20TH OCTOBER
1.SOURCE- INDIAN EXPRESS EDITORIAL
‘ಏಕರೂಪ ನಾಗರಿಕ ಸಂಹಿತೆ ಯಲ್ಲಿ ಪ್ರಗತಿಪರ ಮಧ್ಯಸ್ಥೀಕೆ’
(What the new ‘progressive’ intervention in Uniform Civil Code debate entails)
ಈ ಆರ್ಟಿಕಲ್ ನಿಂದ UPSC-KAS ಪರೀಕ್ಷೆಗಾಗಿ ಪ್ರಮುಖವಾಗಿ ತಿಳಿದುಕೊಳ್ಳಬೇಕಾದ ಅಂಶಗಳೆಂದರೆ
- ಏಕರೂಪ ನಾಗರಿಕ ಸಂಹಿತೆಎಂದರೇನು ?
- ಏಕರೂಪ ನಾಗರಿಕ ಸಂಹಿತೆ ಬೇಡಿಕೆ ಶುರುವಾದ್ದೆಲ್ಲಿಂದ?
- ಭಾರತಕ್ಕೆ ಏಕರೂಪದ ನಾಗರಿಕ ಸಂಹಿತೆ ಏಕೆ ಬೇಕು?
- ಧರ್ಮಕ್ಕೆ ಸಂಬಂಧಿಸಿದ ಸಂವಿಧಾನದ ವಿವಿಧ ನಿಬಂಧನೆಗಳು ಯಾವುವು?
- ಏಕ ನಾಗರಿಕ ಸಂಹಿತೆ ಜಾರಿಗೆ ಬಂದರೆ ಬಂದರೆ ಆಗುವ ಪ್ರಯೋಜನಗಳೇನು ?
- ಇದರ ಅನುಷ್ಠಾನಕ್ಕೆ ಇರುವ ಅಡಚಣೆಗಳು ಯಾವುವು?
- ಸಂವಿಧಾನದೊಂದಿಗೆ ಸಂಘರ್ಷ ದಲ್ಲಿರುವ ಧರ್ಮಕ್ಕೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳು ಯಾವುವು?
1. ಕ್ರಿಶ್ಚಿಯನ್ ಪರಂಪರೆ ಕಾನೂನು
2. ಸಂತಾರಾ (ಸಲ್ಲೇಖನ ವ್ರತ)
3. ಶಬರಿಮಲ ದೇಗುಲ ಪ್ರವೇಶ
- ಪ್ರಸ್ತುತ ಸನ್ನಿವೇಶವೇನು ?
- ಆಯೋಗದ ಪ್ರಶ್ನೆಗಳೇನು?
- ಉಪಸಂಹಾರ
ಪ್ರಮುಖ ಸುದ್ದಿ
- ಕೇಂದ್ರ ಕಾನೂನು ಆಯೋಗದ ಅಧ್ಯಕ್ಷರಿಗೆ ವೈವಿಧ್ಯಮಯ ಗುಂಪಿನ ಎಂಟು ಭಾರತೀಯ ನಾಗರಿಕರು ಏಕರೂಪ ನಾಗರಿಕ ಸಂಹಿತೆಯ ಪ್ರಗತಿಪರದ ಬಗ್ಗೆ ಡ್ರಾಫ್ಟ್ ವರದಿಯನ್ನು ಸಲ್ಲಿಸಿದ್ದಾರೆ .
ಏಕರೂಪ ನಾಗರಿಕ ಸಂಹಿತೆಎಂದರೇನು ?
- ಭಾರತ ಹಲವು ಧರ್ಮ-ಜಾತಿಗಳ ದೇಶ. ವಿವಿಧ ರೀತಿ ಆಚರಣೆಗಳು ಅಸ್ತಿತ್ವದಲ್ಲಿದೆ. ಸದ್ಯದ ಕಾನೂನುಗಳೂ ಆಯಾ ಧರ್ಮದ ವಿವಿಧ ಅಭ್ಯಾಸಗಳಿಗೆ ಅನುಗುಣವಾಗಿದೆ. ಇದರಿಂದಾಗಿ ವೈಯಕ್ತಿಕ ಕಾನೂನುಗಳೂ ವಿವಿಧ ಧರ್ಮಗಳಿಗೆ ಬೇರೆ ಬೇರೆಯ ರೀತಿಯಲ್ಲಿವೆ.
