21st SEPTEMBER- DAILY CURRENT AFFAIRS BRIEF

21st SEPTEMBER

 

 

1.ಲೈಂಗಿಕ ಅಪರಾಧಿಗಳಿಗೆ ಸಂಬಂಧಿಸಿದ ರಾಷ್ಟ್ರೀಯ ದತ್ತಾಂಶ ಕೋಶ

SOURCE https://www.thehindu.com/news/national/sex-offenders-registry-launched-with-44-lakh-entries/article24999478.ece

 

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ -ಮಹಿಳೆಯರು ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ವನ್ನು ತಡೆಯಲು ಸರಕಾರ ಕೈಗೊಂಡಿರುವ ಉಪಕ್ರಮಗಳ ಬಗ್ಗೆ 

ಪ್ರಮುಖ ಸುದ್ದಿ

 

  • ಲೈಂಗಿಕ ಅಪರಾಧಿಗಳಿಗೆ ಸಂಬಂಧಿಸಿದ ರಾಷ್ಟ್ರೀಯ ದತ್ತಾಂಶ ಕೋಶಕ್ಕೆ ಕೇಂದ್ರ ಸರ್ಕಾರ ರ ಚಾಲನೆ ನೀಡಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ಇರಿಸಲು ‍ಪೊಲೀಸ್‌ ಮತ್ತು ಇತರ ತನಿಖಾ ಸಂಸ್ಥೆಗಳಿಗೆ ಇದರಿಂದ ಸಹಾಯವಾಗಲಿದೆ.

ಮುಖ್ಯ ಅಂಶಗಳು

 

