21st AUGUST MLP-MODEL ANSWERS

21st   AUGUST  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

GENERAL STUDIES PAPER-2(ಸಾಮಾನ್ಯ ಅಧ್ಯಾಯ2)

 

1.National Health Protection Mission provide an overarching framework for health protection but need an infrastructure upgrade to function properly. Explain.

(ರಾಷ್ಟ್ರೀಯ ಆರೋಗ್ಯ ರಕ್ಷಣಾ ಗುರಿಯು  ಆರೋಗ್ಯ ರಕ್ಷಣೆಗಾಗಿ ಒಂದು ವ್ಯಾಪಕವಾದ ಚೌಕಟ್ಟನ್ನು ಒದಗಿಸುತ್ತದೆ ಆದರೆ ಸರಿಯಾಗಿ ಕಾರ್ಯನಿರ್ವಹಿಸಲು ಮೂಲಸೌಕರ್ಯದ   ಅಗತ್ಯವಿರುತ್ತದೆ. ವಿವರಿಸಿ.)

  250 ಪದಗಳು

 

 

 

 

ದೇಶದ 50 ಕೋಟಿ ಮಂದಿಗೆ ಅನುಕೂಲವಾಗುವ, ಜಗತ್ತಿನ ಅತೀ ದೊಡ್ಡ ಆರೋಗ್ಯ ರಕ್ಷಾ ಯೋಜನೆ ಆಯುಷ್ಮಾನ್ ಭಾರತವನ್ನು     ಆರಂಭಿಸಲಾಗುವುದು ಕೇಂದ್ರ ಸರಕಾರ ಇತ್ತೀಚಿಗೆ ಘೋಸಿಷಿದೆ .  ಈ ಯೋಜನೆಯು ದೇಶಾದ್ಯಂತ ಅನ್ವಯವಾಗಲಿದ್ದು ಯಾವುದೇ ಸಾರ್ವಜನಿಕ / ನೋಂದಾಯಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷದವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ.

ಈ ಯೋಜನೆಯಿಂದ ದೇಶದಲ್ಲಿರುವ ಬಡ ವರ್ಗಕ್ಕೆ ಸೇರಿದ 10 ಕೋಟಿ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಈ ಯೋಜನೆ ಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ರಾಷ್ಟ್ರೀಯ ಸ್ವಾಸ್ಥ್ಯ ವಿಮೆ ಯೋಜನೆ ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮೆ ಯೋಜನೆಗಳನ್ನೂ ಕೂಡಾ ವಿಲೀನಗೊಳಿಸಲಾಗುತ್ತದೆ.

 

ಯೋಜನೆಯು  ಆರೋಗ್ಯ ರಕ್ಷಣೆಗಾಗಿ ಚೌಕಟ್ಟನ್ನು ಒದಗಿಸುತ್ತದೆ

 

  • ಇದರಡಿ ಬಹುತೇಕ ಎಲ್ಲ ವಿಧವಾದ ದ್ವಿತೀಯ ಆರೋಗ್ಯ ಚಿಕಿತ್ಸೆ ಮತ್ತು ಎಲ್ಲ ತೃತೀಯ ಆರೋಗ್ಯ ಸುರಕ್ಷಾ ಚಿಕಿತ್ಸೆಗಳನ್ನು ನೀಡಲಾಗುವುದು. ಈ ಯೋಜನೆಯಿಂದ ಯಾರೊಬ್ಬರು (ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು) ಹೊರಗುಳಿಯಬಾರದು ಎಂದು ಕುಟುಂಬದ ಗಾತ್ರ ಮತ್ತು ವಯಸ್ಸಿಗೆ ಯಾವುದೇ ಮಿತಿ ಹೇರಿಲ್ಲ, ಈ ಯೋಜನೆಯಡಿ ಆಸ್ಪತ್ರೆ ಸೇರುವ ಮುನ್ನ ಮತ್ತು ಆನಂತರ ವೆಚ್ಚಗಳನ್ನೂ ಸಹ ಭರಿಸಲಾಗುವುದು. ವಿಮೆ ಪಡೆದ ದಿನದಿಂದಲೇ ಎಲ್ಲಾ ಪೂರ್ವ ನಿರ್ಧಾರಿತ ಕಾಯಿಲೆಗಳಿಗೂ ಚಿಕಿತ್ಸೆ ಪಡೆಯಬಹುದಾಗಿದೆ. ಫಲಾನುಭವಿಗಳಿಗೆ ಆಸ್ಪತ್ರೆಗೆ ಸಂಚರಿಸಲು ನಿಗದಿತ ಪ್ರಯಾಣ ಭತ್ಯೆಯನ್ನೂ ಸಹ ನೀಡಲಾಗುವುದು.

