18th SEPTEMBER
1.ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ವಿಜಯ ಬ್ಯಾಂಕ್ ವಿಲೀನಕ್ಕೆ ಕೇಂದ್ರ ಸರ್ಕಾರ ಪ್ರಸ್ತಾಪ
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ -ಯಾವ ಮೂರು ಬ್ಯಾಂಕುಗಳನ್ನು ವಿಲೀನಗೊಳಿಸಲಾಗುತ್ತಿದೆ? ವಿಲೀನಗೊಳಿಸುವುದರ ಪ್ರಾಮುಖ್ಯತೆ ಮತ್ತು ಎದುರಾಗುವ ಸವಾಲುಗಳು
ಪ್ರಮುಖ ಸುದ್ದಿ
- ಪರ್ಯಾಯ ವ್ಯವಸ್ಥೆ (Alternative Mechanism (AM)). ಮೂಲಕ ಸರಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ, ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ವಿಲೀನಗೊಳಿಸಿ ದೇಶದ ಮೂರನೇ ದೊಡ್ಡ ಬ್ಯಾಂಕ್ ರೂಪಿಸುವುದಾಗಿ ಕೇಂದ್ರ ಸರಕಾರ ಹೇಳಿದೆ. ಈ ನಿರ್ಧಾರವು ರಾಷ್ಟ್ರೀಕೃತ ಬ್ಯಾಂಕುಗಳನ್ನು ಕ್ರೋಢೀಕರಿಸುವ ಮೂಲಕ ಪ್ರಬಲ ಹಾಗೂ ಸ್ಪರ್ಧಾತ್ಮಕ ಬ್ಯಾಂಕುಗಳನ್ನು ಸೃಷ್ಟಿಸಲು ವೇದಿಕೆ ಸೃಷ್ಟಿಸಲು ಸುಗಮವಾಗಲಿದೆ.
ಮುಖ್ಯ ಅಂಶಗಳು
- ವಿಲೀನದ ಯೋಜನೆಯನ್ನು ಪ್ರಕಟಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಈ ಉದ್ದೇಶಿತ ವಿಲೀನದಿಂದ ಬ್ಯಾಂಕ್‌ಗಳು ಸೃದೃಢಗೊಳ್ಳಲಿವೆ. ಸಾಲ ನೀಡುವ ಸಾಮರ್ಥ್ಯವು ವೃದ್ಧಿಯಾಗುತ್ತದೆ. ಆರ್ಥಿಕ ಪ್ರಗತಿ ವೃದ್ಧಿಗೂ ಈ ಕ್ರಮ ಪೂರಕವಾಗಲಿದೆ ಎಂದಿದ್ದಾರೆ.
- ವಸೂಲಾಗದ ಸಾಲಗಳಿಂದಾಗಿ(ಎನ್‌ಪಿಎ) ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ತೀವ್ರ ಒತ್ತಡದಲ್ಲಿವೆ. ಬ್ಯಾಂಕಿಂಗ್ ವಲಯದಲ್ಲಿ ಸಾಲ ನೀಡಿಕೆ ಸಾಮರ್ಥ್ಯ ದುರ್ಬಲವಾಗುತ್ತಿದ್ದು, ಇದರಿಂದ ಕಾರ್ಪೊರೇಟ್ ವಲಯದ ಹೂಡಿಕೆಗಳಿಗೆ ಪೆಟ್ಟು ಬೀಳುತ್ತಿದೆ. ಬ್ಯಾಂಕ್‌ಗಳನ್ನು ಬಲಗೊಳಿಸುವ ಉದ್ದೇಶದಿಂದಲೇ ವಿಲೀನ ಯೋಜನೆಯನ್ನು ರೂಪಿಸಲಾಗಿದೆ. ಈ ವಿಲೀನ ಘಟಕವು ಬ್ಯಾಂಕಿಂಗ್ ಕಾರ್ಯಾಚರಣೆಯನ್ನು ಹೆಚ್ಚಿಸಲಿದೆ. ಮೂರನೇ ಎರಡರಷ್ಟು ಷೇರುಗಳು ಮತ್ತು ಒಡೆತನವನ್ನು ಸರಕಾರ ಹೊಂದಿದೆ.
