19th SEPTEMBER
1.ರಕ್ಷಣಾ ಖರೀದಿ ಮಂಡಳಿ( Defence Acquisition Council)
ವಿಧ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ – ರಕ್ಷಣಾ ಖರೀದಿ ಮಂಡಳಿ ಸಂಯೋಜನೆ , ಕಾರ್ಯಗಳು ಮತ್ತು ಅದರ ಪ್ರಾಮುಖ್ಯತೆ.
ಪ್ರಮುಖ ಸುದ್ದಿ
- ಆಕಾಶ್ ವಾಯುಪ್ರದೇಶ ರಕ್ಷಣಾ ಕ್ಷಿಪಣಿಯ ಎರಡು ತುಕಡಿಗಳು ಸೇರಿ ಒಟ್ಟು 9,100 ಕೋಟಿ ಮೌಲ್ಯದ ರಕ್ಷಣಾ ಸಾಮಗ್ರಿಗಳ ಖರೀದಿಗೆ ರಕ್ಷಣಾ ಸಚಿವೆ ನೇತೃತ್ವದ ರಕ್ಷಣಾ ಖರೀದಿ ಮಂಡಳಿಯು (ಡಿಎಸಿ) ಒಪ್ಪಿಗೆ ಕೊಟ್ಟಿದೆ.
ಮುಖ್ಯ ಅಂಶಗಳು
- ದೇಶಿ ನಿರ್ಮಿತ ಆಕಾಶ್ ಕ್ಷಿಪಣಿ ವ್ಯವಸ್ಥೆಯು ಈಗಾಗಲೇ ಸೇನೆಗೆ ಸೇರ್ಪಡೆಯಾಗಿರುವ ಶಸ್ತ್ರಾಸ್ತ್ರ. ಹೊಸದಾಗಿ ಖರೀದಿಸಲು ಉದ್ದೇಶಿಸಿರುವ ಆವೃತ್ತಿಯಲ್ಲಿ ಹಲವು ಸುಧಾರಣೆಗಳನ್ನು ಮಾಡಲಾಗಿದೆ. ಪರಿಷ್ಕೃತ ಕ್ಷಿಪಣಿ ವ್ಯವಸ್ಥೆಯಲ್ಲಿ ಸೀಕರ್ ತಂತ್ರಜ್ಞಾನ (ಗುರಿಯ ನಿಖರತೆಯ ಮೇಲೆ ನಿಗಾ ಇರಿಸುವ ವ್ಯವಸ್ಥೆ), 360 ಡಿಗ್ರಿ ವ್ಯಾಪ್ತಿ ಮುಂತಾದ ಸೌಲಭ್ಯಗಳು ಇವೆ.
- ಸುಧಾರಿತ ಆಕಾಶ್ ಕ್ಷಿಪಣಿ ವ್ಯವಸ್ಥೆಯು ಭೂಸೇನೆಗೆ ಅತ್ಯಂತ ಮುಖ್ಯವಾಗಿ ಬೇಕಾಗಿರುವ ಸಾಧನವಾಗಿದೆ. ಇದು ದೇಶದ ಮಹತ್ವದ ಕೇಂದ್ರಗಳಿಗೆ ರಕ್ಷಣೆ ಒದಗಿಸಲಿದೆ.
- ಟಿ–90 ಟ್ಯಾಂಕುಗಳಲ್ಲಿ ಬಳಸುವುದಕ್ಕಾಗಿ ನೀರಿನಡಿಯಲ್ಲಿ ಉಸಿರಾಡಲು ನೆರವಾಗುವ ಸಾಧನಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಒಪ್ಪಿಗೆ ಕೊಡಲಾಗಿದೆ.
- ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಅಡಿಯಲ್ಲಿ ಬರುವ ಡಿಫೆನ್ಸ್ ಬಯೊಎಂಜಿನಿಯರಿಂಗ್ ಅಂಡ್ ಎಲೆಕ್ಟ್ರೊಮೆಡಿಕಲ್ ಲ್ಯಾಬೊರೇಟರಿಯು ಈ ಸಾಧನವನ್ನು ಅಭಿವೃದ್ಧಿಪಡಿಸುತ್ತಿದೆ.
- ಜಲಾಂತರ್ಗಾಮಿಯಂತಹ ನೌಕೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ನೀರಿನಿಂದ ತಪ್ಪಿಸಿಕೊಳ್ಳುವ ತುರ್ತು ಸಂದರ್ಭಗಳಲ್ಲಿ ಈ ಸಾಧನ ಬಳಕೆಯಾಗುತ್ತದೆ.
- ಟಿ–90 ಯುದ್ಧ ಟ್ಯಾಂಕ್ನಲ್ಲಿ ಬಳಸುವ ಶಸ್ತ್ರಾಸ್ತ್ರ ವ್ಯವಸ್ಥೆಯ ವಿನ್ಯಾಸ ಮತ್ತು ಅಭಿವೃದ್ಧಿಗೂ ಡಿಎಸಿ ಒಪ್ಪಿಗೆ ಕೊಟ್ಟಿದೆ.
ಪ್ರಮುಖ ಸಂಗತಿಗಳು
- ಭಾರತ್ ಡೈನಮಿಕ್ಸ್ ಲಿ.ನಿಂದ ಆಕಾಶ್ ಕ್ಷಿಪಣಿ ವ್ಯವಸ್ಥೆ ಖರೀದಿ
- ಈಗ ಖರೀದಿಸಲಾಗುವ ಎರಡೂ ತುಕಡಿಗಳು ಭೂಸೇನೆಗೆ ಸೇರ್ಪಡೆ
- ಪ್ರತಿ ತುಕಡಿಯಲ್ಲಿ ಆರು ಕ್ಷಿಪಣಿ ಉಡಾವಕಗಳಿರುತ್ತವೆ, ಪ್ರತಿ ಉಡಾವಕದಲ್ಲಿ ಮೂರು ಕ್ಷಿಪಣಿಗಳು
- ಕನಿಷ್ಠ 30 ಮೀಟರ್ನಿಂದ 20 ಕಿ.ಮೀ. ವರೆಗೆ ದಾಳಿ ಸಾಮರ್ಥ್ಯ
- ಏಕಕಾಲಕ್ಕೆ ಹಲವು ಗುರಿಗಳ ಮೇಲೆ ದಾಳಿ ನಡೆಸುವ ಶಕ್ತಿ…CLICK HERE TO READ MORE