22nd AUGUST MLP
NOTE:: ದಯವಿಟ್ಟು ಗಮನಿಸಿ ಕೆಳಗಿನ ‘ಉತ್ತರಗಳು‘ ‘ಮಾದರಿ ಉತ್ತರಗಳು‘ ಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ಬರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.
GENERAL STUDIES PAPER-1(ಸಾಮಾನ್ಯ ಅಧ್ಯಾಯ –1)
1.India’s rapid urbanization has been proceeding apace for decades, but current slum policies have been less than sufficient to deal with the socio-economic distress brewing in slums. Explain.
(ಭಾರತದ ಕ್ಷಿಪ್ರ ನಗರೀಕರಣವು ದಶಕಗಳಿಂದ ಮುಂದುವರಿಯುತ್ತಿದೆ, ಆದರೆ ಕೊಳೆಗೇರಿ ಪ್ರದೇಶದ ಸಾಮಾಜಿಕ-ಆರ್ಥಿಕ ತೊಂದರೆಗಳನ್ನು ನಿಭಾಯಿಸಲು ಪ್ರಸ್ತುತ ಕೊಳೆಗೇರಿ ಪ್ರದೇಶಕ್ಕೆ ಸಂಬಂದಿಸಿದ ನೀತಿಗಳು ಸಾಕಷ್ಟು ಕಡಿಮೆಯಾಗಿದೆ. ವಿವರಿಸಿ )
150 ಪದಗಳು
ಯು ಎನ್ . ವಿಶ್ವ ನಗರೀಕರಣದ ನಿರೀಕ್ಷೆ – 2018 ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ 34% ನಷ್ಟು ಜನರು ಈಗ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇದು 2011 ರ ಜನಗಣತಿಯ ನಂತರ ಸುಮಾರು 3% ನಷ್ಟು ಹೆಚ್ಚಾಗಿದೆ. 2030 ರ ಹೊತ್ತಿಗೆ, ಭಾರತದ ಜನಸಂಖ್ಯೆಯ 50% ನಗರ ಪ್ರದೇಶಗಳಲ್ಲಿ ವಾಸವಾಗಲಿದೆ ಎಂದು ಹೇಳಲಾಗಿದೆ.
ವಲಸೆ ಜಾಸ್ತಿಯಾಗಲು ಹೆಚ್ಚಿನ ಸಂದರ್ಭಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ತೊಂದರೆಗಳೆ ಕಾರಣ .ವಲಸೆ ಬಂದ ಜನರು ನಗರ ಕೊಳೆಗೇರಿಗಳಲ್ಲಿ ವಾಸಿಸಲು ಪ್ರಾರಂಭಿಸುತ್ತಾರೆ ಅಂತಹ ಕೊಳೆಗೇರಿಗಳಲ್ಲಿ ಮೂಲಸೌಕರ್ಯ ಮತ್ತು ಜೀವನದ ಗುಣಮಟ್ಟ ತುಂಬಾ ಕಳಪೆಯಾಗಿರುತ್ತದೆ .
ಕೊಳೆಗೇರಿಪ್ರದೇಶಗಳಿಗೆ ನೀತಿಯ ಕೊರತೆ
- ಕೊಳೆಗೇರಿಗಳಲ್ಲಿರುವ ತಾತ್ಕಾಲಿಕ ಮನೆಗಳ ಅಂಕಿಅಂಶ ಸರಿಯಾಗಿ ದೊರಕದಿರುವುದು ಒಂದು ರೀತಿಯ ಗೋಜನ್ನು ಸೃಷ್ಟಿ ಮಾಡಿದ್ದು 2011 ರ ಜನಗಣತಿಯ ಪ್ರಕಾರ ದೇಶದಲ್ಲಿ
- 65ಮಿಲಿಯನ್ ಜನರು ಕೊಳೆಗೇರಿಪ್ರದೇಶದಲ್ಲಿ ವಾಸಿಸುತಿದ್ದರೆ ಎಂದು ಹೇಳಲಾಗಿದೆ ಆದರೆ ಈ ಸಂಖ್ಯೆ ಯುನ್-ಹ್ಯಾಬಿಟಟ್ 2014 ರ ಅಂದಾಜು 104 ಮಿಲಿಯನ್ಗಿಂತ ತುಂಬಾ ಕಡಿಮೆ ಇದೆ .
