಸಾಮಾಜಿಕ ಜಾಲತಾಣ ಮತ್ತು ಮೊಬೈಲ್ಗಳಿಂದ ಮಾಹಿತಿ (ಡೇಟಾ) ಕಳವು ಪ್ರಕರಣ ಹೆಚ್ಚಿರುವ ಬೆನ್ನಿಗೆ ಬಳಕೆದಾರರ ಖಾಸಗಿತನ, ಡೇಟಾ ಒಡೆತನ ಮತ್ತು ಸುರಕ್ಷತೆ ವಿಷಯದಲ್ಲಿ ಸರ್ಕಾರ ಸಮರ್ಪಕವಾದ ನಿಯಂತ್ರಣ ನೀತಿ ರೂಪಿಸಬೇಕು. ಏಕೆಂದರೆ ಮಾಹಿತಿಯ ನೈಜ ಮಾಲೀಕರು ಮತ್ತು ಮೂಲಹಕ್ಕನ್ನು ಹೊಂದಿರುವವರು ಈ ಸೇವೆಗಳನ್ನು ಬಳಸುವಂತಹ ಗ್ರಾಹಕರು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸರ್ಕಾರಕ್ಕೆ ಸಲಹೆ ನೀಡಿದೆ.
ಮುಖ್ಯ ಅಂಶಗಳು
- ಡೇಟಾ ಒಡೆತನ ಗ್ರಾಹಕರಿಗೆ ಸೇರಿದ್ದು. ಸೇವಾದಾತ ಟೆಲಿಕಾಂ ಕಂಪನಿ, ಇಂಟರ್ನೆಟ್ ಆಧಾರಿತ ಸೇವಾ ಸಂಸ್ಥೆಗಳು ಅಥವಾ ಸ್ಮಾರ್ಟ್ ಫೋನ್ ತಯಾರಕರಿಗೆ ಸೇರಿದ್ದಲ್ಲ ಎಂದು ಟ್ರಾಯ್ ಹೇಳಿದೆ. ಮಾಹಿತಿ ಸುರಕ್ಷತೆಗೆ ಪ್ರಸ್ತುತ ಅನುಸರಿಸುತ್ತಿರುವ ಕ್ರಮ ಗ್ರಾಹಕರಿಗೆ ಪರಿಪೂರ್ಣ ಸುರಕ್ಷತೆಯನ್ನು ಒದಗಿಸುತ್ತಿಲ್ಲ ಎಂದಿದೆ.
- ಯಾವುದೇ ಸೇವೆಯಲ್ಲಿ ಏಕಪಕ್ಷೀಯ ಒಪ್ಪಂದವು ಸಂಕೀರ್ಣವಾಗಿರುತ್ತದೆ ಮತ್ತು ಅರ್ಥ ಮಾಡಿಕೊಳ್ಳುವುದೂ ಕಷ್ಟಕರ.
- ಆದರೂ ಅನೇಕ ಆಪ್ಗಳು ಮತ್ತು ಮೊಬೈಲ್ ತಯಾರಕರು ಇದನ್ನೇ ಅನುಸರಿಸುತ್ತಿದ್ದಾರೆ. ಇದನ್ನು ಕೊನೆಗಾಣಿಸಲು ಮೊಬೈಲ್ ಸೆಟ್ ಮತ್ತು ಆಪ್ಗಳನ್ನು ಡೇಟಾ ಖಾಸಗಿತನ ಕಾಯ್ದೆ ವ್ಯಾಪ್ತಿಗೆ ತರಬೇಕು. ಗ್ರಾಹಕರಿಂದ ಅನಗತ್ಯವಾಗಿ ಮತ್ತು ಸಂಬಂಧಿಸದ ಡೇಟಾ ಸಂಗ್ರಹಿಸುವುದನ್ನು ನಿರ್ಬಂಧಿಸಬೇಕು ಎಂದು ಟ್ರಾಯ್ ಶಿಫಾರಸು ಮಾಡಿದೆ.
- ಪ್ರತಿಯೊಬ್ಬ ಬಳಕೆದಾರರಿಗೂ ವೈಯಕ್ತಿಕ ಮಾಹಿತಿ ಸಂಗ್ರಹ ಇರುತ್ತದೆ. ಅದರ ಮೇಲೆ ಅವರಿಗೆ ಪರಿಪೂರ್ಣ ಹಕ್ಕು ಇರುತ್ತದೆ. ಅವರ ಅನುಮತಿ ಇಲ್ಲದೆ ಬೇರೆಯವರು ಈ ಮಾಹಿತಿಯನ್ನು ಪಡೆಯಲಾಗದು. ಆದರೆ, ಈಗ ಈ ಮಾಹಿತಿಗೆ ನಾಜೂಕಿನಿಂದ ಕನ್ನ ಹಾಕಲಾಗುತ್ತಿದೆ.
- ಇದನ್ನು ತಡೆಯುವ ನಿಟ್ಟಿನಲ್ಲಿ ಮೊಬೈಲ್ ಸೆಟ್, ನಿರ್ವಹಣಾ ವ್ಯವಸ್ಥೆ, ಅಂತರ್ಜಾಲ ಹುಡುಕಾಟ (ಬ್ರೌಸರ್ಸ್) ಮತ್ತು ಆಪ್ಗಳನ್ನು ನಿಯಂತ್ರಿಸುವ ನೀತಿಯನ್ನು ಸರ್ಕಾರ ರೂಪಿಸಬೇಕು ಎಂದು ಟ್ರಾಯ್ ಸಲಹೆ ನೀಡಿದೆ. ಡೇಟಾದ ಖಾಸಗಿತನ ಕುರಿತಂತೆ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಸಮಿತಿ ವರದಿ ಬೆನ್ನಿಗೆ ಟ್ರಾಯ್ ಈ ಸಲಹೆಗಳನ್ನು ಸರ್ಕಾರಕ್ಕೆ ನೀಡಿದೆ.
ಯಾವುದರ ಮೇಲೆ ಪರಿಣಾಮ?
- ಟ್ರಾಯ್ ನೀಡಿರುವ ಸಲಹೆಯಿಂದ ಸಾಮಾಜಿಕ ಜಾಲತಾಣ ಫೇಸ್ಬುಕ್, ಮೊಬೈಲ್ ತಯಾರಿಕಾ ಕಂಪನಿಗಳಲ್ಲಿ ದಿಗ್ಗಜಗಳಾದ ಆಪಲ್, ಸ್ಯಾಮ್ಂಗ್, ಗೂಗಲ್ಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಪ್ರಮುಖ ಶಿಫಾರಸುಗಳು
- ವೈಯಕ್ತಿಕ ಡೇಟಾ ಸಂಗ್ರಹ ಮತ್ತು ಪರಿಶೀಲನೆಗೂ ಮೊದಲು ಗ್ರಾಹಕರಿಂದ ಅನುಮತಿ ಪಡೆದುಕೊಳ್ಳಬೇಕು
- ಅನಗತ್ಯ ಮತ್ತು ಸಂಬಂಧಿಸದ ಡೇಟಾ ಸಂಗ್ರಹಕ್ಕೆ ನಿರ್ಬಂಧ
- ಮೊಬೈಲ್ ತಯಾರಕರು ಮತ್ತು ಆಪ್ಗಳ ಏಕಪಕ್ಷೀಯ ಒಪ್ಪಂದ ಕೊನೆಯಾಗಬೇಕು
- ಆಪ್ ಮತ್ತು ಮೊಬೈಲ್ ತಯಾರಕರನ್ನೂ ಡೇಟಾ ಖಾಸಗಿತನ ಕಾಯ್ದೆ ವ್ಯಾಪ್ತಿಗೆ ತರಬೇಕು.
2.ಭಾರತ – ದಕ್ಷಿಣ ಕೊರಿಯಾ ಸಂಬಂಧಗಳು: ಭವಿಷ್ಯದ ಸಹಕಾರಕ್ಕೆ ಸಿದ್ಧತೆ
ಪ್ರಮುಖ ಸುದ್ದಿ
- ಭಾರತದ ‘ಆಕ್ಟ್ ಈಸ್ಟ್’ ಮತ್ತು ದಕ್ಷಿಣ ಕೊರಿಯಾದ ‘ಹೊಸ ದಕ್ಷಿಣ ನೀತಿ’ ನಡುವಿನ ಜೋಡಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಮೂನ್ ಜೇ-ಇವರು ಭಾರತ-ದಕ್ಷಿಣ ಕೊರಿಯಾ ದ್ವಿಪಕ್ಷೀಯ ‘ವಿಶೇಷ ಕಾರ್ಯತಂತ್ರದ ಸಹಭಾಗಿತ್ವ’ದಲ್ಲಿ ಮಾಡಿದ್ದಾರೆ.
