20th SEPTEMBER
1.ತ್ರಿವಳಿ ತಲಾಕ್ ಸುಗ್ರೀವಾಜ್ಞೆ (Triple talaq Ordinance)
SOURCE– https://www.thehindu.com/opinion/editorial/impatient-move/article24988731.ece
ವಿಧ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಪರಿಕ್ಷೆಗಾಗಿ – ತ್ರಿವಳಿ ತಲಾಕ್ ಎಂದರೇನು? ಈ ಮಸೂದೆಯಲ್ಲಿರುವ ಪ್ರಮುಖ ನಿಬಂಧನೆಗಳೇನು ?.
ಮುಖ್ಯ ಪರೀಕ್ಸೆಗಾಗಿ – ತ್ರಿವಳಿ ತಲಾಕ್ ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸುಪ್ರೀಂ ಕೋರ್ಟ್ ಮಾಡಿದ ಅವಲೋಕನಗಳನ್ನು ವಿವರಿಸಿ ?
ಪ್ರಮುಖ ಸುದ್ದಿ
- ತ್ರಿವಳಿ ತಲಾಕ್ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆಯದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತ್ರಿವಳಿ ತಲಾಕ್ ನಿಷೇಧ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಲಾಗಿದೆ.
- ಸುಗ್ರೀವಾಜ್ಞೆ ಪ್ರಕಾರ, ದಿಢೀರ್ ತ್ರಿವಳಿ ತಲಾಕ್ ನೀಡುವವರು 3 ವರ್ಷ ಜೈಲು ಶಿಕ್ಷೆ ಜತೆಗೆ ದಂಡಕಟ್ಟಬೇಕಾಗುತ್ತದೆ. ಇದರ ಜತೆಗೆ ಪತ್ನಿ ಹಾಗೂ ಮಕ್ಕಳಿಗೆ ನಿರ್ವಹಣಾ ವೆಚ್ಚವನ್ನೂ ಪಾವತಿಸಬೇಕಾಗುತ್ತದೆ.
ಮುಖ್ಯ ಅಂಶಗಳು
- ತ್ರಿವಳಿ ತಲಾಕ್ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ದೊರೆತಿತ್ತು, ಆದರೆ, ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿರಲಿಲ್ಲ. ಇದರಿಂದಾಗಿ ತ್ರಿವಳಿ ತಲಾಕ್ ತಿದ್ದುಪಡಿ ಮಸೂದೆ ಕಾಯ್ದೆಯಾಗಿ ಜಾರಿಗೆ ಬರಲು ಸಾಧ್ಯವಾಗಿರಲಿಲ್ಲ.
- ತ್ರಿವಳಿ ತಲಾಕ್ ವಿರುದ್ಧ 1990ರ ಅವಧಿಯಲ್ಲೇ ಮುಸ್ಲಿಂ ಸಮುದಾಯದ ಮಹಿಳಾ ಹಕ್ಕು ಹೋರಾಟ ಗಾರ್ತಿಯರು ದನಿಯೆತ್ತಿದ್ದರು. 2017ರಲ್ಲಿ ಲಕ್ಷಾಂತರ ಮಹಿಳೆಯರು ಸಹಿ ಸಂಗ್ರಹಿಸುವ ಮೂಲಕ ಈ ಹೋರಾಟಕ್ಕೆ ಶಕ್ತಿ ತುಂಬಿದರು.
- ತ್ರಿವಳಿ ತಲಾಕ್ ನಿಷೇಧದ ಕುರಿತಾಗಿ ಸುಪ್ರೀಂಕೋರ್ಟ್ ಕೂಡ 2017ರ ಆಗಸ್ಟ್ ನಲ್ಲಿ ಆದೇಶ ನೀಡಿತ್ತು. ಅಲ್ಲಿಂದ ಮುಂದಿನ 6 ತಿಂಗಳವರೆಗೆ ನಿಷೇಧ ಜಾರಿಗೊಳಿಸಿದ್ದ ನ್ಯಾಯಾಲಯ ಅಷ್ಟರೊಳಗೆ ಕೇಂದ್ರ ಸರ್ಕಾರ ಸೂಕ್ತ ಕಾನೂನು ರೂಪಿಸಬೇಕೆಂದು ನಿರ್ದೇಶನ ನೀಡಿತ್ತು.
- ಇದಕ್ಕೆ ಪೂರಕವಾಗಿ 2017ರ ಡಿಸೆಂಬರ್ನಲ್ಲಿಯೇ ಲೋಕಸಭೆ ಈ ಸಂಬಂಧದ ಮಸೂದೆಗೆ ಅನುಮೋದನೆ ನೀಡಿತ್ತು. ಆದರೆ ರಾಜ್ಯಸಭೆಯಲ್ಲಿ ಕಳೆದ 1 ವರ್ಷದಿಂದ ನನೆಗುದಿಗೆ ಬಿದ್ದಿದೆ.