- 21 ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಸರಕಾರವು ಬಹುಪಾಲು ಷೇರುಗಳನ್ನು ಹೊಂದಿದೆ. ಆದರೆ, ಈ ಬ್ಯಾಂಕ್‌ಗಳು ಹೆಚ್ಚಿನ ಕಳಪೆ ಸಾಲಗಳು ಅಥವಾ ಎನ್‌ಪಿಎ ಹೊರೆಯಿಂದ ಬಳಲಿವೆ. ಬೆಸೆಲ್ 3 ಕ್ಯಾಪಿಟಲ್ ನಿಯಮಗಳನ್ನು ಪೂರೈಸಬೇಕಾದರೆ, ಮುಂದಿನ ಎರಡು ವರ್ಷಗಳಲ್ಲಿ ಬ್ಯಾಂಕ್‌ಗಳಿಗೆ ದೊಡ್ಡ ಮೊತ್ತದ ದುಡಿಮೆ ಬಂಡವಾಳದ ಅಗತ್ಯವಿದೆ.
ಸಾರ್ವಜನಿಕ ವಲಯ ಬ್ಯಾಂಕುಗಳ ವಿಲೀನದ ಅನುಮೋದನೆಯ ಪ್ರಮುಖ ಲಕ್ಷಣಗಳು
- ಪ್ರಬಲ ಮತ್ತು ಸ್ಪರ್ಧಾತ್ಮಕ ಬ್ಯಾಂಕುಗಳನ್ನು ರಚಿಸುವ ನಿರ್ಧಾರವು ಕೇವಲ ವಾಣಿಜ್ಯ ಪರಿಗಣನೆಗಳ ಮೇಲೆ ಆಧಾರಿತವಾಗಿರುತ್ತದೆ.
- ಈ ಪ್ರಸ್ತಾಪವು ಬ್ಯಾಂಕುಗಳ ಮಂಡಳಿಗಳಿಂದ ಆರಂಭವಾಗಬೇಕು.
- ವಿಲೀನದ ಯೋಜನೆಗಳನ್ನು ರೂಪಿಸಲು ಬ್ಯಾಂಕುಗಳಿಂದ ಪಡೆದ ತತ್ತ್ವಗಳ ಅನುಮೋದನೆಗಾಗಿ ಪ್ರಸ್ತಾಪಗಳನ್ನು ಪರ್ಯಾಯ ವ್ಯವಸ್ಥೆ ಯ (AM) ಮುಂಚಿತವಾಗಿ ಇರಿಸಲಾಗುತ್ತದೆ.
- ತಾತ್ವಿಕ ಅನುಮೋದನೆಯ ನಂತರ, ಬ್ಯಾಂಕುಗಳು ಕಾನೂನು ಮತ್ತು ಸೆಬಿಯ ಅಗತ್ಯತೆಗಳಿಗೆ ಅನುಗುಣವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಸಮಾಲೋಚಿಸಿ ಕೇಂದ್ರ ಸರ್ಕಾರವು ಅಂತಿಮ ಯೋಜನೆಯನ್ನು ಸೂಚಿಸುತ್ತದೆ.
ಬ್ಯಾಂಕುಗಳ ವಿಲೀನ ಎಂದರೆ ಏನು ?
- ಸಾಮಾನ್ಯ ಭಾಷೆಯಲ್ಲಿ ಇದು ಒಂದು ಬ್ಯಾಂಕಿನ ಮಾಲೀಕತ್ವವು ಕಾನೂನಿನ ಅಡಿಯಲ್ಲಿ ಸಂಬಂಧಪಟ್ಟವರ ಅನುಮತಿಯೊಂದಿಗೆ ಇನ್ನೊಂದು ಬ್ಯಾಂಕ್‌ಗೆ ವರ್ಗಾವಣೆ ಯಾಗಿ ತನ್ನತನ ಮತ್ತು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳವುದು. ಈ ವರ್ಗಾವಣೆಯಲ್ಲಿ ಬ್ಯಾಂಕಿನ ಸ್ವತ್ತು ಮಾತ್ರವಲ್ಲ; ಹಲವು ಬಾರಿ ವ್ಯವಹಾರದ ಸ್ಥಳ ಕೂಡ ಬದಲಾಗುತ್ತದೆ. ಹಾಗೆಯೇ ಬ್ಯಾಂಕಿನಲ್ಲಿ ಗ್ರಾಹಕರ ವ್ಯವಹಾರವನ್ನು ನೋಡಿಕೊಳ್ಳುವ ಸಿಬ್ಬಂದಿಗಳ ಬದಲಾವಣೆಯೂ ಆಗಬಹುದು.