ಮುಖ್ಯ ಅಂಶಗಳು
- ‘ಮೇಕ್ ಇನ್ ಇಂಡಿಯಾ’, ‘ಸ್ಕಿಲ್ ಇಂಡಿಯಾ’, ‘ಡಿಜಿಟಲ್ ಇಂಡಿಯಾ’, ‘ಸ್ಟಾರ್ಟ್-ಅಪ್ ಇಂಡಿಯಾ’ ಮತ್ತು ‘ಸ್ಮಾರ್ಟ್ ಸಿಟೀಸ್’ ಸೇರಿದಂತೆ ಭಾರತದ ಪ್ರಮುಖ ಉಪಕ್ರಮಗಳಲ್ಲಿ ದಕ್ಷಿಣ ಕೊರಿಯಾ ಅಭಿವೃದ್ಧಿ ಪಾಲುದಾರರಾಗಿದ್ದು, 10 ಬಿಲಿಯನ್ ಡಾಲರ್ ಗಳಷ್ಟು ಹಣವನ್ನು ಅವರಿಗೆ ನೀಡುವ ಕೊಡುಗೆಯನ್ನು ದಕ್ಷಿಣ ಕೊರಿಯಾ ಮಾಡಿತ್ತು.
ಮುಖ್ಯ ಪರೀಕ್ಷೆಗಾಗಿ ಸಂಕ್ಷಿಪ್ತ ವಿವರಣೆ
- ದಕ್ಷಿಣ ಕೊರಿಯಾವು ಹಡಗು ನಿರ್ಮಾಣ, ಅರೆವಾಹಕಗಳು, ಆಟೋಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ರಫ್ತು-ಚಾಲಿತ ಆರ್ಥಿಕತೆಯನ್ನು ಸೃಷ್ಟಿಸಿದ್ದು ಇದಕ್ಕೆ ಭಾರತವು ವಿಸ್ತರಿಸುತ್ತಿರುವ ಮಾರುಕಟ್ಟೆಯನ್ನು ಒದಗಿಸುತ್ತದೆ. ಐಟಿ ತಂತ್ರಾಂಶ ಮತ್ತು ದಕ್ಷಿಣ ಕೊರಿಯಾದ ಐಟಿ ಯಂತ್ರಾಂಶ, ವಿನ್ಯಾಸ, ಎಂಜಿನಿಯರಿಂಗ್ ಮತ್ತು ಉತ್ಪಾದನೆಗಳಲ್ಲಿ ಭಾರತದ ಸಾಮರ್ಥ್ಯದ ನಡುವಿನ ಹೊಂದಾಣಿಕೆ ಹೆಚ್ಚುತ್ತಿದೆ.
- ಆದಾಗ್ಯೂ, ಭಾರತವು ಕೊರಿಯನ್ ಆಮದು ಮಾರುಕಟ್ಟೆಯನ್ನು ಪ್ರವೇಶಿಸುವ ಉದ್ದೇಶವನ್ನು ಹೊಂದಿದ್ದರೆ, ಪ್ರಾಥಮಿಕ ಸಾಮಗ್ರಿಗಳೊಂದಿಗೆ ಹೈಟೆಕ್ ಉತ್ಪನ್ನಗಳತ್ತ ಭಾರತ ಗಮನ ಕೇಂದ್ರಿಕರಿಸಬೇಕು.
- 2017 ರಲ್ಲಿ ದ್ವಿಪಕ್ಷೀಯ ವಹಿವಾಟು ಯುಎಸ್ $ 20 ಬಿಲಿಯನ್ ಗಳಾಗಿದ್ದರು, ಕೊರಿಯನ್ ಸಂಚಿತ ಎಫ್ಡಿಐ ಭಾರತಕ್ಕೆ 8 ಶತಕೋಟಿ ಡಾಲರ್ ಗಳಷ್ಟಿತ್ತು. ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸಲು ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದವನ್ನು (ಸಿಇಪಿಎ) ನವೀಕರಿಸಲು ಎರಡೂ ಪಕ್ಷಗಳು ಮಾತುಕತೆ ನಡೆಸುತ್ತಿವೆ.
- ಆರಂಭಿಕ ಜಂಟಿ ಹೇಳಿಕೆ ಪರಿಷ್ಕೃತ ಸಿಇಪಿಎ ಪ್ಯಾಕೇಜ್ ಸೀಗಡಿ, ಮೊಳಕೆ ಮತ್ತು ಸಂಸ್ಕರಿಸಿದ ಮೀನು ಸೇರಿದಂತೆ ವ್ಯಾಪಾರ ಉದಾರೀಕರಣಕ್ಕಾಗಿ ಪ್ರಮುಖ ಪ್ರದೇಶಗಳನ್ನು ಗುರುತಿಸಲು ಸಹಿ ಹಾಕಿದೆ.
- ಕೊರಿಯಾ ಸಿಇಒನ ಫೋರಂನ ರಿಪಬ್ಲಿಕ್ ಆಫ್ ಇಂಡಿಯಾ ರಿಪಬ್ಲಿಕ್ ಆಟೋ, ಇನ್ಫ್ರಾಸ್ಟ್ರಕ್ಚರ್, ಸರ್ವಿಸಸ್, ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಸ್ಟಾರ್ಟ್ ಅಪ್ ಗಳು ಮತ್ತು ಎಂಎಸ್ಎಂಇಗಳು, ಎಸ್ಎಂಇಗಳು ಮತ್ತು ರಕ್ಷಣಾ ಉತ್ಪಾದನೆ ಸೇರಿದಂತೆ ನವೀನ ಪರಿಸರ ವ್ಯವಸ್ಥೆಯನ್ನು ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಆರು ಕಾರ್ಯನಿರತ ಗುಂಪಿನ ಸಂಸ್ಥೆಗಳಿಗೆ ಕಾರಣವಾಗಿದೆ.
- ‘ವಿಶೇಷ ಕಾರ್ಯತಂತ್ರದ ಸಹಭಾಗಿತ್ವಕ್ಕೆ’ ಆದ್ಯತೆ ನೀಡಿರುವ, ಉಭಯ ನಾಯಕರು ರಕ್ಷಣಾ ಉದ್ಯಮದ ಸಹಕಾರವನ್ನು ತೀವ್ರಗೊಳಿಸುವ ಬಗ್ಗೆ ಒತ್ತಿಹೇಳಿದ್ದಾರೆ. ಹಿಂದೆ 2017 ರಲ್ಲಿ, ಎರಡು ದೇಶಗಳು ‘ಹಡಗು ನಿರ್ಮಾಣದಲ್ಲಿ ರಕ್ಷಣಾ ಇಲಾಖೆಯ ಸಹಕಾರ’ ದಲ್ಲಿ ಒಂದು ಅಂತರ-ಸರ್ಕಾರಿ ತಿಳವಳಿಕೆ ಪತ್ರಕ್ಕೆ ಸಹಿ ಹಾಕಿದವು.
- ಪ್ರಾದೇಶಿಕ ಮಟ್ಟದಲ್ಲಿ, ಭಾರತ-ದಕ್ಷಿಣ ಕೊರಿಯಾ ಸಂಬಂಧಗಳು ಪ್ರಜಾಪ್ರಭುತ್ವದ ಸಾರ್ವತ್ರಿಕ ಮೌಲ್ಯಗಳು, ಮುಕ್ತ ಮಾರುಕಟ್ಟೆ ಆರ್ಥಿಕತೆ, ಕಾನೂನಿನ ನಿಯಮ, ಶಾಂತಿಯುತ, ಸ್ಥಿರ, ಸುರಕ್ಷಿತ, ತೆರೆದ ನಿಯಮಗಳು-ಆಧರಿತ ಕ್ರಮಕ್ಕೆ ಸಾಮಾನ್ಯ ಬದ್ಧತೆಯ ಹಂಚಿಕೆಯ ಸ್ತಂಭಗಳ ಮೇಲೆ ಸ್ಥಾಪಿತವಾಗಿದೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡುವ ಉದ್ದೇಶದಿಂದ, ದೆಹಲಿ ಮತ್ತು ಸಿಯೋಲ್ ದೇಶಗಳು ಅಫ್ಘಾನಿಸ್ತಾನದಲ್ಲಿ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳ ಮೂಲಕ ಮೂರನೇ ದೇಶಗಳಲ್ಲಿ ತ್ರಿಪಕ್ಷೀಯ ಅಭಿವೃದ್ಧಿ ಸಹಕಾರವನ್ನು ಅನ್ವೇಷಿಸಲು ನಿರ್ಧರಿಸಿದವು.