- ಪ್ರಸ್ತುತ ಇರುವ ಕೊಳೆಗೇರಿ ನೀತಿಗಳು ಮುಖ್ಯವಾಗಿ ವಸತಿ, ಸ್ಥಳಾಂತರ ಅಥವಾ ಬಹು ಮಹಡಿ ವಸತಿ ಗೃಹಗಳ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತವೆ. ಆದರೆ ಈ ನೀತಿಗಳು ಕೊಳೆಗೇರಿಗಳಲ್ಲಿ ಇರುವ ಸಾಮಾಜಿಕ ಆರ್ಥಿಕ ತೊಂದರೆಗಳನ್ನು ನಿರ್ಲಕ್ಷಿಸಿವೆ .ಅಲ್ಲದೆ ನೆದರ್ಲ್ಯಾಂಡ್ಸ್, ಅಮೇರಿಕಾ . ಮತ್ತು ಸ್ಥಳೀಯ ಸ್ವಯಂ ಸೇವಕ ಸಂಸ್ಥೆ ಸಂಶೋಧಕರು ನಡೆಸಿದ ಒಂದು ಸಮೀಕ್ಷೆಯ ಪ್ರಕಾರ ಕೊಳೆಗೇರಿಗಳಲ್ಲಿನ ಶೇ 70% ಕ್ಕಿಂತಲೂ ಹೆಚ್ಚಿನ ಕುಟುಂಬಗಳು ಸಾಲದಲ್ಲಿ ವಾಸಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದೆ .
- ಕೊಳೆಗೇರಿಗಳಲ್ಲಿನ ಪ್ರದೇಶದಲ್ಲಿ ಹಣಕಾಸು ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿದ್ದು .ಸಾಂಪ್ರದಾಯಿಕ ಹಣಕಾಸು ವ್ಯವಸ್ಥೆಗಳಿಗೆ ಕೊರತೆ ಇರುವ ಕಾರಣ, ಜನರು ಹೆಚ್ಚಿನ ಬಡ್ಡಿದರದಲ್ಲಿ ಖಾಸಗಿ ಲೇವಾದೇವಿಗಾರರಿಂದ ಸಾಲ ಪಡೆಯುತ್ತಿದ್ದು ಜನರು ಸಾಲದ ಸುಳಿಯಲ್ಲಿ ಸಿಲಗು ವಂತೆ ಆಗಿದೆ
- ಕೊಳೆಗೇರಿ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕೊರತೆ ಒಂದು ಸಮಸ್ಯೆಯಾಗಿದೆ. ನೀರು ಮತ್ತು ವಿದ್ಯುಚ್ಛಕ್ತಿಗಳು ಆಗಾಗ್ಗೆ ಹೆಚ್ಚು ವೆಚ್ಚದಾಯಕವಾಗಿದ್ದು, ಇವುಗಳನ್ನು ಸಾಂಪ್ರದಾಯಿಕ ಮೂಲಗಳ ಬದಲಾಗಿ ಮಾರುಕಟ್ಟೆಗಳಲ್ಲಿ ಖರೀದಿಸುವ ಪರಿಸ್ಥಿತಿ ಇದೆ.
- ಕೊಳೆಗೇರಿಗಳಲ್ಲಿ ವಲಸಿಗರನ್ನು ಕಾನೂನು ರೀತಿಯಲ್ಲಿ ಗುರುತಿಸುವ ಕೊರತೆ ಇರುವುದರಿಂದ ಅವರು ಗ್ರಾಮಗಳಲ್ಲಿ ಪಡೆಯುತ್ತಿದ್ದ ಸಾಮಾಜಿಕ ಕಲ್ಯಾಣ ಪ್ರಯೋಜನಗಳನ್ನು ಕೊಳೆಗೇರಿ ಪ್ರದೇಶಗಳಲ್ಲಿ….CLICK HERE TO READ MORE