23rd JUNE-THE HINDU EDITORIAL

ನಮ್ಮ ಐಎಎಸ್ ಅಕಾಡೆಮಿ ಸಂಪಾದಕೀಯ ಒಳನೋಟ

ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯತ್ವ ನೀಡಬೇಕೆ ?

(Should Delhi be given statehood ?)

 

SOURCE-THE HINDU- http://www.thehindu.com/opinion/op-ed/should-delhi-be-given-statehood/article24223080.ece

 

ಸನ್ನಿವೇಶ 

  • ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯಬೇಡಿಕೆಗೆ ಆಮ್ ಆದ್ಮಿ ಪಾರ್ಟಿ ಹೋರಾಟವನ್ನು  ಪ್ರಾರಂಭಿಸಿದೆ.

 

ಇದಕ್ಕೆ ಸಂಬಂದಿಸಿದ ಸಾಂವಿಧಾನಿಕ ಚರ್ಚೆ ಮತ್ತು ಸಾಂವಿಧಾನಿಕ ನಿಬಂಧನೆಗಳು:

 

  • ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನ ನೀಡುವ ವಿವಾದಾಂಶದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಲಾಲಾ ದೇಶಬಂಧು ಗುಪ್ತಾ ಅವರು ದೆಹಲಿಯನ್ನು ಪೂರ್ಣ ಪ್ರಮಾಣದ  ರಾಜ್ಯ ಸ್ಥಾನ ನೀಡುವ    ಸಲಹೆ ನೀಡಿದರು.
  • ಆದಾಗ್ಯೂ, ಭಾರತದ ಸಂವಿಧಾನದ (1950) ಸಂವಿಧಾನ ಸಭೆಯು ಮೊದಲ ವಿಚ್ಚೇದನದಲ್ಲಿ – ಭಾಗ A, B, C ಮತ್ತು D  ಎಂಬ  ನಾಲ್ಕು ವಿಧದ ರಾಜ್ಯಗಳನ್ನು ರೂಪಿಸಿತು.
  • ಪ್ರೆಸಿಡೆನ್ಷಿಯಲ್ ಚೀಪ್ ಕಮಿಷನರ್ ಪ್ರಕಾರ  (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಹೊರತುಪಡಿಸಿ) ಎಲ್ಲಾ ಪ್ರಾಂತ್ಯಗಳು ಪಾರ್ಟ್ ಸಿ ಯಲ್ಲಿ ಸೇರಿಸಲ್ಪಟ್ಟವು.
  • ಸಂವಿಧಾನದ 239 ವಿಧಿ ಯು -ಪ್ರತಿ ಕೇಂದ್ರಾಡಳಿತ ಪ್ರದೇಶವನ್ನು   ರಾಷ್ಟ್ರಪತಿಯ ಮೂಲಕ  ನೇಮಕವಾದ  ಲೆಫ್ಟಿನೆಟ್  ಮೂಲಕ ಆಡಳಿತ ನಡೆಸುತ್ತದೆ
  • ಸಂವಿಧಾನದ ತಿದ್ದುಪಡಿ 69 ನೇ ಕಾಯಿದೆ, 1991-ರಾಷ್ಟ್ರೀಯ ರಾಜಧಾನಿ ಪ್ರದೇಶದ ಕಾಯ್ದೆ ಯ ಮೂಲಕ ಈಗಿರುವ ಸ್ಥಾನ ವನ್ನು ನೀಡಿದೆ
  • ಸಂವಿಧಾನದ 239AA ವಿಧಿಯು – ಕೇಂದ್ರಾಡಳಿತ ಪ್ರದೇಶಗಳಲ್ಲಿ  (ಪಾಂಡಿಚೆರಿ ಸಹ) ದೆಹಲಿಗೆ ವಿಶೇಷ ಸ್ಥಾನಮಾನ ನೀಡಿತು.
  • ಶಾಸನ ಸಭೆ ಮತ್ತು ವಿಧಾನಸಭೆಗೆ ಜವಾಬ್ದಾರಿಯುತ ಸಚಿವರನ್ನು ಒದಗಿಸಿತು .
  • ರಾಜ್ಯ ಮತ್ತು ಸಮಕಾಲೀನ ಪಟ್ಟಿಗಳಲ್ಲಿ ಎಲ್ಲ ವಿಷಯಗಳ ಮೇಲೆ ದೆಹಲಿಗೆ ಕಾನೂನುಗಳನ್ನು ರೂಪಿಸಲು ಅಧಿಕಾರ ನೀಡಿತು.