- ಇದಲ್ಲದೆ, ಈಶಾನ್ಯ ಏಷ್ಯಾ ಮತ್ತು ದಕ್ಷಿಣ ಏಷ್ಯಾ, ಭಾರತ ಮತ್ತು ದಕ್ಷಿಣ ಕೊರಿಯಾ ನಡುವಿನ ಶಸ್ತ್ರಾಸ್ತ್ರ ಪ್ರಸರಣದ ಬಗ್ಗೆ ಚರ್ಚಿಸಿವೆ. ಸಾಮೂಹಿಕ ವಿನಾಶ ಮತ್ತು ವಿತರಣಾ ವ್ಯವಸ್ಥೆಗಳ ಶಸ್ತ್ರಾಸ್ತ್ರಗಳ ಪ್ರಸರಣವನ್ನು ತಡೆಗಟ್ಟುವಲ್ಲಿ ನಿರ್ದಿಷ್ಟವಾಗಿ ಭಯೋತ್ಪಾದಕರು ಮತ್ತು ನಾನ್-ಸ್ಟೇಟ್ ಆಕ್ಟರ್ಸ್ ವಿರುದ್ಧ ಕ್ರಮ ಕೈಗೊಳ್ಳಲು ಸಹಕಾರ ನೀಡಲುಬಲ ಉಭಯ ದೇಶಗಳು ಬದ್ಧತೆ ತೋರಿವೆ.
- ಕೊರಿಯನ್ ಪೆನಿನ್ಸುಲಾದಲ್ಲಿ ಸಂಪೂರ್ಣ ನ್ಯೂಕ್ಲಿಯೈಸೇಶನ್ ಮತ್ತು ಶಾಶ್ವತವಾದ ಶಾಂತಿಗೆ ಬೆಂಬಲ ನೀಡುವುದು, ಭಾರತ-ಕೊರಿಯಾದ ಸಮಾವೇಶ ಮತ್ತು ಕಳೆದ ತಿಂಗಳು ಸಿಂಗಾಪುರದ ಐತಿಹಾಸಿಕ ಯುಎಸ್-ನಾರ್ತ್ ಕೊರಿಯಾ ಶೃಂಗಸಭೆ ಸೇರಿದಂತೆ ಪರ್ಯಾಯ ದ್ವೀಪಗಳಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಸ್ವಾಗತಿಸಲಾಯಿತು. ಕೋರಿಯಾದ ಯುದ್ಧದಲ್ಲಿ ಭಾರತದಲ್ಲಿ ಐತಿಹಾಸಿಕ ಪಾತ್ರವನ್ನು ಬಲಪಡಿಸಿತು ಮತ್ತು ಕೊರಿಯಾದ ಶಾಂತಿ ಪ್ರಕ್ರಿಯೆಯಲ್ಲಿ “ಪಾಲುದಾರ” ಎಂದು ಪ್ರಸಕ್ತ ವಿಸ್ತರಿಸುತ್ತಿರುವ ಪಾತ್ರವು, ಶಾಂತಿ ಮತ್ತು ಸ್ಥಿರತೆಯನ್ನು ಭದ್ರಪಡಿಸುವ ಕಾರ್ಯತಂತ್ರದ ಪಾಲುದಾರಿಕೆಗೆ ಮತ್ತಷ್ಟು ಆಳವನ್ನು ಸೇರಿಸಲು ಒಪ್ಪಿಕೊಂಡರು.
3.ರೈತು ಬಂಧು ಯೋಜನೆ
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ –ರೈತರ ಸಂಕಷ್ಟಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ದೇಶದಲ್ಲೇ ಇದೇ ಮೊದಲ ಬಾರಿಗೆ ತೆಲಂಗಾಣ ಸರ್ಕಾರ ಜಾರಿಗೊಳಿಸಿರುವ ಈ ವಿನೂತನ ಯೋಜನೆ ಯಾವ ರೀತಿ ಪರಿಣಾಮ ಬೀರಲಿದೆ ?ಪ್ರತಿಯೊಂದು ರಾಜ್ಯದಲ್ಲಿ ಇಂತಹ ಯೋಜನೆಯನ್ನು ರೂಪಿಸಲು ಎದರಿಸುವು ಸವಾಲುಗಳೇನು ?
ಪ್ರಮುಖ ಸುದ್ದಿ
- ಆಂಧ್ರಪ್ರದೇಶದಿಂದ ಪ್ರತ್ಯೇಕ ರಾಜ್ಯವಾದ ತೆಲಂಗಾಣ ಅನ್ನದಾತರ ಸಬಲೀಕರಣಕ್ಕಾಗಿ ಹೊಸದೊಂದು ಯೋಜನೆ ಜಾರಿಗೊಳಿಸಿದೆ. ಇಡೀ ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಳ್ಳುತ್ತಿರುವ ಈ ಯೋಜನೆ ಸಂಚಲನವನ್ನೇ ಸೃಷ್ಟಿಸಿದೆ.‘ರೈತು ಬಂಧು’ ಎಂಬ ಹೆಸರಿನಲ್ಲಿ ಕೃಷಿಕರ ಹೂಡಿಕೆ ಬೆಂಬಲಿತ ಯೋಜನೆ ಜಾರಿಗೊಳಿಸಲಾಗುತ್ತಿದ್ದು ರೈತರಿಗೆ ಪ್ರತಿ ಎಕರೆ ಭೂಮಿಗೆ ಪ್ರತಿವರ್ಷ 8 ಸಾವಿರ ರೂಪಾಯಿ ಸಹಾಯಧನ ನೀಡುವುದು ಇಲ್ಲಿನ ಉದ್ದೇಶವಾಗಿದೆ. ಈ ಮೂಲಕ ಕೃಷಿಯನ್ನು ಪ್ರೋತ್ಸಾಹಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮುಖ್ಯ ಅಂಶಗಳು
- ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ಸಂಕಷ್ಟ ಎದುರಿಸೋದು, ಬೆಳೆ ಕೈಕೊಟ್ಟಾಗ ನಷ್ಟ ಅನುಭವಿಸೋದು, ಸಾಲದ ಸುಳಿಗೆ ಸಿಲುಕಿ ರೈತ ಆತ್ಮಹತ್ಯೆ ಮಾಡಿಕೊಳ್ಳೋದು, ಇಂಥಾ ಹಲವಾರು ಸಮಸ್ಯೆಗಳು ಇವತ್ತು ದೇಶದ ಕೃಷಿಕರನ್ನ ಬಸವಳಿಯುವಂತೆ ಮಾಡಿದೆ.
- ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ತೆಲಂಗಾಣ ಸಿಎಂ ಹೊಸ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಈ ಯೋಜನೆಯಿಂದ ತೆಲಂಗಾಣದ ರೈತರಿಗೆ ಒಂಥರದಲ್ಲಿ ಸುವರ್ಣ ಯುಗದ ಆರಂಭವಾಗಿದೆ ಎಂದೇ ಬಿಂಬಿಸಲಾಗುತ್ತಿದೆ.
ಹೇಗೆ ಜಾರಿಯಾಗುತ್ತದೇ 8 ಸಾವಿರ ಹಣ ವರ್ಗಾವಣೆ?
- ರಾಜ್ಯದ 93 ರಷ್ಟು ಅಂದರೆ 43 ಕೋಟಿ ಚದರ ಎಕರೆ ವಿಸ್ತೀರ್ಣದ ಭೂಮಿಯ ದಾಖಲೆಗಳನ್ನು ಕಂದಾಯ ಇಲಾಖೆಯ ದಾಖಲೆಗಳ ಆಧಾರದಲ್ಲಿ ಈ ಯೋಜನೆಗೆ ಆರಿಸಿಕೊಳ್ಳಲಾಗಿದೆ. ಭೂದಾಖಲೆಗಳು ಸರಿಯಾದ ಮೇಲೆ ಪ್ರತಿ ರೈತರಿಗೆ ಎಷ್ಟು ಎಕರೆ ಭೂಮಿ ಇದೆ.
- ಅದರ ಸಂಪೂರ್ಣ ಮಾಹಿತಿಯನ್ನೊಳಗೊಂಡಂತೆ ಪಟ್ಟದಾರ್ ಅನ್ನೋ ಪಾಸ್‌ಬುಕ್ ನೀಡಲಾಗುತ್ತದೆ. ಆಯಾ ಪಟ್ಟದಾರ್ ದಾಖಲೆ ಅನುಸಾರ ಪ್ರತಿವರ್ಷ ಹಣವನ್ನು ಅವರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಎರಡು ಬೆಳೆ ಬೆಳೆಯುವ ರೈತರಿಗೆ ವರ್ಷದಲ್ಲಿ ಎರಡು ಬಾರಿ ತಲಾ 8 ಸಾವಿರ ವರ್ಗಾವಣೆಯಾಗುತ್ತದೆ.