- ಸುಪ್ರೀಂಕೋರ್ಟ್ ಆದೇಶದ ಬಳಿಕವೂ ದೇಶಾದ್ಯಂತ 201 ತ್ರಿವಳಿ ತಲಾಕ್ ಪ್ರಕರಣಗಳು ವರದಿಯಾಗಿವೆ. ಸರ್ಕಾರ ಹಾಗೂ ಮಾಧ್ಯಮಗಳ ಗಮನಕ್ಕೆ ಬಾರದ ನೂರಾರು ಪ್ರಕರಣಗಳಿರುತ್ತವೆ. ಹೀಗಾಗಿ ಸುಗ್ರೀವಾಜ್ಞೆ ಹೊರಡಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ.
ಸುಗ್ರೀವಾಜ್ಞೆಯಲ್ಲೇನಿದೆ?
- ತ್ರಿವಳಿ ತಲಾಕ್ ನೀಡುವವರಿಗೆ ಮೂರು ವರ್ಷ ಜೈಲು ಹಾಗೂ ದಂಡ.
- ಸಂತ್ರಸ್ತ ಮಹಿಳೆ, ಆಕೆಯ ರಕ್ತಸಂಬಂಧಿಗಳು ಅಥವಾ ಪತಿಯ ಮನೆಯವರಷ್ಟೇ ದೂರು ಸಲ್ಲಿಸಬಹುದು.
- ದೂರು ಸಲ್ಲಿಕೆ ಬಳಿಕ ದಂಪತಿ ಒಪ್ಪಂದಕ್ಕೆ ಬಂದು, ತಲಾಕ್ ಹಿಂಪಡೆದರೆ ದೂರನ್ನು ರದ್ದುಪಡಿಸಬಹುದು.
- ಸಂತ್ರಸ್ತ ಪತ್ನಿಯ ಹೇಳಿಕೆ ಪಡೆಯದೇ ಪತಿಗೆ ಜಾಮೀನು ನೀಡುವಂತಿಲ್ಲ.
- ನ್ಯಾಯಾಧೀಶರ ಸೂಚನೆಯಂತೆ ಅಪ್ರಾಪ್ತ ಮಕ್ಕಳು ಹಾಗೂ ಪತ್ನಿಗೆ ಪತಿ ನಿರ್ವಹಣಾ ವೆಚ್ಚ ನೀಡಬೇಕು.
- ತ್ರಿವಳಿ ತಲಾಕ್ ಸಂತ್ರಸ್ತ ಮಹಿಳೆಗೆ ಅಪ್ರಾಪ್ತ ಮಗುವಿನ ಜವಾಬ್ದಾರಿ ನೀಡಬೇಕು
- ಈ ಸುಗ್ರೀವಾಜ್ಞೆ ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ.
ಎಲ್ಲೆಲ್ಲಿ ನಿಷೇಧ?
- ನೆರೆಹೊರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸೇರಿದಂತೆ 21 ದೇಶಗಳಲ್ಲಿ ತ್ರಿವಳಿ ತಲಾಕ್ಗೆ ನಿಷೇಧವಿದೆ.
ಹಿನ್ನೆಲೆ:
- 2015 ರಲ್ಲಿ ಉತ್ತರಾಖಂಡದ 35 ವರ್ಷದ ನಿವಾಸಿ ಶಯಾರಾ ಬಾನೊ ಅವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಿದರು. 15 ವರ್ಷ ಮದುವೆಯ ಬಳಿಕ ತನ್ನ ಗಂಡ ಪತ್ರದಲ್ಲಿ ಮೂರು ಬಾರಿ ತಲಕ್ ಎಂದು ಬರೆದು ಕಳುಹಿಸಿದ್ದರು. ತಲಾಕ್–ಇ–ಬಿದಾತ್, ಬಹುಪತ್ನಿತ್ವ ಮತ್ತು ನಿಕಾ ಹಲಾಲಾ ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಘೋಷಿಸಲು ಅವರು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಸಿದ್ದರು.
- ಸಂವಿಧಾನದ 14, 15, 21 ಮತ್ತು 25 ರ ವಿಧಿ ಅಡಿಯಲ್ಲಿ ಇವುಗಳೆಲ್ಲವು ಖಾತರಿಪಡಿಸುವ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು…CLICK HERE TO READ MORE