 ದೆಹಲಿಗೆ ಯಾವಯಾವದರಿಂದ ವಿನಾಯಿತಿ ನೀಡಲಾಗಿದೆ ?

 

  • ಸಾರ್ವಜನಿಕ ಆದೇಶ ಮತ್ತು ಪೊಲೀಸ್
  • ನೀರು, ಒಳಚರಂಡಿ, ವಿದ್ಯುತ್, ಸಾರಿಗೆ ಮುಂತಾದ ಮುನ್ಸಿಪಲ್ ಸೇವೆಗಳು
  • ಭೂಮಿ
  • ನ್ಯಾಯಾಲಯಗಳ ವ್ಯಾಪ್ತಿ.

 

ಇದರ ಹಿನ್ನಲೆಯೇನು ?

 

  • ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಆಡಳಿತಕ್ಕೆ ಒಳಪಟ್ಟಿರುವ ದೆಹಲಿ, ಅತ್ತ ಕೇಂದ್ರಾಡಳಿತ ಪ್ರದೇಶವೂ ಅಲ್ಲ, ಇತ್ತ ಪೂರ್ಣ ಪ್ರಮಾಣದ ರಾಜ್ಯವೂ ಆಗಿಲ್ಲ. ಕೇಂದ್ರಾಡಳಿತ ಪ್ರದೇಶಗಳ ಸಂಪೂರ್ಣ ಆಡಳಿತದ ಹೊಣೆಯು ಕೇಂದ್ರ ಸರ್ಕಾರಕ್ಕೆ ಸೇರಿ­ದ್ದರೆ, ರಾಜ್ಯಗಳ ಆಡಳಿತವು ಚುನಾಯಿತ ಪ್ರತಿನಿಧಿಗಳ (ಶಾಸಕರ) ಸರ್ಕಾರದ ನಿಯಂತ್ರಣ­ದಲ್ಲಿ ಇರುತ್ತದೆ.
  • ದೆಹಲಿ­ಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ಇದೆ. ಇದೇ ಕಾರಣಕ್ಕೆ ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನ­ಮಾನ ಸಿಗಬೇಕು ಎನ್ನುವ ಕೂಗು ಕೇಳಿ ಬರುತ್ತದೆ.
  • ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು 2003ರಲ್ಲಿಯೇ ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ನೀಡಲು ಉದ್ದೇಶಿಸಿತ್ತು. ಈ ಸಂಬಂಧ ಲೋಕಸಭೆಯಲ್ಲಿ ಮಸೂದೆಯನ್ನೂ ಮಂಡಿಸ­ಲಾಗಿತ್ತು. ಸಂಸತ್ತಿನ ಸ್ಥಾಯಿ ಸಮಿತಿ ಪರಾಮರ್ಶೆಗೆ ಒಪ್ಪಿಸಿರುವ ಈ ಮಸೂದೆ ಇದುವರೆಗೂ ನನೆಗುದಿಗೆ ಬಿದ್ದಿದೆ.