- ಈ ಯೋಜನೆಗೆ ತೆಲಂಗಾಣ ಸರ್ಕಾರ 2018-19ನೇ ಸಾಲಿನಲ್ಲಿ 12 ಸಾವಿರ ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದೆ. ಸದ್ಯ 58 ಲಕ್ಷ ರೈತರು ಇದರ ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಪಟ್ಟದಾರ್ ಪಾಸ್‌ಬುಕ್ ಮೂಲಕ ರೈತುಬಂಧು ಸಹಾಯಧನದ ಜೊತೆಗೆ 17 ಯೋಜನೆಗಳ ಅನುಕೂಲವನ್ನು ಪಡೆಯಬಹುದಾಗಿದೆ. ಮೇ 10 ರಂದು ಮೊದಲ ಚೆಕ್ ಅನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ.
ಯೋಜನೆಯ ಫಲಾನುಭವಿಗಳಾಗೋದು ಹೇಗೆ?
- ನೂತನ ರೈತ ಬಂಧು ಯೋಜನೆಗೆ ಫಲಾನುಭವಿಗಳಾಬೇಕಾದ್ರೆ ತಮ್ಮ ಭಾವಚಿತ್ರದೊಂದಿಗೆ ವೈಯಕ್ತಿಕ ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು. ಬಳಿಕ ಯುನಿಕ್ ಕೋಡ್ ಮೂಲಕ ಪ್ರತಿಯೊಬ್ಬ ರೈತನಿಗೂ ಒಂದು ಕೋಡ್ ನೀಡಲಾಗುತ್ತೆ. ಆ ಕೋಡ್‌ನಿಂದ ಫಲಾನುಭವಿಯ ಸಂಪೂರ್ಣ ಮಾಹಿತಿ ಒಳಗೊಂಡ ಪಾಸ್‌ಬುಕ್ ಪಡೆಯಲು ಸಹಕಾರಿಯಾಗುತ್ತೆ. ಬಾರ್ ಕೋಡ್ ಜೊತೆಗೆ ಯುನಿಕ್ ವ್ಯವಹಾರದ ಐಡಿ ನೀಡಲಾಗುತ್ತದೆ. ಈ ಯೋಜನೆಯಿಂದಾಗಿ ಎಲ್ಲ ರೈತರ ಭೂದಾಖಲೆಗಳಿಗೂ ಅಧಿಕೃತ ಮುದ್ರೆ ಬಿದ್ದಂತಾಗುತ್ತದೆ.
- ಒಟ್ಟಾರೆ ರೈತರ ಸಂಕಷ್ಟಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ದೇಶದಲ್ಲೇ ಇದೇ ಮೊದಲ ಬಾರಿಗೆ ತೆಲಂಗಾಣ ಸರ್ಕಾರ ಜಾರಿಗೊಳಿಸಿರುವ ಈ ವಿನೂತನ ಯೋಜನೆ ಸಂಚಲನವನ್ನೇ ಮೂಡಿಸಿದೆ. ರೈತರಿಗೂ ಇದೊಂದು ಅಭೂತಪೂರ್ವ ಯೋಜನೆಯಾಗಿ ಭಾಸವಾಗಿದೆ.
4.ಅಸ್ಸಾಮ್ ಪೌರತ್ವ ಸಮಸ್ಯೆ
ವಿದ್ಯಾರ್ಥಿಗಳ ಗಮನಕ್ಕೆ
ಮುಖ್ಯ ಪರೀಕ್ಷೆಗಾಗಿ –ಅಸ್ಸಾಮ್ ಪೌರತ್ವ ಸಮಸ್ಯೆ ಬಗ್ಗೆ ಸಂಕ್ಷಿಪ್ತ ವಾಗಿ ವಿಶ್ಲೇಷಿಸಿ ಮತ್ತು ಅದಕ್ಕೆ ಕೈಗೊಳ್ಳಬೇಕಾದ ಕ್ರಮಗಳೇನು ?
ಪ್ರಮುಖ ಸುದ್ದಿ
- ಅಸ್ಸಾಮ್‍ನಲ್ಲಿ ಬಂಗಾಳಿ ಮುಸಲ್ಮಾನರ ಸಂಕಷ್ಟಗಳು ಕಡಿಮೆಯಾಗುವ ಲಕ್ಷಣವಿಲ್ಲ. 1980 ರಲ್ಲಿ ಬಾಂಗ್ಲಾದೇಶಿ ನುಸುಳುಕೋರರು ಎಂಬ ಹೆಸರು ಹೇಳಿ ಅವರನ್ನು ರಾಜ್ಯದಿಂದ ಹೊರ ಹಾಕುವ ಅಭಿಯಾನ ನಡೆಯಿತು. ಅದರಲ್ಲಿ ಸಾವಿರಾರು ಮಂದಿಯನ್ನು ಕೊಲ್ಲಲಾಯಿತು. ಹಲವಾರು ಜನರು ನಿರಾಶ್ರಿತರಾದರು. ಆರಂಭದಲ್ಲಿ ಈ ಚಳವಳಿ ಕೇವಲ ಮುಸಲ್ಮಾನರ ವಿರುದ್ಧ ವಾಗಿರಲಿಲ್ಲ. ಅದರಲ್ಲಿ ಹಿಂದೂ ಬಂಗಾಳಿಗಳೂ ಇದ್ದರು. ಆದರೆ ನಂತರ ಆಲ್ ಅಸ್ಸಾಮ್ ಸ್ಟೂಡೆಂಟ್ಸ್ ಯೂನಿಯನ್ ನಡೆಸುತ್ತಿದ್ದ ಈ ಚಳವಳಿಯನ್ನು ಆರೆಸ್ಸೆಸ್ ಕೇವಲ ಮುಸಲ್ಮಾನರ ವಿರುದ್ಧ ತಿರುಗಿಸಿತು.
ಮುಖ್ಯ ಅಂಶಗಳು
- 1985ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಅಸ್ಸಾಂ ಗಣ ಪರಿಷದ್‍ನೊಂದಿಗೆ ಒಂದು ಒಪ್ಪಂದ ಮಾಡಿಕೊಂಡರು. ಅದನ್ನು ಅಸ್ಸಾಂ ಎಕಾರ್ಡ್ (ಅಸ್ಸಾಂ ಒಡಂಬಡಿಕೆ) ಎಂದು ಕರೆಯಲಾಗುತ್ತದೆ. ಅದರ ಪ್ರಕಾರ, 1971ರ ಮಾರ್ಚ್ 25ರ ನಂತರ ರಾಜ್ಯದೊಳಗೆ ಪ್ರವೇಶಿಸುವ ಬಂಗಾಳಿ ಮುಸಲ್ಮಾನರನ್ನೂ ಹಿಂದೂ ಗಳನ್ನೂ ಭಾರತೀಯ ನಾಗರಿಕರೆಂದು ಒಪ್ಪಲಾ ಗದು.
- 1951ರಲ್ಲಿ ಪ್ರಥಮ ಜನಗಣತಿಯ ನಂತರ ದೇಶಕ್ಕೆ ಪೌರತ್ವದ ರಾಷ್ಟ್ರೀಯ ರಿಜಿಸ್ಟರ್ ರಚಿಸಲಾಗುವುದೆಂದೂ ಘೋಷಿಸಲಾಯಿತು. ಆದರೆ ಅದನ್ನು ಎಂದೂ ಕಾರ್ಯಗತ ಗೊಳಿಸಲಾಗಿಲ್ಲ. 2014ರಲ್ಲಿ ಅದನ್ನು ಪುನಃ ನವೀಕರಿಸಲಾಯಿತು. ಅಸ್ಸಾಂ ಎಕಾರ್ಡ್‍ನ ನಂತರ ವಿದೇಶಿಗಳನ್ನು ಗುರುತಿಸಲಿಕ್ಕಾಗಿ ಮಾಡಲಾದ ಸರ್ವೇಯಲ್ಲಿ ಕೆಲವೇ ಮಂದಿಯನ್ನು ಬಂಗ್ಲಾದೇಶೀ ಯರೆಂದು ಸಾರಲಾಯಿತೆಂಬುದು ಸತ್ಯ. ವಸ್ತುತಃ ಈ ಮಧ್ಯೆ ಸ್ವಯಂ ಅಸ್ಸಾಂ ಗಣಪರಿಷದ್‍ಗೂ ರಾಜ್ಯದಲ್ಲಿ ಸರಕಾರ ರಚಿಸುವ ಅವಕಾಶ ಸಿಕ್ಕಿತು.