  • ‘ಲೈಂಗಿಕ ಅಪರಾಧಿಗಳ ರಾಷ್ಟ್ರೀಯ ದತ್ತಾಂಶ ಕೋಶ’ಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಚಾಲನೆ ನೀಡಿದರು. ದೇಶದ ಯಾವುದೇ ಭಾಗದಲ್ಲಿ ಲೈಂಗಿಕ ಕಿರುಕುಳದ ಶಂಕೆ ಅಥವಾ ಆರೋಪ ಹೊತ್ತ ವ್ಯಕ್ತಿಯ ಹಿನ್ನೆಲೆಯನ್ನು ಪೊಲೀಸರು ಕ್ಷಣಾರ್ಧದಲ್ಲಿ ಪರಿಶೀಲಿಸಲು ಇದು ನೆರವಾಗಲಿದೆ.
  • ಸೈಬರ್‌ ಅಪರಾಧಗಳ ದೂರು ದಾಖಲಿಸುವುದಕ್ಕೆ ಪ್ರತ್ಯೇಕ ಪೋರ್ಟಲ್‌ ಒಂದಕ್ಕೂ ಚಾಲನೆ ನೀಡಲಾಗಿದೆ. ಈ ಪೋರ್ಟಲ್‌ಗೆ ಭೇಟಿ ನೀಡಿ ಅನಾಮಧೇಯವಾಗಿ ಅಥವಾ ತಮ್ಮ ಹೆಸರು ಉಲ್ಲೇಖಿಸಿ ದೂರು ನೀಡಬಹುದಾಗಿದೆ.
  • ದೇಶದ ಯಾವುದೇ ಮೂಲೆಯಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ದೂರು ದಾಖಲಾದವರು, ಆರೋಪಪಟ್ಟಿ ದಾಖಲಾದವರು ಮತ್ತು ಶಿಕ್ಷೆಗೆ ಒಳಗಾದವರ ಸಮಗ್ರ ಮಾಹಿತಿ ಲೈಂಗಿಕ ಅಪರಾಧಿಗಳ ದತ್ತಾಂಶ ಕೋಶದಲ್ಲಿ ದೊರೆಯಲಿದೆ. ಈಗ ಈ ದತ್ತಾಂಶ ಕೋಶದಲ್ಲಿ 5 ಲಕ್ಷ ಆರೋಪಿಗಳು ಅಥವಾ ಅಪರಾಧಿಗಳ ಮಾಹಿತಿ ಇದೆ. ಅವರ ಪೂರ್ಣ ಹೆಸರು, ಬೆರಳಚ್ಚು, ಈಗಿನ ವಿಳಾಸ, ಕಾಯಂ ವಿಳಾಸ, ವಿದ್ಯಾರ್ಹತೆ, ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಗಳೆಲ್ಲವೂ ಇವೆ.
  • 5 ಲಕ್ಷ ಮಂದಿಯ ಫೋಟೊಗಳು ಇವೆ. ಅವರಲ್ಲಿ 52 ಸಾವಿರ ಮಂದಿ ವಿವಿಧ ಜೈಲುಗಳಲ್ಲಿ ಇದ್ದಾರೆ. ಪೊಲೀಸ್‌ ಇಲಾಖೆ ಮತ್ತು ಇತರ ತನಿಖಾ ಸಂಸ್ಥೆಗಳು ತಮಗೆ ದೊರೆತ ಮಾಹಿತಿಯನ್ನು ಈ ಕೋಶಕ್ಕೆ ಸೇರಿಸುತ್ತಲೇ ಇರುತ್ತವೆ.
  • ಅತ್ಯಾಚಾರದ ಆರೋಪ ಹೊತ್ತವರಿಂದ ಹಿಡಿದು ಚುಡಾವಣೆಯ ಕೃತ್ಯ ಎಸಗಿದವರ ಮಾಹಿತಿಯೂ ಇದರಲ್ಲಿ ಸೇರಲಿದೆ.
  • ಲೈಂಗಿಕ ಅಪರಾಧಕ್ಕಾಗಿ ಜೈಲು ಶಿಕ್ಷೆ ಅನುಭವಿಸಿದ ವ್ಯಕ್ತಿಯು ಜೈಲಿನಿಂದ ಬಿಡುಗಡೆ ಆಗುವಾಗ ಆ ಬಗ್ಗೆ ದತ್ತಾಂಶ ಕೋಶವು ಪೊಲೀಸರಿಗೆ ಮಾಹಿತಿ ನೀಡಲಿದೆ. ಹಾಗಾಗಿ, ಇಂಥವರ ಮೇಲೆ ನಿಗಾ ಇರಿಸುವುದು ಪೊಲೀಸರಿಗೆ ಸಾಧ್ಯವಾಗಲಿದೆ.
  • ಮೊದಲ ಬಾರಿ ತಪ್ಪು ಎಸಗಿದವರ ಹೆಸರು 15 ವರ್ಷದವರೆಗೆ ದತ್ತಾಂಶ ಕೋಶದಲ್ಲಿ ಇರಲಿದೆ. ಮತ್ತೆ ಮತ್ತೆ ತಪ್ಪು ಎಸಗಿದವರ ಹೆಸರು 25 ವರ್ಷ ಇರುತ್ತದೆ.
  • ಈ ಮಾಹಿತಿಗಳನ್ನು ಗೃಹ ಸಚಿವಾಲಯದಡಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ನಿರ್ವಹಿಸಲಿದೆ. ಕಾನೂನು ಜಾರಿ ಸಂಸ್ಥೆಗಳು ಹಲವು ಉದ್ದೇಶಗಳಿಗೆ ಇದನ್ನು ಬಳಸಿಕೊಳ್ಳಲಿವೆ. ತನಿಖೆ ಹಾಗೂ ಉದ್ಯೋಗಿ ದಾಖಲೆಗಳ ಪರಿಶೀಲನೆಗೂ ಇದನ್ನು ಬಳಸಿಕೊಳ್ಳಬಹುದು .
  • ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ಐರ್ಲೆಂಡ್, ನ್ಯೂಝಿಲೆಂಡ್,…CLICK HERE TO READ MORE
Share