  •  ಬ್ರಿಟಿಷರು ಕೋಲ್ಕತ್ತಾ ಬದಲಿಗೆ ದೆಹಲಿಯನ್ನು ದೇಶದ ರಾಜಧಾನಿ­ಯನ್ನಾಗಿ 1911ರಲ್ಲಿ ಘೋಷಿಸಿದ್ದರು. 2011ರಲ್ಲಿ ರಾಜಧಾನಿ ಘೋಷಣೆಗೆ 100 ವರ್ಷ ತುಂಬಿದ ಸಂದರ್ಭದಲ್ಲಿ ಲೋಕಸಭೆಯಲ್ಲಿ ಸಂಸ­ದರು ಪಕ್ಷಭೇದ ಮರೆತು ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದ್ದರು.
  • 1991ರ ಮುಂಚೆ ದೆಹಲಿ ಕೇಂದ್ರಾ­ಡಳಿತ ಪ್ರದೇಶವಾಗಿತ್ತು. ಮೆಟ್ರೊ­ಪಾಲಿಟನ್ ಮಂಡಳಿಯು ಇದರ ಆಡಳಿತದ ಹೊಣೆಗಾರಿಕೆ ಹೊಂದಿತ್ತು. ಈ ಮಂಡಳಿಗೆ ಸೀಮಿತ ಅಧಿಕಾರ ಇತ್ತು. ಆನಂತರ ಸಂವಿಧಾನದ 69ನೆ ತಿದ್ದು­ಪಡಿ ಅನ್ವಯ ಈ ವ್ಯವಸ್ಥೆ  ಕೈಬಿಟ್ಟು ದೆಹಲಿಯ ಹೆಸರನ್ನೂ ಬದಲಾ­ಯಿಸಿ, ದೆಹಲಿಯ ರಾಷ್ಟ್ರೀಯ ರಾಜ­ಧಾನಿ ಪ್ರದೇಶ ಎಂದು ಕರೆಯ­ಲಾಯಿತು.
  • ಈ ಪ್ರದೇಶದ ಆಡಳಿತ ಉಸ್ತುವಾರಿ ಹೊಣೆ­ ವಿಧಾನ ಸಭೆಗೆ ಒಪ್ಪಿಸ­ಲಾಯಿತು. ಮಂತ್ರಿ­ಮಂಡಳ, ಅದ­ಕ್ಕೊಬ್ಬ ಮುಖ್ಯಮಂತ್ರಿ ಇರಬೇಕು ಎಂದು ನಿಗದಿಪಡಿಸ­ಲಾಯಿತು. ವಿಧಾನ­ಸಭೆಗೆ ಇರುವ ವಿಶೇಷ ಅಧಿಕಾರವನ್ನು ದೆಹಲಿಗೆ ಅನ್ವಯಿಸಲಿಲ್ಲ. ಹೀಗಾಗಿ ದೆಹಲಿ ವಿಶೇಷ ದರ್ಜೆಯ ಕೇಂದ್ರಾಡಳಿತ ಪ್ರದೇಶ­ವಾಯಿತು. ದೆಹಲಿಯಂತೆಯೇ ಪುದುಚೆರಿ ಕೂಡ ಕೇಂದ್ರಾಡಳಿತ ಮತ್ತು ರಾಜ್ಯದ ಸ್ಥಾನಮಾನ ಹೊಂದಿದೆ.

 

ಸಂಪೂರ್ಣ ರಾಜ್ಯತ್ವಕ್ಕೆ ಬೇಡಿಕೆ ಏಕೆ?

ಡಿಡಿಎ ನಿಯಂತ್ರಣದಲ್ಲಿ ಭೂಮಿ

  • ದೆಹಲಿ ವ್ಯಾಪ್ತಿಯ ಭೂಮಿಯು ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ) ನಿಯಂತ್ರಣದಲ್ಲಿ ಇದೆ. ಈ ಪ್ರಾಧಿಕಾರವು ಭೂಮಿ ವಶಪಡಿಸಿ­ಕೊಳ್ಳುವ ಸಂಪೂರ್ಣ ಅಧಿಕಾರ ಹೊಂದಿದೆ. ಕೇಂದ್ರ ನಗರಾಭಿವೃದ್ಧಿ ವ್ಯವಹಾರ ಸಚಿವಾಲಯದ ನಿಯಂತ್ರ­ಣ­­ದಡಿ ‘ಡಿಡಿಎ’ ಕಾರ್ಯನಿರ್ವ­ಹಿಸುತ್ತದೆ.