- ಅಸ್ಸಾಮ್ ಎಕಾರ್ಡ್(ಒಡಂಬಡಿಕೆ)ನ ಪ್ರಕಾರ ಅನಧಿಕೃತ ವಲಸಿಗರ ಪರಿಚಯಕ್ಕಾಗಿ ರಚಿಸಲಾದ ಯಾವುದಾದರೊಂದನ್ನು ನಾಗರಿಕತೆಯ ಪುರಾವೆ ಯಾಗಿ ಅಂಗೀಕರಿಸಲಾಯಿತು. ಈ ನಿಯಮವನ್ನು ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸಲಾದಾಗ ರಾಜ್ಯ ಮತ್ತು ಕೇಂದ್ರ (ಕಾಂಗ್ರೆಸ್)ಗಳು ಅದನ್ನು ಬಹಳ ದುರ್ಬಲವಾಗಿ ವಾದಿಸಿತು. ಪರಿಣಾಮವಾಗಿ ಸುಪ್ರೀಮ್ ಕೋರ್ಟ್ ಅದನ್ನು ಕೊನೆಗೊಳಿಸಿತು.
- ಸುಪ್ರೀಮ್ ಕೋರ್ಟ್‍ನ ಈ ಆದೇಶದಂತೆ, ಪೌರತ್ವದ ರಾಷ್ಟ್ರೀಯ ರಿಜಿಸ್ಟರನ್ನು ಅಸ್ಸಾಂನಲ್ಲಿ ಪೂರ್ಣಗೊಳಿಸಬೇಕಾಗಿತ್ತು. ಈ ಮಧ್ಯೆ ಸುಪ್ರೀಮ್ ಕೋರ್ಟ್ ಒಂದು ಮಹತ್ವದ ಸಮಸ್ಯೆಯಲ್ಲಿ ಪೌರತ್ವಕ್ಕೆ ಪಂಚಾಯತ್ ಸರ್ಟಿಫಿಕೇಟ್ ಸಾಕೆಂದು ಹೇಳಿತು. ಇದನ್ನು ರಾಜ್ಯ ಸರಕಾರವು ಕೊನೆಗೊಳಿಸಿತ್ತು. ಸುಪ್ರೀಮ್ ಕೋರ್ಟ್‍ನ ಈ ತೀರ್ಮಾನದ ಪ್ರಕಾರ, ಲಕ್ಷಗಟ್ಟಳೆ ಜನರ ಪೌರತ್ವ ಜೀವ ಪಡೆಯಿತು. ಇದರಲ್ಲಿ ಸುಮಾರು 50 ಸಾವಿರ ಮುಸ್ಲಿಮ್ ಸ್ತ್ರೀಯರೂ ಇದ್ದಾರೆ.
- ಈಗ ಇನ್ನೊಂದು ಸಮಸ್ಯೆ ಎದುರಾಗಿದೆ. ಕೇಂದ್ರ ಸರಕಾರವು ಅಸ್ಸಾಮ್‍ನಲ್ಲಿ ಪೌರತ್ವದ ಕುರಿತಂತೆ ಒಂದು ಹೊಸ ಮಸೂದೆಯನ್ನು ಪಾರ್ಲಿಮೆಂಟ್‍ನಲ್ಲಿ ಮಂಡಿಸಿದೆ. ಅದರಲ್ಲಿ ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಅಲ್ಲಿನ, ಹಿಂಸೆ, ದೌರ್ಜನ್ಯಗಳಿಂದಾಗಿ ಬಂದಿರುವ ಹಿಂದುಗಳು, ಕ್ರೈಸ್ತರು, ಬೌದ್ಧರು ಮತ್ತು ಫಾರ್ಸಿಗಳು 11 ವರ್ಷದ ಬದಲು 6 ವರ್ಷ ದಿಂದ ಅಸ್ಸಾಮ್, ಮೇಘಾಲಯ ಮುಂತಾದೆಡೆಗಳಲ್ಲಿ ನೆಲೆಸಿದವರಿಗೆ ಭಾರತದ ಪೌರತ್ವವನ್ನು ನೀಡಲಾಗುವುದು ಎಂದು ಹೇಳಲಾಗಿದೆ.
- ಅಸ್ಸಾಮ್‍ನ ಬಂಗಾಳಿ ಮುಸಲ್ಮಾನರ ಒಂದು ದೊಡ್ಡ ಸಮಸ್ಯೆ ಬ್ರಹಪುತ್ರ ನದಿಯ ನೆರೆಯದ್ದಾಗಿದೆ. ಅದರ ಸುತ್ತಮುತ್ತಲೂ ಅವರ ವಸತಿಗಳಿವೆ. ನೆರೆಯಿಂದಾಗಿ ಪ್ರತಿವರ್ಷ ಲಕ್ಷಗಟ್ಟಳೆ ಜನರು ನಿರಾ ಶ್ರಿತರಾಗುತ್ತಿದ್ದಾರೆ. ಅವರ ಸಾಮಾನು ಸರಂಜಾಮುಗಳೆಲ್ಲ ನೆರೆಯಲ್ಲಿ ಕೊಚ್ಚಿ ಹೋಗುತ್ತವೆ. ಅದರಲ್ಲಿ ಅವರ ಪೌರತ್ವ ದಾಖಲೆಗಳೂ ಸೇರಿವೆ. ಅವರು ಇತರ ಸರಕಾರಿ ಜಮೀನಿನಲ್ಲಿ ವಾಸ ಹೂಡಿದರೆ ಅವರನ್ನು ವಿದೇಶಿಗಳೆಂದು ಹೇಳಲಾಗುತ್ತದೆ.
- ಇನ್ನೊಂದು ಸಮಸ್ಯೆಯು ಬೋಡೋಲ್ಯಾಂಡ್‍ನದ್ದಾಗಿದೆ. 2003ರಲ್ಲಿ ಬೋಡೋ ಟ್ರಿಬ್ಯೂನಲ್ ಏರಿಯಾ ಡಿಸ್ಟ್ರಿಕ್ಟ್ ನ ಹೆಸರಲ್ಲಿ ಬೋಡೋ ಗೋತ್ರಗಳಿಗಾಗಿ ಒಂದು ಸ್ವಾಯತ್ತ ಕೌನ್ಸಿಲ್ ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್‍ನ ಹೆಸರಲ್ಲಿ ಸ್ಥಾಪಿಸಲಾಗಿದೆ. ಅದರಲ್ಲಿ ಬೋಡೋ ಗೋತ್ರಗಳಿಗೆ ವಿಶೇಷ ಅಧಿಕಾರಗಳನ್ನು ನೀಡಲಾಗಿದೆ. ವಸ್ತುತಃ ಆ ಪ್ರದೇಶದಲ್ಲಿ ಮುಸಲ್ಮಾನರು ಬಹುದೊಡ್ಡ ಸಂಖ್ಯೆಯಲ್ಲಿದ್ದಾರೆ. ಅಸ್ಸಾಮ್‍ನಲ್ಲಿ ಇದೆಲ್ಲ ಏಕೆ ನಡೆಯುತ್ತಿದೆಯೆಂದರೆ,
- ಕಾಶ್ಮೀರದ ನಂತರ ಇಲ್ಲಿ ಮುಸಲ್ಮಾನರ ಅನುಪಾತ ಹೆಚ್ಚಿದೆ. ಜನಗಣತಿಯ ಪ್ರಕಾರ, ಇಲ್ಲಿ ಮುಸಲ್ಮಾನರ ಸಂಖ್ಯೆ 24% ಇದೆ. ಆದರೆ ಅನಧಿಕೃತ ಮಾಹಿತಿ ಪ್ರಕಾರ ಅದು 40% ಇದೆ. 1971 ರಲ್ಲಿ ಬಂಗ್ಲಾದೇಶವನ್ನು ಪಾಕಿಸ್ತಾನ ದಿಂದ ಬೇರ್ಪಡಿಸಿ ಸ್ವತಂತ್ರಗೊಳಿಸಿ ದಾಗ ಭಾರತ ಸರಕಾರವೇ ಬಂಗಾಳಿ ಮುಸಲ್ಮಾನರನ್ನೂ ಹಿಂದುಗಳನ್ನೂ ಇಲ್ಲಿ ವಾಸಿಸಲು ಅನುಮತಿ ನೀಡಿತ್ತು ಎಂಬುದು ನೆನಪಿಡಬೇಕಾದ ಅಂಶ.
