22nd September MLP-MODEL ANSWERS

22nd SEPTEMBER  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

                                                                           

 

GENERAL STUDIES PAPER-1(ಸಾಮಾನ್ಯ ಅಧ್ಯಾಯ೧)

 

1.It is said that the most important historical event of the last two decades has been the battle over the Narmada dam. Do you agree? Discuss critically the socio-cultural, political and economic significance of the Narmada Bachao Andolan (NBA).

 (ಕಳೆದ ಎರಡು ದಶಕಗಳಲ್ಲಿ  ಅತ್ಯಂತ ಪ್ರಮುಖ ಐತಿಹಾಸಿಕ ಘಟನೆ ಎಂದರೆ ನರ್ಮದಾ ಅಣೆಕಟ್ಟಿನ  ವಿವಾದ  ಎಂದು ಹೇಳಲಾಗಿದೆ. ನೀವು ಅದನ್ನು  ಒಪ್ಪಿಕೊಳ್ಳುತ್ತೀರಾ ? ನರ್ಮದಾ ಬಚಾವೊ ಆಂದೋಲನ್ (ಎನ್ಬಿಎ)   ಸಾಮಾಜಿಕಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಮಹತ್ವವನ್ನು ವಿಮರ್ಶಾತ್ಮಕವಾಗಿ ಚರ್ಚಿಸಿ.)                                                                                                                                     (200 ಪದಗಳು)

 

 

ಸ್ವತಂತ್ರ ಭಾರತ  ಕಂಡ ಅತ್ಯಂತ ಮಹತ್ವದ ಪ್ರತಿಭಟನೆಯಲ್ಲಿ  ನರ್ಮದಾ ಬಚಾವೋ ಆಂದೋಲನ ಸಹ ಒಂದು . 1980ರ ದಶಕದಲ್ಲಿ  ಸರ್ದಾರ್‌ ಸರೋವರ್‌ ಅಣೆಕಟ್ಟು ವಿರೋಧಿಸಿ ಮೇಧಾ ಪಾಟ್ಕರ್‌, ಬಾಬಾ ಆಮ್ಟೆ ಮುಂತಾದವರು ಮುಂಚೂಣಿ ಯಲ್ಲಿ   ಪ್ರತಿಭಟನೆ ನಡೆಸಿದ್ದು ಇದು  ದೇಶವ್ಯಾಪಿಯಲ್ಲದೆ ವಿಶ್ವಾದ್ಯಂತದಿಂದ  ಭಾರೀ ಬೆಂಬಲ ಪಡೆದುಕೊಂಡಿತ್ತು. ಪರಿಸರಕ್ಕೆ ಹಾನಿ, ಪುನರ್ವಸತಿ ಯೋಜನೆಗಳು ಜನರಿಗೆ ತಲುಪಿಲ್ಲ ಎಂಬ ಕಾರಣಕ್ಕೆ ಸರ್ದಾರ್‌ ಸರೋವರ್‌ ಅಣೆಕಟ್ಟು ದೇಶದಲ್ಲೇ ಏಕೆ, ವಿಶ್ವದಲ್ಲೇ ಅತಿ ವಿವಾದಕ್ಕೊಳಗಾದ ಅಣೆಕಟ್ಟುಗಳಲ್ಲಿ ಒಂದು.   ಈ ಯೋಜನೆಗೆ ಸಂಬಂಧಿಸಿದಂತೆ ಕೆಲವೊಂದು ವಿಷಯಗಳ ಬಗ್ಗೆ ದೇಶದಲ್ಲಿ ಅತ್ಯುನ್ನತ ನ್ಯಾಯಾಂಗ ಪ್ರಾಧಿಕಾರವವಾದ  ಸುಪ್ರೀಂ ಕೋರ್ಟ್,  ಈಗಾಗಲೇ ಗಮನಾರ್ಹ ತೀರ್ಪುಗಳನ್ನು ನೀಡಿದೆ. ಕಳೆದ ಎರಡು ದಶಕಗಳಲ್ಲಿ ಈ  ಕೆಳಕಂಡ ಕಾರಣದಿಂದಾಗಿ ನರ್ಮದಾ ಅಣೆಕಟ್ಟಿನ  ವಿವಾದವು   ಪ್ರಮುಖ ಘಟನೆ ಎಂದು ಕರೆಯಲ್ಪಡುತ್ತದೆ.