ಕಾಯ್ದೆಸುವ್ಯವಸ್ಥೆ ಹೊಣೆಗಾರಿಕೆ

  • ದೆಹಲಿಯಲ್ಲಿ ಕಾಯ್ದೆ ಸುವ್ಯವಸ್ಥೆ ನೋಡಿಕೊಳ್ಳುವ ಹೊಣೆಗಾರಿಕೆಯು ರಾಜ್ಯ ಸರ್ಕಾರದ ಮೇಲೆ ಇಲ್ಲ. ಕೇಂದ್ರ ಗೃಹ ಸಚಿವಾಲಯವು ದೆಹಲಿ ಪೊಲೀಸ್ ವ್ಯವಸ್ಥೆಯ ಉಸ್ತುವಾರಿ ನೋಡಿಕೊ­ಳ್ಳುತ್ತದೆ. ಇಲ್ಲಿಯ ಮೆಟ್ರೊ­ಪಾಲಿಟನ್ ಪೊಲೀಸ್ ಪಡೆಯು ವಿಶ್ವದಲ್ಲಿಯೇ ಅತಿದೊಡ್ಡ ಮೆಟ್ರೊ­ಪಾಲಿಟನ್ ಪಡೆ­ಯಾಗಿದೆ.

 

  • ದೆಹಲಿಯ ಆಡಳಿತದ ನಿರ್ವಹ­ಣೆಯು ಸಾಕಷ್ಟು ಸಂಕೀರ್ಣ­ವಾಗಿದೆ. ನಾಗರಿಕ ಸೇವೆಗಳಾದ ಸ್ವಚ್ಛತೆ, ರಸ್ತೆಗಳ ನಿರ್ವಹಣೆ, ಕೆಲವು ತೆರಿಗೆ, ಮೂಲ­ಸೌಕರ್ಯ, ಮುಂತಾದವುಗಳ ಹೊಣೆ­ಗಾ­ರಿಕೆ­ಯನ್ನು ಮುನ್ಸಿಪಲ್ ಕಾರ್ಪೊ­ರೇಷನ್ ನಿರ್ವಹಿಸುತ್ತದೆ.  1992­ರಲ್ಲಿ ಸಂವಿಧಾನದ  74ನೆ ತಿದ್ದುಪಡಿ ಅನ್ವಯ, ದೆಹಲಿ ಮುನ್ಸಿಪಲ್ ಕಾರ್ಪೊ­ರೇಷನ್ ಪುನರ್ ರಚನೆಗೊಂಡಿತು.

 

  • ಪೌರ ಸಂಸ್ಥೆಗಳು ದೆಹಲಿಯ ಲ್ಯೂಟಿಯೆನ್ಸ್ ದೆಹಲಿ ಪ್ರದೇಶದ ಮೇಲೆ ಯಾವುದೇ ಅಧಿಕಾರ ಹೊಂದಿಲ್ಲ. ಈ ಪ್ರದೇಶದಲ್ಲಿ ಕೇಂದ್ರ ಸಚಿವರು, ಸಂಸದರು, ರಾಜತಾಂತ್ರಿಕರು ನೆಲೆಸಿ­ದ್ದಾರೆ. ಈ ಪ್ರದೇಶದ ನಿರ್ವಹಣೆ­ಯನ್ನು ಚುನಾಯಿತರಲ್ಲದ ಸದಸ್ಯರು ಇರುವ ನವದೆಹಲಿ ಮುನ್ಸಿಪಲ್ ಮಂಡಳಿ ನಿಭಾಯಿಸುತ್ತದೆ.
  • ಸೇನಾ ಪಡೆಗಳ ಕಚೇರಿಗಳು ಮತ್ತು ಸಿಬ್ಬಂದಿಯ ವಸತಿ ಪ್ರದೇಶವನ್ನು ಚುನಾಯಿತ ಕಂಟೋನ್‌ಮೆಂಟ್ ಮಂಡಳಿಯು ನಿಭಾಯಿಸುತ್ತದೆ.