5.ವಿಶ್ವದ ಮೊದಲ ರಿಮೋಟ್ ಸೂಕ್ಷ್ಮದರ್ಶಕವನ್ನು ಆವಿಷ್ಕರಿಸಿದ ಐಐಟಿ ಮದ್ರಾಸ್‌ನ ಸಂಶೋಧಕರು
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ– ರಿಮೋಟ್ ನಿಯಂತ್ರಿತ ಎಲೆಕ್ಟೋಡ್ ಆಟಮ್ ಪ್ರೊಬ್ ನ ವೈಶಿಷ್ಟ್ಯತೆಗಳು, ಮಹತ್ವ ಮತ್ತು ಅದರ ಅನ್ವಯಗಳು.
ಪ್ರಮುಖ ಸುದ್ದಿ
- ಮದ್ರಾಸ್‌ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸಂಶೋಧಕರು ರಿಮೋಟ್ ನಿಯಂತ್ರಿತ ಎಲೆಕ್ಟೋಡ್ ಆಟಮ್ ಪ್ರೊಬ್ (ಎಲ್ ಇಎಪಿ) ಸೂಕ್ಷ್ಮದರ್ಶಕ (ಮೈಕ್ರೋಸ್ಕೋಪ್) ಆವಿಷ್ಕರಿಸಿದ್ದಾರೆ
ಮುಖ್ಯ ಅಂಶಗಳು
- ಭೌಗೋಳಿಕವಾಗಿ ವಿವಿಧ ಭಾಗಗಳಲ್ಲಿದ್ದರೂ ವಿಜ್ಞಾನಿಗಳು ವಿಶೇಷ ಟರ್ಮಿನಲ್‌ನಿಂದ ರಿಮೋಟ್ ಮೂಲಕವೇ ಈ ಸೂಕ್ಷ್ಮದರ್ಶಕ ನಿರ್ವಹಿಸಬಹುದು ಎನ್ನಲಾಗಿದೆ.
- ಎಲ್‌ಇಎಪಿ ಸೂಕ್ಷ್ಮದರ್ಶಕ ಹೆಚ್ಚಿನ ಕಾರ್ಯಕ್ಷಮತೆ ಹೊಂದಿದ್ದು, ಇದರಲ್ಲಿ ವಸ್ತುಗಳ ಅಣು-ಪರಮಾಣುಗಳನ್ನೂ ಸುಲಭವಾಗಿ ನೋಡಬಹುದಾಗಿದೆ.
- ಲೋಹದೊಳಗಿನ ಪರಮಾಣುವಿನ ಒಳನೋಟ ಒದಗಿಸುವ ಸಾಮರ್ಥ್ಯವೂ ಇದಕ್ಕಿದೆ.
- ಈ ಸೂಕ್ಷ್ಮದರ್ಶಕ ಉಕ್ಕುಉದ್ಯಮ, ಆಟೋಮೊಬೈಲ್ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಅಲ್ಲದೆ, ನ್ಯಾನೋ ತಂತ್ರಜ್ಞಾನ, ಸಂಶೋಧನೆ ಹಾಗೂ ಇತರ ವಲಯಗಳಿಗೆ ಸಹಕಾರಿಯಾಗಿದೆ.
- ದೇಶದ ಪ್ರಮುಖ 8 ಉನ್ನತ ಸಂಶೋಧನಾ ಸಂಸ್ಥೆಗಳಾದ ಐಐಟಿ-ಎಂ, ಬಾಂಬೆ, ದೆಹಲಿ, ಕಾನ್ಪುರ, ಖರಂಗ್‌ಪುರ ಮತ್ತು ರೋಪರ್‌ನ ಐಐಟಿಎಸ್, ಇಂಟರ್‌ನ್ಯಾಷನಲ್ ಅಡ್ವಾನ್ಸ್ ರಿಸರ್ಚ್ ಸೆಂಟರ್ ಆಫ್ ಪೌಡರ್ ಮೆಟಲರ್ಜಿ ಅಂಡ್ ನ್ಯೂ ಮೆಟಿರಿಯಲ್ಸ್ (ಎಆರ್‌ಸಿಐ) ಹಾಗೂ ಬೋರ್ಡ್ ಆಫ್ ರಿಸರ್ಚ್ ಇನ್ ನ್ಯೂಕ್ಲಿಯರ್ ಸೈನ್ಸ್ (ಬಿಆರ್‌ಎನ್ಎಸ್) ಜಂಟಿಯಾಗಿ ರಿಮೋಟ್ ನಿಯಂತ್ರಿತ ಎಲ್‌ಇಎಪಿ ಸೂಕ್ಷ್ಮದರ್ಶಕ ಅಭಿವೃದ್ದಿಪಡಿಸಿವೆ.
6.ಕೃಷಿ ಆದಾಯಕ್ಕೆ ತೆರಿಗೆ ಇಲ್ಲ
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಪರೀಕ್ಷೆಗಾಗಿ ಮತ್ತು ಮುಖ್ಯ ಪರೀಕ್ಷೆಗಾಗಿ –ಯಾವುದನ್ನು ಕೃಷಿ ಆದಾಯವೆಂದು ಕರೆಯುತ್ತೇವೆ ?ಇದರಿಂದ ಬೀರುವ ಪರಿಣಾಮವೇನು ?
ಪ್ರಮುಖ ಸುದ್ದಿ
- ದೇಶದಲ್ಲಿ ಅಪ್ಪಟ ಕೃಷಿ ಮೂಲದಿಂದ ದೊರೆಯುವ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.
ಮುಖ್ಯ ಅಂಶಗಳು
ಯಾವುದನ್ನು ಕೃಷಿ ಆದಾಯ ಎನ್ನುತ್ತೇವೆ ?
- ವ್ಯವಸಾಯದಂಥ ಕೃಷಿ ಚಟುವಟಿಕೆಗಳಿಗೆ ಬಳಸಿದ ಭೂಮಿಯಿಂದ ಸಿಗುವ ಆದಾಯ.
- ಕೃಷಿ ಭೂಮಿಯಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ, ಮಾರಾಟ, ವಿಕ್ರಯ ಮಾಡಿದರೂ, ಕೃಷಿ ಆದಾಯವೆಂದು ಪರಿಗಣನೆಯಾಗುತ್ತದೆ.
- ಫಾರ್ಮ್ ಹೌಸ್‌ನಿಂದ ಆದಾಯ.
- ನರ್ಸರಿಗಳಲ್ಲಿ ಸಸಿಗಳ ಬೆಳೆಸುವಿಕೆ, ಬೀಜಗಳ ವಿಕ್ರಯ ಇತ್ಯಾದಿಗಳೂ ಕೃಷಿ ಆದಾಯವಾಗುತ್ತದೆ.
- ಕೃಷಿ ಭೂಮಿಯ ಮಾಲಿಕತ್ವ ಮುಖ್ಯವಾಗುವುದಿಲ್ಲ.
ಯಾವುದನ್ನು ಅಪ್ಪಟ ಕೃಷಿ ಆದಾಯವಲ್ಲ?
- ಕೋಳಿ ಸಾಕಣೆಯಿಂದ ಸಿಗುವ ಆದಾಯ.
- 2 ಜೇನು ಸಾಕಣೆ ವರಮಾನ.
- ತನಿಂತಾನೆ ಬೆಳೆದಿರುವ ಮರಗಳ ವಿಕ್ರಯದಿಂದ ಸಿಕ್ಕಿದ ಆದಾಯ
- ಬೆಳೆದು ನಿಂತ ಫಸಲಿನ ಖರೀದಿ.
- ಕಂಪನಿಯೊಂದರ ಕೃಷಿ ಆದಾಯದ ಡಿವಿಡೆಂಡ್,
- ಉಪ್ಪಿನ ಮಾರಾಟದಿಂದ ಬರುವ ಆದಾಯ.
- ಗಣಿಗಾರಿಕೆಯ ರಾಯಲ್ಟಿ ಫಾರ್ಮ್ ಹೌಸ್‌ನಲ್ಲಿ ಟಿ.ವಿ ಧಾರಾವಾಹಿ ಚಿತ್ರೀಕರಣದಿಂದ ಸಿಕ್ಕಿದ ಆದಾಯ.
- ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 10(1) ಪ್ರಕಾರ ಕೃಷಿ ಮೂಲದ ಆದಾಯ ತೆರಿಗೆ ಮುಕ್ತ. ಹೀಗಿದ್ದರೂ, ತೆರಿಗೆ ದರವನ್ನು ನಿರ್ಣಯಿಸುವ ಸಲುವಾಗಿ ಕೃಷಿ ಮೂಲದ ಆದಾಯವನ್ನೂ ರಿಟರ್ನ್ಸ್‌ನಲ್ಲಿ ತೋರಿಸಬೇಕು
ಮುಖ್ಯ ಪರೀಕ್ಷೆಗಾಗಿ ಸಂಕ್ಷಿಪ್ತ ವಿವರಣೆ
ಹಾಲಿ ಕಾಯ್ದೆ ಹೇಳುವುದೇನು?:
- ಏಳನೇ ಷೆಡ್ಯೂಲ್ನಲ್ಲಿರುವ ಕೇಂದ್ರ ಪಟ್ಟಿಯ 82ನೇ ಅಂಶದಲ್ಲಿ ಕೃಷಿಯೇತರ ಆದಾಯದ ತೆರಿಗೆ ವಿಷಯ ಪ್ರಸ್ತಾಪಿಸಿದರೆ, ರಾಜ್ಯ ಪಟ್ಟಿಯ 46ನೇ ಅಂಶ ಕೃಷಿ ಆದಾಯದ ಮೇಲಿನ ತೆರಿಗೆಯನ್ನು ಪ್ರಸ್ತಾಪಿಸುತ್ತದೆ. ಅದೇನೆಂದರೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 2(1ಎ) ಪ್ರಕಾರ ಕೃಷಿ ಆದಾಯವನ್ನು ಭೂಮಿಯಿಂದ ಲಭ್ಯ ಬಾಡಿಗೆ/ಆದಾಯ ಎಂದು ವ್ಯಾಖ್ಯಾನಿಸಲಾಗಿದೆ. ಅರ್ಥಾತ್ ಆ ಭೂಮಿಯಲ್ಲಿ ಕೃಷಿ ಮತ್ತು ಅದೇ ಭೂಮಿಯ ಮೇಲಿನ ಕಟ್ಟಡಗಳಿಂದ ಆದಾಯ ಎಂಬ ಪರಿಕಲ್ಪನೆ.
- ಸೆಕ್ಷನ್ 10(1) ಪ್ರಕಾರ ಒಟ್ಟು ಆದಾಯದಲ್ಲಿ ಕೃಷಿ ಆದಾಯವನ್ನು ಸೇರಿಸಿಲ್ಲ. ಹಾಗೆಯೇ, ಕೃಷಿ ಭೂಮಿ ಮಾರಾಟಕ್ಕೆ ಸಂಬಂಧಿಸಿದ ಕಾನೂನು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಸ್ತ. ಕೆಲವು ರಾಜ್ಯಗಳಲ್ಲಿ ಕೃಷಿ ಜಮೀನನ್ನು ಕೃಷಿಕರಿಗೇ ಮಾರಾಟ ಮಾಡಬೇಕೆಂಬ ಕಾನೂನು ಇದೆ. ಇನ್ನು ಕೆಲವು ರಾಜ್ಯಗಳಲ್ಲಿ ಇದ್ಯಾವುದೂ ಇಲ್ಲ. ಅಲ್ಲದೆ, ‘ಕೃಷಿಕ’ ಎಂಬ ಪ್ರಮಾಣ ಪತ್ರದ ಸಾಚಾತನ ಪರಿಶೀಲಿಸುವುದಕ್ಕೆ ವ್ಯವಸ್ಥೆಯೇ ಸೂಕ್ತ ವ್ಯವಸ್ಥೆಯೇ ಇಲ್ಲ. ಇದಲ್ಲದೆ, ಜಮೀನು ಗೇಣಿಗೆ ಪಡೆದು ಕೃಷಿ ಮಾಡುವವರ ಗುಂಪೂ ಇದೆ.
ಇದರ ದುರ್ಬಳಕೆ ಹೇಗೆ?:
- ದೊಡ್ಡ ದೊಡ್ಡ ಕಂಪನಿಗಳು ಕೃಷಿ ಜಮೀನು ಅಥವಾ ಪ್ಲಾಂಟೇಷನ್ ಖರೀದಿ ಮಾಡಿರುತ್ತವೆ. ಆದರೆ, ಆ ಕೃಷಿ ಭೂಮಿ ಬರಡಾಗಿಯೋ ಅಥವಾ ನಾಮ್ೇವಾಸ್ತೆ ಕೃಷಿ ಜಮೀನಾಗಿಯೋ ಉಳಿದುಕೊಂಡಿರುತ್ತದೆ. ಕಂಪನಿಗಳ ಆದಾಯದಲ್ಲಿ ಬಂದ ಲಾಭವನ್ನು ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ‘ಕೃಷಿ ಆದಾಯ’ ಎಂದು ನಮೂದಿಸುವ ಪರಿಪಾಠ ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ.
- ಹೀಗೆ ಮಾಡುವುದರಿಂದ ಸರ್ಕಾರಕ್ಕೆ ಪಾವತಿಸುವ ತೆರಿಗೆಯಲ್ಲಿ ವಿನಾಯಿತಿ ಸಿಗುತ್ತದೆ. ಇಂತಹ ಕೆಲಸವನ್ನು ದೊಡ್ಡ ದೊಡ್ಡ ಉದ್ಯಮಿಗಳೂ ಮಾಡುತ್ತಾರೆ. ಇದು ತೆರಿಗೆ ವಂಚನೆಯ ಪ್ರಕರಣವೇ ಆಗಿದ್ದರೂ ಅದನ್ನು ತಡೆಯುವುದಕ್ಕೆ ಸದ್ಯ ಇರುವಂತಹ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ. ಕೇಂದ್ರದ ಆದಾಯ ತೆರಿಗೆ ಕಾನೂನು ವ್ಯಾಪ್ತಿಯಲ್ಲಿರುವ ಸೆಕ್ಷನ್ 2(1ಎ) ಮತ್ತು ಸೆಕ್ಷನ್ 10(1)ರ ಪ್ರಕಾರ ಇಂತಹ ವಂಚನೆ ಸಾಧ್ಯವಾಗುತ್ತಿದೆ. ಇದು ಕಾನೂನಿನ ದುರ್ಬಳಕೆಗೆ ನೇರ ನಿದರ್ಶನ.
ಯಾವ ಯಾವ ರಾಜ್ಯದಲ್ಲಿ ಕೃಷಿಗೆ ಸಂಬಂದಿಸಿದ ಕಾಯಿದೆವಿದೆ ?
- ಕ್ರಾನಿಕಲ್ ನಿಯತಕಾಲಿಕೆ ಮಾಹಿತಿ ಪ್ರಕಾರ, ಆದಾಯ ತೆರಿಗೆ ಕಾಯ್ದೆ 1961ರ ವಿವರಗಳಷ್ಟೇ ನಮ್ಮೆದುರು ಇದೆ. ಆದರೆ, ಇದಕ್ಕೂ ಮುನ್ನ ಆದಾಯ ತೆರಿಗೆ ಕಾಯ್ದೆ 1860 ಎಂಬೊಂದು ಕಾಯ್ದೆ ಇತ್ತು. ಅದು ತಾತ್ಕಾಲಿಕ ಎಂದು ಬಿಂಬಿಸಲ್ಪಟ್ಟರೂ ಅದರಲ್ಲಿ ಕೃಷಿ ಆದಾಯಕ್ಕೂ ತೆರಿಗೆ ವಿಧಿಸಲಾಗಿತ್ತು.
- 1886ರ ತನಕವೂ ಭಾರತೀಯರು ಕೃಷಿ ಆದಾಯಕ್ಕೆ ತೆರಿಗೆ ಪಾವತಿಸಿದ್ದರು .ಹೀಗೆ ನಿಂತು ಹೋದ ಕೃಷಿ ಆದಾಯ ತೆರಿಗೆ ಮತ್ತೆ ಜಾರಿಗೊಂಡಿದ್ದು 1930ರ ದಶಕದ ಬಳಿಕ. ಅದೂ ರಾಜ್ಯಗಳಿಗೆ ಸೀಮಿತವಾಗಿ ಕಾಯ್ದೆಗಳು ರೂಪಿಸಲ್ಪಟ್ಟಿದ್ದವು. ಆದರೆ, ರಾಜ್ಯಗಳಲ್ಲಿ ಈ ಕಾಯ್ದೆಗಳನ್ನು ಜಾರಿಗೊಳಿಸುವುದಕ್ಕೆ ಸೂಕ್ತ ವ್ಯವಸ್ಥೆ ಇರಲಿಲ್ಲ ಮತ್ತು ಈಗಲೂ ಇಲ್ಲ. ಹೀಗಾಗಿಯೇ ಕಾಯ್ದೆ ಅಸ್ತಿತ್ವದಲ್ಲಿದ್ದರೂ ಚಾಲ್ತಿಯಲ್ಲಿ ಇಲ್ಲದ ಕಾಯ್ದೆಯಾಗಿಬಿಟ್ಟಿದೆ. ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಕೃಷಿ ಆದಾಯ ತೆರಿಗೆ ಚಾಲ್ತಿಯಲ್ಲಿದ್ದರೂ ಅಲ್ಲಿ ದೊಡ್ಡ ದೊಡ್ಡ ಪ್ಲಾಂಟರ್ಗಳಿಗೆ, ಕಂಪನಿಗಳಿಗಷ್ಟೇ ಕೃಷಿ ಆದಾಯ ತೆರಿಗೆ ವಿಧಿಸಲಾಗುತ್ತಿದೆ.