- ಇದಕ್ಕೆ ಹೊರತಾಗಿ ವೈಯಕ್ತಿಕ ಕಾನೂನುಗಳಾದ, ವಿಶೇಷವಾಗಿ ವಿವಾಹ, ವಿಚ್ಛೇದನ, ಆಸ್ತಿ ಹಂಚಿಕೆ, ಉತ್ತರಾಧಿಕಾರ ವಿಚಾರಗಳಿಗೆ ಏಕರೂಪದ ಕಾನೂನು ತರುವುದು ಇದರ ಉದ್ದೇಶ. ಇದನ್ನೇ ಏಕರೂಪ ನಾಗರಿಕ ಸಂಹಿತೆ ಎನ್ನುತ್ತಾರೆ.
- ಸದ್ಯ ವಿಚ್ಛೇದನವನ್ನು ತೆಗೆದುಕೊಂಡರೆ, ಹಿಂದೂಗಳಲ್ಲೊಂದು, ಮುಸಲ್ಮಾನರಲ್ಲೊಂದು, ಕ್ರೈಸ್ತರಲ್ಲೊಂದು ಎಂಬಂತೆ ಕಾನೂನು ಜಾರಿಯಲ್ಲಿದೆ.
ಏಕರೂಪ ನಾಗರಿಕ ಸಂಹಿತೆ ಬೇಡಿಕೆ ಶುರುವಾದ್ದೆಲ್ಲಿಂದ?
- ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತ ಚರ್ಚೆ ಇಂದು ನಿನ್ನೆಯದಲ್ಲ. ಬ್ರಿಟಿಷರ ಕಾಲದಿಂದ ಅದು ಹುಟ್ಟಿದೆ. ಬ್ರಿಟಿಷ್ ಆಡಳಿತದ ವೇಳೆ ಭಾರತದಲ್ಲಿ ಏಕರೂಪದ ಕಾನೂನು ಬೇಕು ಎಂಬ ಬಗ್ಗೆ ದಿ ಲೆಕ್ಸ್ ಲೊಸಿ ವರದಿ 1840ರಲ್ಲಿ ಸಲ್ಲಿಕೆಯಾಗಿತ್ತು.
- ಸ್ವಾತಂತ್ರ್ಯನಂತರವೂ ಸಂವಿಧಾನ ರಚನೆ ಸಂದರ್ಭ ಇದು ಚರ್ಚೆಯಾಗಿತ್ತು. ಬಳಿಕ ಸಂವಿಧಾನ ರಚನೆ ಸಂದರ್ಭ ಏಕರೂಪ ನಾಗರಿಕ ಸಂಹಿತೆ ಅಳವಡಿಸುವುದು ಸರ್ಕಾರದ ಕರ್ತವ್ಯ ಎಂದು ಹೇಳಲಾಗಿತ್ತು. ಸಂವಿಧಾನದ 44ನೇ ಕಲಂನಲ್ಲಿ ಈ ಬಗ್ಗೆ ಹೇಳಲಾಗಿದೆ. 1985ರ ಶಾ ಬಾನು ಪ್ರಕರಣದ ಬಳಿಕ ಏಕರೂಪನಾಗರಿಕ ಸಂಹಿತೆ ಕುರಿತ ಚರ್ಚೆಗಳು ತೀವ್ರಗೊಂಡಿತು .
ಭಾರತಕ್ಕೆ ಏಕರೂಪದ ನಾಗರಿಕ ಸಂಹಿತೆ ಏಕೆ ಬೇಕು?
- ಭಾರತ ಸಂವಿಧಾನದ ೪೪ನೆಯ ಅನುಚ್ಛೇದ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಬೇಕು ಎಂದು ಹೇಳಿದೆ. ಆದರೆ, ರಾಜ್ಯನೀತಿ ನಿರ್ದೇಶಕ ತತ್ವದ ಅಂಶಗಳ ಅಡಿಯಲ್ಲಿ….CLICK HERE TO READ MORE TOPICS