 

ದೆಹಲಿಗೆ ಏಕೆ  ರಾಜ್ಯತ್ವವನ್ನು  ನೀಡುತ್ತಿಲ್ಲ ?

  • ನಿರ್ಣಾಯಕ ಮೂಲಸೌಕರ್ಯ:

 

ರಾಷ್ಟ್ರೀಯ ರಾಜಧಾನಿಯಾಗಿರುವ ದೆಹಲಿಯು ಸಂಸತ್ತು, ಅಧ್ಯಕ್ಷೀಯ ಎಸ್ಟೇಟ್ಗಳು ಮತ್ತು ದೂತಾವಾಸಗಳಂತಹ ಹಲವಾರು ನಿರ್ಣಾಯಕ ಮೂಲಸೌಕರ್ಯಗಳನ್ನು ಒಳಗೊಂಡಿದೆ . ಇವುಗಳ ನಿರ್ವಹಣೆ ಬಹಳ ಮುಖ್ಯವಾಗಿದೆ ಮತ್ತು ಬೇರೆಯವರ  ಅಸ್ತಿತ್ವಕ್ಕೆ ಹಸ್ತಾಂತರಿಸಲಾಗುವುದಿಲ್ಲ.

  • ಆಡಳಿತ:

ಸಂಪೂರ್ಣ ರಾಜ್ಯ ಸ್ಥಾನ ನೀಡಿದರೆ   ಮುಖ್ಯವಾಗಿ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ವಿವಿಧ   ಸಮಸ್ಯೆಗಳಿಗೆ ಕಾರಣವಾಗಬಹುದು, ಅದರಿಂದ  ರಾಷ್ಟ್ರೀಯ ರಾಜಧಾನಿಯ ಮೇಲೆ ಕಪ್ಪು ಚುಕ್ಕಿ ಬಂದಂತಾಗುತ್ತದೆ .

ಹಣಕಾಸಿನ ಮೇಲೆ ಪ್ರಭಾವ ಬೀರುವ ಕಾರಣ ಆಡಳಿತದ ಗುಣಮಟ್ಟ ಕುಸಿಯಬಹುದು.

  • ಭದ್ರತಾ ವಿಷಯಗಳು

ರಾಯಭಾರ ಕಚೇರಿಗಳು, ಸಂಸತ್ತುಗಳು ಇದಲ್ಲದೆ, ವಿವಿಧ ದೇಶಗಳ ಭೇಟಿದಾರರು ಮತ್ತು ರಾಜ್ಯಗಳ ಮುಖ್ಯಸ್ಥರ ಸುರಕ್ಷತೆ ಮತ್ತು ಸುರಕ್ಷತೆಯ ವಿವಾದವಿದೆ. ಅವರಿಗೆ ಭದ್ರತೆಯನ್ನು ಖಾತ್ರಿಪಡಿಸುವ ಜವಾಬ್ದಾರಿ ಕೇಂದ್ರದಲ್ಲಿದೆ ಮತ್ತು ರಾಜ್ಯವನ್ನು ಅದರೊಂದಿಗೆ ನಿಭಾಯಿಸಲಾಗುವುದಿಲ್ಲ.