 

  • ಈ ಯೋಜನೆಯನ್ವಯ ಫಲಾನುಭವಿಗಳು ದೇಶದ ಯಾವುದೇ ಭಾಗದಲ್ಲಿರುವ ನಿಯೋಜಿತ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಸೇವೆಯನ್ನು ಪಡೆಯಬಹುದು. ಇದನ್ನ SECC ಯ ಮಾಹಿತಿ ಆಧರಿಸಿದ ಅರ್ಹತೆಯ ಮಾನದಂಡದ ಆಧಾರದ ಮೇಲೆ ಕುಟುಂಬಗಳಿಗೆ ನೀಡಲು ನಿರ್ಧರಿಸಲಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಕಚ್ಚಾ ಗೋಡೆ, ಛಾವಣಿ ಹೊಂದಿರುವ ಒಂದೇ ಕೋಣೆಯಲ್ಲಿ ವಾಸಿಸುವವರು, 16 ರಿಂದ 59 ವರ್ಷದೊಳಗಿನ ವಯಸ್ಕ ಸದಸ್ಯರನ್ನು ಹೊಂದಿರದ ಕುಟುಂಬಗಳು, 16 ರಿಂದ 59 ವರ್ಷದೊಳಗಿನ ಯಾವುದೇ ವಯಸ್ಕ ಗಂಡು ಸದಸ್ಯರಿಲ್ಲದೆ ಹೆಣ್ಣು ಮಕ್ಕಳೇ ಇರುವ ಕುಟುಂಬಗಳು, ವಿಕಲಾಂಗ ಸದಸ್ಯರಿರುವ ಕುಟುಂಬಗಳು, ಎಸ್ಸಿ / ಎಸ್ಟಿ ಕುಟುಂಬಗಳು,  ಭೂಮಿ ರಹಿತ ಕುಟುಂಬಗಳು, ಕೂಲಿ ಕಾರ್ಮಿಕರು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ನಿರಾಶ್ರಿತ ಕುಟುಂಬಗಳು, ನಿರ್ಗತಿಕರು, ಭಿಕ್ಷುಕರು, ಪ್ರಾಚೀನ ಬುಡಕಟ್ಟು ಜನರು ಈ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದಾರೆ.
  • ಇನ್ನು ನಗರ ಪ್ರದೇಶದಲ್ಲಿ 11 ಯೋಜಿತ ಔದ್ಯೋಗಿಕ ವರ್ಗಗಳು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ದೇಶದ ಎಲ್ಲ ಸರಕಾರಿ ಆಸ್ಪತ್ರೆಗಳನ್ನು ಈ ಯೋಜನೆಗೆ ಸ್ವಯಂಚಾಲಿತವಾಗಿ ನಿಯೋಜನೆ ಮಾಡಲಾಗಿರುತ್ತದೆ

 

  • ರಾಜ್ಯಗಳಲ್ಲಿ ಇದನ್ನು  ಜಾರಿಗೊಳಿಸುತ್ತಿರುವ ಎಲ್ಲ ಸಾರ್ವಜನಿಕ ಆಸ್ಪತ್ರೆಗಳು ಈ ಯೋಜನೆಯಡಿ ಮಾನ್ಯತೆ ಪಡೆದಿರುತ್ತವೆ. ನೌಕರರ ರಾಜ್ಯ ವಿಮಾ ನಿಗಮ (ESIC) ಗೆ ಸೇರಿದ ಆಸ್ಪತ್ರೆಗಳಲ್ಲೂ ಹಾಸಿಗೆಗಳ ಲಭ್ಯತೆ ಆಧಾರದ ಮೇಲೆ ಚಿಕಿತ್ಸೆ ಪಡೆಯಬಹುದು. ನಿಗದಿತ ಮಾನದಂಡವನ್ನು ಆಧರಿಸಿ, ಖಾಸಗಿ ಆಸ್ಪತ್ರೆಗಳೂ ಕೂಡ ಆನ್ ಲೈನ್ ಮೂಲಕ ಇದರಡಿ ನೋಂದಣಿ ಮಾಡಿಕೊಳ್ಳಬಹುದು.
  • ಇದರ  ಒಂದು ಪ್ರಮುಖ ತತ್ವವೆಂದರೆ ಅದು ಸಹಕಾರ ಒಕ್ಕೂಟ ವ್ಯವಸ್ಥೆ ಮತ್ತು ರಾಜ್ಯಗಳ ಸರಳತೆ ಇದರಲ್ಲಿ ರಾಜ್ಯಗಳೂ ಕೂಡ ಸಹ ಒಪ್ಪಂದ ಮಾಡಿಕೊಂಡು ಪಾಲುದಾರಿಕೆ ಸಾಧಿಸಲು ಅವಕಾಶವಿದೆ. ಇದರಿಂದಾಗಿ ಈಗಾಗಲೇ ಜಾರಿಯಲ್ಲಿರುವ ಆರೋಗ್ಯ ವಿಮಾ ಯೋಜನೆಗಳು, ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು ಜಾರಿಗೊಳಿಸಿರುವ ಆರೋಗ್ಯ ರಕ್ಷಣಾ ಯೋಜನೆಗಳು ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ( ಸ್ವಂತ ವೆಚ್ಚ ಭರಿಸುತ್ತಿರುವ), ಈ ಯೋಜನೆಯಡಿ ಯಡಿ ವಿಸ್ತರಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ……CLICK HERE TO READ MORE 
Share