ಈಗಲೂ ಚಾಲ್ತಿಯಲ್ಲಿರುವಂಥ ಕಾಯ್ದೆ
- ಅಸ್ಸಾಂ ಕೃಷಿ ಆದಾಯ ತೆರಿಗೆ ಕಾಯ್ದೆ 1939
- ಬಂಗಾಳ ಕೃಷಿ ಆದಾಯ ತೆರಿಗೆ ಕಾಯ್ದೆ 1944
- ಒರಿಸ್ಸಾ ಕೃಷಿ ಆದಾಯ ತೆರಿಗೆ ಕಾಯ್ದೆ 1947
- ತಮಿಳುನಾಡು ಕೃಷಿ ಆದಾಯ ತೆರಿಗೆ ಕಾಯ್ದೆ 1955
- ಮಹಾರಾಷ್ಟ್ರ ಕೃಷಿ ಆದಾಯ ತೆರಿಗೆ ಕಾಯ್ದೆ 1962
- ಕೇರಳ ಕೃಷಿ ಆದಾಯ ತೆರಿಗೆ ಕಾಯ್ದೆ 1991
7 ವಾಣಿಜ್ಯ ವಾಹನಗಳಿಗೆ ಜಿಪಿಎಸ್, ಫಾಸ್ಟ್ ಟ್ಯಾಗ್ ಕಡ್ಡಾಯ
ಪ್ರಮುಖ ಸುದ್ದಿ
- ರಾಷ್ಟ್ರೀಯ ಪರವಾನಗಿ (ನ್ಯಾಷನಲ್ ಪರ್ಮಿಟ್) ಪಡೆಯುವ ಎಲ್ಲಾ ವಾಣಿಜ್ಯ ವಾಹನಗಳಿಗೆ ಜಿಪಿಎಸ್ ಮತ್ತು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಕ್ಕಾಗಿ ‘ಫಾಸ್‌ಟ್ಯಾಗ್’ ಕಡ್ಡಾಯಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ.
ಮುಖ್ಯ ಅಂಶಗಳು
- ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಇದನ್ನು ಜಾರಿಗೊಳಿಸಲಾಗುವುದು. ಫಾಸ್‌ಟ್ಯಾಗ್‌ನಿಂದ ಟೋಲ್‌ಗಳಲ್ಲಿ ತ್ವರಿತವಾಗಿ ಶುಲ್ಕ ಪಾವತಿಸಲು ಸಾಧ್ಯವಾಗಲಿದೆ. ಜಿಪಿಎಸ್‌ನಿಂದ ವಾಹನಗಳ ಸಂಚಾರದ ಮೇಲೆ ನಿಗಾ ಇಡಲು ನೆರವಾಗಲಿದೆ.
- ಪ್ರಸ್ತುತ ಕರಡು ರೂಪದಲ್ಲಿರುವ ಹೊಸ ನಿಯಮದ ಜಾರಿ ಬಳಿಕ, ರಾಷ್ಟ್ರೀಯ ಪರಿಮಿತಿ ಪಡೆಯುವ ಎಲ್ಲಾ ವಾಹನಗಳೂ ವಾಹನದ ಮುಂಭಾಗ ಹಾಗೂ ಹಿಂಭಾಗದಲ್ಲಿ ‘ಎನ್/ಪಿ’ (ನ್ಯಾಷನಲ್ ಪರ್ಮಿಟ್) ಎಂದು ದಪ್ಪ ಅಕ್ಷರಗಳಲ್ಲಿ ನಮೂದಿಸುವುದು ಕಡ್ಡಾಯವಾಗಲಿದೆ.
- ಶೀಘ್ರದಲ್ಲೇ ಹೊಸ ವಾಹನದ ನೋಂದಣಿ ವೇಳೆ ‘ಫಿಟ್‌ನೆಸ್ ಪ್ರಮಾಣ ಪತ್ರ’ (ಎಫ್.ಸಿ) ಸಲ್ಲಿಕೆ ಅಗತ್ಯವೂ ತಪ್ಪಲಿದೆ. ಮೊದಲ ಎರಡು ವರ್ಷಗಳ ಅವಧಿಗೆ ವಾಹನಗಳು ‘ಫಿಟ್’ ಎಂದು ಪರಿಗಣಿಸಲಾಗುವುದು.
- ನೋಂದಣಿಯಾಗಿ ಎಂಟು ವರ್ಷದವರೆಗೂ ವಾಹನದ ‘ಎಫ್.ಸಿ’ ಅನ್ನು 2 ವರ್ಷಕ್ಕೊಮ್ಮೆ ನವೀಕರಿಸಿದರೆ ಸಾಕು. 8 ವರ್ಷಕ್ಕಿಂತ ಹಳೆಯ ವಾಹನಗಳನ್ನು ಪ್ರತಿ ವರ್ಷವೂ ನವೀಕರಿಸಬೇಕು. ಅಲ್ಲದೆ, ಡಿಜಿಟಲ್ ರೂಪದ ಡಿ.ಎಲ್ ಮತ್ತು ಮಾಲಿನ್ಯ ತಪಾಸಣೆ ಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಲ್ಲಿಸಬೇಕು.
BACK TO BASICS
ಏನಿದು ಫಾಸ್ಟ್ ಟ್ಯಾಗ್?
- ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಟೋಲ್‌ಗಳಲ್ಲಿ ಡಿಜಿಟಲ್ ಮಾದರಿಯ ಸುಂಕ ಪಾವತಿಗೆ ಇಂತಹ ಫಾಸ್ಟ್ ಟ್ಯಾಗ್ ಬಳಸಲಾಗುತ್ತದೆ. ಎಟಿಎಂ ಕಾರ್ಡ್ ಮಾದರಿಯಲ್ಲಿರುವ ಈ ಫಾಸ್ಟ್ ಟ್ಯಾಗ್ಗಳು ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತವೆ. ವಾಹನದ ಮುಂಭಾಗದ ಗಾಜಿನ ಮೇಲೆ ಫಾಸ್ಟ್ ಟ್ಯಾಗ್ ಅಳವಡಿಸಲಾಗುತ್ತದೆ.
- ಈಗಾಗಲೇ ಹಲವಾರು ಟೋಲ್‌ಗಳಲ್ಲಿ ಫಾಸ್ಟ್ ಟ್ಯಾಗ್ ಕಾರ್ಡ್ಗಳನ್ನು ಗುರುತಿಸಬಲ್ಲ ಪ್ರತ್ಯೇಕ ಪಥವನ್ನೇ ಮೀಸಲಿರಿಸಲಾಗಿದೆ.
- ಫಾಸ್ಟ್ಟ್ಯಾಗ್ ಹೊಂದಿರುವ ವಾಹನಗಳು ಈ ಪಥದಲ್ಲಿ ಸಂಚರಿಸಬೇಕು. ಈ ಸಂದರ್ಭದಲ್ಲಿ ಕಾರ್ಡ್ನಲ್ಲಿ ಮೊದಲೇ ತುಂಬಿಸಿರುವಂತಹ ಹಣ (ಪ್ರೀಪೇಯ್್ಡ ಸುಂಕದ ರೂಪದಲ್ಲಿ ಪಾವತಿಯಾಗುತ್ತದೆ.
- ಈ ಮೂಲಕ ನಗದು ರಹಿತವಾಗಿ, ಯಾವುದೇ ಅಡೆ ತಡೆಗಳಿಲ್ಲದೆ ಟೋಲ್‌ಗಳಲ್ಲಿ ವಾಹನ ಸಂಚರಿಸಲು ಅನುಕೂಲವಾಗಲಿದೆ. ಇಂತಹ ಕಾರ್ಡ್ಗಳನ್ನು 4-5 ಬ್ಯಾಂಕ್ಗಳು ನೀಡುತ್ತಿವೆ.