  • ಭೂಮಿ:

 

ಭೂಮಿ ಮೇಲೆ ನಿಯಂತ್ರಣವು ವಿಶೇಷವಾಗಿ ಕೇಂದ್ರ ಸರ್ಕಾರ ಸಂಸ್ಥೆಗಳು, ದೂತಾವಾಸಗಳ (embassies)ಪ್ರದೇಶಗಳಲ್ಲಿ ಅಗತ್ಯವಾಗಿರುತ್ತದೆ.

 

ಇದೆ ರೀತಿ ಇರುವ ಅಂತರಾಷ್ಟ್ರೀಯ ಪ್ರಕರಣಗಳು:

 

  • ವಾಷಿಂಗ್ಟನ್ DC ಯ ರಾಜ್ಯತ್ವಕ್ಕಾಗಿ ಇಟ್ಟಿರುವ ಬೇಡಿಕೆಯನ್ನು ಯು.ಎಸ್. ಕಾಂಗ್ರೆಸ್ ಒಪ್ಪಿಕೊಂಡಿಲ್ಲ
  • ವಾಷಿಂಗ್ಟನ್ DC ಯ ನಾಗರಿಕರು ಯು.ಎಸ್. ಸೆನೆಟ್ನಲ್ಲಿ ಯಾವುದೇ ಪ್ರತಿನಿಧಿಗಳನ್ನು ಹೊಂದಿಲ್ಲ. ಯು.ಎಸ್. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಕೇವಲ ಒಂದು ಮತದಾನದ ಪ್ರತಿನಿಧಿಯನ್ನು ಮಾತ್ರ ಹೊಂದಿದೆ.
  • ಆದಾಗ್ಯೂ, ನಗರ-ರಾಜ್ಯಗಳ ಉದಾಹರಣೆಗಳಿವೆ. ಉದಾಹರಣೆ: ಬ್ರಸೆಲ್ಸ್ (ಬೆಲ್ಜಿಯಂ) ಮತ್ತು ಬರ್ಲಿನ್ (ಜರ್ಮನಿ)

 

ಮುಂದಿನ ಹಾದಿ 

ಸಂಪೂರ್ಣ ರಾಜ್ಯತ್ವವನ್ನು ಕೊಡುವುದು ಅಪೇಕ್ಷಣೀಯವಲ್ಲವಾದರೂ, ಅಧಿಕಾರದ ಹಂಚಿಕೆ ಗಣನೀಯವಾಗಿ ಇರಬೇಕು.ದೆಹಲಿಯಲ್ಲಿನ  ಚುನಾಯಿತ ಸರ್ಕಾರಕ್ಕೆ  ಪುರಸಭೆಯಲ್ಲಿ  ಒಗ್ಗೂಡಿಸುವ ವಿಧಾನಕ್ಕೆ   ಮತ್ತು ಸರಿಯಾದ ನಗರ ಯೋಜನೆಗೆ ನಿರ್ಣಾಯಕ ಹೇಳಿಕೆಯನ್ನು ನೀಡಬೇಕು.ರಾಜ್ಯ ಸರ್ಕಾರಕ್ಕೆ  ಪೊಲೀಸರ ಮೇಲೆ ಹೆಚ್ಚಿನ ಅಧಿಕಾರವನ್ನು ನೀಡಬೇಕು ಮತ್ತು ಅಪರಾಧವನ್ನು ನಿಯಂತ್ರಿಸುವಲ್ಲಿ ಜವಾಬ್ದಾರರಾಗಿರಬೇಕು.

ದೆಹಲಿಯ ಎಲ್-ಜಿ ನ ವಿವೇಚನೆಯ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು, ಯಾವುದಾದರೂ ಇದ್ದರೆ, ಪರಿಶೀಲಿಸಬೇಕು

ಪರಿಣಾಮಕಾರಿ ಆಡಳಿತಕ್ಕಾಗಿ ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ಕೇಂದ್ರ ಮತ್ತು ದೆಹಲಿ ಸರ್ಕಾರದ ಸಹಕಾರ ಪ್ರಯತ್ನಗಳಿರಬೇಕು.

 

Share