- ಬ್ಯಾಂಕ್ ಅಥವಾ ವ್ಯವಹಾರದಲ್ಲಿ ಮೂಲಭೂತವಾದ ಯಾವುದೇ ಬದಲಾವಣೆ ಆಗದೆ, ವಿಲೀನದ ನಂತರ ಕೆಲವು ಕಾಸ್ಮೆಟಿಕ್ ಬದಲಾವಣೆಯನ್ನು ಕಾಣಬಹುದು. ವಿಲೀನ ಪ್ರಕ್ರಿಯೆಯ ನಂತರ, ಗ್ರಾಹಕರ ಸ್ವತ್ತು-ಸಾಲಗಳು ಯಾವುದೇ ರೀತಿಯ ಮೌಲ್ಯವರ್ಧನೆ ಅಥವಾ ಅಪಮೌಲ್ಯವನ್ನು ಅನುಭವಿಸುವುದಿಲ್ಲ. ಸಾಲ ನೀಡಿಕೆ, ಬಡ್ಡಿ, ವಸೂಲಾತಿ ವಿಷಯದಲ್ಲಿ ವಿಲೀನದ ನಂತರ ಯಾವುದೇ ಬದಲಾವಣೆಯೂ ಆಗುವುದಿಲ್ಲ.
ಹಿನ್ನೆಲೆ:
- 1991 ರಲ್ಲಿ, ಭಾರತವು ಬಲವಾದ ಸಾರ್ವಜನಿಕ ವಲಯ ಬ್ಯಾಂಕುಗಳನ್ನು ಕಡಿಮೆ ಸಂಖ್ಯೆಯಲ್ಲಿ ಹೊಂದಿದೆ ಎಂದು ಸೂಚಿಸಲಾಗಿತ್ತು .
- ಆದರೆ, 2016 ರ ಮೇ ತಿಂಗಳಲ್ಲಿ ಆರು ಬ್ಯಾಂಕುಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರ್ಪಡೆ ಮಾಡುವ ಮೂಲಕ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಏಕೀಕರಿಸುವ ಪರಿಣಾಮಕಾರಿ ಕ್ರಮವನ್ನು ತೆಗೆದುಕೊಳ್ಳಲಾಗುಯಿತು .
- ಹಿಂದೆ ವಿಲೀನಗೊಳಿಸಿದ ಸ್ಟೇಟ್ ಬ್ಯಾಂಕ್ ಅಪ್ ಇಂದೋರ್ ಮತ್ತು ಸೌರಾಷ್ಟ್ರ ಬ್ಯಾಂಕುಗಳಿಗಿಂತ ಇದು ದಾಖಲೆ ಸಮಯದಲ್ಲಿ ವಿಲೀನವನ್ನು ಪೂರ್ಣಗೊಳಿಸಲಾಯಿತು.
ಬ್ಯಾಂಕುಗಳ ವಿಲೀನತೆಯಿಂದ ಆಗುವ ಲಾಭಗಳು
- ದಕ್ಷತೆಯಲ್ಲಿ ಸುಧಾರಣೆ. ಈಗಾಗಲೇ ದಕ್ಷತೆಗೆ ಹೆಸರಾದ, ವೆಚ್ಚಗ್ರಾಹಿ ಬ್ಯಾಂಕಿನೊಂದಿಗೆ ವಿರುದ್ಧ ಮನೋಭಾವದ ಇತರ ಎರಡೋ ಮೂರೋ ಬ್ಯಾಂಕುಗಳನ್ನು ವಿಲೀನ ಮಾಡಿದರೆ ಈ ಬ್ಯಾಂಕುಗಳಿಗೂ ಅದರ ಆಡಳಿತ ನೈಪುಣ್ಯವನ್ನು ವರ್ಗಾಯಿಸಲು ಅನುಕೂಲವಾಗುತ್ತದೆ. ಅದರಿಂದ ಅಧಿಕ ಲಾಭ ಬರುತ್ತದೆ.