  • ಈ ಯೋಜನೆಯ ವಿರುದ್ಧ ಸ್ಥಳೀಯ ಜನರಿಂದ ಹಿಡಿದು ಪರಿಸರ ಕಾರ್ಯಕರ್ತರು, ಮತ್ತು ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ವೃತ್ತಿಪರರವರೆಗೂ ಎಲ್ಲರು  ಒಟ್ಟಾಗಿ  ಸೇರಿ  ಪ್ರತಿಭಟಿಸಿದರು ಅಲ್ಲದೆ ಎನ್ಜಿಒಗಳನ್ನು ಸಹ   ಸ್ಥಾಪಿಸಿದರು.    ಈ ಎನ್ಜಿಒಗಳು 1989 ರಲ್ಲಿ ಮೆಧಾ ಪಾಟ್ಕರ್ ರವರ   ನೇತೃತ್ವದಲ್ಲಿ ನರ್ಮದಾ ಬಚಾವೊ ಆಂದೋಲನ (NBA) ಅಥವಾ ‘ ಸೇವ್  ನರ್ಮದಾ  ಮೂವ್ಮೆಂಟ್'(ನರ್ಮದಾ ನದಿಯನ್ನು ಉಳಿಸಿ ) ಅನ್ನು ರೂಪಿಸಿದವು.
  • NBA ಆ ಸಮಯದಲ್ಲಿ ಭಾರತದ ಇತರ ಸಾಮಾಜಿಕ ನ್ಯಾಯ ಸಂಸ್ಥೆಗಳಿಗಿಂತ ಭಿನ್ನವಾಗಿ ಅಣೆಕಟ್ಟು ನಿರ್ಮಾಣವನ್ನು ಸಂಪೂರ್ಣವಾಗಿ ವಿರೋಧಿಸಿತು ಮತ್ತು ನೀರಿನ ಕೊಯ್ಲಿನ ವಿಧಾನಗಳು ಸೇರಿದಂತೆ ವಿವಿಧ ಅಭಿವೃದ್ಧಿ ಪರ್ಯಾಯಗಳ ವಿಧಾನವನ್ನು ಪ್ರಸ್ತಾಪಿಸಿತು.
  • ಈ ಆಂದೋಲನವು ಅಣೆಕಟ್ಟಿನ ಕಟ್ಟಡವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹಗಳು, ಹಲವು ರೀತಿಯ ಮುಷ್ಕರಗಳನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಯಿತು.
  • ವಿಶ್ವಬ್ಯಾಂಕು ತಾನು ಹಣಕಾಸು ನೆರವು ನೀಡುತ್ತಿದ್ದ ಈ ಯೋಜನೆಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ತಾನೇ ಒಂದು ಸ್ವತಂತ್ರ ಸಂಸ್ಥೆಯನ್ನು ನೇಮಿಸಿತು. ಅದರ ವರದಿಯನ್ನು ಆಧರಿಸಿಯೇ ಅದು ಯೋಜನೆಯಿಂದ ಹಿಂದೆ ಸರಿಯಿತು. ಈ ಯೋಜನೆಯು ಪರಿಹಾರ ಮತ್ತು ಪುನರ್ವಸತಿ ಹಾಗೂ ಪರಿಸರದ ವಿಷಯಗಳನ್ನು ವಿಶ್ವಬ್ಯಾಂಕಿನ ನೀತಿಗನುಗುಣವಾಗಿ ಅನುಷ್ಠಾನಕ್ಕೆ ತರುತ್ತಿಲ್ಲವೆಂದು ಆ ಸ್ವತಂತ್ರ ಸಮಿತಿಯು ವರದಿಯನ್ನು ನೀಡಿತ್ತು. ಹೀಗಾಗಿ ವಿಶ್ವಬ್ಯಾಂಕಿಗೆ ಈ ಯೋಜನೆಯಿಂದ ಹಿಂದೆ ಸರಿಯುವುದನ್ನು ಬಿಟ್ಟು ಬೇರೆ ಯಾವುದೇ ಆಯ್ಕೆಗಳಿರಲಿಲ್ಲ. ಮೊಟ್ಟ ಮೊದಲ ಬಾರಿಗೆ  ವಿಶ್ವ ಬ್ಯಾಂಕ್  ತನ್ನ ನೀತಿ ನಿರ್ಧಾರವನ್ನು  ಜನರ ಚಳವಳಿಯಿಂದ(ನರ್ಮದಾ ಆಂದೋಲನ ಚಳುವಳಿ )  ಬದಲಾಯಿಸಿದ್ದು . 
  • ಜೊತೆಗೆ ಈ ಚಳವಳಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾಗಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಪರಿಸರ ಕಾಳಜಿಯ ಬಗ್ಗೆ ಆಕರ್ಷಿಸಿ ಮನ್ನಣೆ ಪಡೆಯಿತು.

ನರ್ಮದಾ ಬಚಾವೊ ಅಂದೋಲನದ (NBA) ಮಹತ್ವ

  • ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ

ಸಮಾಜದ ವಿವಿಧ ವಿಭಾಗಗಳಿಂದ  ಅಂದರೆ ಮಹಿಳೆಯರು, ರೈತರು, ಸಾಮಾಜಿಕ ಕಾರ್ಯಕರ್ತರು, ಪರಿಸರವಾದಿಗಳು….CLICK HERE TO READ MORE

Share