- ಅನಗತ್ಯ ಸ್ಪರ್ಧೆ ನಿಂತು, ಬ್ಯಾಂಕುಗಳನ್ನು ದುರುಪಯೋಗಿಸಿಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ.
- ‘ಅಗಾಧತೆಯಿಂದಾಗಿ ವೈಫಲ್ಯ ಅಸಾಧ್ಯ’ ಎನ್ನಬಹುದಾದ ಸಾಮರ್ಥ್ಯ ಒದಗುತ್ತದೆ.
- ಜಾಗತಿಕ ಮಾರುಕಟ್ಟೆಯಲ್ಲಿ ಮಾನ್ಯತೆ ದೊರೆತು, ವ್ಯಾಪಾರವನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ವಿಸ್ತರಿಸಿ, ವಿದೇಶಿ ಬ್ಯಾಂಕುಗಳ ಮೇಲೆ ಭಾರತಕ್ಕೆ ಇರುವ ಅನಿವಾರ್ಯ ಅವಲಂಬನೆಯನ್ನು ಕೊನೆಯಾಗಿಸುತ್ತದೆ.
- ವೀಕ್ಷಣೆ ಮತ್ತು ನಿರ್ವಹಣೆಯಲ್ಲಿ ಅನುಕೂಲತೆ ಹಾಗೂ ಪಾರದರ್ಶಕತೆಯಲ್ಲಿ ಸುಧಾರಣೆ ಮತ್ತು ಸಂಘಟಿತ ಆಡಳಿತ.
- ಮಾನವ ಸಂಪನ್ಮೂಲ, ಮೂಲಭೂತ ಸೌಕರ್ಯಗಳು ಮತ್ತು ಮಾರುಕಟ್ಟೆಯ ಸುಧಾರಿತ ಮತ್ತು ಆದಾಯದಾಯಕ ಉಪಯೋಗ
ಬ್ಯಾಂಕುಗಳ ವಿಲೀನತೆಯಿಂದ ಮುಖ್ಯ ತೊಂದರೆಗಳು
- ಸಿಬ್ಬಂದಿ ಮತ್ತು ಗ್ರಾಹಕ ವರ್ಗದ ಪ್ರತಿಭಟನೆ, ಹೆಚ್ಚುವ ಲಾಭದಿಂದ ಉತ್ತಮ ಪರಿಹಾರ ದೊರೆಯುವ ಸಾಧ್ಯತೆಯಿದ್ದರೂ, ನೂತನ ವಾತಾವರಣ, ಸಂಸ್ಕೃತಿ ಮತ್ತು ವಿವಿಕ್ತತೆ (individuality)ಯ ಶಂಕೆ, ಈ ಎರಡೂ ವರ್ಗವನ್ನು ಕಾಡಬಹುದು.
- ಷೇರುದಾರರ ಪ್ರತಿರೋಧ – ತಮ್ಮ ಈಗಿನ ಮಾರುಕಟ್ಟೆಯ ಷೇರುಮೌಲ್ಯದಲ್ಲಿ ಆಗುವ ಏರುಪೇರನ್ನು ಇವರು ಸಹಿಸುವುದು ಅನುಮಾನ.
- ತಾಂತ್ರಿಕತೆಯ ತೊಂದರೆಗಳು – ಹಲವು ಬ್ಯಾಂಕುಗಳು, ಹಲವು ತರಹದ ತಾಂತ್ರಿಕತೆಯನ್ನು ಉಪಯೋಗಿಸುತ್ತಿರುವುದರಿಂದ..CLICK HERE TO READ MORE